ಸಲಹೆಯನ್ನು ನೀಡುವಾಗ ನೀವು ಇತರರನ್ನು ಗೌರವಿಸುತ್ತೀರೋ?
ಗೌರವದೊಂದಿಗೆ ಸಲಹೆಯನ್ನು ಪಡೆಯುವುದು ಎಷ್ಟೊಂದು ಒಳ್ಳೇದು ಮತ್ತು ಪ್ರಯೋಜನಕರವಾಗಿದೆ! “ದಯೆಯ, ಪರಿಗಣನೆಯ, ಕಾಳಜಿಯ ಸಲಹೆಯು ಸುಸಂಬಂಧಗಳನ್ನು ಉಂಟುಮಾಡುತ್ತದೆ,” ಅನ್ನುತ್ತಾರೆ ಎಡರ್ಡ್ವ್. “ನಿಮ್ಮ ಕಥೆಯ ಭಾಗವನ್ನು ಆಲಿಸಲು ಇಚ್ಛೆಯನ್ನು ತೋರಿಸುವುದರ ಮೂಲಕ, ಸಲಹೆಗಾರನು ನಿಮಗೆ ಮರ್ಯಾದೆಯನ್ನೀಯುತ್ತಾನೆ ಮತ್ತು ಗೌರವಿಸುತ್ತಾನೆ ಎಂದು ನೀವು ಭಾವಿಸುವಾಗ, ಸಲಹೆಯನ್ನು ಸ್ವೀಕರಿಸಲು ಬಹಳಷ್ಟು ಸುಲಭವಾಗುತ್ತದೆ,” ಎಂದು ಹೇಳುತ್ತಾನೆ ವಾರೆನ್. “ಸಲಹೆಗಾರನು ಗೌರವದಿಂದ ನನ್ನನ್ನು ಉಪಚರಿಸುವಾಗ, ನನಗೆ ಅವನನ್ನು ಸಮೀಪಿಸಲು, ಸಲಹೆಯನ್ನು ಅವನಿಂದ ಕೇಳಲು ನಿರ್ಬಾಧಿತ ಭಾವನೆಯುಳ್ಳವನಾಗುತ್ತೇನೆ,” ಎನ್ನುತ್ತಾನೆ ನಾರ್ಮನ್.
ಗೌರವಕ್ಕೆ ಮಾನವನ ಸ್ವಾಭಾವಿಕ ಹಕ್ಕು
ಬೆಚ್ಚಗೆನ, ಮಿತ್ರತ್ವದ, ಮತ್ತು ಪ್ರೀತಿಯ ಸಲಹೆಯು ಖಂಡಿತವಾಗಿಯೂ ಸ್ವಾಗತಿಸಲ್ಪಡುತ್ತದೆ. ನಿಮಗೆ ಹೇಗೆ ಸಲಹೆಯನ್ನೀಯಬೇಕೆಂದು ನೀವು ಬಯಸುತ್ತೀರೊ ಅದೇ ರೀತಿಯಲ್ಲಿ ಇತರರಿಗೆ ಸಲಹೆಯನ್ನೀಯುವುದು ಪ್ರಯೋಜನಕರವು. (ಮತ್ತಾಯ 7:12) ಒಳ್ಳೆಯ ಸಲಹೆಗಾರನು ಆಲಿಸಲು ಸಮಯವನ್ನು ತೆಗೆದುಕೊಳ್ಳುತ್ತಾನೆ ಮತ್ತು ಯಾರಿಗೆ ಸಲಹೆಯು ಕೊಡಲ್ಪಡುತ್ತದೋ ಅವನನ್ನು ಟೀಕಿಸುವ ಮತ್ತು ಖಂಡಿಸುವ ಬದಲು, ಅವನನ್ನು—ಅವನ ಯೋಚನೆ, ಅವನ ಸ್ಥಾನ, ಮತ್ತು ಅವನ ಭಾವನೆಗಳನ್ನು ತಿಳುಕೊಳ್ಳಲು ಅನ್ವೇಷಿಸುತ್ತಾನೆ.—ಜ್ಞಾನೋಕ್ತಿ 18:13.
ಕ್ರೈಸ್ತ ಹಿರಿಯರ ಸಹಿತ ಇಂದಿನ ಸಲಹೆಗಾರರು, ಸಲಹೆಯನ್ನು ನೀಡುವಾಗ ಇತರರನ್ನು ಗೌರವಿಸಲು ಸಚೇತಕರಾಗಿರುವ ಆವಶ್ಯಕತೆಯಿದೆ. ಯಾಕೆ? ಸರಳ ಕಾರಣವೇನಂದರೆ ಸಮಾಜದಲ್ಲಿ ಪ್ರಚಲಿತದಲ್ಲಿರುವ ಮನೋಭಾವವು, ಅಗೌರವದ ರೀತಿಯಲ್ಲಿ ಇತರರೊಂದಿಗೆ ವ್ಯವಹರಿಸುವದಾಗಿದೆ. ಇದು ಸೋಂಕುತ್ತದೆ. ಯಾರಿಂದ ಒಂದು ಗೌರವಭರಿತ ಸತ್ಕಾರವನ್ನು ನೀವು ನಿರೀಕ್ಷಿಸುತ್ತೀರೋ ಅದೇ ಜನರು—ಅವರು ವೃತ್ತಿಪರ ವ್ಯಕ್ತಿಗಳಾಗಲಿ, ಧಾರ್ಮಿಕ ಮುಖಂಡರುಗಳಾಗಲಿ, ಯಾ ಇತರರಾಗಿರಲಿ—ಅದನ್ನು ಒದಗಿಸಲು ಅನೇಕ ಬಾರಿ ತಪ್ಪುತ್ತಾರೆ. ಉದಾಹರಿಸಲು, ಕೆಲಸದ ಸ್ಥಳದಿಂದ ವಜಾಮಾಡುವುದು ಧಣಿಗೂ, ಕಾರ್ಮಿಕನಿಗೂ ಇಬ್ಬರಿಗೂ ಒಂದು ಘಾತಕ ಮತ್ತು ಒತ್ತಡಭರಿತ ಸಂಗತಿಯಾಗಿರುತ್ತದೆ. ಸ್ವಾಭಿಮಾನಕ್ಕೆ ಅದು ಧಕ್ಕೆಯನ್ನುಂಟುಮಾಡುತ್ತದೆ, ವಿಶೇಷವಾಗಿ ಗೌರವರಹಿತ ಉಪಚಾರದಿಂದ ಒಬ್ಬನನ್ನು ಕೆಲಸದಿಂದ ತೆಗೆದುಹಾಕುವುದಾದರೆ. ಮೇಲ್ವಿಚಾರಕರು ಈ ಸನ್ನಿವೇಶದಲ್ಲಿ “ಕಠಿಣವಾದ ಸಂದೇಶವನ್ನು ಸ್ಪಷ್ಟವಾಗಿಗಿ ನಿರೂಪಿಸಿದ, ಚುಟುಕಾಗಿ ಮತ್ತು ಚಳಕದಿಂದ ನಿವೇದಿಸುವ ಮತ್ತು ವ್ಯಕ್ತಿಗತ ಘನತೆಗೆ ಹಾನಿತಟ್ಟದ ರೀತಿಯಲಿಡ್ಲುವ” ವಿಧದಲ್ಲಿ ಹೇಳುವುದು ಹೇಗೆ ಎಂದು ಕಲಿಯತಕ್ಕದ್ದು ಎಂದು ದಿ ವ್ಯಾಂಕೂವರ್ ಸನ್ ವರದಿಸುತ್ತದೆ. ಹೌದು, ಎಲ್ಲಾ ಮಾನವರು ಗೌರವಾರ್ಹ ಸತ್ಕಾರಕ್ಕೆ ಅರ್ಹರಾಗಿದ್ದಾರೆ.
