ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp25 ನಂ. 1 ಪು. 10-13
  • ಯುದ್ಧ-ಹೊಡೆದಾಟಗಳು ಹೇಗೆ ಕೊನೆ ಆಗುತ್ತೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯುದ್ಧ-ಹೊಡೆದಾಟಗಳು ಹೇಗೆ ಕೊನೆ ಆಗುತ್ತೆ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2025
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದೇವರು ಮನುಷ್ಯರ ಸರ್ಕಾರಗಳನ್ನ ತೆಗೆದುಹಾಕ್ತಾನೆ
  • ದೇವರು ಪಾಪವನ್ನ ತೆಗೆದುಹಾಕ್ತಾನೆ
  • ದೇವರು ಸೈತಾನನನ್ನ ಮತ್ತು ಕೆಟ್ಟ ದೇವದೂತರನ್ನ ನಾಶಮಾಡ್ತಾನೆ
  • ಯುದ್ಧ ಮತ್ತು ಹೊಡೆದಾಟಗಳೆಲ್ಲಾ ಯಾಕೆ ನಡೀತಾ ಇದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2025
  • ದೇವರ ರಾಜ್ಯ ಎಂದರೇನು?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ದೇವರ ರಾಜ್ಯ ಎಂದರೇನು?
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ದೇವರ ಸರ್ಕಾರ ಏನೆಲ್ಲಾ ಮಾಡುತ್ತೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2025
wp25 ನಂ. 1 ಪು. 10-13
ಒಂದು ಊರು ಯುದ್ಧದಿಂದ ನಾಶ ಆಗಿದೆ. ಕುಸಿದು ಬಿದ್ದಿರೋ ಕಟ್ಟಡದ ಚೂರುಗಳ ಮೇಲೆ ಒಬ್ಬ ಸೈನಿಕ ಕೂತಿದ್ದಾನೆ.

ಮನುಷ್ಯರು ಯುದ್ಧಗಳನ್ನ ನಿಲ್ಲಿಸೋಕಾಗಲ್ಲ

ಯುದ್ಧ-ಹೊಡೆದಾಟಗಳು ಹೇಗೆ ಕೊನೆ ಆಗುತ್ತೆ?

ಮನುಷ್ಯರಲ್ಲ, ದೇವರು “ಭೂಮಿಯಲ್ಲಿ ಎಲ್ಲ ಕಡೆ ಯುದ್ಧಗಳನ್ನ ನಿಲ್ಲಿಸಿಬಿಡ್ತಾನೆ” ಅಂತ ಬೈಬಲ್‌ ಹೇಳುತ್ತೆ.—ಕೀರ್ತನೆ 46:9.

ದೇವರು ಮನುಷ್ಯರ ಸರ್ಕಾರಗಳನ್ನ ತೆಗೆದುಹಾಕ್ತಾನೆ

ದೇವರು ಒಂದು ಯುದ್ಧ ಮಾಡಿ ಮನುಷ್ಯರ ಸರ್ಕಾರಗಳನ್ನೆಲ್ಲಾ ನಾಶಮಾಡ್ತಾನೆ. ಆ ಯುದ್ಧದ ಹೆಸರು ಹರ್ಮಗೆದೋನ್‌a ಅಂತ ಬೈಬಲ್‌ ಹೇಳುತ್ತೆ. (ಪ್ರಕಟನೆ 16:16) ಆ ಸಮಯದಲ್ಲಿ, ‘ಸರ್ವಶಕ್ತ ದೇವರ ಮಹಾ ದಿನದಲ್ಲಿ ಆಗೋ ಯುದ್ಧಕ್ಕಾಗಿ ಭೂಮೀಲಿರೋ ಎಲ್ಲ ರಾಜರು ಒಟ್ಟಾಗಿ ಸೇರಿಬರ್ತಾರೆ.’ (ಪ್ರಕಟನೆ 16:14) ದೇವರು ಹರ್ಮಗೆದೋನ್‌ ಯುದ್ಧ ಮಾಡಿದ್ಮೇಲೆ ಬೇರೆ ಯಾವ ಯುದ್ಧನೂ ನಡೆಯಲ್ಲ, ಇದೇ ಕೊನೆ ಯುದ್ಧ.

