ಸಕಲ ಸತ್ಯ ಕ್ರೈಸ್ತರು ಅವಶ್ಯವಾಗಿ ಸೌವಾರ್ತಿಕರಾಗಿರಬೇಕು
“ಸೌವಾರ್ತಿಕನ [ಅಥವಾ, ಮಿಷನೆರಿಯ, NW, footnote] ಕೆಲಸವನ್ನು ಮಾಡು.”—2 ತಿಮೊಥೆಯ 4:5.
1. ಮೊದಲನೆಯ ಶತಕದಲ್ಲಿ ಸೌವಾರ್ತಿಕರಿಂದ ಸಾರಲ್ಪಟ್ಟ ಸುವಾರ್ತೆ ಯಾವುದು?
ಇಂದು ಸೌವಾರ್ತಿಕನಾಗುವುದು ಅಂದರೆ ಅರ್ಥವೇನು? ನೀವು ಸೌವಾರ್ತಿಕರೋ? ಸೌವಾರ್ತಿಕ ಎಂಬುದು ಯು-ಆ್ಯಜ್-ಜಿ-ಲಿ-ಸೀಸ್ಟ್ ಎಂಬ “ಸುವಾರ್ತೆಯನ್ನು ಸಾರುವವ” ಎಂದರ್ಥ ಬರುವ ಗ್ರೀಕ್ ಪದದಿಂದ ಬಂದಿದೆ. ಸಾ.ಶ. 33 ರಲ್ಲಿ ಕ್ರೈಸ್ತ ಸಭೆಯ ಸ್ಥಾಪನೆಯಿಂದ ಹಿಡಿದು, ಕ್ರೈಸ್ತ ಸುವಾರ್ತೆಯು ದೇವರ ರಕ್ಷಣಾ ಮಾಧ್ಯಮವನ್ನು ಪ್ರಧಾನವಾಗಿ ತೋರಿಸಿ, ಯೇಸು ಕ್ರಿಸ್ತನು ಭಾವಿ ಸಮಯದಲ್ಲಿ ಮಾನವಕುಲದ ಮೇಲೆ ರಾಜ್ಯವನ್ನಾಳ ತೊಡಗಲು ಹಿಂದಿರುಗಿ ಬರುವನೆಂದು ಘೋಷಿಸಿತು.—ಮತ್ತಾಯ 25:31, 32; 2 ತಿಮೊಥೆಯ 4:1; ಇಬ್ರಿಯ 10:12, 13.
2. (ಎ) ಸುವಾರ್ತೆಯ ಒಳ ಹುರುಳು ನಮ್ಮ ದಿನಗಳಲ್ಲಿ ಹೇಗೆ ವೃದ್ಧಿಸಲ್ಪಟ್ಟಿದೆ? (ಬಿ) ಇಂದು ಎಲ್ಲ ನಿಜ ಕ್ರೈಸ್ತರ ಮೇಲೆ ಯಾವ ಜವಾಬ್ದಾರಿಯಿದೆ?
2 ಸಾವಿರದ ಒಂಭೈನೂರ ಹದಿನಾಲ್ಕರಿಂದ ಹಿಡಿದು, ತನ್ನ ಹಿಂದಿರುಗುವಿಕೆ ಮತ್ತು ಅದೃಶ್ಯ ಸಾನ್ನಿಧ್ಯದ ಕುರಿತು ಯೇಸು ಕೊಟ್ಟಿದ್ದ ಸೂಚನೆ ನೆರವೇರತೊಡಗಿದೆ ಎಂಬುದಕ್ಕೆ ರುಜುವಾತು ಏರತೊಡಗಿತು. (ಮತ್ತಾಯ 24:3-13, 33) ಸುವಾರ್ತೆಯಲ್ಲಿ ಪುನಃ ಒಮ್ಮೆ “ದೇವರ ರಾಜ್ಯವು ಸಮೀಪಿಸಿತು” ಎಂಬ ಪದಸರಣಿಯನ್ನು ಸೇರಿಸಸಾಧ್ಯವಾಯಿತು. (ಲೂಕ 21:7, 31; ಮಾರ್ಕ 1:14, 15) ಹೌದು, ಮತ್ತಾಯ 24:14 ರಲ್ಲಿ ದಾಖಲೆಯಾಗಿರುವ ಯೇಸುವಿನ ಪ್ರವಾದನೆಯ ಮಹಾ ನೆರವೇರಿಕೆಗೆ ಸಮಯವು ಬಂದಿತ್ತು: “ಪರಲೋಕರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” ಆದುದರಿಂದ, ಈಗ ಸುವಾರ್ತೆ ಸಾರುವುದರಲ್ಲಿ, ಸ್ಥಾಪಿತವಾದ ದೇವರ ರಾಜ್ಯ ಮತ್ತು ಅದು ಬೇಗನೆ ವಿಧೇಯ ಮಾನವಸಂತತಿಗೆ ತರುವ ಆಶೀರ್ವಾದದ ಕುರಿತು ಹುರುಪಿನಿಂದ ಸಾರುವುದು ಸೇರಿದೆ. ಎಲ್ಲ ಕ್ರೈಸ್ತರು ಈ ಕೆಲಸವನ್ನು ಮಾಡುವ ಮತ್ತು “ಶಿಷ್ಯರನ್ನಾಗಿ” ಮಾಡುವ ಆಜೆಗ್ಞೊಳಗಾಗಿದ್ದಾರೆ.—ಮತ್ತಾಯ 28:19, 20; ಪ್ರಕಟನೆ 22:17.
