ಸರ್ವದಾ ಯೆಹೋವನನ್ನು ಸುತ್ತಿಸಿರಿ
1 ಸರ್ವದಾ ನಮ್ಮ ಗಮನಕ್ಕೆ ಅರ್ಹವಾಗಿರುವಷ್ಟು ಪ್ರಾಮುಖ್ಯವಾಗಿರುವ ಕೆಲವು ಚಟುವಟಿಕೆಗಳಿವೆ. ಅವುಗಳಲ್ಲಿ ತಿನ್ನುವುದು, ಉಸಿರಾಡುವುದು ಮತ್ತು ನಿದ್ರಿಸುವುದನ್ನು ನಾವು ಒಳಗೂಡಿಸುತ್ತೇವೆ. ನಾವು ಶಾರೀರಿಕವಾಗಿ ನಮ್ಮನ್ನು ಪೋಷಿಸಿಕೊಳ್ಳಬೇಕಾದಲ್ಲಿ ಇವುಗಳು ಅಗತ್ಯವಾಗಿವೆ. “ದೇವರಿಗೆ ಸ್ತೊತ್ರಯಜ್ಞವನ್ನು ಎಡೆಬಿಡದೆ [“ಸರ್ವದಾ,” NW] ಸಮರ್ಪಿಸೋಣ” ಎಂದು ಪೌಲನು ಪ್ರಚೋದಿಸಿದಾಗ, ಅಪೊಸ್ತಲ ಪೌಲನು ಸುವಾರ್ತೆ ಸಾರುವುದನ್ನು ತದ್ರೀತಿಯ ಒಂದು ವರ್ಗದಲ್ಲಿ ಸೇರಿಸಿದನು. (ಇಬ್ರಿ. 13:15) ಆದುದರಿಂದ, ಯೆಹೋವನನ್ನು ಸುತ್ತಿಸುವುದು ಸಹ, ನಮ್ಮ ಸತತವಾದ ಗಮನಕ್ಕೆ ಅರ್ಹವಾಗಿದೆ. ಸರ್ವದಾ ನಮ್ಮ ಸ್ವರ್ಗೀಯ ತಂದೆಯನ್ನು ಸುತ್ತಿಸುತ್ತಾ, ನಾವು ಪ್ರತಿ ದಿನ ಮಾಡಲು ಪ್ರಯತ್ನಿಸಬೇಕಾದಂತಹ ಒಂದು ವಿಷಯವು ಅದಾಗಿದೆ.
2 ಇತರರು ಯೇಸುವಿನ ಗಮನವನ್ನು ಬೇರೆ ವಿಷಯದ ಕಡೆಗೆ ತಿರುಗಿಸಲು ಪ್ರಯತ್ನಿಸಿದಾಗ, ಆತನು ಪ್ರತ್ಯುತ್ತರಿಸಿದ್ದು: “ನಾನು ದೇವರ ರಾಜ್ಯದ ಸುವಾರ್ತೆಯನ್ನು . . . ಸಾರಿ ಹೇಳಬೇಕಾಗಿದೆ.” (ಲೂಕ 4:43) ತನ್ನ ಮೂರುವರೆ ವರ್ಷಗಳ ಶುಶ್ರೂಷೆಯ ಸಮಯದಲ್ಲಿ, ಪ್ರತಿ ದಿನ ಆತನು ನಡಿಸಿದ ಪ್ರತಿಯೊಂದು ವಿಷಯವು, ದೇವರನ್ನು ಮಹಿಮೆಪಡಿಸುವುದರೊಂದಿಗೆ ಯಾವುದೋ ರೀತಿಯಲ್ಲಿ ನೇರವಾದ ಸಂಬಂಧವನ್ನು ಹೊಂದಿತ್ತು. 1 ಕೊರಿಂಥ 9:16, (NW) ರಲ್ಲಿ ಪೌಲನು ವ್ಯಕ್ತಪಡಿಸಿದ ಅಭಿಪ್ರಾಯದ ದೃಷ್ಟಿಯಿಂದ, ಅವನಿಗೆ ಈ ರೀತಿಯ ಅನಿಸಿಕೆಯಾಯಿತೆಂದು ನಮಗೆ ತಿಳಿದಿದೆ: “ಸುವಾರ್ತೆಯನ್ನು ಸಾರದಿದ್ದರೆ ನನ್ನ ಗತಿಯನ್ನು ಏನು ಹೇಳಲಿ!” ತಮ್ಮ ನಿರೀಕ್ಷೆಯ ಕುರಿತಾಗಿ ಇತರರಿಗೆ ಸಮರ್ಥನೆಯನ್ನು ಮಾಡಲು ಸರ್ವದಾ ಸಿದ್ಧರಾಗಿರುವಂತೆ ಇತರ ನಂಬಿಗಸ್ತ ಕ್ರೈಸ್ತರು ಉತ್ತೇಜಿಸಲ್ಪಟ್ಟಿದ್ದರು. (1 ಪೇತ್ರ 3:15) ಇಂದು ನೂರಾರು ಸಾವಿರ ಉತ್ಸಾಹಿ ಪಯನೀಯರರು ಮತ್ತು ಲಕ್ಷಾಂತರ ಸಭಾ ಪ್ರಚಾರಕರು, ಅಂತಹ ಅತ್ಯುತ್ತಮ ಉದಾಹರಣೆಗಳನ್ನು ಅನುಕರಿಸಲು ಪ್ರಯತ್ನಿಸುತ್ತಾರೆ.
