ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w22 ನವೆಂಬರ್‌ ಪು. 31
  • ನಿಮಗೆ ಗೊತ್ತಿತ್ತಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ಗೊತ್ತಿತ್ತಾ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಅನುರೂಪ ಮಾಹಿತಿ
  • ದೇವಜನರ ಪರವಹಿಸಿ ನಿಂತಾಕೆ
    ಅವರ ನಂಬಿಕೆಯನ್ನು ಅನುಕರಿಸಿ
  • ಮೊರ್ದೆಕೈ ಮತ್ತು ಎಸ್ತೇರ್‌
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಎಸ್ತೇರ್‌ ಮುಖ್ಯಾಂಶಗಳು
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಎಸ್ತೇರಳು ಪುಸ್ತಕದ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
w22 ನವೆಂಬರ್‌ ಪು. 31

ನಿಮಗೆ ಗೊತ್ತಿತ್ತಾ?

ಮೊರ್ದೆಕೈ ಅನ್ನೋ ವ್ಯಕ್ತಿ ನಿಜವಾಗಲೂ ಇದ್ನಾ?

ಬೈಬಲಿನ ಎಸ್ತೇರ್‌ ಪುಸ್ತಕದಲ್ಲಿ ಮೊರ್ದೆಕೈ ಅನ್ನೋ ವ್ಯಕ್ತಿಯ ಹೆಸರು ತುಂಬ ಸಲ ಇದೆ. ಕ್ರಿಸ್ತಪೂರ್ವ 5ನೇ ಶತಮಾನದ ಆರಂಭದಲ್ಲಿ ಮೊರ್ದೆಕೈ, ಪರ್ಶಿಯದ ರಾಜ ಅಹಷ್ವೇರೋಷನ ಆಸ್ಥಾನದಲ್ಲಿ ಕೆಲಸ ಮಾಡ್ತಿದ್ದ. (ಈ ರಾಜನನ್ನ ತುಂಬ ಜನ ಒಂದನೇ ಸರ್‌ಕ್ಸೀಸ್‌ ಅಂತನೂ ಕರಿತಾರೆ.) ಮೊರ್ದೆಕೈ ಒಬ್ಬ ಯೆಹೂದಿಯಾಗಿದ್ದ. ಅವನನ್ನ ಯೆರೂಸಲೇಮಿನಿಂದ ಕೈದಿಯಾಗಿ ಕರೆದುಕೊಂಡು ಬಂದಿದ್ರು. ರಾಜನನ್ನ ಕೊಲ್ಲೋಕೆ ಒಂದು ಒಳಸಂಚು ನಡೆದಿತ್ತು. ಅದರ ಬಗ್ಗೆ ಮೊರ್ದೆಕೈಗೆ ಗೊತ್ತಾದಾಗ ಅವನು ಅದನ್ನ ರಾಜನಿಗೆ ಹೇಳಿ ಅವನ ಪ್ರಾಣ ಕಾಪಾಡಿದ. ಅದಕ್ಕೆ ರಾಜ ಅವನನ್ನ ಎಲ್ಲರ ಮುಂದೆ ಗೌರವಿಸಿದ. ಸ್ವಲ್ಪ ಸಮಯ ಆದಮೇಲೆ ಹಾಮಾನ ಅನ್ನೋ ವ್ಯಕ್ತಿ ಪರ್ಶಿಯ ಸಾಮ್ರಾಜ್ಯದಲ್ಲಿದ್ದ ಎಲ್ಲ ಯೆಹೂದ್ಯರನ್ನ ಸಾಯಿಸಬೇಕು ಅಂತ ಪಿತೂರಿ ಮಾಡಿದ. ಆದರೆ ಅವನು ರಾಜನ ಕೈಗೆ ಸಿಕ್ಕಿಹಾಕಿಕೊಂಡ ಮತ್ತು ಅವನಿಗೆ ಮರಣ ಶಿಕ್ಷೆ ಆಯ್ತು. ಇದಾದ ಮೇಲೆ ರಾಜ ಮೊರ್ದೆಕೈನ ತನ್ನ ಆಸ್ಥಾನದಲ್ಲಿ ಪ್ರಧಾನ ಮಂತ್ರಿಯಾಗಿ ಮಾಡಿದ. ಆಮೇಲೆ ಮೊರ್ದೆಕೈ ಒಂದು ಆಜ್ಞೆಯನ್ನ ಹೊರಡಿಸಿದ, ಹೀಗೆ ಎಲ್ಲ ಯೆಹೂದ್ಯರ ಪ್ರಾಣ ಕಾಪಾಡಿದ.—ಎಸ್ತೇ. 1:1; 2:5, 21-23; 8:1, 2; 9:16.