ಸಂಯುಕ್ತ ರಾಷ್ಟ್ರ ಸಂಘದ ಜನರಲ್ ಅಸೆಂಬ್ಲಿಯು ಘೋಷಿಸುವುದು: “ಎಲ್ಲಾ ಮಾನವರು ಸ್ವತಂತ್ರವಾಗಿ ಮತ್ತು ಸಮಾನವಾದ ಘನತೆ ಮತ್ತು ಹಕ್ಕುಗಳೊಂದಿಗೆ ಜನಿಸಿರುತ್ತಾರೆ. ಅವರು ವಿವೇಚನೆ ಮತ್ತು ಮನಸ್ಸಾಕ್ಷಿಯೊಂದಿಗೆ ಸಂಪನ್ನಮಾಡಲ್ಪಟ್ಟಿರುತ್ತಾರೆ ಮತ್ತು ಒಬ್ಬರು ಇನ್ನೊಬ್ಬರೊಂದಿಗೆ ಸಹೋದರತ್ವದ ಆತ್ಮದೊಂದಿಗೆ ವರ್ತಿಸತಕ್ಕದ್ದು.” ಮನುಷ್ಯನ ಘನತೆಯು ಧಾಳಿಗೊಡ್ಡಲ್ಪಟ್ಟಿರುವುದರಿಂದ, ಸಂಯುಕ್ತ ರಾಷ್ಟ್ರ ಸಂಘದ ಸನ್ನದು ಮತ್ತು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಗೆ ಪ್ರಸ್ತಾವನೆಯು ಈ ಗುಣವನ್ನು ಅಂಗೀಕರಿಸುತ್ತದೆ. ಅವುಗಳು “ಮಾನವ ಮೂಲಭೂತ ಹಕ್ಕುಗಳಲ್ಲಿ, ಮಾನವ ವ್ಯಕ್ತಿಯ ಘನತೆ ಮತ್ತು ಮೂಲ್ಯತೆಯಲ್ಲಿ ವಿಶ್ವಾಸವನ್ನು” ಸ್ಥಿರೀಕರಿಸುತ್ತವೆ.
ಯೆಹೋವನು ಮನುಷ್ಯನನ್ನು ಅಂತರ್ಗತ ಘನತೆಯೊಂದಿಗೆ ಸೃಷ್ಟಿಸಿದನು
ಯೆಹೋವನು ಘನತೆಯ ದೇವರಾಗಿದ್ದಾನೆ. ಅವನ ಪ್ರೇರಿತ ಬರಹಗಳು ಯುಕ್ತವಾಗಿವೆಯೇ “ಆತನ ಸಾನ್ನಿಧ್ಯದಲ್ಲಿ ಮಾನಮಹಿಮೆಗಳೂ . . . ಇರುತ್ತವೆ.” ಮತ್ತು “ಆಕಾಶಮಂಡಲದಲ್ಲಿ ನಿನ್ನ ವೈಭವವನ್ನು ಪ್ರಕಾಶಪಡಿಸಿದ್ದೀ” ಎಂದು ಹೇಳಿವೆ.—1 ಪೂರ್ವಕಾಲವೃತ್ತಾಂತ 16:27; ಕೀರ್ತನೆ 8:1.
ಘನತೆಯ ದೇವರೋಪಾದಿ ಮತ್ತು ವಿಶ್ವದ ಸಾರ್ವಭೌಮನೋಪಾದಿ, ಅವನು ತನ್ನ ಎಲ್ಲಾ ಸ್ವರ್ಗೀಯ ಮತ್ತು ಐಹಿಕ ಸೃಷ್ಟಿಯ ಮೇಲೆ ಗೌರವವನ್ನು ಅನುಗ್ರಹಿಸಿದ್ದಾನೆ. ಆ ರೀತಿಯಲ್ಲಿ ಗೌರವಿಸಲ್ಪಟ್ಟವುಗಳಲ್ಲಿ ಎದ್ದುಕಾಣುವವನು ಅವನ ಮಹಿಮಾಭರಿತ ಮತ್ತು ಪ್ರಭುತ್ವ ನಡಿಸುತ್ತಿರುವ ಪುತ್ರನಾದ ರಾಜ ಕ್ರಿಸ್ತ ಯೇಸು ಆಗಿದ್ದಾನೆ. “ಮಹಿಮಪ್ರಭಾವಗಳನ್ನು ಅವನಿಗೆ ಬರಮಾಡಿದ್ದೀ” ಎಂದು ದಾವೀದನು ಪ್ರವಾದನಾರೂಪವಾಗಿ ಬರೆದನು.—ಕೀರ್ತನೆ 21:5; ದಾನಿಯೇಲ 7:14.
