ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w12 6/15 ಪು. 19
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಅನುರೂಪ ಮಾಹಿತಿ
  • “ಬೇಗನೆ ಸಂಭವಿಸ ಬೇಕಾಗಿರುವ ಸಂಗತಿಗಳನ್ನು” ಯೆಹೋವನು ಪ್ರಕಟಿಸಿದ್ದಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಒಂದು ಭಾರೀ ಪ್ರತಿಮೆಯ ಏಳುಬೀಳುಗಳು
    ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
  • ಬೈಬಲಿನಲ್ಲಿರೋ ಭವಿಷ್ಯವಾಣಿಗಳಿಂದ ಕಲಿಯೋ ಪಾಠಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ದೇವರ ಸರ್ಕಾರ ಆಳುತ್ತಿದೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
w12 6/15 ಪು. 19

ವಾಚಕರಿಂದ ಪ್ರಶ್ನೆಗಳು

ಆಂಗ್ಲೋ-ಅಮೆರಿಕನ್‌ ಲೋಕಶಕ್ತಿ ಬೈಬಲ್‌ ಪ್ರವಾದನೆಯಲ್ಲಿ ತಿಳಿಸಿರುವ ಏಳನೇ ಲೋಕಶಕ್ತಿಯಾದದ್ದು ಯಾವಾಗ?

▪ ರಾಜ ನೆಬೂಕದ್ನೆಚ್ಚರನು ಕನಸಿನಲ್ಲಿ ಕಂಡ ದೊಡ್ಡ ಲೋಹದ ಪ್ರತಿಮೆ ಎಲ್ಲಾ ಲೋಕಶಕ್ತಿಗಳನ್ನು ಪ್ರತಿನಿಧಿಸುವುದಿಲ್ಲ. (ದಾನಿ. 2:31-45) ದೇವಜನರೊಂದಿಗೆ ಮಹತ್ವದ ರೀತಿಯಲ್ಲಿ ಸಂಬಂಧಪಟ್ಟಿರುವ ಹಾಗೂ ದಾನಿಯೇಲನ ಸಮಯದಿಂದ ಹಿಡಿದು ಮುಂದಕ್ಕೆ ಅಧಿಕಾರಕ್ಕೆ ಬಂದ ಐದು ಲೋಕಶಕ್ತಿಗಳನ್ನು ಮಾತ್ರ ಆ ಪ್ರತಿಮೆ ಸೂಚಿಸುತ್ತದೆ.

