ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ಜುಲೈ ಪು. 20-25
  • ‘ಸಂತೃಪ್ತಿಯ ಗುಟ್ಟು’ ಗೊತ್ತಿದ್ಯಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ಸಂತೃಪ್ತಿಯ ಗುಟ್ಟು’ ಗೊತ್ತಿದ್ಯಾ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕೃತಜ್ಞತೆ ಬೆಳೆಸಿಕೊಳ್ಳಿ
  • ದೀನರಾಗಿರಿ
  • ದೇವರ ಆಳ್ವಿಕೆ ಬಗ್ಗೆ ಯೋಚ್ನೆ ಮಾಡಿ
  • ಯೆಹೋವನ ಭಯ ಇರೋರಿಗೆ ಯಾವ ಕೊರತೆನೂ ಇರಲ್ಲ
  • ದೀನತೆ ತೋರಿಸಿ, ನಿಮಗೆ ಗೊತ್ತಿಲ್ಲದಿರೋ ವಿಷ್ಯಗಳೂ ಇವೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • “ಯೆಹೋವ ಜೀವ ಇರೋ ದೇವರು” ಅಂತ ಯಾವಾಗ್ಲೂ ನೆನಪಿಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ನೀವು ಸತ್ಯ ಗುರುತಿಸ್ತೀರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ಜುಲೈ ಪು. 20-25

ಅಧ್ಯಯನ ಲೇಖನ 31

ಗೀತೆ 156 ನಂ ಖುಷಿಗೆ ಕಾರಣ ಯೆಹೋವ

‘ಸಂತೃಪ್ತಿಯ ಗುಟ್ಟು’ ಗೊತ್ತಿದ್ಯಾ?

“ಎಲ್ಲ ಸನ್ನಿವೇಶದಲ್ಲೂ ತೃಪ್ತಿಯಿಂದ ಇರೋದು ಹೇಗಂತ ಕಲಿತಿದ್ದೀನಿ.” —ಫಿಲಿ. 4:11.

ಈ ಲೇಖನದಲ್ಲಿ ಏನಿದೆ?

ನಾವು ಸಂತೃಪ್ತಿಯಿಂದ ಇರೋಕೆ ಕಲಿತ್ರೆ ನಮ್ಮತ್ರ ಏನಿಲ್ವೋ ಅದ್ರ ಬಗ್ಗೆ ಯೋಚಿಸಲ್ಲ. ದೀನತೆ ತೋರಿಸ್ತೀವಿ, ನಿರೀಕ್ಷೆ ಬಗ್ಗೆ ಯೋಚನೆ ಮಾಡ್ತೀವಿ. ಇದನ್ನೆಲ್ಲ ಹೇಗೆ ಮಾಡೋದು ಅಂತ ನೋಡೋಣ.

1. (ಎ) ಸಂತೃಪ್ತಿ ಅಂದ್ರೆ ಏನು? (ಬಿ) ಸಂತೃಪ್ತಿ ಅಂದ್ರೆ ಏನಲ್ಲ?

ನಿಮಗೆ ಜೀವನದಲ್ಲಿ ಸಂತೃಪ್ತಿ ಇದ್ಯಾ? ಸಂತೃಪ್ತಿ ಇರೋ ವ್ಯಕ್ತಿ, ಯೆಹೋವ ಅವನಿಗೆ ಏನು ಕೊಟ್ಟಿದ್ದಾನೋ ಬಗ್ಗೆ ಯೋಚನೆ ಮಾಡ್ತಾ ಜೀವನದಲ್ಲಿ ಖುಷಿಯಾಗಿ ಇರ್ತಾನೆ. ಅವನ ಹತ್ರ ಏನಿಲ್ವೋ ಅದ್ರ ಬಗ್ಗೆ ಯೋಚನೆ ಮಾಡ್ತಾ ಬೇಜಾರು ಮಾಡ್ಕೊಳಲ್ಲ. ಹಾಗಾದ್ರೆ ನಾವು ನಮ್ಮ ಜೀವನದ ಬಗ್ಗೆ, ನಾಳೆ ಬಗ್ಗೆ ಯೋಚನೆ ಮಾಡದೆ ಸುಮ್ನೆ ಇರಬೇಕಾ? ಇಲ್ಲ. ಉದಾಹರಣೆಗೆ, ಒಬ್ಬ ವ್ಯಕ್ತಿ ಯೆಹೋವನ ಸೇವೆ ಹೆಚ್ಚು ಮಾಡಬೇಕು ಅಂತ ಯೋಚಿಸೋದು ತಪ್ಪಲ್ಲ. (ರೋಮ. 12:1; 1 ತಿಮೊ. 3:1) ಆದ್ರೆ ಅವನಲ್ಲಿ ಸಂತೃಪ್ತಿ ಇದ್ರೆ ತಾನು ಅಂದ್ಕೊಂಡ ನೇಮಕ ಬೇಗ ಸಿಗದೇ ಇದ್ರೂ ಅಥವಾ ಮುಂದೆ ಜೀವನದಲ್ಲಿ ಸಿಗದೆ ಹೋದ್ರೂ ತನ್ನ ಖುಷಿನ ಕಳ್ಕೊಳ್ಳಲ್ಲ.

2. ನಮ್ಮಲ್ಲಿ ಸಂತೃಪ್ತಿ ಇಲ್ಲ ಅಂದ್ರೆ ಏನೆಲ್ಲ ಅಪಾಯ ಆಗಬಹುದು?

2 ನಮ್ಮತ್ರ ಇರೋದ್ರಲ್ಲಿ ತೃಪ್ತಿ ಕಂಡ್ಕೊಳ್ಳಬೇಕು. ಇಲ್ಲಾಂದ್ರೆ ತಪ್ಪಾದ ನಿರ್ಣಯ ಮಾಡಿಬಿಡ್ತೀವಿ. ಉದಾಹರಣೆಗೆ, ನಾವು ತುಂಬ ಹೊತ್ತು ಕೆಲಸ ಮಾಡೋ ನಿರ್ಧಾರ ಮಾಡಬಹುದು, ಅಗತ್ಯ ಇಲ್ಲದಿರೋ ವಸ್ತುಗಳನ್ನೆಲ್ಲ ತಗೋ ಬಿಡಬಹುದು. ಕೆಲವು ಕ್ರೈಸ್ತರು ಅವರು ಆಸೆಪಟ್ಟ ವಸ್ತುಗಳನ್ನ ಪಡ್ಕೊಳ್ಳೋಕೆ ಕಳ್ಳತನ ಮಾಡಿದ್ದಾರೆ. ‘ಇದು ನನಗೆ ಸೇರಬೇಕಾಗಿದ್ದು,’ ‘ಇದಕ್ಕೋಸ್ಕರ ನಾನು ಎಷ್ಟೋ ವರ್ಷಗಳಿಂದ ಕಾಯ್ತಿದ್ದೆ,’ ‘ಈಗ ಈ ದುಡ್ಡು ಎತ್ಕೊಳ್ತೀನಿ, ಆಮೇಲೆ ವಾಪಸ್‌ ಇಟ್ಟುಬಿಡ್ತೀನಿ’ ಅಂತ ಅಂದ್ಕೊಂಡು ತಮಗೆ ತಾವೇ ಮೋಸ ಮಾಡ್ಕೊಂಡಿದ್ದಾರೆ. ಯಾವುದೇ ರೀತಿಲಿ ಕಳ್ಳತನ ಮಾಡಿದ್ರೂ ಯೆಹೋವ ದೇವ್ರಿಗೆ ನಮ್ಮ ಬಗ್ಗೆ ಬೇಜಾರು ಆಗುತ್ತೆ, ಆತನಿಗೆ ಅವಮಾನ ಆಗುತ್ತೆ. (ಜ್ಞಾನೋ. 30:9) ಇನ್ನು ಕೆಲವು ಕ್ರೈಸ್ತರು, ಆಸೆ ಪಟ್ಟ ನೇಮಕ ಸಿಕ್ಕಿಲ್ಲ ಅನ್ನೋ ಕಾರಣಕ್ಕೆ ಯೆಹೋವನ ಸೇವೆ ಮಾಡೋದನ್ನೇ ನಿಲ್ಲಿಸಿದ್ದಾರೆ. (ಗಲಾ. 6:9) ‘ಜೀವನಪೂರ್ತಿ ಯೆಹೋವನ ಸೇವೆ ಮಾಡ್ತೀನಿ’ ಅಂತ ಮಾತು ಕೊಟ್ಟು ಈಗ ಸುಯೋಗ ಸಿಗ್ಲಿಲ್ಲ ಅಂತ ಆತನ ಸೇವೆ ನಿಲ್ಲಿಸೋದು ಯಾವ ನ್ಯಾಯ! ಈ ತರ ತಪ್ಪು ನಿರ್ಣಯ ಮಾಡೋಕೆ ಕಾರಣ ಆ ವ್ಯಕ್ತಿಗಳು ಸಂತೃಪ್ತಿ ಅನ್ನೋ ಗುಣನ ಬೆಳೆಸ್ಕೊಳ್ಳದೇ ಇರೋದೇ!

