ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w21 ಅಕ್ಟೋಬರ್‌ ಪು. 29-31
  • 1921—ನೂರು ವರ್ಷಗಳ ಹಿಂದೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 1921—ನೂರು ವರ್ಷಗಳ ಹಿಂದೆ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಎದೆಗುಂದದೆ ಸಾರಿದವರು
  • ವೈಯಕ್ತಿಕವಾಗಿ ಮತ್ತು ಕುಟುಂಬವಾಗಿ ಬೈಬಲ್‌ ಕಲಿಯೋಕೆ ಸಹಾಯ
  • ಹೊಸ ಪುಸ್ತಕ
  • ನಮ್ಮ ಮುಂದಿದ್ದ ಕೆಲಸ
  • ಯೆಹೋವನ ಮಾತಿನಂತೆ ನಡೆದರೆ ಆಶೀರ್ವಾದ ಖಂಡಿತ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • 1922—ನೂರು ವರ್ಷಗಳ ಹಿಂದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಸುಳ್ಳಾಡ ಸಾಧ್ಯವಿಲ್ಲದ ದೇವರಿಂದ ಪೋಷಿಸಲ್ಪಟ್ಟದ್ದು
    ಕಾವಲಿನಬುರುಜು—1994
  • 1923—ನೂರು ವರ್ಷಗಳ ಹಿಂದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
w21 ಅಕ್ಟೋಬರ್‌ ಪು. 29-31

1921—ನೂರು ವರ್ಷಗಳ ಹಿಂದೆ

ಜನವರಿ 1, 1921ರ ಕಾವಲಿನಬುರುಜುವಿನಲ್ಲಿ “ಈ ವರ್ಷ ನಾವೇನು ಕೆಲಸ ಮಾಡಬೇಕಾಗಿದೆ” ಅಂತ ಬೈಬಲ್‌ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರ ಯೆಶಾಯ 61:1, 2 ರಲ್ಲಿತ್ತು. ಅಲ್ಲಿ ಹೇಳೋದು: “ಸೌಮ್ಯ ಸ್ವಭಾವದವರಿಗೆ ಸಿಹಿ ಸುದ್ದಿಯನ್ನ ಪ್ರಕಟಿಸೋಕೆ ಯೆಹೋವ ನನ್ನನ್ನ ಅಭಿಷೇಕಿಸಿದ್ದಾನೆ . . . ನಮ್ಮ ದೇವರು ಸೇಡುತೀರಿಸೋ ದಿನದ ಬಗ್ಗೆ ಹೇಳೋಕೆ . . . ನನ್ನನ್ನ ಕಳಿಸಿದ್ದಾನೆ.” ಬೈಬಲ್‌ ವಿದ್ಯಾರ್ಥಿಗಳು ಸಿಹಿಸುದ್ದಿ ಸಾರಬೇಕು ಅಂತ ಈ ವಚನ ಅವರಿಗೆ ನೆನಪಿಸ್ತು.

ಎದೆಗುಂದದೆ ಸಾರಿದವರು

ಬೈಬಲ್‌ ವಿದ್ಯಾರ್ಥಿಗಳು ಹೆದರದೆ ಸಿಹಿಸುದ್ದಿ ಸಾರಬೇಕಿತ್ತು. ಯಾಕಂದ್ರೆ ಅವರು ಸೌಮ್ಯ ಸ್ವಭಾವದವರಿಗೆ “ಸಿಹಿ ಸುದ್ದಿಯನ್ನ” ಮಾತ್ರ ಅಲ್ಲ, ಕೆಟ್ಟವರಿಗೆ “ದೇವರು ಸೇಡುತೀರಿಸೋ ದಿನದ” ಬಗ್ಗೆನೂ ಸಾರಬೇಕಿತ್ತು.

