ನೀವು ಪ್ರಾರ್ಥಿಸುವಾಗ ದೇವರು ಆಲಿಸುತ್ತಾನೋ?
ಒಬ್ಬ ಮುಖ್ಯಾಧಿಕಾರಿಯು ಒಂದು ವಿಷಯವನ್ನು ಬೇರೆಯವರಿಗೆ ವಹಿಸಬೇಕೋ ಅಥವಾ ಅದನ್ನು ತಾನೇ ವೈಯಕ್ತಿಕವಾಗಿ ನಿರ್ವಹಿಸಬೇಕೋ ಎಂಬದನ್ನು ನಿರ್ಣಯಿಸುತ್ತಾನೆ. ಅದೇ ರೀತಿಯಲ್ಲಿ, ವಿಶ್ವದ ಪರಮಾಧಿಕಾರಿಗೆ ಯಾವುದೇ ಒಂದು ವಿಷಯದಲ್ಲಿ ವೈಯಕ್ತಿಕ ಒಳಗೂಡುವಿಕೆಯ ವಿಸ್ತಾರ್ಯವನ್ನು ಆಯ್ಕೆಮಾಡುವ ಸ್ವಾತಂತ್ರ್ಯವು ಇರುತ್ತದೆ. ನಮ್ಮ ಪ್ರಾರ್ಥನೆಯಲ್ಲಿ ತನ್ನನ್ನು ವೈಯಕ್ತಿಕವಾಗಿ ಒಳಗೂಡಿಸಲು ದೇವರು ಆಯ್ಕೆ ಮಾಡಿರುತ್ತಾನೆಂದು ದೇವರ ವಾಕ್ಯವು ಕಲಿಸುತ್ತಾದ್ದರಿಂದ ನಾವು ಅವನ್ನು ಆತನಿಗೆ ಉದ್ದೇಶಿಸಿ ಮಾಡುವಂತೆ ಮಾರ್ಗದರ್ಶಿಸಲ್ಪಟ್ಟಿದ್ದೇವೆ.—ಕೀರ್ತನೆ 66:19; 69:13.
ಈ ವಿಷಯದಲ್ಲಿ ದೇವರ ಆಯ್ಕೆಯು, ತನ್ನ ಮಾನವ ಸೇವಕರ ಪ್ರಾರ್ಥನೆಗಳಲ್ಲಿ ಆತನ ವೈಯಕ್ತಿಕ ಆಸಕ್ತಿಯನ್ನು ಪ್ರಕಟಪಡಿಸುತ್ತದೆ. ತನ್ನ ಜನರನ್ನು ಪ್ರತಿಯೊಂದು ಯೋಚನೆ ಮತ್ತು ಚಿಂತೆಯೊಂದಿಗೆ ತನ್ನನ್ನು ಗೋಚರಿಸುವುದರಿಂದ ನಿರುತ್ತೇಜನಗೊಳಿಸುವ ಬದಲಾಗಿ, ಆತನು ಅವರಿಗೆ ಬೋಧಿಸುವುದು: “ಎಡೆಬಿಡದೆ ಪ್ರಾರ್ಥನೆ ಮಾಡಿರಿ,” “ಬೇಸರಗೊಳ್ಳದೆ ಪ್ರಾರ್ಥನೆಮಾಡಿರಿ,” “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು,” “ನಿಮ್ಮ ಚಿಂತೆಯನ್ನೆಲ್ಲಾ ಆತನ [ದೇವರ] ಮೇಲೆ ಹಾಕಿರಿ.”—1 ಥೆಸಲೋನಿಕ 5:17; ರೋಮಾಪುರ 12:12; ಕೀರ್ತನೆ 55:22; 1 ಪೇತ್ರ 5:7.
