ಬೈಬಲ್ ವಚನಗಳ ವಿವರಣೆ
ಜ್ಞಾನೋಕ್ತಿ 16:3—“ನಿನ್ನ ಕಾರ್ಯಗಳನ್ನು ಕರ್ತನಿಗೆ ಒಪ್ಪಿಸು”
“ನಿನ್ನ ಕೆಲಸಗಳನ್ನೆಲ್ಲ ಯೆಹೋವನಿಗೆ ಒಪ್ಪಿಸು, ಆಗ ನಿನ್ನ ಯೋಜನೆಗಳಿಗೆ ಯಶಸ್ಸು ಸಿಗುತ್ತೆ.”—ಜ್ಞಾನೋಕ್ತಿ 16:3, ಹೊಸಲೋಕ ಭಾಷಾಂತರ.
“ನಿನ್ನ ಕಾರ್ಯಗಳನ್ನು ಕರ್ತನಿಗೆ ಒಪ್ಪಿಸಿದರೆ ನಿನ್ನ ಆಲೋಚನೆಗಳು ಸ್ಥಿರವಾಗುವವು.”—ಜ್ಞಾನೋಕ್ತಿ 16:3. ಪವಿತ್ರ ಬೈಬಲ್.
ಜ್ಞಾನೋಕ್ತಿ 16:3—ಅರ್ಥ
ಯಾರು ಸತ್ಯ ದೇವರನ್ನ ಆರಾಧಿಸ್ತಾರೋ ಅವರ ಯೋಜನೆಗಳಿಗೆ ಯಶಸ್ಸು ಸಿಗುತ್ತೆ ಅಂತ ಈ ಜ್ಞಾನೋಕ್ತಿ ಹೇಳುತ್ತೆ. ಆದ್ರೆ ಈ ಯಶಸ್ಸು ಸಿಗಬೇಕಂದ್ರೆ ಅವರು ದೇವರ ಮೇಲೆ ನಂಬಿಕೆ ಇಡಬೇಕು ಮತ್ತು ಆತನ ಮಾತು ಕೇಳಬೇಕು.
“ನಿನ್ನ ಕೆಲಸಗಳನ್ನೆಲ್ಲ ಯೆಹೋವನಿಗೆ ಒಪ್ಪಿಸು.” ಯೆಹೋವನa ಆರಾಧಕರು ಯಾವುದೇ ನಿರ್ಧಾರ ಮಾಡೋ ಮುಂಚೆ ದೀನತೆಯಿಂದ ಆತನ ಮಾರ್ಗದರ್ಶನ ಕೇಳುತ್ತಾರೆ. (ಯಾಕೋಬ 1:5) ಯಾಕೆ ಕೇಳ್ತಾರೆ? ಒಂದನೇ ಕಾರಣ, ಮನುಷ್ಯರಿಗೆ ಯಾವಾಗ ಏನು ಆಗುತ್ತೆ ಅಂತ ಗೊತ್ತಿಲ್ಲ. (ಪ್ರಸಂಗಿ 9:11; ಯಾಕೋಬ 4:13-15) ಅಷ್ಟೇ ಅಲ್ಲ, ಅವರು ಮಾಡಬೇಕು ಅಂದ್ಕೊಂಡಿದ್ದನ್ನ ಮಾಡುವಷ್ಟು ಜ್ಞಾನ ಅವರಿಗಿಲ್ಲ. ಈ ಕಾರಣಕ್ಕೆ ಕೆಲವರು ತಮ್ಮ ಯೋಜನೆಗಳನ್ನ ಮಾಡೋದಕ್ಕೆ ದೇವರ ಮೇಲೆ ನಂಬಿಕೆ ಇಡ್ತಾರೆ, ಪ್ರಾರ್ಥನೆ ಮಾಡೋ ಮೂಲಕ ದೇವರ ಮಾರ್ಗದರ್ಶನೆ ಪಡ್ಕೊತಾರೆ ಮತ್ತು ದೇವರ ವಾಕ್ಯದಲ್ಲಿ ಇರೋ ತರ ನಡ್ಕೊತಾರೆ.—ಜ್ಞಾನೋಕ್ತಿ 3:5, 6; 2 ತಿಮೊತಿ 3:16, 17.
