ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/97 ಪು. 4
  • ಕಿಂಗ್‌ಡಮ್‌ ಹಾಲ್‌ ಫಂಡ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕಿಂಗ್‌ಡಮ್‌ ಹಾಲ್‌ ಫಂಡ್‌
  • 1997 ನಮ್ಮ ರಾಜ್ಯದ ಸೇವೆ
1997 ನಮ್ಮ ರಾಜ್ಯದ ಸೇವೆ
km 7/97 ಪು. 4

ಕಿಂಗ್‌ಡಮ್‌ ಹಾಲ್‌ ಫಂಡ್‌

ಜನವರಿ 1997ರ ನಮ್ಮ ರಾಜ್ಯದ ಸೇವೆಯಲ್ಲಿ ಬಂದಿದ್ದ “ನಮ್ಮ ದೇವರ ಆಲಯವನ್ನು ನಾವು ಅಲಕ್ಷಿಸಬಾರದು” ಎಂಬ ಪುರವಣಿಗೆ ನೀವು ತೋರಿಸಿರುವ ಪ್ರತಿಕ್ರಿಯೆಗಾಗಿ ನಾವು ನಿಮಗೆ ಉಪಕಾರವನ್ನು ಹೇಳಲು ಬಯಸುತ್ತೇವೆ. ಪುರವಣಿಯ ಆರನೆಯ ಪುಟದಲ್ಲಿ ತೋರಿಬಂದ “ಒಂದು ರಾಜ್ಯ ಸಭಾಗೃಹವನ್ನು ಕಟ್ಟುವುದಕ್ಕಾಗಿ ನೆರವನ್ನು ನೀಡುವಂತೆ ನಿಮ್ಮ ಹೃದಯವು ನಿಮ್ಮನ್ನು ಪ್ರಚೋದಿಸುತ್ತದೊ?” ಎಂಬ ರೇಖಾಚೌಕವನ್ನು ಓದಿದ ಬಳಿಕ, ಅನೇಕರ ಹೃದಯಗಳಿಗೆ ಕಾಣಿಕೆಯನ್ನು ಕಳುಹಿಸಲು ಪ್ರಚೋದಿಸಲ್ಪಟ್ಟಿರುವ ಅನಿಸಿಕೆಯಾಯಿತೆಂದು ತೋರುತ್ತದೆ, ಯಾಕಂದರೆ ನ್ಯಾಷನಲ್‌ ಕಿಂಗ್‌ಡಮ್‌ ಹಾಲ್‌ ಫಂಡ್‌ಗಾಗಿರುವ ದಾನಗಳಲ್ಲಿ ಒಂದು ಹಠಾತ್ತಾದ ಉಕ್ಕೇರುವಿಕೆಯನ್ನು ನಾವು ಅನುಭವಿಸಿದೆವು. ಈ ಹಣವು, ಯಾವ ಸಭೆಗಳಿಗೆ ಈಗಾಗಲೇ ಒಂದು ರಾಜ್ಯ ಸಭಾಗೃಹ ಯೋಜನೆಯು ಇದೆಯೊ ಆ ಸಭೆಗಳಿಗೆ ನೆರವು ನೀಡಲಿಕ್ಕಾಗಿ ಸದ್ವಿನಿಯೋಗಿಸಲ್ಪಡುತ್ತಿದೆ ಎಂಬುದರ ಕುರಿತಾಗಿ ದಯವಿಟ್ಟು ಖಾತ್ರಿಯುಳ್ಳವರಾಗಿರಿ. ಈ ಫಂಡ್‌ಗೆ ನಿಮ್ಮ ಮುಂದುವರಿಯುವ ಬೆಂಬಲಕ್ಕಾಗಿ ನಾವು ಮುನ್ನೋಡುತ್ತೇವೆ.

ಅದೇ ಸಮಯದಲ್ಲಿ, ಎಲ್ಲ ದಾನಗಳು ನ್ಯಾಷನಲ್‌ ಕಿಂಗ್‌ಡಮ್‌ ಹಾಲ್‌ ಫಂಡ್‌ಗಾಗಿ ಗುರುತಿಸಲ್ಪಡಬಾರದೆಂದು ಹೇಳಸಾಧ್ಯವಿದೆ. ವಿಶೇಷ ಪಯನೀಯರರನ್ನು ಬೆಂಬಲಿಸುವುದು, ಸಂಚರಣ ಮೇಲ್ವಿಚಾರಕರನ್ನು ಕಳುಹಿಸುವುದು ಮತ್ತು ಜಿಲ್ಲಾ ಅಧಿವೇಶನಗಳಿಗಾಗಿ ಏರ್ಪಡಿಸುವುದರಂತಹ, ರಾಜ್ಯ ಸಾರುವಿಕೆಯ ಕೆಲಸಕ್ಕಾಗಿ ಅವಶ್ಯವಾಗಿರುವ ಅಡಿವ್ಯವಸ್ಥೆಯ ಇತರ ಅಂಶಗಳಿಗಾಗಿ ಸೊಸೈಟಿಯು ಮಹತ್ತರವಾದ ಸಂಪನ್ಮೂಲಗಳನ್ನು ಸುರಿಯುತ್ತದೆ. ಆದುದರಿಂದ, ವ್ಯಕ್ತಿಗಳು, ಸಭೆಗಳು ಮತ್ತು ಸರ್ಕಿಟುಗಳಿಂದ ಸಾಮಾನ್ಯವಾದ ದಾನಗಳೂ ಸಂತೋಷದಿಂದ ಸ್ವೀಕರಿಸಲ್ಪಡುತ್ತವೆ. ಇವುಗಳನ್ನು “ಲೋಕವ್ಯಾಪಕ ಸಾರುವ ಕೆಲಸಕ್ಕಾಗಿ” ಎಂದು ಮಾತ್ರ ಗುರುತು ಹಾಕಬಹುದು. ಹೀಗೆ, ಸೊಸೈಟಿಯ ಪರಿಜ್ಞಾನಕ್ಕನುಸಾರ, ಆ ನಿಧಿಗಳನ್ನು ಹಲವಾರು ಬಳಕೆಗಳಲ್ಲಿ ಯಾವುದಾದರೂ ಒಂದು ಬಳಕೆಗೆ ಹಾಕಸಾಧ್ಯವಿದೆ.

ಯೆಹೋವನ ಸೇವಕರು ತಮ್ಮ ಸಮಯ, ಶಕ್ತಿ, ಮತ್ತು ನಿಧಿಗಳನ್ನು ಆತನ ಉದ್ದೇಶದ ಪೂರೈಸುವಿಕೆಗಾಗಿ ಉದಾರಭಾವದಿಂದ ಕೊಡುತ್ತಾ ಇರುವರೆಂದು ನಮಗೆ ತಿಳಿದಿದೆ. ಮತ್ತು ಅದಕ್ಕೆ ಪ್ರತಿಯಾಗಿ, ಯೆಹೋವನು ಅವರಿಗೆ ಉದಾರವಾಗಿ ಹಿಂತಿರುಗಿಸಿ ಕೊಡುವನು.—ಮಲಾ. 3:10.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