ವಿಷಾದಕರವಾಗಿ, ಈ ಮೂಲಭೂತ ಮಾನವ ಹಕ್ಕು ಇತಿಹಾಸದಲ್ಲೆಲ್ಲಾ ದುರುಪಯೋಗಿಸಲ್ಪಟ್ಟಿದೆ. ಒಬ್ಬ ಬಲಾಢ್ಯ ದೇವದೂತನು,—ಅವನ ಕ್ರಿಯೆಗಳ ಮೂಲಕ ಪಿಶಾಚನಾದ ಸೈತಾನನಾಗಿ ಪರಿವರ್ತಿತನಾದನು—ದೇವರ ಸಾರ್ವಭೌಮತೆಯ ನ್ಯಾಯಪರತೆಯನ್ನು, ನೀತಿಯುಕ್ತತೆಯನ್ನು ಮತ್ತು ಯೋಗ್ಯತೆಯನ್ನು ಪಣಕ್ಕೊಡ್ಡಿದನು. ಹೀಗೆ ಮಾಡುವುದರಲ್ಲಿ, ಯೆಹೋವನಿಗೆ ಅವನು ಅಗೌರವವನ್ನು ತೋರಿಸಿದನು ಮತ್ತು ಅವನ ಆಳುವ ಹಕ್ಕನ್ನು ಪಂಥಕ್ಕೊಡ್ಡುವುದರಿಂದ ಅವನ ಘನತೆಯ ಹೆಸರನ್ನು ಅಗೌರವಿಸಿದನು. ಸ್ವತಃ ತನಗೆ ಅತಿರೇಕವಾಗಿ ಘನತೆಯನ್ನು ಅವನು ಆರೋಪಿಸಿಕೊಂಡನು. ಪಿಶಾಚನಂತೆ, ಬೈಬಲ್ ಸಮಯಗಳ ನೆಬೂಕದ್ನೆಚ್ಚರನಂಥ ಬಲಾಢ್ಯ ಮಾನವ ಚಕ್ರವರ್ತಿಗಳು ಅವರ ‘ಸಾಮರ್ಥ್ಯಬಲ ಮತ್ತು ಮಹಿಮೆಯ’ ಕುರಿತು ಕೊಚ್ಚಿಕೊಂಡರು. ಅವರು ಯೆಹೋವನ ಘನತೆಯನ್ನು ಧಾಳಿಮಾಡಿ, ಸ್ವತಃ ತಾವಾಗಿಯೇ ಅಸಮಂಜಸವಾದ ಘನತೆಯನ್ನು ತೆಗೆದುಕೊಂಡರು. (ದಾನಿಯೇಲ 4:30) ಮಾನವ ಕುಲದ ಲೋಕದ ಮೇಲೆ ಹೇರಲ್ಪಟ್ಟ ಸೈತಾನನ ದಬ್ಬಾಳಿಕೆಯ ಆಳಿಕೆಯು ಮಾನವನ ಘನತೆಯನ್ನು ಆಕ್ರಮಣಗೈದಿದೆ ಮತ್ತು ಆಕ್ರಮಣಗೈಯುವುದನ್ನು ಮುಂದರಿಸಿದೆ.
ನಿಮ್ಮ ಘನತೆಯು ಎಂದಾದರೂ ಘಾಸಿಹೊಂದಿದೆಯೇ? ಸಲಹೆಯನ್ನಿತ್ತಾಗ, ವಿಪರೀತವಾಗಿ ದೋಷಿಗಳೆಂಬ ಭಾವನೆಯುಂಟಾಗುವಂತೆ, ಲಜ್ಜಾಸ್ಪದರಾಗುವಂತೆ, ಅವಮಾನಿತರಾಗುವಂತೆ, ಯಾ ಕೀಳ್ಮಟ್ಟಕ್ಕಿಳಿಸಲ್ಪಟ್ಟವರಂತೆ ನೀವು ಮಾಡಲ್ಪಟ್ಟಿದ್ದೀರೋ? “ನನಗೆ ಚಿಂತನೆಯ, ಕನಿಕರದ, ಮತ್ತು ಗೌರವದ ಭಾವನೆಯುಂಟಾಗಲಿಲ್ಲ, ನಿಷ್ಪ್ರಯೋಜಕನೆಂದು ಭಾವಿಸುವಂತೆ ಮಾಡಲ್ಪಟ್ಟೆನು” ಎನ್ನುತ್ತಾ, ಆಂಡ್ರೆ ಕೂಡಿಸುವುದು: “ಹತಾಶೆಯ ಮತ್ತು ವ್ಯಾಕುಲತೆಯ, ನಿರಾಶೆಯ ಭಾವನೆಗಳಿಗೆ ಕೂಡ ಇದು ನಡಿಸಿತು.” “ಹೃದಯದಲ್ಲಿ ನಿಮ್ಮ ಕುರಿತು ಅತ್ಯುತ್ತಮ ಅಭಿರುಚಿ ಇಲ್ಲದ ಒಬ್ಬರಿಂದ ಸಲಹೆಯನ್ನು ಸ್ವೀಕರಿಸುವುದು ಕಷ್ಟಕರ” ಎನ್ನುತ್ತಾಳೆ ಲೋರ.
ಈ ಕಾರಣದಿಂದ, ದೇವರ ಮಂದೆಯನ್ನು ಗೌರವ ಮತ್ತು ಮರ್ಯಾದೆಯಿಂದ ಉಪಚರಿಸುವಂತೆ ಕ್ರೈಸ್ತ ಮೇಲ್ವಿಚಾರಕರಿಗೆ ಪ್ರಬೋಧನೆಯನ್ನೀಯಲಾಗಿದೆ. (1 ಪೇತ್ರ 5:2, 3) ಇತರರಿಗೆ ಸಲಹೆಯನ್ನು ಕೊಡುವ ಜರೂರಿಯು ಮತ್ತು ಪ್ರಯೋಜನಕಾರಕತೆಯ ಸನ್ನಿವೇಶಗಳು ತಲೆದೋರಿದರೆ, ಯಾವುದೇ ಅಡಿಯಿಲ್ಡದ್ಲೆ ಇತರರ ಘನತೆಯನ್ನು ಧಾಳಿಮಾಡುವ ಲೌಕಿಕ ಜನರ ಯೋಚನೆ ಮತ್ತು ವರ್ತನೆಯಿಂದ ನಿಮ್ಮನ್ನು ಸ್ವತಃ ಹೇಗೆ ನೀವು ಸಂರಕ್ಷಿಸಿಕೊಳ್ಳಸಾಧ್ಯವಿದೆ? ಜೊತೆ ಕ್ರೈಸ್ತರ ಮತ್ತು ನಿಮ್ಮ ಸ್ವಂತ ಘನತೆಯನ್ನು ಸಂರಕ್ಷಿಸಲು ನಿಮಗೆ ಯಾವುದು ಸಹಾಯವಾಗಬಲ್ಲದು?—ಜ್ಞಾನೋಕ್ತಿ 27:6; ಗಲಾತ್ಯ 6:1.
