ಎಲ್ಲಾ ಸಂಗತಿಗಳನ್ನು ದೇವರ ಮಹಿಮೆಗಾಗಿ ಮಾಡಿರಿ
1 ನಮ್ಮ ಪ್ರಿಯ ಸಹೋದರ ಸಹೋದರಿಯರೊಂದಿಗೆ ಸಹವಾಸ ಮಾಡುವುದು ಎಷ್ಟು ಚೈತನ್ಯಕರ! (1 ಕೊರಿಂ. 16:17, 18) ನಾವಿದನ್ನು ಕೂಟಗಳಲ್ಲಿ, ಸಮ್ಮೇಳನಗಳಲ್ಲಿ, ಅಧಿವೇಶನಗಳಲ್ಲಿ ಮತ್ತು ಕ್ಷೇತ್ರ ಶುಶ್ರೂಷೆಯಲ್ಲಿ ಮಾಡುತ್ತೇವೆ. ಅತಿಥಿಗಳು ನಮ್ಮ ಮನೆಗೆ ಭೇಟಿನೀಡುವಂತಹ ಅನೌಪಚಾರಿಕ ಸಂದರ್ಭಗಳಲ್ಲೂ ನಾವು ಒಡನಾಟವನ್ನು ಮಾಡುತ್ತೇವೆ. ಹಾಗೆ ಮಾಡುವಾಗ, ನಾವು ಅತಿಥಿಸತ್ಕಾರವನ್ನು ತೋರಿಸುತ್ತೇವೆ ಮತ್ತು ಒಬ್ಬರನ್ನೊಬ್ಬರು ಉತ್ತೇಜಿಸುತ್ತೇವೆ. (ರೋಮಾ. 12:13; 1 ಪೇತ್ರ 4:9) ಮದುವೆ ಸಮಾರಂಭಗಳನ್ನು ಏರ್ಪಡಿಸುವಾಗ, ಎಪ್ರಿಲ್ 15, 1984ರ ದ ವಾಚ್ಟವರ್ ನಲ್ಲಿರುವ ಉತ್ತಮ ಸಲಹೆಯನ್ನು ಮನಸ್ಸಿನಲ್ಲಿಡಿರಿ. ನೆರವಿಯ ಗಾತ್ರವನ್ನು ಮತ್ತು ಎಲ್ಲಾ ಸಂಗತಿಗಳು ದೇವರ ಮಹಿಮೆಗಾಗಿ ನಡೆಯುವಂತೆ ಜನಸಂದಣಿಯು ಹೇಗೆ ನಿಯಂತ್ರಿಸಲ್ಪಡಬೇಕೆಂಬುದನ್ನು ನಿರ್ಣಯಿಸುವುದರಲ್ಲಿ 19 ಮತ್ತು 20 ನೆಯ ಪುಟಗಳಲ್ಲಿ ಕೊಡಲ್ಪಟ್ಟಿರುವ ಸಲಹೆಯನ್ನು ವಿಶೇಷವಾಗಿ ಗಮನಿಸಿರಿ.
2 ವ್ಯವಸ್ಥಿತ ಸಾಮಾಜಿಕ ವ್ಯವಹಾರಗಳು: ನಾವು “ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ” ಮಾಡಬೇಕು. (1 ಕೊರಿಂ. 10:31-33) ಈ ಸಲಹೆಯು ಕೆಲವರಿಂದ ಪಾಲಿಸಲ್ಪಡುವುದಿಲ್ಲ, ಮತ್ತು ಯೋಗ್ಯವಾಗಿ ಮೇಲ್ವಿಚಾರಣೆ ನಡಿಸಲು ತೀರ ದೊಡ್ಡದಾಗಿರುವ ಸಾಮಾಜಿಕ ಗೋಷ್ಠಿಗಳಿಂದಾಗಿ ಸಮಸ್ಯೆಗಳು ಬೆಳೆಯುವುದು ಮುಂದುವರಿಯುತ್ತದೆ. ಕೆಲವು ಸಂದರ್ಭಗಳಲ್ಲಿ, ಲೌಕಿಕ ಮನೋರಂಜನೆಯು ಪ್ರದರ್ಶಿಸಲ್ಪಡುವ ಅತಿ ದೊಡ್ಡ ಸಮಾರಂಭಗಳಿಗೆ ನೂರಾರು ಜನರು ಆಮಂತ್ರಿಸಲ್ಪಡುತ್ತಾರೆ. ಕೆಲವೊಮ್ಮೆ ಹಾಜರಾಗುವವರು ಪ್ರವೇಶ ಅಥವಾ ಇತರ ದರಗಳನ್ನು ತೆರುವಂತೆ ಕೇಳಲ್ಪಡುತ್ತಾರೆ. ಅಂತಹ ಗೋಷ್ಠಿಗಳು, ಮರ್ಯಾದೆ ಮತ್ತು ಬೈಬಲಿನ ಸೂತ್ರಗಳಿಗೆ ಸರಿಹೊಂದದ ಆತ್ಮವಿರುವ ಲೌಕಿಕ ವ್ಯವಹಾರಗಳನ್ನು ನಿಕಟವಾಗಿ ಹೋಲುತ್ತವೆ.—ರೋಮಾ. 13:13, 14; ಎಫೆ. 5:15-20.
