ಇದೇ ಸರಿಯಾದ ದಾರಿ ಅಂತ ಕಂಡುಹಿಡಿಯೋದು ಹೇಗೆ?
ಪ್ರಪಂಚ ಕ್ಷಣಕ್ಷಣಕ್ಕೂ ಬದಲಾಗ್ತಾ ಇರುತ್ತೆ. ಅದು ಇವತ್ತು ಸರಿ ಅಂದಿದ್ದನ್ನ ನಾಳೆನೂ ಸರಿ ಅನ್ನುತ್ತೆ ಅನ್ನೋದಕ್ಕೆ ಯಾವ ಗ್ಯಾರಂಟಿನೂ ಇಲ್ಲ. ಹೀಗಿರುವಾಗ ನೀವು ಮಾಡೋ ತೀರ್ಮಾನಗಳಿಂದ ನಿಮಗೆ ಒಳ್ಳೇದಾಗಬೇಕಂದ್ರೆ, ಅದು ಮುಂದೆನೂ ಸರಿಯಾಗಿ ಇರಬೇಕಂದ್ರೆ ನೀವೇನು ಮಾಡಬೇಕು? ಅದಕ್ಕೆ ನಿಮಗೆ ಯಾವುದು ಸಹಾಯ ಮಾಡುತ್ತೆ?
ಬೈಬಲ್ ನಿಮಗೆ ಸಹಾಯ ಮಾಡುತ್ತೆ. ಬೈಬಲ್ ಹೇಳೋ ತರ ತೀರ್ಮಾನಗಳನ್ನ ಮಾಡಿದ್ರೆ ಮುಂದೆ ನಿಮಗೆ, ‘ಅಯ್ಯೋ ನಾನ್ಯಾಕೆ ಈ ತರ ಮಾಡ್ದೆ’ ಅಂತ ಯಾವತ್ತೂ ಅನಿಸಲ್ಲ. ಯಾಕಂದ್ರೆ ನಾವು ಏನ್ ಮಾಡಿದ್ರೆ ಸಂತೋಷವಾಗಿ ಇರ್ತೀವಿ ಅಂತ ನಮ್ಮನ್ನ ಸೃಷ್ಟಿ ಮಾಡಿರೋ ದೇವರಿಗೆ ಗೊತ್ತು. ಅದಕ್ಕೇ ಆತನು ನಮಗೆ ಬೇಕಾಗಿರೋ ಬುದ್ಧಿಮಾತುಗಳನ್ನೇ ಬೈಬಲಲ್ಲಿ ಬರೆಸಿದ್ದಾನೆ.
“ಒಳ್ಳೇದು ಯಾವುದಂತ ಆತನು ನಿನಗೆ ಹೇಳಿದ್ದಾನೆ.”—ಮೀಕ 6:8.
ಬೈಬಲಲ್ಲಿ ಇರೋ ಬುದ್ಧಿಮಾತುಗಳಿಂದ ನಮಗೆ ಪ್ರಯೋಜನ ಆಗುತ್ತೆ. “ಅವನ್ನ ಯಾವಾಗ್ಲೂ ನಂಬಬಹುದು, ಇಂದಿಗೂ ಎಂದೆಂದಿಗೂ ನಂಬಬಹುದು.”—ಕೀರ್ತನೆ 111:8.
ನೂರಾರು ಕವಲುದಾರಿಗಳಿರೋ ಈ ಪ್ರಪಂಚದಲ್ಲಿ ಬೈಬಲ್ ಹೇಗೆ ಸರಿ ದಾರಿ ತೋರಿಸುತ್ತೆ ಅಂತ ತಿಳ್ಕೊಳ್ಳೋಕೆ ನೀವೂ ಒಂದು ಸಲ ಬೈಬಲನ್ನ ಓದಿ ನೋಡಿ!