ಮನುಷ್ಯರ ಸರ್ಕಾರಗಳನ್ನ ದೇವರು ನಾಶ ಮಾಡಿದ್ಮೇಲೆ ತನ್ನ ಆಳ್ವಿಕೆ ಅಥವಾ ಸರ್ಕಾರವನ್ನ ತರ್ತಾನೆ. ಅದು ಸ್ವರ್ಗದಿಂದ ಆಳುತ್ತೆ ಮತ್ತು ಯಾವತ್ತೂ ನಾಶ ಆಗಲ್ಲ. (ದಾನಿಯೇಲ 2:44) ದೇವರು ತನ್ನ ಮಗನಾದ ಯೇಸು ಕ್ರಿಸ್ತನನ್ನ ಆ ಸರ್ಕಾರದ ರಾಜನಾಗಿ ಆರಿಸಿದ್ದಾನೆ. (ಯೆಶಾಯ 9:6, 7; ಮತ್ತಾಯ 28:18) ಯೇಸು ತನ್ನ ಶಿಷ್ಯರಿಗೆ ಪ್ರಾರ್ಥನೆ ಮಾಡೋಕೆ ಹೇಳಿದ್ದು ಇದೇ ಸರ್ಕಾರದb ಬಗ್ಗೆ. (ಮತ್ತಾಯ 6:9, 10) ಯೇಸು ಆಳ್ವಿಕೆ ಮಾಡುವಾಗ ಭೂಮಿಯಲ್ಲಿರೋ ಎಲ್ಲಾ ಜನ್ರು ಒಗ್ಗಟ್ಟಾಗಿ, ಒಂದೇ ಸರ್ಕಾರದ ಕೆಳಗಿರ್ತಾರೆ.

ಇವತ್ತಿರೋ ಅಧಿಕಾರಿಗಳ ತರ ಯೇಸು ತನ್ನ ಅಧಿಕಾರವನ್ನ ತನ್ನ ಸ್ವಾರ್ಥಕ್ಕೆ ಉಪಯೋಗಿಸಲ್ಲ. ಯೇಸು ನ್ಯಾಯವಂತ ಮತ್ತು ಭೇದಭಾವ ಮಾಡಲ್ಲ. ಅದಕ್ಕೇ ‘ನನಗೆ ಅನ್ಯಾಯ ಆಗುತ್ತೆ ಅಂತಾನೋ ಅಥವಾ ನನ್ನ ದೇಶ, ಭಾಷೆ, ಬಣ್ಣ ಮತ್ತು ಸಂಸ್ಕೃತಿ ನೋಡಿ ನನ್ನನ್ನ ಕಡೆಗಣಿಸ್ತಾರೆ’ ಅಂತಾನೋ ಯಾರೂ ಚಿಂತೆ ಮಾಡಬೇಕಾಗಿಲ್ಲ. (ಯೆಶಾಯ 11:3, 4) ಅಷ್ಟೇ ಅಲ್ಲ, ಜನ್ರು ಅವ್ರ ಹಕ್ಕುಗಳಿಗೋಸ್ಕರ ಇನ್ಮುಂದೆ ಹೋರಾಡೋ ಅವಶ್ಯಕತೆನೂ ಇರಲ್ಲ. ಯಾಕಂದ್ರೆ ಯೇಸು ಒಬ್ಬೊಬ್ರಿಗೂ ಕಾಳಜಿ ತೋರಿಸಿ ಅವ್ರನ್ನ ಚೆನ್ನಾಗಿ ನೋಡ್ಕೊಳ್ತಾನೆ. ಅದಕ್ಕೇ ಬೈಬಲ್‌ ಯೇಸು ಬಗ್ಗೆ, ‘ಅವನು ಸಹಾಯಕ್ಕಾಗಿ ಮೊರೆ ಇಡೋ ಬಡವ್ರನ್ನ ಕಾಪಾಡ್ತಾನೆ. ದೀನರನ್ನ, ಸಹಾಯಕ್ಕಾಗಿ ಯಾರೂ ಇಲ್ಲದವ್ರನ್ನ ರಕ್ಷಿಸ್ತಾನೆ. ಅವ್ರನ್ನ ದಬ್ಬಾಳಿಕೆಯಿಂದ, ಹಿಂಸೆಯಿಂದ ತಪ್ಪಿಸ್ತಾನೆ’ ಅಂತ ಹೇಳುತ್ತೆ.—ಕೀರ್ತನೆ 72:12-14.

ದೇವರ ಆಳ್ವಿಕೆ ಭೂಮಿಲಿರೋ ಎಲ್ಲಾ ಆಯುಧಗಳನ್ನ ನಾಶ ಮಾಡಿಬಿಡುತ್ತೆ. (ಮೀಕ 4:3) ಅಷ್ಟೇ ಅಲ್ಲ, ಯಾರು ಹೊಡೆದಾಡ್ತಾ, ಬಡೆದಾಡ್ತಾ ಬೇರೆಯವ್ರ ಶಾಂತಿಯನ್ನ ಹಾಳು ಮಾಡ್ತಿದ್ದಾರೋ ಅಂಥ ಕೆಟ್ಟ ಜನ್ರನ್ನೂ ತೆಗೆದುಹಾಕುತ್ತೆ. (ಕೀರ್ತನೆ 37:9, 10) ದೇವರ ಆಳ್ವಿಕೆಯಲ್ಲಿ ಗಂಡಸ್ರಾಗಲಿ, ಹೆಂಗಸ್ರಾಗಲಿ, ಮಕ್ಕಳಾಗಲಿ ಭೂಮಿಯಲ್ಲಿ ಎಲ್ಲೇ ಹೋದ್ರೂ ಭಯಪಡಬೇಕಾಗಿಲ್ಲ, ಸುರಕ್ಷಿತವಾಗಿರ್ತಾರೆ.—ಯೆಹೆಜ್ಕೇಲ 34:28.

ಇವತ್ತು ಜನ ಬಡತನದಿಂದ, ಸರಿಯಾಗಿ ಊಟ-ಮನೆಯಿಲ್ಲದೇ ಇರೋದ್ರಿಂದ ಕಿತ್ತಾಡ್ತಿದ್ದಾರೆ. ಆದ್ರೆ ದೇವರ ಸರ್ಕಾರ ಇಂಥ ಸಮಸ್ಯೆಗಳನ್ನು ತೆಗೆದುಹಾಕಿಬಿಡುತ್ತೆ. ಜನ್ರು ಆರಾಮವಾಗಿ, ಖುಷಿ-ಖುಷಿಯಾಗಿ ಬದುಕೋಕೆ ಬೇಕಾಗಿರೋದೆಲ್ಲ ಅವ್ರಿಗೆ ಸಿಗುತ್ತೆ. ಪ್ರತಿಯೊಬ್ರಿಗೂ ಬೇಕಾದಷ್ಟು ಪೌಷ್ಟಿಕ ಊಟ ಇರುತ್ತೆ ಮತ್ತು ವಾಸಮಾಡೋಕೆ ಒಳ್ಳೇ ಮನೆ ಇರುತ್ತೆ.—ಕೀರ್ತನೆ 72:16; ಯೆಶಾಯ 65:21-23.

ದೇವರ ಆಳ್ವಿಕೆ ಯುದ್ಧದಿಂದ ಆಗಿರೋ ಕೆಟ್ಟ ಪರಿಣಾಮಗಳನ್ನು ತೆಗೆದುಹಾಕುತ್ತೆ. ಅಂದ್ರೆ ಯುದ್ಧದಿಂದ ಜನ್ರ ದೇಹಕ್ಕಾಗಿರೋ ಗಾಯಗಳನ್ನು ವಾಸಿ ಮಾಡೋದ್ರ ಜೊತೆಗೆ ಅವ್ರ ಮನಸ್ಸಿಗೆ ಆಗಿರೋ ನೋವನ್ನೂ ತೆಗೆದುಹಾಕುತ್ತೆ. ಅಷ್ಟೇ ಅಲ್ಲ, ಸತ್ತವರು ಜೀವಂತವಾಗಿ ಎದ್ದು ಬರ್ತಾರೆ, ಇದೇ ಭೂಮಿ ಮೇಲೆ ಜೀವಿಸ್ತಾರೆ. (ಯೆಶಾಯ 25:8; 26:19; 35:5, 6) ಆಗ ಕುಟುಂಬದವ್ರೆಲ್ಲಾ ಮತ್ತೆ ಒಂದಾಗ್ತಾರೆ, ಯುದ್ಧದಿಂದ ಆಗಿರೋ ಕೆಟ್ಟ ವಿಷಯಗಳು ಅವ್ರ ನೆನಪಿಗೂ ಬರಲ್ಲ. ಯಾಕಂದ್ರೆ ‘ಈ ಮುಂಚೆ ಇದ್ದ ಯಾವ ವಿಷಯಗಳೂ ಆಗ ಇರಲ್ಲ.’—ಪ್ರಕಟನೆ 21:4.

