ನಮ್ಮ ಕ್ರೈಸ್ತ ಜೀವನ
ಯಾವುದೂ ವ್ಯರ್ಥವಾಗಲಿಲ್ಲ
5,000 ಗಂಡಸರಲ್ಲದೆ ಹೆಂಗಸರು ಮತ್ತು ಮಕ್ಕಳಿಗೆ ಯೇಸು ಅದ್ಭುತವಾಗಿ ಊಟ ಕೊಟ್ಟ ಮೇಲೆ ತನ್ನ ಶಿಷ್ಯರಿಗೆ ಹೀಗೆ ಹೇಳಿದನು: “ಯಾವುದೂ ವ್ಯರ್ಥವಾಗದಂತೆ ಉಳಿದಿರುವ ತುಂಡುಗಳನ್ನು ಒಟ್ಟುಗೂಡಿಸಿರಿ.” (ಯೋಹಾ 6:12) ಯೆಹೋವನು ಕೊಟ್ಟಿರುವ ಊಟವನ್ನು ಪೋಲು ಮಾಡದೆ ಇರುವ ಮೂಲಕ ಯೇಸು ಕೃತಜ್ಞತೆ ತೋರಿಸಿದನು.
ಇಂದು ಆಡಳಿತ ಮಂಡಲಿ ಯಾವುದಕ್ಕೆ ಎಷ್ಟು ಹಣ ಖರ್ಚುಮಾಡಬೇಕು ಎನ್ನುವ ವಿಷಯದಲ್ಲಿ ವಿವೇಚನೆ ತೋರಿಸುತ್ತದೆ. ಹೀಗೆ ಯೇಸುವನ್ನು ಅನುಕರಿಸುತ್ತಿದೆ. ಉದಾಹರಣೆಗೆ, ನ್ಯೂಯಾರ್ಕ್‌ನಲ್ಲಿರುವ ವಾರ್ವಿಕ್‌ನಲ್ಲಿ ಮುಖ್ಯ ಕಾರ್ಯಾಲಯವನ್ನು ಕಟ್ಟುವ ಮುಂಚೆ ಕಟ್ಟಡದ ವಿನ್ಯಾಸಗಳನ್ನು ಚೆನ್ನಾಗಿ ಯೋಚನೆ ಮಾಡಿ ಆರಿಸಿಕೊಂಡರು. ಯಾಕೆಂದರೆ ಕಾಣಿಕೆಗಳನ್ನು ಹಿತಮಿತವಾಗಿ ಬಳಸಬೇಕು, ಹಣ ವ್ಯರ್ಥವಾಗಬಾರದು ಎನ್ನುವುದು ಸಹೋದರರ ಉದ್ದೇಶವಾಗಿತ್ತು.
ಕೆಳಗಿನ ಸಂದರ್ಭಗಳಲ್ಲಿ ಯಾವುದೂ ವ್ಯರ್ಥವಾಗದಂತೆ ನೋಡಿಕೊಳ್ಳಲು ನಾವೇನು ಮಾಡಬಹುದು?
ಕೂಟ ನಡೆಯುತ್ತಿರುವಾಗ
ನಮ್ಮ ಉಪಯೋಗಕ್ಕಾಗಿ ಪ್ರಕಾಶನಗಳನ್ನು ತೆಗೆದುಕೊಳ್ಳುವಾಗ (ರಾಜ್ಯ ಸೇವೆ 5/09 ಪುಟ 3 ಪ್ಯಾರ 4)
ಸೇವೆಗೆಂದು ಸಾಹಿತ್ಯ ತೆಗೆದುಕೊಳ್ಳುವಾಗ (ಕೂಟದ ಕೈಪಿಡಿ17.02 “ವಿವೇಚನೆಯಿಂದ ಸಾಹಿತ್ಯ ಬಳಸಿ” ಪ್ಯಾರ 1)
ಸುವಾರ್ತೆ ಸಾರುವಾಗ (ಕೂಟದ ಕೈಪಿಡಿ17.02 “ವಿವೇಚನೆಯಿಂದ ಸಾಹಿತ್ಯ ಬಳಸಿ” ಪ್ಯಾರ 2 ಮತ್ತು ಚೌಕ)