ಶನಿವಾರ, ಅಕ್ಟೋಬರ್ 25
ಶಾಫಾನ . . . ತನ್ನ ಹತ್ರ ಇದ್ದ ಆ ಪುಸ್ತಕವನ್ನ ರಾಜನ ಮುಂದೆ ಓದೋಕೆ ಶುರುಮಾಡಿದ.—2 ಪೂರ್ವ. 34:18.
ರಾಜ ಯೋಷೀಯನಿಗೆ 26 ವರ್ಷ ಆದಾಗ ದೇವಾಲಯದ ದುರಸ್ತಿ ಕೆಲಸನ ಶುರು ಮಾಡಿದ. ಆ ಕೆಲಸ ನಡಿತಿದ್ದಾಗ “ಮೋಶೆ ಮೂಲಕ ಕೊಟ್ಟ ಯೆಹೋವನ ನಿಯಮ ಪುಸ್ತಕ ಸಿಕ್ತು.” ಆ ನಿಯಮಗಳನ್ನ ಯೋಷೀಯ ಕೇಳಿಸ್ಕೊಂಡ ತಕ್ಷಣ ಬದಲಾವಣೆಗಳನ್ನ ಮಾಡ್ಕೊಂಡ. (2 ಪೂರ್ವ. 34:14, 19-21) ಮಕ್ಕಳೇ, ನೀವು ಬೈಬಲನ್ನ ದಿನಾ ಓದ್ತಾ ಇದ್ದೀರಾ? ಓದ್ತಾ ಇರೋ ವಿಷ್ಯಗಳು ನಿಮಗೆ ಇಷ್ಟ ಆಗ್ತಾ ಇದ್ಯಾ? ನಿಮಗೆ ಸಹಾಯ ಆಗೋ ವಚನಗಳನ್ನ ಗುರುತು ಹಾಕಿ ಇಟ್ಕೊಳ್ತಾ ಇದ್ದೀರಾ? ಎಲ್ಲಾದ್ರೂ ಬರೆದಿಟ್ಕೊಳ್ತಾ ಇದ್ದೀರಾ? ಯೋಷೀಯನಿಗೆ 39 ವರ್ಷ ಆದಾಗ ಒಂದು ದೊಡ್ಡ ತಪ್ಪು ಮಾಡಿದ. ಇದ್ರಿಂದ ತನ್ನ ಪ್ರಾಣನೇ ಕಳ್ಕೊಂಡ. ಏನು ಮಾಡಬೇಕು, ಏನು ಮಾಡಬಾರದು ಅಂತ ಯೆಹೋವನನ್ನ ಕೇಳೋ ಬದ್ಲು, ತನಗೆ ಸರಿ ಅನಿಸಿದ್ದನ್ನ ಮಾಡಿದ. (2 ಪೂರ್ವ. 35:20-25) ಅದಕ್ಕೇ ಹೀಗಾಯ್ತು. ಇದ್ರಿಂದ ನಮಗೇನು ಪಾಠ? ನಾವೆಷ್ಟೇ ದೊಡ್ಡವರಾಗಿರಲಿ, ತುಂಬ ವರ್ಷಗಳಿಂದ ಬೈಬಲ್ ಓದ್ತಾ ಇರಲಿ, ನಾವು ಯೆಹೋವನ ಮಾತನ್ನ ಕೇಳ್ತಾ ಇರಬೇಕು. ಅದು ಹೇಗಂದ್ರೆ, ನಾವು ಆತನಿಗೆ ಪ್ರಾರ್ಥನೆ ಮಾಡಬೇಕು, ಬೈಬಲನ್ನ ಓದಬೇಕು, ಅನುಭವ ಇರೋ ಸಹೋದರ ಸಹೋದರಿಯರಿಂದ ಸಲಹೆ ಪಡ್ಕೊಬೇಕು. ಆಗ ನಾವು ಜೀವನದಲ್ಲಿ ದೊಡ್ಡ ತಪ್ಪುಗಳನ್ನ ಮಾಡಲ್ಲ, ಖುಷಿಯಾಗಿ ಇರ್ತೀವಿ.—ಯಾಕೋ. 1:25. w23.09 12 ¶15-16
ಭಾನುವಾರ, ಅಕ್ಟೋಬರ್ 26
ದೇವರು ಅಹಂಕಾರಿಗಳನ್ನ ಇಷ್ಟಪಡಲ್ಲ. ಆದ್ರೆ ದೀನರಿಗೆ ಅಪಾರ ಕೃಪೆ ತೋರಿಸ್ತಾನೆ.—ಯಾಕೋ. 4:6.
