ಮಂಗಳವಾರ, ಅಕ್ಟೋಬರ್ 28
ಆ ದಿನಗಳಲ್ಲಿ ಸ್ಥಿರತೆಯನ್ನ ಕೊಡುವವನು [ಯೆಹೋವನೇ]. —ಯೆಶಾ. 33:6.
ಇವತ್ತು ನಮಗೂ ಎಲ್ಲಾ ಜನ್ರಿಗೆ ಬರೋ ಕಷ್ಟಗಳು ಬರುತ್ತೆ. ಅಷ್ಟೇ ಅಲ್ಲ, ಯೆಹೋವನ ಸೇವಕರಾಗಿರೋದ್ರಿಂದ ನಮಗೆ ಹಿಂಸೆ ವಿರೋಧಗಳೂ ಬರುತ್ತೆ. ಹಾಗಂತ ಯೆಹೋವ ನಮಗೆ ಬರೋ ಕಷ್ಟಗಳನ್ನ ತಡಿಯಲ್ಲ. ಆದ್ರೆ ಅಂಥ ಸಂದರ್ಭಗಳಲ್ಲಿ ನಾವು ಖುಷಿಯಾಗಿರೋಕೆ, ಸರಿಯಾದ ತೀರ್ಮಾನ ಮಾಡೋಕೆ ಮತ್ತು ಆತನಿಗೆ ನಿಯತ್ತಾಗಿರೋಕೆ ಸಹಾಯ ಮಾಡ್ತೀನಿ ಅಂತ ಮಾತು ಕೊಟ್ಟಿದ್ದಾನೆ. (ಯೆಶಾ. 41:10) ನಿಮ್ಮ ಮನಸ್ಸಿಗೆ “ಶಾಂತಿ” ಕೊಡ್ತೀನಿ ಅಂತ ಯೆಹೋವ ಮಾತುಕೊಟ್ಟಿದ್ದಾನೆ. (ಫಿಲಿ. 4:6, 7) ನಾವು ಯೆಹೋವನ ಜೊತೆ ಒಳ್ಳೇ ಫ್ರೆಂಡ್‌ಶಿಪ್ ಬೆಳೆಸ್ಕೊಂಡಾಗ ನಮಗೆ ಈ ಶಾಂತಿ ಸಿಗುತ್ತೆ ಅಥವಾ ಮನಸ್ಸಿಗೆ ಸಮಾಧಾನ ಆಗುತ್ತೆ. ಈ ಶಾಂತಿ ನಮ್ಮ ‘ತಿಳುವಳಿಕೆಗೂ ಮೀರಿದ್ದು’ ಅಂತ ಬೈಬಲ್ ಹೇಳುತ್ತೆ. ಅಂದ್ರೆ ನಾವು ಅಂದ್ಕೊಂಡಿದ್ದಕ್ಕಿಂತ ಜಾಸ್ತಿ ಶಾಂತಿ ಮತ್ತು ಸಮಾಧಾನ ಸಿಗುತ್ತೆ. ನೀವು ಯಾವುದಾದ್ರೂ ಒಂದು ವಿಷ್ಯಕ್ಕೋಸ್ಕರ ಯೆಹೋವನ ಹತ್ರ ತುಂಬ ಪ್ರಾರ್ಥನೆ ಮಾಡಿದ್ದೀರಾ? ಆಗ ನಿಮಗೆ ಹೇಗನಿಸ್ತು? ದೇವರು ನಿಮ್ಮ ಮನಸ್ಸಿಗೆ “ಶಾಂತಿ” ಕೊಟ್ನಲ್ವಾ? w24.01 20 ¶2; 21 ¶4
ಬುಧವಾರ, ಅಕ್ಟೋಬರ್ 29
ನನ್ನ ಮನ ಯೆಹೋವನನ್ನ ಹೊಗಳಲಿ, ನನ್ನಲ್ಲಿರೋ ಎಲ್ಲವೂ ಆತನ ಪವಿತ್ರ ಹೆಸ್ರನ್ನ ಕೊಂಡಾಡಲಿ.—ಕೀರ್ತ. 103:1.
