ಮುನ್ನಡೆ ಪ್ರಗತಿಯ ಕಡೆಗೆ ಸಕಾರಾತ್ಮಕ ಕ್ರಿಯೆ
1 ಇಷ್ಟರೊಳಗೆ ನಮ್ಮಲ್ಲಿ ಹೆಚ್ಚಿನವರು 1992 ವರ್ಷಪುಸ್ತಕ ವನ್ನು ಓದಿ ಮುಗಿಸಿದ್ದೇವೆ. 211 ದೇಶಗಳಲ್ಲಿ, 45 ಲಕ್ಷಕ್ಕಿಂತಲೂ ಹೆಚ್ಚಿನ ರಾಜ್ಯ ಪ್ರಚಾರಕರ—6.5 ಪ್ರತಿಶತ ಅಭಿವೃದ್ಧಿ—1991 ರ ಲೋಕವ್ಯಾಪಕ ಉಚ್ಛಾಂಕದ ಕುರಿತು ಕಲಿಯುವುದು ನಮ್ಮ ಹೃದಯಗಳನ್ನು ಪುಳಕಿತಗೊಳಿಸಿತು! ನಿಶ್ಚಯವಾಗಿಯೂ, ಭೂಸುತ್ತಲೂ ಇಂದು ನಡೆಯುತ್ತಿರುವ ರಾಜ್ಯ ಅಭಿವೃದ್ಧಿಯು ಯೆಶಾಯ 2:2-4 ಮತ್ತು ಮೀಕ 4:1-4 ರ ನೆರವೇರಿಕೆಯ ಗಮನಾರ್ಹ ರುಜುವಾತಾಗಿರುತ್ತದೆ.
2 1992 ರ ಸೇವಾ ವರ್ಷದ ವರದಿಯು ಇನ್ನೂ ಪೂರ್ಣವಾಗಿರದಿದ್ದರೂ, ಈ ಸೇವಾ ವರ್ಷವನ್ನು ಯೆಹೋವನು ಎದ್ದುಕಾಣುವ ಅಭಿವೃದ್ಧಿಗಳೊಂದಿಗೆ ಸಫಲಗೊಳಿಸಿದ್ದಾನೆಂಬ ರುಜುವಾತು ಸ್ಪಷ್ಟವಾಗಿಗಿದೆ. ನಮ್ಮ ವಿಶಾಲವಾದ ಅಂತಾರಾಷ್ಟ್ರೀಯ ಸಹೋದರತ್ವದೊಂದಿಗೆ ಜತೆಗೂಡಲು ಆಮಂತ್ರಣವು ಮುಂದರಿಯುತ್ತಾ ಇದೆ. ಜ್ಞಾಪಕಾಚರಣೆ ಮತ್ತು ಜಿಲ್ಲಾ ಅಧಿವೇಶನದ ಹಾಜರಿಯ ಸಂಖ್ಯೆಗಳು ತೋರಿಸುತ್ತವೇನಂದರೆ ಲಕ್ಷಾಂತರ ಜನರು ರಾಜ್ಯದ ಸಂದೇಶಕ್ಕೆ ಒಂದು ಆಲಿಸುವ ಕಿವಿಯನ್ನು ತಿರುಗಿಸುತ್ತಿದ್ದಾರೆ. ಎಲ್ಲಾ ರಾಷ್ಟ್ರಗಳಿಂದ, ಹೀಗೆ ಕರೆಗೊಡುವ ಪ್ರೇರಿತ ಆಮಂತ್ರಣಕ್ಕೆ ಅವರು ಪ್ರತಿಕ್ರಿಯೆ ತೋರಿಸುತ್ತಿದ್ದಾರೆ: “ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ ಹೋಗೋಣ, ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು. ನಾವು ಆತನ ದಾರಿಗಳಲ್ಲಿ ನಡೆಯುವೆವು.”