3. (ಎ) “ಸೌವಾರ್ತಿಕ” ಎಂಬ ಪದಕ್ಕೆ ಯಾವ ಹೆಚ್ಚಿನ ಅರ್ಥವಿದೆ? (ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 1, ಪುಟ 770, ಅಂಕಣ 2, ಪ್ಯಾರಗಾಫ್ 2, ನೋಡಿ.) (ಬಿ) ಇದು ಯಾವ ಪ್ರಶ್ನೆಗಳನ್ನೆಬ್ಬಿಸುತ್ತದೆ?
3 ಸಾಮಾನ್ಯವಾಗಿ ಸುವಾರ್ತೆ ಸಾರುವುದಕ್ಕೆ ಕೂಡಿಸಲ್ಪಟ್ಟು, “ಸೌವಾರ್ತಿಕ” ಎಂಬ ಪದವನ್ನು ಬೈಬಲು, ತಮ್ಮ ಸ್ವಪ್ರದೇಶವನ್ನು ಬಿಟ್ಟು ಸುವಾರ್ತೆ ಸಾರಲಿಕ್ಕಾಗಿ ಕೆಲಸ ಮಾಡಿರದ ಪ್ರದೇಶಗಳಿಗೆ ಹೋಗುವವರ ಸಂಬಂಧದಲ್ಲಿ ವಿಶೇಷಾರ್ಥದಲ್ಲಿ ಹೇಳಿದೆ. ಒಂದನೆಯ ಶತಮಾನದಲ್ಲಿ, ಫಿಲಿಪ್, ಪೌಲ, ಬಾರ್ನಬ, ಸೀಲ, ಮತ್ತು ತಿಮೊಥೆಯರಂಥ ಅನೇಕ ಮಿಷನೆರಿ ಸೌವಾರ್ತಿಕರಿದ್ದರು. (ಅ. ಕೃತ್ಯಗಳು 21:8; ಎಫೆಸ 4:11) ಆದರೆ 1914 ರಿಂದ ಹಿಡಿದು ನಮ್ಮ ವಿಶೇಷ ಸಮಯಗಳಲ್ಲಿ ಏನು? ಯೆಹೋವನ ಜನರು ಸ್ಥಳೀಕ ಹಾಗೂ ಮಿಷನೆರಿ ಸೌವಾರ್ತಿಕರಾಗಿ ತಮ್ಮನ್ನು ದೊರಕಿಸಿಕೊಂಡಿದ್ದಾರೆಯೆ?
ಪ್ರಗತಿ 1919 ರಿಂದ
4, 5. ಸುವಾರ್ತಾ ಸೇವೆಗೆ 1914 ರ ತುಸು ಬಳಿಕ ಯಾವ ಪ್ರತೀಕ್ಷೆಗಳಿದ್ದವು?
4 ಒಂದನೆಯ ಲೋಕ ಯುದ್ಧ 1918 ರಲ್ಲಿ ಅಂತ್ಯಗೊಂಡಾಗ, ದೇವರ ಸೇವಕರು ಧರ್ಮಭ್ರಷ್ಟರಿಂದಲೂ ಕ್ರೈಸ್ತಪ್ರಪಂಚದ ಪುರೋಹಿತವರ್ಗ ಮತ್ತು ಅವರ ರಾಜಕೀಯ ಮಿತ್ರರಿಂದಲೂ ಹೆಚ್ಚುತ್ತಿರುವ ವಿರೋಧವನ್ನು ಅನುಭವಿಸಿದರು. ವಾಸ್ತವವಾಗಿ, ಜೂನ್ 1918 ರಲ್ಲಿ, ಅಮೆರಿಕದಲ್ಲಿ ವಾಚ್ ಟವರ್ ಸೊಸೈಟಿಯ ಪ್ರಮುಖ ಅಧಿಕಾರಿಗಳಿಗೆ ತಪ್ಪು ಅಪವಾದಗಳ ಮೇಲೆ 20 ವರ್ಷಗಳ ಸೆರೆವಾಸದ ಶಿಕ್ಷೆ ಕೊಡಲ್ಪಟ್ಟಾಗ, ನಿಜ ಕ್ರಿಸ್ತೀಯ ಸುವಾರ್ತಾಸೇವೆ ಬಹುಮಟ್ಟಿಗೆ ಸ್ತಂಭನವಾಯಿತು. ದೇವರ ವೈರಿಗಳು ಸುವಾರ್ತಾ ಸಾರುವಿಕೆಗೆ ಅಂತ್ಯ ತರುವುದರಲ್ಲಿ ಜಯಹೊಂದಿದರೊ?
5 ಅನಿರೀಕ್ಷಿತವಾಗಿ, ಮಾರ್ಚ್ 1919 ರಲ್ಲಿ ಸೊಸೈಟಿಯ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಯಿತು ಮತ್ತು ಆ ಬಳಿಕ ಅವರನ್ನು ಕಾರಾಗೃಹದಲ್ಲಿ ಯಾವುದು ಹಾಕಿತ್ತೋ ಆ ಸುಳ್ಳು ಅಪವಾದಗಳಿಂದ ದೋಷಮುಕ್ತರನ್ನಾಗಿ ಮಾಡಲಾಯಿತು. ಹೊಸದಾಗಿ ದೊರೆತ ಈ ಸ್ವಾತಂತ್ರ್ಯದಿಂದ, ಈ ಅಭಿಷಿಕ್ತ ಕ್ರೈಸ್ತರು, ದೇವರ ರಾಜ್ಯದಲ್ಲಿ ಸಹಬಾಧ್ಯರಾಗುವ ಆ ಸ್ವರ್ಗೀಯ ಪ್ರತಿಫಲ ದೊರೆಯುವ ಮೊದಲು ತಮಗೆ ಮಾಡಲು ತುಂಬಾ ಕೆಲಸವಿದೆ ಎಂದು ತಿಳಿದರು.—ರೋಮಾಪುರ 8:17; 2 ತಿಮೊಥೆಯ 2:12; 4:18.
