ಮಾನವಕುಲದ ಸೃಷ್ಟಿಕರ್ತನಲ್ಲಿ ನಂಬಿಕೆಯನ್ನು ಕಟ್ಟುವುದು
1 ಜೀವದ ಉತ್ಪತ್ತಿ ಮತ್ತು ಅರ್ಥದ ಕುರಿತು ಅಧಿಕಾಂಶ ಜನರು ಯಾವುದಾದರೂ ಒಂದು ರೀತಿಯ ತೀರ್ಮಾನಕ್ಕೆ ಬಂದಿದ್ದಾರೆ. ವಿಷಾದಕರವಾಗಿಯೆ, ಅನೇಕರು ವಿಕಾಸವನ್ನು ಉತ್ತರವಾಗಿ ಅಂಗೀಕರಿಸುವಂತೆ ತಪ್ಪಾಗಿ ಪ್ರಭಾವಿಸಲ್ಪಟ್ಟಿದ್ದಾರೆ. ಸೃಷ್ಟಿ ಪುಸ್ತಕವು ವಿವಾದದ ಎರಡೂ ಕಡೆಗಳಲ್ಲಿ ಸಮಗ್ರವಾದ ನೋಟವನ್ನು ತೆಗೆದುಕೊಳ್ಳುತ್ತದೆ ಮತ್ತು ಬೈಬಲಿಗೆ ಆಧಾರವಾಗಿ ಹೇರಳವಾದ ಸಾಕ್ಷ್ಯವನ್ನು ನೀಡುತ್ತದೆ. ಆಲಿಸಲು ಮನಃಪೂರ್ವಕವಾದ ಇಚ್ಛೆಯನ್ನು ಪ್ರದರ್ಶಿಸಿರುವ ಪ್ರಾಮಾಣಿಕ ಜನರಿಗೆ ನಾವು ಹೇಗೆ ಸಹಾಯ ನೀಡಬಲ್ಲೆವು? ಪುನರ್ಭೇಟಿಗಳನ್ನು ಮಾಡುವ ಮೂಲಕವೆ. ನಾವು ಹಿಂದಿರುಗಿದಾಗ, ನಮ್ಮ ಸೃಷ್ಟಿಕರ್ತನೋಪಾದಿ ಯೆಹೋವನಲ್ಲಿ ನಂಬಿಕೆಯನ್ನು ಕಟ್ಟುವ ಏನನ್ನಾದರೂ ಹೇಳಲು ಖಚಿತವಾಗಿ ಮನಸ್ಸಿನಲ್ಲಿಟ್ಟುಕೊಂಡಿರುವುದು ಸದಾ ಒಳ್ಳೇದಾಗಿದೆ.
2 ಆ ವ್ಯಕ್ತಿಯು ಬೈಬಲಿನಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿದ್ದರೆ, ನಮ್ಮ ಸಂಭಾಷಣೆಯನ್ನು ಆರಂಭಿಸಲು ಈ ಪ್ರಸ್ತಾಪವು ಪರಿಣಾಮಕಾರಿಯಾದದ್ದಾಗಿರಬಹುದು:
▪ “ವಿಶ್ವದ ಉಗಮದ ಕುರಿತು ಯೆಶಾಯ 45:18 ಒಂದು ಬಲವಾದ ಹೇಳಿಕೆಯನ್ನು ಮಾಡುತ್ತದೆ; ಅದರ ಕುರಿತು ನೀವು ಏನು ಆಲೋಚಿಸುತೀರ್ತೆಂದು ತಿಳಿಯಲು ನಾನು ಬಯಸುತ್ತೇನೆ. [ಓದಿರಿ ಮತ್ತು ಹೇಳಿಕೆಗಾಗಿ ಅನುಮತಿಸಿರಿ.] ಭೂಮಿಯ ಮತ್ತು ಪರಲೋಕದ ಸೃಷ್ಟಿಕರ್ತನೋಪಾದಿ ಯೆಹೋವನು ತನ್ನನ್ನೇ ಗುರುತಿಸಿಕೊಳ್ಳುತ್ತಾನೆ. ಈ ಭೂಮಿಯ ಮೇಲಿನ ಜೀವದ ಕುರಿತಾಗಿ ಏನು? ಅದಕ್ಕಾಗಿ ಸಹ ಯೆಶಾಯ 42:5 ಎಲ್ಲಾ ಕೀರ್ತಿಯನ್ನು ಆತನಿಗೆ ಕೊಡುತ್ತದೆ. [ಓದಿರಿ.] ಬೈಬಲು ಹೇಳುವುದು ಸತ್ಯವಾಗಿರುವಲ್ಲಿ, ವಿಕಾಸವು ಸುಳ್ಳಾಗಿರಲೇ ಬೇಕು. ನೀವು ಬೈಬಲನ್ನು ನಂಬಸಾಧ್ಯವಿದೆ ಎಂದು ನಿಮಗನಿಸುತ್ತದೊ?” ಸೃಷ್ಟಿ ಪುಸ್ತಕದ 17ನೇ ಅಧ್ಯಾಯಕ್ಕೆ ನಿರ್ದೇಶಿಸಿರಿ, ಮತ್ತು ಸೃಷ್ಟಿಕರ್ತನೋಪಾದಿ ಯೆಹೋವನಲ್ಲಿ ನಂಬಿಕೆಯನ್ನಿಡುವುದರ ಹೆಚ್ಚಿನ ಕಾರಣಗಳನ್ನು ತೋರಿಸಿರಿ.
3 ನೀವು ನಿಮ್ಮ ಸಂಭಾಷಣೆಯನ್ನು ಈ ರೀತಿ ಏನಾದರೂ ಹೇಳುವ ಮೂಲಕ ಆರಂಭಿಸಬಹುದು:
▪ “ನನ್ನ ಕಳೆದ ಭೇಟಿಯಲ್ಲಿ, ಮನುಷ್ಯನ ಮತ್ತು ಭೂಮಿಯ ಭವಿಷ್ಯವೇನು? ಎಂಬ ಪ್ರಶ್ನೆಯು ಎಬ್ಬಿಸಲ್ಪಟ್ಟಿತ್ತು. ನಿಮ್ಮೊಂದಿಗೆ ನಾನು ಬಿಟ್ಟುಹೋದ ಪುಸ್ತಕವು ಆ ಪ್ರಶ್ನೆಯನ್ನು ಹೇಗೆ ಉತ್ತರಿಸುತ್ತದೆಂಬುದನ್ನು ಗಮನಿಸಿ.” ಸೃಷ್ಟಿ ಪುಸ್ತಕದ ಪುಟಗಳು 234-5ಕ್ಕೆ ತಿರುಗಿಸಿ ಮತ್ತು ಪ್ಯಾರಗ್ರಾಫ್ 6 ಮತ್ತು 7ನ್ನು ಓದುವಂತೆ ಅವನಿಗೆ ಉತ್ತೇಜಿಸಿ. ಹೆಚ್ಚಿನ ಆಸಕ್ತಿಯು ತೋರಿಸಲ್ಪಟ್ಟಲ್ಲಿ, ನೀವು ಕೇಳಬಹುದು: “ಎಂತಹ ನಾಟಕೀಯ ಬದಲಾವಣೆಗಳು ಭೂಮಿಯ ಮೇಲೆ ಸಂಭವಿಸುವವೆಂದು ನೀವು ಆಲೋಚಿಸುತ್ತೀರಿ?” ಸೂಕ್ತವಾದಲ್ಲಿ ಈ ಅಂಶವನ್ನು ಆ ಸಮಯದಲ್ಲಿ ಅಥವಾ ನಿಮ್ಮ ಮುಂದಿನ ಭೇಟಿಯಲ್ಲಿ ಸೃಷ್ಟಿ ಪುಸ್ತಕದ ಅದೇ ಅಧ್ಯಾಯದ ಇತರ ಪ್ಯಾರಾಗ್ರಾಫ್ಗಳಿಗೆ ಮುಂದುವರಿಸುವ ಮೂಲಕ ಚರ್ಚಿಸಸಾಧ್ಯವಿದೆ.