3 ಅಹಿತಕರವೂ ಲೌಕಿಕವೂ ಮತ್ತು ಯೋಗ್ಯವಾದ ಮೇಲ್ವಿಚಾರಣೆಯ ಕೊರತೆಯಿರುವಂತಹ ಮನೋರಂಜನೆಯಿರುವ, ಬಾಡಿಗೆಯ ಸೌಕರ್ಯಗಳಲ್ಲಿ ಸಾಕ್ಷಿಗಳು ದೊಡ್ಡ ಸಂಖ್ಯೆಗಳಲ್ಲಿ ಒಟ್ಟುಗೂಡಿದ್ದಾರೆಂದು ವರದಿಸಲಾಗಿದೆ. “ಯೆಹೋವನ ಸಾಕ್ಷಿ” ವಾರಾಂತ್ಯವೆಂದು ಜಾಹೀರುಪಡಿಸಲ್ಪಟ್ಟಿರುವ ತದ್ರೀತಿಯ ಚಟುವಟಿಕೆಗಳು, ಹೋಟೇಲ್ಗಳು ಅಥವಾ ವಿರಾಮ ಸ್ಥಳಗಳಲ್ಲಿ ನಡಿಸಲ್ಪಟ್ಟಿವೆ. ಅಂತಹ ದೊಡ್ಡ ಗುಂಪುಗಳ ಸರಿಯಾದ ಮೇಲ್ವಿಚಾರಣೆ ಮಾಡುವ ಕಷ್ಟದಿಂದಾಗಿ, ಸಮಸ್ಯೆಗಳು ಬೆಳೆದಿವೆ. ಪುಂಡತನ, ಮದ್ಯಪಾನೀಯಗಳಲ್ಲಿ ಅತಿಯಾದ ಲೋಲುಪತೆ, ಮತ್ತು ಕೆಲವೊಮ್ಮೆ ಅನೈತಿಕತೆಯೂ ಫಲಿಸಿವೆ. (ಎಫೆ. 5:3, 4) ಇಂತಹ ನಡತೆಯು ಸಂಭವಿಸುವಂತಹ ಸಾಮಾಜಿಕ ಗೋಷ್ಠಿಗಳು ಯೆಹೋವನನ್ನು ಸನ್ಮಾನಿಸುವುದಿಲ್ಲ. ಬದಲಾಗಿ, ಅವು ಸಭೆಯ ಒಳ್ಳೆಯ ಹೆಸರಿನ ಮೇಲೆ ನಿಂದೆಯನ್ನು ತರುತ್ತವೆ ಮತ್ತು ಇತರರು ಎಡವುವಂತೆ ಮಾಡುತ್ತವೆ.—1 ಕೊರಿಂ. 10:23, 24, 29.
