ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ಅಕ್ಟೋಬರ್‌ ಪು. 30-31
  • ಆಡಳಿತ ಮಂಡಲಿಯ ಇಬ್ರು ಹೊಸ ಸದಸ್ಯರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಡಳಿತ ಮಂಡಲಿಯ ಇಬ್ರು ಹೊಸ ಸದಸ್ಯರು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಅನುರೂಪ ಮಾಹಿತಿ
  • ಆಡಳಿತ ಮಂಡಲಿಯ ಇಬ್ರು ಹೊಸ ಸದಸ್ಯರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ ಅಂದರೆ ಏನು?
    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
  • ಆಡಳಿತ ಮಂಡಲಿಯ ಹೊಸ ಸದಸ್ಯ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಆಡಳಿತ ಮಂಡಲಿಯ ಹೊಸ ಸದಸ್ಯರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ಅಕ್ಟೋಬರ್‌ ಪು. 30-31

ಆಡಳಿತ ಮಂಡಲಿಯ ಇಬ್ರು ಹೊಸ ಸದಸ್ಯರು

ಅಕ್ಟೋಬರ್‌ 5, 2024ರ ವಾರ್ಷಿಕ ಕೂಟದಲ್ಲಿ ನಮ್ಮೆಲ್ರಿಗೂ ಖುಷಿ ಆಗೋ ಒಂದು ಪ್ರಕಟಣೆ ಮಾಡಲಾಯ್ತು. ಸಹೋದರ ಜೋಡಿ ಜೆಡೆಲೆ ಮತ್ತು ಜೇಕಬ್‌ ರಂಫ್‌ ಅವ್ರನ್ನ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಹೊಸ ಸದಸ್ಯರಾಗಿ ನೇಮಿಸಲಾಯ್ತು. ಇವರಿಬ್ರು ತುಂಬ ವರ್ಷಗಳಿಂದ ಯೆಹೋವನಿಗೆ ನಿಯತ್ತಾಗಿ ಸೇವೆ ಮಾಡ್ತಿದ್ದಾರೆ.

ಜೋಡಿ ಜೆಡೆಲೆ ಮತ್ತು ಅವ್ರ ಹೆಂಡತಿ ದಮರೀಸ್‌

ಸಹೋದರ ಜೋಡಿ ಜೆಡೆಲೆ ಅಮೆರಿಕಾದ ಮಿಸೌರಿ ಅನ್ನೋ ಊರಿನಲ್ಲಿ ಹುಟ್ಟಿದ್ರು, ಸತ್ಯದಲ್ಲೇ ಬೆಳೆದ್ರು. ಅವ್ರಿದ್ದ ಊರಲ್ಲಿ ಜಾಸ್ತಿ ಯೆಹೋವನ ಸಾಕ್ಷಿಗಳಿರಲಿಲ್ಲ. ಹಾಗಾಗಿ ಬೇರೆಬೇರೆ ಊರಿಂದ ಯೆಹೋವನ ಸಾಕ್ಷಿಗಳು ಬಂದು ಇಲ್ಲಿ ಸಿಹಿಸುದ್ದಿ ಸಾರುತ್ತಾ ಇದ್ರು. ಅವ್ರ ಪ್ರೀತಿ ಮತ್ತು ಐಕ್ಯತೆ ಜೆಡೆಲೆಯವ್ರ ಮನಸ್ಸು ಮುಟ್ತು. ಅದಕ್ಕೆ ಇವ್ರಿನ್ನೂ ಚಿಕ್ಕವ್ರಾಗಿರುವಾಗಲೇ ಅಂದ್ರೆ ಅಕ್ಟೋಬರ್‌ 15, 1983ರಲ್ಲಿ ದೀಕ್ಷಾಸ್ನಾನ ತಗೊಂಡ್ರು. ಸೇವೆನ ತುಂಬ ಎಂಜಾಯ್‌ ಮಾಡ್ತಿದ್ರು. ಹೈ ಸ್ಕೂಲ್‌ ಮುಗಿದ ಮೇಲೆ ಸೆಪ್ಟೆಂಬರ್‌ 1989ರಲ್ಲಿ ರೆಗ್ಯುಲರ್‌ ಪಯನೀಯರ್‌ ಸೇವೆ ಶುರು ಮಾಡಿದ್ರು.