ತನ್ನ ಸೇವಕರ ಪ್ರಾರ್ಥನೆಗಳಿಗೆ ಗಮನಕೊಡಲು ಬಯಸದೆ ಇದ್ದಿದ್ದರೆ, ಆತನನ್ನು ಆ ರೀತಿಯಲ್ಲಿ ಗೋಚರಿಸಲು ಅವನೆಂದೂ ಏರ್ಪಡಿಸತ್ತಿರಲಿಲ್ಲ ಮತ್ತು ಅದನ್ನು ನಿರರ್ಗಳವಾಗಿ ಉಪಯೋಗಿಸುವಂತೆ ಪ್ರೋತ್ಸಾಹಿಸತ್ತಿರಲಿಲ್ಲ. ಹೀಗಿರಲಾಗಿ, ತನ್ನ ಜನರಿಗೆ ತನ್ನನ್ನು ಅಷ್ಟು ಗೋಚರಣೀಯನಾಗಿ ಮಾಡಿಕೊಳ್ಳುವ ದೇವರ ಈ ಆಯ್ಕೆಯು, ಆತನು ಸಾಕ್ಷತ್ ಆಲಿಸುತ್ತಾನೆಂಬ ಭರವಸಕ್ಕೆ ಒಂದು ಕಾರಣವಾಗಿರುತ್ತದೆ. ಹೌದು, ತನ್ನ ಸೇವಕರ ಪ್ರತಿಯೊಂದು ಪ್ರಾರ್ಥನೆಗಳಿಗೆ ಆತನು ಗಮನಕೊಡುತ್ತಾನೆ.
ದೇವರು ಪ್ರಾರ್ಥನೆಗೆ ಕಿವಿಗೊಡುತ್ತಾನೆ ಎಂದು ಬೈಬಲ್ ಸರಳವಾಗಿ ಹೇಳುತ್ತದೆಂಬ ನಿಜತ್ವವನ್ನು ಸಹ ನಾವು ದುರ್ಲಕ್ಷಿಸಬಾರದು. ಉದಾಹರಣೆಗಾಗಿ ಅಪೊಸ್ತಲ ಯೋಹಾನನು ಬರೆಯುವುದು: “ನಾವು ದೇವರ ಚಿತ್ತಾನುಸಾರವಾಗಿ ಏನಾದರೂ ಬೇಡಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬ ಧೈರ್ಯವು ಆತನ ವಿಷಯವಾಗಿ ನಮಗುಂಟು.” (1 ಯೋಹಾನ 5:14) ರಾಜ ದಾವೀದನು ಯೆಹೋವ ದೇವರಿಗೆ “ಪ್ರಾರ್ಥನೆಯನ್ನು ಕೇಳುವವನೇ” ಎಂದು ಸೂಚಿಸುತ್ತಾ, “ಅವನು ನನ್ನ ಮೊರೆಯನ್ನು ಕೇಳುತ್ತಾನೆ” ಎಂದು ಆತ್ಮವಿಶ್ವಾಸದಿಂದ ನುಡಿದಿರುವನು.—ಕೀರ್ತನೆ 55:17; 65:2.
ಹೀಗೆ ಪ್ರಾರ್ಥನೆ ಮಾಡುವ ಕ್ರಿಯೆಯಲ್ಲಿ ತಾನೇ ನಿಸ್ಸಂದೇಹವಾಗಿ ಪ್ರಯೋಜನವಿದೆ ಮಾತ್ರವಲ್ಲದೆ, ನೀತಿವಂತನು ಪ್ರಾರ್ಥಿಸುವಾಗ ಎಷ್ಟೋ ಹೆಚ್ಚು ಒಳಗೂಡಿರುತ್ತದೆಂದು ಶಾಸ್ತ್ರವಚನಗಳು ತೋರಿಸುತ್ತವೆ. ಯಾರೋ ಆಲಿಸುತ್ತಾನೆ. ಆ ಆಲೈಸುವಾತನು ದೇವರೇ.—ಯಾಕೋಬ 5:16-18.
