ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp22 ನಂ. 1 ಪು. 10-11
  • 3 | ದ್ವೇಷದ ಕಳೆಯನ್ನ ಮನಸ್ಸಿಂದ ಕಿತ್ತಾಕಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 3 | ದ್ವೇಷದ ಕಳೆಯನ್ನ ಮನಸ್ಸಿಂದ ಕಿತ್ತಾಕಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೈಬಲ್‌ ಕಲಿಸೋದು:
  • ಅರ್ಥ ಏನು?
  • ನೀವೇನು ಮಾಡಬಹುದು?
  • ಸ್ತೆಫನ ‘ದೇವರ ಮೆಚ್ಚುಗೆ ಮತ್ತು ಶಕ್ತಿ ಪಡ್ಕೊಂಡಿದ್ದ’
    ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
  • ಸ್ತೆಫನನ್ನು ಕಲ್ಲೆಸೆದು ಕೊಲ್ಲಲಾಗುತ್ತದೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ದ್ವೇಷದ ಸರಪಳಿಯನ್ನು ಮುರಿಯೋದು ಹೇಗೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
  • ದ್ವೇಷವನ್ನು ಜಯಿಸಲು ನಮ್ಮಿಂದಾಗುತ್ತೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
wp22 ನಂ. 1 ಪು. 10-11
ಒಬ್ಬ ವ್ಯಕ್ತಿ ಇನ್ನೊಂದು ಜಾತಿಯ ವ್ಯಕ್ತಿಯ ಜೊತೆ ಹ್ಯಾಂಡ್‌ಶೇಕ್‌ ಮಾಡೋದನ್ನ ಊಹಿಸುತ್ತಿದ್ದಾನೆ. ಅವರ ನೆರಳಲ್ಲಿ, ಒಬ್ಬರಿಗೊಬ್ಬರು ವಾದ ಮಾಡುತ್ತಾ ಪ್ರತಿಭಟಿಸುವ ಬೋರ್ಡನ್ನು ಹಿಡ್ಕೊಂಡಿದ್ದಾರೆ.

ದ್ವೇಷದ ಸರಪಳಿಯನ್ನು ಮುರಿಯೋದು ಹೇಗೆ?

3 | ದ್ವೇಷದ ಕಳೆಯನ್ನ ಮನಸ್ಸಿಂದ ಕಿತ್ತಾಕಿ

ಬೈಬಲ್‌ ಕಲಿಸೋದು:

“ನಿಮ್ಮ ಯೋಚಿಸೋ ವಿಧಾನವನ್ನ ಬದಲಾಯಿಸೋಕೆ ಬಿಟ್ಟುಕೊಡಿ. ಆಗ ದೇವರು ಇಷ್ಟಪಡೋ ವಿಷ್ಯಗಳು ಯಾವಾಗ್ಲೂ ಒಳ್ಳೇದಾಗಿ, ಪರಿಪೂರ್ಣವಾಗಿ, ಸರಿಯಾಗಿ ಇರುತ್ತೆ ಅಂತ ಪರೀಕ್ಷಿಸಿ ಅರ್ಥ ಮಾಡ್ಕೊಳ್ತೀರ.”—ರೋಮನ್ನರಿಗೆ 12:2.

ಅರ್ಥ ಏನು?

