ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w22 ಫೆಬ್ರವರಿ ಪು. 31
  • ನಿಮಗೆ ಗೊತ್ತಿತ್ತಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ಗೊತ್ತಿತ್ತಾ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಅನುರೂಪ ಮಾಹಿತಿ
  • ನಮ್ಮ ಇತಿಮಿತಿಗಳನ್ನು ಬಲ್ಲಾತನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ನಿಮಗೆ ಗೊತ್ತಿತ್ತಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ವಲಸೆ ಹೋಗುವಿಕೆಯ ರಹಸ್ಯಗಳನ್ನು ಪರೀಕ್ಷಿಸುವುದು
    ಎಚ್ಚರ!—1995
  • ಕಟ್ಟಡಕ್ಕೆ ಹಕ್ಕಿ ಡಿಕ್ಕಿಹೊಡೆಯುವಾಗ
    ಎಚ್ಚರ!—2009
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
w22 ಫೆಬ್ರವರಿ ಪು. 31

ನಿಮಗೆ ಗೊತ್ತಿತ್ತಾ?

ಯೆಹೋವ ಇಸ್ರಾಯೇಲ್ಯರಿಗೆ ಪಾರಿವಾಳ ಅಥವಾ ಕಾಡುಪಾರಿವಾಳನ ಬಲಿ ಕೊಡಬಹುದು ಅಂತ ಯಾಕೆ ಹೇಳಿದನು?

ಬಲಿ ಕೊಡುವಾಗ ಪಾರಿವಾಳ ಅಥವಾ ಕಾಡುಪಾರಿವಾಳನ ಬಲಿ ಕೊಡಬಹುದು ಅಂತ ಯೆಹೋವ ನಿಯಮ ಪುಸ್ತಕದಲ್ಲಿ ಬರೆಸಿದ್ದನು. ಇಸ್ರಾಯೇಲ್ಯರು ಇವೆರಡರಲ್ಲಿ ಯಾವುದನ್ನ ಕೊಟ್ರೂ ಯೆಹೋವ ಅದನ್ನ ಒಪ್ಪಿಕೊಳ್ಳುತ್ತಿದ್ದನು. (ಯಾಜ. 1:14; 12:8; 14:30) ಯೆಹೋವ ಈ ನಿಯಮ ಕೊಟ್ಟಿದ್ರಿಂದ ಇಸ್ರಾಯೇಲ್ಯರಿಗೆ ಬಲಿ ಕೊಡೋಕೆ ಸುಲಭ ಆಯ್ತು. ಯಾಕಂದ್ರೆ ಕಾಡುಪಾರಿವಾಳಗಳು ಯಾವಾಗಲೂ ಸಿಗ್ತಿರಲಿಲ್ಲ. ಯಾಕೆ?

ಕಾಡುಪಾರಿವಾಳ

ಕಾಡುಪಾರಿವಾಳಗಳು ವಲಸೆ ಹೋಗೋ ಪಕ್ಷಿಗಳು. ಅವು ಬೇಸಿಗೆಯಲ್ಲಿ ಮಾತ್ರ ಇಸ್ರಾಯೇಲಿನಲ್ಲಿ ಇರುತ್ತಿದ್ದವು. ಆದ್ರೆ ಚಳಿಗಾಲದಲ್ಲಿ ಅಂದ್ರೆ ಅಕ್ಟೋಬರ್‌ನಲ್ಲಿ ಬೇರೆ ದೇಶಕ್ಕೆ ವಲಸೆ ಹೋಗ್ತಿದ್ದವು. ವಸಂತ ಕಾಲಕ್ಕೆ ವಾಪಸ್‌ ಬರುತ್ತಿದ್ದವು. (ಪರಮ. 2:11, 12; ಯೆರೆ. 8:7) ಹಾಗಾಗಿ ಚಳಿಗಾಲದಲ್ಲಿ ಬಲಿ ಕೊಡೋಕೆ ಇಸ್ರಾಯೇಲ್ಯರಿಗೆ ಈ ಕಾಡುಪಾರಿವಾಳಗಳು ಸಿಗುತ್ತಿರಲಿಲ್ಲ.

ಪಾರಿವಾಳ

ಆದ್ರೆ ಪಾರಿವಾಳಗಳು ವಲಸೆ ಹೋಗುತ್ತಿರಲಿಲ್ಲ. ಅವು ಇಡೀ ವರ್ಷ ಇಸ್ರಾಯೇಲ್ಯರಿಗೆ ಸಿಗುತ್ತಿತ್ತು. ಅಷ್ಟೇ ಅಲ್ಲ, ಪಾರಿವಾಳಗಳನ್ನು ಮನೆಯಲ್ಲಿ ಸಾಕುತ್ತಿದ್ದರು. (ಯೋಹಾನ 2:14, 16 ಹೋಲಿಸಿ.) ಬೈಬಲ್‌ ಕಾಲದಲ್ಲಿದ್ದ ಸಸ್ಯಗಳು ಮತ್ತು ಪ್ರಾಣಿಗಳು (ಇಂಗ್ಲಿಷ್‌) ಅನ್ನೋ ಪುಸ್ತಕ ಹೀಗೆ ಹೇಳುತ್ತೆ: “ಪ್ಯಾಲಸ್ತೀನ್‌ನಲ್ಲಿದ್ದ ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ಪಾರಿವಾಳಗಳನ್ನು ಸಾಕುತ್ತಿದ್ದರು. ಅದಕ್ಕಂತಾನೇ ಅವರ ಮನೆಯ ಗೋಡೆ ಕೊರೆದು ಗೂಡು ಮಾಡ್ತಿದ್ರು.”—ಯೆಶಾಯ 60:8 ಹೋಲಿಸಿ.

ಗೂಡಲ್ಲಿರೋ ಪಾರಿವಾಳ

ಇಸ್ರಾಯೇಲ್ಯರಿಗೆ ಯಾವುದನ್ನ ಬೇಕಾದ್ರೂ ಬಲಿ ಕೊಡಬಹುದು ಅಂತ ಯೆಹೋವ ಹೇಳಿದಾಗ ಆತನಿಗೆ ಅವರ ಮೇಲೆ ಎಷ್ಟು ಪ್ರೀತಿಯಿದೆ ಅಂತ ಗೊತ್ತಾಗುತ್ತೆ. ಇಡೀ ವರ್ಷ ಪಾರಿವಾಳಗಳು ಸಿಕ್ತಿದ್ರಿಂದ ಬಲಿ ಕೊಡೋಕೆ ಇಸ್ರಾಯೇಲ್ಯರಿಗೆ ಕಷ್ಟ ಆಗ್ತಿರಲಿಲ್ಲ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