6. ಸುವಾರ್ತಾ ಸೇವೆಯು, 1919 ಮತ್ತು 1939 ರ ನಡುವೆ ಹೇಗೆ ಪ್ರಗತಿಹೊಂದಿತು?
6 ತಾವು ಸುವಾರ್ತೆ ಸಾರುವುದರಲ್ಲಿ ಭಾಗಿಗಳಾಗಿದ್ದೇವೆಂದು 1919 ರಲ್ಲಿ ವರದಿ ಮಾಡಿದವರು 4,000 ಕ್ಕಿಂತಲೂ ಕಡಿಮೆ ಮಂದಿ. ಮುಂದಿನ ಎರಡು ದಶಕಗಳಲ್ಲಿ, ಅನೇಕ ಪುರುಷರು ಮಿಷನೆರಿ ಸೌವಾರ್ತಿಕರಾಗಿ ತಮ್ಮನ್ನು ಒಪ್ಪಿಸಿಕೊಟ್ಟರು, ಮತ್ತು ಇವರಲ್ಲಿ ಕೆಲವರನ್ನು ಆಫ್ರಿಕ, ಏಸ್ಯ ಮತ್ತು ಯೂರೋಪಿಗೆ ಕಳುಹಿಸಲಾಯಿತು. ಇಪ್ಪತ್ತು ವರ್ಷಗಳ ರಾಜ್ಯ ಸಾರುವಿಕೆಯ ತರುವಾಯ, 1939 ರೊಳಗೆ, ಯೆಹೋವನ ಸಾಕ್ಷಿಗಳ ಸಂಖ್ಯೆ 73,000 ಕ್ಕೂ ಹೆಚ್ಚಾಗಿತ್ತು. ಹೇರಳವಾದ ಹಿಂಸೆಯ ಎದುರಿನಲ್ಲಿಯೂ, ಈ ಎದ್ದುಕಂಡುಬಂದ ವರ್ಧನ, ಕ್ರೈಸ್ತ ಸಭೆಯ ಆದಿ ವರ್ಷಗಳಲ್ಲಿ ಸಂಭವಿಸಿದುದಕ್ಕೆ ಸಮಾನಾಂತರವಾಗಿತ್ತು.—ಅ. ಕೃತ್ಯಗಳು 6:7; 8:4, 14-17; 11:19-21.
7. ಸಾ.ಶ. 47 ಮತ್ತು 1939 ನೆಯ ವರ್ಷಗಳಲ್ಲಿ ಕ್ರೈಸ್ತ ಸುವಾರ್ತಾ ಕೆಲಸದ ಸಂಬಂಧದಲ್ಲಿ ಯಾವ ಸಮಾನ ರೂಪದ ಪರಿಸ್ಥಿತಿ ಇತ್ತು?
7 ಆದರೂ, ಆ ಸಮಯದ ಯೆಹೋವನ ಸಾಕ್ಷಿಗಳಲ್ಲಿ ಅಧಿಕಾಂಶ ಜನರು ಇಂಗ್ಲಿಷ್ ಮಾತಾಡುವ ಪ್ರಾಟೆಸ್ಟಂಟ್ ದೇಶಗಳಲ್ಲಿ ಕೇಂದ್ರೀಕರಿಸಲ್ಪಟ್ಟಿದ್ದರು. ವಾಸ್ತವವೇನಂದರೆ, 73,000 ರಾಜ್ಯ ಘೋಷಕರಲ್ಲಿ 75 ಕ್ಕೂ ಹೆಚ್ಚು ಪ್ರತಿಶತ, ಆಸ್ಟ್ರೇಲಿಯ, ಬ್ರಿಟನ್, ಕೆನಡ, ನ್ಯೂ ಸೀಲೆಂಡ್, ಮತ್ತು ಅಮೆರಿಕದಲಿದ್ದರು. ಸುಮಾರು ಸಾ.ಶ. 47 ರಂತೆಯೆ, ಸುವಾರ್ತಿಕರು ಭೂಮಿಯ ಕಡಮೆ ಸೇವೆ ಮಾಡಲ್ಪಟ್ಟಿರುವ ದೇಶಗಳಿಗೆ ಹೆಚ್ಚು ಗಮನ ಕೊಡುವಂತೆ ಪ್ರೋತ್ಸಾಹಿಸಲು ಯಾವುದರದ್ದೋ ಅವಶ್ಯವಿತ್ತು.
8. ಗಿಲ್ಯಾದ್ ಶಾಲೆ, 1992 ರೊಳಗೆ ಏನು ಸಾಧಿಸಿತ್ತು?
