-
ದೇವರನ್ನು ಪ್ರೀತಿಸಲು ಶ್ರಮಪಡಬೇಕಾ?ಕಾವಲಿನಬುರುಜು: ದೇವರ ಹೆಸರಿಗೆ ಮಸಿಬಳಿಯುವ ಸುಳ್ಳುಗಳು
-
-
ಮುಖ್ಯ ವಿಷಯ | ದೇವರ ಹೆಸರಿಗೆ ಮಸಿಬಳಿಯುವ ಸುಳ್ಳುಗಳು
ದೇವರನ್ನು ಪ್ರೀತಿಸಲು ಶ್ರಮಪಡಬೇಕಾ?
“‘ನಿನ್ನ ದೇವರಾದ ಯೆಹೋವನನ್ನ ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಮನಸ್ಸಿಂದ ಪ್ರೀತಿಸಬೇಕು.’ ಇದೇ ಪ್ರಾಮುಖ್ಯವಾದ ಮತ್ತು ಮೊದಲು ಪಾಲಿಸಬೇಕಾದ ಆಜ್ಞೆ.”—ಯೇಸು ಕ್ರಿಸ್ತ, ಕ್ರಿ.ಶ 33.a
ದೇವರನ್ನ ಪ್ರೀತಿಸೋದು ತುಂಬ ಕಷ್ಟ ಯಾಕಂದ್ರೆ ಆತನು ತುಂಬ ದೂರದಲ್ಲಿ ಇದ್ದಾನೆ, ಆತನನ್ನ ಅರ್ಥ ಮಾಡಿಕೊಳ್ಳೋಕೆ ಆಗಲ್ಲ, ಆತನು ತುಂಬ ಕ್ರೂರಿ ಅಂತ ಕೆಲವರು ಹೇಳ್ತಾರೆ. ಈ ಕೆಳಗಿನ ಅನುಭವಗಳನ್ನ ನೋಡಿ:
“ನಾನು ಸಹಾಯಕ್ಕಾಗಿ ದೇವರಿಗೆ ಪ್ರಾರ್ಥಿಸಿದೆ. ಅದೇ ಸಮಯದಲ್ಲಿ ಆತನು ನನ್ನಿಂದ ದೂರದಲ್ಲಿದ್ದಾನೆ ಅಂತನೂ ಅನಿಸಿತು. ದೇವರಿಗೆ ಯಾವುದೇ ಭಾವನೆಗಳಿಲ್ಲ ಅಂತ ನಾನು ಅಂದ್ಕೊಂಡಿದ್ದೆ.”—ಮಾರ್ಕೊ, ಇಟಲಿ.
“ದೇವರ ಸೇವೆ ಮಾಡಬೇಕಂತ ತುಂಬ ಆಸೆ ಇತ್ತು. ಆದರೆ ದೇವರು ನನ್ನಿಂದ ದೂರದಲ್ಲಿದ್ದಾನೆ ಅಂತ ನಂಗೆ ಅನಿಸಿತು. ಆತನಲ್ಲಿ ಭಾವನೆಗಳೇ ಇಲ್ಲ, ಯಾವಾಗಲೂ ಶಿಕ್ಷೆ ಕೊಡ್ತಾನೆ ಅಂತ ನಾನು ಅಂದುಕೊಂಡಿದ್ದೆ.”—ರೊಸಾ, ಗ್ವಾಟೆಮಾಲ.
“ನಾನು ಚಿಕ್ಕವಳಿದ್ದಾಗ ದೇವರು ನಮ್ಮ ತಪ್ಪುಗಳನ್ನ ಹುಡುಕಿ ನಮ್ಮನ್ನ ಶಿಕ್ಷಿಸ್ತಾನೆ ಅಂತ ನಂಗೆ ಅನಿಸ್ತಿತ್ತು. ಆತನು ನಮ್ಮಿಂದ ದೂರದಲ್ಲಿದ್ದಾನೆ ಅಂತನೂ ಅನಿಸೋಕೆ ಶುರು ಆಯ್ತು. ದೇವರು ಒಬ್ಬ ಪ್ರಧಾನಮಂತ್ರಿ ತರ. ಜನರಿಗೆ ಸಹಾಯ ಮಾಡ್ತಾನೆ ಆದ್ರೆ ನಿಜವಾಗ್ಲೂ ಅವರ ಮೇಲೆ ಆಸಕ್ತಿ ತೋರಿಸಲ್ಲ ಅಂತ ನಾನು ಅಂದುಕೊಂಡೆ.”—ರೇಮಾಂಡ್, ಕೆನಡಾ.
ನಿಮಗೇನು ಅನಿಸುತ್ತೆ? ದೇವರನ್ನ ಪ್ರೀತಿಸೋಕೆ ಆಗೋದೇ ಇಲ್ಲವಾ? ಈ ಪ್ರಶ್ನೆಯನ್ನ ನೂರಾರು ವರ್ಷಗಳಿಂದ ಕೆಲವು ಕ್ರೈಸ್ತರು ಕೇಳಿದ್ದಾರೆ. ಮಧ್ಯ ಯುಗದಲ್ಲಿ ಅನೇಕ ಕ್ರೈಸ್ತ ಪ್ರಪಂಚದವರು ಸರ್ವಶಕ್ತ ದೇವರಿಗೆ ಪ್ರಾರ್ಥನೆ ಮಾಡ್ತಾ ಇರಲಿಲ್ಲ. ಯಾಕೆ? ಯಾಕಂದ್ರೆ ದೇವರಂದ್ರೆ ಜನರು ಹೆದರಿ ನಡುಗುತ್ತಾ ಇದ್ರು. ಇತಿಹಾಸಗಾರನಾದ ವಿಲ್ ಡುರಂಟ್ ಹೀಗಂತಾರೆ: “ಪಾಪ ಮಾಡಿದ ಒಬ್ಬ ಸಾಮಾನ್ಯ ಮನುಷ್ಯ ಕ್ರೂರಿಯಾದ ದೇವರಿಗೆ ಹೇಗೆ ತಾನೇ ಪ್ರಾರ್ಥನೆ ಮಾಡಕ್ಕೆ ಸಾಧ್ಯ?”
