ಸತ್ಯವನ್ನು ಮಾತಾಡುತ್ತಾ ಇರಿ
1 ಅಪೊಸ್ತಲರು ಪ್ರಕಟಿಸಿದ್ದು: “ನಾವಂತೂ ಕಂಡು ಕೇಳಿದ್ದನ್ನು ಹೇಳದೆ ಇರಲಾರೆವು.” (ಅ. ಕೃ. 4:20) ಇಂದು ನಾವು ಕೂಡ ಸತ್ಯವನ್ನು ಮಾತಾಡುತ್ತಾ ಇರತಕ್ಕದ್ದು. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ವಿತರಣೆಯು, ಯಾರು ಆಲಿಸುತ್ತಾರೋ ಅವರನ್ನು ಕಂಡುಕೊಳ್ಳುವುದಕ್ಕಾಗಿರುವ ಒಂದು ಮಾಧ್ಯಮವಾಗಿದೆಯಾದರೂ, ಸತ್ಯದ ಕುರಿತಾಗಿ ಹೆಚ್ಚಿನ ವಿಷಯವನ್ನು ಆಸಕ್ತ ಜನರಿಗೆ ನಾವು ಕಲಿಸಬೇಕಾದರೆ ನಾವು ಹಿಂದಿರುಗಿಹೋಗತಕ್ಕದ್ದು.
2 ವಿಶೇಷವಾದ ಮೇ ತಿಂಗಳ “ಎಚ್ಚರ!” ಪತ್ರಿಕೆಯ ಕೊಡಿಕೆಯನ್ನು ಅದರ “ಯುದ್ಧಗಳು ಇನ್ನಿಲ್ಲದಿರುವಾಗ” ಎಂಬ ವಿಷಯದೊಂದಿಗೆ ಅನುಸರಿಸಿಕೊಂಡು ಹೋಗುತ್ತಿರುವಾಗ, ಹೀಗೆ ಕೇಳುವ ಮೂಲಕ ನೀವು ಒಂದು ಬೈಬಲ್ ಅಭ್ಯಾಸವನ್ನು ಪರಿಚಯಿಸಬಹುದು:
◼ “ಕಳೆದ ಸಲ, ರಾಷ್ಟ್ರಗಳ ಯುದ್ಧಗಳು ಮತ್ತು ಅವುಗಳಲ್ಲಿನ ಧರ್ಮದ ಪಾತ್ರದ ಕುರಿತಾಗಿ ನಾವು ಮಾತಾಡಿದೆವು. ಅಂಥ ಘಟನೆಗಳು, ಯಾವುದನ್ನು ಬೈಬಲ್ ಕಡೇ ದಿವಸಗಳು ಎಂದು ಕರೆಯುತ್ತದೋ ಆ ಸಮಯದಲ್ಲಿ, ನಾವು ಜೀವಿಸುತ್ತಿದ್ದೇವೆಂಬುದನ್ನು ಸ್ಪಷ್ಟವಾಗಿ ರುಜುಪಡಿಸುತ್ತವೆಂಬುದನ್ನು ನೀವು ಗ್ರಹಿಸಿದ್ದಿರೋ? [ಜ್ಞಾನ ಪುಸ್ತಕವನ್ನು ತೋರಿಸಿರಿ. 11ನೇ ಅಧ್ಯಾಯದ ಪ್ರಥಮ ಪ್ಯಾರಗ್ರಾಫ್ ಅನ್ನು ಓದಿರಿ, ಮತ್ತು 102ನೇ ಪುಟದಲ್ಲಿರುವ ರೇಖಾಚೌಕವನ್ನು ಎತ್ತಿತೋರಿಸಿರಿ.] ಈ ಪುಸ್ತಕವು, ಪರಿವಿಡಿಯಲ್ಲಿ ಪಟ್ಟಿಮಾಡಲ್ಪಟ್ಟಿರುವ ಇತರ 18 ವಿಷಯಗಳೊಂದಿಗೆ ಈ ವಿಷಯವನ್ನು ವಿವರಿಸುತ್ತದೆ. [3ನೇ ಪುಟವನ್ನು ತೋರಿಸಿರಿ.] ನೀವು ನನಗೆ ಅನುಮತಿ ನೀಡುವುದಾದರೆ, ಈ ಪ್ರಮುಖವಾದ ಬೈಬಲ್ ವಿಷಯಗಳ ಒಂದು ತಿಳಿವಳಿಕೆಯನ್ನು ಪಡೆದುಕೊಳ್ಳಲು ಈ ಪುಸ್ತಕವು ನಿಮಗೆ ಹೇಗೆ ಸಹಾಯಮಾಡಬಲ್ಲದು ಎಂಬುದನ್ನು ಪ್ರದರ್ಶಿಸಲಿಕ್ಕೆ ನಾನು ಬಯಸುತ್ತೇನೆ.” ಅನುಮತಿಸಲ್ಪಟ್ಟಲ್ಲಿ, 6ನೇ ಪುಟದಲ್ಲಿ ಒಂದು ಅಭ್ಯಾಸವನ್ನು ಪ್ರಾರಂಭಿಸಿರಿ.
