ಸುವಾರ್ತೆಯನ್ನು ಒಂದು ಸಕಾರಾತ್ಮಕ ಮನೋಭಾವದೊಂದಿಗೆ ಸಾದರಪಡಿಸುವುದು
1 ನಾವೆಲ್ಲರೂ ನಾವು ಏನನ್ನು ಮಾಡುತ್ತೇವೊ ಅದರಲ್ಲಿ, ವಿಶೇಷವಾಗಿ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ, ಆನಂದ ಮತ್ತು ಪೂರ್ಣಗೊಳಿಸುವಿಕೆಯನ್ನು ಕಂಡುಕೊಳ್ಳಲು ಇಷ್ಟಪಡುತ್ತೇವೆ. ನಮಗೆ ಅಂತಹ ತೃಪ್ತಿಯನ್ನು ಯಾವುದು ತರುತ್ತದೆ? ಅದು ನಾವು ಇತರರಿಗೆ ಸಹಾಯ ಮಾಡುವ ಸಾರ್ಥಕವಾದ ಕೆಲಸದಲ್ಲಿ ಕಾರ್ಯಮಗ್ನರಾಗಿರುವಾಗ, ಒಂದು ಸಕಾರಾತ್ಮಕ ಮಾನಸಿಕ ಮನೋಭಾವವನ್ನು ಕಾಪಾಡುವುದರೊಂದಿಗೆ ಆರಂಭಿಸುತ್ತದೆ. (ಜ್ಞಾನೋ. 11:25) ಸುವಾರ್ತೆಯನ್ನು ಸಾದರಪಡಿಸುವ ನಮ್ಮ ರೀತಿಯು, ನಾವು ಏನನ್ನು ಹೇಳುತ್ತಿದ್ದೇವೊ ಅದನ್ನು ನಾವು ನಿಜವಾಗಿ ನಂಬುತ್ತೇವೆಂಬುದನ್ನು ತೋರಿಸತಕ್ಕದ್ದು. ನಾವು ಹೃತ್ಪೂರ್ವಕವಾಗಿ ಮಾತಾಡುವಲ್ಲಿ, ನಮ್ಮ ಪ್ರಾಮಾಣಿಕತೆ ಮತ್ತು ವೈಯಕ್ತಿಕ ಮನವರಿಕೆಯು ತೋರಿಬರುವುದು. (ಲೂಕ 6:45) ನಮ್ಮ ನಿರೂಪಣೆಯನ್ನು ಪೂರ್ವಾಭಿನಯಿಸುವ ಮೂಲಕ, ಟೆರಿಟೊರಿಯಲ್ಲಿರುವ ಜನರೊಂದಿಗೆ ಮಾತಾಡುವಾಗ ಹೆಚ್ಚು ದೃಢವಿಶ್ವಾಸವುಳ್ಳ ಅನಿಸಿಕೆಯು ನಮಗಾಗುವುದು. ಸೆಪ್ಟೆಂಬರ್ ತಿಂಗಳಿನಲ್ಲಿ ನಾವು ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಅಥವಾ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವನ್ನು ನೀಡುತ್ತಿರುವಾಗ, ಇದು ವಿಶೇಷ ಮೌಲ್ಯವುಳ್ಳದ್ದಾಗಿರುವುದು. ಸುವಾರ್ತೆಯನ್ನು ಒಂದು ಸಕಾರಾತ್ಮಕ ಮನೋಭಾವದೊಂದಿಗೆ ಸಾದರಪಡಿಸುವುದರಲ್ಲಿ ಈ ಮುಂದಿನ ಸಲಹೆಗಳು ಸಹಾಯಕಾರಿಯಾಗಿರುವುದನ್ನು ನೀವು ಕಂಡುಕೊಳ್ಳಬಹುದು.