ಕೆನಡಾದಲ್ಲಿದ್ದ ಸಹೋದರ ಜೆ. ಎಚ್‌. ಹಾಸ್ಕಿನ್‌ರವರು ವಿರೋಧವಿದ್ದರೂ ಧೈರ್ಯವಾಗಿ ಸಿಹಿಸುದ್ದಿ ಸಾರುತ್ತಿದ್ದರು. 1921ರ ಬೇಸಿಗೆಯ ಸಮಯದಲ್ಲಿ ಅವರು ಸಾರುತ್ತಿದ್ದಾಗ ಒಬ್ಬರು ಪಾದ್ರಿ ಸಿಕ್ಕಿದ್ರು. ಸಹೋದರ ಹಾಸ್ಕಿನ್‌ ಆ ಪಾದ್ರಿಗೆ “ನಾವು ಕೆಲವು ಬೈಬಲ್‌ ವಿಷಯಗಳ ಬಗ್ಗೆ ಮಾತಾಡೋಣ ಮಾತಾಡುವಾಗ ನಿಮ್ಮ ಅಭಿಪ್ರಾಯ ಮತ್ತು ನನ್ನ ಅಭಿಪ್ರಾಯ ಬೇರೆಬೇರೆ ಆಗಿರಬಹುದು. ಆದರೆ ಜಗಳ ಆಡೋದು ಬೇಡ ಸಮಾಧಾನವಾಗಿ ಇರೋಣ” ಅಂತ ಹೇಳಿದ್ರು. ಆದ್ರೆ ಅದು ಹಾಗೆ ನಡೀಲಿಲ್ಲ. ಆ ದಿನಗಳ ಬಗ್ಗೆ ಹಾಸ್ಕಿನ್‌ ಹೇಳೋದು: “ನಾವು ಮಾತಾಡಿ ಸ್ವಲ್ಪ ಹೊತ್ತಾಗಿತ್ತು ಅಷ್ಟೇ. ಮಾತಾಡ್ತಾ ಇರುವಾಗಲೇ ಆ ಪಾದ್ರಿ ಎಷ್ಟು ಜೋರಾಗಿ ಬಾಗಿಲು ಹಾಕಿದ ಅಂದ್ರೆ ಕಿಟಕಿ ಗಾಜುಗಳು ಬಿದ್ದು ಹೋಗುತ್ತೆ ಅಂದ್ಕೊಂಡೆ.”

ಆ ಪಾದ್ರಿ ‘ಇದನ್ನೆಲ್ಲಾ ನನಗ್ಯಾಕೆ ಹೇಳ್ತಿಯಾ? ಕ್ರೈಸ್ತರಲ್ಲದವರಿಗೆ ಹೋಗಿ ಹೇಳು’ ಅಂತ ಕಿರುಚಿದ್ರು. ಅದಕ್ಕೆ ಸಹೋದರ ಹಾಸ್ಕಿನ್‌ ‘ನೀನು ಹೀಗೆ ಮಾಡೋದು ನೋಡಿದ್ರೆ ನೀನು ಕ್ರೈಸ್ತನಲ್ಲ, ನಿನಗೇ ಇದನ್ನ ಮೊದ್ಲು ಹೇಳಬೇಕಾಗಿದೆ’ ಅಂತ ಮನಸ್ಸಲ್ಲಿ ಅಂದುಕೊಂಡ್ರು. ಆದ್ರೆ ಹಾಗೆ ಹೇಳೋಕೆ ಹೋಗಿಲ್ಲ.

ಮಾರನೇ ದಿನ ಆ ಪಾದ್ರಿ ಚರ್ಚಲ್ಲಿ ಭಾಷಣ ಕೊಡ್ತಿದ್ದಾಗ ಹಾಸ್ಕಿನ್‌ ಬಗ್ಗೆ ತಪ್ಪು ತಪ್ಪಾಗಿ ಹೇಳಿದ್ರು. “‘ಇವನಂಥ ಸುಳ್ಳುಗಾರ ಈ ಊರಲ್ಲೇ ಇಲ್ಲ. ಇಂಥವರನ್ನ ಕೊಂದು ಬಿಡಬೇಕು’ ಅಂದ್ರು” ಅಂತ ಹಾಸ್ಕಿನ್‌ ನೆನಪಿಸಿಕೊಳ್ತಾರೆ. ಆದ್ರೆ ಹಾಸ್ಕಿನ್‌ ಇದಕ್ಕೆಲ್ಲ ಹೆದರಿ ಸಾರೋದನ್ನ ನಿಲ್ಲಿಸಲಿಲ್ಲ. ಅವರು ಹೇಳೋದು: “ನಾನು ಮುಂಚೆಗಿಂತ ಆಗ ಖುಷಿಯಾಗಿ ಸಾರುತ್ತಾ ಇದ್ದೆ. ಅಷ್ಟೇ ಅಲ್ಲ ಕೆಲವು ಜನರು ನನ್ನ ಹತ್ರ ಬಂದು ‘ನೀವು ನಿಜವಾಗ್ಲೂ ದೇವರ ಕೆಲಸ ಮಾಡ್ತಿದ್ದೀರಿ’ ಅಂತ ಹೇಳಿದ್ರು. ಅದರ ಜೊತೆಗೆ ನನಗೆ ಅವಶ್ಯಕತೆ ಇರೋದನ್ನೆಲ್ಲಾ ಕೊಡೋಕೆ ಅವರೇ ಮುಂದೆ ಬರುತ್ತಿದ್ರು.”