ಜನರು ಯಾಕೆ ದೇವರನ್ನ “ಒಬ್ಬ ಕ್ರೂರಿ” ಅಂತ ಅಂದುಕೊಳ್ತಾರೆ? ಇದರ ಬಗ್ಗೆ ನಿಜವಾಗಲೂ ಬೈಬಲ್‌ನಲ್ಲಿ ಏನಿದೆ? ದೇವರ ಬಗ್ಗೆ ಸತ್ಯ ಕಲಿತರೆ ನೀವು ಆತನನ್ನ ಪ್ರೀತಿಸೋಕೆ ಶುರು ಮಾಡ್ತಿರಾ?
-
-
ದೇವರಿಗೆ ಹೆಸರಿಲ್ಲ ಅನ್ನೋ ಸುಳ್ಳುಕಾವಲಿನಬುರುಜು: ದೇವರ ಹೆಸರಿಗೆ ಮಸಿಬಳಿಯುವ ಸುಳ್ಳುಗಳು
-
-
ಮುಖ್ಯ ವಿಷಯ | ದೇವರ ಹೆಸರಿಗೆ ಮಸಿಬಳಿಯುವ ಸುಳ್ಳುಗಳು
ದೇವರಿಗೆ ಹೆಸರಿಲ್ಲ ಅನ್ನೋ ಸುಳ್ಳು
ಅನೇಕರು ಏನು ನಂಬುತ್ತಾರೆ
“ದೇವರ ಹೆಸರನ್ನ ಬಳಸೋಕೆ ನಮಗೆ ಅನುಮತಿ ಸಿಕ್ಕಿಲ್ಲ, ಒಂದುವೇಳೆ ಸಿಕ್ಕಿದರೂ ಆ ಹೆಸರು ಏನು ಅಂತ ನಮಗೆ ಗೊತ್ತಿಲ್ಲ.”—ಪ್ರೊಫೆಸರ್ ಡೇವಿಡ್ ಕನಿಂಗ್‌ಹ್ಯಾಮ್, ತಿಯೊಲಾಜಿಕಲ್ ಸ್ಟಡಿಸ್.
ಬೈಬಲ್‌ನಲ್ಲಿರುವ ಸತ್ಯ
ದೇವರು ಹೀಗೆ ಹೇಳ್ತಾರೆ: “ನಾನು ಯೆಹೋವ. ಇದು ನನ್ನ ಹೆಸ್ರು.” (ಯೆಶಾಯ 42:8) ಯೆಹೋವ ಅನ್ನೋದು ಇಬ್ರಿಯ ಭಾಷೆಯ ಹೆಸರು. ಅದರ ಅರ್ಥ “ಆತನು ಆಗುವಂತೆ ಮಾಡ್ತಾನೆ.”—ಆದಿಕಾಂಡ 2:4, ಪಾದಟಿಪ್ಪಣಿ.
ನಾವು ಆತನ ಹೆಸರನ್ನ ಬಳಸಬೇಕು ಅನ್ನೋದು ಆತನ ಆಸೆ. “ಯೆಹೋವನಿಗೆ ಧನ್ಯವಾದ ಹೇಳಿ, ಆತನ ಹೆಸ್ರಲ್ಲಿ ಪ್ರಾರ್ಥಿಸಿ, ಆತನ ಕೆಲಸಗಳ ಬಗ್ಗೆ ಜನಾಂಗಗಳಿಗೆ ಹೇಳಿ! ಆತನ ಹೆಸ್ರು ಶ್ರೇಷ್ಠ ಅಂತ ಪ್ರಕಟಿಸಿ.”—ಯೆಶಾಯ 12:4.
ಯೇಸು ದೇವರ ಹೆಸರನ್ನ ಬಳಸಿದನು. ಆತನ ಪ್ರಾರ್ಥನೆಯಲ್ಲಿ ಯೆಹೋವನಿಗೆ ಹೀಗೆ ಹೇಳಿದನು, “ನಾನು ನಿನ್ನ ಹೆಸ್ರನ್ನ ಇವ್ರಿಗೆ [ಯೇಸುವಿನ ಶಿಷ್ಯರಿಗೆ] ಚೆನ್ನಾಗಿ ಹೇಳ್ಕೊಟ್ಟಿದ್ದೀನಿ, ಇನ್ನೂ ಹೇಳ್ಕೊಡ್ತೀನಿ.” ಯೇಸು ದೇವರ ಪವಿತ್ರ ಹೆಸರನ್ನ ಯಾಕೆ ಬಳಸಿದನು? ಯೇಸು ಮುಂದುವರಿಸಿ ಹೇಳಿದ್ದು: “ಯಾಕಂದ್ರೆ ನೀನು ನನ್ನನ್ನ ಪ್ರೀತಿಸಿದ ಹಾಗೆ ಇವ್ರೂ ಒಬ್ಬರನ್ನೊಬ್ರು ಪ್ರೀತಿಸಬೇಕು ಮತ್ತು ನಾನು ಇವ್ರ ಜೊತೆ ಆಪ್ತನಾಗಿ ಇರಬೇಕು.”—ಯೋಹಾನ 17:26.
