ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 7/06 ಪು. 30
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—2006
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ತುಂಬ ಚಿಟ್ಟುಹಿಡಿಸುವಂಥ ಕೆಲಸದ ರೂಢಿಗಳು
  • ಹೆಚ್ಚು ಜನರು ನಗರಗಳಲ್ಲಿ ಜೀವಿಸುವರು
  • ಪಾದ್ರಿಗಳ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರ?
  • ದ್ವಿಇಂಧನದ ಕಾರುಗಳು
  • ಬಿಕ್ಕಟ್ಟಿನಲ್ಲಿರುವ ಮಕ್ಕಳು
    ಎಚ್ಚರ!—1993
  • ಸಿಗರೇಟ್‌ಗಳು ನೀವು ಅವನ್ನು ನಿರಾಕರಿಸುತ್ತೀರೊ?
    ಎಚ್ಚರ!—1996
  • ಜಗತ್ತನ್ನು ಗಮನಿಸುವುದು
    ಎಚ್ಚರ!—2004
  • ಕೋಟ್ಯಂತರ ಜೀವಗಳು ಹೊಗೆಯಾಗಿ ಹೋಗಿ ನಷ್ಟವಾಗುತ್ತಿವೆ
    ಎಚ್ಚರ!—1995
ಇನ್ನಷ್ಟು
ಎಚ್ಚರ!—2006
g 7/06 ಪು. 30

ಜಗತ್ತನ್ನು ಗಮನಿಸುವುದು

◼ ಇಸವಿ 2004ರ ಸೆಪ್ಟೆಂಬರ್‌ ತಿಂಗಳಲ್ಲಿ, ಚಂಡಮಾರುತ ಐವನ್‌ ಮೆಕ್ಸಿಕೊ ಕೊಲ್ಲಿಯಲ್ಲಿ 50 ಅಡಿ ಎತ್ತರದ ಕಡಿಮೆಪಕ್ಷ 24 ಅಲೆಗಳನ್ನು ಎಬ್ಬಿಸಿತು. ಅತಿ ದೊಡ್ಡದಾದ ಅಲೆಯು 91 ಅಡಿ ಎತ್ತರವಾಗಿತ್ತು.​—⁠ಸೈಯನ್ಸ್‌ ಪತ್ರಿಕೆ, ಯು.ಎಸ್‌.ಎ.

◼ ವಾಹನ ಚಲಾಯಿಸುವಾಗ ಸೆಲ್‌ ಫೋನ್‌ಗಳನ್ನು ಬಳಸುವುದರಿಂದ, ಆಸ್ಪತ್ರೆಗೆ ಹೋಗಬೇಕಾಗುವಂಥ ರೀತಿಯ ಢಿಕ್ಕಿಗಳ ಸಾಧ್ಯತೆಯು ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಇದು, ಚಾಲಕರು ಹ್ಯಾಂಡ್ಸ್‌ಫ್ರೀ (ಕೈಗಳಲ್ಲಿ ಹಿಡಿಯದೆ, ಇಯರ್‌ಫೋನ್‌ಗಳನ್ನು ಬಳಸುತ್ತಾ) ಫೋನನ್ನು ಉಪಯೋಗಿಸುವಾಗಲೂ ಸಂಭವಿಸಸಾಧ್ಯವಿದೆ.​—⁠ಬಿಎಮ್‌ಜೆ, ಬ್ರಿಟನ್‌. (g 4/06)

◼ ಮುಂದಿನ ದಶಕದಲ್ಲಿ ಏಷ್ಯಾದಲ್ಲಿರುವ 127 ಕೋಟಿ ಮಕ್ಕಳಲ್ಲಿ ಬಹುತೇಕ ಅರ್ಧದಷ್ಟು ಮಂದಿ ಸುರಕ್ಷಿತ ನೀರು, ಆಹಾರ, ಆರೋಗ್ಯಾರೈಕೆ, ಶಿಕ್ಷಣ ಮತ್ತು ಆಶ್ರಯದಂಥ ಮೂಲಭೂತ ಆವಶ್ಯಕತೆಗಳಿಂದ ವಂಚಿತರಾಗಲಿರುವರು.​—⁠ಪ್ಲ್ಯಾನ್‌ ಏಷಿಯ ರೀಜನಲ್‌ ಆಫೀಸ್‌, ಥಾಯ್‌ಲೆಂಡ್‌. (g 5/06)