3 ನಮ್ಮ ಮಾದರಿಯಾದ ಯೇಸು ಕ್ರಿಸ್ತನಿಂದ ತೋರಿಸಲ್ಪಟ್ಟ ಮನಃಪೂರ್ವಕವಾದ ಹುರುಪಿನ ಕುರಿತು ನಾವು ಚಿಂತನೆ ಮಾಡುವಾಗ, ಆತನ ಹೆಜ್ಜೆಜಾಡುಗಳನ್ನು ನಿಕಟವಾಗಿ ಅನುಸರಿಸುವಂತೆ ನಾವು ಪ್ರೇರಿಸಲ್ಪಡುತ್ತೇವೆ. (1 ಪೇತ್ರ 2:21) ಕೆಲವೊಮ್ಮೆ ಪ್ರತಿದಿನದ ಬದುಕಿನ ಸಮಸ್ಯೆಗಳನ್ನು ನಾವು ಎದುರಿಸಬೇಕಾದಾಗ, ನಾವು ನಿರಾಶೆಗೊಳಿಸಲ್ಪಡಬಹುದು. ನಮಗೆ ಒಂದು ಪೂರ್ಣ ಸಮಯದ ಐಹಿಕ ಉದ್ಯೋಗವಿರುವಾಗ, ನಾವು ದಿನಾಲೂ ಯೆಹೋವನನ್ನು ಸುತ್ತಿಸಲಿಕ್ಕಾಗಿರುವ ಸಂದರ್ಭಗಳ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಬಲ್ಲೆವು? ಇಲ್ಲವೇ ನಮ್ಮ ಹೆಚ್ಚಿನ ಸಮಯವನ್ನು ಅಗತ್ಯಪಡಿಸುವ ಕುಟುಂಬ ಹಂಗುಗಳನ್ನು ನಾವು ಪರಿತ್ಯಜಿಸಲಾರೆವು. ಅಧಿಕಾಂಶ ಯುವ ಜನರು ಆವಶ್ಯಕವಾಗಿರುವ ದೈನಂದಿನ ಶಾಲಾ ಶಿಕ್ಷಣದಲ್ಲಿ ಮಗ್ನರಾಗಿರುತ್ತಾರೆ. ಪ್ರತಿ ದಿನ ಯೆಹೋವನನ್ನು ಸಾರ್ವಜನಿಕವಾಗಿ ಸುತ್ತಿಸುವುದು ಅಸಾಧ್ಯವೆಂದು ಕೆಲವರು ಭಾವಿಸಬಹುದು. ಆಗಾಗ, ಕೆಲವರು ಯಾವುದೇ ರೀತಿಯಲ್ಲಿ ಸುವಾರ್ತೆಯನ್ನು ಹಂಚದೇ, ಇಡೀ ತಿಂಗಳು ಕಳೆಯಬಹುದು.
4 ಯೆರೆಮೀಯನು ಸುವಾರ್ತೆಯನ್ನು ಹೇಳುವುದರಿಂದ ಹಿಮ್ಮೆಟ್ಟಸಾಧ್ಯವಿದ್ದಲ್ಲದ ಒಬ್ಬನಾಗಿದ್ದನು. ಯೆಹೋವನ ಹೆಸರಿನಲ್ಲಿ ಮಾತಾಡಲು ಅವನು ತುಸು ಕಾಲ ತಪ್ಪಿದಾಗ, ತನ್ನೊಳಗೆ ಅಸಹನೀಯ ಬೆಂಕಿಯು ಉರಿಯುತ್ತಿರುವ ಅನಿಸಿಕೆ ಅವನಿಗಾಯಿತು. (ಯೆರೆ. 20:9) ಯಾವುದು ಸಹಿಸಲಾಗದಷ್ಟು ತೀವ್ರವಾಗಿರುವ ವಿಪತ್ಕಾಲವಾಗಿರುವಂತೆ ಭಾಸವಾಯಿತೋ, ಅದರ ಎದುರಿನಲ್ಲಿ ಯೆರೆಮೀಯನು ಇತರರಿಗೆ ಯೆಹೋವನ ಸಂದೇಶವನ್ನು ತಿಳಿಸಲು ಸರ್ವದಾ ಯಾವುದಾದರೂ ವಿಧಾನವನ್ನು ಕಂಡುಕೊಂಡನು. ನಾವು ಅವನ ಧೈರ್ಯದ ಮಾದರಿಯನ್ನು ಅನುಕರಿಸಿ, ಪ್ರತಿ ದಿನ ನಮ್ಮ ಸೃಷ್ಟಿಕರ್ತನನ್ನು ಸುತ್ತಿಸಲು ಸಂದರ್ಭಗಳನ್ನು ಹುಡುಕುವುದರಲ್ಲಿ ಪಟ್ಟುಹಿಡಿಯಬಲ್ಲೆವೊ?
