ದಶಂಬರಕ್ಕಾಗಿ ಸೇವಾ ಕೂಟಗಳು
ದಶಂಬರ 6ರ ವಾರ
ಸಂಗೀತ 205 (118)
10 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯಿಂದ ಆಯ್ದ ಪ್ರಕಟನೆಗಳು.
20 ನಿ: “ದೇವರ ಕುಮಾರನಾದ ಯೇಸು ಕ್ರಿಸ್ತನ ಕುರಿತು ಇತರರು ಕಲಿಯುವಂತೆ ಸಹಾಯ ಮಾಡಿರಿ.” ಪ್ರಶ್ನೋತ್ತರ ಆವರಿಸುವಿಕೆ. ಎರಡನೆಯ ಪ್ಯಾರಗ್ರಾಫ್ ನಲ್ಲಿರುವ ನಿರೂಪಣೆಯನ್ನು (ಅನುಭವಸ್ಥ ಪ್ರಚಾರಕನಿಂದ) ಮತ್ತು ನಾಲ್ಕನೆಯ ಪ್ಯಾರಗ್ರಾಫ್ ನಲ್ಲಿರುವ ನಿರೂಪಣೆಯನ್ನು (ಎಳೆಯ ಪ್ರಚಾರಕನಿಂದ) ಪ್ರತ್ಯಕ್ಷಾಭಿನಯಿಸಿರಿ. ಮನೆಯಿಂದ ಮನೆಯ ಹಾಗೂ ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ಪ್ರದರ್ಶಿಸುವಂತೆ ಎಲ್ಲರನ್ನು ಉತ್ತೇಜಿಸಿರಿ.
15 ನಿ: “ಪತ್ರಿಕಾ ಚಟುವಟಿಕೆಗಾಗಿ ಸಮಯವನ್ನು ಬದಿಗಿಡಿರಿ.” ಸಭಿಕರ ಚರ್ಚೆಯೊಂದಿಗೆ ಭಾಷಣ. ಮೂರನೆಯ ಪ್ಯಾರಗ್ರಾಫನ್ನು ಪರಿಗಣಿಸುವಾಗ, ಸ್ಥಳಿಕ ಟೆರಿಟೊರಿಯಲ್ಲಿ ಎದುರಿಸಬಹುದಾದ ವಿಭಿನ್ನ ರೀತಿಯ ಜನರಿಗೆ ಪ್ರಚಲಿತ ಪತ್ರಿಕೆಗಳಲ್ಲಿರುವ ಹಲವಾರು ಲೇಖನಗಳನ್ನು ಹೇಗೆ ಸಾದರಪಡಿಸಬಹುದು ಎಂಬುದನ್ನು ದೃಷ್ಟಾಂತಿಸಿರಿ.
ಸಂಗೀತ 169 (28) ಮತ್ತು ಸಮಾಪ್ತಿಯ ಪ್ರಾರ್ಥನೆ.
ದಶಂಬರ 13ರ ವಾರ
ಸಂಗೀತ 146 (80)
10 ನಿ: ಸ್ಥಳಿಕ ತಿಳಿಸುವಿಕೆಗಳು, ಅಕೌಂಟ್ಸ್ ವರದಿ, ಮತ್ತು ದಾನದ ಅಂಗೀಕಾರಗಳು. ಸಭೆಯನ್ನು, ಸ್ಥಳಿಕ ಅಗತ್ಯಗಳ, ಸೊಸೈಟಿ ರಾಜ್ಯ ಸಭಾಗೃಹ ನಿಧಿ, ಮತ್ತು ಸೊಸೈಟಿಯ ಲೋಕವ್ಯಾಪಕ ಕೆಲಸಕ್ಕಾಗಿ ಅದರ ಉದಾರ ಬೆಂಬಲಕ್ಕಾಗಿ ಪ್ರಶಂಸಿಸಿರಿ. ಈ ವಾರಾಂತ್ಯ ಕ್ಷೇತ್ರ ಸೇವೆಯಲ್ಲಿ ಆರಂಭದ ಹೇಳಿಕೆಗಳಲ್ಲಿ ಉಪಯೋಗಿಸಸಾಧ್ಯವಿರುವ ಒಂದು ಯಾ ಎರಡು ಮಾತಾಡುವ ಅಂಶಗಳನ್ನು ಸೂಚಿಸಿರಿ.
