ನಿಮಗೆ ನೆನಪಿದೆಯಾ?
ಈ ವರ್ಷದ ಕಾವಲಿನಬುರುಜು ಪತ್ರಿಕೆಗಳನ್ನ ಚೆನ್ನಾಗಿ ಓದಿದ್ದೀರಾ? ಹಾಗಾದ್ರೆ ಈ ಪ್ರಶ್ನೆಗಳಿಗೆ ಉತ್ರ ಕೊಡ್ತೀರಾ?
ನಾವು ಯೆಹೋವನಿಗೆ ಯಾಕೆ ಗೌರವ ಕೊಡಬೇಕು?
ಯಾಕಂದ್ರೆ (1) ಇಡೀ ವಿಶ್ವದಲ್ಲಿ ಯೆಹೋವನ ತರ ಬೇರೆ ಯಾರೂ ಇಲ್ಲ. (2) ಆತನನ್ನ ನಾವು ತುಂಬ ಪ್ರೀತಿಸ್ತೀವಿ. (3) ಎಲ್ರೂ ಯೆಹೋವನ ಬಗ್ಗೆ ಸತ್ಯ ತಿಳ್ಕೊಬೇಕು ಅಂತ ಆಸೆ ಪಡ್ತೀವಿ.—w25.01 ಪು. 3.
ಯಾರಾದ್ರೂ ನಮಗೆ ನೋವು ಮಾಡಿದ್ರೆ ನಾವು ಹೇಗೆ ಕ್ಷಮಿಸಬಹುದು?
ಆದ ನೋವನ್ನ ನಾವು ಮರೆಯೋದು ಅಷ್ಟು ಸುಲಭ ಅಲ್ಲ. ಹಾಗಂತ ನಾವು ಕೋಪದಿಂದ ಕುದಿಯಲ್ಲ ಮತ್ತು ಮನಸ್ತಾಪನ ಮುಂದುವರಿಸಲ್ಲ. ನಾವು ಕ್ಷಮಿಸ್ತೀವಿ, ಹೀಗೆ ಮಾಡೋದ್ರಿಂದ ಆಗೋ ತೊಂದ್ರೆನ ಕಡಿಮೆ ಮಾಡ್ತೀವಿ.—w25.02 ಪುಟ 15-16.
ಮಾರ್ಕ, ಯುವ ಸಹೋದರರಿಗೆ ಒಳ್ಳೆ ಮಾದರಿ ಅಂತ ಯಾಕೆ ಹೇಳಬಹುದು?
ಮಾರ್ಕ, ಯೆಹೋವನ ಸೇವೆ ಮಾಡೋಕೆ ಮುಂದೆ ಬಂದ. ಅವನಿಗೆ ಕೆಲವೊಮ್ಮೆ ನೋವಾದ್ರೂ ಬೇಜಾರಾದ್ರೂ ಅವನು ಸೇವೆ ಮಾಡೋದನ್ನ ನಿಲ್ಲಿಸಿಬಿಡಲಿಲ್ಲ. ಪೌಲ ಮತ್ತು ಬೇರೆ ಸಹೋದರರ ಜೊತೆ ಅವನು ಒಳ್ಳೆ ಸ್ನೇಹ ಬೆಳೆಸಿಕೊಂಡ.—w25.04 ಪು. 27.
ಯೇಸು ತನ್ನ ಪ್ರಾರ್ಥನೆಯಲ್ಲಿ “ನಾನು ನಿನ್ನ ಹೆಸ್ರನ್ನ ಇವ್ರಿಗೆ ಚೆನ್ನಾಗಿ ಹೇಳಿ ಕೊಟ್ಟಿದ್ದೀನಿ” ಅಂತ ಹೇಳಿದನು. ಇದ್ರ ಅರ್ಥ ಏನು? (ಯೋಹಾನ 17:26)
ಯೇಸುವಿನ ಶಿಷ್ಯರಿಗೆ ಯೆಹೋವನ ಹೆಸರು ಈಗಾಗ್ಲೇ ಗೊತ್ತಿತ್ತು. ಆದ್ರೆ ಯೇಸು, ಯೆಹೋವ ಎಂಥ ದೇವರು ಅಂತ ಹೇಳ್ಕೊಟ್ಟನು. ಅಂದ್ರೆ ಯೆಹೋವನ ವ್ಯಕ್ತಿತ್ವ ಎಂಥದ್ದು, ಆತನ ಉದ್ದೇಶ ಏನು, ಆತನು ಏನೆಲ್ಲಾ ಮಾಡ್ತಾನೆ ಮತ್ತು ಆತನಲ್ಲಿ ಯಾವೆಲ್ಲ ಗುಣಗಳಿವೆ ಅಂತ ವಿವರಿಸಿದನು.—w25.05 ಪು. 20-21.
ನಾವು ದೀನರಾಗಿದ್ರೆ ಏನನ್ನ ಅರ್ಥ ಮಾಡ್ಕೊಳ್ತೀವಿ?