3 ಪ್ರಗತಿಹೊಂದಲು ದೃಢತೆಯುಳ್ಳವರಾಗಿರ್ರಿ: ಯೆಹೋವನ ಸಂಸ್ಥಾಪನೆಯು ಚಲಿಸುತ್ತಾ ಇದೆ. ಯೆಹೋವನ ಸತ್ಯಾರಾಧನೆಯ ಬೆಟ್ಟಕ್ಕೆ ಇಷ್ಟು ಹೊಸಬರು ಪ್ರವಾಹದೋಪಾದಿ ಬರುತ್ತಿರುವಂತೆಯೇ, ಪ್ರತಿಯೊಬ್ಬನು ಮುನ್ನಡೆ ಆತ್ಮಿಕ ಪ್ರಗತಿಯ ಕಡೆಗೆ ಸಕಾರಾತ್ಮಕ ಕ್ರಿಯೆಯನ್ನು ತಕ್ಕೊಳ್ಳಬೇಕು ಮತ್ತು ಅನಂತರ ಇನ್ನೂ ಇತರ ಹೊಸಬರು ಹಾಗೆ ಮಾಡುವಂತೆ ಸಹಾಯ ಮಾಡಲು ಎಟಕಿಸಿಕೊಳ್ಳಬೇಕು. ಯೆಹೋವನ ಪರ್ವತಕ್ಕೆ ಬರುವ ಆಮಂತ್ರಣಕ್ಕೆ ಪ್ರತಿಕ್ರಿಯೆ ತೋರಿಸುವವರು ಇನ್ನಿತರರಿಗೆ “ಬನ್ನಿರಿ” ಎಂದು ಹೇಳುವ ಹೇಳಿಕೆಯಿಂದ ಇಂಥ ಪ್ರಗತಿಯ ಅಗತ್ಯವು ಸೂಚಿಸಲ್ಪಟ್ಟಿರುತ್ತದೆ. ಅಪೊಸ್ತಲ ಯೋಹಾನನು ತದ್ರೀತಿಯ ವಿಷಯವೊಂದನ್ನು ಪ್ರಕಟನೆ 22:17 ರಲ್ಲಿ ವರದಿಸಿದ್ದಾನೆ: “ಆತ್ಮನೂ ಮದಲಗಿತ್ತಿಯೂ—ಬಾ ಅನ್ನುತ್ತಾರೆ. ಕೇಳುವವನು ಬಾ ಅನ್ನಲಿ.”
4 ಈ ಆಮಂತ್ರಣವು ಹೇಗೆ ನೀಡಲ್ಪಡಬೇಕೆಂದು ಯೇಸು ಪ್ರದರ್ಶಿಸಿದನು. ಅವನ ಬೋಧನೆಗೆ ಜನರು ಪ್ರತಿಕ್ರಿಯೆ ತೋರಿಸಿದಾಗ, ಅವನು ಅವರಿಗೆ ಅವನ ಶುಶ್ರೂಷೆಯಲ್ಲಿ ಪಾಲಿಗರಾಗಲು ಆಮಂತ್ರಿಸಿದನು ಮತ್ತು ಅದನ್ನು ಹೇಗೆ ಮಾಡುವದೆಂದು ಅವರಿಗೆ ಕಲಿಸಿದನು. (ಮತ್ತಾಯ 4:19; 10:5-7, 11-14) ಅವನು ಉಪಯೋಗಿಸಿದ ಪರಿಣಾಮಕಾರಿ ವಿಧಾನಗಳನ್ನು ಅವನ ಜೊತೆಯಲ್ಲಿ ಹೋಗುವದರಿಂದ ಮತ್ತು ಅವನು ವಿಷಯಗಳನ್ನು ಹೇಗೆ ಮಾಡಿದನು ಎಂದು ಅವಲೋಕಿಸುವುದರಿಂದ ಅವನ ಶಿಷ್ಯರು ಕಲಿತರು. ಅವರು ತದನಂತರ ಅವರ ಶುಶ್ರೂಷೆಯನ್ನು ಅವನದ್ದರಂತೆಯೇ ರೂಪಿಸಿಕೊಂಡರು. ಅವರು ಅವನ ಕ್ರಮವಿಧಾನಗಳನ್ನು ಎಷ್ಟೊಂದು ಚೆನ್ನಾಗಿ ಕಲಿತರೆಂದರೆ, ಅವರು ಯೇಸುವಿನ ಶಿಷ್ಯರೆಂದು ಸ್ಪಷ್ಟವಾಗಿಗಿ ಗುರುತಿಸಿದ ವಿರೋಧಿಗಳ ಗಮನಕ್ಕೆ ಅವರ ಧೀರ ಸಾಕ್ಷಿಯು ಗಮನ ಸೆಳೆಯಿತು. ಅ. ಕೃತ್ಯಗಳು 4:13 ವರದಿಸುವುದು: “ಪೇತ್ರ ಯೋಹಾನರು ಧೈರ್ಯದಿಂದ ಮಾತಾಡುವುದನ್ನು ನೋಡಿ . . . ಇವರು ಯೇಸುವಿನ ಸಂಗಡ ಇದ್ದವರೆಂದು ಗುರುತು ಹಿಡಿದರು.”
5 ಸ್ವರ್ಗಕ್ಕೆ ಹಿಂತಿರುಗುವ ಮುಂಚೆ, ಹೊಸ ಶಿಷ್ಯರನ್ನು ಮಾಡಿ, ತಮಗೆ ಸ್ವತಃ ಕಲಿಸಲ್ಪಟ್ಟಂತೆ ಅವರಿಗೂ ಕಲಿಸುವದರ ಮೂಲಕ ಆತನ ಶಿಷ್ಯರು ಕ್ರೈಸ್ತ ಶುಶ್ರೂಷೆಯನ್ನು ಚಿರ ಸ್ಮರಣೀಯವಾಗಿ ಮಾಡಬೇಕೆಂದು ಯೇಸುವು ಅವರಿಗೆ ಆಜ್ಞೆಯನ್ನಿತ್ತನು. ಮತ್ತಾಯ 28:19, 20 ರಲ್ಲಿ ಯೇಸು ಆಜ್ಞಾಪಿಸಿದ್ದು: “ಆದ್ದರಿಂದ ನೀವು ಹೊರಟುಹೋಗಿ, ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ. . . . ನಾನು ನಿಮಗೆ ಉಪದೇಶ ಮಾಡಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” ಮತ್ತು ಇದು ನಮ್ಮ ದಿನಗಳ ತನಕ ಮುಂದರಿಯಬೇಕೆಂಬದು ಅವನ ಅರ್ಥವಾಗಿತ್ತೆಂದು ಸೂಚಿಸುತ್ತಾ, ಅವನು ಈ ಆಶ್ವಾಸನೆಯನ್ನು ಕೂಡಿಸಿದನು: “ನೋಡಿರಿ, ನಾನು ಯುಗದ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.”