5 ಯೆಹೋವನ ಕುರಿತಾದ ನಮ್ಮ ಮಾತಾಡುವಿಕೆಯು, ಸಾಕ್ಷಿ ನೀಡುವುದಕ್ಕಾಗಿ ಸಭೆಯ ಟೆರಿಟೊರಿಯಲ್ಲಿ ಇತರ ಪ್ರಚಾರಕರೊಂದಿಗೆ ಔಪಚಾರಿಕವಾಗಿ, ಮುಂದಾಗಿ ಏರ್ಪಡಿಸಲ್ಪಟ್ಟ ಸಮಯಗಳಿಗೆ ಮಾತ್ರ ಸೀಮಿತವಾಗಿರಬಾರದು. ನಮಗೆ ಬೇಕಾಗಿರುವುದು ಆಲಿಸುವ ಒಂದು ಕಿವಿ ಅಷ್ಟೆ. ಪ್ರತಿ ದಿನ ಸತತವಾಗಿ ನಾವು ಜನರನ್ನು ಎದುರುಗೊಳ್ಳುತ್ತೇವೆ—ಅವರು ನಮ್ಮ ಮನೆಗೆ ಬರುತ್ತಾರೆ, ಉದ್ಯೋಗದ ಸ್ಥಳದಲ್ಲಿ ನಾವು ಅವರೊಂದಿಗೆ ಕೆಲಸಮಾಡುತ್ತೇವೆ, ಅಂಗಡಿಗಳಲ್ಲಿ ನಾವು ಅವರ ಪಕ್ಕದಲ್ಲಿ ನಿಲ್ಲುತ್ತೇವೆ, ಅಥವಾ ಬಸ್ಸಿನಲ್ಲಿ ನಾವು ಅವರೊಂದಿಗೆ ಪ್ರಯಾಣಿಸುತ್ತೇವೆ. ಕೇವಲ ಒಂದು ಸ್ನೇಹಭಾವದ ಅಭಿವಂದನೆ ಮತ್ತು ಆಲೋಚನೆಯನ್ನು ಕೆರಳಿಸುವ ಒಂದು ಪ್ರಶ್ನೆ ಅಥವಾ ಸಂಭಾಷಣೆಯೊಂದನ್ನು ಆರಂಭಿಸುವ ಹೇಳಿಕೆಯನ್ನು ಇದು ಕೇಳಿಕೊಳ್ಳುತ್ತದೆ. ಇದನ್ನು ತಮ್ಮ ಸಾಕ್ಷಿ ನೀಡುವಿಕೆಯ ಅತ್ಯಂತ ಫಲಪ್ರದ ವಿಧವಾಗಿ ಅನೇಕರು ಕಂಡುಕೊಂಡಿದ್ದಾರೆ. ಇತರರೊಂದಿಗೆ ಸುವಾರ್ತೆಯ ಕುರಿತಾಗಿ ಮಾತಾಡಲು ನಮಗೆ ಅನೇಕ ಸಂದರ್ಭಗಳಿರುವಾಗ, ರಾಜ್ಯ ಸಾಕ್ಷಿಯೊಂದನ್ನು ಕೊಡದೇ, ಇಡೀ ತಿಂಗಳನ್ನು ಕಳೆಯುವುದು ನಮಗೆ ಯೋಚಿಸಲಸಾಧ್ಯವಾದ ವಿಷಯವಾಗಿರಸಾಧ್ಯವಿದೆ.
6 ಯೆಹೋವನನ್ನು ಸುತ್ತಿಸುವ ಸುಯೋಗವು ಎಂದಿಗೂ ಕೊನೆಗೊಳ್ಳುವುದಿಲ್ಲ. ಕೀರ್ತನೆಗಾರನು ಸೂಚಿಸಿದಂತೆ, ಉಸಿರಾಡುವ ಪ್ರತಿಯೊಂದು ಜೀವಿಯೂ ಯೆಹೋವನನ್ನು ಸುತ್ತಿಸುತ್ತಿರಬೇಕು, ಮತ್ತು ಖಂಡಿತವಾಗಿ ನಾವೂ ಒಳಗೊಂಡಿರಲು ಬಯಸುತ್ತೇವೆ. (ಕೀರ್ತ. 150:6) ಸರ್ವದಾ ಹಾಗೆ ಮಾಡುವಂತೆ ನಮ್ಮ ಹೃದಯವು ನಮ್ಮನ್ನು ಪ್ರಚೋದಿಸುವಲ್ಲಿ, ಯೆಹೋವನ ಕುರಿತು ಮತ್ತು ಆತನ ವಾಕ್ಯದ ಕುರಿತು ಮಾತಾಡಲಿಕ್ಕಾಗಿರುವ ಸಂದರ್ಭಗಳ ಪ್ರಯೋಜನವನ್ನು ನಾವು ದಿನಾಲೂ ಪಡೆದುಕೊಳ್ಳುವೆವು.