ಇದು ಯಾಕೆ ಮುಖ್ಯ
“ಒಬ್ಬ ವ್ಯಕ್ತಿಗೆ ದೇವರ ಹೆಸರು ಗೊತ್ತಿಲ್ಲ ಅಂದರೆ ಆತನು ದೇವರನ್ನ ಒಬ್ಬ ವ್ಯಕ್ತಿ ತರ ನೋಡಲ್ಲ, ಆತನನ್ನ ಪ್ರೀತಿಸಲ್ಲ, ಆತನನ್ನ ಒಂದು ಶಕ್ತಿ ತರ ನೋಡುತ್ತಾನೆ” ಅಂತ ದೇವತಾಶಾಸ್ತ್ರಜ್ಞ ವಾಲ್ಟರ್ ಲೋರಿ ಬರೆದರು.
ದೇವರ ವೈಯಕ್ತಿಕ ಹೆಸರನ್ನ ಮರೆಮಾಚೋದು ಅಥವಾ ಬದಲಾಯಿಸೋದು ಬೈಬಲಿನಿಂದ ಆತನ ಹೆಸರನ್ನ ತೆಗೆದುಹಾಕಿದ ಹಾಗೆ.
ವಿಕ್ಟರ್ ಪ್ರತಿವಾರ ಚರ್ಚಿಗೆ ಹೋಗುತ್ತಿದ್ದ. ಆದರೆ ಆತನಿಗೆ ದೇವರ ಬಗ್ಗೆ ಏನೂ ಗೊತ್ತಿರಲಿಲ್ಲ. ಆತನು ಹೇಳೋದು, “ನನಗೆ ದೇವರ ಬಗ್ಗೆ ಮೊದಲನೇ ಸಲ ಪರಿಚಯ ಆಗಿದ್ದು ಆತನ ಹೆಸರು ಯೆಹೋವ ಅಂತ ಗೊತ್ತಾದಾಗ. ಆತನ ಬಗ್ಗೆ ತುಂಬಾ ಕೇಳಿದ್ದೆ ಆದರೆ ಆತನು ನಿಜ ವ್ಯಕ್ತಿ ಅಂತ ನಂಬಿದ್ದು ಇದೇ ಮೊದಲನೇ ಸಲ. ನಾನು ಆತನನ್ನ ಒಬ್ಬ ನೈಜ ವ್ಯಕ್ತಿಯಾಗಿ ನೋಡಲು ಶುರು ಮಾಡ್ದೆ. ಆತನ ಜೊತೆಗೆ ಒಂದು ಆಪ್ತ ಸಂಬಂಧವನ್ನ ಬೆಳೆಸಿಕೊಂಡೆ.”
ಯಾರು ಯೆಹೋವ ದೇವರ ಹೆಸರನ್ನ ಬಳಸುತ್ತಾರೋ ಅಂಥವರಿಗೆ ಯೆಹೋವನು ಹತ್ತಿರ ಆಗುತ್ತಾನೆ. ಯಾರು ಆತನ ಹೆಸರನ್ನ ಧ್ಯಾನಿಸುತ್ತಾರೋ ದೇವರು ಅವರಿಗೆ ಹೀಗೆ ಮಾತು ಕೊಟ್ಟಿದ್ದಾನೆ: “ಒಬ್ಬ ತಂದೆ ತನ್ನ ವಿಧೇಯ ಮಗನಿಗೆ ಕನಿಕರ ತೋರಿಸೋ ಹಾಗೆ ನಾನು ಅವ್ರಿಗೆ ಕನಿಕರ ತೋರಿಸ್ತೀನಿ.” (ಮಲಾಕಿ 3:16, 17) ದೇವರ ಹೆಸರು ಹೇಳೋ ಪ್ರತಿಯೊಬ್ಬರಿಗೆ ಬೈಬಲ್ ಹೀಗೆ ಹೇಳುತ್ತೆ: “ಯೆಹೋವನ ಹೆಸ್ರು ಹೇಳಿ ಪ್ರಾರ್ಥಿಸೋ ಪ್ರತಿಯೊಬ್ಬನು ರಕ್ಷಣೆ ಪಡಿತಾನೆ.”—ರೋಮನ್ನರಿಗೆ 10:13
-
-
ದೇವರು ಒಂದು ರಹಸ್ಯ ಅನ್ನೋ ಸುಳ್ಳುಕಾವಲಿನಬುರುಜು: ದೇವರ ಹೆಸರಿಗೆ ಮಸಿಬಳಿಯುವ ಸುಳ್ಳುಗಳು
-
-
ಮುಖ್ಯ ವಿಷಯ | ದೇವರ ಹೆಸರಿಗೆ ಮಸಿಬಳಿಯುವ ಸುಳ್ಳುಗಳು
ದೇವರು ಒಂದು ರಹಸ್ಯ ಅನ್ನೋ ಸುಳ್ಳು
ಅನೇಕರು ಏನು ನಂಬುತ್ತಾರೆ
“ರೋಮನ್ ಕ್ಯಾಥೋಲಿಕ್, ಈಸ್ಟರ್ನ್ ಆರ್ತೊಡಾಕ್ಸ್ ಮತ್ತು ಪ್ರೊಟೆಸ್ಟೆಂಟ್ ಧರ್ಮಗಳು ತಂದೆ, ಮಗ ಮತ್ತು ಪವಿತ್ರಾತ್ಮ ಒಂದೇ ಅಂತ ನಂಬುತ್ತಾರೆ. ಕ್ರೈಸ್ತ ಧರ್ಮಶಾಸ್ತ್ರದ ಪ್ರಕಾರ, ಈ ಮೂವರು ದೇವರುಗಳು ಅಂತ ಹೇಳದೆ ಈ ಮೂರು ಸೇರಿ ಒಂದೇ ದೇವರು ಅಂತ ಹೇಳುತ್ತಾರೆ.”—ದಿ ನ್ಯೂ ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ.