4 ಮನೆಯವನು “ಮಹಾನ್ ಪುರುಷ” ಪುಸ್ತಕವನ್ನು ಸ್ವೀಕರಿಸಿದ್ದಲ್ಲಿ, ನೀವು ಹೀಗೆ ಕೇಳಬಹುದು:
▪ “ಇಂದು ಅನೇಕ ಜನರು ತಾವು ಹುಡುಕುತ್ತಿರುವ ಸಂತೋಷವನ್ನು ಕಂಡುಕೊಳ್ಳಲು ಶಕ್ತರಾಗಿಲವ್ಲೆಂಬುದನ್ನು ನೀವು ಗಮನಿಸಿರುವಿರೊ? ಸಂತೋಷವನ್ನು ಹೇಗೆ ಕಂಡುಕೊಳ್ಳಸಾಧ್ಯವಿದೆ ಮತ್ತು ಒಳ್ಳೇದನ್ನು ಮಾಡುವುದರಿಂದ ಬರುವ ಆನಂದವನ್ನು ತನ್ನ ಜೀವಿತದಲ್ಲಿ ಹೇಗೆ ಪ್ರತಿಬಿಂಬಿಸಸಾಧ್ಯವಿದೆಯೆಂಬ ಎರಡೂ ವಿಚಾರಗಳನ್ನು ಯೇಸು ಕ್ರಿಸ್ತನು ಕಲಿಸಿದನು.” ಮತ್ತಾಯ 5:3-12ರ ‘ಸಂತೋಷ’ಗಳಿಗೆ ಗಮನವನ್ನು ಸೆಳೆಯಿರಿ, ಅವುಗಳಲ್ಲಿ ಕೆಲವು ಮಹಾನ್ ಪುರುಷ ಪುಸ್ತಕದ 35ನೇ ಅಧ್ಯಾಯದಲ್ಲಿ ಉಲ್ಲೇಖಿಸಲ್ಪಟ್ಟಿವೆ. ವಿಶೇಷವಾಗಿ ತಮ್ಮ ಆತ್ಮಿಕ ಆವಶ್ಯಕತೆಗಳ ಪರಿಜ್ಞಾನವುಳ್ಳವರಾಗಿರುವುದರಿಂದ ಸಂತೋಷವು ಹೇಗೆ ಲಭಿಸುತ್ತದೆಂಬುದನ್ನು ತೋರಿಸಿರಿ ಮತ್ತು ಈ ಆವಶ್ಯಕತೆಯನ್ನು ಪೂರೈಸುವುದರಲ್ಲಿ ಒಂದು ಮನೆ ಬೈಬಲ್ ಅಧ್ಯಯನವನ್ನು ಹೊಂದಿರುವುದು ಒಂದು ಒಳ್ಳೇ ಹೆಜ್ಜೆಯಾಗಿದೆ ಎಂಬುದನ್ನು ವಿವರಿಸಿ.