3 ಈಗ ಒಂದು ಸುರಕ್ಷಿತ ಜೀವನವನ್ನು ಹೇಗೆ ಆನಂದಿಸಲು ಸಾಧ್ಯವಿದೆ ಎಂಬುದನ್ನು ನೀವು ಹಿಂದಿರುಗಿಹೋಗಿ, ವಿವರಿಸಲು ಮಾತುಕೊಟ್ಟಿರುವಲ್ಲಿ, ಹೀಗೆ ಏನನ್ನಾದರೂ ನೀವು ಹೇಳಬಹುದು:
◼ “ನಾವು ಮೊದಲು ಸಂಧಿಸಿದಾಗ, ಮನುಷ್ಯನ ಭವಿಷ್ಯತ್ತಿನ ಕುರಿತಾಗಿ ಆಶಾವಾದಿಯಾಗಿರಲಿಕ್ಕಾಗಿ ನಮಗೆ ಕಾರಣವನ್ನು ಕೊಡುವ, ಬೈಬಲಿನ ಒಂದು ಉದ್ಧೃತ ಭಾಗವನ್ನು ನಿಮ್ಮೊಂದಿಗೆ ನಾನು ಹಂಚಿಕೊಂಡಿದ್ದೆ. ಇಂದು, ಈಗಲೇ ಸುರಕ್ಷಿತವಾದ ಅನಿಸಿಕೆಯೊಂದನ್ನು ನಮಗೆ ನೀಡಬಲ್ಲವನು ಯಾರಾಗಿದ್ದಾನೆಂಬುದನ್ನು ತೋರಿಸುವ ಯಾವುದೋ ವಿಷಯಕ್ಕೆ ನಿಮ್ಮ ಗಮನವನ್ನು ನಿರ್ದೇಶಿಸಲು ನಾನು ಬಯಸುತ್ತೇನೆ.” ಕೀರ್ತನೆ 4:8ನ್ನು ಓದಿರಿ. ಜ್ಞಾನ ಪುಸ್ತಕದ 168ನೇ ಪುಟಕ್ಕೆ ತಿರುಗಿಸಿ, ಪ್ಯಾರಗ್ರಾಫ್ 19ನ್ನು ಓದಿರಿ. ಅನಂತರ ಕೇಳಿರಿ: “ನಿಮ್ಮ ಜೀವನದಲ್ಲಿ ನೀವೂ ಈ ರೀತಿಯ ಸುರಕ್ಷೆಯನ್ನು ಹೇಗೆ ಕಂಡುಕೊಳ್ಳಬಲ್ಲಿರೆಂಬುದನ್ನು ಸ್ಫುಟವಾಗಿ ತೋರಿಸುವ ಒಂದು ಉಚಿತ ಮನೆ ಬೈಬಲ್ ಅಭ್ಯಾಸವನ್ನು ಪಡೆದಿರಲು ನೀವು ಆನಂದಿಸುವಿರೋ?” ಉತ್ತರವು ಹೌದಾಗಿರುವಲ್ಲಿ, 1ನೇ ಅಧ್ಯಾಯಕ್ಕೆ ತಿರುಗಿಸಿರಿ.
4 ಜೂನ್ 8ರ “ಎಚ್ಚರ!” ಪತ್ರಿಕೆಯ ಮುಖಪುಟದ ಕಥಾವಿಷಯವು, ಮನೆಯಿಂದ ಮನೆಗೆ ಮತ್ತು ವ್ಯಾಪಾರ ಟೆರಿಟೊರಿಯಲ್ಲಿರುವ ಜನರ ಆಸಕ್ತಿಯನ್ನು ಸೆರೆಹಿಡಿಯಬೇಕು. ಹೀಗೆ ಹೇಳುತ್ತಾ ನೀವು ಅದನ್ನು ಪರಿಚಯಿಸಸಾಧ್ಯವಿದೆ:
◼ “ಅನೇಕ ಸ್ತ್ರೀಯರು ಕೆಲಸದ ಸ್ಥಳದಲ್ಲಿನ ಲೈಂಗಿಕ ಕಿರುಕುಳದ ಘೋರ ಸ್ವಪ್ನವನ್ನು ಅನುಭವಿಸಿದ್ದಾರೆ. ಸನ್ನಿವೇಶವು ಎಷ್ಟೊಂದು ಗಂಭೀರವಾಗಿ ಪರಿಣಮಿಸಿದೆಯೆಂದರೆ, ನ್ಯಾಯಾಲಯಗಳು ತಪ್ಪಿತಸ್ಥರನ್ನು ಶಿಕ್ಷಿಸಿ, ಬಲಿಯಾದವರಿಗೆ ನಷ್ಟ ಭರ್ತಿ ಒದಗಿಸಲು ತೊಡಗಿವೆ. ಸಮುದಾಯಕ್ಕೆ ಒಂದು ಸೇವೆಯೋಪಾದಿ, ಈ ವರದಿಯನ್ನು ನಾವು ಪ್ರಕಾಶಿಸಿದ್ದೇವೆ; ಇದು ವಿಷಯದ ಕುರಿತಾಗಿ ಸಾಮಾನ್ಯವಾದ ಮಿಥ್ಯೆಗಳನ್ನು ದೂರಮಾಡುತ್ತದೆ. ಇದು ಲೈಂಗಿಕ ಕಿರುಕುಳದ ಒಬ್ಬ ಬಲಿಪಶು ಇಲ್ಲವೇ ಒಬ್ಬ ಆಪಾದಿತನಾಗುವುದರಿಂದ ತಮ್ಮನ್ನು ಹೇಗೆ ಸಂರಕ್ಷಿಸಿಕೊಳ್ಳಬೇಕೆಂಬುದರ ಕುರಿತಾಗಿ, ಸ್ತ್ರೀಯರಿಗಾಗಿ ಮತ್ತು ಪುರುಷರಿಗಾಗಿ ಪ್ರಾಯೋಗಿಕ ಅಭಿಪ್ರಾಯಗಳನ್ನೂ ಒದಗಿಸುತ್ತದೆ. ಈ ಪ್ರಾಯೋಗಿಕ ಪತ್ರಿಕೆಯನ್ನು ನೀವು ಕ್ರಮವಾಗಿ ಪಡೆಯುವಂತೆ ನಾನು ಇಚ್ಛಿಸುತ್ತೇನೆ. ಎಚ್ಚರ! ಪತ್ರಿಕೆಯ ಚಂದಾವನ್ನು ನೀಡಿರಿ.” ಅದು ಸ್ವೀಕರಿಸಲ್ಪಡದಿದ್ದಲ್ಲಿ, ಎಚ್ಚರ! ಮತ್ತು ಕಾವಲಿನಬುರುಜು ಪತ್ರಿಕೆಗಳ ಬಿಡಿ ಪ್ರತಿಗಳನ್ನು ನೀಡಿರಿ.
5 ಹೀಗೆ ಹೇಳುವ ಮೂಲಕ ನೀವು ಪುನಃ ಸಂದರ್ಶನದಲ್ಲಿ ಅಭ್ಯಾಸವೊಂದರ ನೇರವಾದ ನೀಡುವಿಕೆಯನ್ನು ಮಾಡಸಾಧ್ಯವಿದೆ:
◼ “ಬೈಬಲ್ ಏನನ್ನು ಕಲಿಸುತ್ತದೋ ಅದರ ಕುರಿತಾಗಿ, ಎಲ್ಲೆಡೆಯೂ ಇರುವ ಜನರಿಗೆ ತಿಳಿಸಲು ನಾವು ನಮ್ಮ ಪತ್ರಿಕೆಗಳನ್ನು ಲೋಕವ್ಯಾಪಕವಾಗಿ ವಿತರಿಸುತ್ತೇವೆ. ತಾವು ಏನನ್ನು ಕಲಿಯುತ್ತಾರೋ ಅದನ್ನು ವ್ಯಕ್ತಿಗಳು ಅಮೂಲ್ಯವೆಂದೆಣಿಸುವಲ್ಲಿ, ನಾವು ಒಂದು ಉಚಿತ ಮನೆ ಬೈಬಲ್ ಅಭ್ಯಾಸವನ್ನು ನೀಡುತ್ತೇವೆ. [ಕಾವಲಿನಬುರುಜು ಪತ್ರಿಕೆಯ ಕೊನೆಯ ಪುಟದಲ್ಲಿರುವ ‘ಒಂದು ಸಂದರ್ಶನವನ್ನು ನೀವು ಸ್ವಾಗತಿಸುವಿರೋ?’ ಎಂಬ ರೇಖಾಚೌಕಕ್ಕೆ ನಿರ್ದೇಶಿಸಿರಿ.] ನಾವು ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಈ ಪುಸ್ತಕವನ್ನು ಒಂದು ಮಾರ್ಗದರ್ಶಕದೋಪಾದಿ ಉಪಯೋಗಿಸುತ್ತೇವೆ. ಒಂದು ಅಭ್ಯಾಸವು ಹೇಗೆ ನಡೆಸಲ್ಪಡುತ್ತದೆಂಬುದನ್ನು ಸಂಕ್ಷಿಪ್ತವಾಗಿ ತೋರಿಸಲು ನನಗೆ ಅನುಮತಿ ನೀಡಿರಿ.”
6 ನಾವು ಸತ್ಯವನ್ನು ಮಾತಾಡುತ್ತಾ ಇರುವುದಾದರೆ, ಕಿವಿಗೊಟ್ಟು, ಅನುಕೂಲಕರವಾಗಿ ಪ್ರತಿಕ್ರಿಯಿಸುವಂತಹ ಕೆಲವರು ಇರುವರೆಂಬುದರ ಕುರಿತಾಗಿ ನಾವು ಖಾತ್ರಿಯಿಂದಿರಬಲ್ಲೆವು.—ಮಾರ್ಕ 4:20.