ಸೆಪ್ಟೆಂಬರ್ಗಾಗಿ ಸೇವಾ ಕೂಟಗಳು
ಸೆಪ್ಟೆಂಬರ್ 4ರ ವಾರ
ಸಂಗೀತ 224 (106)
10 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯಿಂದ ಆಯ್ದ ಪ್ರಕಟನೆಗಳು.
20 ನಿ: “ಯೆಹೋವನಿಂದ ಪರೀಕ್ಷಿಸಲ್ಪಟ್ಟಿರುವುದು—ಏಕೆ ಉಪಯುಕ್ತ?” ಹಿರಿಯನಿಂದ ಪ್ರೋತ್ಸಾಹದಾಯಕ ಭಾಷಣ.
15 ನಿ: “ಅವರು ಪ್ರಯೋಜನ ಪಡೆದುಕೊಳ್ಳುವಂತೆ ಇತರರಿಗೆ ಸಹಾಯ ಮಾಡಿರಿ.” ಸೂಚಿಸಲ್ಪಟ್ಟಿರುವ ನಿರೂಪಣೆಗಳನ್ನು ಪುನರ್ವಿಮರ್ಶಿಸಿರಿ, ಮತ್ತು ನಂತರ ಎರಡು ಸಂಕ್ಷಿಪ್ತ ಪ್ರತ್ಯಕ್ಷಾಭಿನಯಗಳನ್ನು ಮಾಡಿಸಿರಿ.
ಸಂಗೀತ 204 (109) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 11ರ ವಾರ
ಸಂಗೀತ 216 (49)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ.
20 ನಿ: “1995 ‘ಹರ್ಷಭರಿತ ಸುತ್ತಿಗಾರರು’ ಜಿಲ್ಲಾ ಅಧಿವೇಶನ.” 1-16 ನೆಯ ಪ್ಯಾರಗ್ರಾಫ್ಗಳ ಪ್ರಶ್ನೋತ್ತರ ಆವರಿಸುವಿಕೆ.
15 ನಿ: “ನಿಮ್ಮ ಮಕ್ಕಳಿಗಾಗಿ ನೀವು ಯಾವ ಗುರಿಗಳನ್ನು ಇಟ್ಟಿದ್ದೀರಿ?” ಪ್ರಶ್ನೋತ್ತರಗಳು. ರಾಜ್ಯಾಭಿರುಚಿಗಳ ಸುತ್ತಲೂ ಕೇಂದ್ರೀಕರಿಸಿದ ಸಾರ್ಥಕ ಗುರಿಗಳನ್ನು ಆರಿಸಲು ಅವರ ಹೆತ್ತವರು ಅವರಿಗೆ ಸಹಾಯ ಮಾಡಿದ ವಿಧವನ್ನು ಸಂಕ್ಷಿಪ್ತವಾಗಿ ತಿಳಿಸಲು, ತಮ್ಮ ಯೌವನದಿಂದಲೇ ಯೆಹೋವನಿಗೆ ಸೇವೆ ಸಲ್ಲಿಸಿರುವ ಒಬ್ಬ ಅಥವಾ ಇಬ್ಬರು ಆದರ್ಶಪ್ರಾಯ ಯುವಕರಿಗೆ ಅಥವಾ ವಯಸ್ಸಾದ ವ್ಯಕ್ತಿಗಳಿಗೆ ಹೇಳಿರಿ.
ಸಂಗೀತ 187 (93) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 18ರ ವಾರ
ಸಂಗೀತ 168 (84)
10 ನಿ: ಸ್ಥಳಿಕ ತಿಳಿಸುವಿಕೆಗಳು.
15 ನಿ: “ಎಲ್ಲಾ ಸಂಗತಿಗಳನ್ನು ದೇವರ ಮಹಿಮೆಗಾಗಿ ಮಾಡಿರಿ.” ಒಬ್ಬ ಹಿರಿಯನಿಂದ ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಸಮಯವು ಅನುಮತಿಸಿದಂತೆ, ನವೆಂಬರ್ 15, 1992ರ ಕಾವಲಿನಬುರುಜು ವಿನ 15-20 ನೆಯ ಪುಟಗಳ ಮೇಲಾಧರಿತವಾದ ಹೆಚ್ಚಿನ ಹೇಳಿಕೆಗಳನ್ನು ಮಾಡಿರಿ.
