ನಮ್ಮ ನಿರ್ಮಾಣಿಕನನ್ನು ಗೌರವಿಸಲಿಕ್ಕಾಗಿ ಇತರರಿಗೆ ಸಹಾಯಮಾಡುವುದು
1 “ಯೆಹೋವನೇ, . . . ನಿನ್ನ ಬಳಿಯಲ್ಲಿ ಜೀವದ ಬುಗ್ಗೆ ಉಂಟಲ್ಲಾ,” ಎಂದು ಕೀರ್ತನೆಗಾರನು ಹೇಳಿದಾಗ ಅವನಿಗೆ ಅನಿಸಿದಂತೆ ನಮಗನಿಸುತ್ತದೊ? (ಕೀರ್ತ. 36:5, 9) ಇತರರು ಯೆಹೋವನನ್ನು ಗಣ್ಯಮಾಡುವಂತೆ ಮತ್ತು ಗೌರವಿಸುವಂತೆ ನಾವು ಹೇಗೆ ಸಹಾಯಮಾಡಬಲ್ಲೆವು? ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಅಥವಾ ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೊ ಅಥವಾ ಸೃಷ್ಟಿಯಿಂದಲೊ? ಎಂಬ ಪುಸ್ತಕವನ್ನು ಜೂನ್ ತಿಂಗಳಿನಲ್ಲಿ ನೀಡುವ ಮೂಲಕವೆ. ಈ ಪುಸ್ತಕಗಳು ನಿಜವಾಗಿಯೂ ಪ್ರಮುಖವಾಗಿದ್ದು ಅವುಗಳಲ್ಲಿ ಒಂದು, ದೇವರು ಮತ್ತು ಕ್ರಿಸ್ತನು ನಮಗಾಗಿ ಮಾಡಿದ ವಿಷಯಗಳಿಗಾಗಿ ಅವರಲ್ಲಿ ಈಗಾಗಲೆ ವಿಶ್ವಾಸ ಇಡುತ್ತಿರುವ ವ್ಯಕ್ತಿಗಳ ಗಣ್ಯತೆಯನ್ನು ಹೆಚ್ಚಿಸುತ್ತದೆ, ಹಾಗೂ ಇನ್ನೊಂದು ಪುಸ್ತಕವು ದೇವರ ಅಸ್ತಿತ್ವದ ಕುರಿತು ಘನವಾದ ಸಾಕ್ಷ್ಯವನ್ನು ಒದಗಿಸುತ್ತದೆ ಮತ್ತು ವಿಕಾಸವು ಸತ್ಯವಾಗಿರಲು ಸಾಧ್ಯವಿಲ್ಲದಿರುವುದರ ಕಾರಣವನ್ನು ಅದು ಸ್ಪಷ್ಟವಾಗಿಗಿ ತೋರಿಸುತ್ತದೆ. ಹೀಗೆ ಎರಡೂ ಪುಸ್ತಕಗಳು ದೇವರ ವಾಕ್ಯದೋಪಾದಿ ಬೈಬಲಿನಲ್ಲಿ ನಂಬಿಕೆಯನ್ನು ಕಟ್ಟುತ್ತವೆ. ಖಂಡಿತವಾಗಿಯೂ ದೇವರು ಯೇಸುವಿನ ಜೀವನ ಮತ್ತು ಶುಶ್ರೂಷೆಯ ಮೂಲಕ ಪ್ರಕಟಿಸಲ್ಪಡುತ್ತಾನೆ, ಹಾಗೆಯೆ ವಿಕಾಸವಲ್ಲ, ಸೃಷ್ಟಿಯು ಯೆಹೋವ ದೇವರಿಗೆ ಹೇಗೆ ಕೀರ್ತಿಯನ್ನು ತರುತ್ತದೆಂಬುದನ್ನು ಎಲ್ಲರೂ ತಿಳಿಯುವಂತೆ ನಾವು ಬಯಸುತ್ತೇವೆ.
