ಪ್ರಾಣಪೂರ್ವಕರಾಗಿರ್ರಿ!
1 ಯೆಹೋವನಿಗೆ ಆಭಾರಿಗಳಾಗಿರಲು ನಮಗೆ ಅನೇಕ ಕಾರಣಗಳಿವೆ. ಇವು ಆತನು ಗತಕಾಲದಲ್ಲಿ ಮಾಡಿರುವ, ಈಗತಾನೇ ಮಾಡುತ್ತಿರುವ, ಮತ್ತು ಭವಿಷ್ಯತ್ತಿನಲ್ಲಿ ನಮಗಾಗಿ ಇನ್ನೂ ಮಾಡಲಿರುವ ವಿಷಯಗಳನ್ನು ಒಳಗೊಳ್ಳುತ್ತವೆ. ನಮ್ಮ ಕೃತಜ್ಞತೆಯು ನಮ್ಮನ್ನು ಏನು ಮಾಡುವಂತೆ ಪ್ರಚೋದಿಸಬೇಕು? ದಾವೀದನ ಒಂದು ಕೀರ್ತನೆಯು ಉತ್ತರಿಸುವುದು: “ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು; ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವದು.”—ಕೀರ್ತ. 34:1.
2 ನಾವು ಸಾರುವಂತೆ ಆಜ್ಞಾಪಿಸಲ್ಪಟ್ಟಿದ್ದೇವೆಂಬುದನ್ನು ಬೈಬಲು ಸ್ಫುಟವಾಗಿ ತೋರಿಸುತ್ತದೆ. ನಾವು “ಯೆಹೋವನಿಗೆಂಬಂತೆ ಪ್ರಾಣಪೂರ್ವಕವಾಗಿ” ಮಾಡುವ ಒಂದು ಕೆಲಸವು ಇದಾಗಿದೆ. (ಕೊಲೊ. 3:23, NW) ನಾವು ನಿಜವಾಗಿಯೂ ಪ್ರಾಣಪೂರ್ವಕರಾಗಿರುವುದಾದರೆ, ಶುಶ್ರೂಷೆಯಲ್ಲಿ ನಾವು ಎಷ್ಟನ್ನು ಮಾಡುವೆವು? ನಮ್ಮ ಪರವಾಗಿರುವ ಯೆಹೋವನ ಪ್ರೀತಿಯನ್ನು ನಾವು ಪರಿಗಣಿಸುವಾಗ, ಆತನ ಕುರಿತಾಗಿ ಮತ್ತು ಆತನ ಅಮೂಲ್ಯವಾದ ಉದ್ದೇಶಗಳ ಕುರಿತಾಗಿ ಇತರರಿಗೆ ಹೇಳುವುದರಲ್ಲಿ, ಭಕ್ತಿಪೂರ್ವಕವಾದೊಂದು ಪಾಲನ್ನು ಹೊಂದುವಂತೆ ಖಂಡಿತವಾಗಿಯೂ ನಮ್ಮ ಹೃದಯಗಳು ನಮ್ಮನ್ನು ಪ್ರೇರಿಸುವವು! ನಾವು ನಮ್ಮಿಂದ ಸಾಧ್ಯವಿರುವುದನ್ನು ಮಾಡುವಂತೆ ಪ್ರೇರಿಸಲ್ಪಡುತ್ತೇವೆ.
3 ಪ್ರಾಣಪೂರ್ವಕನಾಗಿರುವ ಒಬ್ಬ ವ್ಯಕ್ತಿಯು, ತನ್ನ ಗಮನವನ್ನು ಪವಿತ್ರ ಸೇವೆಯ ಮೇಲೆ ಕೇಂದ್ರೀಕರಿಸಲು ಬಯಸುವುದನ್ನು ಅಪೇಕ್ಷಿಸುವುದು ಸಮಂಜಸವಾಗಿರುವದು. ಸ್ಪಷ್ಟವಾಗಿ ಅದೇ ರೀತಿಯ ಅನಿಸಿಕೆಯಾದ ಕೀರ್ತನೆಗಾರನು ಪ್ರಕಟಿಸಿದ್ದು: “ನಿನ್ನನ್ನು ದಿನಕ್ಕೆ ಏಳು ಸಾರಿ ಕೊಂಡಾಡುತ್ತೇನೆ.” (ಕೀರ್ತ. 119:164) ಕೀರ್ತನೆಗಾರನ ಭಾವನೆಗಳನ್ನು ಹಂಚಿಕೊಳ್ಳುವವರು, ಯೆಹೋವನನ್ನು ಸ್ತುತಿಸಲಿಕ್ಕಿರುವ ಅವಕಾಶಗಳ ಪ್ರಯೋಜನವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಅವರ ಸಂದರ್ಭಗಳು ಅನುಮತಿಸುವಂತೆ, ಸಾಧ್ಯವಾದಷ್ಟು ಮಟ್ಟಿಗೆ ಅವರು ಹುರುಪಿನಿಂದ ಸೇವೆಸಲ್ಲಿಸುತ್ತಾರೆ.