6 ಯೇಸು ಕ್ರಿಸ್ತನ ನಿಜ ಶಿಷ್ಯರು ಅವನು ಆಜ್ಞಾಪಿಸಿದ ಎಲ್ಲಾ ಸಂಗತಿಗಳನ್ನು ಹೊಸ ಶಿಷ್ಯರಿಗೆ ಕಲಿಸುವ ಅವನ ಉಪದೇಶಗಳಿಗೆ ವಿಧೇಯರಾಗಲು ತಪ್ಪಿಹೋಗಲಿಲ್ಲ. ಆದಾಗ್ಯೂ, ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಸಭೆಯಲ್ಲಿನ ಗಮನಾರ್ಹ ಬೆಳವಣಿಗೆಯು, ಹೊಸತಾಗಿ ದೀಕ್ಷಾಸ್ನಾನ ಪಡೆದ ಸಭೆಯ ಸದಸ್ಯರ ಮತ್ತು ಅಸ್ನಾನಿತ ಪ್ರಚಾರಕರ ಹಾಗೂ ಬೈಬಲನ್ನು ನಮ್ಮೊಂದಿಗೆ ಅಭ್ಯಾಸಿಸುವ ಮತ್ತು ಪ್ರಾಯಶಃ ಕೆಲವೊಂದು ಮಟ್ಟದಲ್ಲಿ ಕೂಟಗಳಿಗೆ ಕ್ರಮವಾಗಿ ಹಾಜರಾಗಲು ಆರಂಭಿಸಿರುವ ಜನರ ವಿಶೇಷ ಅಗತ್ಯತೆಗಳನ್ನು ನಾವು ಪರಿಗಣಿಸುವದನ್ನು ಆವಶ್ಯಪಡಿಸುತ್ತದೆ.
7 1992 ರ ಸೇವಾ ವರ್ಷದ ಆರಂಭದಲ್ಲಿ, ಭಾರತದ ಪ್ರತಿ 9 ಪ್ರಚಾರಕರಲ್ಲಿ ಒಟ್ಟಂದಾಜಿನಲ್ಲಿ ಒಬ್ಬನು ಕೇವಲ ಒಂದು ವರ್ಷದಿಂದ ಶುಶ್ರೂಷೆಯಲ್ಲಿ ಸಕ್ರಿಯನಾಗಿದ್ದನು. ಇದಕ್ಕೆ ಕೂಡಿಸಿ, ನಾಲ್ವರಲ್ಲಿ ಒಬ್ಬನು ಕಳೆದ ಮೂರು ವರ್ಷ ಯಾ ಅದಕ್ಕಿಂತಲೂ ಕಡಮೆ ಸಮಯದಿಂದ ಪ್ರಚಾರಮಾಡುತ್ತಿದ್ದಾನೆ; ಮತ್ತು ಮೂವರಲ್ಲಿ ಒಬ್ಬನು ಐದು ವರ್ಷಗಳಿಗಿಂತ ಕಡಮೆ ಸಮಯದಿಂದ ಶುಶ್ರೂಷೆಯಲ್ಲಿ ಭಾಗವಹಿಸುತ್ತಾನೆ. ಸಭೆಯ ಸದಸ್ಯರಾದಂದಿನಿಂದ ಅನೇಕ ಹೊಸಬರು ಉತ್ತಮ ಪ್ರಗತಿಯನ್ನು ಮಾಡಿರುವುದಾದರೂ, ಇನ್ನು ಕೆಲವು ವಿಭಾಗಗಳಲ್ಲಿ ಹೆಚ್ಚಿನ ನೆರವು ಅವರ ಆತ್ಮಿಕ ಪ್ರಗತಿಯನ್ನು ಶೀಘ್ರಗೊಳಿಸಲು ನಿಸ್ಸಂದೇಹವಾಗಿ ಸಹಾಯ ಮಾಡುವುದು.