3. ಫಿಲಿಪ್ಪಿ 4:11, 12ರಿಂದ ನಾವು ಯಾವ ಒಳ್ಳೆ ಪಾಠ ಕಲಿತೀವಿ?

3 ನಾವೆಲ್ರೂ ಸಂತೃಪ್ತಿನ ಬೆಳೆಸ್ಕೊಬಹುದು. ಅಪೊಸ್ತಲ ಪೌಲ ಅದನ್ನ ಬೆಳೆಸ್ಕೊಂಡ. ಅದಕ್ಕೇ, “ಎಲ್ಲ ಸನ್ನಿವೇಶದಲ್ಲೂ ತೃಪ್ತಿಯಿಂದ ಇರೋದು ಹೇಗೆ ಅಂತ ಕಲ್ತಿದೀನಿ” ಅಂತ ಹೇಳಿದ. (ಫಿಲಿಪ್ಪಿ 4:11, 12 ಓದಿ) ನಿಮಗೆ ಗೊತ್ತಾ? ಆ ಮಾತು ಹೇಳಿದಾಗ ಪೌಲ ಜೈಲಲ್ಲಿದ್ದ. ಹಾಗಿದ್ರೂ ಅವನು ಖುಷಿನ ಕಳ್ಕೊಳ್ಳಲಿಲ್ಲ. ಯಾಕಂದ್ರೆ, ಅವನು ಸಂತೃಪ್ತಿಯ ಗುಟ್ಟನ್ನ ತಿಳ್ಕೊಂಡಿದ್ದ. ಒಂದುವೇಳೆ ನಿಮಗೆ, ಸಂತೃಪ್ತಿಯಿಂದ ಇರೋಕೆ ಕಷ್ಟ ಆಗ್ತಿದ್ರೆ ಪೌಲ ಹೇಳಿದ ಮಾತು ಮತ್ತು ಅವನ ಅನುಭವ ಆ ಗುಣಾನ ಬೆಳೆಸಿಕೊಳ್ಳೋಕೆ ನಿಮಗೆ ಸಹಾಯ ಮಾಡುತ್ತೆ. ನಮ್ಮ ಪರಿಸ್ಥಿತಿ ಚೆನ್ನಾಗಾದ್ರೆ, ತನ್ನಿಂದ ತಾನೇ ಸಂತೃಪ್ತಿ ಬಂದುಬಿಡುತ್ತೆ ಅಂತ ಅಂದ್ಕೊಬೇಡಿ. ಸಂತೃಪ್ತಿ ಅನ್ನೋ ಗುಣನ ನಾವು ಕಲಿಯೋಕೆ ಪ್ರಯತ್ನ ಹಾಕಬೇಕು. ಹೇಗೆ? ಸಂತೃಪ್ತಿಯ ಗುಟ್ಟನ್ನ ಕಲಿಯೋಕೆ ನಮಗೆ ಸಹಾಯ ಮಾಡೋ ಮೂರು ಗುಣಗಳ ಬಗ್ಗೆ ಈಗ ನೋಡೋಣ.

ಕೃತಜ್ಞತೆ ಬೆಳೆಸಿಕೊಳ್ಳಿ

4. ನಮ್ಮಲ್ಲಿ ಕೃತಜ್ಞತೆ ಇದ್ರೆ ಸಂತೃಪ್ತಿ ಅನ್ನೋ ಗುಣ ಹೇಗೆ ಬೆಳೆಯುತ್ತೆ? (1 ಥೆಸಲೊನೀಕ 5:18)

4 ನಮ್ಮಲ್ಲಿ ಕೃತಜ್ಞತೆ ಇದ್ರೆ ಸಂತೃಪ್ತಿ ಅನ್ನೋ ಗುಣ ಬೆಳೆಯುತ್ತೆ. (1 ಥೆಸಲೊನೀಕ 5:18 ಓದಿ) ಉದಾಹರಣೆಗೆ, ಜೀವನ ಮಾಡೋಕೆ ಬೇಕಾಗಿರೋ ವಿಷ್ಯಗಳು ನಮ್ಮ ಹತ್ರ ಇದ್ರೆ ಅದಕ್ಕೆ ನಾವು ಕೃತಜ್ಞರಾಗಿರಬೇಕು. ಆಗ ನಮ್ಮ ಹತ್ರ ಏನಿಲ್ವೋ ಅದ್ರ ಬಗ್ಗೆ ನಾವು ಜಾಸ್ತಿ ಚಿಂತೆ ಮಾಡೋದಿಲ್ಲ. ಯೆಹೋವನ ಸೇವೆ ಮಾಡೋಕೆ ನಮ್ಮ ಹತ್ರ ಈಗಾಗ್ಲೇ ಇರೋ ಅವಕಾಶಕ್ಕೆ ನಾವು ಕೃತಜ್ಞತೆ ಹೇಳಬೇಕು. ಹೀಗೆ ಮಾಡಿದ್ರೆ, ನಮಗಿರೋ ಸೇವೆನ ನಾವು ಚೆನ್ನಾಗಿ ಮಾಡೋಕೆ ಆಗುತ್ತೆ. ಆಗ ಹೊಸ ಸುಯೋಗನ ಪಡ್ಕೊಳ್ಳೋಕೆ ಏನೆಲ್ಲ ಮಾಡಬೇಕು ಅನ್ನೋದ್ರ ಬಗ್ಗೆನೇ ಜಾಸ್ತಿ ತಲೆ ಕೆಡಿಸಿಕೊಳ್ಳಲ್ಲ. ಅದಕ್ಕೆ ಯೆಹೋವನಿಗೆ ಪ್ರಾರ್ಥಿಸುವಾಗ ಕೃತಜ್ಞತೆ ಹೇಳಿ ಅಂತ ಬೈಬಲ್‌ ಹೇಳುತ್ತೆ. ನಮ್ಮಲ್ಲಿ ಕೃತಜ್ಞತೆ ಇರೋದಾದ್ರೆ, ನಮ್ಮ ತಿಳುವಳಿಕೆಗೂ ಮೀರಿದ ಶಾಂತಿ ಸಿಗುತ್ತೆ.—ಫಿಲಿ. 4:6, 7.

5. ಇಸ್ರಾಯೇಲ್ಯರು ಕೃತಜ್ಞತೆ ತೋರಿಸೋಕೆ ಏನೆಲ್ಲಾ ಕಾರಣ ಇತ್ತು? (ಚಿತ್ರ ನೋಡಿ.)