ನಾವು ಮನಸ್ಸಲ್ಲಿ ಏನು ಯೋಚಿಸ್ತೀವಿ ಅನ್ನೋದನ್ನ ದೇವರು ಗಮನಿಸ್ತಾ ಇರ್ತಾನೆ. (ಯೆರೆಮೀಯ 17:10) ನಾವು ದ್ವೇಷದಿಂದ ಮಾತಾಡೋದನ್ನ ಮತ್ತು ನಡ್ಕೊಳ್ಳೋದನ್ನ ನಿಲ್ಲಿಸಿದ್ರೆ ಮಾತ್ರ ಸಾಕಾಗಲ್ಲ, ಅದಕ್ಕಿಂತ ಹೆಚ್ಚಿನದ್ದನ್ನು ಮಾಡಬೇಕು. ದ್ವೇಷದ ಕಿಡಿ ಶುರುವಾಗೋದೇ ಮನಸ್ಸಲ್ಲಿ. ಹಾಗಾಗಿ ನಮ್ಮ ಮನಸ್ಸಲ್ಲಿ ದ್ವೇಷವನ್ನ ಹುಟ್ಟಿಸೋ ಯಾವುದಾದ್ರೂ ವಿಷಯಗಳಿದ್ರೆ ತಕ್ಷಣ ಅದನ್ನು ಬೇರು ಸಮೇತ ಕಿತ್ತಾಕಬೇಕು. ಹೀಗೆ ಮಾಡೋದಾದ್ರೆ ಮಾತ್ರ ನಮ್ಮನ್ನು “ಬದಲಾಯಿಸಿಕೊಂಡು” ದ್ವೇಷ ಅನ್ನೋ ಸರಪಳಿಯನ್ನ ಕಿತ್ತು ಹಾಕೋಕೆ ಆಗುತ್ತೆ.

ನೀವೇನು ಮಾಡಬಹುದು?

ಬೇರೆಯವರ ಬಗ್ಗೆ ನಿಮಗೆ ಯಾವ ರೀತಿಯ ಯೋಚನೆ ಇದೆ? ಅದ್ರಲ್ಲೂ ವಿಶೇಷವಾಗಿ ಬೇರೆ ಜಾತಿ ಅಥವಾ ದೇಶದವರ ಬಗ್ಗೆ ನೀವು ಯಾವ ರೀತಿ ಯೋಚಿಸ್ತೀರಾ ಅಂತ ಪರೀಕ್ಷಿಸಿ. ಅದಕ್ಕೆ ಸಹಾಯ ಮಾಡೋ ಕೆಲವು ಪ್ರಶ್ನೆಗಳು: ‘ನಾನು ಅವರನ್ನ ಹೇಗೆ ನೋಡ್ತಿದ್ದೀನಿ? ಅವರ ಬಗ್ಗೆ ಎಲ್ಲಾ ತಿಳ್ಕೊಂಡು ನಾನು ಅವರನ್ನ ಆ ರೀತಿ ನೋಡ್ತಿದ್ದೀನಾ? ಅಥವಾ ಅವರ ಮೇಲೆ ನನಗೆ ಪೂರ್ವಾಭಿಪ್ರಾಯ ಇದೆಯಾ?’ ಹಾಗಿರೋದಾದ್ರೆ ದ್ವೇಷ ಮತ್ತು ಹಿಂಸೆ ತುಂಬಿರೋ ಸಿನಿಮಾಗಳಿಂದ, ವಿಡಿಯೋಗಳಿಂದ ಮತ್ತು ಮನೋರಂಜನೆಗಳಿಂದ ದೂರ ಇರಬೇಕು.

ದೇವರ ವಾಕ್ಯ ನಮ್ಮ ಮನಸ್ಸಲ್ಲಿರೋ ದ್ವೇಷವನ್ನು ಬೇರು ಸಮೇತ ಕಿತ್ತು ಹಾಕಲು ಸಹಾಯ ಮಾಡುತ್ತೆ.