ಆಲೈಸಲ್ಪಟ್ಟ ಪ್ರಾರ್ಥನೆಗಳು
ಯಾರ ಪ್ರಾರ್ಥನೆಗಳು ವಾಸ್ತವದಲ್ಲಿ ದೇವರಿಂದ ಆಲಿಸಲ್ಪಟ್ಟು ಉತ್ತರಿಸಲ್ಪಟ್ಟವೋ ಆ ಜನರ ವೃತ್ತಾಂತಗಳಿಂದ ಬೈಬಲ್ ತುಂಬಿಹೋಗಿದೆ. ಪ್ರಾರ್ಥನೆಯ ಪ್ರಯೋಜನಗಳು ಒಬ್ಬನ ಯೋಚನೆಗಳನ್ನು ಸ್ಪಷ್ಟೀಕರಿಸುವ ಮತ್ತು ವ್ಯಕ್ತಪಡಿಸುವ ವಾಸಿಕಾರಕ ಪರಿಣಾಮಕ್ಕಿಂತ ಮಿಗಿಲಾಗಿವೆಯೆಂದು ಅವರ ಅನುಭವಗಳು ಸ್ಪಷ್ಟವಾಗಿಗಿ ದೃಢೀಕರಿಸುತ್ತವೆ. ತನ್ನ ಪ್ರಾರ್ಥನೆಗಳಿಗೆ ಹೊಂದಿಕೆಯಲ್ಲಿ ವ್ಯಕ್ತಿಯೊಬ್ಬನು ಮಾಡುವ ವೈಯಕ್ತಿಕ ಪ್ರಯತ್ನಗಳಿಗಿಂತ ಅವು ಅತೀತವಾಗಿವೆ.
ದೃಷ್ಟಾಂತಕ್ಕಾಗಿ, ಇಸ್ರಾಯೇಲಿನ ರಾಜತ್ವವನ್ನು ಕಿತ್ತುಕೊಳ್ಳಲು ಅಬ್ಷಾಲೋಮನ ಒಳಸಂಚಿನಿಂದ ಎದುರಿಸಲ್ಪಟ್ಟಾಗ ರಾಜ ದಾವೀದನು ಪ್ರಾರ್ಥಿಸಿದ್ದು: “ಯೆಹೋವನೇ, ಅಹೀತೋಫೆಲನ [ಅಬ್ಷಾಲೋಮನ ಸಲಹೆಗಾರ] ಆಲೋಚನೆಗಳನ್ನು ನಿರರ್ಥಕಪಡಿಸು.” ಇದೇನೂ ಚಿಕ್ಕ ವಿನಂತಿಯಾಗಿರಲಿಲ್ಲ, ಯಾಕಂದರೆ “ಆ ಕಾಲದಲ್ಲಿ ಅಹೀತೋಫೆಲನ ಆಲೋಚನೆಗಳಿಗೆ ದೈವೋತ್ತರಗಳಿಗಿರುವಷ್ಟು ಬೆಲೆಯಿತ್ತು.” ಅರಸನಾದ ದಾವೀದನನ್ನು ದೊಬ್ಬಿಬಿಡಲು ಅಹೀತೋಫೆಲನ ಯುದ್ಧೋಪಾಯಗಳನ್ನು ಅನಂತರ ಅಬ್ಷಾಲೋಮನು ತಿರಸ್ಕರಿಸಿಬಿಟ್ಟನು. ಯಾಕೆ? “ಯೆಹೋವನು ಅಬ್ಷಾಲೋಮನಿಗೆ ಕೇಡನ್ನುಂಟುಮಾಡಬೇಕೆಂದು ಅಹೀತೋಫೆಲನ ಆಲೋಚನೆಯನ್ನು ವ್ಯರ್ಥಮಾಡಿದನು.” ಸರಳವಾಗಿ ಹೇಳುವುದಾದರೆ, ದಾವೀದನ ಪ್ರಾರ್ಥನೆಯು ಆಲೈಸಲ್ಪಟ್ಟಿತ್ತು.—2 ಸಮುವೇಲ 15:31; 16:23; 17:14.
