ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp22 ನಂ. 1 ಪು. 12-13
  • 4 | ದೇವರ ಸಹಾಯದಿಂದ ದ್ವೇಷವನ್ನ ಕಿತ್ತೆಸೆಯಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 4 | ದೇವರ ಸಹಾಯದಿಂದ ದ್ವೇಷವನ್ನ ಕಿತ್ತೆಸೆಯಿರಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೈಬಲ್‌ ಕಲಿಸೋದು:
  • ಅರ್ಥ ಏನು?
  • ನೀವೇನು ಮಾಡಬಹುದು?
  • ಬದುಕನ್ನೇ ಬದಲಾಯಿಸಿತು ಬೈಬಲ್‌
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ದ್ವೇಷದ ಸರಪಳಿಯನ್ನು ಮುರಿಯೋದು ಹೇಗೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
  • ದ್ವೇಷವನ್ನು ಜಯಿಸಲು ನಮ್ಮಿಂದಾಗುತ್ತೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
  • ಇಷ್ಟೊಂದು ದ್ವೇಷ ಯಾಕಿದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
wp22 ನಂ. 1 ಪು. 12-13
ಬೆಳಕು ಬೀರುತ್ತಿರೋ ತೆರೆದ ಒಂದು ದೊಡ್ಡ ಬೈಬಲಿನ ಕಡೆ ಜನರು ನಡ್ಕೊಂಡು ಹೋಗ್ತಿದ್ದಾರೆ. ಅವರ ನೆರಳು ಮುಂಚೆ ಅವರಿಗಿದ್ದ ದ್ವೇಷವನ್ನ ತೋರಿಸುತ್ತಿದೆ.

ದ್ವೇಷದ ಸರಪಳಿಯನ್ನು ಮುರಿಯೋದು ಹೇಗೆ?

4 | ದೇವರ ಸಹಾಯದಿಂದ ದ್ವೇಷವನ್ನ ಕಿತ್ತೆಸೆಯಿರಿ

ಬೈಬಲ್‌ ಕಲಿಸೋದು:

“ಪವಿತ್ರಶಕ್ತಿಯಿಂದ ಬರೋ ಗುಣಗಳು ಯಾವುದಂದ್ರೆ ಪ್ರೀತಿ, ಆನಂದ, ಶಾಂತಿ, ತಾಳ್ಮೆ, ದಯೆ, ಒಳ್ಳೇತನ, ನಂಬಿಕೆ, ಸೌಮ್ಯತೆ, ಸ್ವನಿಯಂತ್ರಣ.”—ಗಲಾತ್ಯ 5:22, 23.

ಅರ್ಥ ಏನು?

ದೇವರ ಸಹಾಯದಿಂದ ದ್ವೇಷ ಅನ್ನೋ ಸರಪಳಿಯನ್ನು ಕಿತ್ತು ಹಾಕೋಕೆ ಆಗುತ್ತೆ. ಅದಕ್ಕೆ ಸಹಾಯ ಮಾಡೋ ಗುಣಗಳನ್ನು ಬೆಳೆಸಿಕೊಳ್ಳಲು ದೇವರ ಪವಿತ್ರ ಶಕ್ತಿ ನಮಗೆ ಸಹಾಯ ಮಾಡುತ್ತೆ. ನಾವು ನಮ್ಮ ಸ್ವಂತ ಶಕ್ತಿಯಿಂದ ದ್ವೇಷವನ್ನ ಜಯಿಸೋಕೆ ಆಗಲ್ಲ. ಅದಕ್ಕೆ ದೇವರ ಸಹಾಯ ಪಡೆಯಬೇಕು. ಹೀಗೆ ಮಾಡೋದಾದ್ರೆ ನಾವು ಅಪೊಸ್ತಲ ಪೌಲನ ತರ ಹೇಳಬಹುದು. ಅವನು ಹೇಳಿದ್ದು: “ದೇವರಿಂದಾನೇ ನನಗೆ ಎಲ್ಲ ಮಾಡೋಕೆ ಆಗ್ತಿದೆ. ಯಾಕಂದ್ರೆ ನನಗೆ ಬೇಕಾದ ಶಕ್ತಿ ಕೊಡೋದು ಆತನೇ.” (ಫಿಲಿಪ್ಪಿ 4:13) ಅಷ್ಟೇ ಅಲ್ಲ, ಕೀರ್ತನೆಗಾರ ಹೇಳಿದಂತೆ “ಯೆಹೋವನಿಂದ ನನಗೆ ಸಹಾಯ ಸಿಗುತ್ತೆ” ಅಂತ ನಾವೂ ಹೇಳಬಹುದು.—ಕೀರ್ತನೆ 121:2.

