ಸತ್ಯ ದೇವರ ಜ್ಞಾನವು ಜೀವಕ್ಕೆ ನಡೆಸುತ್ತದೆ
1 ಯೇಸು ತನ್ನ ತಂದೆಗೆ ಮಾಡಿದ ಪ್ರಾರ್ಥನೆಯಲ್ಲಿ, “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನು . . . ತಿಳಿಯುವದೇ ನಿತ್ಯಜೀವವು” ಎಂದು ಹೇಳಿದನು. (ಯೋಹಾನ 17:3) ಅದು ಎಂತಹ ಒಂದು ಉದಾರ ಪ್ರತಿಫಲವಾಗಿದೆ! ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪ್ರಕಾಶನವನ್ನು ಉಪಯೋಗಿಸುವ ಮೂಲಕ, ಸದಾಕಾಲ ಜೀವಿಸಲಿಕ್ಕಾಗಿ ಏನು ಮಾಡಬೇಕೆಂಬುದನ್ನು ಇತರರು ಕಲಿಯುವಂತೆ ನಾವು ಸಹಾಯ ಮಾಡಬಲ್ಲೆವು. ಅವರ ಆಸಕ್ತಿಯನ್ನು ಕೆರಳಿಸಲು ಹಾಗೂ ಅವರು ಜ್ಞಾನ ಪುಸ್ತಕವನ್ನು ಓದುವಂತೆ ಬಯಸಲಿಕ್ಕಾಗಿ ಅವರನ್ನು ಪ್ರಚೋದಿಸಲು ನಾವು ಏನೆಂದು ಹೇಳಸಾಧ್ಯವಿದೆ?
2 ಬೈಬಲು ಪ್ರಾಯೋಗಿಕ ಮಾರ್ಗದರ್ಶನದ ಒಂದು ಮೂಲವಾಗಿದೆ ಎಂಬುದನ್ನು ತೋರಿಸುತ್ತಾ, ನೀವು ಚಾತುರ್ಯದಿಂದ ಹೀಗನ್ನಬಹುದು:
◼ “ಜೀವಿತದ ಸಮಸ್ಯೆಗಳೊಂದಿಗೆ ನಿಭಾಯಿಸಲಿಕ್ಕಾಗಿ ಮಾರ್ಗದರ್ಶನದ ಒಂದು ಪ್ರಾಯೋಗಿಕ ಮೂಲವನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ ಎಂಬ ವಿಚಾರವನ್ನು ನಾವು ನಮ್ಮ ನೆರೆಯವರೊಂದಿಗೆ ಚರ್ಚಿಸುತ್ತಿದ್ದೇವೆ. ಜನರು, ಬೈಬಲನ್ನೂ ಒಳಗೊಂಡು ವಿವಿಧ ಧಾರ್ಮಿಕ ಪುಸ್ತಕಗಳನ್ನು ಸಂಪರ್ಕಿಸುತ್ತಾರೆ. ಆದರೆ ಜನರ ಮನೋಭಾವಗಳು ಬದಲಾಗುತ್ತಿವೆ; ತಮ್ಮ ಧಾರ್ಮಿಕ ಪುಸ್ತಕಗಳನ್ನು ಕೇವಲ ಮನುಷ್ಯರಿಂದ ಬರೆಯಲ್ಪಟ್ಟಿರುವವುಗಳೋಪಾದಿ ವೀಕ್ಷಿಸುತ್ತಾ, ಅವುಗಳ ಕುರಿತಾಗಿ ಕೆಲವರು ಸಂಶಯಾಸ್ಪದರಾಗಿದ್ದಾರೆ. ನಿಮ್ಮ ಅಭಿಪ್ರಾಯವೇನು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಮ್ಮ ದಿನಕ್ಕಾಗಿ ಬೈಬಲು ಪ್ರಾಯೋಗಿಕವಾಗಿದೆಯೆಂದು ಏಕೆ ಹೇಳಸಾಧ್ಯವಿದೆ ಎಂಬುದಕ್ಕೆ ಒಂದು ಒಳ್ಳೆಯ ಕಾರಣವಿದೆ. [2 ತಿಮೊಥೆಯ 3:16, 17ನ್ನು ಓದಿರಿ.] ಬೈಬಲಿನ ಬರವಣಿಗೆಯನ್ನು ದೇವರು ಪ್ರೇರೇಪಿಸಿದಾಗ ಅವು ಎಷ್ಟು ಅನ್ವಯವಾಗುತ್ತಿದ್ದವೊ, ಅಷ್ಟೇ ಹೆಚ್ಚಾಗಿ ಇಂದೂ ಬೈಬಲಿನ ನಿಯಮಗಳು ಅನ್ವಯವಾಗುತ್ತವೆ.” ಜ್ಞಾನ ಪುಸ್ತಕದ 16ನೆಯ ಪುಟಕ್ಕೆ ತಿರುಗಿಸಿರಿ, ಮತ್ತು ಯೇಸುವಿನ ಪರ್ವತ ಪ್ರಸಂಗದಲ್ಲಿ ಕಂಡುಬರುವ ಪ್ರಾಯೋಗಿಕ ಮಾರ್ಗದರ್ಶನದ ಕುರಿತು ಸಂಕ್ಷಿಪ್ತವಾಗಿ ಹೇಳಿಕೆಯನ್ನು ನೀಡಿರಿ. ಪ್ಯಾರಗ್ರಾಫ್ 11ರಲ್ಲಿ ಅಥವಾ ಪ್ಯಾರಗ್ರಾಫ್ 13ರಲ್ಲಿ ಕಂಡುಬರುವ ಒಂದು ಉಲ್ಲೇಖವನ್ನು ಓದಿರಿ. ಪುಸ್ತಕವನ್ನು ನೀಡಿರಿ, ಮತ್ತು ಬೈಬಲಿನಲ್ಲಿ ಒಳಗೂಡಿರುವ ಜ್ಞಾನದಿಂದ ನಾವು ವೈಯಕ್ತಿಕವಾಗಿ ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ? ಎಂಬ ಪ್ರಶ್ನೆಗೆ ಉತ್ತರ ನೀಡಲಿಕ್ಕಾಗಿ ಹಿಂದಿರುಗಿ ಹೋಗಲು ಏರ್ಪಾಡನ್ನು ಮಾಡಿರಿ.