ತದ್ರೀತಿಯಲ್ಲಿ ಹಿಜ್ಕೀಯನು ತನ್ನ ವಿಷಮ ರೋಗದಿಂದ ಬಿಡುಗಡೆಗಾಗಿ ದೇವರಿಗೆ ವಿನಂತಿಮಾಡಿದ ಅನಂತರ ಅವನಿಗೆ ಗುಣವಾಯಿತು. ಇದು ಕೇವಲ ಪ್ರಾರ್ಥನೆ ಮಾಡಿದ ಫಲಿತಾಂಶವಾಗಿ ಹಿಜ್ಕೀಯನಿಗೆ ಭಾವನಾತ್ಮಕ ಪ್ರಯೋಜನಗಳನ್ನು ಮಾತ್ರವೇ ತಂದ ಕಾರಣವೋ? ಖಂಡಿತವಾಗಿಯೂ ಅಲ್ಲ! ಹಿಜ್ಕೀಯನಿಗೆ ಪ್ರವಾದಿಯಾದ ಯೆಶಾಯನ ಮೂಲಕ ನೀಡಲ್ಪಟ್ಟ ಯೆಹೋವನ ಸಂದೇಶವು ಹೀಗಿತ್ತು: “ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ; ನಿನ್ನ ಕಣ್ಣೀರನ್ನು ನೋಡಿದ್ದೇನೆ. ನೀನು ಗುಣಹೊಂದಿ ನಾಡದು ನನ್ನ ಆಲಯಕ್ಕೆ ಬರುವಿ.”—2 ಅರಸು 20:1-6.
ಯಾರ ಪ್ರಾರ್ಥನೆಯು ಅವನು ಅಪೇಕ್ಷಿಸಿದಕ್ಕಿಂತಲೂ ತಡವಾಗಿ ಉತ್ತರಿಸಲ್ಪಟ್ಟಿತ್ತೋ ಆ ದಾನಿಯೇಲನಿಗೆ ಯೆಹೋವನ ದೂತನು ಈ ಆಶ್ವಾಸನೆಯನ್ನು ಕೊಟ್ಟನು: “ನಿನ್ನ ವಿಜ್ಞಾಪನೆಯು ದೇವರಿಗೆ ಮುಟ್ಟಿತು.” ಹನ್ನ, ಯೇಸುವಿನ ಶಿಷ್ಯರು ಮತ್ತು ಸೇನಾ ಅಧಿಕಾರಿಯಾದ ಕೊರ್ನೇಲ್ಯನು ಮುಂತಾದ ಇತರರ ಪ್ರಾರ್ಥನೆಗಳು ಮಾನವ ಸಾಮರ್ಥ್ಯಕ್ಕೆ ಮಾತ್ರವೇ ಪ್ರಶಸ್ತಿಯನ್ನು ಕೊಡಸಾಧ್ಯವಿಲ್ಲದ ರೀತಿಯಲ್ಲಿ ಉತ್ತರಿಸಲ್ಪಟ್ಟವು. ಹೀಗೆ ಬೈಬಲ್ ಸ್ಪಷ್ಟವಾಗಿಗಿ ಕಲಿಸುತ್ತದೇನಂದರೆ ದೈವಿಕ ಚಿತ್ತಕ್ಕೆ ಹೊಂದಿಕೆಯಲ್ಲಿರುವ ಪ್ರಾರ್ಥನೆಗಳು ದೇವರಿಂದ ಸ್ವೀಕರಿಸಲ್ಪಡುತ್ತವೆ, ಕೇಳಲ್ಪಡುತ್ತವೆ ಮತ್ತು ಉತ್ತರಿಸಲ್ಪಡುತ್ತವೆ.—ದಾನಿಯೇಲ 10:2-14; 1 ಸಮುವೇಲ 1:1-20; ಅ.ಕೃತ್ಯಗಳು 4:24-31; 10:1-7.
ಆದರೆ ಇಂದು ದೇವರು ತನ್ನ ನಂಬಿಗಸ್ತ ಸೇವಕರ ಪ್ರಾರ್ಥನೆಗಳನ್ನು ಹೇಗೆ ಉತ್ತರಿಸುತ್ತಾನೆ?