ನೀವೇನು ಮಾಡಬಹುದು?

“ಕೆಟ್ಟ ಕೋಪದಿಂದ ಕುದಿಯುತ್ತಿದ್ದ ನನ್ನನ್ನ ಯೆಹೋವ ದೇವರು ಶಾಂತ ವ್ಯಕ್ತಿಯನ್ನಾಗಿ ಮಾಡಿದ್ರು.” —ವಾಲ್ಡೋ

ಪವಿತ್ರ ಶಕ್ತಿಯ ಸಹಾಯ ಪಡೆಯೋಕೆ ಯೆಹೋವನ ಹತ್ತಿರ ಪ್ರಾರ್ಥಿಸಿ. (ಲೂಕ 11:13) ದ್ವೇಷವನ್ನು ಕಿತ್ತೆಸೆಯಲು ಸಹಾಯ ಮಾಡೋ ಒಳ್ಳೆ ಗುಣಗಳನ್ನು ಬೆಳೆಸಿಕೊಳ್ಳಲು ಸಹ ಆತನ ಸಹಾಯ ಕೇಳಿ. ಇದಕ್ಕೆ ಸಹಾಯ ಮಾಡೋ ಆ ಗುಣಗಳು ಯಾವುದಂದ್ರೆ ಪ್ರೀತಿ, ಶಾಂತಿ, ತಾಳ್ಮೆ ಮತ್ತು ಸ್ವನಿಯಂತ್ರಣ. ಬೈಬಲ್‌ ಈ ಗುಣಗಳ ಬಗ್ಗೆ ಏನು ಹೇಳುತ್ತೆ ಅಂತ ಕಲಿತು ಅದನ್ನ ನಿಮ್ಮ ಜೀವನದಲ್ಲಿ ತೋರಿಸಿ. ಅಷ್ಟೇ ಅಲ್ಲ, ಅದನ್ನು ತೋರಿಸುವವರ ಜೊತೆ ಸ್ನೇಹ ಮಾಡಿ. ಇಂಥ ಸ್ನೇಹಿತರು “ಪ್ರೀತಿ ತೋರಿಸೋಕೆ, ಒಳ್ಳೇ ಕೆಲಸಗಳನ್ನ ಮಾಡೋಕೆ [ನಿಮಗೆ] ಪ್ರೋತ್ಸಾಹ ಕೊಡಬಹುದು.”—ಇಬ್ರಿಯ 10:24.

ನಿಜ ಅನುಭವ—ವಾಲ್ಡೋ

ಹಿಂಸಾತ್ಮಕ ದ್ವೇಷ ಗೆದ್ದವರು

ವಾಲ್ಡೋ.

ವಾಲ್ಡೋ ಅವರ ಬಾಲ್ಯ ತುಂಬ ಕಷ್ಟಕರವಾಗಿತ್ತು. ಅದಕ್ಕೆ ಅವರಲ್ಲಿ ದ್ವೇಷ ಬೆಳೀತು. ಅವರು ಹೇಳಿದ್ದು: “ನಾನು ಡ್ರಗ್ಸ್‌ ಮಾರುವವರ ಜೊತೆ ಬೀದಿ ಬೀದಿಯಲ್ಲೂ ಹೊಡೆದಾಟ ಮಾಡ್ತಿದ್ದೆ. ಒಂದಿನ ನನ್ನ ವಿರೋಧಿ ಗ್ಯಾಂಗಿನವರು ನನ್ನನ್ನ ಕೊಲ್ಲೋಕೆ ಒಬ್ಬ ಕುಖ್ಯಾತ ಕೊಲೆಗಾರನಿಗೆ ಹಣ ಕೊಟ್ಟು ಕಳಿಸಿದ್ರು. ಅವನು ನಂಗೆ ಕತ್ತಿ ಇರಿದ. ಆದ್ರೆ ಹೆಂಗೋ ಬಚಾವಾದೆ.”