2 ಮಹಾನ್ ಪುರುಷ ಪುಸ್ತಕಕ್ಕಾಗಿ ಒಂದು ಸರಳವಾದ, ನೇರ ನೀಡುವಿಕೆಯು ಇಲ್ಲಿದೆ.
ಮನೆಯವನನ್ನು ಅಭಿವಂದಿಸಿದ ಬಳಿಕ ನೀವು ಹೀಗೆ ಕೇಳಬಲ್ಲಿರಿ:
▪ “ಅಧಿಕಾಂಶ ಜನರಂತೆ ಯೇಸು ಕ್ರಿಸ್ತನು ಒಬ್ಬ ಐತಿಹಾಸಿಕ ವ್ಯಕ್ತಿ ಮತ್ತು ಒಬ್ಬ ಒಳ್ಳೇ ಮನುಷ್ಯನಾಗಿದ್ದನು ಎಂದು ನೀವು ನಂಬುತ್ತೀರೊ? ಹಾಗಿರುವಲ್ಲಿ, ಆತನ ಜೀವನ ಮತ್ತು ಬೋಧನೆಗಳ ಕುರಿತು ಹೆಚ್ಚನ್ನು ಕಲಿಯಲು ನೀವು ಇಷ್ಟಪಡುವಿರೊ? ಯೇಸು ಬೋಧಿಸಿದ್ದನ್ನು ಮತ್ತು ಮಾಡಿದ್ದನ್ನು ಕುರಿತು ಬೈಬಲು ಏನು ಹೇಳುತ್ತದೆ ಎಂಬುದನ್ನು ಸ್ಪಷ್ಟವಾಗಿದ ಅರ್ಥಪೂರ್ಣ ರೀತಿಯಲ್ಲಿ ಈ ಪುಸ್ತಕವು ಸಾದರಪಡಿಸುತ್ತದೆ. ಇದನ್ನು ಜನರೊಂದಿಗೆ ರೂ. 40ರ ಕಾಣಿಕೆಗೆ ನಾವು ಬಿಡುತ್ತಿದ್ದೇವೆ.”
3 ಅಥವಾ, ನಿಮ್ಮನ್ನು ಪರಿಚಯಿಸಿಕೊಂಡ ಬಳಿಕ ನೀವು ಹೀಗನ್ನಬಹುದು:
▪ “ಯೇಸು ಕ್ರಿಸ್ತನು ಬೋಧಿಸಿದ ವಿಷಯಗಳ ಕುರಿತು ಸ್ವಲ್ಪ ಕಲ್ಪನೆಯು ನಿಮಗಿರಬಹುದು. ಆದರೆ ಯೇಸುವಿನ ಜೀವನ ಮತ್ತು ಶುಶ್ರೂಷೆಯ ಕಡೆಗೆ ನಾವು ಶ್ರದ್ಧಾಪೂರ್ವಕವಾಗಿ ನೋಡಬೇಕೆಂದು ಬೈಬಲು ಹೇಳುತ್ತದೆಂದು ನಿಮಗೆ ತಿಳಿದಿದೆಯೊ? [ಇಬ್ರಿಯ 12:2ನ್ನು ಓದಿರಿ.] ಅದು ಯಾಕಂದರೆ ಆತನು ತಂದೆಯ ಬಳಿಗೆ ಹೋಗುವ ಒಂದೇ ಮಾರ್ಗವಾಗಿದ್ದಾನೆ ಮತ್ತು ಆತನ ಮತ್ತು ಆತನ ತಂದೆಯ ಕುರಿತು ನಿಷ್ಕೃಷ್ಟವಾದ ಜ್ಞಾನವನ್ನು ಹೊಂದುವುದರ ಮೂಲಕ ಮಾತ್ರವೇ ವ್ಯಕ್ತಿಯೊಬ್ಬನು ನಿತ್ಯ ಜೀವವನ್ನು ಪಡೆಯಬಲ್ಲನು ಎಂದು ಯೇಸು ತಾನೇ ಹೇಳಿದನು. [ಯೋಹಾನ 14:6 ನ್ನಾಗಲಿ ಅಥವಾ 17:3 ನ್ನಾಗಲಿ ತೋರಿಸಿ.] ಅಂತಹ ಜೀವದಾಯಕ ಜ್ಞಾನವನ್ನು ಪಡೆದುಕೊಳ್ಳಲು ಈ ಪುಸ್ತಕವು ನಿಮಗೆ ಸಹಾಯಮಾಡುವುದು.”