ಘನತೆಯನ್ನು ಸಂರಕ್ಷಿಸುವ ತತ್ವಗಳು
ಈ ವಿಷಯದ ಕುರಿತು ದೇವರ ವಾಕ್ಯವು ಮೌನ ತಳೆದಿರುವುದಿಲ್ಲ. ನಿಪುಣನಾದ ಒಬ್ಬ ಸಲಹೆಗಾರನು, ಈ ಲೋಕದ ವಿವೇಕದೆಡೆಗೆ ನೋಡುವುದರ ಬದಲಿಗೆ ದೇವರ ವಾಕ್ಯದ ಹಿತೋಕ್ತಿಯ ಮೇಲೆ ಸಂಪೂರ್ಣ ಭರವಸೆಯನ್ನು ಇಡುವನು. ಪವಿತ್ರ ಬರಹಗಳು ಅಮೂಲ್ಯವಾದ ಬುದ್ಧಿವಾದವನ್ನು ಹೊಂದಿರುತ್ತವೆ. ಅನುಸರಿಸಿದಾಗ, ಅವು ಸಲಹೆಗಾರನನ್ನು ಮತ್ತು ಸಲಹೆ ಪಡೆಯುವವನನ್ನು ಘನತೆಗೇರಿಸುತ್ತವೆ. ಹೀಗೆ, ಕ್ರೈಸ್ತ ಮೇಲ್ವಿಚಾರಕನಾದ ತಿಮೊಥೆಯನಿಗೆ ಪೌಲನ ಮಾರ್ಗದರ್ಶನವು ಇದಾಗಿತ್ತು: “ವೃದ್ಧನನ್ನು ಗದರಿಸದೆ ತಂದೆಯೆಂದು ಭಾವಿಸಿ ಬುದ್ಧಿಹೇಳು. ಯೌವನಸ್ಥರನ್ನು ಅಣ್ಣತಮ್ಮಂದಿರೆಂದೂ ವೃದ್ಧಸ್ತ್ರೀಯರನ್ನು ತಾಯಿಗಳೆಂದೂ ಯೌವನಸ್ತ್ರೀಯರನ್ನು ಪೂರ್ಣಶುದ್ಧಭಾವದಿಂದ ಅಕ್ಕತಂಗಿಯರೆಂದೂ ಎಣಿಸಿ ಅವರವರಿಗೆ ಬುದ್ಧಿಹೇಳು.” (1 ತಿಮೊಥೆಯ 5:1, 2) ಈ ಮಟ್ಟಗಳಿಗೆ ಅಂಟಿಕೊಂಡಿರುವುದರ ಮೂಲಕ ಎಷ್ಟೊಂದು ಶೋಕ, ಬೇನೆಯ ಭಾವನೆಗಳು, ಮತ್ತು ಪೇಚಾಟವನ್ನು ಹೋಗಲಾಡಿಸಸಾಧ್ಯವಿದೆ!
ಬೇರೆ ವ್ಯಕ್ತಿಗೆ ಮತ್ತು ಘನತೆಯ, ಚಿಂತನೆಯ ವಿಧಾನದಲ್ಲಿ ಉಪಚರಿಸಲ್ಪಡುವ ಅವನ ಹಕ್ಕಿಗೆ ಯೋಗ್ಯವಾಗಿ ಗೌರವಿಸುವುದು ಯಶಸ್ವಿ ಸಲಹೆಯನ್ನೀಯುವುದರ ಕೀಲಿಕೈ ಎಂಬುದನ್ನು ಗಮನಿಸಿರಿ. ಸಂಚಾರ ಮೇಲ್ವಿಚಾರಕರ ಸಹಿತ, ಕ್ರೈಸ್ತ ಹಿರಿಯರು ಈ ಬುದ್ಧಿವಾದವನ್ನು ಅನುಸರಿಸಲು ಪ್ರಯತ್ನಿಸತಕ್ಕದ್ದು. ಅಳವಡಿಸಲ್ಪಡಬೇಕಾದವನೊಬ್ಬನು ಆ ರೀತಿ ಯಾಕೆ ಚಿಂತಿಸುತ್ತಾನೆ ಮತ್ತು ವರ್ತಿಸುತ್ತಾನೆ ಎಂದು ನಿಶ್ಚಯಿಸಲು ಹುಡುಕುತ್ತಾರೆ. ಅವನ ದೃಷ್ಟಿಕೋನವನ್ನು ಆಲಿಸಲು ಅವರು ಬಯಸತಕ್ಕದ್ದು, ಮತ್ತು ಸಹಾಯ ಪಡೆಯುವಾತನನ್ನು ಲಜ್ಜೆಗೀಡುಮಾಡುವ, ಕೀಳ್ಮಟ್ಟಕ್ಕಿಳಿಸುವ ಯಾ ಅವಹೇಳನಗೊಳಿಸುವದನ್ನು ಹೋಗಲಾಡಿಸಲು ಪ್ರತಿಯೊಂದು ಪ್ರಯತ್ನವನ್ನು ಮಾಡತಕ್ಕದ್ದು.
ಹಿರಿಯನೋಪಾದಿ, ನೀವು ಅವನ ಕುರಿತು ಚಿಂತಿಸುತ್ತೀರಿ ಮತ್ತು ಆತನ ಸಮಸ್ಯೆಗಳಲ್ಲಿ ಅವನಿಗೆ ಸಹಾಯ ಮಾಡಲು ಆಶಿಸುತ್ತೀರಿ ಎಂದು ನಿಮ್ಮ ಸಹೋದರನಿಗೆ ತಿಳಿಯುವಂತೆ ಮಾಡಿರಿ. ಶಾರೀರಿಕ ಪರೀಕೆಗ್ಷಾಗಿ ನೀವು ವೈದ್ಯನ ಚಿಕಿತ್ಸಾಲಯಕ್ಕೆ ಹೋದಾಗ ಒಬ್ಬ ಒಳ್ಳೆಯ ವೈದ್ಯನು ಮಾಡುವುದು ಅದನ್ನೇ. ಭಾವರಹಿತ, ನೀರಸವಾದ ಕೋಣೆಯೊಂದರಲ್ಲಿ ಉಡುಪುಗಳನ್ನು ಕಳಚುವುದು ನಿಮ್ಮನ್ನು ಪೇಚಾಟಕ್ಕೆ ಮತ್ತು ಅಪಮಾನಿಸುವದಕ್ಕೆ ನಡಿಸಬಹುದು. ನಿಮ್ಮ ರೋಗದ ಕಾರಣವೇನೆಂಬುದನ್ನು ನಿರ್ಧರಿಸಲು ಆವಶ್ಯಕವಾದ ಪರೀಕ್ಷೆಯನ್ನು ನಡಿಸುತ್ತಿರುವಾಗ, ನಿಮ್ಮ ಸ್ವಾಭಿಮಾನಕ್ಕೆ ಶೀಘ್ರಸಂವೇದನೆ ತೋರಿಸುವ ಮತ್ತು ಆವರಿಸುವ ಬಟೆಯ್ಟಿಂದ ನಿಮ್ಮನ್ನು ಗೌರವಿಸುವ ವೈದ್ಯನೊಬ್ಬನನ್ನು ನೀವೆಷ್ಟು ಗಣ್ಯಮಾಡುತ್ತೀರಿ! ತದ್ರೀತಿಯಲ್ಲಿ ವ್ಯಕ್ತಿಯೊಬ್ಬನಿಗೆ ಯೋಗ್ಯ ಗೌರವ ತೋರಿಸುವ ಕ್ರೈಸ್ತ ಸಲಹೆಗಾರನೊಬ್ಬನು ದಯೆ ಮತ್ತು ಸ್ಥಿರತೆಯುಳ್ಳವನಾಗಿದ್ದರೂ, ಸಲಹೆ ಪಡೆದುಕೊಳ್ಳುವವನಿಗೆ ಘನತೆಯನ್ನು ತೊಡಿಸುವನು. (ಪ್ರಕಟನೆ 2:13, 14, 19, 20) ವ್ಯತಿರಿಕ್ತವಾಗಿ, ಕ್ರೂರವಾದ, ನೀರಸವಾದ, ಮತ್ತು ಭಾವನಾರಹಿತತೆಯ ಸಲಹೆಯು ನೀವು ಲಜ್ಜೆಪಡುವಂತೆ, ಅವಮಾನಿತರಾಗುವಂತೆ, ಮತ್ತು ನಿಮ್ಮ ಘನತೆಯನ್ನು ಕಳಚುವಂತೆ ಮಾಡುವ ಭಾವನೆಯುಂಟಾಗುವ ಸಾಂಕೇತಿಕ ರೀತಿಯಲ್ಲಿ ಬಟ್ಟೆಯನ್ನು ತೆಗೆಯುವದಕ್ಕೆ ಸಮಾನವಾಗಿದೆ.
