ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w02 3/1 ಪು. 30
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಅನುರೂಪ ಮಾಹಿತಿ
  • ‘ನಿಮ್ಮ ತಂದೆಯು ಕರುಣೆಯುಳ್ಳವನಾಗಿದ್ದಾನೆ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • “ಆತನು ನಡಿಸುವದೆಲ್ಲಾ ನ್ಯಾಯ”
    ಯೆಹೋವನ ಸಮೀಪಕ್ಕೆ ಬನ್ನಿರಿ
  • ಯೆಹೋವನನ್ನು ಅನುಕರಿಸಿರಿ—ನ್ಯಾಯ ಮತ್ತು ನೀತಿಯನ್ನು ಆಚರಿಸಿರಿ
    ಕಾವಲಿನಬುರುಜು—1998
  • ನಮ್ಮ ದೇವರು “ಕರುಣಾಮಯಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
w02 3/1 ಪು. 30

ವಾಚಕರಿಂದ ಪ್ರಶ್ನೆಗಳು

ಯೆಹೋವನ ಕರುಣೆಯು ಆತನ ನ್ಯಾಯವನ್ನು ತಗ್ಗಿಸುತ್ತದೆಂದು ಹೇಳುವುದು ಸರಿಯೊ?

ಈ ವಾಕ್ಸರಣಿಯು ಹಿಂದೆ ಉಪಯೋಗಿಸಲ್ಪಟ್ಟಿದೆಯಾದರೂ, ಅದನ್ನು ಬಳಸದೇ ಇರುವುದು ಉತ್ತಮ. ಯಾಕೆಂದರೆ ಅದು, ಯೆಹೋವನ ಕರುಣೆಯು, ನ್ಯಾಯವೆಂಬ ಹೆಚ್ಚು ಕಠೋರವಾದ ಗುಣಕ್ಕಿಂತಲೂ ಶ್ರೇಷ್ಠವಾಗಿದೆಯೊ ಎಂಬಂತೆ, ಆತನ ನ್ಯಾಯದ ತೀವ್ರತೆಯನ್ನು ಕಡಿಮೆಗೊಳಿಸುತ್ತದೆ ಇಲ್ಲವೇ ನಿಗ್ರಹಿಸುತ್ತದೆಂಬ ಅರ್ಥವನ್ನು ಕೊಡುತ್ತದೆ. ಇದು ಸರಿಯಲ್ಲ.

ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಬೈಬಲಿನಲ್ಲಿ “ನ್ಯಾಯ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದದ ಅರ್ಥ, “ನ್ಯಾಯತೀರ್ಪು” ಎಂದೂ ಆಗಿರಸಾಧ್ಯವಿದೆ. ನ್ಯಾಯಕ್ಕೂ ನೀತಿಗೂ ನಿಕಟವಾದ ಸಂಬಂಧವಿದೆ. ಆದರೆ ಸಾಮಾನ್ಯವಾಗಿ ನ್ಯಾಯಕ್ಕೆ ಕಾನೂನುಸಂಬಂಧಿತ ಅರ್ಥಗಳಿರುತ್ತವೆ. ನೀತಿಗೆ ಅದು ಇರುವುದಿಲ್ಲ. ಯೆಹೋವನ ನ್ಯಾಯದಲ್ಲಿ, ಅರ್ಹವಾದ ಶಿಕ್ಷೆಯನ್ನು ಕೊಡುವುದು ಸೇರಿರಸಾಧ್ಯವಿದೆ ನಿಜ. ಆದರೆ ಅದರಲ್ಲಿ ಅರ್ಹ ವ್ಯಕ್ತಿಗಳಿಗೆ ರಕ್ಷಣೆಯನ್ನು ಒದಗಿಸುವುದೂ ಸೇರಿರಬಲ್ಲದು. (ಆದಿಕಾಂಡ 18:​20-32; ಯೆಶಾಯ 56:1; ಮಲಾಕಿಯ 4:2) ಹೀಗಿರುವುದರಿಂದ, ಯೆಹೋವನ ನ್ಯಾಯವು ಕಠೋರವಾಗಿದೆ ಇಲ್ಲವೆ ಅದರ ತೀವ್ರತೆಯನ್ನು ಕಡಿಮೆಗೊಳಿಸುವ ಆವಶ್ಯಕತೆಯಿದೆಯೆಂಬ ದೃಷ್ಟಿಕೋನವಿರುವ ಅಗತ್ಯವಿಲ್ಲ.