4 ಸೃಷ್ಟಿ ಪುಸ್ತಕವನ್ನು ನೀಡುತ್ತಿರುವುದಾದರೆ, ನೀವು ಹೀಗೆ ಹೇಳಸಾಧ್ಯವಿದೆ:
▪ “ನಮ್ಮ ಪ್ರಥಮ ಪೂರ್ವಜರು ಹೇಗೆ ಕಾಣಿಸುತ್ತಿದ್ದರು ಎಂಬುದರ ಕುರಿತು ನೀವೇನು ಅಭಿಪ್ರಯಿಸುತ್ತೀರಿ? [ಉತ್ತರಕ್ಕಾಗಿ ಅನುಮತಿಸಿರಿ.] ಅವರು ಈ ‘ಕಪಿ ಮಾನವ’ ನಂತೆ ಕಾಣಿಸುತ್ತಿದ್ದರೊ? [ಸೃಷ್ಟಿ ಪುಸ್ತಕದ ಪುಟ 83ಕ್ಕೆ ತೆರೆಯಿರಿ.] ಅಪೊಸ್ತಲ ಕೃತ್ಯಗಳು 17:26 ರಲ್ಲಿ ಬೈಬಲು ಏನು ಹೇಳುತ್ತದೆ ಎಂಬುದನ್ನು ಗಮನಿಸಿ. [ಓದಿರಿ.] ಹೀಗಿರುವುದರಿಂದ ‘ಕಪಿ ಮಾನವನ’ ರೇಖಾಕೃತಿಗಳು ಯಾವುದರ ಮೇಲಾಧಾರಿಸಿವೆ?” ಪುಟ 89 ರಲ್ಲಿ ರೇಖಾಕೃತಿಯ ಕೆಳಗಿರುವ ತಲೆಬರಹಕ್ಕೆ ಗಮನವನ್ನು ಸೆಳೆಯಿರಿ. ಪುಸ್ತಕವನ್ನು ಓದುವ ಮೂಲಕ ಮತ್ತು ಈ ಪ್ರಶ್ನೆಗೆ ಉತ್ತರವನ್ನು ಕಲಿಯುವ ಮೂಲಕ ಅವನು ಪ್ರಯೋಜನ ಹೊಂದಬಲ್ಲನೆಂದು ಮನೆಯವನಿಗೆ ಹೇಳಿರಿ.
