panitan/stock.adobe.com
ಯೇಸು ಬಡತನವನ್ನ ತೆಗೆದುಹಾಕ್ತಾನೆ
ಭೂಮಿಯಲ್ಲಿದ್ದಾಗ ಯೇಸು ಜನರನ್ನ ಮನಸಾರೆ ಪ್ರೀತಿಸಿದನು. ಅದ್ರಲ್ಲೂ ಬಡವ್ರನ್ನ ಮತ್ತು ದಿಕ್ಕಿಲ್ಲದವ್ರನ್ನ ತುಂಬ ಪ್ರೀತಿಸಿದನು. (ಮತ್ತಾಯ 9:36) ಜನ್ರಿಗೆ ತನ್ನ ಪ್ರಾಣವನ್ನೇ ಕೊಡುವಷ್ಟರ ಮಟ್ಟಿಗೆ ಯೇಸು ಅವ್ರನ್ನ ಪ್ರೀತಿಸಿದನು. (ಮತ್ತಾಯ 20:28; ಯೋಹಾನ 15:13) ದೇವರ ಸರ್ಕಾರದ ರಾಜನಾಗಿರೋ ಯೇಸು ತನ್ನ ಅಧಿಕಾರವನ್ನ ಬಳಸಿ ಭೂಮಿಯ ಎಲ್ಲ ಕಡೆ ಬಡತನವನ್ನ ತೆಗೆದು ಹಾಕೋ ಮೂಲಕ ಜನರ ಮೇಲೆ ತನಗೆಷ್ಟು ಪ್ರೀತಿಯಿದೆ ಅಂತ ಮತ್ತೊಮ್ಮೆ ತೋರಿಸಿಕೊಡ್ತಾನೆ.
ಯೇಸು ಏನು ಮಾಡ್ತಾನೆ ಅಂತ ಬೈಬಲ್ನಲ್ಲಿ ತಿಳಿಸಿರೋ ವಿಷಯವನ್ನ ಗಮನಿಸಿ:
“ಜನ್ರಲ್ಲಿ ದೀನರಾಗಿ ಇರೋರಿಗೆ ಅವನು ನ್ಯಾಯ ಕೊಡಿಸಲಿ, ಬಡವರ ಮಕ್ಕಳನ್ನ ಕಾಪಾಡಲಿ.”—ಕೀರ್ತನೆ 72:4.
ಯೇಸು ಈ ಹಿಂದೆ ಮಾಡಿರೋ ಮತ್ತು ಮುಂದೆ ಮಾಡಲಿರೋ ವಿಷಯಗಳಿಗೆ ನಾವು ಹೇಗೆ ಥ್ಯಾಂಕ್ಸ್ ಹೇಳಬಹುದು? ಥ್ಯಾಂಕ್ಸ್ ಹೇಳೋ ಒಂದು ವಿಧ, ಆತನು ಸಾರಿದ “ದೇವರ ಆಳ್ವಿಕೆಯ ಸಿಹಿಸುದ್ದಿ” ಬಗ್ಗೆ ನಾವು ಜಾಸ್ತಿ ತಿಳ್ಕೊಬೇಕು. (ಲೂಕ 4:43) “ದೇವರ ಆಳ್ವಿಕೆ ಅಂದರೇನು?” ಅನ್ನೋ ಲೇಖನವನ್ನ ಓದಿ.