ದೇವಪ್ರಭುತ್ವ ಶಾಲೆಯ ಮೇಲ್ವಿಚಾರಕರು ಗೌರವಯುಕ್ತವಾಗಿ ಸಲಹೆಯನ್ನೀಯುವುದರಲ್ಲಿ ವಿಶೇಷವಾಗಿ ಜಾಗ್ರತರಾಗಿರತಕ್ಕದ್ದು. ವಯಸ್ಸಾದ ವ್ಯಕ್ತಿಗಳಿಗೆ ಸಲಹೆಯನ್ನೀಯುವಾಗ, ಅವರ ಮಾಂಸಿಕ ಹೆತ್ತವರಿಗೆ ತೋರಿಸುವ ತದ್ರೀತಿಯ ಪ್ರೀತಿಯನ್ನು ಪ್ರತಿಬಿಂಬಿಸುತ್ತಾರೆ. ಅವರು ಪರಿಗಣನೆಯುಳ್ಳವರು, ಸ್ನೇಹಪರರು, ಮತ್ತು ಬೆಚ್ಚನೆಯ ಭಾವದವರು ಆಗಿರುತ್ತಾರೆ. ಅಂತಹ ಸೂಕ್ಷ್ಮಸಂವೇದಿತನವು ಜರೂರಿಯುಳ್ಳದ್ದಾಗಿದೆ. ಅದು ಯೋಗ್ಯ ಸಲಹೆಯನ್ನು ಕೊಡುವದಕ್ಕೆ ಮತ್ತು ಪಡೆಯುವುದಕ್ಕೆ ನೆರವಾಗುವ ವಾತಾವರಣವನ್ನು ಹುಟ್ಟಿಸುತ್ತದೆ.
ಹಿರಿಯರೇ, ವ್ಯಾವಹಾರ್ಯ ಸಲಹೆಯು ಮೇಲೆತ್ತುತ್ತದೆ, ಪ್ರೋತ್ಸಾಹಿಸುತ್ತದೆ, ಕಟ್ಟುತ್ತದೆ, ಮತ್ತು ಸಕಾರಾತ್ಮಕವಾಗಿರುತ್ತದೆ ಎಂಬುದನ್ನು ಮನಸ್ಸಿನಲ್ಲಿಡಿರಿ. ಎಫೆಸ 4:29 ನಮೂದಿಸುವುದು: “ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ.”
ಕ್ರೂರವಾದ ಪದಗಳನ್ನು, ಭಾಷೆಯನ್ನು, ಯಾ ವಿವೇಚನೆಯನ್ನು ಬಳಸುವ ಅಗತ್ಯವೇನೂ ಅಲ್ಲಿರುವುದಿಲ್ಲ. ಬದಲಾಗಿ, ಇತರ ವ್ಯಕ್ತಿಗೋಸ್ಕರ ಗೌರವ ಮತ್ತು ಸ್ವ-ಪ್ರತಿಷ್ಠೆಯ ಮತ್ತು ಬೆಲೆಯ ಅವನ ಭಾವನೆಗಳನ್ನು ಸಂರಕ್ಷಿಸುವ ಆಶೆಯು ವಿಷಯಗಳನ್ನು ಸಕಾರಾತ್ಮಕವಾಗಿ, ರಚನಾತ್ಮಕವಾಗಿ ಸಾದರಪಡಿಸಲು ನಿಮ್ಮನ್ನು ಪ್ರಚೋದಿಸುತ್ತದೆ. ನಿರಾಶೆ ಮತ್ತು ನಿಷ್ಪಯ್ರೋಜಕತೆಯ ಭಾವನೆಯನ್ನುಂಟುಮಾಡುವ ಅವಲೋಕನಗಳನ್ನು ಒತ್ತಿಹೇಳುವುದರ ಬದಲಾಗಿ, ಯಾವುದೇ ಹೇಳಿಕೆಯನ್ನು ಅವನ ಒಳ್ಳೆಯ ವಿಷಯಗಳಿಗಾಗಿ ಯಾ ಗುಣಗಳಿಗಾಗಿ ಯಥಾರ್ಥವಾದ, ಅಪ್ಪಟವಾದ ಶಿಫಾರಸ್ಸಿನೊಂದಿಗೆ ಆರಂಭಿಸಿರಿ. ಹಿರಿಯನೋಪಾದಿ ನೀವು ಸೇವೆ ಸಲ್ಲಿಸುವುದಾದರೆ, ನಿಮ್ಮ ‘ಅಧಿಕಾರವನ್ನು ಕೆಡವಿಹಾಕುವುದಕ್ಕೆ ಅಲ್ಲ ಬದಲು ಕಟ್ಟುವುದಕ್ಕೆ’ ಉಪಯೋಗಿಸಿರಿ.—2 ಕೊರಿಂಥ 10:8.
ಹೌದು, ಕ್ರೈಸ್ತ ಹಿರಿಯರುಗಳಿಂದ ಕೊಡಲ್ಪಡುವ ಯಾವುದೇ ಸಲಹೆಯ ಪರಿಣಾಮವು ಆವಶ್ಯಕತೆಯುಳ್ಳ ಪ್ರೋತ್ಸಾಹವನ್ನು ಕೊಡುವದಕ್ಕೆ, ಹಿತಕರವಾದದ್ದನ್ನು ನೀಡಲಿಕ್ಕೆ ಇರತಕ್ಕದ್ದು. ಅದು ಎದೆಗುಂದಿಸಲು ಯಾ “ಹೆದರಿಸಲು” ಅಲ್ಲ. (2 ಕೊರಿಂಥ 10:9) ಒಬ್ಬನು ಗಂಭೀರವಾದ ತಪ್ಪನ್ನು ಗೈದವನಾದರೂ, ಸ್ವ-ಗೌರವ ಮತ್ತು ಘನತೆಯ ಮಟ್ಟವನ್ನು ಪರಿಪಾಲಿಸುವ ಅಗತ್ಯವಿದೆ. ಸಲಹೆಯು ದಯೆಯಿಂದ ಸಮತೂಕವಾಗಿರತಕ್ಕದ್ದಾದರೂ, ಸ್ಥಿರತೆಯದ್ದಾಗಿದ್ದು, ತಿದ್ದುಪಾಟಿನ ಮಾತುಗಳು ಪಶ್ಚಾತ್ತಾಪಕ್ಕೆ ಅವನನ್ನು ನಡಿಸುವಂತಿರತಕ್ಕದ್ದು.—ಕೀರ್ತನೆ 44:15; 1 ಕೊರಿಂಥ 15:34.