2 “ಕುಟುಂಬ” ಪುಸ್ತಕವನ್ನು ನೀಡುತ್ತಿರುವಾಗ, ಪ್ರಥಮ ಭೇಟಿಯಲ್ಲಿ ನೀವು ಹೀಗೆ ಹೇಳಸಾಧ್ಯವಿದೆ:
◼ “ನಮ್ಮ ನೆರೆಹೊರೆಯವರೊಂದಿಗೆ ಮಾತಾಡುತ್ತಾ, ಅನೇಕ ಜನರು ತಮ್ಮ ಕುಟುಂಬಗಳ ಭವಿಷ್ಯತ್ತಿನ ಕುರಿತಾಗಿ ಚಿಂತಿತರಾಗಿರುವುದನ್ನು ನಾವು ಕಂಡುಕೊಂಡಿದ್ದೇವೆ. ತಮ್ಮ ಸುತ್ತಲಿರುವ ವ್ಯಕ್ತಿಗಳು ಹೆಚ್ಚಾಗಿ ಪ್ರದರ್ಶಿಸುವ ಅನಪೇಕ್ಷಣೀಯ ಗುಣಗಳಿಂದ, ತಮ್ಮ ಕುಟುಂಬಗಳು ಬಾಧಿಸಲ್ಪಡುತ್ತಿರುವುದನ್ನು, ಹಾನಿಗೊಳಗಾಗುತ್ತಿರುವುದನ್ನೂ ಅವರು ಕಂಡುಕೊಂಡಿದ್ದಾರೆ. ಅನೇಕ ಜನರು ಇಂತಹ ಮನೋಭಾವಗಳನ್ನು ಪ್ರದರ್ಶಿಸುವುದನ್ನು ನೀವು ಗಮನಿಸಿದ್ದೀರೊ? [2 ತಿಮೊಥೆಯ 3:2, 3ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಅನೇಕ ಜನರು ಹೀಗಿರುವರೆಂದು ಸೂಚಿಸುತ್ತಿರುವಾಗ, ನಮ್ಮ ಸುತ್ತಲೂ ಇರುವ ಸಮಸ್ಯೆಗಳ ಹೊರತೂ ನಾವು ಒಂದು ಬಲವಾದ ಮತ್ತು ಸಂತೋಷಕರವಾದ ಕುಟುಂಬವನ್ನು ಹೇಗೆ ಕಟ್ಟಬಹುದು ಎಂಬುದರ ಕುರಿತಾಗಿ ಬೈಬಲ್ ವ್ಯಾವಹಾರಿಕ ಸಲಹೆಯನ್ನು ಸಹ ಕೊಡುತ್ತದೆ.” ಕುಟುಂಬ ಪುಸ್ತಕದ ಪುಟ 192ರಲ್ಲಿ ಆರಂಭವಾಗುವ 5 ಮತ್ತು 6ನೆಯ ಪ್ಯಾರಗ್ರಾಫ್ಗಳಿಂದ ಆಯ್ದ ವಾಕ್ಯಗಳನ್ನು ಓದಿ, ಸರಿಯಾದ ಉಪದೇಶಗಳೊಂದಿಗೆ, ನಾವು ನಿತ್ಯ ಭವಿಷ್ಯತ್ತುಳ್ಳ ಒಂದು ಕುಟುಂಬವನ್ನು ಕಟ್ಟಸಾಧ್ಯವಿದೆಯೆಂಬುದನ್ನು ತೋರಿಸಿರಿ. ಪುಸ್ತಕವನ್ನು ರೂ. 20.00ರ ಕಾಣಿಕೆಗೆ ನೀಡಿರಿ.