ಬೈಬಲ್‌ನಲ್ಲಿರುವ ಸತ್ಯ
ದೇವರ ಮಗನಾದ ಯೇಸು ‘ನಾನು ತಂದೆ ಸಮಾನ’ ಅಂತ ಯಾವತ್ತೂ ಹೇಳಲಿಲ್ಲ. ಬದಲಿಗೆ ‘ನಾನು ಅಪ್ಪನ ಹತ್ರ ಹೋಗ್ತಾ ಇದ್ದೀನಿ ಯಾಕಂದ್ರೆ ಅಪ್ಪ ನನಗಿಂತ ದೊಡ್ಡವನು’ ಅಂತ ಯೇಸು ಹೇಳಿದನು. (ಯೋಹಾನ 14:28) ತನ್ನ ಹಿಂಬಾಲಕರಲ್ಲಿ ಯೇಸು ಒಬ್ಬನಿಗೆ ಹೀಗೆ ಹೇಳಿದನು: “ನನ್ನ ತಂದೆ ನಿಮ್ಮ ತಂದೆ, ನನ್ನ ದೇವರು ನಿಮ್ಮ ದೇವರು ಆಗಿರುವವನ ಹತ್ರ ಹೋಗ್ತಾ ಇದ್ದೀನಿ.”—ಯೋಹಾನ 20:17.
ಪವಿತ್ರಶಕ್ತಿ ಒಂದು ವ್ಯಕ್ತಿಯಲ್ಲ. ಆರಂಭದ ಕ್ರೈಸ್ತರಿಗೆ ‘ಪವಿತ್ರಶಕ್ತಿ ಸಿಕ್ತು.’ ಯೆಹೋವನು ಹೀಗೆ ಹೇಳಿದನು: “ನಾನು ಎಲ್ಲ ತರದ ಜನ್ರ ಮೇಲೆ ನನ್ನ ಪವಿತ್ರಶಕ್ತಿ ಸುರಿಸ್ತೀನಿ.” (ಅಪೊಸ್ತಲರ ಕಾರ್ಯ 2:1-4, 17) ಪವಿತ್ರಶಕ್ತಿ ತ್ರಯೈಕ್ಯದ ಭಾಗ ಅಲ್ಲ. ದೇವರ ಶಕ್ತಿಯಾಗಿದೆ.
ಇದು ಯಾಕೆ ಮುಖ್ಯ
ಕ್ಯಾಥೊಲಿಕ್ ವಿದ್ವಾಂಸರಾದ ಕಾರ್ಲ್ ರಾಹನರ್ ಮತ್ತು ಹರ್ಬರ್ಟ್ ವಾರ್‌ಗ್ರಿಮ್ಲರ್ ತ್ರಯೈಕ್ಯದ ಬಗ್ಗೆ ಹೀಗೆ ಹೇಳ್ತಾರೆ, “ಈ ವಿಷಯವನ್ನ ವಿವರಿಸದೆ ಇದ್ರೆ ಯಾರಿಗೂ ಗೊತ್ತಾಗಲ್ಲ, ಒಂದುವೇಳೆ ವಿವರಿಸಿದರೂ ಅದು ಸಂಪೂರ್ಣವಾಗಿ ಅರ್ಥ ಆಗಲ್ಲ.” ಅರ್ಥ ಮಾಡಿಕೊಳ್ಳೋಕೆ ಅಸಾಧ್ಯವಾಗಿರೋ ಒಬ್ಬ ವ್ಯಕ್ತಿಯನ್ನ ನೀವು ಪ್ರೀತಿಸೋಕೆ ಆಗುತ್ತಾ? ಹಾಗಾಗಿ ತ್ರಯೈಕ್ಯ ಸಿದ್ಧಾಂತ, ದೇವರ ಬಗ್ಗೆ ತಿಳಿದುಕೊಳ್ಳೋಕೆ ಮತ್ತು ಪ್ರೀತಿಸೋಕೆ ಅಡ್ಡ ಗೋಡೆಯಾಗಿದೆ.
ಈ ಮುಂಚೆ ಹೇಳಿದ ಮಾರ್ಕೊ, ತ್ರಯೈಕ್ಯವನ್ನು ಒಂದು ಅಡ್ಡ ಗೋಡೆಯಾಗಿ ನೋಡಿದನು. ಅವನು ಹೇಳಿದ್ದು, “ದೇವರು ತನ್ನ ಗುರುತನ್ನ ನನ್ನಿಂದ ಮರೆಮಾಚಿದ್ದಾನೆ, ಆತನು ಒಬ್ಬ ರಹಸ್ಯ, ಆತನನ್ನ ಅರ್ಥಮಾಡಿಕೊಳ್ಳೋಕೆ ಆಗಲ್ಲ.” ಆದರೆ ದೇವರು ‘ಗಲಿಬಿಲಿಯ ದೇವರಲ್ಲ’ ಅಂತ ನಮಗೆ ಬೈಬಲ್ ಹೇಳುತ್ತೆ. (1 ಕೊರಿಂಥ 14:33, ಅಮೇರಿಕನ್ ಸ್ಟಾಂಡರ್ಡ್ ವರ್ಷನ್) ದೇವರು ತನ್ನ ಗುರುತನ್ನ ನಮ್ಮಿಂದ ಮರೆಮಾಚಿಲ್ಲ. ನಾವು ಆತನ ಬಗ್ಗೆ ತಿಳಿದುಕೊಳ್ಳಬೇಕು ಅನ್ನೋದು ದೇವರ ಆಸೆಯಾಗಿದೆ. ಯೇಸು ಹೇಳಿದ್ದು: “ನಾವು ಯಾರಿಗೆ ಆರಾಧನೆ ಮಾಡ್ತಾ ಇದ್ದೀವಿ ಅಂತ ನಮಗೆ ಗೊತ್ತು.”—ಯೋಹಾನ 4:22.