“ಕರುಣೆ”ಗಾಗಿರುವ ಹೀಬ್ರು ಪದವು, ನ್ಯಾಯತೀರ್ಪನ್ನು ನೀಡುವಾಗ ನಿಗ್ರಹವನ್ನಿಡುವುದನ್ನೂ ಸೂಚಿಸಬಲ್ಲದು. ಅದು ಕನಿಕರವನ್ನು ಸಕ್ರಿಯವಾಗಿ ತೋರಿಸುತ್ತಾ, ಕಷ್ಟದಲ್ಲಿರುವವರಿಗೆ ಉಪಶಮನವನ್ನು ಕೊಡುವುದಕ್ಕೂ ಸೂಚಿಸಸಾಧ್ಯವಿದೆ.​—ಧರ್ಮೋಪದೇಶಕಾಂಡ 10:18; ಲೂಕ 10:​29-37.

ಯೆಹೋವನು ನ್ಯಾಯ ಹಾಗೂ ಕರುಣೆಯ ದೇವರಾಗಿದ್ದಾನೆ. (ವಿಮೋಚನಕಾಂಡ 34:​6, 7; ಧರ್ಮೋಪದೇಶಕಾಂಡ 32:4; ಕೀರ್ತನೆ 145:9) ಅವನ ನ್ಯಾಯ ಹಾಗೂ ಕರುಣೆಯೆಂಬ ಎರಡೂ ಗುಣಗಳು ಪರಿಪೂರ್ಣವಾಗಿವೆ ಮತ್ತು ಒಂದಕ್ಕೊಂದು ಹೊಂದಿಕೆಯಲ್ಲಿ ಕಾರ್ಯನಡಿಸುತ್ತವೆ. (ಕೀರ್ತನೆ 116:5; ಹೋಶೇಯ 2:19) ಈ ಎರಡೂ ಗುಣಗಳು ಪರಿಪೂರ್ಣ ರೀತಿಯಲ್ಲಿ ಸಮತೂಕದಲ್ಲಿವೆ ಇಲ್ಲವೆ ಪರಸ್ಪರ ಪೂರಕವಾಗಿವೆ. ಹೀಗಿರುವುದರಿಂದ, ಯೆಹೋವನ ಕರುಣೆಯು ಆತನ ನ್ಯಾಯವನ್ನು ತಗ್ಗಿಸುತ್ತದೆಂದು ನಾವು ಒಂದುವೇಳೆ ಹೇಳುವಲ್ಲಿ, ಆತನ ನ್ಯಾಯವು ಆತನ ಕರುಣೆಯನ್ನು ತಗ್ಗಿಸುತ್ತದೆಂದೂ ಹೇಳಬೇಕಾದೀತು.

ಯೆಶಾಯನು ಪ್ರವಾದಿಸಿದ್ದು: “ಯೆಹೋವನು ನಿಮಗೆ ಕೃಪೆತೋರಿಸಬೇಕೆಂದು ಕಾದಿರುವನು; ನಿಮ್ಮನ್ನು ಕರುಣಿಸಬೇಕೆಂದು ಉನ್ನತೋನ್ನತನಾಗಿ ಕಾಣಿಸಿಕೊಳ್ಳುವನು; ಯೆಹೋವನು ನ್ಯಾಯಸ್ವರೂಪನಾದ ದೇವರು.” (ಯೆಶಾಯ 30:18) ಯೆಹೋವನ ಕರುಣೆಯು ಆತನ ನ್ಯಾಯದ ತೀಕ್ಷ್ಣತೆಯನ್ನು ಕಡಿಮೆಗೊಳಿಸುತ್ತದೆ ಇಲ್ಲವೆ ನಿಗ್ರಹಿಸುತ್ತದೆಂದು ಹೇಳುವ ಬದಲು, ಆತನ ನ್ಯಾಯವು, ಕರುಣೆಯ ಕೃತ್ಯಗಳಿಗೆ ಪ್ರೇರಣೆ ನೀಡುತ್ತದೆಂದು ಯೆಶಾಯನು ಇಲ್ಲಿ ತೋರಿಸುತ್ತಾನೆ. ಯೆಹೋವನು ಕರುಣೆಯನ್ನು ತೋರಿಸಲು ಕಾರಣ, ಆತನು ನ್ಯಾಯಸ್ವರೂಪಿಯಾಗಿದ್ದಾನೆ ಮತ್ತು ಪ್ರೀತಿಪರನೂ ಆಗಿದ್ದಾನೆ.