ತುಂಬ ಚಿಟ್ಟುಹಿಡಿಸುವಂಥ ಕೆಲಸದ ರೂಢಿಗಳು

“ನಮ್ಮ ಜೊತೆಕೆಲಸಗಾರರ ಚಿಟ್ಟುಹಿಡಿಸುವಂಥ ಕೆಲಸದ ರೂಢಿಗಳ ಬಗ್ಗೆ ತಯಾರಿಸಲಾದ ಪಟ್ಟಿಯೊಂದರಲ್ಲಿ, ಫೋನ್‌ನಲ್ಲಿ ಗಟ್ಟಿಯಾಗಿ ಮಾತಾಡುವುದು, ಸ್ಪೀಕರ್‌ಫೋನ್‌ಗಳನ್ನು [ಬಳಸುವುದು] ಮತ್ತು ಕೆಲಸದ ಹೊರೆ ತೀರ ಹೆಚ್ಚಾಗಿದೆ ಎಂದು ಯಾವಾಗಲೂ ಗೊಣಗುವುದು ಇವೆಲ್ಲವೂ ಮೊದಲ ಸ್ಥಾನದಲ್ಲಿವೆ” ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿಸುತ್ತದೆ. ಜೊತೆಕೆಲಸಗಾರರಿಗೆ ಸಿಟ್ಟುಬರಿಸುವಂಥ ಇತರ ರೂಢಿಗಳಲ್ಲಿ, “ಕೆಲಸಗಾರರ ನಡುವೆ ತಮ್ಮದೇ ಆದ ಗುಂಪುಗಳು, ಕೆಲಸಕ್ಕೆ ತಡವಾಗಿ ಬರುವುದು, ತಮ್ಮಷ್ಟಕ್ಕೆ ತಾವೇ ಮಾತಾಡುವುದು, ಮತ್ತು ಅಡ್ಡವಾಗಿಟ್ಟಿರುವ ಗೋಡೆಗಳಂಥ ಪಾರ್ಟಿಷನ್‌ಗಳ ಬಳಿ ನಿಂತು ಪಕ್ಕದಲ್ಲಿರುವವರೊಂದಿಗೆ ಮಾತಾಡುವುದು, ದೇಹ ನೈರ್ಮಲ್ಯವಿಲ್ಲದಿರುವುದು, ಮತ್ತು ತಿನ್ನುವಾಗ ಶಬ್ದಮಾಡುವುದೂ” ಸೇರಿವೆ. ಇಂಥ ಕೆಟ್ಟ ರೂಢಿಗಳು ಕೆಲಸಗಾರರ ಕೆಲಸಮಾಡುವ ಪ್ರಮಾಣವನ್ನು ಕಡಿಮೆಗೊಳಿಸುತ್ತವೆ. ಆದರೆ ತಮಗೆ ಚಿಟ್ಟುಹಿಡಿಸುವಂಥವರೊಂದಿಗೆ ಅವರ ಆ ರೂಢಿಗಳ ಬಗ್ಗೆ ಮುಖಾಮುಖಿಯಾಗಿ ಮಾತಾಡಿಲ್ಲವೆಂದು ಈ ಸಂಶೋಧಕರ ಪ್ರಶ್ನೆಗಳಿಗೆ ಸ್ಪಂದಿಸಿದವರಲ್ಲಿ ಹೆಚ್ಚಿನವರು ಒಪ್ಪಿಕೊಂಡರು. “ಇದು ಸಮಂಜಸವಾಗಿದೆ, ಏಕೆಂದರೆ ಅವರಿಗೂ ಅದೇ ರೀತಿಯ ಚಿಟ್ಟುಹಿಡಿಸುವಂಥ ರೂಢಿಗಳಿವೆ” ಎಂದು ಆ ವಾರ್ತಾಪತ್ರಿಕೆಯು ಹೇಳುತ್ತದೆ.

ಹೆಚ್ಚು ಜನರು ನಗರಗಳಲ್ಲಿ ಜೀವಿಸುವರು

“ಇನ್ನೆರಡು ವರ್ಷಗಳಲ್ಲಿ ಲೋಕದ ಅರ್ಧದಷ್ಟು ಜನರು ನಗರಗಳಲ್ಲಿ ಜೀವಿಸುತ್ತಿರುವರು,” ಎಂದು ಸಿಬಿಸಿ ನ್ಯೂಸ್‌ ತಿಳಿಸಿತು. ವಿಶ್ವ ಸಂಸ್ಥೆಯ ಒಂದು ವರದಿಗನುಸಾರ, ಯುನೈಟೆಡ್‌ ಸ್ಟೇಟ್ಸ್‌ನಲ್ಲಿನ ನಗರವಾಸಿಗಳ ಪ್ರತಿಶತ ಅತ್ಯುಚ್ಚವಾಗಿದೆ. ಅಲ್ಲಿ 10 ಮಂದಿಯಲ್ಲಿ 9 ಮಂದಿ ನಗರಗಳಲ್ಲಿ ವಾಸಿಸುತ್ತಿದ್ದಾರೆ. ಕೇವಲ 55 ವರ್ಷಗಳ ಹಿಂದೆ, ನ್ಯೂ ಯಾರ್ಕ್‌ ಮತ್ತು ಟೊಕ್ಯೋ ಎಂಬ ಎರಡು ನಗರಗಳಲ್ಲಿ ಮಾತ್ರ ಒಂದು ಕೋಟಿ ಅಥವಾ ಅದಕ್ಕಿಂತಲೂ ಹೆಚ್ಚು ನಿವಾಸಿಗಳಿದ್ದರು. ಇಂದು ಆ ಸಂಖ್ಯೆಯು 20 ನಗರಗಳಿಗೇರಿದೆ ಮತ್ತು ಇವುಗಳಲ್ಲಿ ಈಗ ಒಂದು ಕೋಟಿಗಿಂತಲೂ ಹೆಚ್ಚು ನಿವಾಸಿಗಳಿದ್ದಾರೆ. ಈ ನಗರಗಳಲ್ಲಿ ಜಕಾರ್ಟ, ಮೆಕ್ಸಿಕೊ ಸಿಟಿ, ಮುಂಬೈ ಮತ್ತು ಸಾವ್‌ಪೌಲೂ ನಗರಗಳು ಸೇರಿವೆ. ವಿಶ್ವ ಸಂಸ್ಥೆಯ ಸೆಕ್ರಿಟರಿ ಜೆನರೆಲ್‌ ಕೋಫೀ ಆನಾನ್‌ ಹೇಳುವುದು: “ಇಂಥ ಕ್ಷಿಪ್ರ ಬೆಳವಣಿಗೆ ಇರುವುದರಿಂದ, ಹೆಚ್ಚಿನ ನಗರಗಳಲ್ಲಿ ಬಹುವ್ಯಾಪಕವಾದ ಆರ್ಥಿಕ ಹಾಗೂ ಸಾಮಾಜಿಕ ಹೊಂದಾಣಿಕೆಗಳನ್ನು ಮಾಡಬೇಕಾಗುವುದು.” (g 6/06)

ಪಾದ್ರಿಗಳ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರ?

ಬ್ರಿಟನಿನಲ್ಲಿ “ಒಬ್ಬ ಪಾದ್ರಿಯಾಗಿರುವುದು ಅತ್ಯಂತ ಅಪಾಯಕಾರಿಯಾದ ವೃತ್ತಿ ಆಗಿದೆ” ಎಂದು ಲಂಡನಿನ ಡೇಲಿ ಟೆಲಿಗ್ರಾಫ್‌ ವಾರ್ತಾಪತ್ರಿಕೆಯು 2005ರಲ್ಲಿ ವರದಿಸಿತು. 2001ರಲ್ಲಿ ನಡೆಸಲ್ಪಟ್ಟ ಒಂದು ಸರಕಾರಿ ಸಮೀಕ್ಷೆಯು, ಇಂಟರ್‌ವ್ಯೂ ಮಾಡಲ್ಪಟ್ಟಿರುವ ಪಾದ್ರಿಗಳಲ್ಲಿ 75% ಮಂದಿ ಹಿಂದಿನ ಎರಡು ವರ್ಷಗಳಲ್ಲಿ ಬಹುಮಟ್ಟಿಗೆ ದೌರ್ಜನ್ಯ ಅಥವಾ ದಾಳಿಗೆ ಒಳಗಾಗಿದ್ದರು ಎಂಬುದನ್ನು ಪ್ರಕಟಪಡಿಸಿತು. 1996ರಿಂದ ಕಡಿಮೆಪಕ್ಷ ಏಳು ಮಂದಿ ಪಾದ್ರಿಗಳ ಕೊಲೆಯಾಗಿದೆ. ಆ ದೇಶದ ಕೆಲವೊಂದು ಕ್ಷೇತ್ರಗಳಲ್ಲಿ, “ಚರ್ಚಿಗೆ ಹೋಗುವವರ ಮೇಲೆ ನಡೆಸಲ್ಪಡುವ ಹಿಂಸಾಚಾರ ಮತ್ತು ಕೊಡಲಾಗುತ್ತಿರುವ ಬೆದರಿಕೆಗಳು ಶೀಘ್ರವಾಗಿ ಏರುತ್ತಾ ಇವೆ” ಎಂದು ಆ ವಾರ್ತಾಪತ್ರಿಕೆಯು ಹೇಳಿತು. ಒಂದು ನಗರದ ಮರ್ಸಿಸೈಡ್‌ ಎಂಬ ಕ್ಷೇತ್ರದಲ್ಲಿರುವ “1,400 ಆರಾಧನಾ ಸ್ಥಳಗಳಲ್ಲಿ ಸರಾಸರಿ ಪ್ರತಿದಿನ ಒಂದರ ಮೇಲೆ ದಾಳಿನಡೆಸಲಾಗಿದೆ, ಕಳ್ಳತನ ನಡೆದಿದೆ ಇಲ್ಲವೆ ಬೆಂಕಿ ಹಚ್ಚಲಾಗಿದೆ.” (g 1/06)