“ನಿನ್ನ ಕಾರ್ಯಗಳನ್ನು ಕರ್ತನಿಗೆb ಒಪ್ಪಿಸು” ಅನ್ನೋ ವಾಕ್ಯ “ನಿನ್ನ ಕೆಲಸಗಳನ್ನೆಲ್ಲಾ ಕರ್ತನ ಮೇಲೆ ಹಾಕು” ಅನ್ನೋ ಅರ್ಥ ಕೊಡುತ್ತೆ. ಒಂದು ರೆಫೆರೆನ್ಸ್ ಪ್ರಕಾರ ಈ ಮಾತಿನ ಅರ್ಥ ಏನೆಂದರೆ “ಭಾರ ಹೊತ್ತುಕೊಂಡಿರೋ ಒಬ್ಬ ವ್ಯಕ್ತಿ ತನ್ನ ಭಾರವನ್ನ ತನಗಿಂತ ಶಕ್ತಿಶಾಲಿಯಾಗಿರೋ ಬೇರೆ ವ್ಯಕ್ತಿಗೆ ಕೊಡೋದನ್ನ ಸೂಚಿಸುತ್ತೆ.” ಯಾರು ತಗ್ಗಿ ಬಗ್ಗಿ ನಡಿತರೋ ಅವರಿಗೆ ದೇವರು ಸಹಾಯ ಮಾಡ್ತಾನೆ, ಕೈಹಿಡಿದು ನಡೆಸ್ತಾನೆ.—ಕೀರ್ತನೆ 37:5; 55:22.
ಜ್ಞಾನೋಕ್ತಿಯಲ್ಲಿ “ನಿನ್ನ ಕಾರ್ಯಗಳನ್ನು” ಅಂತ ಹೇಳಿರೋದ್ರ ಅರ್ಥ ನಾವು ಏನೇ ಕೆಲಸ ಮಾಡಿದ್ರೂ ದೇವರು ಅದನ್ನ ಒಪ್ಕೊಳ್ತಾನೆ, ಆಶೀರ್ವದಿಸ್ತಾನೆ ಅಂತ ಅಲ್ಲ. ಯೆಹೋವ ದೇವರು ನಮ್ಮ ಕೆಲಸಗಳನ್ನ ಆಶೀರ್ವದಿಸಬೇಕಂದ್ರೆ ನಾವು ಆತನ ನೀತಿ ನಿಯಮಗಳನ್ನ ಪಾಲಿಸಬೇಕು ಮತ್ತು ಆತನ ಇಷ್ಟದ ಪ್ರಕಾರ ನಡ್ಕೊಳ್ಳಬೇಕು. (ಕೀರ್ತನೆ 127:1; 1 ಯೋಹಾನ 5:14) ಯಾರು ತನ್ನ ಮಾತು ಕೇಳೋದಿಲ್ವೋ ಅವರನ್ನ ದೇವರು ಆಶೀರ್ವದಿಸಲ್ಲ, “ಕೆಟ್ಟವರ ಯೋಜನೆಗಳನ್ನ ಕೆಡಿಸ್ತಾನೆ.” (ಕೀರ್ತನೆ 146:9) ಆದ್ರೆ ಬೈಬಲಲ್ಲಿ ತಾನು ಇಟ್ಟಿರೋ ನೀತಿ ನಿಯಮಗಳಿಗೆ ಯಾರು ಗೌರವ ಕೊಡ್ತಾರೋ ಮತ್ತು ಅದರ ಪ್ರಕಾರ ನಡ್ಕೊತಾರೋ ಅವ್ರಿಗೆ ಬೇಕಾದ ಬೆಂಬಲ ಕೊಡ್ತಾನೆ.—ಕೀರ್ತನೆ 37:23.
“ಆಗ ನಿನ್ನ ಯೋಜನೆಗಳಿಗೆ ಯಶಸ್ಸು ಸಿಗುತ್ತೆ.” ಕೆಲವು ಭಾಷಾಂತರಗಳಲ್ಲಿ ಈ ವಾಕ್ಯವನ್ನ “ನಿನ್ನ ಯೋಜನೆಗಳನ್ನ ಸ್ಥಿರಪಡಿಸಲಾಗುತ್ತೆ” ಅಂತ ಭಾಷಾಂತರಿಸಿದ್ದಾರೆ. ಹೀಬ್ರು ಶಾಸ್ತ್ರಗಳಲ್ಲಿ ಅಥವಾ ಹಳೇ ಒಡಂಬಡಿಕೆಯಲ್ಲಿ “ಸ್ಥಿರಪಡಿಸು” ಅನ್ನೋ ಪದಕ್ಕಿರೋ ಇಂಗ್ಲಿಷ್ ಪದ ಅಡಿಪಾಯ ಹಾಕೋದನ್ನ ಸೂಚಿಸುತ್ತೆ ಮತ್ತು ತುಂಬಾ ಸಲ ಇದು ದೇವರ ಸೃಷ್ಟಿಕಾರ್ಯ ಎಷ್ಟು ಸ್ಥಿರವಾಗಿದೆ ಅನ್ನೋದನ್ನೂ ಸೂಚಿಸುತ್ತೆ. (ಜ್ಞಾನೋಕ್ತಿ 3:19; ಯೆರೆಮೀಯ 10:12) ಅದೇ ತರ ಯಾರು ಆತನ ದೃಷ್ಟಿಯಲ್ಲಿ ಸರಿಯಾಗಿರೋದನ್ನ ಮಾಡ್ತಾರೋ ಅವರ ಯೋಜನೆಗಳನ್ನ ದೇವರು ಸ್ಥಿರಪಡಿಸ್ತಾನೆ ಮತ್ತು ಅವ್ರಿಗೆ ಭದ್ರತೆ ಕೊಟ್ಟು, ಸಂತೋಷವಾಗಿ ಇರೋ ತರ ನೋಡ್ಕೊಳ್ತಾನೆ.—ಕೀರ್ತನೆ 20:4; ಜ್ಞಾನೋಕ್ತಿ 12:3.