3 ಅನೇಕ ಜನರಿಗೆ ಪ್ರಾರ್ಥನೆಯು ಆಸಕ್ತಿಕರವಾದ ಒಂದು ವಿಷಯವಾಗಿರುವುದರಿಂದ, ಹೀಗೆ ಕೇಳುವ ಮೂಲಕ ನೀವು ಚರ್ಚಿಸಲು ಬಯಸಬಹುದು:
◼ “ಆಧುನಿಕ ದಿನದ ಜೀವಿತದಲ್ಲಿ ನಾವು ಎದುರಿಸಬೇಕಾಗಿರುವ ಎಲ್ಲಾ ಪಂಥಾಹ್ವಾನಗಳೊಂದಿಗೆ, ಪ್ರಾರ್ಥನೆಯು ನಮಗೆ ನಿಜವಾದ ಸಹಾಯವಾಗಿರಸಾಧ್ಯವಿದೆ ಎಂಬುದಾಗಿ ನೀವು ಎಣಿಸುತ್ತೀರೊ? [ಪ್ರತಿಕ್ರಿಯೆಗಾಗಿ ಕಾಯಿರಿ.] ದೇವರಿಗೆ ಪ್ರಾರ್ಥನೆ ಮಾಡುವ ಮೂಲಕ ತಾವು ಆತನ ಕಡೆಗೆ ನಿಕಟವಾಗಿ ಸೆಳೆಯಲ್ಪಟ್ಟಿದ್ದೇವೆ ಮತ್ತು ಹೀಗೆ ಮಾಡುವುದು—ಬೈಬಲು ವಾಗ್ದಾನಿಸುವಂತೆಯೇ—ತಮಗೆ ಆಂತರಿಕ ಬಲವನ್ನು ಕೊಟ್ಟಿದೆಯೆಂದು ಅನೇಕರು ಭಾವಿಸುತ್ತಾರೆ. [ಜ್ಞಾನ ಪುಸ್ತಕವನ್ನು 156ನೆಯ ಪುಟಕ್ಕೆ ತೆರೆದು, ಫಿಲಿಪ್ಪಿ 4:6, 7ನ್ನು ಓದಿರಿ.] ಆದರೂ, ಒಬ್ಬ ವ್ಯಕ್ತಿಗೆ ತನ್ನ ಪ್ರಾರ್ಥನೆಗಳು ಕೆಲವೊಮ್ಮೆ ಉತ್ತರಿಸಲ್ಪಡದೇ ಹೋಗುತ್ತವೆಂಬ ಅನಿಸಿಕೆಯು ಆಗಬಹುದು. ಈ ಅಧ್ಯಾಯವು ‘ನೀವು ದೇವರ ಸಮೀಪಕ್ಕೆ ಬರಬಲ್ಲ ವಿಧ’ ಎಂಬ ವಿಷಯವನ್ನು ಚರ್ಚಿಸುತ್ತದೆ. [ಪುಸ್ತಕವನ್ನು ನೀಡಿರಿ] ದೇವರೊಂದಿಗೆ ಸಂವಾದಿಸುವುದು ಒಂದೇ ಪಕ್ಕದ ವಿಷಯವಾಗಿಲ್ಲದಿರುವುದರಿಂದ, ನಾವು ಆತನಿಗೆ ಹೇಗೆ ಕಿವಿಗೊಡಸಾಧ್ಯವಿದೆ ಎಂಬುದನ್ನೂ ಇದು ವಿವರಿಸುತ್ತದೆ. ನಾನು ಮುಂದಿನ ಸಲ ಬಂದಾಗ ನಾವು ಅದನ್ನು ಚರ್ಚಿಸಬಲ್ಲೆವು.”