20 ನಿ: “ನಿಮ್ಮ ಬೈಬಲ್ ವಿದ್ಯಾರ್ಥಿಯ ಹೃದಯವನ್ನು ತಲಪಿರಿ.” ಪ್ರತ್ಯಕ್ಷಾಭಿನಯದೊಂದಿಗೆ ಪ್ರಶ್ನೋತ್ತರಗಳು. ಸಭೆಯಲ್ಲಿರುವ ಎಲ್ಲರೂ ಕಲಿಸುವ ಕಲೆಯನ್ನು ವಿಕಸಿಸುವುದರ ಕಡೆಗೆ ಕೆಲಸ ಮಾಡಬೇಕೆಂಬ ಅಂಶವನ್ನು ಒತ್ತಿ ಹೇಳಿರಿ. ಮೂರನೆಯ ಪ್ಯಾರಗ್ರಾಫ್‌ನ ಪರಿಗಣನೆಯ ಅನಂತರ, ಸದಾಕಾಲ ಜೀವಿಸಬಲ್ಲಿರಿ ಪುಸ್ತಕದ ಒಂದನೆಯ ಅಧ್ಯಾಯದಲ್ಲಿ 13 ಮತ್ತು 14 ನೆಯ ಪ್ಯಾರಗ್ರಾಫ್‌ಗಳಿಂದ ಪ್ರಶ್ನೆಗಳನ್ನು ಮತ್ತು ಶಾಸ್ತ್ರವಚನಗಳನ್ನು ಉಪಯೋಗಿಸುವ ಮೂಲಕ, ಬೈಬಲ್ ವಿದ್ಯಾರ್ಥಿಯೊಂದಿಗೆ ಹೇಗೆ ವಿವೇಚಿಸಬೇಕು ಎಂಬುದನ್ನು ಪ್ರಚಾರಕನು ಪ್ರದರ್ಶಿಸುತ್ತಾನೆ.
15 ನಿ: “ವರ್ಷಪುಸ್ತಕ—ಪ್ರೋತ್ಸಾಹದ ಒಂದು ನಿಧಿ.” ಉದ್ಧರಿಸಲಾದ ವಚನಗಳ ಅನ್ವಯವನ್ನು ಎತ್ತಿತೋರಿಸುವ, ಉತ್ಸಾಹಭರಿತ ಭಾಷಣ. ಜನವರಿ 1, 1990, ಜನವರಿ 1, 1987, ಮತ್ತು ಜನವರಿ 1, 1986ರ ದ ವಾಚ್‌ಟವರ್ ಪತ್ರಿಕೆಯ ಇಂಗ್ಲಿಷ್ ಸಂಚಿಕೆಗಳ ಪುಟ 32 ರಲ್ಲಿ ಕಂಡುಬರುವ ಅನುಭವಗಳನ್ನು ಮತ್ತು ಲೇಖನದಲ್ಲಿರುವ ಅನುಭವವನ್ನು ಅಥವಾ ನಿಮ್ಮ ಭಾಷೆಯ ಕಾವಲಿನಬುರುಜು ಪತ್ರಿಕೆಯಿಂದ ಸೂಕ್ತವಾದ ಅನುಭವಗಳನ್ನು ಭಾವನೆಯೊಂದಿಗೆ ಹೇಳಲು ಚೆನ್ನಾಗಿ ತಯಾರಿಸಿದ ಪ್ರಚಾರಕರಿಗಾಗಿ ಏರ್ಪಡಿಸಿರಿ.
ಸಂಗೀತ 165 (81) ಮತ್ತು ಸಮಾಪ್ತಿಯ ಪ್ರಾರ್ಥನೆ.
ದಶಂಬರ 20ರ ವಾರ
ಸಂಗೀತ 189 (90)
15 ನಿ: ಸ್ಥಳಿಕ ತಿಳಿಸುವಿಕೆಗಳು. ದಶಂಬರ 25 ರಂದು ವಿಶೇಷ ಸಾಕ್ಷಿಕಾರ್ಯಕ್ಕಾಗಿ ಸ್ಥಳಿಕ ಏರ್ಪಾಡುಗಳನ್ನು ತಿಳಿಸಿರಿ.
