ಮಂಗಳವಾರ, ನವೆಂಬರ್ 4
ಮರಣವೇ, ಕುಟುಕುವ ನಿನ್ನ ಕೊಂಡಿಗಳು ಎಲ್ಲಿ ಹೋಯ್ತು?—ಹೋಶೇ. 13:14.
ತೀರಿಹೋದವ್ರನ್ನ ಮತ್ತೆ ಬದುಕಿಸಬೇಕು ಅನ್ನೋ ಆಸೆ ಯೆಹೋವನಿಗಿದೆಯಾ? ಖಂಡಿತ ಇದೆ. ಅದಕ್ಕೆ ತಾನು ಕೊಟ್ಟಿರೋ ಮಾತನ್ನ ಬೈಬಲಲ್ಲಿ ತುಂಬ ಕಡೆ ಬರೆಸಿಟ್ಟಿದ್ದಾನೆ. (ಯೆಶಾ. 26:19; ಪ್ರಕ. 20:11-13) ಯೆಹೋವ ದೇವರು ಒಂದು ಸಲ ಮಾತು ಕೊಟ್ಟ ಮೇಲೆ ಅದನ್ನ ಖಂಡಿತ ಮಾಡೇ ಮಾಡ್ತಾನೆ. (ಯೆಹೋ. 23:14) ಅಷ್ಟೇ ಅಲ್ಲ, ಅದನ್ನ ಮಾಡೋಕೆ ಆತನು ಕಾಯ್ತಾ ಇದ್ದಾನೆ. ಯೋಬನ ಉದಾಹರಣೆ ನೋಡಿ. ತಾನು ಸತ್ತು ಹೋದ್ರೂ ತನ್ನನ್ನ ಮತ್ತೆ ನೋಡೋಕೆ ಯೆಹೋವ ಆಸೆ ಪಡ್ತಾನೆ ಅಂತ ಯೋಬನಿಗೆ ಚೆನ್ನಾಗಿ ಗೊತ್ತಿತ್ತು. (ಯೋಬ 14:14, 15, ಪಾದಟಿಪ್ಪಣಿ) ಯೆಹೋವನನ್ನ ಆರಾಧನೆ ಮಾಡ್ತಿದ್ದ ಎಷ್ಟೋ ಜನ ಸತ್ತು ಹೋಗಿದ್ದಾರೆ. ಅವರನ್ನೆಲ್ಲಾ ಮತ್ತೆ ನೋಡಬೇಕು ಅಂತ ಯೆಹೋವ ಹಂಬಲಿಸ್ತಾನೆ. ಅವರೆಲ್ಲಾ ಆರೋಗ್ಯವಾಗಿ ಖುಷಿಖುಷಿಯಾಗಿ ಇರ್ಬೇಕು ಅಂತ ಆತನು ಇಷ್ಟ ಪಡ್ತಾನೆ. ಕೋಟಿಗಟ್ಟಲೆ ಜನ್ರು ಆತನ ಬಗ್ಗೆ ಕಲಿಯೋಕೆ ಅವಕಾಶನೇ ಸಿಗದೆ ತೀರಿಹೋಗಿದ್ದಾರೆ. ಅವರನ್ನೂ ಕೂಡ ಮತ್ತೆ ಜೀವಂತವಾಗಿ ನೋಡೋಕೆ ಯೆಹೋವ ಆಸೆ ಪಡ್ತಾನೆ. (ಅ. ಕಾ. 24:15) ಅವರಿಗೆಲ್ಲಾ ಶಾಶ್ವತವಾಗಿ ಜೀವಿಸೋಕೆ ಮತ್ತು ತನ್ನ ಜೊತೆ ಫ್ರೆಂಡ್ ಆಗೋಕೆ ಒಂದು ಅವಕಾಶ ಕೊಡ್ತಾನೆ.—ಯೋಹಾ. 3:16 w23.04 9 ¶5-6
ಬುಧವಾರ, ನವೆಂಬರ್ 5
ದೇವರಿಂದ ನಾವು ಬಲ ಪಡ್ಕೊತೀವಿ.—ಕೀರ್ತ. 108:13.
