ಗೀತೆ 116
ಬೆಳಕು ಹೆಚ್ಚುತ್ತದೆ
1. ನರಳಿಕೆಯ ಸೃಷ್ಟಿಗೆ ನಿರೀಕ್ಷೆ
ಕ್ರಿಸ್ತನೆಂದರು ಪ್ರೇಷಿತರು.
ದೇವರಾತ್ಮ ತಿಳಿಸಿತವರಿಗೆ
ರಕ್ಷಕನ ಬರೋಣವನು.
ಇದೇ ಕ್ರಿಸ್ತನಾಳುತ್ತಿರುವ ಕಾಲ,
ಇದುವೇ ಆ ಸುಸಮಯ.
ಸಾನಿಧ್ಯದ ಪುರಾವೆಯು ಸುವ್ಯಕ್ತ;
ದೂತರಿಗೂ ಆಸಕ್ತಿಕರ.
(ಪಲ್ಲವಿ)
ಹೆಚ್ಚು ಬೆಳಕು ಬೀಳುತ್ತಿದೆ;
ಪೂರ್ಣ ಪ್ರಕಾಶ ಖಾತರಿ.
ಪ್ರಕಟನೆಯ ಗಮನಿಸಿ;
ದೇವರೆಮ್ಮ ಮಾರ್ಗದರ್ಶಿ.
2. ಕರ್ತ ನೇಮಿಸಿದ್ದಾನೆ ಸೇವಕನ,
ಹೊತ್ತಿಗೆ ಕೊಡಲು ಆಹಾರ.
ಹೆಚ್ಚಿದೆ ಇದೀಗ ಸತ್ಯದ ಪ್ರಭೆ,
ಹೃದಯವನ್ನು ಸ್ಪರ್ಶಿಸುತೆ.
ನಮ್ಮ ಹಾದಿಯು ಈಗ ಹೆಚ್ಚು ಸ್ಫುಟ,
ಇಡಲು ಸರಿ ಹೆಜ್ಜೆಯ.
ನಾವು ಆಭಾರಿಗಳು ಯೆಹೋವಗೆ,
ಮಾಡುವೆವಾತ ಹೇಳುವಂತೆ.
(ಪಲ್ಲವಿ)
ಹೆಚ್ಚು ಬೆಳಕು ಬೀಳುತ್ತಿದೆ;
ಪೂರ್ಣ ಪ್ರಕಾಶ ಖಾತರಿ.
ಪ್ರಕಟನೆಯ ಗಮನಿಸಿ;
ದೇವರೆಮ್ಮ ಮಾರ್ಗದರ್ಶಿ.
(ರೋಮ. 8:22; 1 ಕೊರಿಂ. 2:10; 1 ಪೇತ್ರ 1:12 ಸಹ ನೋಡಿ.)