20ನೇ ಶತಮಾನದ ಆರಂಭದಲ್ಲಿದ್ದ ಕೆಲವು ಇತಿಹಾಸಗಾರರು ಎಸ್ತೇರ್‌ ಪುಸ್ತಕದಲ್ಲಿರೋ ವಿಷಯಗಳು ಕಟ್ಟುಕಥೆ, ಮೊರ್ದೆಕೈ ಅನ್ನೋ ವ್ಯಕ್ತಿನೇ ಇರಲಿಲ್ಲ ಅಂತ ಹೇಳ್ತಿದ್ರು. ಆದ್ರೆ 1941ರಲ್ಲಿ ಭೂಅಗೆತ ಶಾಸ್ತ್ರಜ್ಞರಿಗೆ ಬೈಬಲಲ್ಲಿ ಹೇಳಿರೋ ಮೊರ್ದೆಕೈ ಅನ್ನೋ ವ್ಯಕ್ತಿ ನಿಜವಾಗಲೂ ಇದ್ದ ಅನ್ನೋದಕ್ಕೆ ಆಧಾರ ಸಿಕ್ತು. ಆ ಆಧಾರ ಏನು ಅಂತ ಈಗ ನೋಡೋಣ.

ಸಂಶೋಧಕರಿಗೆ ಒಂದು ಪರ್ಶಿಯನ್‌ ಕ್ಯೂನಿಫಾರ್ಮ್‌ ಬರಹ ಸಿಕ್ತು. ಅದರಲ್ಲಿ ಮಾರ್ದೂಕ ಅನ್ನೋ ಹೆಸರು ಇತ್ತು (ಕನ್ನಡದಲ್ಲಿ ಮೊರ್ದೆಕೈ). ಇವನೊಬ್ಬ ಅಧಿಕಾರಿಯಾಗಿದ್ದ. ಇವನು ಶೂಷನ್‌ ಆಸ್ಥಾನದಲ್ಲಿ ಲೆಕ್ಕಾಚಾರ ನೋಡಿಕೊಳ್ತಾ ಇದ್ದಿರಬೇಕು. ಆ ಜಾಗದ ಬಗ್ಗೆ ಚೆನ್ನಾಗಿ ಗೊತ್ತಿದ್ದ ಇತಿಹಾಸಗಾರ ಆರ್ಥರ್‌ ಉಂಗ್‌ನಾಡ್‌, “ಬೈಬಲಲ್ಲಿ ಅಲ್ಲದೆ ಬೇರೆ ಕಡೆ ಈ ಮೊರ್ದೆಕೈ ಅನ್ನೋ ಹೆಸರನ್ನ ನೋಡಿದ್ದು ಇದೇ ಮೊದಲನೇ ಸಲ” ಅಂತ ಹೇಳಿದ್ರು.

ಇದಾದಮೇಲೆ ಸಾವಿರಾರು ಪರ್ಶಿಯನ್‌ ಕ್ಯೂನಿಫಾರ್ಮ್‌ ಬರಹಗಳು ಸಿಕ್ಕಿದವು. ಅವುಗಳನ್ನ ವಿದ್ವಾಂಸರು ಭಾಷಾಂತರ ಮಾಡಿದ್ರು. ಪರ್ಸೆಪೊಲಿಸ್‌ ನಗರದ ಗೋಡೆಗಳ ಹತ್ರ ಅಗೆದಾಗ ಅಲ್ಲಿ ಪಾಳುಬಿದ್ದಿದ್ದ ರಾಜನ ಖಜಾನೆಯಲ್ಲಿ ಅವು ಸಿಕ್ಕಿದವು. ಈ ಬರಹಗಳು ಒಂದನೇ ಸರ್‌ಕ್ಸೀಸ್‌ ರಾಜನ ಕಾಲದ್ದಾಗಿತ್ತು. ಇವು ಎಲಾಮೈಟ್‌ ಭಾಷೆಯಲ್ಲಿತ್ತು. ಮೊರ್ದೆಕೈ ಹೆಸರಿನ ಜೊತೆ ಎಸ್ತೇರ್‌ ಪುಸ್ತಕದಲ್ಲಿ ಹೇಳಿರೋ ಬೇರೆ ವ್ಯಕ್ತಿಗಳ ಹೆಸರುಗಳೂ ಅದರಲ್ಲಿ ಇದ್ದವು.a