ವೈಯಕ್ತಿಕವಾಗಿ ಮತ್ತು ಕುಟುಂಬವಾಗಿ ಬೈಬಲ್‌ ಕಲಿಯೋಕೆ ಸಹಾಯ

ಜನರು ಬೈಬಲನ್ನ ಸರಿಯಾಗಿ ತಿಳುಕೊಳ್ಳೋಕೆ ಸಹಾಯವಾಗಲಿ ಅಂತ ಬೈಬಲ್‌ ವಿದ್ಯಾರ್ಥಿಗಳು ಬೈಬಲ್‌ ಪ್ರಶ್ನೆಗಳು ಮತ್ತು ಅದಕ್ಕಿರೋ ಉತ್ತರಗಳನ್ನ ದ ಗೋಲ್ಡನ್‌ ಏಜ್‌ ಪತ್ರಿಕೆಯಲ್ಲಿ ಕೊಡುತ್ತಿದ್ದರು. ಆ ಪತ್ರಿಕೆಯನ್ನ ನಾವೀಗ ಎಚ್ಚರ! ಅಂತ ಕರೆಯುತ್ತೇವೆ. ಹೆತ್ತವರು “ಈ ಪ್ರಶ್ನೆಗಳನ್ನ ಬಳಸಿ ಮಕ್ಕಳಿಗೆ ಸ್ಟಡಿ ಮಾಡಬಹುದಿತ್ತು. ಈ ಪ್ರಶ್ನೆಗಳಿಗೆ ಬೈಬಲಲ್ಲಿ ಉತ್ತರ ಹುಡುಕೋಕೆ ಮಕ್ಕಳಿಗೆ ಸಹಾಯ ಮಾಡಬಹುದಿತ್ತು.” ಅದರಲ್ಲಿ “ಬೈಬಲಲ್ಲಿ ಎಷ್ಟು ಪುಸ್ತಕಗಳಿವೆ?” ಅನ್ನೋ ಚಿಕ್ಕಚಿಕ್ಕ ಪ್ರಶ್ನೆಗಳಿಂದ ಹಿಡಿದು “ಕ್ರೈಸ್ತರಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ತರದ ಹಿಂಸೆಯನ್ನ ಎದುರಿಸಬೇಕಾಗುತ್ತಾ?” ಅನ್ನುವಂಥ ಪ್ರಶ್ನೆಗಳೂ ಇದ್ದವು. ಇದರಿಂದ ಧೈರ್ಯವಾಗಿ ಸಾರೋಕೆ ಮಕ್ಕಳಿಗೆ ತರಬೇತಿ ಸಿಗ್ತಿತ್ತು.

ಬೈಬಲ್‌ ಬಗ್ಗೆ ಸ್ವಲ್ಪ ತಿಳಿದುಕೊಂಡಿರುವವರಿಗೂ ಈ ಪತ್ರಿಕೆಯಲ್ಲಿ ಬೈಬಲ್‌ ಪ್ರಶ್ನೆಗಳು ಇದ್ದವು. ಸ್ಟಡೀಸ್‌ ಇನ್‌ ದ ಸ್ಕ್ರಿಪ್ಚರ್ಸ್‌ ಅನ್ನೋ ಪುಸ್ತಕದ ಒಂದನೇ ಸಂಪುಟದಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಇತ್ತು. ಈ ಪ್ರಶ್ನೆಗಳಿಂದ ಸಾವಿರಾರು ಜನರು ಪ್ರಯೋಜನ ಪಡೆದುಕೊಳ್ತಿದ್ರು. ಆದರೆ 1921, ಡಿಸೆಂಬರ್‌ 21ರ ದ ಗೋಲ್ಡನ್‌ ಏಜ್‌ ಪತ್ರಿಕೆಯಲ್ಲಿ ಇನ್ನು ಮುಂದೆ ಈ ತರ ಪ್ರಶ್ನೆಗಳು ಇರಲ್ಲ ಅಂತ ಪ್ರಕಟಣೆ ಮಾಡಲಾಯಿತು. ಯಾಕೆ ಇದನ್ನ ನಿಲ್ಲಿಸಿಬಿಟ್ರು?