ವೈಶಿಷ್ಟ್ಯಮಯವಾಗಿ, ಇವೇ ತತ್ವಗಳು ಇಸ್ರಾಯೇಲಿಗೆ ಕೊಟ್ಟ ದೇವರ ನಿಯಮದಲ್ಲಿ ಒಳಗೂಡಿವೆ. ಅದು ಸಲಹೆಯನ್ನು ಮತ್ತು ದೈಹಿಕ ದಂಡನೆಯನ್ನು ಕೂಡ ಅನುಮತಿಸಿರುವಾಗ, ವೈಯಕ್ತಿಕ ಘನತೆಯ ಮಟ್ಟವೊಂದಕ್ಕೆ ವ್ಯಕ್ತಿಯ ಹಕ್ಕನ್ನು ಅದೇ ಸಮಯದಲ್ಲಿ ಸಂರಕ್ಷಿಸುತ್ತದೆ. “ಅವನ ಅಪರಾಧಕ್ಕೆ ಅನುಸಾರವಾಗಿ ಪೆಟ್ಟುಗಳನ್ನು” ಹೊಡೆಯಲು ಅನುಮತಿಸಿದೆ, ಆದರೆ ಇದು ಮಿತಿಮೀರಿ ಇರಕೂಡದು. ತಪ್ಪಿತಸ್ಥನು “ಕೇವಲ ನೀಚನಾಗಿ” ತೋರಿಬರದಂತೆ, ವಿಧಿಸಲ್ಪಟ್ಟ ಹೊಡೆಯುವ ಪೆಟ್ಟುಗಳ ಸಂಖ್ಯೆಗೆ ಮಿತಿಯು ವಿಧಿಸಲ್ಪಟ್ಟಿತ್ತು.—ಧರ್ಮೋಪದೇಶಕಾಂಡ 25:2, 3.
ಪಶ್ಚಾತ್ತಾಪೀ ತಪ್ಪಿತಸ್ಥರ ಭಾವನೆಗಳಿಗೆ ಪರಿಗಣನೆಯು ಕೂಡ ಯೇಸುವಿನ ವಿಶಿಷ್ಟಗುಣವಾಗಿತ್ತು. ಅವನ ಕುರಿತು, ಯೆಶಾಯನು ಪ್ರವಾದಿಸಿದ್ದು: “ಜಜ್ಜಿದ ದಂಟನ್ನು ಮುರಿದು ಹಾಕದೆ ಕಳೆಗುಂದಿದ ದೀಪವನ್ನು ನಂದಿಸದೆ ಸದ್ಧರ್ಮವನ್ನು ಪ್ರಚುರಪಡಿಸುವನು.”—ಯೆಶಾಯ 42:3; ಮತ್ತಾಯ 12:17, 20; ಲೂಕ 7:37, 38, 44-50.
ಸಹಾನುಕಂಪದ ಅಧಿಕ ಆವಶ್ಯಕತೆಯ ಕುರಿತು ಪರ್ವತಪ್ರಸಂಗದಲ್ಲಿನ ಯೇಸುವಿನ ಮಾತುಗಳು ಒತ್ತಿಹೇಳುತ್ತವೆ: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” (ಮತ್ತಾಯ 7:12) ಆದುದರಿಂದ ಈ ಒಳ್ಳೆಯ ಸಂಬಂಧಗಳನ್ನು ಪ್ರವರ್ಧಿಸುವುದರಲ್ಲಿ ಈ ತತ್ವದ ಪ್ರಾಮುಖ್ಯತೆಯು ಎಷ್ಟೆಂದರೆ ಅದು ಸಾಮಾನ್ಯವಾಗಿ ಸುವರ್ಣ ನಿಯಮವೆಂದು ಕರೆಯಲ್ಪಡುತ್ತದೆ. ಒಬ್ಬ ಕ್ರೈಸ್ತ ಹಿರಿಯನೋಪಾದಿ, ಸಲಹೆಯನ್ನು ನೀಡುವಾಗ, ಇತರರನ್ನು ದಯೆ ಮತ್ತು ಘನತೆಯಿಂದ ಉಪಚರಿಸಲು ಅದು ನಿಮಗೆ ಹೇಗೆ ಸಹಾಯ ಮಾಡಬಲ್ಲದು?
ನೀವು ಕೂಡ ತಪ್ಪುಗಳನ್ನು ಮಾಡುತ್ತೀರಿ ಎಂದು ನೆನಪಿನಲ್ಲಿಡಿರಿ. ಯಾಕೋಬನು ಅವಲೋಕಿಸಿದಂತೆ, “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು.” (ಯಾಕೋಬ 3:2) ಇತರರಿಗೆ ಅವರ ನ್ಯೂನ್ಯತೆಗಳ ಕುರಿತು ಮಾತಾಡುವ ಅಗತ್ಯತೆ ಇದ್ದಾಗ, ಇದನ್ನು ನೆನಪಿನಲ್ಲಿಡುವುದು ನಿಮ್ಮ ಹೇಳಿಕೆಗಳನ್ನು ಹಾಳತದಲ್ಲಿಡಲು ಮತ್ತು ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿಡಲು ಸಹಾಯ ಮಾಡುವುದು. ಅವರ ಸೂಕ್ಷ್ಮಸಂವೇದನೆಗಳನ್ನು ತಿಳಿದುಕೊಳ್ಳಿರಿ. ಅತಿಯಾದ ಠೀಕೆಯನ್ನು ಹೋಗಲಾಡಿಸಲು, ಚಿಕ್ಕಪುಟ್ಟ ತಪ್ಪುಗಳನ್ನು ಯಾ ಲೋಪಗಳನ್ನು ಗಮನಕ್ಕೆ ತರುವುದನ್ನು ತಡೆಯಲು ಇದು ನಿಮಗೆ ಸಹಾಯ ಮಾಡುವುದು. ಯೇಸುವು ಇದನ್ನು ಹೇಳಿದಾಗ, ಅವನು ಒತ್ತಿಹೇಳಿದನು: “ತೀರ್ಪುಮಾಡಬೇಡಿರಿ; ಹಾಗೆ ನಿಮಗೂ ತೀರ್ಪಾಗುವದಿಲ್ಲ. ನೀವು ಮಾಡುವ ತೀರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವದು; ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು.”—ಮತ್ತಾಯ 7:1, 2.