3 ಕುಟುಂಬದ ಭವಿಷ್ಯತ್ತಿನ ಕುರಿತಾಗಿ ನೀವು ಯಾರೊಂದಿಗೆ ಚರ್ಚಿಸಿದ್ದೀರೊ, ಅವರನ್ನು ಭೇಟಿಯಾಗಲು ಹಿಂದಿರುಗಿ ಹೋಗುವಾಗ, ನೀವು ಇದನ್ನು ಹೇಳಲು ಬಯಸಬಹುದು:
◼ “ನನ್ನ ಹಿಂದಿನ ಭೇಟಿಯಲ್ಲಿ, ತನ್ನ ಸುತ್ತಲಿರುವ ಸಮಸ್ಯೆಗಳನ್ನು ಎದುರಿಸಿ ನಿಲ್ಲಲುಸಾಧ್ಯವಿರುವಂತಹ ಒಂದು ಬಲವಾದ ಕುಟುಂಬವನ್ನು ನಾವು ಹೇಗೆ ಕಟ್ಟಸಾಧ್ಯವಿದೆಯೆಂಬುದರ ಕುರಿತಾಗಿ ನಾವು ಮಾತಾಡಿದೆವು. ಒಂದು ಬಲವಾದ ಕುಟುಂಬವನ್ನು ಕಟ್ಟುವ ಒಂದು ವಿಧವು, ಒಳ್ಳೆಯ ಸಂವಾದವನ್ನು ಭದ್ರಪಡಿಸುವುದೇ ಆಗಿರುತ್ತದೆ. ಸಂವಾದವನ್ನು ಕುಟುಂಬದ ಜೀವರಕ್ತವೆಂದು ಕರೆಯಲಾಗಿದೆ. ಈ ವಿಷಯದಲ್ಲಿ ಬೈಬಲಿನ ಬುದ್ಧಿವಾದವನ್ನು ಗಮನಿಸಿರಿ.” ಜ್ಞಾನೋಕ್ತಿ 18:13 ಮತ್ತು 20:5ನ್ನು ಬೈಬಲಿನಿಂದ ಅಥವಾ ಕುಟುಂಬ ಪುಸ್ತಕದ ಪುಟ 37ರಿಂದ ಓದಿರಿ. ಈ ಪುಸ್ತಕವು, ಬೈಬಲಿನಲ್ಲಿ ಕಂಡುಬರುವ ಕೊನೆಯಿಲ್ಲದ ವಿವೇಕದ ವ್ಯಾವಹಾರಿಕ ಅನ್ವಯವನ್ನು ಮಾಡುತ್ತದೆಂದು ತಿಳಿಸಿರಿ. ಪ್ರತಿಯೊಂದು ಪುಟದ ಕೊನೆಯಲ್ಲಿರುವ ಪ್ರಶ್ನೆಗಳ ಕಡೆಗೆ ಗಮನವನ್ನು ಸೆಳೆಯಿರಿ ಮತ್ತು ಪುಸ್ತಕವನ್ನು ಹೇಗೆ ಅಭ್ಯಾಸಿಸಸಾಧ್ಯವಿದೆ ಎಂಬುದನ್ನು ತೋರಿಸಿರಿ. ಮುಂದಿನ ಭೇಟಿಗಾಗಿ ಒಂದು ಭೇಟಿನಿಶ್ಚಯವನ್ನು ಮಾಡಿರಿ.
4 “ಸದಾ ಜೀವಿಸಬಲ್ಲಿರಿ” ಪುಸ್ತಕವನ್ನು ನೀಡುತ್ತಿರುವಾಗ ನೀವು ಈ ನಿರೂಪಣೆಯನ್ನು ಪ್ರಯತ್ನಿಸಬಹುದು:
◼ “ನೆರೆಹೊರೆಯಲ್ಲಿರುವ ಜನರೊಂದಿಗೆ ಮಾತಾಡುವಾಗ, ಹೆಚ್ಚಿನವರು ಒಂದು ಸುರಕ್ಷಿತವಾದ ಸಮುದಾಯ ಮತ್ತು ಶಾಂತಿಪೂರ್ಣ ಲೋಕಕ್ಕಾಗಿ ಹಾತೊರೆಯುತ್ತಾರೆಂಬುದನ್ನು ನಾನು ಗಮನಿಸಿದ್ದೇನೆ. ಮನುಷ್ಯರು ಅಂತಹ ಪರಿಸ್ಥಿತಿಗಳನ್ನು ಸಾಧಿಸಲು ತಪ್ಪಿಹೋಗಿರುವ ಕಾರಣದ ಕುರಿತಾಗಿ ನಿಮ್ಮ ಅಭಿಪ್ರಾಯವೇನು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಕೆಲವು ನಾಯಕರು ಪ್ರಾಮಾಣಿಕರಾಗಿದ್ದು, ಸ್ವಲ್ಪ ಒಳಿತನ್ನು ಮಾಡಬಹುದು, ಆದರೆ ಬೈಬಲ್ ವಿವೇಕಯುತವಾಗಿ ಯಾವ ಸಲಹೆಯನ್ನು ಕೊಡುತ್ತದೆಂಬುದನ್ನು