20 ನಿ: “1995ರ ‘ಹರ್ಷಭರಿತ ಸುತ್ತಿಗಾರರು’ ಜಿಲ್ಲಾ ಅಧಿವೇಶನ.” 17-28 ನೆಯ ಪ್ಯಾರಗ್ರಾಫ್ಗಳ ಪ್ರಶ್ನೋತ್ತರ ಆವರಿಸುವಿಕೆ. “ಜಿಲ್ಲಾ ಅಧಿವೇಶನ ಮರುಜ್ಞಾಪನಗಳು” ಅನ್ನು ಪುನರ್ವಿಮರ್ಶಿಸಿರಿ. ಸಮಯವು ಅನುಮತಿಸಿದಂತೆ, ಜುಲೈ 1995ರ ನಮ್ಮ ರಾಜ್ಯದ ಸೇವೆಯ ಪುರವಣಿಯಿಂದ ಸಂಬಂಧಿತ ವಿವರಗಳನ್ನು ಪುನರ್ವಿಮರ್ಶಿಸಿರಿ.
ಸಂಗೀತ 162 (89) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 25ರ ವಾರ
ಸಂಗೀತ 177 (94)
10 ನಿ: ಸ್ಥಳಿಕ ತಿಳಿಸುವಿಕೆಗಳು.
15 ನಿ: “ಕುಟುಂಬ ಬೈಬಲಧ್ಯಯನ—ಕ್ರೈಸ್ತರಿಗಾಗಿ ಒಂದು ಆದ್ಯತೆ.” ಸಭಿಕರೊಂದಿಗೆ ಚರ್ಚೆ. ಒಂದು ಆದರ್ಶಪ್ರಾಯ ಕುಟುಂಬವಿರುವ ಒಬ್ಬ ಹಿರಿಯನಿಂದ ನಿರ್ವಹಿಸಲ್ಪಡತಕ್ಕದ್ದು. ಕುಟುಂಬದ ಪ್ರತಿಯೊಬ್ಬ ಸದಸ್ಯನ ಬೆಳವಣಿಗೆ ಮತ್ತು ಪ್ರಗತಿಗಾಗಿ ಕ್ರಮವಾದ ಅಧ್ಯಯನ ಅತ್ಯಾವಶ್ಯಕವೆಂದು ಒತ್ತಿಹೇಳಿರಿ. ಮೇ 15, 1994ರ ಕಾವಲಿನಬುರುಜು ವಿನ ಪುಟ 14 ರಲ್ಲಿ, ಪ್ಯಾರಗ್ರಾಫ್ 18 ರಲ್ಲಿರುವ ಅಂಶಗಳನ್ನು ಓದಿರಿ ಮತ್ತು ವಿವರಿಸಿರಿ.
20 ನಿ: “ಇತರರಿಗೆ ಪ್ರಯೋಜನವಾಗುವಂತೆ ಎಲ್ಲಾ ಆಸಕ್ತಿಯನ್ನು ಅನುಸರಿಸಿಕೊಂಡು ಹೋಗಿ.” ಪುನರ್ಭೇಟಿಗಳಿಗಾಗಿ ಸೂಚಿಸಲ್ಪಟ್ಟಿರುವ ನಿರೂಪಣೆಗಳನ್ನು ಪುನರ್ವಿಮರ್ಶಿಸಿರಿ. ಈ ಭಾಗವನ್ನು ನಿರ್ವಹಿಸುವ ಸಹೋದರನು, ಇಬ್ಬರು ಅಥವಾ ಮೂವರು ಪ್ರಚಾರಕರೊಂದಿಗೆ ಅವರೇನನ್ನು ಹೇಳಲಿರುವರೋ ಅದನ್ನು ಚರ್ಚಿಸುತ್ತಾನೆ ಮತ್ತು ಅನಂತರ ಅವರು ತಮ್ಮ ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸುವಂತೆ ಕೇಳಿಕೊಳ್ಳುತ್ತಾನೆ.
ಸಂಗೀತ 193 (103) ಮತ್ತು ಸಮಾಪ್ತಿಯ ಪ್ರಾರ್ಥನೆ.