ಇದನ್ನ ಮಾಡಿ ನೋಡಿ!
ಮಾರ್ಜಿನಲ್ ರೆಫರೆನ್ಸ್ ಬಳಸಿ
ಪವಿತ್ರ ಬೈಬಲ್ ಹೊಸಲೋಕ ಭಾಷಾಂತರದಲ್ಲಿ ಮಾರ್ಜಿನಲ್ ರೆಫರೆನ್ಸ್ ಇದೆ. ಇವು ಒಂದು ವಚನದಲ್ಲಿರೋ ವಿಷ್ಯ ಬೇರೆ ಯಾವ ವಚನದಲ್ಲಿದೆ ಅಂತ ತೋರಿಸುತ್ತೆ. ಜೊತೆಗೆ, ಆ ವಿಷ್ಯದ ಬಗ್ಗೆ ಹೆಚ್ಚಿನ ವಿವರ ಕೊಡುತ್ತೆ. ವಚನಗಳಲ್ಲಿರೋ ಚಿಕ್ಕ ಇಂಗ್ಲಿಷ್ ಅಕ್ಷರಗಳೇ ಮಾರ್ಜಿನಲ್ ರೆಫರೆನ್ಸ್ ಆಗಿದೆ. ಮುದ್ರಿತ ಬೈಬಲಿನ ಪುಟದ ಮಧ್ಯಭಾಗದಲ್ಲಿ ನೀವು ಈ ಅಕ್ಷರಗಳು ಸೂಚಿಸೋ ಸಂಬಂಧಿಸಿದ ವಚನಗಳನ್ನ ನೋಡಬಹುದು. jw.org ವೆಬ್‌ಸೈಟ್ ಮತ್ತು JW ಲೈಬ್ರರಿ ಆ್ಯಪ್‌ನಲ್ಲಿ ವಚನದಲ್ಲಿರೋ ಇಂಗ್ಲಿಷ್ ಅಕ್ಷರದ ಮೇಲೆ ಕ್ಲಿಕ್ ಮಾಡಿದ್ರೆ ಸಂಬಂಧಿಸಿದ ವಚನಗಳು ನಿಮಗೆ ಸಿಗುತ್ತವೆ.
ಮಾರ್ಜಿನಲ್ ರೆಫರೆನ್ಸ್‌ನಿಂದ ತುಂಬ ಪ್ರಯೋಜ್ನ ಇದೆ. ಅದ್ರಲ್ಲಿ ಕೆಲವು:
ಅದೇ ಘಟನೆಗಳು: ಈ ವಚನಗಳಲ್ಲಿ ಅದೇ ಘಟನೆ ಬಗ್ಗೆ ಇರೋ ಬೇರೆ ವಚನಗಳನ್ನ ನೋಡಬಹುದು. ಉದಾಹರಣೆಗೆ, 2 ಸಮುವೇಲ 24:1 ಮತ್ತು 1 ಪೂರ್ವಕಾಲವೃತ್ತಾಂತ 21:1 ನೋಡಿ.
ಹೇಳಿಕೆಗಳು: ಈ ವಚನಗಳು ಆ ಹೇಳಿಕೆಯನ್ನ ಮೊದಲು ಎಲ್ಲಿ ಹೇಳಲಾಗಿತ್ತು ಅಂತ ತೋರಿಸುತ್ತೆ. ಉದಾಹರಣೆಗೆ, ಮತ್ತಾಯ 4:4 ಮತ್ತು ಧರ್ಮೋಪದೇಶಕಾಂಡ 8:3 ನೋಡಿ.
ನೆರವೇರಿದ ಭವಿಷ್ಯವಾಣಿ: ಈ ವಚನಗಳು ಭವಿಷ್ಯವಾಣಿಗಳು ಹೇಗೆ ನೆರವೇರಿದವು ಅಂತ ತೋರಿಸುತ್ತೆ. ಉದಾಹರಣೆಗೆ, ಮತ್ತಾಯ 21:5 ಮತ್ತು ಜೆಕರ್ಯ 9:9 ನೋಡಿ.