ಲೋಹದ ಪ್ರತಿಮೆಯ ಕುರಿತ ದಾನಿಯೇಲನ ವಿವರಣೆಯು ಆಂಗ್ಲೋ-ಅಮೆರಿಕನ್‌ ಲೋಕಶಕ್ತಿಯು ರೋಮ್‌ ಸಾಮ್ರಾಜ್ಯದಿಂದ ಹುಟ್ಟಿಕೊಳ್ಳುವುದೇ ಹೊರತು ಅದನ್ನು ಜಯಿಸಿ ಅಧಿಕಾರಕ್ಕೆ ಬರುವುದಿಲ್ಲ ಎಂದು ತೋರಿಸುತ್ತದೆ. ಆ ಪ್ರತಿಮೆಯ ಕಾಲುಗಳು ಕಬ್ಬಿಣದ್ದಾಗಿದ್ದು ಪಾದ ಮತ್ತು ಕಾಲ್ಬೆರಳುಗಳಲ್ಲಿಯೂ ಕಬ್ಬಿಣ ಇರುವುದಾಗಿ ದಾನಿಯೇಲ ಹೇಳುತ್ತಾನೆ. (ಪಾದ ಮತ್ತು ಕಾಲ್ಬೆರಳುಗಳಲ್ಲಿ ಕಬ್ಬಿಣವು ಜೇಡಿಮಣ್ಣಿನೊಂದಿಗೆ ಮಿಶ್ರಣಗೊಂಡಿದೆ.)a ಈ ವಿವರಣೆಯು ಆಂಗ್ಲೋ-ಅಮೆರಿಕನ್‌ ಲೋಕಶಕ್ತಿಯು ಕಬ್ಬಿಣದ ಕಾಲುಗಳಿಂದ ಅಂದರೆ ರೋಮ್‌ನಿಂದ ಉದ್ಭವಿಸುವುದೆಂದು ತೋರಿಸುತ್ತದೆ. ಇದು ನಿಜವಾಯಿತು ಎನ್ನುವುದಕ್ಕೆ ಇತಿಹಾಸದಲ್ಲಿ ಸಾಕ್ಷ್ಯವಿದೆ. ಚರಿತ್ರೆಗನುಸಾರ ರೋಮ್‌ ಸಾಮ್ರಾಜ್ಯದ ಭಾಗವಾಗಿದ್ದ ಬ್ರಿಟನ್‌ 1700ಗಳ (18ನೇ ಶತಮಾನದ) ಕೊನೆಯಷ್ಟಕ್ಕೆ ತನ್ನ ಚಕ್ರಾಧಿಪತ್ಯವನ್ನು ಪ್ರಪಂಚದ ನಾನಾ ಕಡೆಗಳಲ್ಲಿ ವಿಸ್ತರಿಸಲು ಆರಂಭಿಸಿತು. ಆಮೇಲೆ ಅಮೆರಿಕ ಸಹ ಸ್ವತಂತ್ರ ರಾಷ್ಟ್ರವಾಗಿ ಉದಯಿಸಿತು. ಹಾಗಿದ್ದರೂ ಬೈಬಲ್‌ ಪ್ರವಾದನೆಯ ಏಳನೇ ಲೋಕಶಕ್ತಿ ಇನ್ನೂ ಅಸ್ತಿತ್ವಕ್ಕೆ ಬಂದಿರಲಿಲ್ಲ. ಏಕೆಂದರೆ, ಬ್ರಿಟನ್‌ ಮತ್ತು ಅಮೆರಿಕ ಎರಡೂ ಜೊತೆಗೂಡಿ ಮಹತ್ತಾದ ರೀತಿಯಲ್ಲಿ ಇನ್ನೂ ಕಾರ್ಯನಿರ್ವಹಿಸಿರಲಿಲ್ಲ. ಒಂದನೇ ಮಹಾಯುದ್ಧದ ಸಮಯದಲ್ಲಷ್ಟೇ ಆ ಎರಡು ರಾಷ್ಟ್ರಗಳು ಒಟ್ಟಿಗೆ ಕಾರ್ಯಕ್ಕಿಳಿದವು.