ವಾಲ್ಡೋ ಅವರ ಹೆಂಡತಿ ಯೆಹೋವನ ಸಾಕ್ಷಿಗಳಿಂದ ಬೈಬಲ್‌ ಕಲಿಯುತಿದ್ರು. ಆದ್ರೆ ವಾಲ್ಡೋಗೆ ಅದು ಒಂಚೂರೂ ಇಷ್ಟ ಆಗ್ಲಿಲ್ಲ. ಅವರು ಹೇಳಿದ್ದು: “ನನಗೆ ಯೆಹೋವನ ಸಾಕ್ಷಿಗಳನ್ನು ಕಂಡ್ರೆ ಆಗ್ತಿರಲಿಲ್ಲ. ಅವ್ರಿಗೆ ಎಷ್ಟೋ ಸಲ ಕೆಟ್ಟಕೆಟ್ಟದಾಗಿ ಬೈದು ಕಳಿಸಿದ್ದೀನಿ. ಆದ್ರೆ ಅವ್ರು ಮಾತ್ರ ಏನೂ ಹೇಳದೆ ಶಾಂತವಾಗಿ ಇರುತ್ತಿದ್ರು.”

ಸ್ವಲ್ಪ ಸಮಯದಲ್ಲೇ ವಾಲ್ಡೋ ಕೂಡ ಬೈಬಲ್‌ ಕಲಿಯೋಕೆ ಶುರು ಮಾಡಿದ್ರು. ಅವರು ಹೇಳಿದ್ದು: “ನಾನು ಕಲಿತಿದ್ದನ್ನು ಅನ್ವಯಿಸಿಕೊಳ್ಳೋದು ಅಷ್ಟು ಸುಲಭ ಆಗಿರಲಿಲ್ಲ. ನನ್ನ ಈ ಕೆಟ್ಟ ಕೋಪವನ್ನ ನಿಯಂತ್ರಿಸೋಕೆ ಆಗೋದೆ ಇಲ್ವೇನೋ ಅಂತ ಅಂದ್ಕೊಂಡಿದ್ದೆ.” ಆದ್ರೆ ಅವರು ಬೈಬಲಿಂದ ಕಲಿತ ಒಂದು ವಿಷಯ ಅವರಲ್ಲಿ ದೊಡ್ಡ ಬದಲಾವಣೆ ಮಾಡ್ತು.

ವಾಲ್ಡೋ ಹೇಳಿದ್ದು: “ಒಂದಿನ ನಂಗೆ ಬೈಬಲ್‌ ಕಲಿಸ್ತಿದ್ದ ಅಲೆಯಾಂಡ್ರೋ ನನ್ನ ಹತ್ರ ಗಲಾತ್ಯ 5:22, 23ನ್ನು ಓದೋಕೆ ಹೇಳಿದ್ರು. ಆಮೇಲೆ, ಈ ಗುಣಗಳನ್ನು ನಿನ್ನ ಸ್ವಂತ ಶಕ್ತಿಯಿಂದ ಬೆಳೆಸ್ಕೊಳ್ಳೋಕೆ ಆಗಲ್ಲ, ದೇವರ ಪವಿತ್ರ ಶಕ್ತಿಯ ಸಹಾಯ ಪಡ್ಕೊಬೇಕು ಅಂತ ಹೇಳಿದ್ರು. ಆ ಸತ್ಯ ನನ್ನ ಕಣ್‌ ತೆರಿತು!”

ವಾಲ್ಡೋ ದೇವರ ಸಹಾಯದಿಂದ ದ್ವೇಷ ಅನ್ನೋ ಸರಪಳಿಯನ್ನು ಮುರಿದು ಹಾಕಿದ್ರು. ಅವರು ಹೇಳಿದ್ದು: “ನನ್ನ ಸಂಬಂಧಿಕರಿಗೆ ಮತ್ತು ಫ್ರೆಂಡ್ಸಿಗೆ ನಾನು ಬದಲಾಗಿದ್ದನ್ನು ನಂಬೋಕೆ ಆಗ್ತಿಲ್ಲ. ಕೆಟ್ಟ ಕೋಪದಿಂದ ಕುದಿಯುತ್ತಿದ್ದ ನನ್ನನ್ನ ಯೆಹೋವ ದೇವರು ಶಾಂತ ವ್ಯಕ್ತಿಯನ್ನಾಗಿ ಮಾಡಿದ್ರು.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