“ದೇವರು ತ್ರಯೈಕ್ಯದ ಭಾಗ ಅಲ್ಲ ಅಂತ ನನಗೆ ಗೊತ್ತಾದಾಗ, ನಾನು ಆತನ ಜೊತೆ ವೈಯಕ್ತಿಕ ಸಂಬಂಧವನ್ನ ಬೆಳೆಸಿಕೊಳ್ಳೋಕೆ ಆಯ್ತು” ಅಂತ ಮಾರ್ಕೊ ಹೇಳ್ತಾನೆ. ನಾವು ಯೆಹೋವ ದೇವರನ್ನ ರಹಸ್ಯ ವ್ಯಕ್ತಿ ತರ ನೋಡದೆ ಒಬ್ಬ ನೈಜ್ಯ ವ್ಯಕ್ತಿ ತರ ನೋಡಿದ್ರೆ ಆತನನ್ನ ಪ್ರೀತಿಸೋಕೆ ತುಂಬ ಸುಲಭ ಆಗುತ್ತೆ. “ಬೇರೆಯವ್ರನ್ನ ಪ್ರೀತಿ ಮಾಡ್ದೇ ಇರುವವ್ರಿಗೆ ನಿಜವಾಗ್ಲೂ ದೇವರ ಬಗ್ಗೆ ಗೊತ್ತಿಲ್ಲ. ಯಾಕಂದ್ರೆ ದೇವರು ಪ್ರೀತಿಯಾಗಿದ್ದಾನೆ” ಅಂತ ಬೈಬಲ್ ಹೇಳುತ್ತೆ.—1 ಯೋಹಾನ 4:8.
-
-
ದೇವರು ಕ್ರೂರಿ ಅನ್ನೋ ಸುಳ್ಳುಕಾವಲಿನಬುರುಜು: ದೇವರ ಹೆಸರಿಗೆ ಮಸಿಬಳಿಯುವ ಸುಳ್ಳುಗಳು
-
-
ಮುಖ್ಯ ವಿಷಯ | ದೇವರ ಹೆಸರಿಗೆ ಮಸಿಬಳಿಯುವ ಸುಳ್ಳುಗಳು
ದೇವರು ಕ್ರೂರಿ ಅನ್ನೋ ಸುಳ್ಳು
ಅನೇಕರು ಏನು ನಂಬುತ್ತಾರೆ
“ಪಾಪ ಮಾಡುತ್ತಾ ಸಾಯೋ ಒಬ್ಬ ವ್ಯಕ್ತಿ ಸತ್ತ ಕೂಡಲೇ ನರಕಕ್ಕೆ ಹೋಗುತ್ತಾನೆ. ಅಲ್ಲಿ ಅವನು ನರಕದ ಶಿಕ್ಷೆಯನ್ನು ಅನುಭವಿಸುತ್ತಾ ‘ನಿರಂತರ ಬೆಂಕಿಯಲ್ಲಿ’ ಇರಬೇಕಾಗುತ್ತೆ.” (ಕೇಟ್ಚಿಸಂ ಆಫ್ ದಿ ಕ್ಯಾಥೊಲಿಕ್ ಚರ್ಚ್) ನರಕದಲ್ಲಿ ದೇವರಿಂದ ಸಂಪೂರ್ಣ ಪ್ರತ್ಯೇಕವಾಗಿ ಇರಬೇಕಾಗುತ್ತೆ ಅಂತ ಕೆಲವು ಧಾರ್ಮಿಕ ಗುರುಗಳು ಹೇಳುತ್ತಾರೆ.
ಬೈಬಲ್‌ನಲ್ಲಿರುವ ಸತ್ಯ
“ಪಾಪ ಮಾಡೋ ವ್ಯಕ್ತಿನೇ (ಪ್ರಾಣ) ಸಾಯ್ತಾನೆ.” (ಯೆಹೆಜ್ಕೇಲ 18:4) “ಸತ್ತವ್ರಿಗೆ ಏನೂ ಗೊತ್ತಿರಲ್ಲ.” (ಪ್ರಸಂಗಿ 9:5) ಪ್ರಾಣನೇ ಸತ್ತು ಹೋದ ಮೇಲೆ ‘ನಿರಂತರ ಬೆಂಕಿಯಲ್ಲಿ’ ಅಥವಾ ದೇವರಿಂದ ದೂರವಾಗಿ ಹೇಗೆ ನೋವನ್ನು ಅನುಭವಿಸೋಕೆ ಆಗುತ್ತೆ?