8 ಯುದ್ಧಸಮಯದ ಪ್ರತಿಬಂಧಗಳು ಮತ್ತು ಹಿಂಸೆಗಳು, ಯೆಹೋವನ ಬಲಾಢ್ಯವಾದ ಪವಿತ್ರಾತ್ಮವು ಆತನ ಸೇವಕರು ಹೆಚ್ಚಿನ ವಿಸ್ತರಣೆಗಾಗಿ ತಯಾರಿಸುವಂತೆ ಮಾಡುವುದನ್ನು ನಿಲ್ಲಿಸಶಕವ್ತಾಗಲಿಲ್ಲ. ಎರಡನೆಯ ಲೋಕ ಯುದ್ಧವು ಉಚ್ಚಸ್ಥಿತಿಯಲ್ಲಿದ್ದಾಗ, 1943 ರಲ್ಲಿ, ದೇವರ ಸಂಸ್ಥೆಯು, ಸುವಾರ್ತೆಯನ್ನು ಹೆಚ್ಚು ವ್ಯಾಪಕವಾಗಿ ಸಾರುವ ವೀಕ್ಷಣದಿಂದ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದ್ ಎಂಬ ಶಾಲೆಯನ್ನು ಸ್ಥಾಪಿಸಿತು. ಮಾರ್ಚ್ 1992 ರೊಳಗೆ ಈ ಶಾಲೆಯು 6,517 ಮಿಷನೆರಿಗಳನ್ನು 171 ವಿಭಿನ್ನ ದೇಶಗಳಿಗೆ ಕಳುಹಿಸಿತ್ತು. ಇದಕ್ಕೆ ಕೂಡಿಸಿ, ಪರದೇಶಗಳಲ್ಲಿ ವಾಚ್ ಟವರ್ ಸೊಸೈಟಿಯ ಬ್ರಾಂಚ್ಗಳನ್ನು ನೋಡಿಕೊಳ್ಳಲು ಪುರುಷರನ್ನು ತರಬೇತುಗೊಳಿಸಲಾಯಿತು. ತೊಂಭತ್ತೇಳು ಬ್ರಾಂಚ್ ಕಮಿಟಿ ಸಂಘಟಕರಲ್ಲಿ, 1992ರ ವರೆಗೆ, 75 ಮಂದಿ ಗಿಲ್ಯಾದಿನಲ್ಲಿ ತರಬೇತು ಹೊಂದಿದವರು.
9. ಸುವಾರ್ತೆ ಸಾರುವ ಮತ್ತು ಶಿಷ್ಯನಿರ್ಮಾಣದ ಕೆಲಸದಲ್ಲಿ ಯಾವ ತರಬೇತು ಕಾರ್ಯಕ್ರಮಗಳು ಪಾತ್ರ ವಹಿಸಿವೆ?
9 ಗಿಲ್ಯಾದ್ ಶಾಲೆಯಲ್ಲದೆ, ಇತರ ಕಾರ್ಯಕ್ರಮಗಳು, ಯೆಹೋವನ ಜನರನ್ನು ಅವರು ಸುವಾರ್ತಾ ಕೆಲಸದಲ್ಲಿ ವಿಸ್ತರಿಸಿ, ಅಭಿವೃದ್ಧಿಹೊಂದುವಂತೆ ಸಿದ್ಧ ಮಾಡಿವೆ. ಉದಾಹರಣೆಗೆ, ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ, ಭೂವ್ಯಾಪಕವಾಗಿ ದೇವಪ್ರಭುತ್ವ ಶುಶ್ರೂಷಾ ಶಾಲೆ ನಡೆಯುತ್ತದೆ. ಈ ಏರ್ಪಾಡು, ಸಾಪ್ತಾಹಿಕ ಸೇವಾ ಕೂಟದೊಂದಿಗೆ, ಲಕ್ಷಗಟ್ಟಲೆ ರಾಜ್ಯ ಪ್ರಚಾರಕರು ಸಾರ್ವಜನಿಕ ಸೇವೆಯಲ್ಲಿ ಕಾರ್ಯಸಾಧಕರಾಗಿರುವಂತೆ ತರಬೇತುಗೊಳಿಸಿದೆ. ಹಿರಿಯರಿಗೂ ಶುಶ್ರೂಷಾ ಸೇವಕರಿಗೂ ಅವರು ಬೆಳೆಯುತ್ತಿರುವ ಸಭೆಗಳನ್ನು ಹೆಚ್ಚು ಉತ್ತಮವಾಗಿ ಪರಾಮರಿಸುವಂತೆ ಅಮೂಲ್ಯ ತರಬೇತನ್ನು ಒದಗಿಸುವ ಕಿಂಗ್ಡಮ್ ಮಿನಿಸ್ಟ್ರಿ ಸ್ಕೂಲ್ ಎಂಬ ಶಾಲೆಯೂ ಇದೆ. ಅನೇಕ ಪೂರ್ಣ ಸಮಯದ ಸೌವಾರ್ತಿಕರು ತಮ್ಮ ಸಾರುವ ಕಾರ್ಯದಲ್ಲಿ ಹೆಚ್ಚು ಪರಿಣಾಮಕಾರಿಗಳಾಗುವಂತೆ ಪಯನೀಯರ್ ಸರ್ವಿಸ್ ಸ್ಕೂಲ್ ಸಹಾಯ ಮಾಡಿಯದೆ. ಇನ್ನೂ ಇತ್ತೀಚೆಗೆ, ವಿವಿಧ ದೇಶಗಳಲ್ಲಿ, ಅವಿವಾಹಿತ ಹಿರಿಯರು ಮತ್ತು ಶುಶ್ರೂಷಾ ಸೇವಕರು ಆಧುನಿಕ ದಿನಗಳ ತಿಮೊಥಿಗಳಾಗುವಂತೆ ಮಿನಿಸ್ಟೀರಿಯಲ್ ಟ್ರೇನಿಂಗ್ ಸ್ಕೂಲ್ ಸಹಾಯ ಮಾಡಿಯದೆ.