5 “ಸೃಷ್ಟಿ” ಪುಸ್ತಕದ ಮುಖಪುಟಕ್ಕೆ ನಿರ್ದೇಶಿಸಿ, ಹೀಗೆ ಹೇಳುವುದು ಇನ್ನೊಂದು ಪ್ರಸ್ತಾಪವಾಗಿರಬಹುದು:
▪ “ಮಾನವನು ಇಲ್ಲಿಗೆ ಬಂದದ್ದು ವಿಕಾಸದಿಂದಲೊ ಅಥವಾ ಸೃಷ್ಟಿಯಿಂದಲೊ? ಎಂದು ಇಂದು ನಾವು ನಮ್ಮ ನೆರೆಯವರನ್ನು ಕೇಳುತ್ತಿದ್ದೇವೆ. ನೀವೇನು ನೆನಸುತ್ತೀರಿ? [ಉತ್ತರಕ್ಕಾಗಿ ಅನುಮತಿಸಿ.] ಉನ್ನತ ಶಿಕ್ಷಣವನ್ನು ಪಡೆದುಕೊಂಡಿರುವ ಅನೇಕ ಜನರು ವಿಕಾಸವನ್ನು ಒಂದು ನಿಜತ್ವವಾಗಿ ಅಂಗೀಕರಿಸುವುದಾದರೂ, ಇತರ ಉನ್ನತ ವಿದ್ಯಾವಂತ ಜನರು ಅದನ್ನು ನಂಬುವುದಿಲ್ಲ. ಹಿಂದಿನ ಅಂತರಿಕ್ಷಯಾನಿಯೊಬ್ಬನಿಂದ ಮಾಡಲ್ಪಟ್ಟ ತೀರ್ಮಾನವನ್ನು ಗಮನಿಸಿ. [ಪುಟಗಳು 122-3 ರಲ್ಲಿರುವ ಅಂಶಗಳನ್ನು ಒತ್ತಿಹೇಳಿರಿ.] ನಾವು ಯಾವುದನ್ನು—ವಿಕಾಸ ಅಥವಾ ಸೃಷ್ಟಿ—ನಂಬಬೇಕು ಎಂಬುದನ್ನು ನೋಡಲು ಪ್ರಮಾಣವನ್ನು ವೈಯಕ್ತಿಕವಾಗಿ ಪರೀಕ್ಷಿಸಬೇಕು.” ಮನೆಯವನು ಪುಸ್ತಕವನ್ನು ಅಂಗೀಕರಿಸುವಲ್ಲಿ, ನಿಮ್ಮ ಮುಂದಿನ ಭೇಟಿಯಲ್ಲಿ ಉತ್ತರಿಸಸಾಧ್ಯವಿರುವ ಪ್ರಶ್ನೆಯೊಂದನ್ನು ಎಬ್ಬಿಸಿರಿ.
6 ನಮ್ಮ ಸೃಷ್ಟಿಕರ್ತನ ಮತ್ತು ಆತನ ಸೃಷ್ಟಿಯ ಕಡೆಗೆ ಆತನಿಗಿರುವ ಪ್ರೀತಿಯ ಉದ್ದೇಶದ ಕುರಿತಾದ ಅದ್ಭುತವಾದ ಸತ್ಯಗಳನ್ನು ಕಲಿಯುವಂತೆ ಇತರರಿಗೆ ಸಹಾಯ ಮಾಡಲು ನೀವು ಹಾತೊರೆಯುತ್ತೀರೊ? ಮಹಾನ್ ಪುರುಷ ಮತ್ತು ಸೃಷ್ಟಿ ಪುಸ್ತಕಗಳು ಅದನ್ನು ಮಾಡಲು ನಿಮಗೆ ಸಹಾಯ ನೀಡಬಲ್ಲವು. ಅವು ನಮ್ಮ ಮಹಾ ಸೃಷ್ಟಿಕರ್ತನೂ, ಸಾರ್ವಭೌಮ ಕರ್ತನೂ ಆದ ಯೆಹೋವನ ಕೆಲಸಗಳನ್ನು ಶ್ಲಾಘಿಸುವ ಮೂಲಕ ಮತ್ತು ಆತನ ನಾಮವನ್ನು ಪವಿತ್ರೀಕರಿಸಲಿಕ್ಕಾಗಿ ಹಾಗು ಕ್ರಿಸ್ತನ ರಾಜ್ಯದ ಮೂಲಕ ಮಾನವಕುಲವನ್ನು ಆಶೀರ್ವದಿಸಲಿಕ್ಕಾಗಿ ಆತನ ಆಶ್ಚರ್ಯಕರವಾದ ಉದ್ದೇಶವನ್ನು ತಿಳಿಯಪಡಿಸುವ ಮೂಲಕ ಆತನನ್ನು ಗೌರವಿಸುತ್ತವೆ.