ಸಹೋದರ ಜೆಡೆಲೆ ಅವ್ರ ಅಪ್ಪಅಮ್ಮ, ಜೆಡೆಲೆನ ಮತ್ತು ಅವ್ರ ತಂಗಿನ ಚಿಕ್ಕವ್ರಿದ್ದಾಗ ಬೆತೆಲ್‌ ನೋಡೋಕಂತ ಆಗಾಗ ಕರ್ಕೊಂಡು ಹೋಗ್ತಿದ್ರು. ಇದ್ರಿಂದ ಇವ್ರಿಬ್ರಿಗೂ ‘ನಾವೂ ದೊಡ್ಡವ್ರಾದ ಮೇಲೆ ಬೆತೆಲ್‌ಗೆ ಹೋಗಬೇಕು’ ಅನ್ನೋ ಆಸೆ ಬಂತು. ಅವರು ಆಸೆ ಪಟ್ಟ ತರಾನೇ ಇಬ್ರೂ ಬೆತೆಲ್‌ಗೆ ಬಂದ್ರು. ಜೆಡೆಲೆ ಸೆಪ್ಟೆಂಬರ್‌ 1990ರಲ್ಲಿ ವಾಲ್‌ಕಿಲ್‌ ಬೆತೆಲ್‌ಗೆ ಬಂದ್ರು. ಮೊದಲು ಅವರು ಕ್ಲೀನಿಂಗ್‌ ಡಿಪಾರ್ಟ್ಮೆಂಟ್‌ನಲ್ಲಿ ಆಮೇಲೆ ಮೆಡಿಕಲ್‌ ಸರ್ವಿಸ್‌ನಲ್ಲಿ ಕೆಲಸ ಮಾಡಿದ್ರು.

ಆ ಸಮಯದಲ್ಲಿ ಸ್ಪ್ಯಾನಿಷ್‌ ಭಾಷೆಯ ಸಭೆಗಳು ಆಗಷ್ಟೇ ಪ್ರಗತಿ ಆಗ್ತಾ ಇದ್ವು ಮತ್ತು ಆ ಸಭೆಗಳಿಗೆ ಸಹೋದರರ ಅಗತ್ಯ ಇತ್ತು. ಅದಕ್ಕೆ ಜೆಡೆಲೆ ಸ್ಪ್ಯಾನಿಷ್‌ ಸಭೆಗೆ ಹೋಗಿ ಆ ಭಾಷೆ ಕಲಿಯೋಕೆ ಶುರು ಮಾಡಿದ್ರು. ಸ್ವಲ್ಪ ಸಮಯ ಆದ್ಮೇಲೆ ಅದೇ ಸರ್ಕಿಟ್‌ನಲ್ಲಿ ಪಯನೀಯರ್‌ ಸೇವೆ ಮಾಡ್ತಿದ್ದ ದಮರೀಸ್‌ ಅನ್ನೋ ಸಹೋದರಿಯನ್ನ ಭೇಟಿ ಮಾಡಿದ್ರು. ಆಮೇಲೆ ಇವ್ರಿಬ್ರು ಮದುವೆ ಆದ್ರು. ಸಹೋದರಿನೂ ಆಮೇಲೆ ಬೆತೆಲಿಗೆ ಬಂದ್ರು.

2005ರಲ್ಲಿ ಅವ್ರ ಅಪ್ಪಅಮ್ಮನ ನೋಡ್ಕೊಳ್ಳೋಕೆ ಅಂತ ಬೆತೆಲನ್ನ ಬಿಟ್ರು. ಆ ಟೈಮಲ್ಲಿ ಅವರು ರೆಗ್ಯುಲರ್‌ ಪಯನೀಯರ್‌ ಸೇವೆ ಮಾಡ್ತಿದ್ರು. ಬ್ರದರ್‌ ಜೆಡೆಲೆ ಪಯನೀಯರ್‌ ಸೇವಾ ಶಾಲೆಯ ಬೋಧಕರಾಗಿ ಸಹಾಯ ಮಾಡಿದ್ರು. ಅಷ್ಟೇ ಅಲ್ಲ ಹಾಸ್ಪಿಟಲ್‌ ಲಿಏಸಾನ್‌ ಕಮಿಟಿ (ಹೆಚ್‌.ಎಲ್‌.ಸಿ) ಮತ್ತು ರೀಜನಲ್‌ ಬಿಲ್ಡಿಂಗ್‌ ಕಮಿಟಿಯಲ್ಲೂ ಸೇವೆ ಮಾಡ್ತಿದ್ರು.