10. ದೇವರ ಸಂಸ್ಥೆಯ ಮೂಲಕ ಒದಗಿಸಲ್ಪಟ್ಟ ಸಕಲ ಉತ್ಕೃಷ್ಟ ತರಬೇತಿನ ಪರಿಣಾಮವೇನು? (ಬಾಕ್ಸ್ನ ಮಾಹಿತಿಯನ್ನು ಸೇರಿಸಿ.)
10 ಈ ಎಲ್ಲ ತರಬೇತಿನ ಫಲಿತಾಂಶವೇನು? ಯೆಹೋವನ ಸಾಕ್ಷಿಗಳು 1991 ರಲ್ಲಿ, 212 ದೇಶಗಳಲ್ಲಿ ಕ್ರಿಯಾಶೀಲ ರಾಜ್ಯ ಘೋಷಕರ 40 ಲಕ್ಷಕ್ಕೂ ಹೆಚ್ಚಿರುವ ಉನ್ನತ ಸಂಖ್ಯೆಯನ್ನು ತಲುಪಿದ್ದಾರೆ. ಆದರೂ, 1939 ರಲ್ಲಿದ್ದ ಪರಿಸ್ಥಿತಿಗೆ ಅಸದೃಶವಾಗಿ, ಇವರಲ್ಲಿ 70 ಕ್ಕೂ ಹೆಚ್ಚು ಪ್ರತಿಶತ, ಕ್ಯಾಥೊಲಿಕ್, ಆರ್ತೊಡಾಕ್ಸ್, ಕ್ರೈಸ್ತೇತರ ಯಾ ಇತರ ದೇಶಗಳಿಂದ, ಇಂಗ್ಲಿಷ್ ಭಾಷೆ ಮುಖ್ಯ ಭಾಷೆಯಾಗಿಲ್ಲದ ದೇಶಗಳಿಂದ ಬಂದಿದ್ದಾರೆ.—“ವಿಸ್ತರಣೆ 1939 ರಿಂದ” ಎಂಬ ಬಾಕ್ಸ್ ನೋಡಿ.
ಸಾಫಲ್ಯಕ್ಕೆ ಕಾರಣ
11. ಶುಶ್ರೂಷಕನಾಗಿ ತಾನು ಸಾಫಲ್ಯ ಪಡೆದುದಕ್ಕೆ ಕಾರಣ ಯಾರೆಂದು ಅಪೊಸ್ತಲ ಪೌಲನು ಹೇಳಿದನು?
11 ಈ ವಿಸ್ತರಣೆಗೆ ಯೆಹೋವನ ಸಾಕ್ಷಿಗಳು ಪ್ರಶಸ್ತಿ ತೆಗೆದುಕೊಳ್ಳುವುದಿಲ್ಲ. ಬದಲಿಗೆ, ಅವರು ತಮ್ಮ ಕೆಲಸವನ್ನು ಕೊರಿಂಥದವರಿಗೆ ಪತ್ರದಲ್ಲಿ ವಿವರಿಸಿದ ಅಪೊಸ್ತಲ ಪೌಲನಂತೆ ವೀಕ್ಷಿಸುತ್ತಾರೆ. “ಹಾಗಾದರೆ ಅಪೊಲ್ಲೋಸನು ಏನು? ಪೌಲನು ಏನು? ಅವರ ಮುಖಾಂತರ ನೀವು ಕ್ರಿಸ್ತನನ್ನು ನಂಬುವವರಾದಿರಿ; ಕರ್ತನು ಒಬ್ಬೊಬ್ಬನಿಗೆ ದಯಪಾಲಿಸಿದ ಪ್ರಕಾರ ಅವರು ಸೇವೆ ಮಾಡುವವರಾಗಿದ್ದಾರೆ. ನಾನು ಸಸಿಯನ್ನು ನೆಟ್ಟೆನು, ಅಪೊಲ್ಲೋಸನು ನೀರು ಹೊಯಿದನು, ಆದರೆ ಬೆಳೆಸುತ್ತಾ ಬಂದವನು ದೇವರು. ಹೀಗಿರಲಾಗಿ ನೆಡುವವನಾಗಲಿ ನೀರು ಹೊಯ್ಯುವವನಾಗಲಿ ವಿಶೇಷವಾದವನಲ್ಲ, ಬೆಳೆಸುವ ದೇವರೇ ವಿಶೇಷವಾದವನು. ನಾವು ದೇವರ ಜೊತೆಕೆಲಸದವರು; ನೀವು ದೇವರ ಹೊಲವೂ ದೇವರ ಕಟ್ಟಡವೂ ಆಗಿದ್ದೀರಿ.”—1 ಕೊರಿಂಥ 3:5-7, 9.
12. (ಎ) ಯಶಸ್ವಿಯಾದ ಕ್ರೈಸ್ತ ಸೌವಾರ್ತಿಕತನದಲ್ಲಿ ದೇವರ ವಾಕ್ಯವು ಯಾವ ಪಾತ್ರ ವಹಿಸುತ್ತದೆ? (ಬಿ) ಕ್ರೈಸ್ತ ಸಭೆಯ ಶಿರಸ್ಸಾಗಿ ಯಾರು ನೇಮಿಸಲ್ಪಟ್ಟಿದ್ದಾನೆ, ಮತ್ತು ಅವನ ಶಿರಸ್ಸುತನಕ್ಕೆ ನಮ್ಮ ಅಧೀನತೆಯನ್ನು ಪ್ರದರ್ಶಿಸುವ ಒಂದು ಪ್ರಾಮುಖ್ಯ ವಿಧ ಯಾವುದು?