ಯೆಹೋವ ಕೊಡೋ ಆಶೀರ್ವಾದಗಳ ಮೇಲೆ ನಮ್ಮ ನಂಬಿಕೆ ಜಾಸ್ತಿ ಮಾಡ್ಕೊಳ್ಳೋಕೆ ಏನು ಮಾಡಬೇಕು? ಪರದೈಸಲ್ಲಿ ನಮ್ಮ ಜೀವನ ಹೇಗಿರುತ್ತೆ ಅಂತ ಕಲ್ಪಿಸ್ಕೊಬೇಕು. ಇದ್ರ ಬಗ್ಗೆ ಬೈಬಲಲ್ಲಿ ಓದಬೇಕು ಮತ್ತು ಯೋಚ್ನೆ ಮಾಡಬೇಕು. (ಯೆಶಾ. 25:8; 32:16-18) ನೀವೀಗ ಹೊಸಲೋಕದಲ್ಲಿ ಇದ್ದೀರ ಅಂದ್ಕೊಳ್ಳಿ. ಹೊಸಲೋಕವನ್ನ ಮನಸ್ಸಲ್ಲಿ ಇಟ್ರೆ, ಈಗ ನಾವು ಅನುಭವಿಸ್ತಿರೋ ಕಷ್ಟಗಳು “ಸ್ವಲ್ಪ ಕಾಲಕಷ್ಟೇ ಮತ್ತು ಅವೆಲ್ಲ ತುಂಬಾ ಚಿಕ್ಕದು” ಅಂತ ಅನಿಸುತ್ತೆ. (2 ಕೊರಿಂ. 4:17) ಯೆಹೋವ ಕೊಡೋ ಆಶೀರ್ವಾದಗಳನ್ನ ನೆನಸ್ಕೊಂಡಾಗ ಈ ಕಷ್ಟಗಳನ್ನೆಲ್ಲ ತಾಳ್ಕೊಳ್ಳೋಕೆ ನಮಗೆ ಶಕ್ತಿ ಸಿಗುತ್ತೆ. ನಾವು ಯೆಹೋವ ಕೊಡೋ ಶಕ್ತಿಯನ್ನ ಪಡ್ಕೊಳ್ಳೋಕೆ ಏನು ಮಾಡಬೇಕು ಅಂತ ಆತನು ಈಗಾಗ್ಲೇ ತಿಳಿಸಿದ್ದಾನೆ. ಹಾಗಾಗಿ ಒಂದು ನೇಮಕ ಮಾಡೋಕೆ ಕಷ್ಟ ಆದ್ರೆ, ಬರೋ ಸಮಸ್ಯೆಗಳನ್ನ ಸಹಿಸ್ಕೊಳ್ಳೋಕೆ ಆಗದೇ ಇದ್ರೆ, ಖುಷಿಯನ್ನ ಕಳ್ಕೊಳ್ತಿದ್ದೀವಿ ಅಂತ ಅನಿಸ್ತಿದ್ರೆ ಪ್ರಾರ್ಥಿಸಿ, ಬೈಬಲ್ ಓದಿ ಮತ್ತು ಓದಿದ ವಿಷ್ಯದ ಬಗ್ಗೆ ಯೋಚಿಸಿ. ಸಹೋದರ ಸಹೋದರಿಯರು ಕೊಡೋ ಪ್ರೋತ್ಸಾಹವನ್ನ ಪಡ್ಕೊಳ್ಳಿ ಮತ್ತು ಆಶೀರ್ವಾದಗಳ ಬಗ್ಗೆ ಆಗಾಗ ಕಲ್ಪಿಸ್ಕೊಳ್ಳಿ. ನೀವು ಹೀಗೆ ಮಾಡಿದ್ರೆ “ಮಹಿಮೆಯಿಂದ ತುಂಬಿರೋ ದೇವರ ಶಕ್ತಿ ನಿಮಗೆ ಎಲ್ಲವನ್ನ ತಾಳ್ಮೆ, ಆನಂದದಿಂದ ಸಹಿಸ್ಕೊಳ್ಳೋಕೆ ಬೇಕಾದ ಶಕ್ತಿ” ಕೊಡುತ್ತೆ.—ಕೊಲೊ. 1:11. w23.10 17 ¶19-20
ಗುರುವಾರ, ನವೆಂಬರ್ 6
ಎಲ್ಲದಕ್ಕೂ ಧನ್ಯವಾದ ಹೇಳಿ.—1 ಥೆಸ. 5:18.