2013ರಲ್ಲಿ ಜೆಡೆಲೆ ಮತ್ತು ಅವ್ರ ಹೆಂಡತಿನ ವಾರ್ವಿಕ್‌ ಕಟ್ಟಡ ನಿರ್ಮಾಣ ಕೆಲಸದಲ್ಲಿ ಸಹಾಯ ಮಾಡೋಕೆ ಅಂತ ಬೆತೆಲಿಗೆ ವಾಪಸ್‌ ಕರೆದ್ರು. ಅವಾಗಿಂದ ಪ್ಯಾಟರ್‌ಸನ್‌ ಮತ್ತು ವಾಲ್‌ಕಿಲ್‌ ಬೆತೆಲಿನಲ್ಲಿ ಇವರು ಸೇವೆ ಮಾಡ್ತಿದ್ದಾರೆ. ಜೆಡೆಲೆ, ಸ್ಥಳೀಯ ಕಟ್ಟಡ ವಿನ್ಯಾಸ/ನಿರ್ಮಾಣ ಮತ್ತು ಹಾಸ್ಪಿಟಲ್‌ ಇನ್ಫಾರ್ಮೇಷನ್‌ ಸರ್ವಿಸ್‌ ಅನ್ನೋ ಡಿಪಾರ್ಟ್ಮೆಂಟ್‌ಗಳಲ್ಲಿ ಸೇವೆ ಮಾಡಿದ್ರು. ಮಾರ್ಚ್‌ 2023ರಲ್ಲಿ ಇವ್ರನ್ನ ಸರ್ವಿಸ್‌ ಕಮಿಟಿಯ ಸಹಾಯಕರಾಗಿ ನೇಮಿಸಲಾಯ್ತು. ತಮಗೆ ಸಿಕ್ಕ ಆ ಎಲ್ಲಾ ನೇಮಕಗಳನ್ನ ನೆನಸ್ಕೊಂಡು ಅವರು ಹೀಗೆ ಹೇಳ್ತಾರೆ: “ಹೊಸ ನೇಮಕಗಳು ಸಿಕ್ಕಾಗ ಭಯ ಆಗುತ್ತೆ ನಿಜ. ಆದ್ರೆ ಏನೇ ಆದ್ರೂ ಯೆಹೋವನ ಮೇಲೆ ಆತ್ಕೊಳ್ಳೋದನ್ನ ಮರಿಬಾರದು. ಯಾಕಂದ್ರೆ ನಾವು ಏನಾಗಬೇಕು ಅಂತ ಯೆಹೋವ ಇಷ್ಟಪಡ್ತಾನೋ ಹಾಗೇ ಆಗೋ ತರ ಆತನೇ ಮಾಡ್ತಾನೆ.”

ಜೇಕಬ್‌ ರಂಫ್‌ ಮತ್ತು ಅವ್ರ ಹೆಂಡತಿ ಇಂಗಾ

ಸಹೋದರ ರಂಫ್‌ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಹುಟ್ಟಿದ್ರು. ಅವರು ಚಿಕ್ಕವರಿದ್ದಾಗ ಅವ್ರ ಅಮ್ಮ ಸತ್ಯದಿಂದ ದೂರ ಹೋದ್ರು. ಆದ್ರೂ ಬೈಬಲ್‌ ಸತ್ಯಗಳನ್ನ ಸಹೋದರ ರಂಫ್‌ಗೆ ಕಲಿಸ್ತಿದ್ರು. ರಂಫ್‌ನ ಅಜ್ಜಿ ತುಂಬ ನಿಯತ್ತಾಗಿ ಸೇವೆ ಮಾಡ್ತಿದ್ರು, ಆ ಅಜ್ಜಿನ ನೋಡೋಕಂತ ಪ್ರತಿ ವರ್ಷ ರಂಫ್‌ ಹೋಗ್ತಿದ್ರು. ಅಜ್ಜಿ ಇವ್ರ ಹತ್ರ ಬೈಬಲ್‌ ಸತ್ಯಗಳ ಬಗ್ಗೆ ಮಾತಾಡ್ತಿದ್ರು. ಇದು ರಂಫ್‌ಗೆ ತುಂಬ ಇಷ್ಟ ಆಯ್ತು, ಅದಕ್ಕೇ 13 ವರ್ಷ ಇದ್ದಾಗ, ‘ನನಗೆ ಬೈಬಲ್‌ ಬಗ್ಗೆ ಕಲಿಯೋಕೆ ಆಸಕ್ತಿ ಇದೆ’ ಅಂತ ಹೇಳಿದ್ರು. ಸೆಪ್ಟೆಂಬರ್‌ 27, 1992ರಲ್ಲಿ ದೀಕ್ಷಾಸ್ನಾನ ತಗೊಂಡ್ರು. ಆಮೇಲೆ ಅವ್ರ ಅಮ್ಮ ವಾಪಸ್‌ ಸತ್ಯಕ್ಕೆ ಬಂದ್ರು. ಅಷ್ಟೇ ಅಲ್ಲ, ಅವ್ರ ಕುಟುಂಬದಲ್ಲಿ ಉಳಿದವ್ರೆಲ್ಲ ಬೈಬಲ್‌ ಬಗ್ಗೆ ಕಲಿತು ದೀಕ್ಷಾಸ್ನಾನ ತಗೊಂಡ್ರು.

