ಯುದ್ಧ ಮತ್ತು ಹೊಡೆದಾಟಗಳೆಲ್ಲಾ ಯಾಕೆ ನಡೀತಾ ಇದೆ?
ಯುದ್ಧ ಮತ್ತು ಹೊಡೆದಾಟಗಳು ಆಗ್ತಿರೋದಕ್ಕೆ ಮುಖ್ಯ ಕಾರಣಗಳೇನು ಮತ್ತು ಅದು ಯಾಕಿನ್ನೂ ನಡೀತಾ ಇದೆ ಅಂತ ಬೈಬಲ್ ಹೇಳುತ್ತೆ.
ಪಾಪ
ದೇವರು ನಮ್ಮ ಮೊದಲ ಹೆತ್ತವರಾದ ಆದಾಮ ಮತ್ತು ಹವ್ವನ ತನ್ನ ಹೋಲಿಕೆಯಲ್ಲಿ ಸೃಷ್ಟಿ ಮಾಡಿದ್ದನು. (ಆದಿಕಾಂಡ 1:27) ಇದರರ್ಥ ಅವರು ದೇವರಲ್ಲಿರೋ ಶಾಂತಿ, ಪ್ರೀತಿ ಇಂಥ ಒಳ್ಳೊಳ್ಳೆ ಗುಣಗಳನ್ನ ತೋರಿಸಬಹುದಿತ್ತು. (1 ಕೊರಿಂಥ 14:33; 1 ಯೋಹಾನ 4:8) ಆದ್ರೆ ಆದಾಮ ಮತ್ತು ಹವ್ವ ದೇವರ ಮಾತನ್ನ ಕೇಳದೆ ತಪ್ಪು ಮಾಡಿದ್ರು. ಇದ್ರಿಂದ ಅವ್ರ ಮಕ್ಕಳಾಗಿರೋ ನಮ್ಮೆಲ್ರಿಗೂ ಪಾಪ ಮತ್ತು ಸಾವು ಬಂತು. (ರೋಮನ್ನರಿಗೆ 5:12) ಈ ಪಾಪ ನಮ್ಮಲ್ಲಿ ಇರೋದ್ರಿಂದಾನೇ ನಾವು ಕೆಟ್ಟ ಯೋಚನೆ ಮಾಡ್ತೀವಿ. ಇದ್ರಿಂದ ಹಿಂಸೆ, ಹೊಡೆದಾಟಗಳಂಥ ಕೆಟ್ಟ ಕೆಲಸಗಳನ್ನೂ ಮಾಡಿಬಿಡ್ತೀವಿ.—ಆದಿಕಾಂಡ 6:5; ಮಾರ್ಕ 7:21, 22.
ಮನುಷ್ಯರ ಸರ್ಕಾರ
ನಾವು ನಮ್ಮನ್ನೇ ಆಳ್ಕೊಳ್ಳೋ ತರ ದೇವರು ನಮ್ಮನ್ನ ಸೃಷ್ಟಿಮಾಡಿಲ್ಲ. “ಎಲ್ಲಿ ಹೆಜ್ಜೆ ಇಡಬೇಕು ಅಂತ ತನಗೆ ದಾರಿ ತೋರಿಸ್ಕೊಳ್ಳೋ ಅಧಿಕಾರ ಸಹ ಮನುಷ್ಯನಿಗಿಲ್ಲ” ಅಂತ ಬೈಬಲ್ ಹೇಳುತ್ತೆ. (ಯೆರೆಮೀಯ 10:23) ಅದಕ್ಕೇ ಯುದ್ಧ ಮತ್ತು ಹಿಂಸೆಯನ್ನ ಪೂರ್ತಿಯಾಗಿ ತೆಗೆದುಹಾಕೋಕೆ ಮನುಷ್ಯರ ಸರ್ಕಾರಗಳಿಂದ ಆಗ್ತಾ ಇಲ್ಲ.
ಸೈತಾನ ಮತ್ತು ಅವನ ಕೆಟ್ಟ ದೇವದೂತರು
“ಇಡೀ ಲೋಕ ಸೈತಾನನ ಕೈಯಲ್ಲಿದೆ” ಅಂತ ಬೈಬಲ್ ಹೇಳುತ್ತೆ. (1 ಯೋಹಾನ 5:19) ಈ ಸೈತಾನ ಒಬ್ಬ ಕೆಟ್ಟ ದೇವದೂತ ಮತ್ತು ಕೊಲೆಗಾರ. (ಯೋಹಾನ 8:44) ಇವನು ಮತ್ತು ಇವನ ಜೊತೆ ಇರೋ ಕೆಟ್ಟ ದೇವದೂತರು ತೆರೆಮರೆಯಲ್ಲಿದ್ದು ಜನ್ರಿಗೆ ಯುದ್ಧ ಮಾಡೋಕೆ, ಹೊಡೆದಾಡೋಕೆ ಕುಮ್ಮಕ್ಕು ಕೊಡ್ತಿದ್ದಾರೆ.—ಪ್ರಕಟನೆ 12:9, 12.
ಯುದ್ಧ ಮತ್ತು ಹೊಡೆದಾಟಗಳು ಆಗ್ತಿರೋದಕ್ಕೆ ಇವೇ ಮುಖ್ಯ ಕಾರಣಗಳು. ಇವನ್ನ ತೆಗೆದುಹಾಕೋಕೆ ನಮ್ಮಿಂದ ಆಗಲ್ಲ. ಆದ್ರೆ ದೇವರಿಂದ ಆಗುತ್ತೆ