20 ನಿ: “ದಶಂಬರ ತಿಂಗಳಿನಲ್ಲಿ ಬೈಬಲ್ ಅಧ್ಯಯನಗಳನ್ನು ಆರಂಭಿಸುವುದು.” ಸಭಿಕರೊಂದಿಗೆ ಚರ್ಚೆ. ನಾಲ್ಕನೆಯ ಪ್ಯಾರಗ್ರಾಫನ್ನು ಪರಿಗಣಿಸುವಾಗ, ಪುನಃ ಸಂದರ್ಶನದಲ್ಲಿ ಬೈಬಲ್ ಅಧ್ಯಯನವನ್ನು ಹೇಗೆ ಆರಂಭಿಸುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಸಾಧ್ಯವಾದರೆ ಪ್ರತಿ ತಿಂಗಳು ಒಂದು ಮನೆ ಬೈಬಲ್ ಅಧ್ಯಯನವನ್ನು ನಡೆಸುವಂತೆ ಎಲ್ಲರನ್ನು ಉತ್ತೇಜಿಸಿರಿ.
10 ನಿ: “ಹೊಸ ಸರ್ಕಿಟ್ ಸಮ್ಮೇಳನದ ಕಾರ್ಯಕ್ರಮ.” ಪ್ರಶ್ನೋತ್ತರ ಚರ್ಚೆ. ಇಂತಹ ಸಮ್ಮೇಳನಗಳನ್ನು ಹಾಜರಾಗುವುದರ ಪ್ರಯೋಜನಗಳನ್ನು ತಿಳಿಸಿರಿ ಮತ್ತು ಮುಂಬರುವ ಶ್ರೇಣಿಯ ಅತ್ಯುಜಲ್ವ ಭಾಗಗಳನ್ನು ತಿಳಿಸಿರಿ. ಅವರ ಸಮ್ಮೇಳನದ ತಾರೀಖುಗಳು ಪ್ರಕಟಿಸಲ್ಪಟ್ಟ ಕೂಡಲೇ, ಹಾಜರಾಗಲು ಯೋಜನೆಗಳನ್ನು ಮಾಡುವಂತೆ ಎಲ್ಲರನ್ನು ಉತ್ತೇಜಿಸಿರಿ.
ಸಂಗೀತ 61 (13) ಮತ್ತು ಸಮಾಪ್ತಿಯ ಪ್ರಾರ್ಥನೆ.
ದಶಂಬರ 27ರ ವಾರ
ಸಂಗೀತ 37 (94)
10 ನಿ: ಸ್ಥಳಿಕ ತಿಳಿಸುವಿಕೆಗಳು. ದೇವಪ್ರಭುತ್ವ ವಾರ್ತೆಗಳು. ಜನವರಿ ಒಂದನೆಯ ತಾರೀಖಿಗೆ ವಿಶೇಷವಾದ ಸಾಕ್ಷಿಕಾರ್ಯದ ಏರ್ಪಾಡುಗಳನ್ನು ಪ್ರಕಟಿಸಿರಿ. ಜನವರಿಯಲ್ಲಿ ಸ್ಥಳಿಕವಾಗಿ ಪ್ರದರ್ಶಿಸಲಾಗುವ ಸಾಹಿತ್ಯವನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
20 ನಿ: ಅಮಲೌಷಧಗಳನ್ನು ಪ್ರಯೋಗಿಸುವುದರಲ್ಲಿ ತಪ್ಪೇನಿದೆ? ಶಾಲೆಯಲ್ಲಿ ಅಮಲೌಷಧಗಳ ವ್ಯಾಪಕವಾದ ಉಪಯೋಗವನ್ನು ಇಬ್ಬರು ಹದಿವಯಸ್ಕ ಪ್ರಚಾರಕರು ಒಬ್ಬ ಹಿರಿಯನೊಂದಿಗೆ ಚರ್ಚಿಸುತ್ತಾರೆ. ಅಮಲೌಷಧಗಳ ಸಂದರ್ಭೋಚಿತ ಉಪಯೋಗದಿಂದ ಯಾವುದೇ ತಪ್ಪನ್ನು ಕೆಲವು ಯುವ ಜನರು ಕಾಣುವುದಿಲ್ಲವೆಂದು