8 ಇಬ್ರಿಯ 6:2 (NW 6:1) ಎಲ್ಲರನ್ನು “ಪೂರ್ಣವಾದ ತಿಳುವಳಿಕೆಗೆ (ಪ್ರೌಢತೆಗೆ, NW ) ಸಾಗುತ್ತಾ ಹೋಗು” ವಂತೆ ಉತ್ತೇಜಿಸುತ್ತದೆ. ಕ್ರೈಸ್ತ ಪ್ರೌಢತೆಯು ಸೇವಾ ವರದಿಯನ್ನು ಹಾಕುವದಕ್ಕಿಂತ ಇನ್ನೂ ಮುಂದಕ್ಕೆ ಹೋಗುತ್ತದೆ. ವೈಯಕ್ತಿಕ ಅಭ್ಯಾಸ ಮತ್ತು ಕ್ರಮವಾದ ಕೂಟಗಳ ಹಾಜರಿ ಹಾಗೂ ಕ್ಷೇತ್ರ ಸೇವೆಯಲ್ಲಿ ಉತ್ಸಾಹಭರಿತ ಭಾಗವಹಿಸುವಿಕೆಯಲ್ಲಿ ಪ್ರಗತಿಮಾಡುವದು ಇದರಲ್ಲಿ ಸೇರಿರುತ್ತದೆ. ರಕ್ಷಣೆಗಾಗಿ ಸತ್ಯದ ಜ್ಞಾನಕ್ಕೆ ಬರುವಂತೆ ಇತರರಿಗೆ ಸಹಾಯ ಮಾಡುವುದೂ ಇದರಲ್ಲಿ ಒಳಗೂಡಿದೆ. ‘ಶಾಸ್ತ್ರಾಧಾರದಿಂದ ಕಾರಣಸಮೇತ ವಾದಿಸುವ’ ನಮ್ಮ ನೈಪುಣ್ಯತೆಗಳನ್ನು ಹರಿತಗೊಳಿಸಲು ನಾವು ಕೆಲಸ ಮಾಡಬೇಕು. (ಅ.ಕೃ. 17:2) ಪ್ರೌಢತೆಗೆ ಬೆಳೆಯಲು ಸಮಯ ತಗಲುತ್ತದೆ, ಮತ್ತು ಇದು ಹೆಚ್ಚಾಗಿ ನಮ್ಮ ದೈವಿಕ ಭಕ್ತಿ ಮತ್ತು ಕ್ಷೇತ್ರದಲ್ಲಿ ಸಂಪಾದಿಸುವ ನಮ್ಮ ವ್ಯಾವಹಾರಿಕ ಅನುಭವದ ಮೇಲೆ ಆಧರಿತವಾಗಿರುತ್ತದೆ. ನಮ್ಮ ಸ್ವಂತ ದೈವಿಕ ಭಕ್ತಿಯ ಆಳದ ಮೇಲೆ ನಮಗೆ ನಿಯಂತ್ರಣವಿರುವುದಾದರೂ ಕೂಡ, ವ್ಯಾವಹಾರಿಕ ಅನುಭವವನ್ನು ಸಂಪಾದಿಸಲು ನೆರವಾಗುವಂತೆ ಇತರ ಬಲಿತ ಸಹೋದರ, ಸಹೋದರಿಯರಿಗೆ ಅನುಮತಿಸುವದು ಒಂದು ವಿವೇಕದ ಮಾರ್ಗವಾಗಿದೆ. ಅವರ ಅನುಭವದಿಂದ, ವಿಶೇಷವಾಗಿ ಕ್ಷೇತ್ರ ಶುಶ್ರೂಷೆಯಲ್ಲಿ ನಾವು ಕಲಿಯಸಾಧ್ಯವಿದೆ. ನಮ್ಮ ಸ್ವಂತ ತಪ್ಪು ಸರಿಯ ಮೂಲಕ ಎಲ್ಲವನ್ನು ನಾವು ಕಲಿಯುವ ಅಗತ್ಯವಿಲ್ಲ.