ಗಮನಿಸಿರಿ.” ಕೀರ್ತನೆ 146:3, 4ನ್ನು ಓದಿ; ನಂತರ ಹೀಗೆ ಕೇಳಿರಿ: “ಮನುಷ್ಯನ ಅಗತ್ಯಗಳನ್ನು ತೃಪ್ತಿಪಡಿಸಸಾಧ್ಯವಿರುವ ಯಾರಾದರೂ ಇದ್ದಾರೊ?” ವಚನಗಳು 5 ಮತ್ತು 6ನ್ನು ಓದಿರಿ. ಸದಾ ಜೀವಿಸಬಲ್ಲಿರಿ ಪುಸ್ತಕದ ಪುಟಗಳು 156ರಿಂದ 162ರ ವರೆಗೆ ಇರುವ ಚಿತ್ರಗಳನ್ನು ತೋರಿಸಿರಿ, ಮತ್ತು ದೇವರ ಆಳಿಕೆಯ ಪ್ರಯೋಜನಗಳ ಕಡೆಗೆ ಗಮನವನ್ನು ಸೆಳೆಯಿರಿ. ಪುಸ್ತಕವನ್ನು ನೀಡಿರಿ.
5 ದೇವರ ಆಳ್ವಿಕೆಯ ವಿಷಯವು ಆರಂಭದಲ್ಲಿ ಚರ್ಚಿಸಲ್ಪಟ್ಟಿದ್ದಲ್ಲಿ, ಪುನರ್ಭೇಟಿಯಲ್ಲಿ ನೀವು ಈ ಸಲಹೆಯನ್ನು ಪ್ರಯೋಗಿಸಸಾಧ್ಯವಿದೆ:
◼ “ನಾನು ಕೆಲವು ದಿನಗಳ ಹಿಂದೆ ಇಲ್ಲಿದ್ದಾಗ, ಭೂಮಿಯ ಮೇಲೆ ನಿಜ ಶಾಂತಿಯನ್ನು ತರಲು ಮನುಷ್ಯನ ವಿಫಲತೆಯನ್ನು ಚರ್ಚಿಸಿದೆವು. ಇಂತಹ ವಿಫಲತೆಗೆ ಬೈಬಲ್ ಕೊಡುವ ಕಾರಣವನ್ನು ನಾವು ಕಂಡುಹಿಡಿದದ್ದನ್ನು ನೀವು ಜ್ಞಾಪಿಸಿಕೊಳ್ಳಬಹುದು. [ಕೀರ್ತನೆ 146:3ನ್ನು ಪುನಃ ಓದಿರಿ.] ನಾವು ನಮ್ಮ ನಿರೀಕ್ಷೆಗಳನ್ನು ಮನುಷ್ಯರ ಮೇಲೆ ಇಡಬಾರದೆಂದು ದೇವರು ನಮಗೆ ಬುದ್ಧಿವಾದ ಕೊಡುವ ಕಾರಣವನ್ನು ನೀವು ಗಮನಿಸಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಒಂದು ಶಾಶ್ವತ ಪರಿಹಾರಕ್ಕಾಗಿ ಯಾವುದೇ ನಿರೀಕ್ಷೆಯು ದೇವರಿಂದ ಬರಬೇಕೆಂಬುದನ್ನು ನೀವು ಪ್ರಾಯಶಃ ಸಮ್ಮತಿಸುತ್ತೀರಿ. ನಮಗೆ ಈ ದೃಢವಿಶ್ವಾಸ ಇರಲು ಸಾಧ್ಯವಿರುವ ಕಾರಣವು ಕೀರ್ತನೆ 146:10ರಲ್ಲಿ ವಿವರಿಸಲ್ಪಟ್ಟಿದೆ. [ಓದಿರಿ.] ನಾವು ದೇವರ ರಾಜ್ಯದ ಒಬ್ಬ ಪ್ರಜೆಯಾಗಿರಲು ಬಯಸುವುದಾದರೆ, ನಾವೇನು ಮಾಡಬೇಕು?” ಸದಾ ಜೀವಿಸಬಲ್ಲಿರಿ ಪುಸ್ತಕದ ಪುಟ 250ಕ್ಕೆ ತಿರುಗಿಸಿ, ಪ್ಯಾರಗ್ರಾಫ್ 2ನ್ನು ಓದಿ, ಇಬ್ರಿಯ 11:6ನ್ನು ಎತ್ತಿಹೇಳಿರಿ. ಬೈಬಲಿನ ಒಂದು ಅಭ್ಯಾಸದ ಮೂಲಕ, ಲಕ್ಷಾಂತರ ಮಂದಿ, ನಿತ್ಯ ಜೀವಕ್ಕೆ ನಡೆಸುವ ಜ್ಞಾನವನ್ನು ಗಳಿಸಿರುವ ವಿಧವನ್ನು ಪ್ರತ್ಯಕ್ಷಾಭಿನಯಿಸಲು ಸಿದ್ಧರಿದ್ದೀರೆಂದು ಹೇಳಿರಿ. ಹಿಂದಿರುಗಿ ಹೋಗಲಿಕ್ಕಾಗಿ ಏರ್ಪಡಿಸಿರಿ.