ನಮಗೆ ದೀನತೆ ಇದ್ರೆ ನಮಗೆ ಕೆಲವು ವಿಷ್ಯಗಳು ಗೊತ್ತಿಲ್ಲ ಅಂತ ಅರ್ಥ ಮಾಡ್ಕೊಳ್ತೀವಿ. ಉದಾಹರಣೆಗೆ, ‘ಅಂತ್ಯ ಯಾವಾಗ ಬರುತ್ತೆ, ಆಗ ಯೆಹೋವ ಏನೆಲ್ಲಾ ಮಾಡ್ತಾನೆ’ ಅಂತ ನಮಗೆ ಗೊತ್ತಿಲ್ಲ. ಜೊತೆಗೆ, ‘ನಾಳೆ ಏನಾಗುತ್ತೆ’ ಮತ್ತು ‘ಯೆಹೋವ ನಮ್ಮನ್ನ ಎಷ್ಟು ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದಾನೆ’ ಅಂತನೂ ನಮಗೆ ಗೊತ್ತಿಲ್ಲ.—w25.06 ಪು. 15-18.
ಸಾರ್ವಜನಿಕ ಭಾಷಣದಿಂದ ಅಥವಾ ಲೇಖನಗಳಿಂದ ಪ್ರಯೋಜನ ಪಡೆಯೋಕೆ ಯಾವುದು ನಮಗೆ ಸಹಾಯ ಮಾಡುತ್ತೆ?
ಕೆಲವು ಪ್ರಶ್ನೆಗಳು ಸಹಾಯ ಮಾಡುತ್ತೆ. ಉದಾಹರಣೆಗೆ: ‘ಸಭಿಕರಿಗೆ ಅರ್ಥ ಮಾಡಿಸೋಕೆ ಆಧಾರಗಳನ್ನ ಹೇಗೆ ಬಳಸಿದ್ರು? ಯಾವ ವಿಧಾನಗಳನ್ನ ಉಪಯೋಗಿಸಿದ್ರು?’ ಜೊತೆಗೆ, ‘ನಾನು ಬೇರೆಯವ್ರಿಗೆ ಚೆನ್ನಾಗಿ ಕಲಿಸೋಕೆ ಇಲ್ಲಿ ಹೇಳಿದ ಯಾವ್ದಾದ್ರೂ ಉದಾಹರಣೆ ಸಹಾಯ ಮಾಡುತ್ತಾ? ಅಥವಾ ಇಲ್ಲಿ ಕಲಿತ ಈ ವಿಷ್ಯ ಯಾರಿಗೆಲ್ಲಾ ಇಷ್ಟ ಆಗಬಹುದು?’—w25.07 ಪು. 19.
ದೇವರು ದಾವೀದನನ್ನ ಕ್ಷಮಿಸಿದನು, ಇದ್ರಿಂದ ನಾವೇನು ಕಲಿಬಹುದು?
ದಾವೀದ ಜೀವನದಲ್ಲಿ ಕೆಲವು ದೊಡ್ಡದೊಡ್ಡ ತಪ್ಪುಗಳನ್ನ ಮಾಡಿದ, ಆದ್ರೆ ಆಮೇಲೆ ಅದನ್ನ ಅರ್ಥ ಮಾಡ್ಕೊಂಡು ಪಶ್ಚಾತ್ತಾಪ ಪಟ್ಟ. ಆಗ ಯೆಹೋವ ದೇವರು ಅವನನ್ನ ಕ್ಷಮಿಸಿದನು. (1 ಅರ. 9:4, 5) ದೇವರು ಒಂದ್ಸಲ ಕ್ಷಮಿಸಿದ್ರೆ, ಇನ್ಯಾವತ್ತೂ ಆ ತಪ್ಪನ್ನ ನೆನಪಿಸ್ಕೊಳ್ಳಲ್ಲ ಅಥವಾ ನಾವು ಆ ತಪ್ಪನ್ನ ಮಾಡೇ ಇಲ್ವೇನೋ ಅನ್ನೋ ತರ ಅದನ್ನ ಮರೆತು ಬಿಡ್ತಾನೆ.—w25.08 ಪು. 17.
ಒಂದು ವಿಷ್ಯ ವಿದ್ಯಾರ್ಥಿಗೆ ಅರ್ಥ ಆಗ್ತಿಲ್ಲಾಂದ್ರೆ ಏನು ಮಾಡಬೇಕು?
ಒಂದು ವಿಷ್ಯದ ಬಗ್ಗೆ ಬೈಬಲಿಂದ ಚೆನ್ನಾಗಿ ವಿವರಿಸಿದ್ರೂ ಅದು ವಿದ್ಯಾರ್ಥಿಗೆ ಅರ್ಥ ಆಗ್ತಿಲ್ಲಾಂದ್ರೆ, ಅದ್ರ ಬಗ್ಗೆನೇ ಜಾಸ್ತಿ ಮಾತಾಡದೆ ಮುಂದಿನ ಪಾಯಿಂಟ್‌ಗೆ ಹೋಗಿ. ಮುಂದೊಂದು ದಿನ ಮತ್ತೆ ಈ ವಿಷ್ಯನ ನೀವು ಅರ್ಥ ಮಾಡಿಸಬಹುದು.—w25.09 ಪು. 24.