ಹೊಸ ಪುಸ್ತಕ

ದ ಹಾರ್ಪ್‌ ಆಫ್‌ ಗಾಡ್‌ ಪುಸ್ತಕ

“ಎಷ್ಟು ಓದಬೇಕು” ಅಂತ ಇರೋ ಕಾರ್ಡ್‌

ಪ್ರಶ್ನೆಗಳಿರೋ ಕಾರ್ಡ್‌

ಹೊಸದಾಗಿ ಬೈಬಲ್‌ ಕಲಿಯುವವರು ಒಂದೊಂದೇ ವಿಷಯವನ್ನ ನಿಧಾನವಾಗಿ ಕಲೀಬೇಕು ಅಂತ ಮುಂದಾಳತ್ವ ವಹಿಸ್ತಿದ್ದ ಸಹೋದರರು ಅರ್ಥಮಾಡಿಕೊಂಡ್ರು. ಅದಕ್ಕೇ 1921ರಲ್ಲಿ ದ ಹಾರ್ಪ್‌ ಆಫ್‌ ಗಾಡ್‌ ಅನ್ನೋ ಪುಸ್ತಕ ಬಿಡುಗಡೆ ಮಾಡಿದ್ರು. ಆಸಕ್ತಿ ಇರುವವರು ಆ ಪುಸ್ತಕ ತಗೊಂಡ ಮೇಲೆ ಆ ಕೋರ್ಸಿಗೆ ಹೆಸರು ಕೊಡಬೇಕಿತ್ತು. ಅದನ್ನ ಅವರು ಮನೆಯಲ್ಲೇ ಕೂತು ಕಲೀಬಹುದಾಗಿತ್ತು. ಜನರಿಗೆ ಶಾಶ್ವತ ಜೀವ ಕೊಡಬೇಕು ಅನ್ನೋದೇ ದೇವರ ಉದ್ದೇಶ ಅಂತ ತಿಳಿದುಕೊಳ್ಳೋಕೆ ಈ ಕೋರ್ಸ್‌ ಸಹಾಯ ಮಾಡ್ತಿತ್ತು. ಆ ಕೋರ್ಸ್‌ ಹೇಗೆ ನಡೀತಿತ್ತು?

ಈ ಪುಸ್ತಕದ ಜೊತೆ ಒಂದು ಕಾರ್ಡ್‌ ಕೂಡ ಇರುತಿತ್ತು. ಅದರಲ್ಲಿ ಯಾವ ಪುಟಗಳನ್ನ ಓದಬೇಕು ಅಂತ ಬರೆದಿರುತ್ತಿತ್ತು. ಆ ಪುಟಗಳಲ್ಲಿರೋ ವಿಷಯಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿರೋ ಇನ್ನೊಂದು ಕಾರ್ಡ್‌ ಮುಂದಿನ ವಾರ ಪೋಸ್ಟ್‌ನಲ್ಲಿ ಬರುತ್ತಿತ್ತು. ಆ ವಾರ ಯಾವ ಪುಟಗಳನ್ನ ಓದಬೇಕು ಅಂತನೂ ಆ ಕಾರ್ಡಲ್ಲಿ ಇರುತ್ತಿತ್ತು.

ಬೈಬಲ್‌ ಕಲಿಯೋರಿಗೆ ಈ ತರ ಪ್ರಶ್ನೆಗಳಿರೋ ಕಾರ್ಡ್‌ ವಾರಕ್ಕೆ ಒಂದರಂತೆ 12 ವಾರ ಬರುತ್ತಿತ್ತು. ಆ ಕಾರ್ಡ್‌ಗಳನ್ನೆಲ್ಲಾ ಸಭೆಯಲ್ಲಿರೋ ವಯಸ್ಸಾಗಿರೋರು ಅಥವಾ ಯಾರಿಗೆ ಹೆಚ್ಚು ಸೇವೆ ಮಾಡೋಕೆ ಆಗಲ್ವೋ ಅವರು ಕಳಿಸ್ತಿದ್ದರು. ಉದಾಹರಣೆಗೆ ಅಮೇರಿಕಾದಲ್ಲಿರೋ ಆ್ಯನ ಕೆ. ಗಾರ್ಡ್‌ನರ್‌ ಹೇಳಿದ್ದು: “ನನ್ನ ತಂಗಿ ತೇಲ್‌ಗೆ ನಡೆಯೋಕೆ ಆಗ್ತಿರಲಿಲ್ಲ. ಹಾರ್ಪ್‌ ಆಫ್‌ ಗಾಡ್‌ ಪುಸ್ತಕ ಬಿಡುಗಡೆಯಾಗಿದ್ರಿಂದ ಅವಳಿಗೆ ತುಂಬ ಪ್ರಯೋಜನ ಆಯ್ತು. ಪ್ರಶ್ನೆಗಳನ್ನ ಬರೆದು ಕಾರ್ಡ್‌ ಕಳಿಸೋದ್ರಿಂದ ಅವಳಿಗೆ ಜಾಸ್ತಿ ಸೇವೆ ಮಾಡೋಕೆ ಒಂದು ಅವಕಾಶ ಸಿಗುತ್ತಿತ್ತು.” ಹೀಗೆ ಈ ಕೋರ್ಸ್‌ ಮುಗಿದ ಮೇಲೆ ಸಭೆಯಿಂದ ಯಾರಾದರೊಬ್ಬರು ಆ ವ್ಯಕ್ತಿಯನ್ನ ಹೋಗಿ ಭೇಟಿ ಮಾಡಿ ಬೈಬಲ್‌ ಬಗ್ಗೆ ಇನ್ನೂ ಜಾಸ್ತಿ ಕಲಿಯೋಕೆ ಸಹಾಯ ಮಾಡ್ತಿದ್ದರು.