ಇತರರನ್ನು ಗೌರವಿಸಿರಿ—ಪಿಶಾಚನನ್ನು ವಿರೋಧಿಸಿರಿ
ನಿಮ್ಮ ಘನತೆಯನ್ನು ಕಿತ್ತೆಸೆಯಲು, ಅವಮಾನದ, ನಿಷ್ಪಯ್ರೋಜಕತೆಯ, ಮತ್ತು ಹತಾಶೆಯ ಭಾವನೆಗಳನ್ನು ಉತ್ಪಾದಿಸಲು ಸೈತಾನನ ಹಂಚಿಕೆಗಳು ರೂಪಿಸಲ್ಪಟ್ಟಿವೆ. ನಂಬಿಗಸ್ತ ಯೋಬನಲ್ಲಿ ನಕಾರಾತ್ಮಕ ಭಾವಾವೇಶಗಳನ್ನು ಕೆರಳಿಸಲು ಮಾನವ ಕಾರ್ಯಭಾರಿಯನ್ನು ಅವನು ಹೇಗೆ ಬಳಸಿದನೆಂದು ಗಮನಿಸಿರಿ. ಕಪಟಿಯಾದ ಎಲೀಫಜನು ವಾದಿಸಿದ್ದು: “ಆಹಾ, ಆತನು [ಯೆಹೋವನು] ತನ್ನ ಪರಿಚಾರಕರಲ್ಲಿಯೂ ನಂಬಿಕೆಯಿಡುವದಿಲ್ಲ, ತನ್ನ ದೂತರ ಮೇಲೆಯೂ ತಪ್ಪುಹೊರಿಸುತ್ತಾನೆ. ದೂಳಿನಲ್ಲಿರುವ ಅಸ್ತಿವಾರದ ಮೇಲೆ ಮಣ್ಣಿನಿಂದಾದ [ಶರೀರಗಳೆಂಬ] ಮನೆಗಳೊಳಗೆ [ಪಾಪಪೂರ್ಣ ಮಾನವರೊಳಗೆ] ವಾಸಿಸುವವರಲ್ಲಿ ಇನ್ನೆಷ್ಟೋ ಹೆಚ್ಚಾಗಿ ತಪ್ಪು ಕಂಡುಹಿಡಿಯಬೇಕಲ್ಲವೇ? ಅವರು ದೀಪದ ಹುಳದಂತೆ ಅಳಿದುಹೋಗ್ತುತ್ತಾರೆ.” (ಯೋಬ 4:18, 19) ಆದುದರಿಂದ ಅವನಿಗನುಸಾರ, ಯೋಬನು ದೇವರಿಗೆ ಒಂದು ಹುಳಕ್ಕಿಂತಲೂ ಏನೂ ಹೆಚ್ಚು ಮೂಲ್ಯತೆಯವನಾಗಿರಲಿಲ್ಲ. ಎಲೀಫಜನ ಮತ್ತು ಅವನ ಸಂಗಾತಿಗಳ ಸಲಹೆಯು ಕಟ್ಟುವಂತಹದ್ದಾಗಿರುವ ಬದಲಿಗೆ ಉತ್ತಮ ಸಮಯಗಳ ಜ್ಞಾಪಕವು ಸಹ ಯೋಬನಿಗೆ ಇಲ್ಲದಾಗಿ ಹೋಗುವಂತೆ ಮಾಡುತ್ತಿತ್ತು ಎಂಬುದು ಖಂಡಿತ. ಅವರ ನೋಟದಲ್ಲಿ, ಅವನ ಗತಕಾಲದ ನಂಬಿಗಸ್ತಿಕೆ, ಕುಟುಂಬ ತರಬೇತಿ, ದೇವರೊಂದಿಗಿನ ಸಂಬಂಧ, ಮತ್ತು ಕರುಣೆಯ ದಾನಗಳು ಯಾವುದೇ ಬೆಲೆಯಿಲ್ಲದ್ದಾಗಿದ್ದವು.
ಇಂದು ಕೂಡ ತದ್ರೀತಿಯಲ್ಲಿ, ಪಶ್ಚಾತ್ತಾಪಿ ತಪ್ಪಿತಸ್ಥರು ವಿಶೇಷವಾಗಿ ಅಂತಹ ಭಾವನೆಗಳಿಗೆ ವಶವಾಗುತ್ತಾರೆ, ಮತ್ತು ಅವರು ‘ಅಧಿಕವಾದ ದುಃಖದಲ್ಲಿ ಮುಳುಗಿ’ ಹೋಗುವ ಅಪಾಯವು ಅಸ್ತಿತ್ವದಲ್ಲಿರುತ್ತದೆ. ಅಂತಹವರಿಗೆ ಹಿರಿಯರು ಬುದ್ಧಿವಾದ ಹೇಳುವಾಗ, ಒಂದು ಮಟ್ಟದ ಘನತೆಯನ್ನು ಕಾಪಾಡಲು ಅವರಿಗೆ ಅನುಮತಿಸುವ ಮೂಲಕ ಅವರಿಗೆ “ನಿಮ್ಮ ಪ್ರೀತಿಯನ್ನು ನಿಶ್ಚಯಪಡಿಸಿರಿ.” (2 ಕೊರಿಂಥ 2:7, 8) “ಘನತೆಯ ಕೊರತೆಯೊಂದಿಗೆ ಉಪಚರಿಸಲ್ಪಡುವಾಗ ಸಲಹೆಯನ್ನು ಸ್ವೀಕರಿಸಲು ಕಷ್ಟಕರವನ್ನಾಗಿ ಮಾಡುತ್ತದೆ,” ಒಪ್ಪುತ್ತಾನೆ ವಿಲಿಯಂ. ಅವರು ದೇವರ ನೋಟದಲ್ಲಿ ಬೆಲೆಯುಳ್ಳವರಾಗಿದ್ದಾರೆ ಎಂಬ ಅವರ ನಂಬಿಕೆಯನ್ನು ಬಲಗೊಳಿಸುವುದು ಆವಶ್ಯಕವಾಗಿದೆ. ಯೆಹೋವನು “ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ” ಎಂದು ಅವರಿಗೆ ಮರುಜ್ಞಾಪಕ ಕೊಡಿರಿ.—ಇಬ್ರಿಯ 6:10.