ಪ್ರಾರ್ಥನೆಗಳಿಗೆ ಉತ್ತರಗಳು
ಮೇಲೆ ತಿಳಿಸಿದ ಪ್ರಾರ್ಥನೆಗಳು ನಾಟಕೀಯವಾಗಿ ಅದ್ಭುತಕರವಾದ ರೀತಿಯಲ್ಲಿ ಉತ್ತರಿಸಲ್ಪಟ್ಟವು. ಆದರೆ ಬೈಬಲ್ ಕಾಲದಲ್ಲಿ ಸಹ ಪ್ರಾರ್ಥನೆಗಳಿಗೆ ಅತ್ಯಂತ ತೀವ್ರತೆಯ ಉತ್ತರಗಳು ಅಷ್ಟು ಸುಲಭವಾಗಿ ವಿವೇಚನೀಯವಾಗಿರಲಿಲ್ಲ ಎಂಬದನ್ನು ಮನಸ್ಸಿನಲ್ಲಿಡಿರಿ. ಇದು ಏಕೆಂದರೆ ದೇವರ ಸೇವಕರು ಒಂದು ನೀತಿಯ ಮಾರ್ಗಕ್ಕೆ ಅಂಟಿರಲು ಶಕ್ತರಾಗುವಂತೆ ಬೇಕಾದ ನೈತಿಕ ಬಲ ಮತ್ತು ಜ್ಞಾನೋದಯವನ್ನು ಕೊಡುವುದಕ್ಕೆ ಅವು ಸಂಬಂಧಿಸಿದದ್ದರಿಂದಲೇ. ವಿಶೇಷವಾಗಿ ಕ್ರೈಸ್ತರಿಗೆ, ಪ್ರಾರ್ಥನೆಗಳಿಗೆ ಉತ್ತರಗಳು ಮುಖ್ಯವಾಗಿ ಆತ್ಮಿಕ ವಿಷಯಗಳಲ್ಲಿ ಒಳಗೂಡಿರುತ್ತವೆ, ಪ್ರದರ್ಶನಾತ್ಮಕ ಯಾ ಮಹತ್ಕಾರ್ಯಗಳ ಮೂಲಕವಾಗಿ ಅಲ್ಲ.—ಕೊಲೊಸ್ಸೆ 1:9.
ಆದುದರಿಂದ ಒಂದು ವೇಳೆ ನಿಮ್ಮ ಪ್ರಾರ್ಥನೆಗಳು ನೀವು ಅಪೇಕ್ಷಿಸುವ ಯಾ ಇಷ್ಟಪಡುವ ರೀತಿಯಲ್ಲಿ ಯಾವಾಗಲೂ ಉತ್ತರಿಸಲ್ಪಡದೆ ಇದ್ದರೆ ನಿರಾಶೆಗೊಳ್ಳಬೇಡಿರಿ. ಉದಾಹರಣೆಗಾಗಿ, ಒಂದು ಸಂಕಟವನ್ನು ತೆಗೆದುಬಿಡುವ ಬದಲಿಗೆ, ಅದನ್ನು ತಾಳಿಕೊಳ್ಳುವಂತೆ ದೇವರು ನಿಮಗೆ “ಬಲಾಧಿಕ್ಯವನ್ನು” ಕೊಡಲು ಆಯ್ಕೆ ಮಾಡಬಹುದು. (2 ಕೊರಿಂಥ 4:7; 2 ತಿಮೊಥಿ 4:17) ಅಂಥ ಶಕ್ತಿಯ ಬೆಲೆಯನ್ನು ನಾವೆಂದೂ ಅಲ್ಪವೆಂದು ಎಣಿಸಬಾರದು ಮಾತ್ರವಲ್ಲದೆ ಯೆಹೋವನು ನಮ್ಮ ಪ್ರಾರ್ಥನೆಯನ್ನು ನಿಜವಾಗಿ ಉತ್ತರಿಸಲೇ ಇಲ್ಲವೆಂದೂ ತೀರ್ಮಾನಿಸಬಾರದು.