9 ಅನುಭವದ ಕೊರತೆಯಿರುವವರಿಗೆ ಸಹಾಯ: ಕ್ರೈಸ್ತ ಸಭೆಯ ಆರಂಭದಲ್ಲಿಯೇ ನೆರವು ನೀಡುವ ನಮೂನೆಯೊಂದು ಇಡಲ್ಪಟ್ಟಿತು. ಯೇಸು ತನ್ನ ಶಿಷ್ಯರಿಗೆ ಉಪದೇಶಿಸಿದನು. (ಮಾರ್ಕ 3:14; ಲೂಕ 9:1; 10:1) ಇದಕ್ಕೆ ಪ್ರತಿಯಾಗಿ ಅವರು ಇತರರಿಗೆ ಕಲಿಸಿದರು. ತಿಮೊಥಿಯು ಅಪೊಸ್ತಲ ಪೌಲನಿಂದ ವಿಶೇಷವಾದ ಉತ್ತೇಜನ ಮತ್ತು ಸಹಾಯವನ್ನು ಪಡೆದನು, ಮತ್ತು ಶಿಷ್ಯನಾದ ಅಪೊಲ್ಲೋಸನು ಹೆಚ್ಚು ಅನುಭವ ಪಡೆದ ಅಕ್ವಿಲ ಮತ್ತು ಪ್ರಿಸ್ಕಿಲ್ಲರಿಂದ ವ್ಯಕ್ತಿಗತ ನೆರವು ಪಡೆದು ಪ್ರಗತಿ ಹೊಂದಿದನು. (ಅ.ಕೃ. 18:24-27; 1 ಕೊರಿಂ. 4:17) ಇಂದು ಕ್ರೈಸ್ತ ಸಭೆಯ ಬಲಿತ ಸದಸ್ಯರು ಈ ಉದಾಹರಣೆಗಳನ್ನು ಅನುಸರಿಸಿ, ಕಡಮೆ ಅನುಭವವುಳ್ಳವರಿಗೆ, ವಿಶೇಷವಾಗಿ ಹೊಸಬರಿಗೆ ಮತ್ತು ಯುವಕರಿಗೆ ಕಲಿಸುತ್ತಾರೆ ಮತ್ತು ಪ್ರೋತ್ಸಾಹಿಸುತ್ತಾರೆ. ರೋಮಾಪುರ 15:1, 2 ಹೇಳುವಂತೆ, “ದೃಢವಾದ ನಂಬಿಕೆಯುಳ್ಳ ನಾವು . . . ದೃಢವಿಲ್ಲದವರ ಅನುಮಾನಗಳನ್ನು (ಬಲಹೀನತೆಗಳನ್ನು, NW ) ಸಹಿಸಿಕೊಳ್ಳಬೇಕು.”
10 ಆತ್ಮಿಕವಾಗಿ ಪ್ರಗತಿ ಮಾಡುವಂತೆ ಅವರ ಮಕ್ಕಳಿಗೆ ನೆರವನ್ನೀಯಲು ಹೆತ್ತವರು ಸಕಾರಾತ್ಮಕವಾದ ಕ್ರಿಯೆಯನ್ನು ಕೈಗೊಳ್ಳಲು ಜವಾಬ್ದಾರರಾಗಿರುತ್ತಾರೆ. ಇದರಲ್ಲಿ ಕೌಟುಂಬಿಕ ಅಭ್ಯಾಸ, ವೈಯಕ್ತಿಕವಾಗಿ ಅಧ್ಯಯನ ಮಾಡುವದು ಹೇಗೆ ಎಂದು ಮಕ್ಕಳಿಗೆ ಕಲಿಸುವದು, ಕೂಟಗಳಲ್ಲಿ ಕ್ರಮವಾಗಿ ಹಾಜರಾಗುವಿಕೆ ಮತ್ತು ಭಾಗವಹಿಸುವಿಕೆ, ಮತ್ತು ಏನನ್ನು ಕಲಿಯುತ್ತಾರೋ ಅದನ್ನು ಅನ್ವಯಿಸುವದರಲ್ಲಿ ಅನುಭವ ಒಳಗೂಡಿರುತ್ತದೆ. (ಎಫೆ. 6:4; 1 ತಿಮೊ. 5:8) ಸಭಾ ಪುಸ್ತಕ ಅಭ್ಯಾಸ ಚಾಲಕರು, ವಿಶೇಷವಾಗಿ ಅವರ ಪುಸ್ತಕ ಅಭ್ಯಾಸ ಮತ್ತು ಕ್ಷೇತ್ರ ಸೇವೆಯ ಗುಂಪುಗಳಲ್ಲಿರುವವರು ಆತ್ಮಿಕ ರೀತಿಯಲ್ಲಿ ಪ್ರಗತಿಮಾಡಲು ಎಲ್ಲರಿಗೆ ಸಹಾಯವಾಗುವಂಥ ಏರ್ಪಾಡುಗಳನ್ನು ಮಾಡುವದರಲ್ಲಿ ಮುಂದಾಳುತನವನ್ನು ವಹಿಸತಕ್ಕದ್ದು. ಸೇವಾ ಮೇಲ್ವಿಚಾರಕನು ಮತ್ತು ಇತರ ಹಿರಿಯರು ಹಾಗೂ ಶುಶ್ರೂಷಾ ಸೇವಕರು ಮತ್ತು ಸಭೆಯ ಇತರ ಸದಸ್ಯರು ಕೂಡ ಸಹಾಯ ಮಾಡ ಸಾಧ್ಯವಿದೆ.