5 ಇದನ್ನ ಅರ್ಥ ಮಾಡ್ಕೊಳ್ಳೋಕೆ ಇಸ್ರಾಯೇಲ್ಯರ ಉದಾಹರಣೆ ನೋಡೋಣ. ಇಸ್ರಾಯೇಲ್ಯರು ಎಷ್ಟೊಂದು ಸಲ ಯೆಹೋವನ ಹತ್ರ ‘ನಮಗೆ ಈಜಿಪ್ಟಲ್ಲೇ ಊಟ ಚೆನ್ನಾಗಿ ಸಿಗ್ತಿತ್ತು’ ಅಂತ ದೂರಿದ್ರು. (ಅರ. 11:4-6) ಕಾಡಲ್ಲಿ ಜೀವನ ಮಾಡೋದು ಅಷ್ಟು ಸುಲಭ ಇರಲಿಲ್ಲ ನಿಜ. ಆದ್ರೂ ಅವರು ಸಂತೃಪ್ತಿ ಬೆಳೆಸ್ಕೊಳ್ಳೋಕೆ ತುಂಬ ಕಾರಣಗಳಿತ್ತು! ಯೆಹೋವ ದೇವರು ಅವರಿಗೋಸ್ಕರ ಏನೆಲ್ಲಾ ಮಾಡಿದ್ದಾನೆ ಅಂತ ಅವರು ನೆನಪು ಮಾಡ್ಕೋಬೇಕಿತ್ತು. ಇಷ್ಟಕ್ಕೂ ಯೆಹೋವ ಅವರಿಗೋಸ್ಕರ ಏನೆಲ್ಲ ಮಾಡಿದ್ದನು? ಇಸ್ರಾಯೇಲ್ಯರು ಈಜಿಪ್ಟಲ್ಲಿ ಇದ್ದಾಗ ಅವರ ಮೇಲೆ ದಬ್ಬಾಳಿಕೆ ಆಗ್ತಿತ್ತು. ಆಗ ಅವರನ್ನ ಅದ್ಭುತವಾಗಿ ಬಿಡಿಸಿದನು. ಇಸ್ರಾಯೇಲ್ಯರು ದೇಶ ಬಿಟ್ಟು ಬರುವಾಗ ಬರೀ ಕೈಯಲ್ಲಿ ಬರದೇ ‘ಈಜಿಪ್ಟಿನವರನ್ನ ಲೂಟಿ ಮಾಡಿ’ ಬೆಳ್ಳಿ, ಬಂಗಾರ, ಬಟ್ಟೆಗಳನ್ನೆಲ್ಲ ಎತ್ಕೊಂಡು ಬರೋಕೆ ಸಹಾಯ ಮಾಡಿದನು. (ವಿಮೋ. 12:35, 36) ಕೆಂಪು ಸಮುದ್ರದ ಹತ್ರ ಬಂದಾಗ ಅವರನ್ನ ಕಾಪಾಡೋಕೆ ಯೆಹೋವ ದೇವರು ಸಮುದ್ರನ ಎರಡು ಭಾಗ ಮಾಡಿದನು. ಅವರು ಕಾಡಲ್ಲಿ ನಡೆದಾಡ್ತಾ ಇದ್ದಾಗ ಪ್ರತಿದಿನ ಯೆಹೋವ ಅವರಿಗೆ ಮನ್ನವನ್ನ ಕೊಟ್ಟು ಅವರ ಹೊಟ್ಟೆ ತುಂಬಿಸಿದನು. ಯೆಹೋವ ಇಷ್ಟೆಲ್ಲಾ ಸಹಾಯ ಮಾಡಿದ್ರೂ ಯಾಕೆ ಅವರು ದೂರುತ್ತಿದ್ರು? ಊಟ ಇಲ್ಲ ಅಂತಲ್ಲ, ಅವರಲ್ಲಿ ಸಂತೃಪ್ತಿ ಇರ್ಲಿಲ್ಲ. ಯೆಹೋವ ಅವರಿಗೆ ಮಾಡಿದ್ರ ಬಗ್ಗೆ ಅವ್ರಲ್ಲಿ ಕೃತಜ್ಞತೆ ಇರಲಿಲ್ಲ.

ಮನ್ನ ತಿಂದು ತಿಂದು ಸಾಕಾಗಿದೆ ಅಂತ ಇಸ್ರಾಯೇಲ್ಯರಲ್ಲಿ ಕೆಲವರು ಮೋಶೆ ಹತ್ರ ಹೇಳ್ತಿದ್ದಾರೆ. ಇನ್ನು ಕೆಲವರು ಅದನ್ನ ಖುಷಿಯಿಂದ ಕೂಡಿಸ್ಕೊಳ್ತಿದ್ದಾರೆ.

ಇಸ್ರಾಯೇಲ್ಯರು ಯಾಕೆ ಸಂತೃಪ್ತಿ ಕಳ್ಕೊಂಡ್ರು? (ಪ್ಯಾರ 5 ನೋಡಿ)


6. ಕೃತಜ್ಞತೆ ಬೆಳೆಸ್ಕೊಳ್ಳೋಕೆ ನಾವು ಏನೆಲ್ಲಾ ಮಾಡಬೇಕು?

6 ಹಾಗಾದ್ರೆ ನಾವು ಕೃತಜ್ಞತೆ ಬೆಳೆಸ್ಕೊಳ್ಳೋಕೆ ಏನು ಮಾಡಬೇಕು? (1) ಪ್ರತಿದಿನ ಖುಷಿಯಾಗಿರೋಕೆ ನಮಗೇನು ಕಾರಣ ಇದೆ ಅಂತ ಯೋಚನೆ ಮಾಡೋಕೆ ಟೈಮ್‌ ಮಾಡ್ಕೋಬೇಕು. ಸಾಧ್ಯವಾದ್ರೆ ಒಂದೆರಡು ಕಾರಣಗಳನ್ನ ಬರೆದಿಡಬೇಕು. (ಪ್ರಲಾ. 3:22, 23) (2) ನಮಗೆ ಸಹಾಯ ಮಾಡಿದವ್ರಿಗೆ ಥ್ಯಾಂಕ್ಸ್‌ ಹೇಳೋದನ್ನ ಅಭ್ಯಾಸ ಮಾಡ್ಕೋಬೇಕು. ಎಲ್ಲದಕ್ಕಿಂತ ಮುಖ್ಯವಾಗಿ, ತಪ್ಪದೇ ಪ್ರಾರ್ಥನೇಲಿ ಯೆಹೋವನಿಗೆ ಥ್ಯಾಂಕ್ಸ್‌ ಹೇಳ್ಬೇಕು. (ಕೀರ್ತ. 75:1) (3) ಜೀವನದಲ್ಲಿ ಕೃತಜ್ಞತೆ ತೋರಿಸೋರನ್ನ ಕ್ಲೋಸ್‌ ಫ್ರೆಂಡ್‌ ಮಾಡ್ಕೊಬೇಕು. ಯಾರಲ್ಲಿ ಕೃತಜ್ಞತೆ ಇಲ್ವೋ ಅಥವಾ ಯಾರು ಯಾವಾಗ್ಲೂ ದೂರುತ್ತಾ ಇರ್ತಾರೋ ಅಂಥವ್ರ ಜೊತೆ ನಾವು ಸ್ನೇಹ ಮಾಡಿದ್ರೆ ನಾವೂ ಅವರ ತರಾನೇ ಆಗಿಬಿಡ್ತೀವಿ. (ಧರ್ಮೋ. 1:26-28; 2 ತಿಮೊ. 3:1, 2, 5) ಅದ್ರ ಬದಲು, ನಾವು ಖುಷಿಯಾಗಿರೋಕೆ ಏನೆಲ್ಲಾ ಒಳ್ಳೆ ಕಾರಣಗಳಿವೆ ಅಂತ ಯೋಚ್ನೆ ಮಾಡಿ ಕೃತಜ್ಞತೆ ತೋರಿಸಬೇಕು. ಆಗ ಜೀವನದಲ್ಲಿ ನಮ್ಮ ಹತ್ರ ಇಲ್ಲದಿರೋದ್ರ ಬಗ್ಗೆ ಯೋಚನೆ ಮಾಡೋದನ್ನ ಬಿಡ್ತೀವಿ, ಯಾವಾಗ್ಲೂ ಖುಷಿಯಾಗಿ ಇರ್ತೀವಿ.