ವೀಲ್‌ಚೇರ್‌ನಲ್ಲಿ ಕೂತಿರೋ ತೇಲ್‌ ಗಾರ್ಡ್‌ನರ್‌

ನಮ್ಮ ಮುಂದಿದ್ದ ಕೆಲಸ

ಆ ವರ್ಷದ ಕೊನೆಯಲ್ಲಿ ಸಹೋದರ ಜೆ. ಎಫ್‌. ರದರ್‌ಫರ್ಡ್‌ ಅವರು ಎಲ್ಲಾ ಸಭೆಗಳಿಗೆ ಒಂದು ಪತ್ರ ಬರೆದರು. ಅದರಲ್ಲಿ “ನಾವು ಮುಂಚೆಗಿಂತ ಈ ವರ್ಷನೇ ತುಂಬ ಜನರಿಗೆ ಸಾಕ್ಷಿ ಕೊಟ್ಟಿದ್ದೀವಿ” ಅಂತ ಹೇಳಿದ್ರು. ಆಮೇಲೆ “ಕೆಲಸ ಇನ್ನೂ ಬಾಕಿ ಇದೆ, ಅದನ್ನ ಮಾಡೋಕೆ ಇನ್ನೂ ತುಂಬ ಜನರಿಗೆ ಪ್ರೋತ್ಸಾಹ ಕೊಡಿ” ಅಂತನೂ ಬರೆದಿದ್ರು. ಬೈಬಲ್‌ ವಿದ್ಯಾರ್ಥಿಗಳು 1922ನೇ ವರ್ಷದಲ್ಲಿ ತುಂಬ ಸೇವೆ ಮಾಡಿದ್ರು. 1921ಕ್ಕಿಂತ 1922ರಲ್ಲಿ ಇನ್ನೂ ಜಾಸ್ತಿ ಜನರಿಗೆ ಅವರು ಸಿಹಿಸುದ್ದಿ ಸಾರಿದ್ರು.

ಅಂಜದ ಆಪ್ತಮಿತ್ರರು

ಆ ಕಾಲದಲ್ಲಿದ್ದ ಬೈಬಲ್‌ ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ತುಂಬ ಸಹಾಯ ಮಾಡ್ತಿದ್ರು. ಅವರು “ಕಷ್ಟಕಾಲದಲ್ಲಿ” ನಿಜವಾದ ಸ್ನೇಹಿತರಾಗಿದ್ದರು. ಇದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ.—ಜ್ಞಾನೋ. 17:17.