5 ಪುನರ್ಭೇಟಿಯನ್ನು ನೀವು ಆರಂಭಿಸಸಾಧ್ಯವಿರುವ ಇನ್ನೊಂದು ಮಾರ್ಗವು ಹೀಗೆ ಹೇಳುವ ಮೂಲಕವಾಗಿದೆ:
▪ “ಕೆಡುಕು ಮತ್ತು ದುಷ್ಟತನದ ಕಾರಣದಿಂದ ಮಾನವಕುಲವು ವಿಪರೀತ ವೇದನೆ ಮತ್ತು ದುಃಖವನ್ನು ಅನುಭವಿಸಿದೆ. ಈ ಪರಿಸ್ಥಿತಿಗಳು ಅಂತ್ಯಕ್ಕೆ ಬರುವುವೆಂದು ಈ ಭೂಮಿಯ ಸೃಷ್ಟಿಕರ್ತನಾದ ಯೆಹೋವನು ವಾಗ್ದಾನಿಸಿದ್ದಾನೆ. [133ನೇ ಅಧ್ಯಾಯಕ್ಕೆ ತಿರುಗಿಸಿರಿ, ಮತ್ತು ಜ್ಞಾನೋಕ್ತಿ 2:21, 22ನ್ನು ಓದಿರಿ.] ಯೇಸುವಿನ ಮಾದರಿ ಮತ್ತು ಬೋಧನೆಗಳ ಮೂಲಕ ಯೆಹೋವನು ನಮಗೆ ಏನನ್ನು ಕಲಿಸಿದ್ದಾನೊ ಅದನ್ನು ಕಲಿಯುವವರು ಮತ್ತು ವಿಧೇಯರಾಗುವವರು, ಆಶ್ಚರ್ಯಕರವಾದ ಆಶೀರ್ವಾದಗಳನ್ನು ಎದುರು ನೋಡಸಾಧ್ಯವಿದೆ.” ಅಧ್ಯಾಯ 25, 26, 37, 44, 46, 47, 52, 58, ಮತ್ತು 70 ರಲ್ಲಿ ಉಲ್ಲೇಖಿಸಲ್ಪಟ್ಟಿರುವ ಒಂದು ಅಥವಾ ಎರಡು ಅದ್ಭುತಗಳಿಗೆ ಗಮನ ಸೆಳೆಯುವ ಮೂಲಕ, ಅಂತಹ ಒಂದು ನಿರೀಕ್ಷೆಗೆ ನಮಗೆಂತಹ ದೃಢ ಆಧಾರವಿದೆಯೆಂಬುದನ್ನು ತೋರಿಸಿರಿ.
6 ಪುನರ್ಭೇಟಿಗಾಗಿ ನಿರ್ಧರಿತ ಸಮಯಗಳನ್ನು ಕಾಲತಖ್ತೆಯೊಂದಿಗೆ ಸ್ಥಾಪಿಸುವುದು ಉತ್ತಮವಾದದ್ದಾಗಿದೆಯೆಂದು ಅನುಭವಿ ಪ್ರಚಾರಕರು ಕಂಡುಕೊಂಡಿದ್ದಾರೆ. ಈ ಕೆಲಸಕ್ಕಾಗಿ ನಿರ್ದಿಷ್ಟ ಏರ್ಪಾಡುಗಳಿರುವುದು ಆಸಕ್ತಿಯನ್ನು ಪ್ರಾಮಾಣಿಕವಾಗಿ ಅನುಸರಿಸಲು ನಮಗೆ ಸಹಾಯ ಮಾಡುವುದು. ನಿಮಗೆ ಮತ್ತು ಟೆರಿಟೊರಿಯಲ್ಲಿ ವಾಸಿಸುವ ಜನರಿಗೆ ಅತ್ಯುತ್ತಮವಾಗಿರುವ ಸಮಯವನ್ನು ನಿಷ್ಕರ್ಷಿಸಿ. ಈ ಕೆಲಸದಲ್ಲಿ ನೀವು ಕ್ರಮವಾಗಿ ಪಾಲಿಗರಾಗುವ ಮೂಲಕ, “ಶಿಷ್ಯರನ್ನಾಗಿ ಮಾಡು”ವ ಆಜ್ಞೆಯನ್ನು ನೆರವೇರಿಸುವುದರಲ್ಲಿ ನೀವು ಸಂತೋಷವನ್ನು ಕಂಡುಕೊಳ್ಳುವಿರಿ.—ಮತ್ತಾ. 28:19, 20.