ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 18 ಪು. 48-ಪು. 49 ಪ್ಯಾ. 4
  • ಉರಿಯುತ್ತಿರುವ ಪೊದೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಉರಿಯುತ್ತಿರುವ ಪೊದೆ
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಉರಿಯುತ್ತಿರುವ ಪೊದೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಮೋಶೆ ಓಡಿಹೋಗಲು ಕಾರಣ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಯೆಹೋವನ ಮಾರ್ಗಗಳನ್ನು ತಿಳಿದುಕೊಳ್ಳುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಯೇಸು ಕ್ರಿಸ್ತನು ಮೋಶೆಯಂಥ ಪ್ರವಾದಿ ಆಗಿದ್ದನು ಹೇಗೆ?
    ಕಾವಲಿನಬುರುಜು—1992
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 18 ಪು. 48-ಪು. 49 ಪ್ಯಾ. 4
ಉರಿಯುತ್ತಿರುವ ಪೊದೆಯ ಹತ್ತಿರ ಮೋಶೆ

ಪಾಠ 18

ಉರಿಯುತ್ತಿರುವ ಪೊದೆ

ಮೋಶೆ ಮಿದ್ಯಾನಿನಲ್ಲಿ 40 ವರ್ಷ ಇದ್ದ. ಅಲ್ಲಿ ಅವನಿಗೆ ಮದುವೆ ಆಯಿತು, ಮಕ್ಕಳೂ ಆದರು. ಒಂದಿನ ಅವನು ಸೀನಾಯಿ ಬೆಟ್ಟದಲ್ಲಿ ತನ್ನ ಕುರಿಗಳನ್ನು ಮೇಯಿಸುತ್ತಿದ್ದಾಗ ಆಶ್ಚರ್ಯಕರವಾದ ಒಂದು ವಿಷಯ ನೋಡಿದ. ಪೊದೆಯೊಂದಕ್ಕೆ ಬೆಂಕಿ ಹತ್ತಿಕೊಂಡು ಉರಿಯುತ್ತಿತ್ತು. ಆದರೆ ಅದು ಸುಟ್ಟು ಹೋಗುತ್ತಿರಲಿಲ್ಲ! ಯಾಕಿರಬಹುದು ಅಂತ ನೋಡಲು ಮೋಶೆ ಪೊದೆಯ ಹತ್ತಿರ ಹತ್ತಿರ ಹೋದಾಗ ಪೊದೆಯೊಳಗಿಂದ ಬಂದ ಧ್ವನಿ ‘ಮೋಶೆ! ಇನ್ನೂ ಹತ್ರ ಬರಬೇಡ. ನಿನ್ನ ಚಪ್ಪಲಿ ಬಿಚ್ಚಿಡು. ಯಾಕಂದ್ರೆ ನೀನು ನಿಂತ ಜಾಗ ಪವಿತ್ರವಾಗಿದೆ’ ಅಂದಿತು. ಅಲ್ಲಿ ದೇವದೂತನ ಮೂಲಕ ಯೆಹೋವನು ಮಾತಾಡಿದನು.

ಆಗ ಮೋಶೆಗೆ ಭಯ ಆಗಿ ಮುಖವನ್ನು ಮುಚ್ಚಿಕೊಂಡ. ಆ ಧ್ವನಿ ಅವನಿಗೆ ‘ನಾನು ಇಸ್ರಾಯೇಲ್ಯರ ಕಷ್ಟವನ್ನು ನೋಡಿದ್ದೀನಿ. ನಾನು ಅವರನ್ನ ಈಜಿಪ್ಟ್‌ ಜನ್ರ ಕೈಯಿಂದ ಬಿಡಿಸಿ ಒಳ್ಳೇ ದೇಶಕ್ಕೆ ಕರ್ಕೊಂಡು ಹೋಗ್ತೀನಿ. ಈಜಿಪ್ಟಿನಿಂದ ಅವರನ್ನು ಕರಕೊಂಡು ಬರಬೇಕಾಗಿರುವುದು ನೀನೇ’ ಎಂದಿತು. ಈ ಮಾತನ್ನು ಕೇಳಿದಾಗ ಮೋಶೆಗೆ ಎಷ್ಟು ಆಶ್ಚರ್ಯ ಆಗಿರಬೇಕಲ್ವಾ?

