ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • “ನಿನ್ನ ಹರಕೆಯನ್ನು ಒಪ್ಪಿಸು”
    ಕಾವಲಿನಬುರುಜು (ಅಧ್ಯಯನ)—2017 | ಏಪ್ರಿಲ್‌
    • 7. (ಎ) ಹನ್ನ ದೇವರಿಗೆ ಏನೆಂದು ಮಾತು ಕೊಟ್ಟಳು? ಯಾಕೆ? ಆಮೇಲೆ ಏನಾಯಿತು? (ಬಿ) ಹನ್ನ ದೇವರಿಗೆ ಹರಕೆ ಹೊತ್ತದ್ದರಿಂದ ಸಮುವೇಲನ ಜೀವನ ಹೇಗಿರಬೇಕಿತ್ತು? (ಪಾದಟಿಪ್ಪಣಿ ನೋಡಿ.)

      7 ಹನ್ನಳು ಕೂಡ ಜೀವನದಲ್ಲಿ ತುಂಬ ಒತ್ತಡ ತುಂಬಿದ್ದ ಸಮಯದಲ್ಲಿ ಯೆಹೋವನಿಗೆ ಒಂದು ಮಾತು ಕೊಟ್ಟಳು. ಅವಳಿಗೆ ಮಕ್ಕಳಿರಲಿಲ್ಲ. ಆ ನೋವು ಅವಳನ್ನು ಕಿತ್ತು ತಿನ್ನುತ್ತಿತ್ತು. ಆಡಿಕೊಳ್ಳುವವರ ಬಾಯಿಗೆ ಆಹಾರವಾಗಿದ್ದಳು. (1 ಸಮು. 1:4-7, 10, 16) ಆಗ ಅವಳು ತನ್ನ ನೋವನ್ನು ಯೆಹೋವನ ಹತ್ತಿರ ತೋಡಿಕೊಂಡಳು. “ಸೇನಾಧೀಶ್ವರನಾದ ಯೆಹೋವನೇ, ನಿನ್ನ ದಾಸಿಯ ದುಃಖವನ್ನು ಪರಾಂಬರಿಸು; ನನ್ನನ್ನು ತಿರಸ್ಕರಿಸದೆ ಕನಿಕರವಿಟ್ಟು ನನಗೊಬ್ಬ ಮಗನನ್ನು ಕೊಡಬೇಕು; ಅವನು ಜೀವದಿಂದಿರುವ ತನಕ ನಿನ್ನವನಾಗಿಯೇ ಇರುವ ಹಾಗೆ ನಿನಗೆ ಪ್ರತಿಷ್ಠಿಸಿ ಕೊಡುವೆನು; ಅವನ ತಲೆಯ ಮೇಲೆ ಕ್ಷೌರ ಕತ್ತಿಯನ್ನು ಬರಗೊಡುವದಿಲ್ಲ ಎಂದು ಪ್ರಾರ್ಥಿಸಿ ಹರಕೆಮಾಡಿದಳು.”a (1 ಸಮು. 1:11) ಆ ಪ್ರಾರ್ಥನೆಯನ್ನು ಯೆಹೋವನು ಕೇಳಿದನು. ಮುಂದಿನ ವರ್ಷವೇ ಅವಳಿಗೆ ಮುದ್ದಾದ ಮಗ ಹುಟ್ಟಿದ. ಆಗ ಅವಳ ಸಂತೋಷಕ್ಕೆ ಎಲ್ಲೆನೇ ಇರಲಿಲ್ಲ! “ಯೆಹೋವನನ್ನು ಬೇಡಿ ಪಡಕೊಂಡೆನೆಂದು” ಹೇಳಿ ಮಗುವಿಗೆ ಸಮುವೇಲ ಎಂದು ಹೆಸರಿಟ್ಟಳು. (1 ಸಮು. 1:20) ಮಗ ಹುಟ್ಟಿದ ಮೇಲೆ ಅವಳು ದೇವರಿಗೆ ಕೊಟ್ಟ ಮಾತನ್ನು ಮರೆಯಲಿಲ್ಲ.

  • “ನಿನ್ನ ಹರಕೆಯನ್ನು ಒಪ್ಪಿಸು”
    ಕಾವಲಿನಬುರುಜು (ಅಧ್ಯಯನ)—2017 | ಏಪ್ರಿಲ್‌
    • a ತನಗೆ ಒಬ್ಬ ಮಗ ಹುಟ್ಟಿದರೆ ಅವನು ಜೀವನಪೂರ್ತಿ ನಾಜೀರನಾಗಿ ಇರುತ್ತಾನೆಂದು ಹನ್ನ ಯೆಹೋವನಿಗೆ ಮಾತು ಕೊಟ್ಟಳು. ಇದರರ್ಥ ಅವನು ತನ್ನನ್ನು ಯೆಹೋವನಿಗೆ ಸಮರ್ಪಿಸಿಕೊಂಡು, ತನ್ನ ಜೀವನವನ್ನು ಆತನ ಸೇವೆಗಾಗಿ ಮುಡಿಪಾಗಿಡಬೇಕಿತ್ತು.—ಅರ. 6:2, 5, 8.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