ದೇವರು ಪಾಪವನ್ನ ತೆಗೆದುಹಾಕ್ತಾನೆ

ದೇವರ ಆಳ್ವಿಕೆಯಲ್ಲಿ ಜನ್ರೆಲ್ಲಾ ಒಗ್ಗಟ್ಟಾಗಿ, ಒಬ್ಬನೇ ಸತ್ಯ ದೇವರಾಗಿರೋ ಯೆಹೋವನನ್ನc ಆರಾಧಿಸ್ತಾರೆ. ಬೈಬಲ್‌ ಆತನನ್ನ “ಪ್ರೀತಿ ಮತ್ತು ಶಾಂತಿಯ ದೇವರು” ಅಂತ ಕರೆಯುತ್ತೆ. (2 ಕೊರಿಂಥ 13:11) ಆಗ ಜನ್ರೆಲ್ರೂ ಶಾಂತಿಯಿಂದ ಮತ್ತು ಒಗ್ಗಟ್ಟಾಗಿ ಹೇಗೆ ಜೀವನ ಮಾಡೋದು ಅಂತ ಕಲಿತಾರೆ. (ಯೆಶಾಯ 2:3, 4; 11:9) ಯಾರೆಲ್ಲಾ ಕಲ್ತಿದ್ದನ್ನ ಪಾಲಿಸ್ತಾರೋ ಅವ್ರಿಗೆ ಪಾಪದಿಂದ ಬಿಡುಗಡೆ ಸಿಗುತ್ತೆ, ಪರಿಪೂರ್ಣರಾಗ್ತಾರೆ.—ರೋಮನ್ನರಿಗೆ 8:20, 21.

ದೇವರು ಸೈತಾನನನ್ನ ಮತ್ತು ಕೆಟ್ಟ ದೇವದೂತರನ್ನ ನಾಶಮಾಡ್ತಾನೆ

ಇವತ್ತು ಯುದ್ಧ ಮಾಡೋಕೆ ಜನ್ರಿಗೆ ಕುಮ್ಮಕ್ಕು ಕೊಡ್ತಿರೋ ಸೈತಾನ ಮತ್ತು ಅವನ ಕೆಟ್ಟ ದೇವದೂತರನ್ನ ದೇವರ ಆಳ್ವಿಕೆ ನಾಶಮಾಡುತ್ತೆ. (ಪ್ರಕಟನೆ 20:1-3, 10) ಇಂಥ ಕೆಟ್ಟವರು ಇಲ್ಲ ಅಂದ್ಮೇಲೆ ಭೂಮಿಯಲ್ಲಿ “ಶಾಂತಿ ತುಂಬಿತುಳುಕುತ್ತೆ.”—ಕೀರ್ತನೆ 72:7.

ಯುದ್ಧ, ಹೊಡೆದಾಟಗಳನ್ನೆಲ್ಲಾ ನಿಲ್ಲಿಸಿಬಿಡ್ತೀನಿ ಅಂತ ದೇವರು ಕೊಟ್ಟಿರೋ ಮಾತು ಖಂಡಿತ ನಡಿಯುತ್ತೆ ಅಂತ ನೀವು ನಂಬಬಹುದು. ಯಾಕಂದ್ರೆ ದೇವರಿಗೆ ಯುದ್ಧಗಳನ್ನ ನಿಲ್ಲಿಸೋಕೆ ಸಾಮರ್ಥ್ಯನೂ ಇದೆ, ಆಸೆನೂ ಇದೆ.