ಅವರು ತಿಳಿಸುತ್ತಾರೆ. ತಾನು ಶಾಲೆಗೆ ಹೋಗುತ್ತಿದ್ದ ಸಮಯದಿಂದ ಈ ವರೆಗೆ ವಿಷಯಗಳು ಕೀಳಾದ ಸ್ಥಿತಿಗೆ ಬಂದಿವೆ ಎಂದು ಹಿರಿಯನು ಅಂಗೀಕರಿಸುತ್ತಾನೆ. ಅಮಲೌಷಧಗಳ ಕುರಿತು ನಿರ್ದಿಷ್ಟವಾಗಿ ಬೈಬಲಿನಲ್ಲಿ ಹೇಳಲಾಗಿಲ್ಲ ಆದರೆ ರೀಸನಿಂಗ್ ಪುಸ್ತಕದ ಪುಟಗಳು 106-12 ರಲ್ಲಿ ಅಮಲೌಷಧಗಳ ಉಪಯೋಗದ ಮೇಲೆ ಉತ್ತಮವಾದ ಮಾರ್ಗದರ್ಶನಗಳನ್ನು ಕಂಡುಕೊಳ್ಳಸಾಧ್ಯವಿದೆ ಎಂದು ಅವನು ಸೂಚಿಸುತ್ತಾನೆ. ಯುವ ಜನರು ವಚನಗಳನ್ನು ಓದುತ್ತಾರೆ, ಮತ್ತು ವಿಷಯವು ಆವರಿಸಲ್ಪಟ್ಟಂತೆ ಹಿರಿಯನು ಅವರೊಂದಿಗೆ ವಿವೇಚಿಸುತ್ತಾನೆ. ಸಮವಯಸ್ಕರ ಒತ್ತಡವನ್ನು ಪ್ರತಿರೋಧಿಸಲು ತಮಗೆ ವೈಯಕ್ತಿಕವಾಗಿ ಸಹಾಯ ಮಾಡಬಹುದಾದ ವಿಭಿನ್ನ ಮಾರ್ಗಗಳ ಬಗ್ಗೆ ತಮ್ಮ ಸ್ವಂತ ಸಲಹೆಗಳನ್ನು ಯುವ ಜನರು ನೀಡುತ್ತಾರೆ.
15 ನಿ: ಸ್ಥಳಿಕ ಅಗತ್ಯಗಳು ಯಾ “ವೃದ್ಧರಿಗೆ ಕ್ರೈಸ್ತರು ಸಹಾಯ ಮಾಡಸಾಧ್ಯವಿರುವ ವಿಧ” ಎಂಬ ವಿಷಯದ ಮೇಲೆ ಹಿರಿಯನಿಂದ ಭಾಷಣ. ಇದು (ಇಂಗ್ಲಿಷನ್ನು ಸೇರಿಸಿ) ಆಗಸ್ಟ್ 15, 1993 ಪುಟಗಳು 27-30, ವಾಚ್‌ಟವರ್ ಪತ್ರಿಕೆಯ ಪಾಕ್ಷಿಕ ಸಂಚಿಕೆಗಳ ಮೇಲೆ ಆಧಾರಿತವಾಗಿದೆ. ಮಾಸಿಕವಾಗಿ ಮುದ್ರಿಸಲಾಗುವ ಭಾಷೆಯ ವಾಚ್‌ಟವರ್ ಪತ್ರಿಕೆಯನ್ನು ಉಪಯೋಗಿಸುವ ಸಭೆಗಳು, ಭಾಷಣವನ್ನು ಅಕ್ಟೋಬರ 1, 1993ರ ದೇಶೀಯ ಮಾಸಿಕ ಸಂಚಿಕೆಯಲ್ಲಿರುವ “ಕಾಯುವುದನ್ನು ಕಲಿಯುವುದರ ಸಮಸ್ಯೆ” ಎಂಬ ಲೇಖನದ ಮೇಲೆ ಆಧಾರಿಸಸಾಧ್ಯವಿದೆ. (ಅಕ್ಟೋಬರ 15, 1993ರ ಇಂಗ್ಲಿಷ್ ಮತ್ತು ಪಾಕ್ಷಿಕ ಸಂಚಿಕೆಗಳ ಪುಟಗಳು 8-11 ರಲ್ಲಿ ಈ ಲೇಖನವು ಕಾಣಿಸಿಕೊಳ್ಳುತ್ತದೆ.)
ಸಂಗೀತ 120 (26) ಮತ್ತು ಸಮಾಪ್ತಿಯ ಪ್ರಾರ್ಥನೆ.