ನಮಗೆ ಯೆಹೋವನ ಮೇಲೆ ಪ್ರೀತಿ ಇರೋದ್ರಿಂದ ಮನಸ್ಸಾರೆ ಆತನ ಹೆಸ್ರನ್ನ ಹೊಗಳ್ತೀವಿ. ಯೆಹೋವನ ಹೆಸ್ರನ್ನ ಹೊಗಳಿದ್ರೆ ಯೆಹೋವನನ್ನೇ ಹೊಗಳಿದಂಗೆ ಅಂತ ದಾವೀದ ಅರ್ಥಮಾಡ್ಕೊಂಡಿದ್ದ. ಯೆಹೋವನ ಹೆಸ್ರಿನ ಬಗ್ಗೆ ಯೋಚಿಸಿದಾಗ ಆತನಲ್ಲಿರೋ ಒಳ್ಳೇ ಗುಣಗಳು, ಆತನು ಹಿಂದೆ ಮಾಡಿರೋ ಅದ್ಭುತ ಕೆಲಸಗಳು ನೆನಪಾಗುತ್ತೆ. ದಾವೀದನಿಗೆ ಯೆಹೋವನ ಪವಿತ್ರ ಹೆಸ್ರನ್ನ ಗೌರವಿಸೋಕೆ, ಮನಸಾರೆ ಕೊಂಡಾಡೋಕೆ ತುಂಬ ಆಸೆ ಇತ್ತು. ಅದಕ್ಕೇ “ನನ್ನಲ್ಲಿರೋ ಎಲ್ಲವೂ ಆತನ ಪವಿತ್ರ ಹೆಸ್ರನ್ನ ಕೊಂಡಾಡಲಿ” ಅಂತ ಹೇಳಿದ. ಇವನ ತರಾನೇ ಲೇವಿಯರೂ ಯೆಹೋವನ ಹೆಸ್ರನ್ನ ಕೊಂಡಾಡಿದ್ರು. ಆತನ ಹೆಸ್ರನ್ನ ಎಷ್ಟು ಹೊಗಳಿದ್ರೂ, ಸ್ತುತಿಸಿದ್ರೂ ಅದು ಕಡಿಮೆನೇ ಅಂತ ಅವರು ನೆನಸಿದ್ರು. (ನೆಹೆ. 9:5) ಆದ್ರೆ ಇವ್ರೆಲ್ರೂ ಮನಸಾರೆ ತನ್ನ ಹೆಸ್ರನ್ನ ಹೊಗಳಿದಾಗ ಯೆಹೋವನಿಗೆ ಖುಷಿಯಾಗಿರುತ್ತೆ ಅನ್ನೋದ್ರಲ್ಲಿ ಅನುಮಾನನೇ ಇಲ್ಲ! w24.02 9 ¶6
ಗುರುವಾರ, ಅಕ್ಟೋಬರ್ 30
ನಾವು ಎಷ್ಟರ ಮಟ್ಟಿಗೆ ಪ್ರಗತಿ ಮಾಡ್ತಾ ಬಂದಿದ್ದೀವೋ ಅದೇ ದಾರೀಲಿ ಮುಂದುವರಿಯೋಣ.—ಫಿಲಿ. 3:16.