7. (ಎ) ಕೃತಜ್ಞತೆ ಬೆಳೆಸಿಕೊಳ್ಳೋಕೆ ಸಹೋದರಿ ಆಚಿ ಏನು ಮಾಡಿದ್ರು? (ಬಿ) ಆಮೇಲೆ ಏನಾಯ್ತು?

7 ಇಂಡೋನೇಷ್ಯಾದ ಸಹೋದರಿ ಆಚಿ ಅವರ ಅನುಭವ ನೋಡಿ. “ಕೊರೊನಾ ಟೈಮಲ್ಲಿ ನನ್ನ ಪರಿಸ್ಥಿತಿನ ಬೇರೆಯವರ ಜೊತೆ ಹೋಲಿಸ್ತಿದ್ದೆ. ಆಗ ಅವ್ರೆಲ್ಲ ಚೆನ್ನಾಗಿದ್ದಾರೆ, ನಾನು ಚೆನ್ನಾಗಿಲ್ವಲ್ಲ ಅಂತ ನಂಗೆ ಬೇಜಾರಾಯ್ತು” ಅಂತ ಅವರು ಹೇಳ್ತಾರೆ. (ಗಲಾ. 6:4) ಆದ್ರೆ ಇವ್ರಿಗೆ ಕೃತಜ್ಞತೆ ಬೆಳೆಸ್ಕೊಳ್ಳೋಕೆ ಏನು ಸಹಾಯ ಮಾಡ್ತು ಗೊತ್ತಾ? “ಪ್ರತಿದಿನ ನಾನು ಖುಷಿಯಾಗಿರೋಕೆ ಯೆಹೋವ ನನಗೆ ಏನೆಲ್ಲಾ ಕೊಟ್ಟಿದ್ದಾನೆ ಅಂತ ನೆನಪು ಮಾಡ್ಕೊಂಡೆ. ಯೆಹೋವ ದೇವರ ಸಂಘಟನೆಲಿ ಇರೋದ್ರಿಂದ ನಂಗೆ ಏನೆಲ್ಲಾ ಪ್ರಯೋಜನ ಆಗ್ತಿದೆ ಅನ್ನೋದನ್ನ ಕೂಡ ನಾನು ಯೋಚನೆ ಮಾಡ್ದೆ. ಇದನ್ನೆಲ್ಲಾ ನಾನು ಯೆಹೋವನಿಗೆ ಪ್ರಾರ್ಥನೆಲಿ ಹೇಳ್ತಿದ್ದೆ. ಈ ರೀತಿ ಹೇಳಿದ್ರಿಂದ ನನ್ನ ಮನಸ್ಸು ತುಂಬ ನಿರಾಳ ಆಯ್ತು. ಸಂತೃಪ್ತಿಯಿಂದ ಇರೋಕೆ ಕಲಿತೆ” ಅಂತಾರೆ. ಒಂದುವೇಳೆ ನಿಮ್ಮ ಪರಿಸ್ಥಿತಿ ನೋಡಿ ನಿಮಗೆ ಬೇಜಾರಾಗ್ತಾ ಇದ್ರೆ ಈ ಸಿಸ್ಟರ್‌ ಮಾಡಿದ್ದನ್ನೇ ನೀವೂ ಮಾಡ್ತೀರಾ?

ದೀನರಾಗಿರಿ

8. ಬಾರೂಕ ಹೇಗೆ ತನ್ನ ಸಂತೃಪ್ತಿ ಕಳ್ಕೊಂಡ?

8 ಪ್ರವಾದಿ ಯೆರೆಮೀಯನ ಕಾರ್ಯದರ್ಶಿಯಾದ ಬಾರೂಕ ಒಂದು ಸಲ ಸಂತೃಪ್ತಿ ಕಳ್ಕೊಂಡು ತುಂಬ ಬೇಜಾರು ಮಾಡ್ಕೊಂಡ. ಯೆರೆಮೀಯ ಇಸ್ರಾಯೇಲ್ಯರಿಗೆ ಎಚ್ಚರಿಕೆ ಸಂದೇಶ ಕೊಡ್ತಿದ್ದಾಗ ಇವನೂ ಅವನ ಜೊತೆ ಸೇವೆ ಮಾಡ್ತಿದ್ದ. ಇದು ಕಷ್ಟದ ನೇಮಕ ಆಗಿತ್ತು! ಆದ್ರೆ ಬಾರೂಕ, ಯೆಹೋವ ಅವನಿಗೆ ಕೊಟ್ಟ ಈ ಸೇವೆ ಬಗ್ಗೆ ಯೋಚನೆ ಮಾಡೋದು ಬಿಟ್ಟು, ತನ್ನ ಬಗ್ಗೆ, ತನ್ನ ಆಸೆ ಬಗ್ಗೆ ಜಾಸ್ತಿ ಯೋಚನೆ ಮಾಡಿದ. ಅದಕ್ಕೆ ಯೆಹೋವ ದೇವರು ಯೆರೆಮೀಯನ ಮೂಲಕ ಬಾರೂಕನಿಗೆ ಎಚ್ಚರಿಕೆ ಕೊಟ್ಟನು. “ನೀನು ದೊಡ್ಡ ದೊಡ್ಡ ವಿಷ್ಯಗಳನ್ನ ಪಡೆಯೋಕೆ ಪ್ರಯತ್ನ ಮಾಡ್ತಾ ಇದ್ದೀಯ. ಇನ್ನು ಹಾಗೆ ಮಾಡಬೇಡ” ಅಂತ ಬುದ್ಧಿ ಹೇಳಿದನು. (ಯೆರೆ. 45:3-5) ಒಂದು ರೀತಿಯಲ್ಲಿ ಯೆಹೋವ ಅವನಿಗೆ ‘ನೀನು ಈಗ ನಿನಗಿರೋ ಸುಯೋಗದಲ್ಲಿ ಸಂತೃಪ್ತಿ ಪಡ್ಕೋ’ ಅಂತ ಹೇಳಿದನು. ಈ ಬುದ್ಧಿವಾದನ ಬಾರೂಕ ಪಾಲಿಸಿದ. ಯೆಹೋವನ ಸೇವೆ ಮಾಡ್ತಾ ಸಂತೃಪ್ತಿಯಿಂದ ಇರೋಕೆ ಕಲಿತ.

9. ನಮ್ಮಲ್ಲಿ ದೀನತೆ ಇದ್ರೆ ನಾವು ಏನು ಅರ್ಥ ಮಾಡ್ಕೊಳ್ತೀವಿ? (1 ಕೊರಿಂಥ 4:6, 7) (ಚಿತ್ರ ನೋಡಿ.)

9 ಕೆಲವೊಂದು ಸಲ ನಾವು, ‘ಆ ಸುಯೋಗ ನನಗೆ ಸಿಗ್ಬೇಕು’ ಅಂತ ಆಸೆ ಪಡಬಹುದು. ಯಾಕಂದ್ರೆ ಆ ಸುಯೋಗ ಮಾಡೋಕೆ ಬೇಕಾಗಿರೋ ಟ್ಯಾಲೆಂಟ್‌, ಅನುಭವ ಮತ್ತು ಕಷ್ಟಪಟ್ಟು ಕೆಲ್ಸ ಮಾಡೋ ಮನಸ್ಸು ನಮ್ಮಲ್ಲಿ ಇರಬಹುದು. ಆದ್ರೆ ಆ ನೇಮಕ ನಮಗೆ ಸಿಗದೆ ಬೇರೆಯವ್ರಿಗೆ ಸಿಗಬಹುದು. ಆಗ ನಾವು ದೀನತೆಯಿಂದ ಏನು ಮಾಡಬೇಕು? ಆಗ ನಾವು ಪೌಲ 1 ಕೊರಿಂಥ 4:6, 7ರಲ್ಲಿ (ಓದಿ) ಹೇಳಿರೋ ಮಾತುಗಳ ಬಗ್ಗೆ ಯೋಚನೆ ಮಾಡಬೇಕು. ಯಾಕಂದ್ರೆ ನಮಗೆ ಸಿಕ್ಕಿರೋ ಯಾವುದೇ ಸುಯೋಗ ಅಥವಾ ನಮ್ಮ ಹತ್ರ ಇರೋ ಯಾವುದೇ ಟ್ಯಾಲೆಂಟ್‌ ನಮ್ಮದಲ್ಲ, ಯೆಹೋವ ನಮಗೆ ಕೊಟ್ಟಿರೋದು! ಅದನ್ನ ನಾವು ಯಾರೂ ಸಂಪಾದಿಸಲಿಲ್ಲ. ಹಾಗಿದ್ರೂ ಯೆಹೋವ ಅದನ್ನ ನಮಗೆ ಕೊಟ್ಟಿದ್ದಾನೆ ಅಂದ್ರೆ ಅದು ಆತನ ಅಪಾರ ಕೃಪೆನೇ!—ರೋಮ. 12:3, 6; ಎಫೆ. 2:8, 9.