4 ಯೆಹೋವನನ್ನು ಸ್ತುತಿಸಲಿಕ್ಕಿರುವ ಅವಕಾಶಗಳಿಂದ ನಾವು ಸುತ್ತುವರಿಯಲ್ಪಟ್ಟಿದ್ದೇವೆ: ಸುವಾರ್ತೆಯನ್ನು ಸಾರಲಿಕ್ಕಾಗಿ ಮನೆಮನೆಯ ಕಾರ್ಯದಲ್ಲಿ ಪಾಲನ್ನು ತೆಗೆದುಕೊಳ್ಳುವ ತನಕ ನಾವು ಕಾಯಬೇಕಾಗಿಲ್ಲ. ನಮ್ಮ ಸಹೋದ್ಯೋಗಿಗಳು, ಶಾಲಾಸಹಪಾಠಿಗಳು, ಸಂಬಂಧಿಕರು, ಮತ್ತು ಪರಿಚಯಸ್ಥರೆಲ್ಲರೂ ರಾಜ್ಯ ಸಂದೇಶವನ್ನು ಕೇಳಿಸಿಕೊಳ್ಳುವ ಅಗತ್ಯವಿದೆ. ಹೋಟೆಲ್ ಸಿಬ್ಬಂದಿಗೆ, ರೆಸ್ಟೋರೆಂಟ್ ಕೆಲಸಗಾರರಿಗೆ, ಸರ್ವಿಸ್ ಸ್ಟೇಷನ್ನಲ್ಲಿ, ಅಥವಾ ಟ್ಯಾಕ್ಸಿ ಚಾಲಕರಿಗೆ ಒಂದು ಸಾಕ್ಷಿಯನ್ನು ನೀಡುವುದಕ್ಕೆ ನಡೆಸಬಹುದಾದ ಸಂಭಾಷಣೆಗಳನ್ನು ನಾವು ಪ್ರಯಾಣಿಸುತ್ತಿರುವಾಗ ಪ್ರಾರಂಭಿಸಬಲ್ಲೆವು. ಮನೆಯಲ್ಲಿರುವಾಗ, ನೆರೆಯವರಿಗೆ ಅಥವಾ ಬಟವಾಡೆ ಮಾಡುವವರಿಗೆ ನಾವು ಸಾಕ್ಷಿಯನ್ನು ನೀಡಬಹುದು. ನಾವು ಆಸ್ಪತ್ರೆಗೆ ಸೇರಿಸಲ್ಪಟ್ಟಿರುವುದಾದರೆ, ಅಲ್ಲಿ ನಾವು ಅನೌಪಚಾರಿಕವಾಗಿ ಸಾರಲು ಸಾಧ್ಯವಿರುವ ನರ್ಸ್ಗಳು, ವೈದ್ಯರು, ಮತ್ತು ಇತರ ರೋಗಿಗಳು ಇರುತ್ತಾರೆ.
5 ಅನೌಪಚಾರಿಕ ಸಾಕ್ಷಿ ಕಾರ್ಯವು ಫಲಿತಾಂಶಗಳನ್ನು ಪಡೆಯುತ್ತದೆ: ಒಂದು ದಿನ ಇಬ್ಬರು ಸಾಕ್ಷಿಗಳು ಉದ್ಯಾನವನವೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದರು ಮತ್ತು ತನ್ನ ಮಗುವಿನೊಂದಿಗೆ ಅಡ್ಡಾಡುತ್ತಿದ್ದ ಒಬ್ಬ ಯುವ ವ್ಯಕ್ತಿಯೊಂದಿಗೆ ಸಂಭಾಷಣೆಯೊಂದನ್ನು ಪ್ರಾರಂಭಿಸಿದರು. ಕಟ್ಟಕಡೆಗೆ, ಅವನು ಮತ್ತು ಅವನ ಪತ್ನಿಯು ಸತ್ಯವನ್ನು ಸ್ವೀಕರಿಸಿದರು. ಆ ಯುವ ವ್ಯಕ್ತಿಯು ಅನಂತರ ಹೊರಗೆಡಹಿದ್ದೇನೆಂದರೆ, ತಾನು ಪ್ರಥಮವಾಗಿ ಆ ಇಬ್ಬರು ಸಾಕ್ಷಿಗಳನ್ನು ಸಂಧಿಸುವ ಸ್ವಲ್ಪ ಸಮಯದ ಮುನ್ನ, ಅವನು ದೇವರಿಗೆ ಹೀಗೆ ಕೇಳಿಕೊಳ್ಳುತ್ತಾ ಪ್ರಾರ್ಥಿಸಿದ್ದನು, ‘ನೀನು ಅಸ್ತಿತ್ವದಲ್ಲಿರುವುದಾದರೆ, ನಾನು ನಿನ್ನನ್ನು ತಿಳಿಯುವಂತೆ ದಯವಿಟ್ಟು ಅನುಮತಿಸು.’ ಉದ್ಯಾನವನದಲ್ಲಿನ ಎದುರಾಗುವಿಕೆಯನ್ನು, ಅವನು ತನ್ನ ಪ್ರಾರ್ಥನೆಗೆ ಯೆಹೋವನ ಉತ್ತರವಾಗಿ ಪರಿಗಣಿಸುತ್ತಾನೆ.
6 ಇತರರಿಗೆ ಆತ್ಮಿಕವಾಗಿ ಸಹಾಯಮಾಡುವ ತಮ್ಮ ಅಭಿಲಾಷೆಯಲ್ಲಿ ಪ್ರಾಣಪೂರ್ವಕರಾಗಿರುವವರು ಮಹತ್ತಾದ ಹರ್ಷವನ್ನು ಅನುಭವಿಸುತ್ತಾರೆ. “ಸಂಪೂರ್ಣಹೃದಯದಿಂದ” ಮಾಡುವ ಇಂಥ ಸೇವೆಯು, ಯೆಹೋವನನ್ನು ಪ್ರಸನ್ನಗೊಳಿಸುತ್ತದೆ ಎಂಬುದು ಅವರಿಗೆ ತಿಳಿದಿದೆ.—1 ಪೂರ್ವ. 28:9.