ಒಂದುವೇಳೆ ನಿಮ್ಮಿಂದ ಮುಟ್ಟೋಕೆ ಆಗದಿರೋ ಗುರಿಗಳನ್ನ ನೀವು ಇಟ್ಟಿದ್ದೀರ ಅಂತ ಗೊತ್ತಾದ್ರೆ ನಿಮ್ಮ ಗುರಿನ ಬದಲಾಯಿಸ್ಕೊಳ್ಳಿ. ಹೀಗೆ ಮಾಡಿದ್ರೆ ಯೆಹೋವ ದೇವರು ನೀವು ಸೋತುಹೋಗಿಬಿಟ್ರಿ ಅಂತ ಅಂದ್ಕೊಳ್ಳಲ್ಲ. ಯಾಕಂದ್ರೆ ನಿಮ್ಮಿಂದ ಮಾಡೋಕೆ ಆಗದೇ ಇರೋದನ್ನ ಯಾವತ್ತೂ ಕೇಳಲ್ಲ. (2 ಕೊರಿಂ. 8:12) ಎಲ್ಲಿ, ಏನು ಬದಲಾಯಿಸ್ಕೊಬೇಕು ಅಂತ ಯೋಚ್ನೆ ಮಾಡಿ. ಈಗಾಗ್ಲೇ ನೀವು ಯಾವೆಲ್ಲ ಗುರಿಗಳನ್ನ ಮುಟ್ಟಿದ್ದೀರ ಅಂತ ನೆನಪಿಸ್ಕೊಳ್ಳಿ. ಯೆಹೋವನಿಗೋಸ್ಕರ ‘ನೀವು ಮಾಡಿರೋ ಕೆಲಸನ ಆತನು ಮರಿಯಲ್ಲ. ಯಾಕಂದ್ರೆ ಆತನು ಅನ್ಯಾಯ ಮಾಡಲ್ಲ’ ಅಂತ ಬೈಬಲ್ ಹೇಳುತ್ತೆ. (ಇಬ್ರಿ. 6:10) ಆತನಿಗೋಸ್ಕರ ನೀವು ಏನೆಲ್ಲಾ ಮಾಡಿದ್ದೀರ ಅನ್ನೋದನ್ನ ಆಗಾಗ ನೆನಪಿಸ್ಕೊಳ್ಳಿ. ಉದಾಹರಣೆಗೆ, ಆತನ ಜೊತೆ ಒಳ್ಳೇ ಸ್ನೇಹ ಬೆಳೆಸ್ಕೊಂಡ್ರಿ, ಆತನ ಬಗ್ಗೆ ಬೇರೆಯವ್ರ ಹತ್ರ ಹೇಳಿದ್ರಿ, ದೀಕ್ಷಾಸ್ನಾನ ತಗೊಂಡ್ರಿ. ಈ ಗುರಿಗಳನ್ನ ಮುಟ್ಟಿದ್ದೀರ ಅಂದ್ಮೇಲೆ ಈಗ ಇಟ್ಟಿರೋ ಗುರಿಯನ್ನೂ ಮುಟ್ಟಕ್ಕಾಗುತ್ತೆ. ಅದಕ್ಕೆ ಪ್ರಯತ್ನ ಮಾಡ್ತಾ ಇರಿ. ಯೆಹೋವ ದೇವರ ಸಹಾಯದಿಂದ ಏನೇ ಅಡೆತಡೆ ಬಂದ್ರೂ ನಮ್ಮ ಗುರಿನ ಮುಟ್ಟೋಕೆ ಆಗುತ್ತೆ. ನೀವು ನಿಮ್ಮ ಗುರಿನ ಮುಟ್ಟೋಕೆ ಪ್ರಯತ್ನ ಹಾಕುವಾಗ ಯೆಹೋವ ನಿಮಗೆ ಹೇಗೆಲ್ಲ ಸಹಾಯ ಮಾಡ್ತಿದ್ದಾನೆ, ಹೇಗೆಲ್ಲ ಆಶೀರ್ವದಿಸ್ತಾ ಇದ್ದಾನೆ ಅನ್ನೋದಕ್ಕೆ ಗಮನ ಕೊಡಿ, ಖುಷಿ ಪಡಿ. (2 ಕೊರಿಂ. 4:7) ಏನೇ ಆದ್ರೂ ಪ್ರಯತ್ನ ಬಿಡಬೇಡಿ. ಆಗ ಯೆಹೋವ ನಿಮ್ಮನ್ನ ಇನ್ನೂ ಆಶೀರ್ವದಿಸ್ತಾನೆ.—ಗಲಾ. 6:9. w23.05 31 ¶16-18