ದ್ವಿಇಂಧನದ ಕಾರುಗಳು

ಬ್ರಸಿಲ್‌ನ ಕಾರು ಶೋರೂಮ್‌ಗಳಲ್ಲಿ ಮಾರಲಾಗುತ್ತಿರುವ ಹೊಸ ಕಾರುಗಳಲ್ಲಿ ಮೂರರಲ್ಲೊಂದು ಕಾರು ದ್ವಿಇಂಧನ ಇಲ್ಲವೆ ಎರಡು ಬಗೆಯ ಇಂಧನವನ್ನು ಉಪಯೋಗಿಸುವಂಥದ್ದಾಗಿದೆ ಎಂದು ವೇಸಾ ಪತ್ರಿಕೆಯು ವರದಿಸುತ್ತದೆ. ಈ ವಾಹನಗಳನ್ನು ಪೆಟ್ರೋಲ್‌, ಕಬ್ಬಿನಿಂದ ತಯಾರಿಸಲ್ಪಟ್ಟಿರುವ ಮದ್ಯ, ಇಲ್ಲವೆ ಇವೆರಡನ್ನೂ ಯಾವುದೇ ಪ್ರಮಾಣದಲ್ಲಿ ಬಳಸಿ ಓಡಿಸಲಾಗುತ್ತದೆ. 2003-2004ರಲ್ಲಿ ಈ ಮದ್ಯ ಇಂಧನದ ಮಾರಾಟವು 34 ಪ್ರತಿಶತ ಏರಿತು. ಆದರೆ ಈ ಇಂಧನದ ಬಳಕೆಯನ್ನು ಪರಿಸರದ ಮೇಲಿರುವ ಕಾಳಜಿಯಿಂದ ಮಾಡಲಾಗುತ್ತಿಲ್ಲ. ಇದು ತುಂಬ ಅಗ್ಗವಾಗಿರುವುದರಿಂದ ಚಾಲಕರು ಅದನ್ನು ಬಳಸುತ್ತಿದ್ದಾರೆ ಅಷ್ಟೇ. ಈ ದ್ವಿಇಂಧನ ಕಾರುಗಳು “ಬಳಕೆದಾರನನ್ನು ಇಂಧನ ಬಿಕ್ಕಟ್ಟುಗಳಿಂದ ಮತ್ತು ಬೆಲೆಯಲ್ಲಿನ ಏರಿಳಿತದಿಂದ” ಸಂರಕ್ಷಿಸಲು ಸಹಾಯಮಾಡುತ್ತದೆಂದು ‘ಬ್ರೆಸಿಲಿಯನ್‌ ಸೆಂಟರ್‌ ಆಫ್‌ ಇನ್ಫ್ರಾಸ್ಟ್ರಕ್ಚರ್‌’ನ ನಿರ್ದೇಶಕರಾದ ರಫೆಲ್‌ ಶೈಡ್‌ಮಾನ್‌ ವಿವರಿಸಿದರು. “ಮದ್ಯ-ಇಂಧನದ ಬೆಲೆಯೇರಿದರೆ ನೀವು ಪೆಟ್ರೋಲ್‌ ಬಳಸಬಹುದು, ಮತ್ತು ಪೆಟ್ರೋಲ್‌ ಬೆಲೆ ಜಾಸ್ತಿಯಾದರೆ ಮದ್ಯ-ಇಂಧನವನ್ನು ಬಳಸಬಹುದು.” (g 6/06)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