ಬೈಬಲ್ ನುಡಿಮುತ್ತು
ಯೇಸು “ಆಜ್ಞೆ ಪಾಲಿಸೋದನ್ನ ಕಲಿತ್ಕೊಂಡ!”
ಯೇಸು ಮೊದ್ಲಿಂದಾನೂ ಯೆಹೋವ ಹೇಳೋದನ್ನ ಪಾಲಿಸ್ತಾ ಬಂದಿದ್ದಾನೆ. (ಯೋಹಾ. 8:29) ಹೀಗಿರುವಾಗ ಯೇಸು “ತಾನು ಪಟ್ಟ ಕಷ್ಟಗಳನ್ನ ಸಹಿಸ್ಕೊಂಡು ಆಜ್ಞೆ ಪಾಲಿಸೋದನ್ನ ಕಲಿತ್ಕೊಂಡ” ಅಂತ ಬೈಬಲ್ ಯಾಕೆ ಹೇಳಿದೆ?—ಇಬ್ರಿ. 5:8.
ಯೇಸು ಭೂಮಿಲಿದ್ದಾಗ ಹೆಜ್ಜೆ-ಹೆಜ್ಜೆಗೂ ಸಮಸ್ಯೆಗಳನ್ನ ಎದುರಿಸಿದನು. ಆದ್ರೆ ಅದ್ಯಾವುದು ಸ್ವರ್ಗದಲ್ಲಿ ಇರಲಿಲ್ಲ. ದೇವ್ರ ಮೇಲೆ ಭಕ್ತಿ ಇದ್ದ ಹೆತ್ತವ್ರೇ ಅವನನ್ನ ಬೆಳಸಿದ್ರೂ ಅವರು ಅಪರಿಪೂರ್ಣರಾಗಿದ್ರು. (ಲೂಕ 2:51) ಭ್ರಷ್ಟ ಧಾರ್ಮಿಕ ಗುರುಗಳು ಅವನಿಗೆ ಹಿಂಸೆ ಕೊಡ್ತಿದ್ರು, ಅಧಿಕಾರಿಗಳೇ ಅವನಿಗೆ ಅನ್ಯಾಯ ಮಾಡಿದ್ರು. (ಮತ್ತಾ. 26:59; ಮಾರ್ಕ 15:15) ಆದ್ರೆ ಯೇಸು ಇದನ್ನೆಲ್ಲ ತಾಳ್ಕೊಂಡು “ತನ್ನನ್ನ ತಗ್ಗಿಸ್ಕೊಂಡನು. ಎಷ್ಟರ ಮಟ್ಟಿಗೆ ವಿಧೇಯತೆ ತೋರಿಸಿದನಂದ್ರೆ ಸಾವನ್ನೂ ಸಹಿಸ್ಕೊಂಡನು” ಅಂತ ಬೈಬಲ್ ಹೇಳುತ್ತೆ.—ಫಿಲಿ. 2:8.
ಈ ಎಲ್ಲಾ ವಿಷ್ಯಗಳು ಯೇಸುಗೆ ಭೂಮಿಲಿ ಜಾಸ್ತಿ ವಿಧೇಯತೆ ತೋರಿಸೋಕೆ ಕಲಿಸ್ತು. ಹಾಗಾಗಿ ಯೇಸು, ನಮ್ಮ ಕಷ್ಟ ನೋವನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋ ಒಬ್ಬ ಒಳ್ಳೆ ರಾಜ ಮತ್ತು ಮಹಾ ಪುರೋಹಿತನಾದನು. (ಇಬ್ರಿ. 4:15; 5:9) ಎಲ್ಲಾ ಕಷ್ಟಗಳನ್ನ ತಾಳ್ಕೊಂಡು ವಿಧೇಯತೆ ಕಲ್ತಿದ್ರಿಂದ ಯೆಹೋವನ ಕಣ್ಣಲ್ಲಿ ಯೇಸುಗೆ ತುಂಬ ಬೆಲೆ ಸಿಕ್ತು. ಯೆಹೋವನ ಕಣ್ಣಲ್ಲಿ ನಮಗೂ ಬೆಲೆ ಸಿಗಬೇಕಂದ್ರೆ ನಾವೇನು ಮಾಡಬೇಕು? ನಮಗೆ ಯಾವುದೇ ನೇಮಕ ಸಿಕ್ಕಿದ್ರೂ, ಅದೆಷ್ಟೇ ಕಷ್ಟಗಳಿದ್ರೂ ಕೊನೆವರೆಗೂ ಯೇಸು ತರಾನೇ ತಾಳ್ಕೊಬೇಕು, ವಿಧೇಯತೆ ತೋರಿಸಬೇಕು.—ಯಾಕೋ. 1:4.