4 ಬೈಬಲನ್ನು ಗೌರವಿಸುವ ವ್ಯಕ್ತಿಗಳೊಂದಿಗೆ ಮಾತಾಡುತ್ತಿರುವಾಗ, ಅಭ್ಯಾಸವೊಂದನ್ನು ಆರಂಭಿಸುವುದಕ್ಕಾಗಿ ನೀವು ಒಂದು ನೇರವಾದ ಪ್ರಸ್ತಾಪವನ್ನು ಪ್ರಯತ್ನಿಸಸಾಧ್ಯವಿದೆ. ನಿಮಗಾಗಿ ಕಾರ್ಯನಡಿಸಬಹುದಾದ ಒಂದು ಪ್ರಸ್ತಾಪವು ಇಲ್ಲಿದೆ:
◼ “ನಾವು ಒಂದು ಉಚಿತ ಮನೆ ಬೈಬಲ್ ಅಭ್ಯಾಸದ ವ್ಯಾಸಂಗವನ್ನು ನೀಡುತ್ತಿದ್ದೇವೆ. ನೀವೆಂದಾದರೂ ಒಂದು ಬೈಬಲ್ ವ್ಯಾಸಂಗವನ್ನು ಈ ಮುಂಚೆ ತೆಗೆದುಕೊಂಡಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಾವು ಉಪಯೋಗಿಸುವ ಅಭ್ಯಾಸ ಸಹಾಯಕವನ್ನು ನಾನು ನಿಮಗೆ ತೋರಿಸುತ್ತೇನೆ.” ಜ್ಞಾನ ಪುಸ್ತಕವನ್ನು ತೋರಿಸಿರಿ, ಮನೆಯವನು ಪುಸ್ತಕದ ವಿಷಯ ಸೂಚಿಯನ್ನು ನೋಡಸಾಧ್ಯವಾಗುವಂತೆ ಅದನ್ನು 3ನೆಯ ಪುಟಕ್ಕೆ ತಿರುಗಿಸಿರಿ, ಮತ್ತು “ಈ ವಿಷಯಗಳ ಕುರಿತಾಗಿ ಬೈಬಲಿಗೆ ಏನನ್ನು ಹೇಳಲಿಕ್ಕಿದೆಯೆಂದು ನೀವೆಂದಾದರೂ ಕುತೂಹಲಗೊಂಡಿದ್ದೀರೊ?” ಎಂದು ಕೇಳಿರಿ. ಅತ್ಯಂತ ಆಸಕ್ತಿಕರವೆಂದು ಯಾವ ಅಧ್ಯಾಯವನ್ನು ಮನೆಯವನು ತೋರಿಸುತ್ತಾನೋ ಆ ಅಧ್ಯಾಯಕ್ಕೆ ತಿರುಗಿಸಿರಿ, ಮತ್ತು ಉಪಶೀರ್ಷಿಕೆಗಳನ್ನು ಓದಿರಿ. ನಮ್ಮ ಅಭ್ಯಾಸದ ವ್ಯಾಸಂಗದಲ್ಲಿ ಈ ಸಮಾಚಾರವನ್ನು ಪರಿಗಣಿಸುವ ವಿಧಾನವನ್ನು ಸಂಕ್ಷಿಪ್ತವಾಗಿ ಪ್ರದರ್ಶಿಸಲು ನೀವು ಬಯಸುತ್ತೀರೆಂಬುದಾಗಿ ವಿವರಿಸಿರಿ. ಒಂದು ಅಭ್ಯಾಸವು ಆರಂಭಿಸಲ್ಪಡಲಿ ಆರಂಭಿಸಲ್ಪಡದಿರಲಿ, ಪುಸ್ತಕವನ್ನು ನೀಡಿರಿ ಮತ್ತು ಅದನ್ನು ಓದಲು ಮನೆಯವನನ್ನು ಉತ್ತೇಜಿಸಿರಿ.
5 ಇಂದು ಸಹಸ್ರಾರು ಜನರು, ಸತ್ಯ ದೇವರ ನಿಷ್ಕೃಷ್ಟವಾದ ಜ್ಞಾನಕ್ಕೆ ಪ್ರತಿಕ್ರಿಯೆ ತೋರಿಸುತ್ತಿದ್ದಾರೆ. (ಯೆಶಾ. 2:2-4) ಯೆಹೋವನ ಕುರಿತಾಗಿ ಕಲಿಯಲು ಹಾಗೂ ಜೀವಕ್ಕೆ ನಡೆಸಲ್ಪಡಲು, ಸಾಧ್ಯವಾದಷ್ಟು ಅನೇಕ ಜನರಿಗೆ ಸಹಾಯ ಮಾಡುವುದು ನಮ್ಮ ಸುಯೋಗವಾಗಿದೆ.—1 ತಿಮೊ. 2:4.