ರಂಫ್‌ ಚಿಕ್ಕವ್ರಿದ್ದಾಗ, ಪಯನೀಯರ್‌ಗಳು ಎಷ್ಟು ಖುಷಿಯಾಗಿದ್ದಾರೆ ಅಂತ ನೋಡ್ತಿದ್ರು. ಅದಕ್ಕೆ ಸ್ಕೂಲ್‌ ಮುಗಿದ ಮೇಲೆ ಸೆಪ್ಟೆಂಬರ್‌ 1995ರಲ್ಲಿ ಪಯನೀಯರ್‌ ಸೇವೆ ಶುರು ಮಾಡಿದ್ರು. ಇಸವಿ 2000ದಲ್ಲಿ, ಅಗತ್ಯ ಇರೋ ಕಡೆ ಸೇವೆ ಮಾಡಬೇಕಂತ ಈಕ್ವೆಡಾರ್‌ಗೆ ಹೋದ್ರು. ಅಲ್ಲಿ ಇಂಗಾ ಅನ್ನೋ ಪಯನೀಯರ್‌ ಸಹೋದರಿಯನ್ನ ಭೇಟಿಯಾದ್ರು. ಅವರು ಕೆನಡಾದವರು, ಆಮೇಲೆ ಇವ್ರಿಬ್ರು ಮದುವೆ ಆದ್ರು. ಮದುವೆ ಆದ್ಮೇಲೆ ಅಲ್ಲೇ ಈಕ್ವೆಡಾರ್‌ನಲ್ಲಿದ್ದ ಕಮ್ಮಿ ಪ್ರಚಾರಕರಿರೋ ಗುಂಪಲ್ಲಿ ಸೇವೆ ಮಾಡೋಕೆ ಶುರು ಮಾಡಿದ್ರು. ಈಗ ಅದು ತುಂಬ ದೊಡ್ಡ ಸಭೆ ಆಗಿದೆ.

ರಂಫ್‌ ಮತ್ತು ಅವ್ರ ಹೆಂಡ್ತಿ ಇಂಗಾಗೆ ವಿಶೇಷ ಪಯನೀಯರಾಗಿ ನೇಮಕ ಸಿಕ್ತು. ಆಮೇಲೆ ಅವರು ಸರ್ಕಿಟ್‌ ಕೆಲಸಾನೂ ಮಾಡಿದ್ರು. 2011ರಲ್ಲಿ, ಇವ್ರಿಗೆ 132ನೇ ಗಿಲ್ಯಡ್‌ ಶಾಲೆಗೆ ಆಮಂತ್ರಣ ಸಿಕ್ತು. ಗಿಲ್ಯಡ್‌ ಆದ್ಮೇಲೆ ಇವರು ಬೇರೆಬೇರೆ ಊರಲ್ಲಿ, ಬೇರೆಬೇರೆ ರೀತಿಯಲ್ಲಿ ಸೇವೆ ಮಾಡಿದ್ರು. ಉದಾಹರಣೆಗೆ, ಬೆತೆಲ್‌ ಸೇವೆ, ಮಿಷನರಿ ಕೆಲಸ ಮತ್ತು ಸರ್ಕಿಟ್‌ ಕೆಲಸಾನೂ ಮಾಡಿದ್ರು. ಅಷ್ಟೇ ಅಲ್ಲ ರಂಫ್‌ಗೆ ರಾಜ್ಯ ಪ್ರಚಾರಕರ ಶಾಲೆಯ ಶಿಕ್ಷಕನಾಗೋ ಸುಯೋಗನೂ ಸಿಕ್ತು.

