ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 | ಸೇಡು ತೀರಿಸಬೇಡಿ
    ಕಾವಲಿನಬುರುಜು (ಸಾರ್ವಜನಿಕ)—2022 | ನಂ. 1
    • ಬೈಬಲ್‌ ಕಲಿಸೋದು:

      “ಯಾರಾದ್ರೂ ನಿಮಗೆ ಕೆಟ್ಟದು ಮಾಡಿದ್ರೆ ನೀವೂ ಅವ್ರಿಗೆ ಕೆಟ್ಟದು ಮಾಡಬೇಡಿ . . . ಸಾಧ್ಯವಾದ್ರೆ ಎಲ್ರ ಜೊತೆ ಶಾಂತಿಯಿಂದ ಇರೋಕೆ ನಿಮ್ಮಿಂದ ಆಗೋದನ್ನೆಲ್ಲ ಮಾಡಿ . . . ಸೇಡು ತೀರಿಸಬೇಡಿ . . . ‘“ಸೇಡು ತೀರಿಸೋದು ನನ್ನ ಕೆಲಸ, ನಾನೇ ಸರಿಯಾದ ಪ್ರತಿಫಲ ಕೊಡ್ತೀನಿ” ಅಂತ ಯೆಹೋವ ಹೇಳ್ತಾನೆ’ ಅಂತ ಬರೆದಿದೆ.”—ರೋಮನ್ನರಿಗೆ 12:17-19.

      ಅರ್ಥ ಏನು?

      ಯಾರಾದ್ರು ನಮಗೆ ಕೆಟ್ಟದು ಮಾಡಿದ್ರೆ ಅವರ ಮೇಲೆ ಕೋಪ ಬರೋದು ಸಹಜ. ಆದ್ರೆ ಅವರ ಮೇಲೆ ಸೇಡು ತೀರಿಸಬಾರದು ಅಂತ ದೇವರು ಬಯಸುತ್ತಾನೆ. ಅದಕ್ಕೆ ಬದಲು ನಮಗಾಗಿರೋ ಅನ್ಯಾಯವನ್ನ ದೇವರು ಸರಿ ಮಾಡೋ ತನಕ ಕಾಯಬೇಕು ಅಂತ ಆತನು ಇಷ್ಟಪಡುತ್ತಾನೆ.—ಕೀರ್ತನೆ 37:7, 10.

  • 2 | ಸೇಡು ತೀರಿಸಬೇಡಿ
    ಕಾವಲಿನಬುರುಜು (ಸಾರ್ವಜನಿಕ)—2022 | ನಂ. 1
    • ಏಡ್ರಿಯನ್‌ 16 ವರ್ಷವಿದ್ದಾಗ ಬೈಬಲನ್ನ ಕಲಿಯೋಕೆ ಶುರುಮಾಡಿದ್ರು. ಅವರು ಹೇಳಿದ್ದು: “ನಾನು ಬೈಬಲ್‌ ಕಲಿಯುತ್ತಾ ಹೋದಹಾಗೆ ಬದಲಾವಣೆ ಮಾಡಬೇಕು ಅಂತ ಗೊತ್ತಾಯ್ತು.” ಅದಕ್ಕೆ ದ್ವೇಷ ಮತ್ತು ಹಿಂಸೆ ಮಾಡೋದನ್ನ ನಿಲ್ಲಿಸಬೇಕು ಅಂತ ಅವರು ಅರ್ಥ ಮಾಡ್ಕೊಂಡ್ರು. ರೋಮನ್ನರಿಗೆ 12:17-19ರಲ್ಲಿ ಸೇಡು ತೀರಿಸ್ಕೋಬಾರದು ಅಂತ ಹೇಳಿದ ವಿಷಯ ಅವರಿಗೆ ತುಂಬ ಇಷ್ಟವಾಯ್ತು. ಅವರು ಹೇಳಿದ್ದು: “ನನಗಾದ ಅನ್ಯಾಯವನ್ನ ಯೆಹೋವ ದೇವರು ಇವತ್ತಲ್ಲ ನಾಳೆ ಸರಿ ಮಾಡ್ತಾನೆ ಅನ್ನೋ ನಂಬಿಕೆ ಇಟ್ಟೆ. ಹೋಗ್ತಾಹೋಗ್ತಾ ನನ್ನಲ್ಲಿದ್ದ ಕ್ರೂರ ಮನೋಭಾವ ಕಣ್ಮರೆಯಾಯ್ತು.”

      ಒಂದಿನ ಸಂಜೆ ಏಡ್ರಿಯನ್‌ನ ಹಳೆಯ ವಿರೋಧಿ ಗ್ಯಾಂಗಿನ ಲೀಡರ್‌ ಅವನ ಹತ್ರ ಬಂದು “ತಾಕತ್ತಿದ್ರೆ ಹೊಡಿ ಬಾರೋ!” ಅಂತ ಕಿರುಚಿದ. ಏಡ್ರಿಯನ್‌ ಹೇಳಿದ್ದು: “ಅದನ್ನ ಕೇಳಿ ನನ್ನ ರಕ್ತ ಕುದಿತಿತ್ತು.” ಆದ್ರೆ ಏಡ್ರಿಯನ್‌ ಅವನ ಜೊತೆ ಹೊಡೆದಾಟ ಮಾಡೋ ಬದ್ಲು, ಯೆಹೋವನಿಗೆ ಒಂದು ಚಿಕ್ಕ ಪ್ರಾರ್ಥನೆ ಮಾಡಿ ಅಲ್ಲಿಂದ ಹೋದ್ರು.

      ಏಡ್ರಿಯನ್‌ ಹೇಳಿದ್ದು: “ಮಾರನೇ ದಿನಾನೇ ಆ ಲೀಡರನ್ನ ಮತ್ತೆ ನೋಡ್ದೆ. ಅವನನ್ನ ನೋಡಿ ನನ್ನ ಮೈಯೆಲ್ಲಾ ಉರಿಯೋಕೆ ಶುರುವಾಯ್ತು. ಆದ್ರೆ ಆಗ್ಲೂ ನನ್ನ ಮನಸ್ಸಲ್ಲಿ ಯೆಹೋವ ದೇವರ ಹತ್ರ ‘ನನ್ನ ಕೋಪ ನಿಯಂತ್ರಿಸೋಕೆ ಸಹಾಯ ಮಾಡಪ್ಪ’ ಅಂತ ಬೇಡಿಕೊಂಡೆ. ಇದ್ದಕ್ಕಿದ್ದಂತೆ ಅವನು ನನ್ನ ಹತ್ರ ಬಂದು: ‘ನಿನ್ನೆ ನಾನು ಹೇಳಿದನ್ನ ಮರೆತು ಬಿಡು. ನಿಜ ಹೇಳಬೇಕಂದ್ರೆ ನನಗೆ ನಿನ್ನ ತರ ಆಗಬೇಕು ಅಂತ ಆಸೆ. ನನಗೂ ಬೈಬಲ್‌ ಕಲಿಬೇಕು’ ಅಂತ ಹೇಳಿದ. ಅದನ್ನ ಕೇಳಿದಾಗ ನನ್ನ ಕೋಪ ನಿಯಂತ್ರಿಸಿದ್ದು ಒಳ್ಳೆದಾಯ್ತು ಅಂತ ಅನಿಸಿತು. ಆಮೇಲೆ ನಾವಿಬ್ರು ಒಟ್ಟಿಗೆ ಬೈಬಲ್‌ ಕಲಿತ್ವಿ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