ಚಿತ್ರ: ಬೇರೆ ಬೇರೆ ಸುಯೋಗ ಸಿಕ್ಕಿರೋ ಸಹೋದರ ಸಹೋದರಿಯರು. 1. ಸಂಘಟನೆಯ ಕಟ್ಟಡದಲ್ಲಿ ಮೆಂಟೆನೆನ್ಸ್‌ ಕೆಲ್ಸ ಮಾಡೋ ಸಹೋದರ ಪೈಪ್‌ ಸರಿಯಾಗಿದ್ಯಾ ಅಂತ ಚೆಕ್‌ ಮಾಡ್ತಿದ್ದಾನೆ. 2. ಸನ್ನೆ ಭಾಷೆಯ ಸರ್ಕಿಟ್‌ ಸಮ್ಮೇಳನದಲ್ಲಿ ಒಬ್ಬ ಸಹೋದರಿ ತನ್ನ ಅನುಭವವನ್ನ ಹೇಳ್ತಿದ್ದಾಳೆ. 3. ಕೂಟಗಳಲ್ಲಿ ಒಬ್ಬ ಸಹೋದರ ಸಾರ್ವಜನಿಕ ಭಾಷಣ ಕೊಡ್ತಿದ್ದಾನೆ.

ನಮ್ಮಲ್ಲಿ ಯಾವುದೇ ಟ್ಯಾಲೆಂಟ್‌ ಇದ್ರೂ ಅದು ಯೆಹೋವನ ಅಪಾರ ಕೃಪೆಯಿಂದ ನಮಗೆ ಸಿಕ್ಕಿರೋದು (ಪ್ಯಾರ 9 ನೋಡಿ)b


10. ನಾವು ಹೇಗೆ ದೀನತೆ ಬೆಳೆಸ್ಕೊಬಹುದು?

10 ಯೇಸು ಕ್ರಿಸ್ತನ ಬಗ್ಗೆ ನಾವು ಚೆನ್ನಾಗಿ ಯೋಚನೆ ಮಾಡೋದಾದ್ರೆ ದೀನತೆ ಬೆಳೆಸ್ಕೊಬಹುದು. ಯೇಸು ಸಾಯೋ ಹಿಂದಿನ ರಾತ್ರಿ ತನ್ನ ಶಿಷ್ಯರ ಕಾಲನ್ನ ತೊಳೆದಿದ್ರ ಬಗ್ಗೆ ಯೋಚನೆ ಮಾಡಿ. ಅದ್ರ ಬಗ್ಗೆ ಅಪೊಸ್ತಲ ಯೋಹಾನ ಹೀಗೆ ಬರೆದಿದ್ದಾನೆ, ‘[1] ಅಪ್ಪಾ ತನಗೆಲ್ಲಾ ಅಧಿಕಾರ ಕೊಟ್ಟಿದ್ದಾನೆ ಅಂತ ಯೇಸುಗೆ ಗೊತ್ತಿತ್ತು. [2] ದೇವರ ಹತ್ರದಿಂದ ಬಂದೆ, [3] ದೇವರ ಹತ್ರನೇ ವಾಪಸ್‌ ಹೋಗ್ತೀನಿ ಅಂತಾನೂ ಆತನಿಗೆ ಗೊತ್ತಿತ್ತು. ಆದ್ರೂ ಶಿಷ್ಯರ ಕಾಲು ತೊಳೆದನು.’ (ಯೋಹಾ. 13:3-5) ಇವರೆಲ್ಲ ಸೇರಿ ನನ್ನ ಕಾಲು ತೊಳಿಬೇಕು ಅಂತ ಯೇಸು ಅಂದ್ಕೊಬಹುದಿತ್ತು. ಆದ್ರೆ ಯೇಸು ಭೂಮಿಯಲ್ಲಿದ್ದಾಗ ಯಾವತ್ತೂ ‘ನಾನು ದೇವ್ರ ಮಗ ಆಗಿರೋದ್ರಿಂದ ನಂಗೆ ತುಂಬ ಗೌರವ ಸಿಗಬೇಕು, ನನ್ನ ಜೀವನ ಆರಾಮವಾಗಿರಬೇಕು’ ಅಂತ ಅಂದ್ಕೊಳ್ಳಲಿಲ್ಲ. (ಲೂಕ 9:58) ಯೇಸು ದೀನತೆ ತೋರಿಸಿದನು ಇರೋದ್ರಲ್ಲೇ ಸಂತೃಪ್ತಿಪಟ್ಟನು. ಹೀಗೆ ನಮ್ಮೆಲ್ಲರಿಗೂ ಒಳ್ಳೆ ಮಾದರಿ ಇಟ್ಟನು.—ಯೋಹಾ. 13:15.

11. ಸಂತೃಪ್ತಿ ಬೆಳೆಸ್ಕೊಳ್ಳೋಕೆ ಡೆನಿಸ್‌ಗೆ ದೀನತೆ ಹೇಗೆ ಸಹಾಯ ಮಾಡ್ತು?

11 ನೆದರ್‌ಲ್ಯಾಂಡ್ಸ್‌ನಲ್ಲಿರೋ ಡೆನಿಸ್‌ ಅನ್ನೋ ಸಹೋದರ ಯೇಸುವಿನ ಮಾದರಿಯಿಂದ ದೀನತೆ ಕಲಿಯೋಕೆ ಪ್ರಯತ್ನ ಹಾಕ್ತಿದ್ದಾರೆ. ಅವರು ಹೇಳೋದು, “ಬೇರೆಯವ್ರಿಗೆ ಒಳ್ಳೇ ಸುಯೋಗ ಸಿಕ್ಕಿದಾಗ ನನ್ನಲ್ಲೇ ಸ್ವಲ್ಪ ಅಹಂಕಾರ, ಅಸಂತೃಪ್ತಿ ಬೆಳಿತಾ ಇರೋದನ್ನ ನಾನು ನೋಡಿದ್ದೀನಿ. ಅಂಥ ಸಂದರ್ಭದಲ್ಲಿ ನಾನು ದೀನತೆ ಬಗ್ಗೆ ಓದ್ತೀನಿ. JW ಲೈಬ್ರರಿ ಆ್ಯಪಲ್ಲಿ ನಾನು ದೀನತೆ ಬಗ್ಗೆ ಇರೋ ಕೆಲವು ವಚನಗಳನ್ನೆಲ್ಲ ಟ್ಯಾಗ್‌ ಮಾಡಿ ಇಟ್ಕೊಂಡಿದ್ದೀನಿ. ಇದ್ರಿಂದ ನಾನು ಅದನ್ನು ಪಟ್ಟಂತ ತೆಗೆದು ಬೇಕಾದಾಗ ಪದೇಪದೇ ಓದೋಕ್ಕಾಗುತ್ತೆ. ಅದ್ರ ಜೊತೆಗೆ, ದೀನತೆ ಬಗ್ಗೆ ಇರೋ ಕೆಲವೊಂದು ಭಾಷಣಗಳನ್ನು ಡೌನ್ಲೋಡ್‌ ಮಾಡಿದ್ದೀನಿ. ಅದನ್ನು ಆಗಾಗ ಕೇಳಿಸ್ಕೊಳ್ತಾ ಇರ್ತೀನಿ.a ಜೀವನದಲ್ಲಿ ನಾವು ಏನೇ ಕೆಲಸ ಮಾಡೋದಾದ್ರೂ ಅದ್ರಿಂದ ನಮಗಲ್ಲ ಯೆಹೋವನಿಗೆ ಮಾತ್ರ ಮಹಿಮೆ ಹೋಗಬೇಕು ಅಂತ ಈಗ ಅರ್ಥ ಮಾಡ್ಕೊಂಡಿದೀನಿ. ಯೆಹೋವನು ದೊಡ್ಡ ದೊಡ್ಡ ವಿಷ್ಯಗಳನ್ನ ಇವತ್ತು ಸಾಧಿಸ್ತಿದ್ದಾನೆ. ಆದ್ರೆ ಅದ್ರಲ್ಲಿ ನಾವು ಒಂದು ಚಿಕ್ಕ ಕೆಲಸ ಮಾಡ್ಬೇಕು ಅಂತ ಆತನು ಇಷ್ಟಪಟ್ಟು ನಮಗೊಂದು ಅವಕಾಶ ಕೊಟ್ಟಿದ್ದಾನೆ ಅಷ್ಟೇ.” ನಿಮ್ಮ ಪರಿಸ್ಥಿತಿಯಿಂದ ಅಥವಾ ನಿಮ್ಮ ಸುಯೋಗದಲ್ಲಿ ನಿಮಗೆ ಸಂತೃಪ್ತಿ ಇಲ್ಲ ಅಂತ ಅನಿಸ್ತಿದೆಯಾ? ಹಾಗಾದ್ರೆ ದಯವಿಟ್ಟು ದೀನತೆ ಬೆಳೆಸ್ಕೊಳ್ಳಿ. ಆಗ ಯೆಹೋವ ದೇವರ ಜೊತೆ ನಿಮಗಿರೋ ಸ್ನೇಹನ ಬಲಪಡಿಸ್ಕೊತೀರ ಮತ್ತು ಸಂತೃಪ್ತಿ ಕಲಿತೀರ!—ಯಾಕೋ. 4:6, 8.