ಆ ಸಮಯದಲ್ಲಿ “ರಾಜ್ಯದ ಪುತ್ರರು” ಸಾರುವ ಕೆಲಸದಲ್ಲಿ ಸಕ್ರಿಯರಾಗಿದ್ದರು. (ಮತ್ತಾ. 13:36-43) ಮುಖ್ಯವಾಗಿ ಅಮೆರಿಕದಲ್ಲಿ. ಇವರ ಕೇಂದ್ರಾಲಯ ನ್ಯೂ ಯಾರ್ಕ್‌ನ ಬ್ರೂಕ್ಲಿನ್‌ನಲ್ಲಿತ್ತು. ಬ್ರಿಟಿಷ್‌ ಆಡಳಿತದ ಕೆಳಗಿದ್ದ ರಾಷ್ಟ್ರಗಳಲ್ಲಿ ಸಹ ಅಭಿಷಿಕ್ತ ವರ್ಗದವರು ಸಾರುವ ಕೆಲಸದಲ್ಲಿ ಕಾರ್ಯಮಗ್ನರಾಗಿದ್ದರು. ಒಂದನೇ ಮಹಾಯುದ್ಧದ ಸಮಯದಲ್ಲಿ ಬ್ರಿಟನ್‌ ಮತ್ತು ಅಮೆರಿಕ ವಿಶೇಷ ಮೈತ್ರಿ ಒಪ್ಪಂದ ಮಾಡಿಕೊಂಡು ಒಟ್ಟಿಗೆ ಎದುರಾಳಿಗಳೊಂದಿಗೆ ಹೋರಾಡಿದವು. ಮಾತ್ರವಲ್ಲ ಯುದ್ಧದಿಂದ ರಾಷ್ಟ್ರೀಯತೆ ಪ್ರಬಲವಾಗಿ “ಸ್ತ್ರೀಯ” ಸಂತಾನದವರ ವಿರುದ್ಧ ದ್ವೇಷ ಕಾರತೊಡಗಿದರು. ಸಾರುವ ಕೆಲಸದಲ್ಲಿ ಮುಂದಾಳುತ್ವ ವಹಿಸುತ್ತಿದ್ದವರನ್ನು ಸೆರೆಮನೆಗೆ ಹಾಕಿ ಸಾಹಿತ್ಯದ ಮೇಲೆ ನಿಷೇಧ ಹೇರಿದರು.—ಪ್ರಕ. 12:17.

ಹಾಗಾದರೆ 1700ರಲ್ಲಿ ಬ್ರಿಟನ್‌ ಪ್ರಾಬಲ್ಯ ಪಡೆಯಲು ಆರಂಭಿಸಿದಾಗ ಏಳನೇ ಲೋಕಶಕ್ತಿ ಅಸ್ತಿತ್ವಕ್ಕೆ ಬರಲಿಲ್ಲ ಬದಲಿಗೆ ಕರ್ತನ ದಿನದ ಆರಂಭದಲ್ಲಿ ಅಸ್ತಿತ್ವಕ್ಕೆ ಬಂತು ಎಂದು ಬೈಬಲ್‌ ಪ್ರವಾದನೆ ತೋರಿಸುತ್ತದೆ.b

[ಪಾದಟಿಪ್ಪಣಿಗಳು]

a ಕಬ್ಬಿಣದಷ್ಟು ಬಲವಿರುವ ಆಂಗ್ಲೋ-ಅಮೆರಿಕನ್‌ ಲೋಕಶಕ್ತಿಯನ್ನು ದುರ್ಬಲಗೊಳಿಸುವ ಆಂತರಿಕ ವಿಷಯಗಳನ್ನು ಜೇಡಿಮಣ್ಣು ಸೂಚಿಸುತ್ತದೆ. ಜೇಡಿಮಣ್ಣಿನಂತಹ ಈ ಆಂತರಿಕ ವಿಷಯಗಳು ಈ ಲೋಕಶಕ್ತಿಯ ಪ್ರಾಬಲ್ಯವನ್ನು ಕುಂಠಿತಗೊಳಿಸಿವೆ.

b ಈ ಲೇಖನದಲ್ಲಿರುವ ವಿವರಣೆಗಳು ದಾನಿಯೇಲನ ಪ್ರವಾದನೆ ಪುಸ್ತಕದ ಪುಟ 57, ಪ್ಯಾರ 24ರ ಮಾಹಿತಿಯ ಹಾಗೂ ಪುಟ 56, 139ರಲ್ಲಿನ ಚಿತ್ರವಿವರಣೆಯ ತಿದ್ದುಪಡಿಯಾಗಿದೆ.

[ಪುಟ 19ರಲ್ಲಿರುವ ಚಿತ್ರ]

1918ರ ಜೂನ್‌ನಲ್ಲಿ ವಾಚ್‌ಟವರ್‌ ಕೇಂದ್ರಾಲಯದ ಈ ಎಂಟು ಸಹೋದರರನ್ನು ಜೈಲಿಗೆ ಹಾಕಲಾಯಿತು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