ಕೋವಿಡ್‌ ಇದ್ದಿದ್ರಿಂದ ಇವ್ರಿಬ್ರು ವಾಪಸ್‌ ಅಮೆರಿಕಾಗೆ ಹೋದ್ರು. ಆಮೇಲೆ ಇವ್ರಿಗೆ ವಾಲ್‌ಕಿಲ್‌ ಬೆತೆಲಿಗೆ ಆಮಂತ್ರಣ ಸಿಕ್ತು. ಅಲ್ಲಿ ರಂಫ್‌ಗೆ ಸರ್ವಿಸ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡೋಕೆ ತರಬೇತಿ ಸಿಕ್ತು. ಸ್ವಲ್ಪ ಸಮಯ ಆದ್ಮೇಲೆ ಈಕ್ವೆಡಾರ್‌ ಬ್ರಾಂಚ್‌ಗೆ ಇವರು ವಾಪಸ್‌ ಹೋದ್ರು, ಅಲ್ಲಿ ಬ್ರಾಂಚ್‌ ಕಮಿಟಿಯ ಸದಸ್ಯರಾಗಿ ಸೇವೆ ಮಾಡಿದ್ರು. 2023ರಲ್ಲಿ ವಾಪಸ್‌ ವಾರ್ವಿಕ್‌ಗೆ ಹೋದ್ರು. ಜನವರಿ 2024ರಲ್ಲಿ ಸಹೋದರ ರಂಫ್‌ನ ಸರ್ವಿಸ್‌ ಕಮಿಟಿಯ ಸಹಾಯಕರಾಗಿ ನೇಮಿಸಲಾಯ್ತು. ಇಷ್ಟು ವರ್ಷ ಮಾಡ್ತಿರೋ ಸೇವೆನ ನೆನಸ್ಕೊಂಡು ಅವರು ಹೀಗೆ ಹೇಳ್ತಾರೆ, “ಒಂದು ನೇಮಕನ ಸ್ಪೆಷಲ್‌ ಮಾಡೋದು ನಾವಿರೋ ಜಾಗ ಅಲ್ಲ, ಬದಲಿಗೆ ನಮ್ಮ ಜೊತೆ ಸೇವೆ ಮಾಡ್ತಿರೋ ಸಹೋದರ ಸಹೋದರಿಯರೇ.”

ಈ ಸಹೋದರರು ಮಾಡ್ತಿರೋ ಕೆಲಸವನ್ನ ನಾವು ತುಂಬ ಮೆಚ್ಚಿಕೊಳ್ತೀವಿ ಮತ್ತು ಅವ್ರನ್ನ ‘ಅಮೂಲ್ಯವಾಗಿ ನೋಡ್ತೀವಿ.’—ಫಿಲಿ. 2:29.

ಈಗ ಆಡಳಿತ ಮಂಡಲಿಯಲ್ಲಿ 11 ಸಹೋದರರಿದ್ದಾರೆ. ಅವ್ರ ಹೆಸರುಗಳು: ಕೆನೆತ್‌ ಕುಕ್‌, ಗೇಜ್‌ ಫ್ಲೀಗಲ್‌, ಸ್ಯಾಮ್ಯೆಲ್‌ ಹರ್ಡ್‌, ಜೆಫ್ರೀ ಜ್ಯಾಕ್ಸನ್‌, ಜೋಡಿ ಜೆಡೆಲೆ, ಸ್ಟೀಫನ್‌ ಲೆಟ್‌, ಗೆರಿಟ್‌ ಲಾಶ್‌, ಜೇಕಬ್‌ ರಂಫ್‌, ಮಾರ್ಕ್‌ ಸ್ಯಾಂಡರ್ಸನ್‌, ಡೇವಿಡ್‌ ಸ್ಪ್ಲೇನ್‌ ಮತ್ತು ಜೆಫ್ರಿ ವಿಂಡರ್‌.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