ಬೇರೆ ಯಾರನ್ನೂ ಅಲ್ಲ, ದೇವರ ಕುಮಾರನಾದ ಸ್ವತಃ ಯೇಸು ಕ್ರಿಸ್ತನನ್ನು ಗಮನಿಸಿರಿ. ಪ್ರಾಯಶಃ ದೇವನಿಂದಕನಾಗಿ ಸಾಯಬಾರದು ಎಂಬ ಉತ್ಕಟ ಚಿಂತೆಯಿಂದ ಯೇಸು ಪ್ರಾರ್ಥಿಸಿದ್ದು: “ತಂದೆಯೇ ನಿನಗೆ ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು.” ಈ ಪ್ರಾರ್ಥನೆಯನ್ನು ದೇವರು ಅನುಗ್ರಹದಿಂದ ಆಲೈಸಿದನೋ? ಹೌದು, ಇಬ್ರಿಯ 5:7 ಇದನ್ನು ದೃಢೀಕರಿಸಿಯದೆ. ಯಾತನೆಯ ಕಂಭದ ಮೇಲೆ ಸಾಯುವ ಅಗತ್ಯದಿಂದ ದೇವರು ತನ್ನ ಮಗನನ್ನು ಬಿಡಿಸಲಿಲ್ಲ. ಬದಲಿಗೆ “ಪರಲೋಕದಿಂದ ಬಂದ ಒಬ್ಬ ದೇವದೂತನು ಆತನಿಗೆ ಕಾಣಿಸಿಕೊಂಡು ಅವನನ್ನು ಬಲಪಡಿಸಿದನು.”—ಲೂಕ 22:42, 43.
ಒಂದು ಕೌತುಕದ, ಅದ್ಭುತಕರ ಉತ್ತರವೋ? ನಮ್ಮಲ್ಲಿ ಯಾರಿಗಾದರೂ ಅದು ಹಾಗಿರುವುದು! ಆದರೆ ಅಂಥ ಶಕ್ತಿಯ ಮೂಲನಾದ ಯೆಹೋವ ದೇವರಿಗೆ ಅದೇನೂ ಒಂದು ಅಸಾಮಾನ್ಯ ಮಹತ್ಕಾರ್ಯವಲ್ಲ. ಮತ್ತು ಪರಲೋಕದಲ್ಲಿ ಆರಂಭದ ಸಮಯದಿಂದ ಇದ್ದ ಯೇಸುವಿಗೆ, ದೇವದೂತರು ಮನುಷ್ಯರಿಗೆ ಗೋಚರವಾಗಿದ್ದ ಗತಕಾಲದ ಸಂದರ್ಭಗಳ ಪರಿಚಯವಿತ್ತು. ಹೀಗೆ ಒಬ್ಬ ದೇವದೂತನ ಕಾಣಿಸಿಕೊಳ್ಳುವಿಕೆಯು ನಮ್ಮ ಮೇಲೆ ಕೌತುಕದ ಪ್ರಭಾವ ಬೀರುವಂತೆ ಆತನ ಮೇಲೆ ಬೀರಿದಿರ್ದಲಿಕ್ಕಿಲ್ಲ. ಆದಾಗ್ಯೂ, ಯಾರನ್ನು ಯೇಸು ತನ್ನ ಮಾನವ-ಪೂರ್ವ ಅಸ್ತಿತ್ವದಿಂದ ತಿಳಿದಿದ್ದಿರಬಹುದೋ ಆ ದೂತನು ಮುಂದಿರುವ ಪರೀಕೆಗ್ಷಾಗಿ ಆತನನ್ನು ಬಲಪಡಿಸಲು ನೆರವಾದನು.