11 ಏನು ಅಗತ್ಯವೊ ಅದನ್ನು ಒದಗಿಸಿರಿ: ನೆರವಿಗಾಗಿ ಅಗತ್ಯವು ಕ್ರೈಸ್ತ ಚಟುವಟಿಕೆಯ ವೈಯಕ್ತಿಕ ಅಧ್ಯಯನದಂಥ ಒಂದು ನಿರ್ದಿಷ್ಟ ವಿಭಾಗಕ್ಕೆ ಮಾತ್ರವಾಗಿರಬಹುದು. ಒಂದು ವ್ಯಾವಹಾರ್ಯ ಅಧ್ಯಯನ ಕಾರ್ಯತಖ್ತೆಯನ್ನು ಸ್ಥಾಪಿಸುವದರಲ್ಲಿ ವ್ಯಕ್ತಿಯೊಬ್ಬನಿಗೆ ಸಲಹೆಗಳ ಅಗತ್ಯವಿರಬಹುದು. ಹೇಳಿಕೆಗಳನ್ನು ಯಾ ನೇಮಕಗಳನ್ನು ತಯಾರಿಸುವುದರಲ್ಲಿ ಬೇರೊಬ್ಬನಿಗೆ ಸಹಾಯ ಬೇಕಾಗಿದ್ದಿರಬಹುದು. ಬೇರೆಯವರಿಗೆ ಬೈಬಲ್ ವಿಷಯಗಳ ಮೇಲೆ ಹೇಗೆ ಸಂಶೋಧನೆ ಮಾಡುವದು ಎಂಬುದನ್ನು ಕಲಿಯುವ ಜರೂರಿಯಿರಬಹುದು.
12 ಅನೇಕ ಹೊಸಬರಿಗೆ ಕ್ಷೇತ್ರ ಶುಶ್ರೂಷೆಯಲ್ಲಿ ಸಹಾಯದ ಅಗತ್ಯವಿರುತ್ತದೆ. ಮನೆಯಿಂದ ಮನೆಯ ಸೇವೆಯಲ್ಲಿ, ಪುನಃ ಭೇಟಿಗಳನ್ನು ಮಾಡುವುದರಲ್ಲಿ, ಯಾ ಬೈಬಲ್ ಅಭ್ಯಾಸವೊಂದನ್ನು ಆರಂಭಿಸಿ, ನಡಿಸುವುದರಲ್ಲಿ ಹೆಚ್ಚು ಪರಿಣಾಮಕಾರಿಯಾಗಲು ಬಯಸುವ ಪ್ರಚಾರಕನೊಬ್ಬನು ಇರಬಹುದು. ರೀಸನಿಂಗ್ ಪುಸ್ತಕದಿಂದ ಯಾ ನಮ್ಮ ರಾಜ್ಯದ ಸೇವೆ ಯಿಂದ ಸೂಚಿಸಲ್ಪಟ್ಟ ಪೀಠಿಕೆಗಳನ್ನು ಮತ್ತು ನಿರೂಪಣೆಗಳನ್ನು ಉಪಯೋಗಿಸಿ ಕೆಲವು ಪ್ರ್ಯಾಕ್ಟಿಸ್ ಸೆಷನ್ಗಳು ಸಾಕಾಗಬಹುದು. ಬೇರೆ ಸಮಯಗಳಲ್ಲಿ, ಕ್ಷೇತ್ರ ಸೇವೆಗಾಗಿ ಒಂದು ವ್ಯಾವಹಾರ್ಯ ಕಾರ್ಯತಖ್ತೆಗಾಗಿ ಸಲಹೆಗಳು ಮತ್ತು ಅದಕ್ಕೆ ಅಂಟಿಕೊಂಡಿರಲು ಸಹಾಯ, ಇದಷ್ಟೇ ಬೇಕಾಗಿರಬಹುದು. ಸಹಾಯದ ಅಗತ್ಯವಿರುವ ವ್ಯಕ್ತಿಯ ಸಂಗಡ ಕಾರ್ಯವೆಸಗಲು ನಿಶ್ಚಿತ ಏರ್ಪಾಡುಗಳನ್ನು ಮಾಡುವದು, ನಿರ್ದಿಷ್ಟ ಧ್ಯೇಯಗಳೆಡೆಗೆ ಪ್ರಗತಿ ಮಾಡಲು ಅವನಿಗೆ ಯಾ ಅವಳಿಗೆ ಶಕ್ಯಮಾಡುತ್ತದೆ.