6 ಅಂಗಡಿಯಿಂದ ಅಂಗಡಿಯಲ್ಲಿ ಕೆಲಸ ಮಾಡುವಾಗ, “ಕುಟುಂಬ” ಪುಸ್ತಕದೊಂದಿಗೆ ನೀವು ಈ ಸಂಕ್ಷಿಪ್ತ ಪ್ರಸ್ತಾವವನ್ನು ಉಪಯೋಗಿಸಬಹುದು:
◼ “ಇಂದು ನಾವು ಸಮುದಾಯದ ವ್ಯಾಪಾರಸ್ಥರಿಗೆ ಒಂದು ವಿಶೇಷ ಸೇವೆಯನ್ನು ಸಲ್ಲಿಸುತ್ತಿದ್ದೇವೆ. ನಾವೆಲ್ಲರೂ ನಮ್ಮ ಕ್ಷೇತ್ರದಲ್ಲಿನ ವಿವಾಹವಿಚ್ಛೇದ ಮತ್ತು ಬಾಲಾಪರಾಧದ ಏರಿಕೆಯಿಂದ ಚಿಂತಿತರಾಗಿದ್ದೇವೆ. ಈ ಪ್ರವೃತ್ತಿಗಳ ವಿರುದ್ಧ ಸಫಲತೆಯಿಂದ ಹೋರಾಡುವ ಯಾವುದಾದರೂ ಮಾರ್ಗವಿದೆಯೆಂದು ನಿಮಗನಿಸುತ್ತದೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಪರಿಹಾರಗಳು ಇವೆ.” ಕುಟುಂಬ ಪುಸ್ತಕದಲ್ಲಿರುವ ಪರಿವಿಡಿಗೆ ತಿರುಗಿಸಿರಿ ಮತ್ತು ಅಧ್ಯಾಯ ಶಿರೋನಾಮಗಳಲ್ಲಿ ಕೆಲವನ್ನು ಓದಿಹೇಳಿರಿ. ಈ ಪುಸ್ತಕದಲ್ಲಿ ಕೊಡಲ್ಪಟ್ಟಿರುವ ಬುದ್ಧಿವಾದವು, ಮಾನವ ತತ್ವಜ್ಞಾನಗಳ ಮೇಲಲ್ಲ, ಬದಲಾಗಿ ಹೆಚ್ಚು ಉಚ್ಚವಾದ ಒಂದು ಮೂಲವಾದ, ಮಾನವಕುಲದ ಸೃಷ್ಟಿಕರ್ತನಿಂದ ಒದಗಿಸಲ್ಪಟ್ಟಿರುವ ಪರಿಹಾರಗಳ ಮೇಲೆ ಆಧರಿಸಲ್ಪಟ್ಟಿದೆಯೆಂಬುದನ್ನು ವಿವರಿಸಿರಿ. ಪುಸ್ತಕವನ್ನು ನೀಡಿರಿ.