ಯೆಹೋವನನ್ನ ಪ್ರೀತಿಸಿ, ಆತನನ್ನ ಆರಾಧಿಸಿರೋ ಎಷ್ಟೋ ಸ್ತ್ರೀಯರ ಬಗ್ಗೆ ಬೈಬಲಲ್ಲಿದೆ. ಈ ಸ್ತ್ರೀಯರು “ಎಲ್ಲ ವಿಷ್ಯಗಳಲ್ಲಿ ಇತಿಮಿತಿ” ತೋರಿಸಿದ್ರು ಮತ್ತು “ನಂಬಿಗಸ್ತರಾಗಿ” ಇದ್ರು. (1 ತಿಮೊ. 3:11) ನೀವು ಇವ್ರಿಂದಷ್ಟೇ ಅಲ್ಲ, ನಿಮ್ಮ ಸಭೆಲಿರೋ ಪ್ರೌಢ ಸ್ತ್ರೀಯರಿಂದನೂ ತುಂಬ ವಿಷ್ಯಗಳನ್ನ ಕಲಿಬಹುದು. ಯುವ ಸಹೋದರಿಯರೇ, ಪ್ರೌಢ ಕ್ರೈಸ್ತರಾಗಿ ಮಾದರಿ ಇಟ್ಟಿರೋ ಸಹೋದರಿಯರು ನಿಮಗೆ ಗೊತ್ತಿದ್ದಾರಾ? ಅವ್ರಲ್ಲಿರೋ ಒಳ್ಳೇ ಗುಣಗಳನ್ನ ನೀವು ಗಮನಿಸಿದ್ದೀರಾ? ಹಾಗಿದ್ರೆ ನೀವೂ ಆ ಗುಣಗಳನ್ನ ಹೇಗೆ ತೋರಿಸಬಹುದು ಅಂತ ಯೋಚ್ನೆ ಮಾಡಿ. ದೀನತೆ ಅನ್ನೋ ಗುಣ ಇದ್ರೆ ಒಬ್ಬ ಸಹೋದರಿ ಪ್ರೌಢಳಾಗೋಕೆ ಆಗುತ್ತೆ. ಈ ಗುಣ ಇದ್ರೆ ಅವಳಿಗೆ ಯೆಹೋವನ ಜೊತೆ ಒಳ್ಳೇ ಸ್ನೇಹ ಇರುತ್ತೆ ಮತ್ತು ಎಲ್ರ ಜೊತೆನೂ ಚೆನ್ನಾಗಿರ್ತಾಳೆ. ಉದಾಹರಣೆಗೆ, ಯೆಹೋವ ಮಾಡಿರೋ ತಲೆತನದ ಏರ್ಪಾಡಿಗೆ ಅಧೀನಳಾಗಿರೋಕೆ ಅವಳಿಗೆ ಆಗುತ್ತೆ. (1 ಕೊರಿಂ. 11:3, ಪಾದಟಿಪ್ಪಣಿ) ಸಭೆಲಿ ಮತ್ತು ಕುಟುಂಬದಲ್ಲಿ ಯೆಹೋವ ಜವಾಬ್ದಾರಿ ಕೊಟ್ಟಿರೋರಿಗೆ ಸಹಕಾರ ಕೊಡೋಕಾಗುತ್ತೆ. w23.12 18-19 ¶3-5
ಸೋಮವಾರ, ಅಕ್ಟೋಬರ್ 27
ಗಂಡಂದಿರು ತಮ್ಮ ದೇಹವನ್ನ ಪ್ರೀತಿಸೋ ಹಾಗೆ ತಮ್ಮ ಹೆಂಡತಿಯರನ್ನ ಪ್ರೀತಿಸಬೇಕು.—ಎಫೆ. 5:28.