ದೇವರ ಆಳ್ವಿಕೆ ಬಗ್ಗೆ ಯೋಚ್ನೆ ಮಾಡಿ

12. ಈಗ ಸಂತೃಪ್ತಿಯಿಂದ ಇರೋಕೆ ನಮಗೆ ಯಾವುದು ಸಹಾಯ ಮಾಡುತ್ತೆ? (ಯೆಶಾಯ 65:21-25)

12 ದೇವರ ಆಳ್ವಿಕೆಯಲ್ಲಿ ನಮ್ಮ ಜೀವನ ಹೇಗಿರುತ್ತೆ ಅಂತ ಯೋಚನೆ ಮಾಡಿದ್ರೆ ನಾವೀಗ ಸಂತೃಪ್ತಿಯಿಂದ ಇರೋಕೆ ಸಾಧ್ಯ ಆಗುತ್ತೆ. ‘ನಿಮ್ಮ ಕಷ್ಟಗಳನ್ನ ಅರ್ಥ ಮಾಡ್ಕೊಂಡಿದ್ದೀನಿ’ ಅಂತ ಯೆಹೋವನು ಯೆಶಾಯ ಪುಸ್ತಕದಲ್ಲಿ ಹೇಳಿದ್ದಾನೆ. ಅಷ್ಟೇ ಅಲ್ಲ, ಆ ಎಲ್ಲ ಕಷ್ಟಗಳಿಂದ ಬಿಡಿಸ್ತೀನಿ ಅಂತ ಮಾತೂ ಕೊಟ್ಟಿದ್ದಾನೆ. (ಯೆಶಾಯ 65:21-25 ಓದಿ) ಹಾಗಾಗಿ ದೇವರ ಆಳ್ವಿಕೆಯಲ್ಲಿ ನಮ್ಮೆಲ್ಲರಿಗೂ ಭದ್ರವಾದ, ಆರಾಮವಾದ ಸ್ವಂತ ಮನೆ ಸಿಗುತ್ತೆ. ಖುಷಿ ಕೊಡೋ ಕೆಲಸ ಇರುತ್ತೆ. ಆರೋಗ್ಯವಾದ ರುಚಿಕರ ಆಹಾರ ಸಿಗುತ್ತೆ. ನಾವ್ಯಾರೂ ನಮಗಾಗಲಿ, ನಮ್ಮ ಮಕ್ಕಳಿಗಾಗ್ಲಿ ಅಪಾಯ ಆಗುತ್ತೇನೋ ಅಂತ ಭಯ ಪಡಬೇಕಾಗಿರಲ್ಲ. (ಯೆಶಾ. 32:17, 18; ಯೆಹೆ. 34:25) ಖಂಡಿತ ನಮ್ಮ ಭವಿಷ್ಯ ಅದ್ಭುತವಾಗಿರುತ್ತೆ, ನಾವೆಲ್ಲ ಸಂತೋಷವಾಗಿ ಇರ್ತೀವಿ.

13. ಮುಖ್ಯವಾಗಿ ಯಾವ ಸಂದರ್ಭಗಳಲ್ಲಿ ನಾವು ದೇವರ ಆಳ್ವಿಕೆ ಬಗ್ಗೆ ಯೋಚನೆ ಮಾಡಬೇಕು?