12 ಯೆಹೋವನ ಸಾಕ್ಷಿಗಳು ಅನುಭವಿಸುತ್ತಿರುವ ಅತಿಶಯ ಬೆಳವಣಿಗೆ ದೇವರ ಆಶೀರ್ವಾದದ ಕಾರಣದಿಂದಲೇ ಎಂಬುದು ನಿಸ್ಸಂಶಯ. ಇದು ದೇವರ ಕೆಲಸ. ಈ ನಿಜತ್ವವನ್ನು ಗ್ರಹಿಸಿ, ಅವರು ಕ್ರಮವಾಗಿ ದೇವರ ವಾಕ್ಯವನ್ನು ಅಭ್ಯಸಿಸುವುದರಲ್ಲಿ ತಮ್ಮನ್ನು ಅನ್ವಯಿಸಿಕೊಳ್ಳುತ್ತಾ ಮುಂದುವರಿಯುತ್ತಾರೆ. ತಮ್ಮ ಸುವಾರ್ತಾಕೆಲಸದಲ್ಲಿ ಸಾರುವುದನ್ನೆಲ್ಲ ಅವರು ಬೈಬಲಿನ ಮೇಲೆ ಆಧರಿಸುತ್ತಾರೆ. (1 ಕೊರಿಂಥ 4:6; 2 ತಿಮೊಥೆಯ 3:16) ಅವರ ಯಶಸ್ವಿಯಾದ ಸುವಾರ್ತಾಸೇವೆಗೆ ಇನ್ನೊಂದು ಕೀಲಿಕೈಯು ಸಭೆಯ ಶಿರಸ್ಸಾಗಿ ದೇವರು ನೇಮಿಸಿದ ಕರ್ತನಾದ ಯೇಸು ಕ್ರಿಸ್ತನನ್ನು ಅವರು ಪೂರ್ಣವಾಗಿ ಅಂಗೀಕರಿಸಿರುವುದೇ. (ಎಫೆಸ 5:23) ಒಂದನೆಯ ಶತಮಾನದ ಕ್ರೈಸ್ತರು ಇದನ್ನು, ಯೇಸು ಅಪೊಸ್ತಲರಾಗಿ ನಿಯಮಿಸಿದವರೊಂದಿಗೆ ಸಹಕರಿಸುವ ಮೂಲಕ ತೋರಿಸಿದರು. ಈ ಪುರುಷರು, ಯೆರೂಸಲೇಮ್ ಸಭೆಯ ಇತರ ಹಿರಿಯರೊಂದಿಗೆ, ಪ್ರಥಮ ಶತಮಾನದ ಕ್ರೈಸ್ತ ಆಡಳಿತ ಮಂಡಲಿಯಾಗಿ ಏರ್ಪಟ್ಟರು. ವಿವಾದಗಳನ್ನು ತೀರ್ಮಾನಿಸುವಂತೆ ಮತ್ತು ಸುವಾರ್ತೆಯ ಕೆಲಸಕ್ಕೆ ಮೇಲ್ವಿಚಾರ ನೀಡುವಂತೆ ಕರ್ತನಾದ ಯೇಸು ಕ್ರಿಸ್ತನು ಸ್ವರ್ಗದಿಂದ ಈ ಪಕ್ವತೆಯ ಕ್ರೈಸ್ತರ ಗುಂಪನ್ನು ಉಪಯೋಗಿಸಿದನು. ಈ ದೈವಿಕ ಏರ್ಪಾಡಿನೊಂದಿಗೆ ಪೌಲನ ಹುರುಪಿನ ಸಹಕಾರವು, ಅವನು ಭೇಟಿ ಕೊಟ್ಟ ಸಭೆಗಳಲ್ಲಿ ಅಭಿವೃದ್ಧಿಯನ್ನು ತಂದಿತು. (ಅ. ಕೃತ್ಯಗಳು 16:4, 5; ಗಲಾತ್ಯ 2:9) ಇದರಂತೆಯೇ ಇಂದು, ದೇವರ ವಾಕ್ಯವನ್ನು ಸ್ಥಿರವಾಗಿ ಹಿಡಿದು, ಆಡಳಿತ ಮಂಡಲಿಯಿಂದ ಬರುವ ನಿರ್ದೇಶಗಳೊಂದಿಗೆ ಹುರುಪಿನಿಂದ ಸಹಕರಿಸುವಲ್ಲಿ, ಕ್ರೈಸ್ತ ಸೌವಾರ್ತಿಕರಿಗೆ ಅವರ ಶುಶ್ರೂಷೆಯಲ್ಲಿ ಯಶಸ್ಸು ದೊರೆಯುವ ಆಶ್ವಾಸನೆಯಿದೆ.—ತೀತ 1:9; ಇಬ್ರಿಯ 13:17.
ಇತರರನ್ನು ಶ್ರೇಷ್ಠರೆಂದೆಣಿಸುವುದು
13, 14. (ಎ) ಫಿಲಿಪ್ಪಿ 2:1-4 ರಲ್ಲಿ ದಾಖಲೆ ಮಾಡಿರುವಂತೆ ಅಪೊಸ್ತಲ ಪೌಲನು ಯಾವ ಸಲಹೆ ಕೊಟ್ಟನು? (ಬಿ) ಸುವಾರ್ತಾ ಸೇವೆಯಲ್ಲಿ ಭಾಗವಹಿಸುವಾಗ ಈ ಸಲಹೆಯನ್ನು ಜ್ಞಾಪಿಸುವುದು ಏಕೆ ಪ್ರಾಮುಖ್ಯ?