ಪರ್ಶಿಯದ ಕ್ಯೂನಿಫಾರ್ಮ್‌ ಬರಹಗಳಲ್ಲಿ ಕಂಡುಬಂದಿರೋ ಮೊರ್ದೆಕೈ (ಮಾರ್ದೂಕ) ಅನ್ನೋ ಹೆಸರು

ಪರ್ಸೆಪೊಲಿಸ್‌ ನಗರದಲ್ಲಿ ಸಿಕ್ಕಿದ ಎಷ್ಟೋ ಬರಹಗಳಲ್ಲಿ ಮಾರ್ದೂಕ ಅನ್ನೋ ಹೆಸರು ತುಂಬ ಸಲ ಕಂಡುಬಂದಿದೆ. ಅವನು ಒಂದನೇ ಸರ್‌ಕ್ಸೀಸ್‌ ಆಳ್ತಿದ್ದ ಸಮಯದಲ್ಲಿ ಶೂಷನ್‌ ಆಸ್ಥಾನದಲ್ಲಿ ಕಾರ್ಯದರ್ಶಿಯಾಗಿದ್ದ ಅಂತ ಈ ಬರಹಗಳಿಂದ ಗೊತ್ತಾಗುತ್ತೆ. ಇನ್ನೊಂದು ಬರಹದಲ್ಲಿ ಮಾರ್ದೂಕ ಒಬ್ಬ ಭಾಷಾಂತರಗಾರನಾಗಿದ್ದ ಅಂತ ಹೇಳುತ್ತೆ. ಬೈಬಲಿನಲ್ಲೂ ಮೊರ್ದೆಕೈ ಬಗ್ಗೆ ಹೀಗೇ ಹೇಳಿದೆ. ಅವನು ರಾಜ ಅಹಷ್ವೇರೋಷನ (ಒಂದನೇ ಸರ್‌ಕ್ಸೀಸ್‌ನ) ಆಸ್ಥಾನದಲ್ಲಿ ಅಧಿಕಾರಿಯಾಗಿ ಕೆಲಸ ಮಾಡ್ತಿದ್ದ. ಅವನಿಗೆ ಕಡಿಮೆಪಕ್ಷ ಎರಡು ಭಾಷೆಗಳು ಬರುತ್ತಿತ್ತು. ಮೊರ್ದೆಕೈ ಯಾವಾಗಲೂ ರಾಜನ ಅರಮನೆಯ ಹೆಬ್ಬಾಗಿಲ ಹತ್ರ ಕೂತುಕೊಳ್ತಿದ್ದ ಅಂತ ಬೈಬಲ್‌ನಲ್ಲಿ ಇದೆ. (ಎಸ್ತೇ. 2:19, 21; 3:3) ಈ ಹೆಬ್ಬಾಗಿಲು ಒಂದು ದೊಡ್ಡ ಕಟ್ಟಡ ಆಗಿತ್ತು. ಆಸ್ಥಾನದ ಅಧಿಕಾರಿಗಳು ಅಲ್ಲೇ ಕೆಲಸ ಮಾಡ್ತಿದ್ರು.

ಕ್ಯೂನಿಫಾರ್ಮ್‌ ಬರಹಗಳಲ್ಲಿ ಹೇಳಿರೋ ಮಾರ್ದೂಕನಿಗೂ ಮತ್ತು ಬೈಬಲಲ್ಲಿ ಹೇಳಿರೋ ಮೊರ್ದೆಕೈಗೂ ತುಂಬ ಹೋಲಿಕೆಗಳಿವೆ. ಅವನು ಯಾವಾಗ ಜೀವಿಸ್ತಿದ್ದ, ಎಲ್ಲಿದ್ದ ಮತ್ತು ಏನು ಕೆಲಸ ಮಾಡ್ತಿದ್ದ ಅಂತ ಹೇಳಿರೋ ಮಾಹಿತಿ ಇವೆರಡರಲ್ಲೂ ಒಂದೇ ತರ ಇದೆ. ಭೂಅಗೆತ ಶಾಸ್ತ್ರಜ್ಞರು ಕಂಡುಹಿಡಿದಿರೋ ವಿಷಯಗಳನ್ನ ನೋಡುವಾಗ ಮಾರ್ದೂಕ ಅನ್ನೋ ವ್ಯಕ್ತಿನೇ ಎಸ್ತೇರ್‌ ಪುಸ್ತಕದಲ್ಲಿ ಹೇಳಿರೋ ಮೊರ್ದೆಕೈ ಅಂತ ಗೊತ್ತಾಗುತ್ತೆ.

a 1992ರಲ್ಲಿ ಎಡ್ವಿನ್‌ ಎಮ್‌. ಯಮೌಚಿ ಅನ್ನೋ ಪ್ರೊಫೆಸರ್‌ ಒಂದು ಲೇಖನ ಬರೆದ್ರು. ಪರ್ಸೆಪೊಲಿಸ್‌ ನಗರದಲ್ಲಿ ಸಿಕ್ಕಿದ ಬರಹಗಳಲ್ಲಿ ಇದ್ದ 10 ಹೆಸರುಗಳನ್ನ ಆ ಲೇಖನದಲ್ಲಿ ಅವರು ಬರೆದ್ರು. ಈ ಹೆಸರುಗಳು ಎಸ್ತೇರ್‌ ಪುಸ್ತಕದಲ್ಲೂ ಇದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