  • ಯುದ್ಧ, ಹೊಡೆದಾಟಗಳನ್ನೆಲ್ಲಾ ತೆಗೆದುಹಾಕೋಕೆ ಬೇಕಾಗಿರೋ ವಿವೇಕ ಮತ್ತು ಶಕ್ತಿನೂ ದೇವರಿಗಿದೆ. (ಯೋಬ 9:4) ಆತನಿಗೆ ಮಾಡೋಕೆ ಆಗದೇ ಇರೋದು ಯಾವುದೂ ಇಲ್ಲ. —ಯೋಬ 42:2.

  • ಜನ ಕಷ್ಟಪಡೋದನ್ನ ನೋಡೋಕೆ ದೇವರಿಗೆ ಒಂಚೂರೂ ಇಷ್ಟ ಇಲ್ಲ. (ಯೆಶಾಯ 63:9) ಆತನು “ಹಿಂಸೆಯನ್ನ ಪ್ರೀತಿಸೋ ಜನ್ರನ್ನ ದ್ವೇಷಿಸ್ತಾನೆ.”—ಕೀರ್ತನೆ 11:5.

  • ದೇವರು ಯಾವಾಗ್ಲೂ ತಾನು ಕೊಟ್ಟ ಮಾತನ್ನ ಉಳಿಸ್ಕೊಳ್ತಾನೆ, ಆತನು ಸುಳ್ಳು ಹೇಳೋಕೆ ಸಾಧ್ಯನೇ ಇಲ್ಲ. —ಯೆಶಾಯ 55:10, 11; ತೀತ 1:2.

ದೇವರು ಮುಂದೆ ನಿಜವಾದ ಶಾಂತಿ ತರ್ತಾನೆ, ಅದಕ್ಕೆ ಕೊನೆನೇ ಇರಲ್ಲ

ಇಡೀ ಭೂಮಿ ಪರದೈಸ್‌ ಆಗಿದೆ. ಅಪ್ಪ-ಅಮ್ಮ ಮತ್ತು ಮಗಳು ಬೆಟ್ಟದ ಮೇಲೆ ಕೂತ್ಕೊಂಡು ನಗ್ತಾ ಖುಷಿಯಾಗಿ ಇದ್ದಾರೆ. ಹತ್ರದಲ್ಲಿ ಕುದುರೆಗಳು ಮೇಯ್ತಾ ಇದೆ.

ದೇವರು ಯುದ್ಧಗಳೇ ನಡಿದಿರೋ ತರ ಮಾಡ್ತಾನೆ

ಯುದ್ಧಗಳು ನಡೆಯೋಕೆ ದೇವರು ಯಾಕೆ ಬಿಟ್ಟಿದ್ದಾನೆ?

ಯುದ್ಧಗಳು ನಡೆಯೋಕೆ ದೇವರು ಇನ್ನೂ ಯಾಕೆ ಬಿಟ್ಟಿದ್ದಾನೆ ಅಂತ ನೀವು ಯೋಚಿಸ್ತಿರಬಹುದು. ಈ ಪ್ರಶ್ನೆಗೆ ಉತ್ತರ ತಿಳ್ಕೊಳ್ಳೋಕೆ jw.orgನಲ್ಲಿ ದೇವರು ಕಷ್ಟಗಳನ್ನು ಯಾಕೆ ಅನುಮತಿಸುತ್ತಾನೆ? ಅನ್ನೋ ವಿಡಿಯೋ ನೋಡಿ.

a jw.orgನಲ್ಲಿ “ಹರ್ಮಗೆದೋನ್‌ ಯುದ್ಧ ಅಂದರೇನು?” ಅನ್ನೋ ಲೇಖನ ಓದಿ.

b jw.orgನಲ್ಲಿ ದೇವರ ರಾಜ್ಯ ಅಂದರೇನು? ಅನ್ನೋ ವಿಡಿಯೋ ನೋಡಿ.

c ಯೆಹೋವ ಅನ್ನೋದು ದೇವರ ಹೆಸ್ರು.—ಕೀರ್ತನೆ 83:18.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