ನಮ್ಮ ಯೋಚನೆ, ಅನಿಸಿಕೆಗಳು ಯಾವಾಗಲೂ ಸರಿಯಾಗಿದೆಯಾ ಅಂತ ತಿಳಿದುಕೊಳ್ಳೋದು ಸುಲಭ ಅಲ್ಲ. ಆದ್ರೆ ದೇವರ ವಾಕ್ಯಕ್ಕೆ “ಹೃದಯದ ಆಲೋಚನೆ, ಉದ್ದೇಶಗಳನ್ನು ಬಯಲು ಮಾಡೋ ಸಾಮರ್ಥ್ಯ” ಇದೆ. (ಇಬ್ರಿಯ 4:12) ಹಾಗಾಗಿ ಬೈಬಲನ್ನು ಅಧ್ಯಯನ ಮಾಡಿ. ನೀವು ಯಾವ ತರ ಯೋಚಿಸ್ತಿದ್ದೀರಾ, ಬೈಬಲಲ್ಲಿ ಏನು ಹೇಳ್ತಾ ಇದೆ ಅಂತ ನೋಡಿ. ಆಮೇಲೆ, ಬೈಬಲ್‌ ಹೇಳೋ ತರ ನೀವು ಯೋಚಿಸ್ತಿದ್ದೀರಾ ಅಂತ ಪರೀಕ್ಷಿಸಿ. ನಮ್ಮ ಮನಸ್ಸಲ್ಲಿರೋ ದ್ವೇಷ “ದೊಡ್ಡ ದೊಡ್ಡ ಕೋಟೆಗಳ ತರ” ಇದ್ರೂ ಅದನ್ನ ಕೆಡವಿ ಹಾಕೋಕೆ ದೇವರ ವಾಕ್ಯ ಸಹಾಯ ಮಾಡುತ್ತೆ.—2 ಕೊರಿಂಥ 10:4, 5.

ನಿಜ ಅನುಭವ—ಸ್ಟೀಫನ್‌

ತಮ್ಮ ಯೋಚಿಸುವ ರೀತಿಯನ್ನು ಬದಲಾಯಿಸಿದರು

ಸ್ಟೀಫನ್‌.

ಸ್ಟೀಫನ್‌ ಮತ್ತು ಅವರ ಕುಟುಂಬದವರನ್ನ ಬಿಳಿ ಜನರು ದ್ವೇಷಿಸುತ್ತಿದ್ದರು. ಇದ್ರಿಂದ ಸ್ಟೀಫನ್‌ ಮಾನವ ಹಕ್ಕುಗಳಿಗಾಗಿ ಹೋರಾಡ್ತಿದ್ದ ಒಂದು ರಾಜಕೀಯ ಗುಂಪಿಗೆ ಸೇರಿಕೊಂಡರು. ಸ್ವಲ್ಪ ಸಮಯದಲ್ಲೇ ಅವರು ದ್ವೇಷದ ಕಾರಣದಿಂದಾಗಿ ಜನರನ್ನು ಹಿಂಸಿಸುತ್ತಿದ್ದರು. ಸ್ಟೀಫನ್‌ ಹೇಳಿದ್ದು: “ಒಂದಿನ ನಾನು ನನ್ನ ಫ್ರೆಂಡ್ಸ್‌ ಥಿಯೇಟರಿಗೆ ಹೋದ್ವಿ. ಆ ಫಿಲ್ಮಲ್ಲಿ, ಅಮೆರಿಕನ್ನರು ಆಫ್ರಿಕನ್ನರನ್ನ ಗುಲಾಮರಾಗಿ ಮಾಡ್ಕೊಂಡಿದ್ದನ್ನು ತೋರಿಸಿದ್ರು. ಆ ಅನ್ಯಾಯ ನೋಡಿ ನಮಗೆ ಎಷ್ಟು ಕೋಪ ಬಂತಂದ್ರೆ ಆ ಥಿಯೇಟರಲ್ಲಿದ್ದ ಬಿಳಿ ಹುಡುಗರಿಗೆ ಹಿಗ್ಗಾಮುಗ್ಗಾ ಹೊಡೆದುಬಿಟ್ವಿ. ಬೀದಿಯಲ್ಲಿ ಸಿಗುವವರನ್ನೂ ಹುಡ್ಕೊಂಡು ಹೋಗಿ ಹೊಡೆಯೋಣ ಅಂತ ಹುಡುಕಾಡ್ತಾ ತಿರುಗಾಡುತಿದ್ವಿ.”

ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಕಲಿತಾಗ ಸ್ಟೀಫನ್‌ ಅವರ ಯೋಚನೆ ಪೂರ್ತಿಯಾಗಿ ಬದಲಾಯಿತು. ಅವರು ಹೇಳಿದ್ದು: “ಜನ ಇಷ್ಟೊಂದು ಭೇದಭಾವ ತೋರಿಸ್ತಾ ದ್ವೇಷ ಕಾರುತ್ತಾ ಇರುವಾಗ ಯೆಹೋವನ ಸಾಕ್ಷಿಗಳು ಭೇದಭಾವ ತೋರಿಸದೆ ಇರೋದನ್ನ ನೋಡಿ ನಂಗೆ ಆಶ್ಚರ್ಯ ಆಗೋಯ್ತು. ಉದಾಹರಣೆಗೆ, ಒಬ್ಬ ಬಿಳಿ ಸಹೋದರ ಕೆಲಸದ ಮೇಲೆ ಬೇರೆ ಕಡೆ ಹೋದಾಗ ಅವರ ಮಕ್ಕಳನ್ನ ಕಪ್ಪು ಸಹೋದರರ ಮನೆಯಲ್ಲಿ ಬಿಟ್ಟು ಹೋದ್ರು. ಅಷ್ಟೇ ಅಲ್ಲ, ಬಿಳಿ ಸಹೋದರರ ಒಂದು ಕುಟುಂಬ ಒಬ್ಬ ಕಪ್ಪು ಹುಡುಗನನ್ನು ತಮ್ಮ ಮನೆಯಲ್ಲಿ ಉಳಿಸಿಕೊಂಡ್ರು.” ತನ್ನ ಶಿಷ್ಯರು ನಿಜ ಪ್ರೀತಿ ತೋರಿಸ್ತಾರೆ ಅಂತ ಯೇಸು ಹೇಳಿದನು. ಇದನ್ನು ಯೆಹೋವನ ಸಾಕ್ಷಿಗಳು ಪಾಲಿಸೋದು ನೋಡಿ ಸ್ಟೀಫನ್‌ಗೆ ತುಂಬ ಖುಷಿಯಾಯ್ತು. ಅದು ಅವರ ಮನಸ್ಸು ಮುಟ್ತು.—ಯೋಹಾನ 13:35.

ಸ್ಟೀಫನ್‌ಗೆ ಹಿಂಸೆ ಮತ್ತು ದ್ವೇಷವನ್ನ ಕಿತ್ತು ಹಾಕಲು ಯಾವುದು ಸಹಾಯ ಮಾಡ್ತು? ರೋಮನ್ನರಿಗೆ 12:2ರಲ್ಲಿರೋ ವಚನ. ಅವರು ಹೇಳಿದ್ದು: “ನಾನು ನನ್ನಲ್ಲೇ ಬದಲಾವಣೆ ಮಾಡ್ಬೇಕು ಅಂತ ಗೊತ್ತಾಯ್ತು. ದ್ವೇಷವನ್ನು ಕಿತ್ತು ಹಾಕೋದು ಅಷ್ಟೇ ಅಲ್ಲ, ಸಮಾಧಾನವಾಗಿ ಇರೋಕೆ ಕಲಿತ್ರೆ ಜೀವನದಲ್ಲಿ ಖುಷಿಯಾಗಿ ಇರೋಕೆ ಆಗುತ್ತೆ ಅಂತ ಅರ್ಥ ಮಾಡ್ಕೊಂಡೆ.” ಸ್ಟೀಫನ್‌ ದ್ವೇಷ ಅನ್ನೋ ಸರಪಳಿ ಕಿತ್ತು ಹಾಕಿ 40 ವರ್ಷದಿಂದ ಸಂತೋಷವಾಗಿ ಜೀವನ ಮಾಡ್ತಿದ್ದಾರೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