13 ಅಪೊಸ್ತಲ ಪೌಲನು ಸತ್ಯಾನೇಷ್ವಕರಿಗೆ ಶುದ್ಧ ಪ್ರೀತಿಯನ್ನು ತೋರಿಸಿ, ಶ್ರೇಷ್ಠ ಯಾ ಬಣ್ಣ ವೈಷಮ್ಯ ಮನೋಭಾವವನ್ನು ಪ್ರದರ್ಶಿಸಲಿಲ್ಲ. ಹೀಗೆ, ಅವನು ಜೊತೆ ವಿಶ್ವಾಸಿಗಳಿಗೆ ‘ಇತರರನ್ನು ಶ್ರೇಷ್ಠರೆಂದು ಎಣಿಸಬೇಕು’ ಎಂದು ಬುದ್ಧಿಹೇಳಶಕ್ತನಾದನು.—ಫಿಲಿಪ್ಪಿ 2:1-4.
14 ತದ್ರೀತಿ, ಇಂದಿನ ನಿಜ ಕ್ರೈಸ್ತ ಸೌವಾರ್ತಿಕರಿಗೆ, ಅವರು ವಿವಿಧ ಕುಲ ಮತ್ತು ಹಿನ್ನೆಲೆಗಳ ಜನರೊಂದಿಗೆ ವ್ಯವಹರಿಸುವಾಗ ತಾವು ಶ್ರೇಷ್ಠರೆಂಬ ಮನೋಭಾವವಿರುವುದಿಲ್ಲ. ಆಫ್ರಿಕದಲ್ಲಿ ಮಿಷನೆರಿಯಾಗಿ ಕೆಲಸ ಮಾಡಲು ನೇಮಕ ಪಡೆದ ಅಮೆರಿಕದ ಯೆಹೋವನ ಸಾಕ್ಷಿಯೊಬ್ಬನು ಹೇಳುವುದು: “ನಾವು ಶ್ರೇಷ್ಠರಲ್ಲವೆಂದು ನನಗೆ ಗೊತ್ತು. ನಮ್ಮಲ್ಲಿ ಹೆಚ್ಚು ಹಣ ಮತ್ತು ವಿಧಿ ವಿಹಿತ ವಿದ್ಯಾಭ್ಯಾಸವಿರಬಹುದು. ಆದರೆ ಅವರಲ್ಲಿ [ಸ್ಥಳೀಕ ಜನರಲ್ಲಿ] ನಮ್ಮದನ್ನು ಮಿಗಿಸುವ ಗುಣಗಳಿವೆ.”
15. ಪರದೇಶಗಳಲ್ಲಿ ಸೇವೆಗೆ ನೇಮಿಸಲ್ಪಟ್ಟವರು ಭಾವೀ ಶಿಷ್ಯರಿಗೆ ಶುದ್ಧ ಗೌರವವನ್ನು ಹೇಗೆ ತೋರಿಸಬಲ್ಲರು?
15 ನಾವು ಸುವಾರ್ತೆಯಲ್ಲಿ ಯಾರೊಂದಿಗೆ ಭಾಗಿಗಳಾಗುತ್ತೇವೋ ಅಂಥವರಿಗೆ ನಿಜ ಗೌರವವನ್ನು ತೋರಿಸುವ ಮೂಲಕ ಅವರು ಬೈಬಲಿನ ಸಂದೇಶವನ್ನು ಅಂಗೀಕರಿಸುವುದನ್ನು ಹೆಚ್ಚು ಸುಲಭ ಮಾಡುವುದು ನಿಶ್ಚಯ. ಒಬ್ಬ ಮಿಷನೆರಿ ಸೌವಾರ್ತಿಕನು, ತಾನು ಸಹಾಯ ಮಾಡಲು ನೇಮಿಸಲ್ಪಟ್ಟಿರುವ ಜನರ ಮಧ್ಯೆ ಜೀವಿಸಲು ಸಂತೋಷಿಸುತ್ತಾನೆಂದು ತೋರಿಸುವಾಗಲೂ ಸಹಾಯ ದೊರೆಯುತ್ತದೆ. ಆಫ್ರಿಕದಲ್ಲಿ ಕಳೆದ 38 ವರ್ಷಕಾಲ ಕಳೆದಿರುವ ಒಬ್ಬ ಸಾಫಲ್ಯ ಪಡೆದಿರುವ ಮಿಷನೆರಿ ವಿವರಿಸುವುದು: “ನನ್ನೊಳಗಿನ ಆಳದಲ್ಲಿ ಇದೇ ನನ್ನ ಮನೆ ಎಂದೂ ನಾನು ನೇಮಿಸಲ್ಪಟ್ಟಿರುವ ಸಭೆಯಲ್ಲಿರುವವರು ನನ್ನ ಸಹೋದರ, ಸಹೋದರಿಯರೆಂದೂ ನಾನೆಣಿಸುತ್ತೇನೆ. ನಾನು ರಜೆಯಲ್ಲಿ ಕೆನಡಕ್ಕೆ ಹಿಂದೆ ಹೋಗುವಾಗ ನಿಜವಾಗಿಯೂ ಆರಾಮವಾಗಿರುವುದಿಲ್ಲ. ಕೆನಡದಲ್ಲಿ ಕಳೆಯುವ ಕೊನೆಯ ಒಂದೆರಡು ವಾರಗಳಲ್ಲಿ, ನಾನು ಹಿಂದೆ ಹೋಗಲು ಹಾತೊರೆಯುತ್ತಿರುತ್ತೇನೆ. ನನಗೆ ಯಾವಾಗಲೂ ಹೀಗೆಯೆ ಅನಿಸುತ್ತದೆ. ನಾನು ನನ್ನ ಬೈಬಲ್ ವಿದ್ಯಾರ್ಥಿಗಳಿಗೆ ಮತ್ತು ಸಹೋದರ, ಸಹೋದರಿಯರಿಗೆ, ನನಗೆ ಹಿಂದೆ ಬರಲು ಎಷ್ಟು ಸಂತೋಷ ಎಂದು ಹೇಳುವಾಗ ನನಗೆ ಅವರೊಂದಿಗಿರಲು ಬಯಕೆಯಿದೆ ಎಂಬುದನ್ನು ಅವರು ಗಣ್ಯ ಮಾಡುತ್ತಾರೆ.”—1 ಥೆಸಲೊನೀಕ 2:8.