ಯೆಹೋವನಿಗೆ ಥ್ಯಾಂಕ್ಸ್ ಹೇಳೋಕೆ ಒಂದಲ್ಲ, ಎರಡಲ್ಲ ಸಾವಿರಾರು ಕಾರಣಗಳಿವೆ. ನಮ್ಮ ಹತ್ರ ಇರೋ ಒಳ್ಳೇದನ್ನೆಲ್ಲಾ ಯೆಹೋವನೇ ಕೊಟ್ಟಿರೋದು. ಆ ಗಿಫ್ಟ್‌ಗಳನ್ನ ಕೊಟ್ಟಿರೋದಕ್ಕೆ ನಾವು ಥ್ಯಾಂಕ್ಸ್ ಹೇಳಬೇಕು. (ಯಾಕೋ. 1:17) ಆತನು ನಮಗೆ ಏನೆಲ್ಲ ಕೊಟ್ಟಿದ್ದಾನೆ ಅಂತ ಸ್ವಲ್ಪ ಯೋಚ್ನೆ ಮಾಡಿ. ಸುಂದರವಾದ ಭೂಮಿ ಕೊಟ್ಟಿದ್ದಾನೆ. ಅದ್ರಲ್ಲಿ ನಮಗೆ ಬೇಕಾಗಿರೋದನ್ನೆಲ್ಲ ಸೃಷ್ಟಿ ಮಾಡಿದ್ದಾನೆ. ನಮಗೆ ಜೀವ ಕೊಟ್ಟಿದ್ದಾನೆ, ಒಳ್ಳೇ ಕುಟುಂಬ ಕೊಟ್ಟಿದ್ದಾನೆ, ಪ್ರಾಣಕ್ಕೆ ಪ್ರಾಣ ಕೊಡೋ ಸ್ನೇಹಿತರನ್ನ ಕೊಟ್ಟಿದ್ದಾನೆ. ಮುಂದೆ ಹೊಸ ಲೋಕ ತರ್ತೀನಿ ಅಂತಾನೂ ಹೇಳಿದ್ದಾನೆ. ಆತನ ಜೊತೆ ಫ್ರೆಂಡ್ ಆಗೋ ಅವಕಾಶನೂ ಕೊಟ್ಟಿದ್ದಾನೆ. ಇದಕ್ಕೆಲ್ಲ ನಾವು ಆತನಿಗೆ ಥ್ಯಾಂಕ್ಸ್ ಹೇಳಲೇಬೇಕಲ್ವಾ? ಸ್ವಲ್ಪ ಸಮಯ ಮಾಡ್ಕೊಂಡು ನಮಗೋಸ್ಕರ ಯೆಹೋವ ಏನೆಲ್ಲಾ ಮಾಡಿದ್ದಾನೆ ಅಂತ ಆಗಾಗ ಯೋಚ್ನೆ ಮಾಡಬೇಕು. ಅದು ತುಂಬ ಮುಖ್ಯ. ಯಾಕಂದ್ರೆ ನಮ್ಮ ಸುತ್ತಮುತ್ತ ಇರೋ ಜನ್ರು ತಮ್ಮ ಹತ್ರ ಏನಿದ್ಯೋ ಅದ್ರಲ್ಲಿ ಸಂತೋಷ ಪಡಲ್ಲ. ಅದು ಬೇಕು ಇದು ಬೇಕು ಅಂತಾನೇ ಯೋಚ್ನೆ ಮಾಡ್ತಾ ಇರ್ತಾರೆ. ನಾವು ಹುಷಾರಾಗಿ ಇಲ್ಲಾಂದ್ರೆ ನಾವೂ ಅವ್ರ ತರ ಆಗಿಬಿಡ್ತೀವಿ. ಆಮೇಲೆ ಯೆಹೋವನ ಹತ್ರ ‘ನನಗೆ ಅದು ಕೊಡು, ಇದು ಕೊಡು’ ಅಂತ ಬರೀ ಕೇಳ್ತಾನೇ ಇರ್ತೀವಿ. ಹಾಗಾಗಿ ಯೆಹೋವ ನಮಗಾಗಿ ಏನೆಲ್ಲ ಮಾಡಿದ್ದಾನೋ ಅದಕ್ಕೆ ಯಾವಾಗ್ಲೂ ಥ್ಯಾಂಕ್ಸ್ ಹೇಳೋ ಮನಸ್ಸನ್ನ ಬೆಳೆಸ್ಕೊಬೇಕು.—ಲೂಕ 6:45. w23.05 4 ¶8-9