ಒಬ್ಬ ಒಳ್ಳೆ ಗಂಡ, ತನ್ನ ಹೆಂಡತಿಯನ್ನ ಪ್ರೀತಿಸಬೇಕು. ಅವಳ ಭಾವನೆಗಳನ್ನ ಚೆನ್ನಾಗಿ ಅರ್ಥ ಮಾಡ್ಕೋಬೇಕು ಮತ್ತು ಯೆಹೋವನಿಗೆ ಹತ್ರ ಆಗೋಕೆ ಅವಳಿಗೆ ಸಹಾಯ ಮಾಡಬೇಕು. ಗಂಡಂದಿರು ತಮ್ಮ ಹೆಂಡತಿಯರ ಜೊತೆ ಹೀಗೇ ಇರಬೇಕು ಅಂತ ಯೆಹೋವ ಬಯಸ್ತಾನೆ. ಚೆನ್ನಾಗಿ ಯೋಚಿಸುವ ಸಾಮರ್ಥ್ಯವನ್ನ, ಸ್ತ್ರೀಯರಿಗೆ ಗೌರವ ಕೊಡೋದನ್ನ ಮತ್ತು ನಂಬಿಕೆ ಉಳಿಸ್ಕೊಳ್ಳೋದನ್ನ ನೀವು ಕಲಿತ್ರೆ ನೀವೊಬ್ಬ ಒಳ್ಳೆ ಗಂಡ ಆಗ್ತೀರ. ನೀವು ಒಳ್ಳೇ ಅಪ್ಪ ಆಗೋಕೆ ಇಷ್ಟ ಪಟ್ರೆ ಯೆಹೋವ ದೇವರಿಂದ ತುಂಬ ವಿಷ್ಯಗಳನ್ನ ಕಲಿಬಹುದು. ಯಾಕಂದ್ರೆ ಯೆಹೋವ ಒಳ್ಳೆ ಅಪ್ಪ ಆಗಿದ್ದಾನೆ. (ಎಫೆ. 6:4) ಯೆಹೋವ ತನ್ನ ಮಗ ಯೇಸುಗೆ ‘ನಿನ್ನನ್ನ ಪ್ರೀತಿಸ್ತೀನಿ ನಿನ್ನನ್ನ ಮೆಚ್ಕೊಂಡಿದ್ದೀನಿ’ ಅಂತ ಹೇಳಿದನು. (ಮತ್ತಾ. 3:17) ಯೆಹೋವ ದೇವರ ತರ ನೀವೂ ನಿಮ್ಮ ಮಕ್ಕಳಿಗೆ, ಅವ್ರನ್ನ ತುಂಬ ಪ್ರೀತಿಸ್ತೀರ, ಅವರಂದ್ರೆ ನಿಮಗೆ ಇಷ್ಟ ಅಂತ ಹೇಳಿ. ಅವರೇನಾದ್ರೂ ಒಳ್ಳೇದನ್ನ ಮಾಡಿದಾಗ ಹೊಗಳಿ. ಹೀಗೆ ಮಾಡಿದ್ರೆ ನಿಮ್ಮ ಮಕ್ಕಳು ಮುಂದೆ ಪ್ರೌಢ ಕ್ರೈಸ್ತರಾಗ್ತಾರೆ. ಒಳ್ಳೇ ಅಪ್ಪ ಆಗೋಕೆ ಈಗಿಂದನೇ ತಯಾರಾಗಿ. ಹೇಗೆ? ನಿಮ್ಮ ಕುಟುಂಬದವರನ್ನ, ಸಭೆಯಲ್ಲಿರುವವ್ರನ್ನ ಪ್ರೀತಿಸಿ, ಅವ್ರನ್ನ ಚೆನ್ನಾಗಿ ನೋಡ್ಕೊಳ್ಳಿ. ಅವ್ರನ್ನ ನೀವು ಎಷ್ಟು ಪ್ರೀತಿಸ್ತೀರ ಅಂತ ಹೇಳಿ.—ಯೋಹಾ. 15:9 w23.12 28-29 ¶17-18