ಅವತ್ತು ಮಂಗಳವಾರ ಮೇ 31, 1921. ಅಮೆರಿಕಾದಲ್ಲಿರೋ ಓಕ್ಲಹಾಮಾದ ತುಲ್ಸಾ ಅನ್ನೋ ಜಾಗದಲ್ಲಿ ಒಂದು ದೊಡ್ಡ ಹತ್ಯಾಕಾಂಡ ನಡೀತು. ಅದನ್ನ ತುಲ್ಸಾ ಹತ್ಯಾಕಾಂಡ ಅಂತಾನೇ ಹೇಳ್ತಾರೆ. ಒಬ್ಬ ಬಿಳಿ ಬಣ್ಣದ ಮಹಿಳೆ ಮೇಲೆ ಕಪ್ಪು ಬಣ್ಣದ ವ್ಯಕ್ತಿ ದಾಳಿ ಮಾಡಿದ ಅಂತ ಹೇಳಿ ಅವನನ್ನ ಜೈಲಿಗೆ ಹಾಕಿದ್ರು. ಇದ್ರಿಂದ ಕಪ್ಪು ಮತ್ತು ಬಿಳಿ ಜನರ ಮಧ್ಯೆ ಜಗಳ ಶುರುವಾಯ್ತು. ಸಾವಿರಕ್ಕೂ ಜಾಸ್ತಿ ಬಿಳೀ ಗಂಡಸರು ಸ್ವಲ್ಪ ಜನ ಇದ್ದ ಕಪ್ಪು ಗಂಡಸರ ಮೇಲೆ ದಾಳಿಮಾಡಿದ್ರು. ಈ ಜಗಳ ಕಾಡ್ಗಿಚ್ಚಿನ ತರ ದೊಡ್ಡದಾಯ್ತು. ಬರೀ ಕಪ್ಪು ಜನ ಮಾತ್ರ ಇರೋ ಗ್ರೀನ್‌ವುಡ್‌ ಅನ್ನೋ ಊರಲ್ಲಿ ಸುಮಾರು 1,400ಕ್ಕೂ ಹೆಚ್ಚು ಮನೆಗಳನ್ನ, ಅಂಗಡಿಗಳನ್ನ ಲೂಟಿಮಾಡಿ ಸುಟ್ಟುಹಾಕಿಬಿಟ್ರು. ರಿಪೋರ್ಟಲ್ಲಿ 36 ಜನ ಸತ್ತರು ಅಂತ ಬಂತು, ಆದ್ರೆ ಸುಮಾರು 300 ಜನ ಸತ್ತಿದ್ರು.

ಗ್ರೀನ್‌ವುಡ್‌ನಲ್ಲಿ ರಿಚರ್ಡ್‌ ಜೆ. ಹಿಲ್‌ ಅನ್ನೋ ಕಪ್ಪು ಬಣ್ಣದ ಸಹೋದರ ವಾಸ ಮಾಡ್ತಿದ್ರು. ಆ ಹತ್ಯಾಕಾಂಡದ ಬಗ್ಗೆ ಅವರು ಹೇಳಿದ್ದು, “ಅವತ್ತು ರಾತ್ರಿ ನಾವು ಮೀಟಿಂಗ್‌ ಮುಗಿಸಿಕೊಂಡು ಬರ್ತಿದ್ವಿ. ಆಗ ಸ್ವಲ್ಪ ದೂರದಲ್ಲಿ ನಮಗೆ ಗುಂಡಿನ ಸದ್ದು ಕೇಳಿಸ್ತು. ಆಮೇಲೆ ನಾವು ನಿದ್ದೆ ಮಾಡಿಬಿಟ್ವಿ.” ಜೂನ್‌ 1, ಬುಧವಾರ ಬೆಳಗಾಗೋ ಅಷ್ಟರಲ್ಲಿ ಪರಿಸ್ಥಿತಿ ಹದಗೆಟ್ಟುಹೋಗಿತ್ತು. ಕೆಲವು ಜನರು ನಮಗೆ “‘ನೀವು ಜೀವ ಕಾಪಾಡಿಕೊಳ್ಳಬೇಕು ಅಂದ್ರೆ ಪುರಸಭೆಗೆ ಹೋಗಿ’ ಅಂತ ಹೇಳಿದ್ರು” ಅಂತ ಸಹೋದರ ರಿಚರ್ಡ್‌ ನೆನಪಿಸ್ಕೊಳ್ತಾರೆ. ಇದನ್ನ ಕೇಳಿದಾಗ ಸಹೋದರ ತನ್ನ ಹೆಂಡತಿ ಮತ್ತೆ 5 ಮಕ್ಕಳನ್ನ ಕರಕೊಂಡು ಪುರಸಭೆಗೆ ಹೋಗ್ತಾರೆ. ಅಲ್ಲಿ ನೋಡಿದ್ರೆ 3,000 ಕಪ್ಪು ಜನರು ಇದ್ರು. ಅವರನ್ನೆಲ್ಲ ಕಾಯೋಕೆ ಸರ್ಕಾರ ಸೈನಿಕರನ್ನ ಇಟ್ಟಿತ್ತು.