ಬೈಬಲ್‌ನಲ್ಲಿ “ನರಕ” ಅಂತ ಅನುವಾದ ಮಾಡಿದ ಹೀಬ್ರೂ ಮತ್ತು ಗ್ರೀಕ್ ಪದದ ಅರ್ಥ ಸಾಮಾನ್ಯ ಸಮಾಧಿಯನ್ನ ಸೂಚಿಸುತ್ತೆ. ಉದಾಹರಣೆಗೆ, ಯೋಬನಿಗೆ ಕಾಯಿಲೆ ಬಂದಾಗ ಅವನು ಹೀಗೆ ಪ್ರಾರ್ಥಿಸಿದ: ‘ನೀವು ನನ್ನನ್ನ ಸಮಾಧಿಯಲ್ಲಿ [“ನರಕದಲ್ಲಿ,” ಡೌಯ್-ರೀಮ್ಸ್ ವರ್ಷನ್] ಮುಚ್ಚಿಡಬೇಕು ಅನ್ನೋದೇ ನನ್ನ ಆಸೆ.’ (ಯೋಬ 14:13, ಪವಿತ್ರ ಬೈಬಲ್–ಈಸಿ-ಟೂ-ರೀಡ್ ವರ್ಷನ್) ಯೋಬ ಸತ್ತ ಮೇಲೆ ತಾನು ನರಕದಲ್ಲಿ ಶಿಕ್ಷೆ ಅನುಭವಿಸುತ್ತೇನೆ ಅಂತಾನೋ ಅಥವಾ ದೇವರಿಂದ ದೂರ ಆಗಿ ನೋವನ್ನ ಅನುಭವಿಸುತ್ತೇನೆ ಅಂತಾನೋ ಹೇಳಿಲ್ಲ. ತನ್ನನ್ನ ಸಮಾಧಿಯಲ್ಲಿ ಇಡಬೇಕು ಅಂತ ಕೇಳಿಕೊಂಡ.
ಇದು ಯಾಕೆ ಮುಖ್ಯ
ಕ್ರೂರತೆ ನಮ್ಮನ್ನ ದೇವರಿಂದ ದೂರ ಮಾಡುತ್ತೆ. ಮೆಕ್ಸಿಕೋದಲ್ಲಿರೋ ರೋಸಿಯೋ ಹೀಗೆ ಹೇಳುತ್ತಾಳೆ, “ಚಿಕ್ಕ ವಯಸ್ಸಿಂದ ನನಗೆ ನರಕದ ಸಿದ್ಧಾಂತವನ್ನ ಕಲಿಸಲಾಯಿತು. ನನಗೆ ಎಷ್ಟು ಹೆದರಿಕೆ ಆಯಿತು ಅಂದ್ರೆ ದೇವರಲ್ಲಿ ಒಳ್ಳೇ ಗುಣಗಳೇ ಇಲ್ಲ ಅಂತ ಅಂದ್ಕೊಂಡಿದ್ದೆ. ಆತನೊಬ್ಬ ಕೋಪಿಷ್ಠ, ಕ್ರೂರಿ ಅಂತ ನಾನು ನಂಬಿದೆ.”
ದೇವರ ನ್ಯಾಯತೀರ್ಪಿನ ಬಗ್ಗೆ ಮತ್ತು ಸತ್ತವರ ಸ್ಥಿತಿ ಬಗ್ಗೆ ಬೈಬಲ್‌ನಿಂದ ಕಲಿತಾಗ ದೇವರ ಬಗ್ಗೆ ಇರೋ ತಪ್ಪಭಿಪ್ರಾಯವನ್ನು ರೋಸಿಯೋ ಬದಲಾಯಿಸಿಕೊಂಡಳು. ರೋಸಿಯೋ ಮುಂದುವರಿಸಿ ಹೀಗೆ ಹೇಳಿದಳು, “ನನ್ನ ಮನಸ್ಸು ಹಗುರ ಆಯ್ತು. ನಾನು ದೇವರ ಮೇಲೆ ನಂಬಿಕೆ ಇಡೋಕೆ ಶುರು ಮಾಡಿದೆ. ಆತನು ನಮ್ಮನ್ನ ಪ್ರೀತಿಸುತ್ತಾನೆ ನಾವೂ ಆತನನ್ನ ಪ್ರೀತಿಸಬಹುದು. ಒಬ್ಬ ತಂದೆ ತನ್ನ ಮಕ್ಕಳ ಕೈಹಿಡಿದು ಸಹಾಯ ಮಾಡಿದ ತರ ದೇವರು ನಮಗೆ ಸಹಾಯ ಮಾಡುತ್ತಾನೆ.”—ಯೆಶಾಯ 41:13.
ಅನೇಕರು ನರಕದ ಭಯದಿಂದ ಆ ಬೋಧನೆಯನ್ನ ನಂಬಿದ್ದಾರೆ. ನೀವು ದೇವರಿಗೆ ಹೆದರಿಕೊಂಡು ಆತನ ಸೇವೆ ಮಾಡಬೇಕು ಅಂತ ಆತನು ಬಯಸಲ್ಲ. ಬದಲಿಗೆ ಯೇಸು ಹೇಳಿದ್ದು: ‘ನಿನ್ನ ದೇವರಾದ ಯೆಹೋವನನ್ನ ನೀನು ಪ್ರೀತಿಸಬೇಕು.’ (ಮಾರ್ಕ 12:29, 30) ಅಷ್ಟೇ ಅಲ್ಲ, ದೇವರು ಇಂದು ಅನ್ಯಾಯ ಮಾಡಲ್ಲ ಅಂತ ನಾವು ಅರ್ಥ ಮಾಡಿಕೊಂಡ್ರೆ ಮುಂದೆ ಆತನು ಮಾಡೋ ನ್ಯಾಯವಾದ ತೀರ್ಪುಗಳ ಮೇಲೆ ನಾವು ಭರವಸೆ ಇಡಬಹುದು. ಯೋಬನ ಸ್ನೇಹಿತನಾದ ಎಲೀಹು ತರ “ಸತ್ಯ ದೇವರು ಕೆಟ್ಟದ್ದನ್ನ ಮಾಡೋದೇ ಇಲ್ಲ, ಸರ್ವಶಕ್ತ ದೇವರು ತಪ್ಪನ್ನ ಮಾಡೋಕೆ ಸಾಧ್ಯಾನೇ ಇಲ್ಲ” ಅಂತ ನಾವು ಭರವಸೆಯಿಂದ ಹೇಳಬಹುದು.—ಯೋಬ 34:10.