13 ನಾವು ದೇವರ ಆಳ್ವಿಕೆ ಬಗ್ಗೆ ಹೆಚ್ಚು ಯೋಚನೆ ಮಾಡಬೇಕು. ಯಾಕಂದ್ರೆ ನಾವೆಲ್ಲಾ ಈಗ “ಕೊನೇ ದಿನಗಳಲ್ಲಿ” ಜೀವಿಸ್ತಿದ್ದೀವಿ. ಈ ಟೈಮಲ್ಲಿ ನಾವೆಲ್ಲಾ ‘ತುಂಬ ಕಷ್ಟ ಪಡಬೇಕಾಗುತ್ತೆ’ ಅಂತ ಬೈಬಲ್‌ ಮೊದ್ಲೇ ಹೇಳಿದೆ. (2 ತಿಮೊ. 3:1) ಹಾಗಾಗಿ ಇದನ್ನೆಲ್ಲಾ ನಾವು ಎದುರಿಸೋಕೆ ಬೇಕಾಗಿರೋ ಮಾರ್ಗದರ್ಶನ, ಬಲ ಮತ್ತು ಬೆಂಬಲವನ್ನ ಯೆಹೋವನು ನಮಗೆ ಪ್ರತಿದಿನ ಕೊಡ್ತಿದ್ದಾನೆ. (ಕೀರ್ತ. 145:14) ಇದ್ರ ಜೊತೆಯಲ್ಲಿ ದೇವರ ಆಳ್ವಿಕೆಯಲ್ಲಿ ಏನೆಲ್ಲಾ ಆಗುತ್ತೆ ಅಂತ ನಾವು ಯೋಚನೆ ಮಾಡೋದನ್ನ ರೂಢಿ ಮಾಡ್ಕೊಂಡ್ರೆ ಈ ಕಷ್ಟಗಳನ್ನೆಲ್ಲ ಚೆನ್ನಾಗಿ ಸಹಿಸ್ಕೊಳ್ಳೋಕೆ ಕಲಿತೀವಿ. ಒಂದುವೇಳೆ ಈಗ ನಾವು ನಮ್ಮ ಕುಟುಂಬದ ಊಟ, ಬಟ್ಟೆಗೋಸ್ಕರ ತುಂಬ ಕಷ್ಟಪಡ್ತಿದ್ರೆ ಯಾವಾಗ್ಲೂ ಬಡವರಾಗೇ ಉಳಿದು ಬಿಡ್ತೀವಿ ಅಂತ ಅರ್ಥನಾ? ಖಂಡಿತ ಇಲ್ಲ. ನಿಮಗೆ ಏನೆಲ್ಲಾ ಬೇಕೋ ಅದನ್ನ ಮತ್ತು ಅದಕ್ಕಿಂತ ಜಾಸ್ತಿನ ತನ್ನ ಆಳ್ವಿಕೆಯಲ್ಲಿ ಕೊಡ್ತೀನಿ ಅಂತ ದೇವರು ಮಾತು ಕೊಟ್ಟಿದ್ದಾನೆ. (ಕೀರ್ತ. 9:18; 72:12-14) ಒಂದುವೇಳೆ ಈಗ ನೀವು ಕಾಯಿಲೆಯಿಂದ ನರಳ್ತಿದ್ರೆ, ಖಿನ್ನತೆಯಿಂದ ಕುಗ್ಗಿ ಹೋಗಿದ್ರೆ ಇನ್ಯಾವತ್ತೂ ನೀವು ಚೇತರಿಸಿಕೊಳ್ಳೋಕೆ ಆಗಲ್ಲ ಅಂತಾನಾ? ಖಂಡಿತ ಇಲ್ಲ. ಕಾಯಿಲೆ ಮತ್ತು ಸಾವಿಲ್ಲದಿರೋ ಜೀವನನ ತನ್ನ ಆಳ್ವಿಕೆಯಲ್ಲಿ ತರ್ತೀನಿ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. (ಪ್ರಕ. 21:3, 4) ಈ ನಿರೀಕ್ಷೆ ನೀವು ಕುಗ್ಗಿ ಹೋಗದೇ ಇರೋಕೆ, ಬೇಜಾರು ಆಗದೇ ಇರೋಕೆ ಮತ್ತು ಕೋಪ ಮಾಡ್ಕೊಳ್ಳದೇ ಇರೋಕೆ ಸಹಾಯ ಮಾಡುತ್ತೆ. ನಮಗೆ ಅನ್ಯಾಯ ಆದ್ರೂ, ನಮ್ಮವರು ತೀರಿಕೊಂಡ್ರೂ ಅಥವಾ ನಮಗೆ ಯಾವುದೇ ಕಷ್ಟ ಬಂದ್ರೂ ನಾವು ಸಂತೃಪ್ತಿಯಿಂದ ಇರಬಹುದು. ಯಾಕೆ? ಯಾಕಂದ್ರೆ ನೀವೀಗ ಎಂಥ ಸಮಸ್ಯೆನ ಎದುರಿಸಿದ್ರೂ ಅದೆಲ್ಲ ‘ಸ್ವಲ್ಪ ಕಾಲಕ್ಕಷ್ಟೇ’ ಅಂತ ನೆನಪಿಡಿ. (2 ಕೊರಿಂ. 4:17, 18) ತುಂಬ ಬೇಗ ದೇವರ ಆಳ್ವಿಕೆ ನಮ್ಮ ಕಷ್ಟಗಳನ್ನ ಶಾಶ್ವತವಾಗಿ ತೆಗೆದು ಹಾಕುತ್ತೆ.

14. ನಿರೀಕ್ಷೆಯಿಂದ ಜಾಸ್ತಿ ಪ್ರಯೋಜನ ಪಡೆಯೋಕೆ ನಾವೇನು ಮಾಡಬೇಕು?

14 ನಮ್ಮಲ್ಲಿ ನಿರೀಕ್ಷೆ ಇದ್ರೆ ಸಂತೃಪ್ತಿ ಪಡ್ಕೊಳ್ಳೋಕೆ ಸಹಾಯ ಆಗುತ್ತೆ ಅಂತ ಕಲಿತ್ವಿ. ಅದಕ್ಕೆ ನಮ್ಮ ನಿರೀಕ್ಷೆ ಬಗ್ಗೆ ಜಾಸ್ತಿ ಯೋಚನೆ ಮಾಡಬೇಕು. ದೂರದ ವಸ್ತುಗಳನ್ನ ನೋಡೋಕೆ ಕನ್ನಡಕ ಸಹಾಯ ಮಾಡೋ ತರಾನೇ ದೇವರ ಆಳ್ವಿಕೆಯಲ್ಲಿ ಜೀವನ ಹೇಗಿರುತ್ತೆ ಅಂತ ನೋಡೋಕೆ ಈ ನಿರೀಕ್ಷೆ ಸಹಾಯ ಮಾಡುತ್ತೆ. ಒಂದುವೇಳೆ ನೀವು ಹಣಕಾಸಿನ ಸಮಸ್ಯೆ ಬಗ್ಗೆ ಚಿಂತೆ ಮಾಡ್ತಿದ್ರೆ ಏನು ಮಾಡಬಹುದು? ದೇವರ ಆಳ್ವಿಕೆಯಲ್ಲಿ ಹಣದ ತೊಂದ್ರೆ, ಸಾಲದ ತಾಪತ್ರಯ ಇರಲ್ಲ. ಅಲ್ಲಿ ಬಡವರೇ ಇರಲ್ಲ ಅಂತ ಯೋಚನೆ ಮಾಡಬಹುದು. ಒಂದುವೇಳೆ ನಿಮಗೆ, ‘ಅಯ್ಯೋ, ಈಗ ನನಗೆ ಹೆಚ್ಚು ಸುಯೋಗ ಸಿಗ್ತಿಲ್ವೇ’ ಅಂತ ಚಿಂತೆ ಆಗ್ತಿದ್ರೆ ಏನು ಮಾಡಬಹುದು? ದೇವರ ಆಳ್ವಿಕೆಯಲ್ಲಿ ನಾವು ಪರಿಪೂರ್ಣರಾಗ್ತೀವಿ, ಆಗ ಸಾವಿರಾರು ವರ್ಷ ಕಾಲ ಯೆಹೋವನ ಸೇವೆನ ಮನಸ್ಫೂರ್ತಿ ಮಾಡ್ತೀವಿ ಅಂತ ಯೋಚನೆ ಮಾಡಬಹುದು. (1 ತಿಮೊ. 6:19) ಈಗಿರೋ ಕಷ್ಟದ ಬಗ್ಗೆ ಯೋಚನೆ ಮಾಡೋದು ಬಿಟ್ಟು, ದೇವರ ಆಳ್ವಿಕೆಯಲ್ಲಿ ಸಿಗೋ ಆಶೀರ್ವಾದದ ಬಗ್ಗೆ ಯೋಚನೆ ಮಾಡೋದು ಕೆಲವೊಮ್ಮೆ ಕಷ್ಟ ಅಂತ ಅನಿಸಬಹುದು. ಹಾಗಿದ್ರೂ ಯೆಹೋವ ದೇವರು ಕೊಟ್ಟಿರೋ ಮಾತಿನ ಬಗ್ಗೆ ನಾವು ಯೋಚನೆ ಮಾಡ್ತಾ ಇರಬೇಕು. ಆಗ ಅದು ಖಂಡಿತ ನೆರವೇರುತ್ತೆ ಅನ್ನೋ ನಮ್ಮ ನಂಬಿಕೆ ಹೆಚ್ಚಾಗುತ್ತೆ.

15. ಸಹೋದರಿ ಕ್ರಿಸ್ಟಿ ಅವರು ಹೇಳಿದ ಮಾತಿಂದ ನೀವೇನು ಕಲಿತ್ರಿ?