ಜ್ಞಾನೋಕ್ತಿ 16:3—ಸಂದರ್ಭ
ಈ ಜ್ಞಾನೋಕ್ತಿಯನ್ನ ರಾಜ ಸೊಲೊಮೋನ ಬರೆದ, ಈ ಪುಸ್ತಕದಲ್ಲಿರೋ ಹೆಚ್ಚಿನ ಜ್ಞಾನೋಕ್ತಿಗಳನ್ನ ಇವನೇ ಬರೆದಿದ್ದಾನೆ. ದೇವರು ಕೊಟ್ಟ ವಿವೇಕದಿಂದನೇ ಅವನು ಇಂಥಾ ಸಾವಿರಾರು ಜ್ಞಾನೋಕ್ತಿಗಳನ್ನ ಬರೆಯೋದಕ್ಕೆ ಆಯ್ತು.—1 ಅರಸು 4:29, 32; 10:23, 24.
16ನೇ ಅಧ್ಯಾಯದ ಆರಂಭದಲ್ಲಿ ಸೊಲೊಮೋನ ದೇವರ ವಿವೇಕವನ್ನ ಹೊಗಳ್ತಾ, ಅಹಂಕಾರಿಗಳನ್ನ ಆತನು ಎಷ್ಟು ದ್ವೇಷಿಸ್ತಾನೆ ಅಂತ ಹೇಳಿದ್ದಾನೆ. (ಜ್ಞಾನೋಕ್ತಿ 16:1-5) ಈ ಅಧ್ಯಾಯವನ್ನ ಮುಂದೆ ಓದ್ತಾ ಹೋದ್ರೆ ಈ ಜ್ಞಾನೋಕ್ತಿ ಪುಸ್ತಕದಲ್ಲಿ ಪದೇ ಪದೇ ಹೇಳಿರೋ ಒಂದು ಪ್ರಾಮುಖ್ಯ ವಿಷ್ಯನ ತಿಳ್ಕೊಬಹುದು. ಅದು ಏನಂದ್ರೆ, ಮನುಷ್ಯರು ದೀನರಾಗಿದ್ದು ದೇವರ ಮಾರ್ಗದರ್ಶನೆಯನ್ನ ಪಾಲಿಸಿದ್ರೆ ಮಾತ್ರ ಅವರು ಮಾಡೋ ಯೋಜನೆಗಳು ಸಫಲ ಆಗುತ್ತೆ. ಅಷ್ಟೇ ಅಲ್ಲ, ಅವರು ವಿವೇಕಿಗಳ್ತಾರೆ. (ಜ್ಞಾನೋಕ್ತಿ 16:3, 6-8, 18-23) ಈ ಪ್ರಾಮುಖ್ಯ ಸತ್ಯವನ್ನ ಬೈಬಲಲ್ಲಿ ಪದೇ ಪದೇ ಹೇಳಲಾಗಿದೆ.—ಕೀರ್ತನೆ 1:1-3; ಯೆಶಾಯ 26:3; ಯೆರೆಮೀಯ 17:7, 8; 1 ಯೋಹಾನ 3:22.
ಜ್ಞಾನೋಕ್ತಿ ಪುಸ್ತಕದ ಪರಿಚಯ ಮಾಡ್ಕೊಳ್ಳೋಕೆ ಈ ವಿಡಿಯೋ ನೋಡಿ.
a ಯೆಹೋವ ಅನ್ನೋದು ದೇವರ ಹೆಸ್ರು. (ಕೀರ್ತನೆ 83:18) “ಯೆಹೋವ ಯಾರು?” ಅನ್ನೋ ಲೇಖನ ನೋಡಿ.
b ಅನೇಕ ಬೈಬಲ್ ಭಾಷಾಂತರಗಳಲ್ಲಿ ದೇವರ ಹೆಸರಿಗೆ ಬದಲು “ಕರ್ತ” ಅಂತ ಬಳಸಿದ್ದಾರೆ. ಹೀಗೆ ಬಳಸಿರೋದ್ರಿಂದ ಬೈಬಲ್ ಓದೋವ್ರಿಗೆ ಗೊಂದಲ ಆಗಬಹುದು. ಅದ್ರ ಬಗ್ಗೆ ತಿಳಿದುಕೊಳ್ಳಲು ಯೆಶಾಯ 42:8—“ನಾನೇ ಕರ್ತನು” ಅನ್ನೋ ಸರಣಿ ಲೇಖನಗಳನ್ನ ನೋಡಿ.