ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ
1 ನಾವು ಸುವಾರ್ತೆಯನ್ನು ಎಡೆಬಿಡದೆ ತಿಳಿಯಪಡಿಸಬೇಕು ಏಕೆ? ಸುವಾರ್ತೆಯನ್ನು ಸಾರುವವನಾಗಿರುವುದಕ್ಕಾಗಿರುವ ಆವಶ್ಯಕತೆಗಳು ಯಾವುವು? ಇತರರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವುದರಲ್ಲಿ ನಾಚಿಕೆ ಸ್ವಭಾವದವರೂ ಆರಂಭದ ಹೆಜ್ಜೆಯನ್ನು ಹೇಗೆ ತೆಗೆದುಕೊಳ್ಳಬಲ್ಲರು? ಈ ಪ್ರಶ್ನೆಗಳು ಮತ್ತು ಇತರ ಆಲೋಚನಾಪ್ರೇರಕ ಪ್ರಶ್ನೆಗಳು, “ಸುವಾರ್ತೆಯ ಶುಶ್ರೂಷಕರಾಗಿರಲು ಅರ್ಹರು” ಎಂಬ ಮುಖ್ಯ ವಿಷಯದೊಂದಿಗೆ, ಈ ವರ್ಷಕ್ಕಾಗಿರುವ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮದಲ್ಲಿ ಉತ್ತರಿಸಲ್ಪಡುವವು.—ಹೋಲಿಸಿರಿ 2 ಕೊರಿಂಥ 3:5.
2 ಯೆಹೋವನ ಜನರೋಪಾದಿ, ನಮ್ಮ ನಡವಳಿಕೆಯ ಕುರಿತಾಗಿ ನಾವು ಜಾಗರೂಕರಾಗಿರಬೇಕು. ಸಮಾನಸ್ಥರ ಒತ್ತಡವನ್ನು ಅವರು ಹೇಗೆ ಪ್ರತಿರೋಧಿಸಿದ್ದಾರೆಂಬುದನ್ನು ತಿಳಿಸುವ ಯುವ ಜನರಿಂದ ಪ್ರೋತ್ಸಾಹದಾಯಕ ಅನುಭವಗಳು ಕೊಡಲ್ಪಡುವವು. ತಮ್ಮ ಮಕ್ಕಳನ್ನು ದೇವರ ಶುಶ್ರೂಷಕರೋಪಾದಿ ತರಬೇತುಗೊಳಿಸುವ ಅಗತ್ಯದ ಕುರಿತಾಗಿ ಹೆತ್ತವರಿಗೆ ಪ್ರೀತಿಪೂರ್ವಕವಾದ ಉತ್ತೇಜನವು ಒದಗಿಸಲ್ಪಡುವುದು. ಸಾರುವ ಆವಶ್ಯಕತೆಯನ್ನು ಮತ್ತು ಸ್ವತಃ ನಮಗೆ ಹಾಗೂ ನಮಗೆ ಕಿವಿಗೊಡುವ ಜನರಿಗೆ—ಇಬ್ಬರಿಗೂ—ಒದಗಿಬರುವ ಆಶೀರ್ವಾದಗಳನ್ನು ಗಣ್ಯಮಾಡುವಂತೆ ನಾವೆಲ್ಲರೂ ಸಹಾಯ ಮಾಡಲ್ಪಡುವೆವು.—1 ತಿಮೊ. 4:16.