“ಕರುಣೆಯು ನ್ಯಾಯತೀರ್ಮಾನವನ್ನು ಗೆದ್ದು ಹಿಗ್ಗುತ್ತದೆ” ಎಂದು ಬೈಬಲ್‌ ಲೇಖಕನಾದ ಯಾಕೋಬನು ಬರೆದಿದ್ದಾನೆಂಬುದು ನಿಜ. (ಯಾಕೋಬ 2:13ಬಿ) ಆದರೆ ಪೂರ್ವಾಪರ ವಚನಗಳಲ್ಲಿ ಯಾಕೋಬನು ಯೆಹೋವನ ಬಗ್ಗೆ ಅಲ್ಲ ಬದಲಾಗಿ ಕ್ರೈಸ್ತರು ತೋರಿಸುವ ಕರುಣೆಯ ಕುರಿತಾಗಿ ಮಾತಾಡುತ್ತಾನೆ. ಉದಾಹರಣೆಗಾಗಿ, ದರಿದ್ರರೂ ಬಡವರೂ ಆಗಿರುವವರ ಕಡೆಗೆ ಕ್ರೈಸ್ತರು ತೋರಿಸುವ ಕರುಣೆ. (ಯಾಕೋಬ 1:27; 2:​1-9) ಅಂಥ ಕರುಣಾಮಯಿ ವ್ಯಕ್ತಿಗಳಿಗೆ ನ್ಯಾಯತೀರ್ಪನ್ನು ವಿಧಿಸಬೇಕಾಗಿ ಬರುವಾಗ, ಯೆಹೋವನು ಅವರ ನಡತೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ತನ್ನ ಮಗನ ಯಜ್ಞದ ಆಧಾರದ ಮೇಲೆ ಅವರನ್ನು ಕರುಣಾಪೂರ್ವಕವಾಗಿ ಕ್ಷಮಿಸುತ್ತಾನೆ. ಹೀಗೆ, ಅವರ ಕರುಣಾಭರಿತ ನಡತೆಯು, ಅವರಿಗೆ ಸಿಗಬೇಕಾದ ಯಾವುದೇ ಪ್ರತಿಕೂಲ ನ್ಯಾಯತೀರ್ಪಿನ ಮೇಲೆ ಗೆಲುವನ್ನು ಸಾಧಿಸುತ್ತದೆ.​—ಜ್ಞಾನೋಕ್ತಿ 14:21; ಮತ್ತಾಯ 5:7; 6:​12; 7:2.

ಆದುದರಿಂದ, ಯೆಹೋವನ ನ್ಯಾಯದ ತೀಕ್ಷ್ಣತೆಯು ಆತನ ಕರುಣೆಯಿಂದ ಕಡಿಮೆಗೊಳಿಸಲ್ಪಡುವ ಅಗತ್ಯವಿದೆ ಎಂಬ ಅರ್ಥದಲ್ಲಿ ಯೆಹೋವನ ನ್ಯಾಯತೀರ್ಪು ಆತನ ಕರುಣೆಯಿಂದ ತಗ್ಗಿಸಲ್ಪಡುತ್ತದೆಂದು ಹೇಳುವುದು ಸರಿಯಲ್ಲ. ಯೆಹೋವನಲ್ಲಿ ಈ ಎರಡೂ ಗುಣಗಳು ಪರಿಪೂರ್ಣ ರೀತಿಯಲ್ಲಿ ಸಮತೂಕದಲ್ಲಿವೆ. ಅವು, ಪ್ರೀತಿ ಮತ್ತು ವಿವೇಕದಂಥ ಯೆಹೋವನ ಇತರ ಗುಣಗಳಂತೆ ಪರಸ್ಪರ ಸಮತೂಕದಲ್ಲಿವೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