7 ನೀವು “ಕುಟುಂಬ” ಪುಸ್ತಕವನ್ನು ಕೊಟ್ಟಿರುವ ಒಬ್ಬ ವ್ಯಾಪಾರಸ್ಥನನ್ನು ಪುನರ್ಭೇಟಿ ಮಾಡುವಾಗ, ನೀವು ಇದನ್ನು ಹೇಳಬಹುದು:
◼ “ನನ್ನ ಹಿಂದಿನ ಭೇಟಿಯಲ್ಲಿ, ಕುಟುಂಬದಲ್ಲಿ ತಲೆತನಕ್ಕೆ ಅಧೀನತೆ, ಸಂವಾದ, ತರಬೇತಿ ಮತ್ತು ಶಿಸ್ತಿನಂತಹ ವಿಷಯಗಳ ಮೇಲಿನ ದೇವರ ಬುದ್ಧಿವಾದವನ್ನು ಅನುಸರಿಸುವ ಮೂಲಕ ಅನೇಕ ಕುಟುಂಬ ಸಮಸ್ಯೆಗಳು ಜಯಿಸಲ್ಪಡಸಾಧ್ಯವಿದೆಯೆಂಬುದನ್ನು ನಾನು ತಿಳಿಸಿದ್ದೆ.” ಪುಟ 5ರಲ್ಲಿರುವ ಮೊದಲನೆಯ ಪ್ಯಾರಗ್ರಾಫ್ಗೆ ತಿರುಗಿಸಿ, ಒಂದು ಸಂತೋಷಕರ ಕುಟುಂಬದ ಪ್ರಯೋಜನಗಳಲ್ಲಿ ಕೆಲವನ್ನು ಓದಿಹೇಳಿರಿ. ಈ ಪುಸ್ತಕವನ್ನು ಅಭ್ಯಾಸಿಸುವುದು, ಅನೇಕಾನೇಕ ಕುಟುಂಬಗಳನ್ನು ಸಂತೋಷಕರವನ್ನಾಗಿ ಮಾಡಿದೆಯೆಂಬುದನ್ನು ತಿಳಿಸಿರಿ, ಮತ್ತು ಪುಸ್ತಕವನ್ನು ಅಭ್ಯಾಸಿಸುವ ನಮ್ಮ ವಿಧವನ್ನು ವಿವರಿಸಿರಿ. ಅವರ ವ್ಯಾಪಾರದ ಸ್ಥಳದಲ್ಲಿ ಅಥವಾ ಅವರ ಮನೆಯಲ್ಲಿ ಕ್ರಮವಾಗಿ ಭೇಟಿನೀಡಿ, ಈ ಪುಸ್ತಕದಲ್ಲಿ ಒಂದು ಉಚಿತ ಅಭ್ಯಾಸವನ್ನು ನಡಿಸಲು ಸಿದ್ಧರಿದ್ದೀರೆಂದು ಹೇಳಿರಿ.
8 “ದೇವರ ಜೊತೆಕೆಲಸದವ”ರೋಪಾದಿ, ಸುವಾರ್ತೆಯನ್ನು ಸಾದರಪಡಿಸುವುದರಲ್ಲಿ ಸಕಾರಾತ್ಮಕರಾಗಿರಲು ನಮಗೆ ಪ್ರತಿಯೊಂದು ಕಾರಣವಿದೆ. (1 ಕೊರಿಂ. 3:9) ಮನೆಯವನ ಅಗತ್ಯಗಳಿಗನುಸಾರ, ವಿಭಿನ್ನ ನಿರೂಪಣೆಗಳು ಮತ್ತು ಪ್ರಕಾಶನಗಳನ್ನು ಉಪಯೋಗಿಸುವುದರ ಕುರಿತಾಗಿ ನಾವು ಸಕಾರಾತ್ಮಕರಾಗಿರೋಣ. ನಾವು ಈ ಮನೋಭಾವವನ್ನು ಕಾಪಾಡಿಕೊಳ್ಳುವುದು, ಯೆಹೋವನ ಹೇರಳವಾದ ಆಶೀರ್ವಾದದಲ್ಲಿ ಫಲಿಸುವುದು.