3 ಖಂಡಿತವಾಗಿಯೂ, ದೀಕ್ಷಾಸ್ನಾನವು ಆ ದಿನದ ಅತ್ಯುಜ್ವಲ ಭಾಗವಾಗಿರುವುದು. ಈ ಘಟನೆಗೆ ಮುಂಚೆ, ಒಂದು ಬೈಬಲ್ ಆಧಾರಿತ ಭಾಷಣವು ನಿರ್ದಿಷ್ಟವಾಗಿ ಹೊಸದಾಗಿ ಸಮರ್ಪಿತರಾದ ವ್ಯಕ್ತಿಗಳಿಗೆ ನಿರ್ದೇಶಿಸಲ್ಪಡುವುದು. ನಿಶ್ಚಯವಾಗಿಯೂ, ದೀಕ್ಷಾಸ್ನಾನದ ವಿಷಯವು ಚರ್ಚಿಸಲ್ಪಡುವಾಗ ಹಾಗೂ ಅದರ ಅರ್ಥವು ಸ್ಪಷ್ಟಗೊಳಿಸಲ್ಪಡುವಾಗ, ಉಪಸ್ಥಿತರಿರುವವರೆಲ್ಲರೂ ಜಾಗರೂಕವಾದ ಗಮನವನ್ನು ಹರಿಸಲು ಬಯಸುವರು. ವಿಶೇಷ ಸಮ್ಮೇಳನ ದಿನದಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳಲು ಬಯಸುವ ಯಾರಾದರೂ, ಇದನ್ನು ಮುಂದಾಗಿಯೇ ಅಧ್ಯಕ್ಷ ಮೇಲ್ವಿಚಾರಕರಿಗೆ ತಿಳಿಯಪಡಿಸತಕ್ಕದ್ದು; ಇದರಿಂದಾಗಿ ನೇಮಿಸಲ್ಪಟ್ಟ ಪ್ರಶ್ನೆಗಳನ್ನು ದೀಕ್ಷಾಸ್ನಾನದ ಅಭ್ಯರ್ಥಿಗಳೊಂದಿಗೆ ಪುನರ್ವಿಮರ್ಶಿಸುವಂತೆ ಹಿರಿಯರಿಗಾಗಿ ಏರ್ಪಾಡನ್ನು ಮಾಡಲಿಕ್ಕಾಗಿ ಅವರಿಗೆ ಸಾಕಷ್ಟು ಸಮಯವು ದೊರೆಯುವುದು.
4 ಇನ್ನೊಂದು ಅತ್ಯುಜ್ವಲ ಭಾಗವು, ಅತಿಥಿ ಭಾಷಣಕರ್ತನಿಂದ ಕೊಡಲ್ಪಡುವ ಪ್ರಮುಖ ಭಾಷಣವಾಗಿರುವುದು. “ದೇವರ ಶುಶ್ರೂಷಕರಾಗಿ ಅರ್ಹರು ಮತ್ತು ಸನ್ನದ್ಧರು” ಎಂಬುದು ಅದರ ಶಿರೋನಾಮವಾಗಿದೆ. ನಮ್ಮನ್ನು ಶುಶ್ರೂಷಕರಾಗಿ ಸನ್ನದ್ಧಗೊಳಿಸುವ ನಾಲ್ಕು ಪ್ರಮುಖ ಒದಗಿಸುವಿಕೆಗಳು ಚರ್ಚಿಸಲ್ಪಡುವವು, ಮತ್ತು ಆ ಭಾಷಣವು ನಂಬಿಕೆಯನ್ನು ವೃದ್ಧಿಸುವ ಅನುಭವಗಳನ್ನು ಒಳಗೊಂಡಿರುವುದು.
5 ಇಡೀ ಕಾರ್ಯಕ್ರಮಕ್ಕಾಗಿ ಉಪಸ್ಥಿತರಿರಲು ಈಗಲೇ ಯೋಜಿಸಿರಿ. ಅವರು ಕೂಡ ದೇವಪ್ರಭುತ್ವ ಶಿಕ್ಷಣದ ಈ ದಿನದಿಂದ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಾಗುವಂತೆ, ಆಸಕ್ತ ವ್ಯಕ್ತಿಗಳನ್ನು ಹಾಗೂ ಬೈಬಲ್ ವಿದ್ಯಾರ್ಥಿಗಳನ್ನು ಆಮಂತ್ರಿಸಲು ಖಚಿತಪಡಿಸಿಕೊಳ್ಳಿರಿ. ಈ ರೀತಿಯಲ್ಲಿ ನಾವು ಸುವಾರ್ತೆಯ ಶುಶ್ರೂಷಕರಾಗಿ “ಸಾಕಷ್ಟು ಅರ್ಹ”ರಾಗಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಬಲ್ಲೆವು.