-
-
ಸತ್ಯ ನಿಮ್ಮನ್ನು ಬಿಡುಗಡೆ ಮಾಡುತ್ತೆಕಾವಲಿನಬುರುಜು: ದೇವರ ಹೆಸರಿಗೆ ಮಸಿಬಳಿಯುವ ಸುಳ್ಳುಗಳು
-
-
ಮುಖ್ಯ ವಿಷಯ | ದೇವರ ಹೆಸರಿಗೆ ಮಸಿಬಳಿಯುವ ಸುಳ್ಳುಗಳು
ಸತ್ಯ ನಿಮ್ಮನ್ನು ಬಿಡುಗಡೆ ಮಾಡುತ್ತೆ
ಒಂದಿನ ಯೇಸು ಯೆರೂಸಲೇಮ್‌ನಲ್ಲಿ ಅವನ ಅಪ್ಪ ಯೆಹೋವನ ಬಗ್ಗೆ ಮಾತಾಡುತ್ತಾ ಸುಳ್ಳು ಧರ್ಮದ ಗುರುಗಳ ನಿಜ ಬಣ್ಣವನ್ನ ಬಯಲುಪಡಿಸಿದ. (ಯೋಹಾನ 8:12-30) ಯೇಸು ಆ ದಿನ ಏನು ಹೇಳಿದನೊ ಅದರಿಂದ ಇಂದು ನಾವು ದೇವರ ಬಗ್ಗೆ ಸತ್ಯವನ್ನ ತಿಳಿದುಕೊಳ್ಳೋಕೆ ಸಹಾಯ ಆಗುತ್ತೆ. ಯೇಸು ಹೇಳಿದ್ದು: “ನಾನು ಕಲಿಸಿದ್ದನ್ನ ಯಾವಾಗ್ಲೂ ಮಾಡ್ತಾ ಇದ್ರೆ ನೀವು ನನ್ನ ನಿಜ ಶಿಷ್ಯರಾಗ್ತೀರ. ಸತ್ಯ ಏನಂತ ನಿಮಗೆ ಗೊತ್ತಾಗುತ್ತೆ. ಆ ಸತ್ಯ ನಿಮ್ಮನ್ನ ಬಿಡುಗಡೆ ಮಾಡುತ್ತೆ.”—ಯೋಹಾನ 8:31, 32.
“ನಾನು ಕಲಿಸಿದ್ದನ್ನ ಯಾವಾಗ್ಲೂ ಮಾಡ್ತಾ ಇದ್ರೆ” ಅನ್ನೊ ಯೇಸುವಿನ ಮಾತನ್ನ ಪಾಲಿಸಿದಾಗ, ಧಾರ್ಮಿಕ ಬೋಧನೆಗಳಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಅಂತ ತಿಳಿದುಕೊಳ್ಳೋಕೆ ಸಹಾಯ ಆಗುತ್ತೆ. ದೇವರ ಬಗ್ಗೆ ನೀವು ಏನಾದ್ರೂ ಕೇಳಿಸಿಕೊಂಡಾಗ, ’ಇದು ಯೇಸು ಹೇಳಿದ ಮಾತಿಗೆ ಮತ್ತು ಪವಿತ್ರ ಬೈಬಲ್‌ಗೆ ಅನುಗುಣವಾಗಿ ಇದೆಯಾ?’ ಅಂತ ನಿಮ್ಮನ್ನೇ ಕೇಳಿಕೊಳ್ಳಿ. ಅಪೊಸ್ತಲ ಪೌಲನ ಮಾತುಗಳನ್ನ ಕೇಳಿಸಿಕೊಂಡ ಕೆಲವರು “ತಾವು ಕೇಳ್ತಾ ಇರೋ ವಿಷ್ಯಗಳು ನಿಜಕ್ಕೂ ಪವಿತ್ರಗ್ರಂಥದಲ್ಲಿ ಇದ್ಯಾ ಅಂತ ತಿಳ್ಕೊಳ್ಳೋಕೆ ಪ್ರತಿದಿನ ವಚನಗಳನ್ನ ಚೆನ್ನಾಗಿ ಪರೀಕ್ಷಿಸ್ತಿದ್ರು.”—ಅಪೊಸ್ತಲರ ಕಾರ್ಯ 17:11.
ಯೆಹೋವನ ಸಾಕ್ಷಿಗಳ ಜೊತೆ ಬೈಬಲ್ ಅಧ್ಯಯನ ಮಾಡುವ ಮೂಲಕ ಈ ಲೇಖನ ಸರಣಿಯಲ್ಲಿ ಬಂದ ಮಾರ್ಕೊ, ರೊಸಾ ಮತ್ತು ರೇಮಾಂಡ್ ತಾವು ಕಲಿಯುತ್ತಿರೋ ವಿಷಯಗಳನ್ನ ಜಾಗರೂಕತೆಯಿಂದ ಪರೀಕ್ಷಿಸಿ ನೋಡಿದ್ರು. ಆಗ ಅವರಿಗೆ ಏನು ಗೊತ್ತಾಯಿತು?