13 ನಮ್ಮ ಆತ್ಮಿಕ ಪ್ರಗತಿಯು ಇತರರಿಗೆ ತೋರಿಬರುವಂತೆ ಬಿಡಲು ದೇವರ ವಾಕ್ಯವು ನಮ್ಮನ್ನು ಉತ್ತೇಜಿಸುತ್ತದೆ. ಈ ಬುದ್ಧಿವಾದವನ್ನು ಅವನ ಜತೆ ಕೆಲಸಗಾರನಾದ ತಿಮೊಥಿಗೆ ಪೌಲನು ಬರೆದನು. (1 ತಿಮೊ. 4:15) ಈ ಉತ್ತೇಜನಕ್ಕೆ ಸಹಮತದಲ್ಲಿ, ಕ್ರೀಡಾಪಂದ್ಯದಲ್ಲಿ ಸ್ಪರ್ಧಿಸುವವನೋಪಾದಿ ಯಾ ಆತ್ಮಿಕ ಹೋರಾಟದಲ್ಲಿ ಯಶಸ್ವಿಯಾಗಿ ತೊಡಗಿಸಿಕೊಳ್ಳಲಿಕ್ಕಾಗಿ ನಮ್ಮನ್ನು ಸ್ವತಃ ತರಬೇತಿಗೊಳಿಸಿಕೊಳ್ಳುವ ಅಗತ್ಯವನ್ನು ಅಪೊಸ್ತಲನು ಒತ್ತಿಹೇಳಿದನು. (1 ಕೊರಿಂ. 9:24-27; 2 ಕೊರಿಂ. 10:5, 6) ದೇವರ ಚಿತ್ತದ ಕುರಿತಾಗಿ ನಾವು ಏನೆಲ್ಲಾ ಕಲಿಯುತ್ತೇವೊ ಅದನ್ನು ಅನ್ವಯಿಸುವುದರಲ್ಲಿ ನಾವು ತ್ವರಿತವಾಗಿರಬೇಕು, ಆ ಮೂಲಕ ನಿಜ ಕ್ರೈಸ್ತ ನಂಬಿಕೆಯ ಸಜೀವ ಉದಾಹರಣೆಗಳಾಗಿ ಅವಲೋಕಿಸುವವರು ನಮ್ಮನ್ನು ಕಾಣುವರು. ತದ್ರೀತಿಯಲ್ಲಿ, ಯೇಸು ಕ್ರಿಸ್ತನ ಸಮರ್ಪಿತ ಶಿಷ್ಯರಾಗುವಂತೆ ಇತರರಿಗೆ ಕಲಿಸುವ ಕಲೆಯಲ್ಲಿ ನಾವು ಪ್ರಗತಿ ಮಾಡತಕ್ಕದ್ದು.—ಯಾಕೋ. 1:22-25; 1 ತಿಮೊ. 4:12-16.
14 ಪ್ರಗತಿಯಲ್ಲಿ ಪರಿಶೋಧನೆಗಳನ್ನು ತಾಳಿಕೊಳ್ಳುವದು ಸೇರಿರುತ್ತದೆ: ಅವನು ಅನುಭವಿಸಿದ ಬಾಧೆಗಳಿಂದ ಯೇಸು ಕ್ರಿಸ್ತನು ಬಹುಮೂಲ್ಯ ಪಾಠಗಳನ್ನು ಕಲಿತನು. (ಇಬ್ರಿ. 5:8) ಅದರಂತೆ ನಾವೂ ಕೂಡ. ಆದುದರಿಂದ ಯಾಕೋಬ 1:2, 3 ರಲ್ಲಿ ಶಿಫಾರಸು ಮಾಡಲ್ಪಟ್ಟ ಸಕಾರಾತ್ಮಕ ಮನೋಭಾವವನ್ನು ನಾವು ತಕ್ಕೊಳ್ಳುವಾಗ, ನಮ್ಮ ಆತ್ಮಿಕ ಪ್ರಗತಿಯು ಅತಿಶಯಿಸಲ್ಪಡುತ್ತದೆ: “ನನ್ನ ಸಹೋದರರೇ, ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟುಮಾಡುತ್ತದೆಂದು ತಿಳಿದು ನೀವು ನಾನಾ ವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ಎಣಿಸಿರಿ.” ಈ ರೀತಿಯಲ್ಲಿ ಅಸ್ಥಿಗತವಾಗಿರುವ ರೋಗಗಳ, ಆರ್ಥಿಕ ಕಷ್ಟಗಳ, ವಿಭಜಿತ ಮನೆಗಳಲ್ಲಿ ವಾಸಿಸುವ, ಟೆರಿಟೊರಿಯಲ್ಲಿ ವಿರೋಧದ, ಯಾ ಇನ್ನಿತರ ಯಾವುದೇ ಪ್ರತಿಕೂಲ ಪರಿಸ್ಥಿತಿಗಳ ಪಂಥಾಹ್ವಾನವನ್ನು ನಾವು ಎದುರಿಸುತ್ತಿರಬಹುದು, ಆಗ ಯೆಹೋವನ ಸಹಾಯದಿಂದ ನಾವದನ್ನು ಜಯಿಸಬಹುದು ಎಂಬ ಯೆಹೋವನ ಆಶ್ವಾಸನೆ ನಮಗಿರುತ್ತದೆ ಮತ್ತು ಅವನ ನಮ್ಮಾರಾಧನೆಯಲ್ಲಿ ಪ್ರಗತಿಯನ್ನು ಮಾಡುವದನ್ನು ಮುಂದರಿಸಬಲ್ಲೆವು. (1 ಕೊರಿಂ. 10:13; 2 ಕೊರಿಂ. 12:9; 1 ಪೇತ್ರ 5:8-11) ಎಲ್ಲಾ ಪರಿಸ್ಥಿತಿಗಳಲ್ಲಿ ಸ್ಥಿರಚಿತ್ತರಾಗಿರುವ ಮೂಲಕ ಯಶಸ್ಸನ್ನು ಸಾಧಿಸಬಹುದು, ‘ದೈವೂಕ್ತಿಗಳನ್ನು ನುಡಿಯುವವನಾಗಿ ಬೋಧಿಸುತ್ತಾ ಮತ್ತು ದೇವರಿಂದ ದೊರೆಯುವ ಶಕ್ತಿಯನ್ನು ಹೊಂದಿ ಸಭೆಯ ಸೇವೆ ಮಾಡುವವನಾಗುವದರಿಂದ ಎಲ್ಲಾದರಲ್ಲಿ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ ಉಂಟಾಗುವದು.’—1 ಪೇತ್ರ 4:11.