ಪಾಪಕ್ಕೆ “ಮೋಸದ ಶಕ್ತಿ” ಇದೆ ಅಂತ ಬೈಬಲ್ ಹೇಳುತ್ತೆ. ಇದ್ರ ಅರ್ಥ ಏನು? (ಇಬ್ರಿ. 3:13)
ಪಾಪ ನಮ್ಮನ್ನ ತಪ್ಪು ಮಾಡೋಕೆ ಒತ್ತಾಯ ಮಾಡುತ್ತೆ. ಅಷ್ಟೇ ಅಲ್ಲ, ಯೆಹೋವ ನಮ್ಮನ್ನ ಪ್ರೀತಿಸ್ತಾನೋ ಇಲ್ವೋ ಅನ್ನೋ ಸಂಶಯನೂ ಹುಟ್ಟಿಸುತ್ತೆ.—w25.10 ಪು. 16.
ನಾವು ಚೆನ್ನಾಗಿ ಪ್ರಾರ್ಥಿಸೋಕೆ ಯಾವ ಮೂರು ಸಲಹೆಗಳು ಸಹಾಯ ಮಾಡುತ್ತೆ?
(1) ಯೆಹೋವನ ಗುಣಗಳ ಬಗ್ಗೆ ಯೋಚಿಸಿ. (2) ಏನು ಹೇಳಬೇಕು ಅಂತ ಯೋಚ್ನೆ ಮಾಡಿ. ಉದಾಹರಣೆಗೆ, ನಿಮಗಿರೋ ಕಷ್ಟದ ಬಗ್ಗೆ, ನೀವು ಯಾರಾನ್ನಾದ್ರೂ ಕ್ಷಮಿಸಬೇಕಿದ್ಯಾ ಅನ್ನೋ ವಿಷ್ಯಗಳ ಬಗ್ಗೆ ಯೋಚ್ನೆ ಮಾಡಿ. (3) ಬೇಗಬೇಗ ಪ್ರಾರ್ಥನೆ ಮಾಡಿ ಮುಗಿಸಬೇಡಿ. ನೀವು ಒಬ್ರೇ ಇದ್ದಾಗ ಸ್ವಲ್ಪ ಜಾಸ್ತಿ ಹೊತ್ತು ಪ್ರಾರ್ಥನೆ ಮಾಡಿದ್ರೆ ನಿಮ್ಮ ಭಾವನೆಗಳನ್ನೆಲ್ಲ ಯೆಹೋವನ ಹತ್ರ ಹೇಳ್ಕೊಬಹುದು.—w25.10 ಪು. 19-20.
ನಾವು ವಯಸ್ಸಾದವ್ರಿಗೆ ಹೇಗೆ ಸಹಾಯ ಮಾಡಬಹುದು?
ನಾವು ವಯಸ್ಸಾದವ್ರನ್ನ ಭೇಟಿ ಮಾಡಬಹುದು ಮತ್ತು ಅವ್ರಿಗೆ ಫೋನ್ ಮಾಡಬಹುದು. ಅವ್ರನ್ನ ಡಾಕ್ಟರ್ ಹತ್ರ ಕರ್ಕೊಂಡು ಹೋಗಬಹುದು. ಅವ್ರ ಜೊತೆ ಬೇರೆಬೇರೆ ವಿಧಾನಗಳಲ್ಲಿ ಸಿಹಿಸುದ್ದಿ ಸಾರಬಹುದು.—w25.11 ಪು. 6-7.
ಒಂದು ಕ್ರೈಸ್ತ ಮದುವೆ ಗೌರವದಿಂದ ನಡೀಬೇಕಾದ್ರೆ ಅದನ್ನ ಹೇಗೆ ಏರ್ಪಡಿಸಬೇಕು?
ಸರ್ಕಾರದ ಯಾವುದಾದ್ರೂ ನಿಯಮ ಇದ್ರೆ ಪಾಲಿಸಬೇಕು. ಮದುವೆಯ ವಾತಾವರಣ ಮತ್ತು ರಿಸೆಪ್ಷನ್ ಪವಿತ್ರಶಕ್ತಿಯ ಗುಣಗಳಿಗೆ ತಕ್ಕಂತೆ ನಡೆಯುವಂತೆ ನೋಡ್ಕೊಳಿ. ನಿಮ್ಮ ಬಟ್ಟೆ ಸಭ್ಯವಾಗಿರಲಿ ಮತ್ತು ಬೈಬಲ್ ತಪ್ಪು ಅನ್ನೋ ಸಂಪ್ರದಾಯಗಳು ಇರದಂತೆ ನೋಡ್ಕೊಳಿ. ಮದುವೆಯ ಏರ್ಪಾಡು ಹೇಗೆ ಇರುತ್ತೆ ಅಂತ ಮೊದ್ಲೇ ಮಾತಾಡ್ಕೊಳಿ.—w25.12, pp. 21-24.