ಸಲಹೆಯನ್ನು ನೀಡುವಾಗ ಇತರರಿಗೆ ಗೌರವವನ್ನೀಯಲು ಬೇರೆ ಯಾವ ಕೂಡಿಸಲ್ಪಟ್ಟ ವಾಸ್ತವಾಂಶಗಳು ನಿಮಗೆ ಸಹಾಯ ಮಾಡಬಲ್ಲವು? ಅವರು ದೇವರ ಸ್ವರೂಪದಲ್ಲಿ ಉಂಟುಮಾಡಲ್ಪಟ್ಟಿರುವದರಿಂದ, ಘನತೆಯ ಒಂದು ಸ್ವಾಭಾವಿಕ ಹಕ್ಕನ್ನು ಎಲ್ಲಾ ಮಾನವರು ಹೊಂದಿರುತ್ತಾರೆ ಎಂದು ಅಂಗೀಕರಿಸಿರಿ. ಅವರು ಯೆಹೋವ ದೇವರಿಂದ ಮತ್ತು ಯೇಸು ಕ್ರಿಸ್ತನಿಂದ ಅಮೂಲ್ಯರೆಂದೆಣಿಸಿಲ್ಪಟ್ಟಿದ್ದಾರೆ; ವಿಮೋಚನೆ ಮತ್ತು ಪುನರುತ್ಥಾನದ ಇಬ್ಬಗೆಯ ಒದಗಿಸುವಿಕೆಗಳು ಆ ನಿಜತ್ವಕ್ಕೆ ಪುರಾವೆಯನ್ನೀಯುತ್ತವೆ. ದೇವರೊಂದಿಗೆ ಸಮಾಧಾನಮಾಡಿಕೊಳ್ಳುವಂತೆ ದುಷ್ಟಸಂತತಿಗೆ ಭಿನ್ನಹಮಾಡಲು ಅವರನ್ನು ಉಪಯೋಗಿಸುತ್ತಾ, “ತನ್ನ ಸೇವೆಗೆ ನೇಮಿಸಿಕೊಂಡದ್ದ” ರಿಂದ ಕ್ರೈಸ್ತರಿಗೆ ಇನ್ನಷ್ಟು ಗೌರವವನ್ನು ಯೆಹೋವನು ಕೂಡಿಸುತ್ತಾನೆ.—1 ತಿಮೊಥೆಯ 1:12.
ಹಿರಿಯರೇ, ನಿಮ್ಮ ಸಹೋದರರಲ್ಲಿ ಅಧಿಕಾಂಶರು ಶುಭ್ರಗೊಳಿಸಲ್ಪಟ್ಟ ಭೂಮಿಯಲ್ಲಿ ಹೊಸ ಮಾನವ ಸಮಾಜದ ಭಾವೀ ಬುನಾದಿಯ ಸದಸ್ಯರೆಂಬುದನ್ನು ನೆನಪಿನಲ್ಲಿಡಿರಿ. ಅಂತಹ ಬೆಲೆಬಾಳುವ ಮತ್ತು ಅಮೂಲ್ಯ ವ್ಯಕ್ತಿಗಳೋಪಾದಿ, ಮಾನವನ್ನು ಹೊಂದಲು ಅವರು ಅರ್ಹರಾಗಿದ್ದಾರೆ. ಸಲಹೆಯನ್ನು ಕೊಡುವಾಗ, ಅವರಿಗಾಗಿ ಯೆಹೋವನು ಮತ್ತು ಯೇಸು ಹೇಗೆ ಪರಿಗಣನೆಯನ್ನು ತೋರಿಸಿದನೆಂದು ನೆನಪಿಗೆ ತನ್ನಿರಿ, ಮತ್ತು ಸೈತಾನನ ಪಂಥಾಹ್ವಾನಗಳ ಮುಂದೆ ಘನತೆ ಮತ್ತು ಸ್ವ-ಗೌರವದ ಭಾವನೆಯನ್ನು ಸಂರಕ್ಷಿಸಲು ನಿಮ್ಮ ಸಹೋದರರಿಗೆ ಸಹಾಯ ಮಾಡಲು ನಿಮಗಿರುವ ಭಾಗವನ್ನು ಮಾಡುವುದರಲ್ಲಿ ಮುಂದುವರಿಯಿರಿ.—2 ಪೇತ್ರ 3:13; ಹೋಲಿಸಿರಿ 1 ಪೇತ್ರ 3:7.
[ಪುಟ 29 ರಲ್ಲಿರುವ ಚೌಕ]
ಗೌರವವನ್ನುಂಟುಮಾಡುವ ಸಲಹೆ
(1) ಅಪ್ಪಟವಾದ ಹಾಗೂ ಯಥಾರ್ಥವಾದ ಶಿಫಾರಸ್ಸು ಮಾಡಿರಿ. (ಪ್ರಕಟನೆ 2:2, 3)
(2) ಒಳ್ಳೆಯ ಆಲಿಸುವವರಾಗಿರ್ರಿ. ಸಮಸ್ಯೆಯನ್ನು ಮತ್ತು ಸಲಹೆಗಾಗಿ ಕಾರಣವನ್ನು ಸ್ಪಷ್ಟವಾಗಿಗಿ ಮತ್ತು ದಯಾಪೂರಿತವಾಗಿ ಗುರುತಿಸಿರಿ. (2 ಸಮುವೇಲ 12:1-14; ಜ್ಞಾನೋಕ್ತಿ 18:13; ಪ್ರಕಟನೆ 2:4)
(3) ನಿಮ್ಮ ಸಲಹೆಯನ್ನು ಶಾಸ್ತ್ರವಚನಗಳ ಮೇಲೆ ಆಧಾರಿತವಾಗಿಡಿರಿ. ಸಕಾರಾತ್ಮಕವಾಗಿರ್ರಿ, ಸಮಂಜಸತೆಯವರಾಗಿರ್ರಿ, ಮತ್ತು ಪ್ರೋತ್ಸಾಹಿಸುವವರಾಗಿರ್ರಿ, ಮತ್ತು ಸಹಾನುಕಂಪವನ್ನು ತೋರಿಸಿರಿ. ಸಲಹೆ ಪಡೆಯುವಾತನ ಘನತೆ ಮತ್ತು ಸ್ವ-ಮೂಲ್ಯತೆಯು ಅಖಂಡವಾಗಿರುವಂತೆ ನೋಡಿಕೊಳ್ಳಿರಿ. (2 ತಿಮೊಥೆಯ 3:16; ತೀತ 3:2; ಪ್ರಕಟನೆ 2:5, 6)
(4) ಸಲಹೆಪಡೆದುಕೊಳ್ಳುವಾತನಿಗೆ ಸಲಹೆಯನ್ನು ಅಂಗೀಕರಿಸುವುದರಿಂದ ಮತ್ತು ಅನ್ವಯಿಸುವುದರಿಂದ ಬರುವ ಆಶೀರ್ವಾದಗಳ ಭರವಸೆಯನ್ನೀಯಿರಿ. (ಇಬ್ರಿಯ 12:7, 11; ಪ್ರಕಟನೆ 2:7)
[ಪುಟ 26 ರಲ್ಲಿರುವ ಚಿತ್ರ]
ಸಲಹೆಯನ್ನು ನೀಡುವಾಗ ಕ್ರೈಸ್ತ ಹಿರಿಯರು ಇತರರಿಗೆ ಗೌರವವನ್ನೀಯುವ ಆವಶ್ಯಕತೆಯಿದೆ