4 ಕ್ರೈಸ್ತರು ಅತಿಥಿಸತ್ಕಾರವನ್ನು ತೋರಿಸುವಂತೆ ಉತ್ತೇಜಿಸಲ್ಪಡುತ್ತಾರೆ, ಆದರೆ ಒತ್ತು ಆತ್ಮಿಕ ವಿನಿಮಯದ ಮೇಲೆ ಕೇಂದ್ರೀಕರಿಸಲ್ಪಡಬೇಕು. (ರೋಮಾ. 1:11, 12) ಚಿಕ್ಕ ಸೇರುವಿಕೆಗಳು ಸಾಮಾನ್ಯವಾಗಿ ಅತ್ಯುತ್ತಮವಾಗಿರುತ್ತವೆ. 135-6 ಪುಟಗಳಲ್ಲಿ ನಮ್ಮ ಶುಶ್ರೂಷೆ ಪುಸ್ತಕವು ಹೇಳುವುದು: “ಕೆಲವು ವೇಳೆ, ಒಂದು ಮನೆಗೆ ಕ್ರೈಸ್ತ ಒಡನಾಟಕ್ಕಾಗಿ ಅನೇಕ ಕುಟುಂಬಗಳು ಆಮಂತ್ರಿಸಲ್ಪಡಬಹುದು. . . . ಇಂಥ ಸಂದರ್ಭದಲ್ಲಿ ಆತಿಥೇಯರು ತಾವೇ ಅಲ್ಲಿ ನಡೆಯುವ ವಿಷಯಗಳಿಗೆ ಜವಾಬ್ದಾರರಾಗುವುದು ನ್ಯಾಯಸಮ್ಮತ. ಇದನ್ನು ಮನಸ್ಸಿನಲ್ಲಿಡುವ, ವಿವೇಚಿಸುವ ಕ್ರೈಸ್ತರು ಇಂಥ ಗುಂಪುಗಳ ಗಾತ್ರವನ್ನು ಚಿಕ್ಕದಾಗಿಡುವ ಮತ್ತು ಗೋಷ್ಠಿಯ ಸಮಯವನ್ನು ಮಿತಿಯಲಿಡ್ಲುವ ವಿವೇಕವನ್ನು ಕಂಡಿದ್ದಾರೆ.” ನಮ್ಮ ಮಿತ್ರರನ್ನು ಆತ್ಮಿಕವಾಗಿ ಪ್ರೋತ್ಸಾಹಿಸುವುದು ನಮ್ಮ ಗುರಿಯಾಗಿರುವಾಗ, ಪರಿಷ್ಕರಿಸಿರುವ ಯಾವುದೂ ಅಗತ್ಯವಿಲ್ಲವೆಂದು ಯೇಸು ಸೂಚಿಸಿದನು.—ಲೂಕ 10:40-42.
5 ಜೊತೆ ಕ್ರೈಸ್ತರಿಗೆ ಅತಿಥಿಸತ್ಕಾರವನ್ನು ತೋರಿಸುವುದು ಒಂದು ಉತ್ತಮ ಸಂಗತಿಯಾಗಿದೆ. ಆದಾಗಲೂ, ನಮ್ಮ ಮನೆಯಲ್ಲಿ ಒಂದು ಮಿತವಾದ ಜೊತೆಗೂಡುವಿಕೆ ಮತ್ತು ಒಂದು ಬಾಡಿಗೆಯ ಸೌಕರ್ಯದಲ್ಲಿ ಒಂದು ಲೌಕಿಕ ಆತ್ಮವನ್ನು ಪ್ರತಿಬಿಂಬಿಸುವ ಒಂದು ದುಬಾರಿ ವ್ಯವಹಾರದ ಮಧ್ಯೆ ಒಂದು ದೊಡ್ಡ ವ್ಯತ್ಯಾಸವಿದೆ. ನಿಮ್ಮ ಅತಿಥಿಗಳಾಗಿರಲು ನೀವು ಇತರರನ್ನು ಆಮಂತ್ರಿಸುವಾಗ, ಏನು ನಡೆಯಲಿದೆಯೋ ಅದಕ್ಕಾಗಿ ನೀವು ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಸಾಧ್ಯವಿದೆಯೆಂದು ನೀವು ಖಾತರಿಯಿಂದಿರಬೇಕು.—ನವೆಂಬರ್ 15, 1992ರ ಕಾವಲಿನಬುರುಜು ವಿನ 17-20 ನೆಯ ಪುಟಗಳನ್ನು ನೋಡಿರಿ.
6 ನಿಜವಾಗಿಯೂ, ಸತ್ಕಾರ್ಯಗಳಲ್ಲಿ ಮುಂದುವರಿಯಲು ನಮ್ಮನ್ನು ಪ್ರಚೋದಿಸುವ ಚೈತನ್ಯಕರ ಪ್ರೋತ್ಸಾಹವನ್ನು ನಾವು ಪಡೆಯುವಂತಹ ಒಂದು ಸಹೋದರತ್ವದಿಂದ ಯೆಹೋವನು ನಮ್ಮನ್ನು ಆಶೀರ್ವದಿಸಿದ್ದಾನೆ. (ಮತ್ತಾ. 5:16; 1 ಪೇತ್ರ 2:12) ಸಾಮಾಜಿಕ ಚಟುವಟಿಕೆಗಳಲ್ಲಿ ಮಿತ ಮತ್ತು ವಿವೇಚನೆಯನ್ನು ಪ್ರದರ್ಶಿಸುವ ಮೂಲಕ, ನಾವು ಯಾವಾಗಲೂ ನಮ್ಮ ದೇವರಿಗೆ ಮಹಿಮೆಯನ್ನು ತರುವೆವು ಮತ್ತು ಇತರರಿಗೆ ಭಕ್ತಿವೃದ್ಧಿಯನ್ನು ಮಾಡುತ್ತಿರುವೆವು.—ರೋಮಾ. 15:2.