ತಕ್ಕದಾದ ಮಾತಾಡುವ ವಿಷಯಗಳನ್ನು ಆರಿಸಿರಿ
1 ಕಾವಲಿನಬುರುಜು ಮತ್ತು ಎಚ್ಚರ!ವನ್ನು ಕ್ರಮವಾಗಿ ಓದುವಂತೆ ಜನರನ್ನು ಪ್ರೋತ್ಸಾಹಿಸಲು ನಾವೇನನ್ನು ಮಾಡಬಹುದು? ಇತರರಿಗೆ ಪತ್ರಿಕೆಗಳನ್ನು ಶಿಫಾರಸು ಮಾಡುವಾಗ ಮಾತಾಡಲು ಅಭಿರುಚಿಕರ ವಿಷಯಗಳು ನಮ್ಮಲ್ಲಿರಬೇಕು. ನಮ್ಮ ಟೆರಿಟೊರಿಯಲ್ಲಿರುವ ಜನರೊಂದಿಗೆ ಒಳ್ಳೇ ಪರಿಚಯ ನಮಗಿರುವದಾದರೆ ಮತ್ತು ನಾವು ಪತ್ರಿಕೆಗಳನ್ನು ಓದುವಾಗ ಅವರನ್ನು ಮನಸ್ಸಿನಲ್ಲಿಟ್ಟುಕೊಂಡಿರುವದಾದರೆ, ಅವರ ಅಭಿರುಚಿಯನ್ನು ಸೆರೆಹಿಡಿಯುವ ಮಾತಾಡುವ ವಿಷಯಗಳನ್ನು ನಾವು ಹುಡುಕಬಹುದು.
2 ಕೆಲವು ಕ್ಷೇತ್ರಗಳಲ್ಲಿ ಒಂದೇ ವಿಧದ ಹಿನ್ನೆಲೆಯ ಜನರಿರಬಹುದು, ಅದು ಅವರಲ್ಲಿ ಸಾಮಾನ್ಯ ಅಭಿರುಚಿಯ ವಿಷಯಗಳನ್ನು ಗಮನಿಸಲು ತೀರಾ ಸುಲಭವನ್ನಾಗಿ ಮಾಡುವುದು. ಆದರೆ ಇನ್ನಿತರ ಕ್ಷೇತ್ರಗಳಲ್ಲಿ, ಅನೇಕ ವಿವಿಧ ಹಿನ್ನೆಲೆಗಳ ಜನರನ್ನು ಕಂಡುಕೊಳ್ಳಬಹುದು. ಮನಸ್ಸಿನಲ್ಲಿ ಅನೇಕ ಮಾತಾಡುವ ವಿಷಯಗಳು ಇರುವದಾದರೆ, ನಾವು ಭೇಟಿಯಾಗುವ ವ್ಯಕ್ತಿಗೆ ಸರಿಬೀಳುವ ಒಂದನ್ನು ಹೆಕ್ಕಬಹುದು.
3 ಹೊಸತಾದ ಪತ್ರಿಕೆಗಳ ಸಂಚಿಕೆಗಳನ್ನು ಪಡೆದುಕೊಳ್ಳುವಾಗ ಹಳೆಯದಾದ ಸಂಚಿಕೆಗಳನ್ನು ತ್ಯಜಿಸಲು (ತೆಗೆದುಹಾಕಲು) ಅವಸರಪಡಬೇಡಿ. ಒಬ್ಬ ಸಹೋದರನು ಸಾಮಾನ್ಯವಾಗಿ ಮೂರು ಅಥವಾ ನಾಲ್ಕು ಕಾವಲಿನಬುರುಜು ಸಂಚಿಕೆಗಳನ್ನು ಮನೆಯವನಿಗೆ ತೆಗೆದು ತೋರಿಸುತ್ತಾನೆ ಮತ್ತು ಅವನಿಗೆ ಓದಲು ಬೇಕಾದ ಒಂದನ್ನು ಆರಿಸುವಂತೆ ಅವನಿಗೆ ಬಿಡುತ್ತಾನೆ. ನಾವು ಹಂಚಲು ಸಾಧ್ಯವಿರುವುದಕ್ಕಿಂತ ಹೆಚ್ಚಿನ ಪತ್ರಿಕೆಗಳು ನಮಗೆ ದೊರಕುವದನ್ನು ನಾವು ಕಂಡಲ್ಲಿ, ನಮ್ಮ ಆರ್ಡರನ್ನು ಕ್ರಮಪಡಿಸುವುದನ್ನು ಗಮನಿಸಬೇಕು.
4 ಯಾವತ್ತೂ ತಕ್ಕದಾದ ಮಾತಾಡುವ ವಿಷಯಗಳನ್ನು ಉಪಯೋಗಿಸುವುದರ ಮೂಲಕ, ಇತರರು ನಮ್ಮ ಪತ್ರಿಕೆಗಳನ್ನು ಓದಲು ಮತ್ತು ಒಂದುವೇಳೆ ಅಂಥವರಿಗೆ ಜೀವದ ದಾರಿಯಲ್ಲಿ ಆರಂಭಿಸಲು ನಾವು ಪ್ರೇರೇಪಿಸಬಹುದು. (ಮತ್ತಾ. 7:14) ಈ ಪ್ರಾಮುಖ್ಯ ವಿಷಯಕ್ಕೆ ಜಾಗರೂಕತೆಯ ಗಮನವನ್ನು ಕೊಡುವುದಾದರೆ, ಯೆಹೋವನ ಆಶೀರ್ವಾದದ ಖಚಿತತೆ ನಮಗಿರಬಹುದು.