ವರ್ಷಪುಸ್ತಕ—ಪ್ರೋತ್ಸಾಹದ ಒಂದು ನಿಧಿ
1 ಯೆಹೋವನ ಅದ್ಭುತ ಕಾರ್ಯಗಳ ಕುರಿತಾದ ವರದಿಗಳು ಮತ್ತು ಅನುಭವಗಳು, ದೇವರ ಸೇವಕರಿಗೆ ಯಾವಾಗಲೂ ವಿಶ್ರಾಂತಿದಾಯಕವಾಗಿವೆ. (ಯೋಬ 38:4, 7; ಜ್ಞಾನೋ. 25:25; ಲೂಕ 7:22; ಅ. ಕೃ. 15:31) ಆ ಕಾರಣದಿಂದಲೇ, ಯೆಹೋವನ ಸಾಕ್ಷಿಗಳ ವರ್ಷಪುಸ್ತಕವು ಪ್ರೋತ್ಸಾಹದ ಒಂದು ನಿಧಿಯಾಗಿದೆ.
2 ಪ್ರತಿ ವರ್ಷಪುಸ್ತಕವು, ಯೆಹೋವನ ಸಾಕ್ಷಿಗಳ ಚಟುವಟಿಕೆಗಳ ಮತ್ತು ಸಾಧನೆಗಳ ಕುರಿತು ಲೋಕದ ಎಲ್ಲ ಕಡೆಗಳಿಂದಲೂ ಬಂದ ಭಕ್ತಿವೃದ್ಧಿಯನ್ನುಂಟುಮಾಡುವ ವರದಿಗಳನ್ನು ಸಾದರಪಡಿಸುತ್ತದೆ. ನಂಬಿಕೆಯನ್ನು ಬಲಪಡಿಸುವ ಅನುಭವಗಳು, ಯೆಹೋವನ ಮಾರ್ಗದರ್ಶನ, ಸಂರಕ್ಷಣೆ, ಮತ್ತು ಆತನ ಜನರ ಆಶೀರ್ವಾದವನ್ನು ಎತ್ತಿತೋರಿಸುತ್ತವೆ. ಬೈಬಲ್ ಸತ್ಯಗಳನ್ನು ಎಲ್ಲಾ ಖಂಡಗಳ ಮತ್ತು ಸಮುದ್ರದ ದ್ವೀಪಗಳಲ್ಲಿ ಹೆಚ್ಚಿನವುಗಳಲ್ಲಿರುವ ಜನರಿಗೆ ತರಲು, ಕುಟುಂಬ, ಸ್ನೇಹಿತರು, ಮತ್ತು ಸ್ವದೇಶವನ್ನು ಬಿಟ್ಟ ಪ್ರಬಲ ಪುರುಷರ ಹಾಗೂ ಸ್ತ್ರೀಯರ ಕುರಿತು ವರ್ಷಪುಸ್ತಕ ತಿಳಿಸುತ್ತದೆ.
3 ದೇವರಿಗೆ ತಮ್ಮ ಸೇವೆಯನ್ನು ಹೆಚ್ಚಿಸುವಂತೆ ವರ್ಷಪುಸ್ತಕವು, ಅನೇಕ ವಾಚಕರನ್ನು ಪ್ರೇರೇಪಿಸಿದೆ. ಒಬ್ಬ ವಾಚಕನು ಬರೆದದ್ದು: “ನನಗೆ ಇಷ್ಟವಿರುವಷ್ಟು ಬೇಗನೆ ಅದನ್ನು ಓದಸಾಧ್ಯವಾಗಲಿಲ್ಲ. ನಾನು ಇಷ್ಟರ ತನಕ ಓದಿದ ವಿಷಯವು ಬಹಳ ಪ್ರೋತ್ಸಾಹದಾಯಕವಾಗಿದೆ. ಒತ್ತಡದ ಕೆಳಗೆ ಇತರರು ಮಾಡುತ್ತಿರುವುದನ್ನು ನಾನು ನೋಡಿದಾಗ, ಸುವಾರ್ತೆಯನ್ನು ಸಾರುವುದರಲ್ಲಿ ನಾನು ಹೆಚ್ಚನ್ನು ಮಾಡಸಾಧ್ಯವಿದೆ ಎಂಬ ಅನಿಸಿಕೆಯನ್ನು ಅದು ನನ್ನಲ್ಲಿ ಮೂಡಿಸುತ್ತದೆ.”
4 ಇಸವಿ 1927 ರಂದಿನಿಂದ, ಪ್ರತಿ ವರ್ಷ, ಯೆಹೋವನ ಸಾಕ್ಷಿಗಳ ವರ್ಷಪುಸ್ತಕವು, ಸ್ಫೂರ್ತಿಕೊಡುವ ವರದಿಗಳ ಮತ್ತು ಅನುಭವಗಳ ಒಂದು ನಿಜವಾದ ನಿಧಿಯಾಗಿದೆ. ಪ್ರೋತ್ಸಾಹದ ಈ ಅಪೂರ್ವವಾದ ಮೂಲದಿಂದ ನೀವು ಪೂರ್ಣವಾಗಿ ಪ್ರಯೋಜನ ಪಡೆಯುತ್ತಿದ್ದೀರೊ? ಹಾಗೆ ಮಾಡಬೇಕಾದರೆ, ಅದನ್ನು ನೀವು ಮೊದಲು ಪಡೆದಾಗ, ವರ್ಷಪುಸ್ತಕ ವನ್ನು ಓದಲು ನಿಶ್ಚಯ ಮಾಡಿಕೊಳ್ಳಿ. ಆಮೇಲೆ ವರ್ಷದ ಉದ್ದಕ್ಕೂ, ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅಗತ್ಯವಾಗಿರುವ ಪ್ರೋತ್ಸಾಹಕ್ಕಾಗಿ ಅದರ ನಿರ್ದಿಷ್ಟ ಭಾಗಗಳನ್ನು ಪುನರ್ವಿಮರ್ಶಿಸಿರಿ.