15 ಮುನ್ನಡೆ ಪ್ರಗತಿಯ ಕಡೆಗೆ ಸಹಾಯವನ್ನು ಸ್ವೀಕರಿಸಿರಿ: ಮುನ್ನಡೆಯ ಆತ್ಮಿಕ ಪ್ರಗತಿಯನ್ನು ಮಾಡುವರೆ ಸಹಾಯದ ಅಗತ್ಯವಿರುವವರು ನೀವಾಗಿರುವದಾದರೆ, ಸಭೆಯ ಒಬ್ಬ ಹೆಚ್ಚು ಅನುಭವ ಪಡೆದ ಸದಸ್ಯನಿಂದ ಸಹಾಯವನ್ನು ಪಡೆಯಲು ಇಚ್ಛೆಯುಳ್ಳವರಾಗಿರ್ರಿ. ಸಹಾಯದ ಒಂದು ಕೊಡುಗೆಯೊಂದಿಗೆ ನಿಮ್ಮನ್ನು ಯಾರೂ ಸಮೀಪಿಸದೆ ಇದ್ದರೂ ಕೂಡ, ಸಹಾಯ ಪಡೆಯುವ ನಿಮ್ಮ ಅವಕಾಶವನ್ನು ನಾಚಿಕೆಯು ಕಸಿದುಕೊಳ್ಳುವಂತೆ ನೀವು ಬಿಡಬೇಡಿರಿ. ಸಹಾಯಕ್ಕಾಗಿ ಕೇಳಿರಿ. ಸಭೆಯಲ್ಲಿ ಯಾರೇ ಅನುಭವಸ್ಥರೊಬ್ಬರ ಸಹಾಯ ಕೇಳಲು ಸ್ವತಂತ್ರ ಭಾವದವರಾಗಿರ್ರಿ. ಯಾ ಅಗತ್ಯವಿರುವ ಸಹಾಯಕ್ಕಾಗಿ ನಿಮ್ಮ ಸಭಾ ಪುಸ್ತಕ ಅಭ್ಯಾಸದ ಚಾಲಕನನ್ನು, ಸೇವಾ ಮೇಲ್ವಿಚಾರಕನನ್ನು, ಯಾ ಇತರ ಯಾವನೇ ಒಬ್ಬ ಹಿರಿಯನನ್ನು ನೀವು ಕೇಳಬಹುದು.—ಹೋಲಿಸಿರಿ ಆದಿಕಾಂಡ 32:26; ಮತ್ತಾಯ 7:7, 8.
16 ಶುದ್ಧಾರಾಧನೆಯ ಯೆಹೋವನ ಪರ್ವತಕ್ಕೆ ಪ್ರವಾಹದೋಪಾದಿ ಎಡೆಬಿಡದೆ ಹೆಚ್ಚುತ್ತಿರುವ ಅಂತಾರಾಷ್ಟ್ರೀಯ “ಮಹಾ ಸಮೂಹ”ದವರಲ್ಲಿ ಸೇರಿರುವುದು ಖಂಡಿತವಾಗಿಯೂ ಒಂದು ಆಶ್ಚರ್ಯಕರ ಸುಯೋಗವಾಗಿರುತ್ತದೆ. (ಪ್ರಕ. 7:9) ಈ ಏರಿಕೆಯಲ್ಲಿ ನಮ್ಮೊಂದಿಗೆ ಇತರರನ್ನು ಆಮಂತ್ರಿಸುವುದು ಕೂಡ ಒಂದು ಸುಯೋಗವಾಗಿರುತ್ತದೆ. ಹೃದಯಪೂರ್ವಕ ಗಣ್ಯತೆಯೊಂದಿಗೆ, ಮುನ್ನಡೆ ಪ್ರಗತಿಯ ಕಡೆಗೆ ಸಕಾರಾತ್ಮಕ ಕ್ರಿಯೆಯನ್ನು ತಕ್ಕೊಳ್ಳುವದನ್ನು ನಾವು ಮುಂದರಿಸುತ್ತಿರೋಣ, ನಮ್ಮ ಆತ್ಮಿಕತೆಯನ್ನು ಸ್ವತಃ ಕಟ್ಟುತ್ತಿರೋಣ ಮತ್ತು ಯೆಹೋವನ ಸೇವೆಯಲ್ಲಿ ನಮ್ಮೊಂದಿಗೆ ಇತರರು ಪ್ರಗತಿಮಾಡುವಂತೆ ಸಹಾಯ ಮಾಡಲು ನಮ್ಮಿಂದಾದದ್ದನ್ನು ಮಾಡೋಣ.