ನೀವು ಬೈಬಲಿನಲ್ಲಿ ಭರವಸೆ ಇಡಬಲ್ಲಿರೊ?
ನೀವು ಒಂದು ಬೈಬಲನ್ನು ಎತ್ತಿಕೊಳ್ಳುವಲ್ಲಿ, ಒಂದು ನಾಣ್ಯವನ್ನು ಕಂಡುಕೊಳ್ಳಲು ನಿರೀಕ್ಷಿಸುವಿರೊ? ಈ ಪ್ರಾಚೀನ ಬೆಳ್ಳಿ ನಾಣ್ಯದ ವಿಷಯದಲ್ಲೇನು?
ಬೈಬಲ್ ಆಕರ್ಷಣೀಯ ಕಥೆಗಳನ್ನು ಮತ್ತು ಶ್ಲಾಘ್ಯನೀಯ ನೈತಿಕತೆಗಳನ್ನು ಒದಗಿಸುವ ಒಂದು ಹಳೇ ಪುಸ್ತಕವೆಂದು ಅನೇಕರು ಆಲೋಚಿಸುತ್ತಾರೆ. ಆದರೂ, ಬೈಬಲಿನ ದಾಖಲೆಗಳು ನಿಷ್ಕೃಷ್ಟ ಇತಿಹಾಸವಾಗಿದೆ ಎಂದು ಅವರು ನಂಬುವುದಿಲ್ಲ, ಆದುದರಿಂದ ಅದು ದೇವರ ವಾಕ್ಯವಾಗಿದೆ ಎಂದು ಅವರು ನಿರಾಕರಿಸುತ್ತಾರೆ. ಹಾಗಿದ್ದರೂ, ಬೈಬಲಿನ ನಿಷ್ಕೃಷ್ಟತೆಯ ಹೇರಳ ರುಜುವಾತುಗಳು ಇವೆ. ಈ ನಾಣ್ಯವು (ದೊಡ್ಡದು ಮಾಡಿದ ನೋಟ) ಒಂದು ಒಳ್ಳೆಯ ಉದಾಹರಣೆಯಾಗಿದೆ. ಬರವಣಿಗೆಯು ಏನನ್ನು ಹೇಳುತ್ತದೆ?
ಈ ನಾಣ್ಯವನ್ನು ಈಗ ಟರ್ಕಿಯಾಗಿರುವುದರ ಆಗ್ನೇಯ ಭಾಗದಲ್ಲಿನ ಒಂದು ಪಟ್ಟಣವಾದ ತಾರ್ಸದಲ್ಲಿ ಮಾಡಲಾಗಿತ್ತು. ಸಾ.ಶ.ಪೂ. ನಾಲ್ಕನೇ ಶತಮಾನದಲ್ಲಿ ಪಾರಸಿಯ ರಾಜ್ಯಪಾಲ ಮಾಜೆಯಸ್ನ ಆಳಿಕೆಯಲ್ಲಿ ಈ ನಾಣ್ಯವನ್ನು ನಿರ್ಮಿಸಲಾಯಿತು. ಇದು ಆತನನ್ನು “ಹೊಳೆಯ ಈಚೆಯ,” ಅಂದರೆ ಅದು, ಯೂಫ್ರೇಟೀಸ್ ಹೊಳೆಯ ಆಚೆಯ, ಪ್ರದೇಶಗಳ ರಾಜ್ಯಪಾಲ ಎಂದು ಗುರುತಿಸುತ್ತದೆ.
ಆದರೆ ಆ ವಾಕ್ಸರಣಿಯು ಯಾಕೆ ಅಭಿರುಚಿಯದ್ದಾಗಿದೆ? ಯಾಕಂದರೆ ಅದೇ ವರ್ಣನೆಯನ್ನು ನಿಮ್ಮ ಬೈಬಲಿನಲ್ಲಿ ನೀವು ಕಂಡುಕೊಳ್ಳುವಿರಿ. ಎಜ್ರ 5:6–6:13 ಪಾರಸಿಯ ರಾಜ ದಾರ್ಯಾವೆಷ ಮತ್ತು ಒಬ್ಬ ತತ್ತೆನೈಯ ಎಂದು ಹೆಸರಿಸಲ್ಪಟ್ಟ ಅಧಿಪತಿಯ ನಡುವೆ ಹೋಲಿಕೆಯನ್ನು ಇಡುತ್ತದೆ. ಆಗಿನ ವಿವಾದವು ಯೆಹೂದ್ಯರು ಯೆರೂಸಲೇಮಿನಲ್ಲಿ ಅವರ ದೇವಾಲಯವನ್ನು ಪುನಃ ಕಟ್ಟುವುದಾಗಿತ್ತು. ಎಜ್ರನು ದೇವರ ನಿಯಮಶಾಸ್ತ್ರದ ಕುಶಲ ನಕಲುಗಾರನಾಗಿದ್ದನು, ಮತ್ತು ಅವನು ಬರೆದಿರುವುದರಲ್ಲಿ ಅವನು ಕರಾರುವಾಕಾಗಿ, ನಿಷ್ಕೃಷ್ಟವಾಗಿ ಇರುವಂತೆ ನೀವು ನಿರೀಕ್ಷಿಸುವಿರಿ. ಎಜ್ರ 5:6 ಮತ್ತು 6:13 ರಲ್ಲಿ ತತ್ತೆನೈಯನು “ಹೊಳೆಯ ಈಚೆಯ ಅಧಿಪತಿ” ಎಂಬದಾಗಿ ಕರೆಯಲ್ಪಟ್ಟಿರುವುದನ್ನು ನೀವು ನೋಡುವಿರಿ.
ಎಜ್ರನು ಅದನ್ನು ಸಾಧಾರಣ ಸಾ.ಶ.ಪೂ. 460 ರಲ್ಲಿ, ಈ ನಾಣ್ಯವು ಛಾಪಿಸಲ್ಪಡುವ 100 ವರುಷಗಳಷ್ಟು ಮುಂಚೆಯೇ ಬರೆದನು. ಒಬ್ಬ ಪ್ರಾಚೀನ ಅಧಿಕಾರಿಯ ವರ್ಣನೆಯು ಒಂದು ಚಿಕ್ಕ ವಿವರವಾಗಿರುತ್ತದೆ ಎಂದು ಭಾವಿಸುವ ಜನರಿದ್ದಾರೆ. ಆದರೆ ಇಂಥ ಚಿಕ್ಕ ವಿವರಗಳಲ್ಲಿಯೂ ಬೈಬಲ್ ಬರಹಗಾರರ ಮೇಲೆ ನೀವು ಆತುಕೊಳ್ಳಬಹುದಾಗುವಲ್ಲಿ, ಅವರು ಬರೆದ ಇನ್ನಿತರ ವಿಷಯಗಳ ಮೇಲೆ ಅದು ನಿಮ್ಮ ಭರವಸೆಯನ್ನು ಹೆಚ್ಚಿಸಬಾರದೆ?
ಈ ಸಂಚಿಕೆಯ ಮೊದಲ ಎರಡು ಲೇಖನಗಳಲ್ಲಿ, ಅಂಥ ಭರವಸೆಗೆ ಹೆಚ್ಚಿನ ಕಾರಣಗಳನ್ನು ನೀವು ಕಂಡುಕೊಳ್ಳುವಿರಿ.
[ಪುಟ 32 ರಲ್ಲಿರುವ ಚಿತ್ರ ಕೃಪೆ]
Collection of Israel Dept. of Antiquities Exhibited & photographed Israel Museum