Kim Steele/The Image Bank via Getty Images
ಆರ್ಥಿಕ ಸಮಸ್ಯೆಗಳು—ದೇವರ ಸರ್ಕಾರ ಏನು ಮಾಡುತ್ತೆ?
ಲೋಕದಲ್ಲಿರೋ ಹೆಚ್ಚಿನ ಜನರಿಗೆ ಕೈಗೆ ಸಿಗೋ ದುಡ್ಡಿಂದ ಜೀವನ ಮಾಡೋಕೆ ಕಷ್ಟ ಆಗ್ತಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಹಾಳಾಗ್ತಿದೆ.
ತಿಂಗಳಿಗೆ ಸಿಗ್ತಿರೋ ದುಡ್ಡಿಂದ ಜನರಿಗೆ ಅಗತ್ಯ ವಸ್ತುಗಳನ್ನ ತಗೊಳೋಕೂ ಕಷ್ಟ ಆಗ್ತಿದೆ ಅಂತ ಇತ್ತೀಚಿಗಿನ ಗ್ಲೋಬಲ್ ರಿಪೋರ್ಟ್a ತಿಳಿಸ್ತು. ಇದನ್ನ ಹೀಗೆ ಬಿಟ್ರೆ ಶ್ರೀಮಂತರಿಗೂ ಬಡವರಿಗೂ ಇರೋ ಅಜಗಜಾಂತರ ವ್ಯತ್ಯಾಸ ಎದ್ದುಕಾಣುತ್ತೆ. ಅಷ್ಟೇ ಅಲ್ಲ ಈಗ ಹೇಗೋ ಜೀವನ ನಡೆಸಿಕೊಂಡು ಹೋಗ್ತಿರೋ ಎಷ್ಟೋ ಕುಟುಂಬಗಳಿಗೆ ತುಂಬ ಕಷ್ಟ ಆಗಿಬಿಡುತ್ತೆ.
ಆರ್ಥಿಕ ಬಿಕ್ಕಟ್ಟು ಅನ್ನೋ ದೊಡ್ಡ ಸಮಸ್ಯೆಗೆ ಪರಿಹಾರ ಕೊಡೋಕೆ ಸರ್ಕಾರಗಳಿಂದ ಆಗುತ್ತಾ?
ಆರ್ಥಿಕ ಸಮಸ್ಯೆಯನ್ನ, ಮೇಲು-ಕೀಳು ಅನ್ನೋ ಭಾವನೆಯನ್ನ ತೆಗೆದುಹಾಕೋಕೆ ಸಾಮರ್ಥ್ಯವಿರೋ ಮತ್ತು ಅದನ್ನ ಸರಿ ಮಾಡೋ ಒಂದು ಸರ್ಕಾರ ಬರುತ್ತೆ ಅಂತ ಬೈಬಲ್ ಹೇಳುತ್ತೆ. “ಸ್ವರ್ಗದ ದೇವರು ಒಂದು ಆಡಳಿತ ತರ್ತಾನೆ” ಮತ್ತು ಅದು ಇಡೀ ಭೂಮಿಯ ಸಮಸ್ಯೆಗಳಿಗೆ ಪರಿಹಾರ ಕೊಡುತ್ತೆ ಅಂತಾನೂ ಬೈಬಲ್ ಹೇಳುತ್ತೆ. (ದಾನಿಯೇಲ 2:44) ಈ ಸರ್ಕಾರ ಪ್ರತಿಯೊಬ್ಬರಿಗೂ ಅಂದ್ರೆ ಬಡವರಿಗೂ ಒಳ್ಳೇದು ಮಾಡುತ್ತೆ. ಯಾರನ್ನೂ ಮರೆತು ಬಿಡಲ್ಲ. (ಕೀರ್ತನೆ 9:18) ಜನರು ಹಾಕಿರೋ ಶ್ರಮ ನೀರುಪಾಲಾಗಲ್ಲ, ಅವರಿಗೆ ಒಳ್ಳೇ ಪ್ರತಿಫಲ ಸಿಗುತ್ತೆ. ಜನರು ಖುಷಿಯಾಗಿರೋಕೆ ಏನೆಲ್ಲಾ ಬೇಕೋ ಅದನ್ನೆಲ್ಲ ದೇವರ ಸರ್ಕಾರ ಕೊಡುತ್ತೆ.—ಯೆಶಾಯ 65:21, 22.
a ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಷನ್ ಗ್ಲೋಬಲ್ ವೇಜ್ ರಿಪೋರ್ಟ್ 2022-23