15 ಡೆನಿಸ್‌ ಹೆಂಡ್ತಿ ಕ್ರಿಸ್ಟಿ ಅವ್ರಿಗೆ ನಿರೀಕ್ಷೆ ಹೇಗೆ ಸಹಾಯ ಮಾಡ್ತು ಅಂತ ನೋಡಿ. “ನನಗೊಂದು ಕಾಯಿಲೆ ಇದೆ. ಇದ್ರಿಂದ ನನ್ನ ಸ್ನಾಯುಗಳಲ್ಲಿ ಜಾಸ್ತಿ ಶಕ್ತಿ ಇಲ್ಲ. ನಾನು ಯಾವಾಗ್ಲೂ ವೀಲ್‌ ಚೇರಲ್ಲೇ ಇರಬೇಕು. ನಾನು ಜಾಸ್ತಿ ಹೊತ್ತು ಬೆಡ್‌ ಮೇಲೇನೇ ಇರ್ತೀನಿ. ನೋವಿಂದ ನರಳ್ತಾ ಇರ್ತೀನಿ. ಇತ್ತೀಚಿಗೆ ಡಾಕ್ಟರ್‌ ನನ್ನ ರಿಪೋರ್ಟ್‌ ನೋಡಿ, ‘ನೀವು ಮತ್ತೆ ಮೊದಲಿನ ತರ ಆಗಲ್ಲ’ ಅಂತ ಹೇಳಿದ್ರು. ಆಗ ತಕ್ಷಣ ನಾನು ಭವಿಷ್ಯದಲ್ಲಿ ಏನಾಗುತ್ತೆ ಅಂತ ಈ ಡಾಕ್ಟರ್‌ಗೆ ಗೊತ್ತಿಲ್ಲ. ಆದ್ರೆ ನನಗೆ ನಿರೀಕ್ಷೆ ಇದೆ. ತನ್ನ ಆಳ್ವಿಕೆಯಲ್ಲಿ ದೇವರು ಎಲ್ಲ ಸರಿ ಮಾಡ್ತಾನೆ ಅಂತ ಗೊತ್ತಿದೆ ಅಂತ ನೆನಸ್ಕೊಂಡಾಗ ನನ್ನ ಮನಸ್ಸಿಗೆ ನೆಮ್ಮದಿ ಆಯ್ತು. ಇವತ್ತು ಈ ಲೋಕದಲ್ಲಿ ನಾನು ಕಷ್ಟ ಪಡ್ತಾ ಇರಬಹುದು, ಆದ್ರೆ ಒಂದು ಸಲ ಹೊಸ ಲೋಕ ಬಂದ್ರೆ ನಾನು ತುಂಬ ಸಂತೋಷವಾಗಿ ಇರ್ತೀನಿ ಅಂತ ನನಗೆ ಗೊತ್ತಿದೆ” ಅಂತ ಹೇಳ್ತಾರೆ.

ಯೆಹೋವನ ಭಯ ಇರೋರಿಗೆ ಯಾವ ಕೊರತೆನೂ ಇರಲ್ಲ

16. ಯೆಹೋವನ ಭಯ ಇರೋರಿಗೆ ಯಾವ ಕೊರತೆನೂ ಇರಲ್ಲ ಅಂತ ದಾವೀದ ಯಾಕೆ ಹೇಳಿದ?

16 ಸಂತೃಪ್ತಿ ಇದ್ರೂ ಯೆಹೋವನ ಆರಾಧಕರು ಕಷ್ಟಗಳನ್ನ ಎದುರಿಸಬೇಕು. ಉದಾಹರಣೆಗೆ, ದಾವೀದ ತನ್ನ ಮೂರು ಮಕ್ಕಳ ಸಾವನ್ನ ನೋಡಿದ. ಅವನ ಮೇಲೆ ತಪ್ಪು ಆರೋಪ ಹಾಕಿದ್ರು, ನಂಬಿದವ್ರೇ ಮೋಸ ಮಾಡಿದ್ರು. ಅಲೆಮಾರಿಯಾಗಿ ವರ್ಷಗಟ್ಟಲೆ ಕಾಡಲ್ಲಿ ಜೀವನ ಮಾಡಿದ. ಆದ್ರೂ ‘ಯೆಹೋವನಿಗೆ ಭಯ ಪಡೋರಿಗೆ ಯಾವ ಕೊರತೆನೂ ಇರಲ್ಲ’ ಅಂತ ಹೇಳಿದ. (ಕೀರ್ತ. 34:9, 10) ಯಾಕೆ? ಯಾಕಂದ್ರೆ ಕಷ್ಟಗಳು ಬರದಂತೆ ಯೆಹೋವ ತಡಿಯದೇ ಇದ್ರೂ ತನಗೆ ಏನು ಬೇಕೋ ಅದು ಸಿಗೋ ತರ ದೇವರು ನೋಡ್ಕೊಳ್ತಾನೆ ಅಂತ ಅರ್ಥ ಮಾಡ್ಕೊಂಡ. (ಕೀರ್ತ. 145:16) ನಮ್ಮ ಕಷ್ಟಗಳಲ್ಲೂ ಯೆಹೋವ ಖಂಡಿತ ಕೈ ಹಿಡೀತಾನೆ. ಇದನ್ನ ನಾವು ನಂಬಿದ್ರೆ ಸಂತೃಪ್ತಿಯಿಂದ ಇರ್ತೀವಿ.

17. ಸಂತೃಪ್ತಿಯ ಗುಟ್ಟನ್ನು ನೀವು ಯಾಕೆ ತಿಳಿದುಕೊಳ್ಳಬೇಕು?

17 ನೀವು ಸಂತೃಪ್ತಿಯಿಂದ ಇರಬೇಕು ಅಂತ ಯೆಹೋವನು ಇಷ್ಟ ಪಡ್ತಾನೆ. (ಕೀರ್ತ. 131:1, 2) ಅದಕ್ಕೇ ಸಂತೃಪ್ತಿಯ ಗುಟ್ಟನ್ನು ತಿಳ್ಕೊಳ್ಳಿ. ಆ ಗುಟ್ಟು ನೆನಪಿದೆಯಾ? ನಿಮ್ಮ ಹತ್ರ ಇರೋ ವಿಷ್ಯಗಳಿಗೆ ಕೃತಜ್ಞತೆ ಬೆಳೆಸ್ಕೊಳ್ಳಿ, ದೀನತೆ ತೋರಿಸಿ ಮತ್ತು ದೇವರ ಆಳ್ವಿಕೆಯ ನಿರೀಕ್ಷೆ ಬಗ್ಗೆ ಜಾಸ್ತಿ ಯೋಚಿಸಿ. ಆಗ ತೃಪ್ತಿ ಪಡ್ಕೊಳ್ತೀರ, ಖುಷಿಯಾಗಿ ಇರ್ತೀರ.—ಕೀರ್ತ. 16:5, 6.

ಸಂತೃಪ್ತಿ ಬೆಳೆಸ್ಕೊಳ್ಳೋಕೆ ಈ ವಿಷ್ಯಗಳು ಹೇಗೆ ಸಹಾಯ ಮಾಡುತ್ತೆ?

  • ಕೃತಜ್ಞತೆ

  • ದೀನತೆ

  • ದೇವರ ಆಳ್ವಿಕೆಯ ನಿರೀಕ್ಷೆ

ಗೀತೆ 118 “ಹೆಚ್ಚು ನಂಬಿಕೆಯನ್ನು ಕೊಡು”

a ಉದಾಹರಣೆಗೆ, jw.orgಯಲ್ಲಿ ಯೆಹೋವನು ದೀನರ ಕಾಳಜಿ ವಹಿಸ್ತಾನೆ ಮತ್ತು ಸೊಕ್ಕಿಂದ ಸರ್ವನಾಶ ಅನ್ನೋ ಮಾರ್ನಿಂಗ್‌ ವರ್ಶಿಪ್‌ ವಿಡಿಯೋಗಳನ್ನ ನೋಡಿ.

b ಚಿತ್ರ ವಿವರಣೆ: ಸಂಘಟನೆಯ ಕಟ್ಟಡದಲ್ಲಿ ಒಬ್ಬ ಸಹೋದರ ಮೆಂಟೆನೆನ್ಸ್‌ ಕೆಲ್ಸ ಮಾಡ್ತಿದ್ದಾರೆ, ಸನ್ನೆ ಭಾಷೆ ಕಲ್ತಿರೋ ಒಬ್ಬ ಸಹೋದರಿ ತಮ್ಮ ಅನುಭವನ ಸಮ್ಮೇಳನದಲ್ಲಿ ಹೇಳ್ತಿದ್ದಾರೆ ಮತ್ತು ಒಬ್ಬ ಸಹೋದರ ಸಾರ್ವಜನಿಕ ಭಾಷಣ ಕೊಡ್ತಿದ್ದಾನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