ಆ ಸಮಯದಲ್ಲಿ ಸಹೋದರ ಆರ್ಥರ್‌ ಏನು ಮಾಡಿದ್ರು ಅಂತ ಅವರು ಹೀಗೆ ಹೇಳ್ತಾರೆ, “ಗ್ರೀನ್‌ವುಡ್‌ನಲ್ಲಿ ಜನರನ್ನೆಲ್ಲ ಲೂಟಿ ಮಾಡಿ ಅವರ ಮನೆಗಳನ್ನ ಸುಟ್ಟುಹಾಕ್ತಿದ್ದಾರೆ ಅಂತ ಗೊತ್ತಾದಾಗ ನನ್‌ ಫ್ರೆಂಡ್‌ ರಿಚರ್ಡ್‌ಗೆ ಏನಾದ್ರು ತೊಂದ್ರೆ ಆಯ್ತಾ ಅಂತ ನೋಡೋಕೆ ನಾನು ಅಲ್ಲಿಗೆ ಹೋದೆ.” ಆರ್ಥರ್‌ ಬಿಳಿ ಬಣ್ಣದವರಾಗಿದ್ರೂ ಇದನ್ನ ಮಾಡೋಕೆ ತುಂಬ ಧೈರ್ಯ ತೋರಿಸಿದ್ರು.

ಸಹೋದರ ಆರ್ಥರ್‌ ಕ್ಲಾಸ್‌ ದ ಹಾರ್ಪ್‌ ಆಫ್‌ ಗಾಡ್‌ ಪುಸ್ತಕದಿಂದ 14 ಮಕ್ಕಳಿಗೆ ಬೈಬಲ್‌ ಕಲಿಸಿದ್ರು

ಆರ್ಥರ್‌ ಅವರು ರಿಚರ್ಡ್‌ರವರ ಮನೆಗೆ ಬಂದಾಗ ಪಕ್ಕದ ಮನೆಯವರು ಗನ್‌ ಹಿಡ್ಕೊಂಡು ನಿಂತಿದ್ರು. ಆ ಪಕ್ಕದ ಮನೆಯವರಿಗೆ ರಿಚರ್ಡ್‌ ಅಂದ್ರೆ ತುಂಬ ಇಷ್ಟ. ಅವರು, ಆರ್ಥರ್‌ ಜಗಳ ಮಾಡೋಕೆ ಬಂದಿದ್ದಾರೆ ಅಂದ್ಕೊಂಡು “ನೀನ್ಯಾಕೆ ಇಲ್ಲಿಗೆ ಬಂದೆ?” ಅಂತ ಗದರಿಸಿದ್ರು.

ಅದಕ್ಕೆ ನಾನು “‘ರಿಚರ್ಡ್‌ ನನ್ನ ಫ್ರೆಂಡ್‌, ಇಲ್ಲಿಗೆ ನಾನು ತುಂಬ ಸಲ ಬಂದಿದ್ದೀನಿ’ ಅಂತ ಹೇಳ್ದೆ. ಸದ್ಯ! ಅವರು ನನ್ನ ನಂಬಿದ್ರು. ಇಲ್ಲಾಂದ್ರೆ ನನ್ನನ್ನ ಗುಂಡು ಹಾರಿಸಿ ಸಾಯಿಸಿಬಿಡ್ತಿದ್ರು” ಅಂತ ಆರ್ಥರ್‌ ಹೇಳ್ತಾರೆ. ರಿಚರ್ಡ್‌ ಅವರ ಮನೆಯಿಂದ ಏನೂ ಕಳ್ಳತನ ಆಗದ ಹಾಗೆ ಆರ್ಥರ್‌ ಮತ್ತು ಆ ಪಕ್ಕದ ಮನೆಯವರು ನೋಡಿಕೊಂಡ್ರು.