ಆಮೇಲೆ ಮೋಶೆ ‘ಜನರು ನಿನ್ನನ್ನು ಯಾರು ಕಳುಹಿಸಿದರು ಅಂತ ಕೇಳಿದರೆ ನಾನೇನು ಹೇಳಬೇಕು?’ ಎಂದು ಕೇಳಿದ. ಅದಕ್ಕೆ ದೇವರು ‘ಅಬ್ರಹಾಮ, ಇಸಾಕ, ಯಾಕೋಬನ ದೇವರು ಆದ ಯೆಹೋವ ನನ್ನನ್ನ ನಿಮ್ಮ ಹತ್ರ ಕಳಿಸಿದ್ದಾನೆ ಅಂತ ಹೇಳು’ ಅಂದನು. ಮತ್ತೆ ಮೋಶೆ ‘ಒಂದುವೇಳೆ ಜನ ನನ್ನ ಮಾತು ಕೇಳದಿದ್ರೆ ಏನು ಮಾಡೋದು?’ ಎಂದು ಕೇಳಿದ. ಆಗ ಯೆಹೋವನು ಮೋಶೆಗೆ ‘ನಾನು ನಿನಗೆ ಸಹಾಯ ಮಾಡುತ್ತೇನೆ’ ಎಂದು ಒಂದು ಗುರುತನ್ನು ಕೊಟ್ಟನು. ದೇವರು ಮೋಶೆಗೆ ಅವನ ಕೋಲನ್ನು ನೆಲಕ್ಕೆ ಬಿಸಾಡಲು ಹೇಳಿದನು. ಮೋಶೆ ಬಿಸಾಡಿದಾಗ ಕೋಲು ಹಾವಾಯಿತು! ಮೋಶೆ ಹಾವಿನ ಬಾಲವನ್ನು ಹಿಡಿದಾಗ ಅದು ಪುನಃ ಕೋಲಾಯಿತು. ಆಗ ಯೆಹೋವನು ‘ನೀನು ಈ ಅತ್ಭುತವನ್ನು ಮಾಡಿದಾಗ ನಿನ್ನನ್ನು ಕಳುಹಿಸಿದ್ದು ನಾನೇ ಎಂದು ಗೊತ್ತಾಗುತ್ತದೆ’ ಎಂದನು.

ನಂತರ ಮೋಶೆ ‘ನನಗೆ ಅಷ್ಟೊಂದು ಚೆನ್ನಾಗಿ ಮಾತಾಡೋಕೆ ಬರಲ್ಲ’ ಅಂದನು. ಅದಕ್ಕೆ ಯೆಹೋವನು ‘ಏನು ಹೇಳಬೇಕಂತ ನಾನು ನಿನಗೆ ಕಲಿಸ್ಕೊಡ್ತೀನಿ. ನಿನಗೆ ಸಹಾಯ ಮಾಡೋಕೆ ನಿನ್ನ ಅಣ್ಣ ಆರೋನನನ್ನು ಕಳುಹಿಸುತ್ತೇನೆ’ ಎಂದು ಮಾತುಕೊಟ್ಟನು. ಯೆಹೋವನು ತನ್ನ ಜೊತೆ ಇರುತ್ತಾನೆ ಎಂಬ ಭರವಸೆಯಿಂದ ಮೋಶೆ ಹೆಂಡತಿ-ಮಕ್ಕಳನ್ನು ಕರೆದುಕೊಂಡು ಈಜಿಪ್ಟಿನ ಕಡೆಗೆ ಹೆಜ್ಜೆಹಾಕಿದ.

“ನೀವು ಹೇಗೆ ಮಾತಾಡಬೇಕು, ಏನು ಮಾತಾಡಬೇಕು ಅಂತ ಚಿಂತೆ ಮಾಡಬೇಡಿ. ಏನು ಮಾತಾಡಬೇಕು ಅನ್ನೋದು ಆ ಕ್ಷಣದಲ್ಲಿ ನಿಮಗೆ ಗೊತ್ತಾಗುತ್ತೆ.”—ಮತ್ತಾಯ 10:19

ಪ್ರಶ್ನೆಗಳು: ಮೋಶೆ ತನ್ನ ಕುರಿಗಳನ್ನು ಮೇಯಿಸುತ್ತಿದ್ದಾಗ ಏನು ನೋಡಿದನು? ಯೆಹೋವನು ಮೋಶೆಗೆ ಏನು ಮಾಡಲು ಹೇಳಿದನು?

ವಿಮೋಚನಕಾಂಡ 3:1–4:20; ಅಪೊಸ್ತಲರ ಕಾರ್ಯ 7:30-36

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