ಮಾರ್ಕೊ: “ನನಗೆ ಮತ್ತು ನನ್ನ ಹೆಂಡತಿಗೆ ಏನೇ ಪ್ರಶ್ನೆ ಬಂದರೂ ನಮ್ಮ ಬೈಬಲ್ ಟೀಚರ್ ಅವಕ್ಕೆ ಬೈಬಲ್‌ನಿಂದಲೇ ಉತ್ತರ ಕೊಡುತ್ತಿದ್ದರು. ಹೀಗೆ ಯೆಹೋವ ದೇವರ ಮೇಲೆ ನಮ್ಮ ಪ್ರೀತಿ ಬೆಳೆಯುತ್ತಾ ಹೋಯಿತು, ಗಂಡ-ಹೆಂಡತಿಯಾಗಿ ನಮ್ಮ ಸಂಬಂಧನೂ ಬಲಗೊಳ್ತು.”
ರೊಸಾ: “ದೇವರ ವ್ಯಕ್ತಿತ್ವ ಹೀಗಿರಬಹುದು ಅನ್ನುವ ಮನುಷ್ಯರ ಅಭಿಪ್ರಾಯಗಳೇ ಬೈಬಲ್‌ನಲ್ಲಿ ಇದೆ ಅಂತ ನಾನು ಮೊದಲು ಅಂದುಕೊಂಡಿದ್ದೆ. ಆದರೆ ಕ್ರಮೇಣ ಬೈಬಲ್‌ನಿಂದನೇ ನನ್ನ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಕ್ಕಿತು. ಈಗ ನನಗೆ ಯೆಹೋವನು ನೈಜನಾಗಿದ್ದಾನೆ ಮತ್ತು ನಾನು ಆತನ ಮೇಲೆ ಭರವಸೆ ಇಡ್ತೀನಿ.”
ರೇಮಾಂಡ್: “ನಾನು ದೇವರ ಬಗ್ಗೆ ಕಲಿಬೇಕು ಅಂತ ಪ್ರಾರ್ಥನೆ ಮಾಡಿದೆ. ಸ್ವಲ್ಪ ಸಮಯ ಕಳೆದ ಮೇಲೆ ನಾನು ನನ್ನ ಗಂಡ ಬೈಬಲ್ ಅಧ್ಯಯನ ತಗೊಳೋಕೆ ಶುರು ಮಾಡಿದ್ವಿ. ಕೊನೆಗೂ ಯೆಹೋವ ದೇವರ ಬಗ್ಗೆ ಸತ್ಯ ನಮಗೆ ಗೊತ್ತಾಯಿತು. ಆತನು ಎಷ್ಟು ಒಳ್ಳೇ ದೇವರು ಅಂತ ತಿಳಿದು ನಾವು ತುಂಬ ಖುಷಿ ಪಟ್ಟಿದ್ದೀವಿ.”
ದೇವರ ಬಗ್ಗೆ ಜನ ಹೇಳುವ ಸುಳ್ಳನ್ನು ಬಯಲು ಪಡಿಸುವುದರ ಜೊತೆಗೆ ಆತನಲ್ಲಿ ಇರುವ ಅದ್ಭುತ ಗುಣಗಳ ಬಗ್ಗೆನೂ ಬೈಬಲ್ ತಿಳಿಸುತ್ತೆ. ಆತನ ಪ್ರೇರಿತ ವಾಕ್ಯವಾದ ಬೈಬಲ್, ’ನಮಗೆ ದೇವರು ದಯೆಯಿಂದ ಹೇಳಿದ ವಿಷಯಗಳನ್ನ ಅರ್ಥ ಮಾಡಿಕೊಳ್ಳೋಕೆ’ ಸಹಾಯ ಮಾಡುತ್ತೆ. (1ಕೊರಿಂಥ 2:12) ದೇವರ ಬಗ್ಗೆ, ಆತನ ಉದ್ದೇಶದ ಬಗ್ಗೆ ಮತ್ತು ನಮ್ಮ ಭವಿಷ್ಯದ ಬಗ್ಗೆ ಇರುವಂಥ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರವನ್ನ ಬೈಬಲ್‌ನಿಂದ ನೀವೇ ಪಡೆದುಕೊಳ್ಳಬಹುದು. ಈ ಕೆಲವು ಪ್ರಶ್ನೆಗಳಿಗೆ ಉತ್ತರ www.pr2711.comನಲ್ಲಿ ನಿಮಗೆ ಸಿಗುತ್ತೆ. ಅಲ್ಲಿ “ಬೈಬಲ್ ಬೋಧನೆಗಳು >ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ” ಅನ್ನೊ ಕಡೆ ನೋಡಿ. ಅದೇ ವೆಬ್‌ಸೈಟ್‌ನಲ್ಲಿ ನೀವು ಬೈಬಲ್ ಅಧ್ಯಯನಕ್ಕೂ ವಿನಂತಿಸಬಹುದು ಅಥವಾ ಒಬ್ಬ ಯೆಹೋವನ ಸಾಕ್ಷಿ ಹತ್ತಿರನೂ ಕೇಳಬಹುದು. ಬೈಬಲ್ ಅಧ್ಯಯನ ಮಾಡುವುದರಿಂದ ದೇವರನ್ನು ಪ್ರೀತಿಸುವುದು ಎಷ್ಟು ಸುಲಭ ಅಂತ ನೀವು ತಿಳಿದುಕೊಳ್ತಿರಾ ಅನ್ನೊ ನಂಬಿಕೆ ನಮಗಿದೆ.
-