ಆರ್ಥರ್‌ಗೆ ಸಹೋದರ ರಿಚರ್ಡ್‌ ಮತ್ತು ಅವರ ಹೆಂಡ್ತಿ-ಮಕ್ಕಳು ಪುರಸಭೆಯಲ್ಲಿ ಇದ್ದಾರೆ ಅಂತ ಗೊತ್ತಾಯ್ತು. ಮುಖ್ಯಾಧಿಕಾರಿ ಸಹಿ ಮಾಡಿದ ಪತ್ರ ಇಲ್ಲದೆ ಪುರಸಭೆಯಿಂದ ಯಾರನ್ನೂ ಹೊರಗಡೆ ಬಿಡ್ತಾ ಇರಲಿಲ್ಲ. ಅದರ ಬಗ್ಗೆ ಆರ್ಥರ್‌ ಹೀಗೆ ಹೇಳ್ತಾರೆ, “ಆ ಮುಖ್ಯಾಧಿಕಾರಿ ಹತ್ರ ಹೋಗಿ ಮಾತಾಡೋದು ಅಷ್ಟು ಸುಲಭ ಆಗಿರಲಿಲ್ಲ. ಕೊನೆಗೂ ನನಗೆ ಅವಕಾಶ ಸಿಕ್ತು. ನಾನು ಅವರ ಹತ್ರ ‘ರಿಚರ್ಡ್‌ ಮತ್ತೆ ಅವರ ಹೆಂಡ್ತಿ-ಮಕ್ಕಳನ್ನ ಕರಕೊಂಡು ಹೋಗ್ತೀನಿ’ ಅಂತ ಹೇಳಿದೆ. ಅದಕ್ಕೆ ಅವರು ‘ನೀನು ಅವರ ಕುಟುಂಬಕ್ಕೆ ಏನೂ ಅಪಾಯ ಆಗದೇ ಇರೋ ತರ ನೋಡಿಕೊಳ್ತೀಯ?’ ಅಂತ ಕೇಳಿದ್ರು. ಅದಕ್ಕೆ ನಾನು ‘ಖಂಡಿತ ನೋಡಿಕೊಳ್ತೀನಿ’ ಅಂದೆ.”

ಆ ಪತ್ರ ತಗೊಂಡು ಆರ್ಥರ್‌ ಪುರಸಭೆಗೆ ಹೋದ್ರು. ಅದನ್ನ ಅಧಿಕಾರಿಗೆ ಕೊಟ್ಟಾಗ ಅವರು, “ಏನು! ಮುಖ್ಯಾಧಿಕಾರಿ ಹತ್ರಾನೇ ಸಹಿ ಮಾಡಿಸಿಕೊಂಡು ಬಂದಿದ್ದೀರಾ! ಇಲ್ಲಿ ತನಕ ಇಲ್ಲಿಂದ ಯಾರನ್ನೂ ಹೊರಗೆ ಬಿಟ್ಟಿಲ್ಲ. ನೀವೇ ಮೊದಲು ಒಬ್ಬರನ್ನ ಇಲ್ಲಿಂದ ಕರಕೊಂಡು ಹೋಗ್ತಿರೋದು” ಅಂದ್ರು. ಆಮೇಲೆ ಆರ್ಥರ್‌ ಮತ್ತು ಅಧಿಕಾರಿ ಕೂಡಲೆ ರಿಚರ್ಡ್‌ನ ಮತ್ತು ಅವರ ಹೆಂಡ್ತಿ-ಮಕ್ಕಳನ್ನ ಹುಡುಕಿ ಕರಕೊಂಡು ಬಂದ್ರು. ಆಮೇಲೆ ಅವರೆಲ್ಲ ಆರ್ಥರ್‌ ಕಾರಲ್ಲಿ ಮನೆಗೆ ಬಂದ್ರು.

‘ದೇವಜನರಲ್ಲಿ ಎಲ್ರೂ ಸಮಾನರು’

ಸಹೋದರ ರಿಚರ್ಡ್‌ ಮತ್ತು ಅವರ ಹೆಂಡ್ತಿ-ಮಕ್ಕಳಿಗೆ ಯಾವ ಅಪಾಯನೂ ಆಗದೇ ಇರೋ ತರ ಆರ್ಥರ್‌ ನೋಡಿಕೊಂಡ್ರು. ಅವರ ಮಧ್ಯೆ ಇದ್ದ ಈ ಪ್ರೀತಿನ ನೋಡಿ ತುಂಬ ಜನರು ಆಶ್ಚರ್ಯಪಟ್ರು. ಆರ್ಥರ್‌ ಹೀಗೆ ಹೇಳ್ತಾರೆ, “ಸಹೋದರ ರಿಚರ್ಡ್‌ ಅವರ ಪಕ್ಕದ ಮನೆಯವರಿಗೆ ದೇವಜನರ ಮೇಲಿದ್ದ ಗೌರವ ಇನ್ನೂ ಜಾಸ್ತಿ ಆಯ್ತು. ದೇವಜನರ ಮಧ್ಯೆ ಕರಿಯರು ಬಿಳಿಯರು ಅನ್ನೋ ಬೇಧಭಾವ ಇಲ್ಲ, ಎಲ್ರೂ ಸಮಾನರು ಒಗ್ಗಟ್ಟಾಗಿ ಇರ್ತಾರೆ ಅನ್ನೋದನ್ನ ನೋಡಿ ಎಷ್ಟೋ ಜನರು ಸತ್ಯ ಕಲಿಯೋಕೆ ಮನಸ್ಸು ಮಾಡಿದ್ರು.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