ಇಂದಿನ ಆತನ ನಂಬಿಗಸ್ತ ಸೇವಕರ ಪ್ರಾರ್ಥನೆಗಳನ್ನು ಉತ್ತರಿಸುವಲ್ಲಿ, ಯೆಹೋವನು ಆಗಿಂದಾಗ್ಯೆ ತಾಳಿಕೊಳ್ಳಲು ಬೇಕಾದ ಬಲವನ್ನು ಕೊಡುತ್ತಾನೆ. ಈ ಬಲವು ಯಾರೊಂದಿಗೆ ನಾವು ವೈಯಕ್ತಿಕವಾಗಿ ಸಹವಸಿಸುತ್ತೇವೋ ಆ ಜತೆ ಆರಾಧಕರಿಂದ ಉತ್ತೇಜನದ ರೂಪದಲ್ಲಿ ನಮಗೆ ದೊರಕಬಹುದು. ಒಂದುವೇಳೆ ನಮ್ಮ ಜತೆಸೇವಕರು ನಮಗೆ ಬಂದಂಥ ಪರೀಕ್ಷೆಗಳನ್ನು ಅನುಭವಿಸಿಲ್ಲವಾದ್ದರಿಂದ ಅವರು ನಮ್ಮನ್ನು ಬಲಪಡಿಸ ಶಕ್ತರಲ್ಲವೆಂದು ತೀರ್ಮಾನಿಸಿ ಆ ಉತ್ತೇಜನವನ್ನು ನಮ್ಮಲ್ಲಿ ಯಾವನಾದರೂ ನಿರಾಕರಿಸಬಯಸುವನೋ? ಯೇಸು ತನಗೆ ಕಾಣಿಸಿಕೊಂಡ ಆ ದೇವದೂತನ ಕಡೆಗೆ ಅಂಥ ಒಂದು ನೋಟವನ್ನು ತಕ್ಕೊಳ್ಳ ಸಾಧ್ಯವಿತ್ತು. ಬದಲಿಗೆ ಅವನು ಆ ಉತ್ತೇಜನವನ್ನು ತನ್ನ ಪ್ರಾರ್ಥನೆಗೆ ಯೆಹೋವನ ಉತ್ತರವಾಗಿ ಸ್ವೀಕರಿಸಿದನು ಮತ್ತು ಹಾಗೆ ತನ್ನ ತಂದೆಯ ಚಿತ್ತವನ್ನು ನಂಬಿಗಸ್ತಿಕೆಯಿಂದ ನೆರವೇರಿಸಲು ಶಕ್ತನಾದನು. ನಾವು ಸಹ ದೇವರು ನಮ್ಮ ಪ್ರಾರ್ಥನೆಗಳಿಗೆ ಉತ್ತರವಾಗಿ ಕೊಡುವ ಬಲವನ್ನು ವಿನಯಶೀಲರಾಗಿ ಸ್ವೀಕರಿಸಬೇಕು. ಅಂಥ ತಾಳ್ಮೆಯುಕ್ತ ಸಹನೆಯ ಅವಧಿಗಳನ್ನು ಹೆಚ್ಚಾಗಿ ಅಗಣಿತ ಆಶೀರ್ವಾದಗಳು ಹಿಂಬಾಲಿಸುವುವು ಎಂದೂ ನೆನಪಿನಲ್ಲಿಡಿರಿ.—ಪ್ರಸಂಗಿ 11:6; ಯಾಕೋಬ 5:11.
ದೇವರು ಆಲಿಸುತ್ತಾನೆಂಬ ಭರವಸದಿಂದಿರ್ರಿ
ಒಂದುವೇಳೆ ನಿಮಗೆ ಆ ಕೂಡಲೇ ಉತ್ತರವು ದೊರಕದೆ ಇದ್ದಲ್ಲಿ ಪ್ರಾರ್ಥನೆಯ ಕಾರ್ಯಸಾಧಕತೆಯಲ್ಲಿ ಭರವಸವನ್ನು ಕಳಕೊಳ್ಳದಿರ್ರಿ. ಸಂಕಟದಿಂದ ವೈಯಕ್ತಿಕ ಪರಿಹಾರಕ್ಕಾಗಿ ಅಥವಾ ದೇವರ ಸೇವೆಯಲ್ಲಿ ಅಧಿಕ ಜವಾಬ್ದಾರಿಕೆಗಳಿಗಾಗಿ ಮಾಡುವಂಥ ಕೆಲವು ಪ್ರಾರ್ಥನೆಗಳ ಉತ್ತರಗಳಿಗೆ ಮಾತ್ರ, ದೇವರು ಯಾವ ಸಮಯವನ್ನು ಅದಕ್ಕೆ ಯೋಗ್ಯ ಮತ್ತು ಉತ್ತಮವೆಂದು ತಿಳಿಯುತ್ತಾನೋ ಆ ಸಮಯದ ತನಕ ಕಾಯಬೇಕಾದೀತು. (ಲೂಕ 18:7, 8; 1 ಪೇತ್ರ 5:6) ಒಂದು ಆಳವಾದ ವೈಯಕ್ತಿಕ ಚಿಂತೆಯ ವಿಷಯದ ಕುರಿತು ನೀವು ಪ್ರಾರ್ಥಿಸುವುದಾದರೆ, ಅದರಲ್ಲಿ ಪಟ್ಟು ಹಿಡಿಯುವ ಮೂಲಕ ನಿಮ್ಮ ಆಪೇಕ್ಷೆಯು ತೀವ್ರವೆಂದೂ, ನಿಮ್ಮ ಹೇತುವು ಶುದ್ಧವೂ ನಿರ್ಮಲವೂ ಆಗಿದೆಯೆಂದೂ ದೇವರಿಗೆ ತೋರಿಸಿರಿ. ಯಾಕೋಬನು ಈ ಭಾವವನ್ನು ತೋರಿಸಿದನು, ದೇವದೂತನೊಂದಿಗೆ ಬಹಳ ಸಮಯದ ತನಕ ಹೋರಾಡಿದ ಮೇಲೆ, “ನೀನು ನನ್ನನ್ನು ಆಶೀರ್ವದಿಸಿದ ಹೊರತು ಬಿಡುವದಿಲ್ಲ” ಎಂದನವನು. (ಆದಿಕಾಂಡ 32:24-32) ನಾವು ಎಡೆಬಿಡದೆ ಬೇಡುತ್ತಾ ಇದ್ದಲ್ಲಿ ತಕ್ಕ ಸಮಯದಲ್ಲಿ ಆಶೀರ್ವಾದವನ್ನು ಪಡೆಯುವೆವು ಎಂಬ ತದ್ರೀತಿಯ ಭರವಸವು ನಮ್ಮಲ್ಲಿರಬೇಕು.—ಲೂಕ 11:9.
ಒಂದು ಕೊನೆಯ ಪರ್ಯಾಲೋಚನೆ. ವಿಶ್ವದ ಸಾರ್ವಭೌಮ ಕರ್ತನಿಂದ ಆಲೈಸಲ್ಪಡುವುದು ಒಂದು ಅಮೂಲ್ಯವಾದ ಸುಯೋಗವು. ಇದರ ನೋಟದಲ್ಲಿ, ಯೆಹೋವ ದೇವರು ತನ್ನ ವಾಕ್ಯದ ಮೂಲಕ ತನ್ನ ಆವಶ್ಯಕತೆಯ ಕುರಿತು ನಮಗೆ ತಿಳಿಸುವಾಗ ನಾವು ಜಾಗ್ರತೆಯಿಂದ ಕಿವಿಗೊಡುತ್ತೇವೋ? ನಮ್ಮ ಪ್ರಾರ್ಥನೆಗಳು ನಮ್ಮನ್ನು ನಮ್ಮ ನಿರ್ಮಾಣಿಕನ ಅತ್ಯಾಪ್ತ ಸಂಬಂಧಕ್ಕೆ ತರುವುದರಿಂದ, ಆತನು ನಮಗೆ ತಿಳಿಸುವ ಪ್ರತಿಯೊಂದು ವಿಷಯಕ್ಕೆ ಗಂಭೀರವಾದ ಗಮನವನ್ನು ಕೊಡಲು ನಾವು ಬಯಸಬೇಕು. (w92 4/15)
[ಪುಟ 6 ರಲ್ಲಿರುವ ಚಿತ್ರ]
ದೇವರು ಪ್ರಾರ್ಥನೆಗಳನ್ನು ಆಲಿಸುತ್ತಾನೆ. ಅವನ ವಾಕ್ಯದ ಮೂಲಕ ನಾವು ಅವನಿಗೆ ಕಿವಿಗೊಡುತ್ತೇವೋ?