16, 17. (ಎ) ಅನೇಕ ಮಿಷನೆರಿಗಳು ಮತ್ತು ಸ್ಥಳೀಕ ಸೌವಾರ್ತಿಕರು ತಮ್ಮ ಶುಶ್ರೂಷೆಯಲ್ಲಿ ಹೆಚ್ಚು ಕಾರ್ಯಸಾಧಕವಾಗುವಂತೆ ಯಾವ ಪಂಥಾಹ್ವಾನವನ್ನು ಅಂಗೀಕರಿಸಿದ್ದಾರೆ? (ಬಿ) ಸ್ಥಳೀಕ ಭಾಷೆಯಲ್ಲಿ ಮಾತಾಡಿದ ಕಾರಣ ಒಬ್ಬ ಮಿಷನೆರಿಗೆ ಯಾವ ಅನುಭವವಾಯಿತು?
16 ತಮ್ಮ ಸ್ಥಳೀಕ ಟೆರಿಟೊರಿಯಲ್ಲಿ ಒಂದು ದೊಡ್ಡ ಪರಭಾಷೆಯ ವಿಭಾಗವಿದೆಯೆಂದು ಕಂಡುಹಿಡಿದಾಗ, ಕೆಲವರು ಆ ಭಾಷೆಯನ್ನು ಕಲಿಯ ಪ್ರಯತ್ನಿಸಿ, ಹೀಗೆ ಇತರರು ತಮಗಿಂತ ಶ್ರೇಷ್ಠರು ಎಂದು ತೋರಿಸಿದ್ದಾರೆ. ಒಬ್ಬ ಮಿಷನೆರಿ ಗಮನಿಸುವುದು: “ಆಫ್ರಿಕದ ದಕ್ಷಿಣ ಭಾಗದಲ್ಲಿ ಕೆಲವು ಸಲ ಆಫ್ರಿಕನ್ ಮತ್ತು ಯೂರೋಪಿಯನ್ ಹಿನ್ನೆಲೆಗಳ ಜನರ ಮಧ್ಯೆ ಅವಿಶ್ವಾಸದ ಅನಿಸಿಕೆ ಇರುತ್ತದೆ. ಆದರೆ ಸ್ಥಳೀಕ ಭಾಷೆಯಲ್ಲಿ ನಮ್ಮ ಮಾತನಾಡುವಿಕೆ, ಈ ಅನಿಸಿಕೆಯನ್ನು ಬೇಗನೇ ಹೋಗಲಾಡಿಸುತ್ತದೆ.” ಯಾರೊಂದಿಗೆ ಸುವಾರ್ತೆಯಲ್ಲಿ ಭಾಗಿಗಳಾಗುತ್ತೇವೋ ಅವರ ಭಾಷೆಯನ್ನು ಆಡಲು ಕಲಿಯುವುದು ಅವರ ಹೃದಯ ತಲುಪಲು ಮಹಾ ಸಹಾಯಕ. ಇದಕ್ಕೆ ಶ್ರಮದ ಕೆಲಸ ಮತ್ತು ನಮ್ರ ಪಟ್ಟು ಹಿಡಿಯುವಿಕೆ ಅಗತ್ಯ. ಏಸ್ಯದ ಒಂದು ದೇಶದ ಮಿಷನೆರಿಯೊಬ್ಬನು ಹೇಳುವುದು: “ನೀವು ಮಾಡುವ ತಪ್ಪುಗಳ ಕಾರಣ ಸದಾ ನಗೆಗೀಡಾಗುವಾಗಲೂ ತಪ್ಪು ಮಾಡುತ್ತಾ ಮುಂದುವರಿಯುವುದು ನಮಗೆ ಒಂದು ಪರೀಕೆಯ್ಷಾಗಿರಬಲ್ಲದು. ಕಲಿಯುವುದನ್ನು ಬಿಟ್ಟು ಬಿಡುವುದು ಸುಲಭವಾಗಿ ತೋರಬಹುದು.” ಆದರೆ, ದೇವರ ಮತ್ತು ನೆರೆಯವನ ಮೇಲಿನ ಪ್ರೀತಿ, ಈ ಮಿಷನೆರಿಯು ಕೆಲಸವನ್ನು ಸಾಧಿಸುವಂತೆ ಸಹಾಯ ಮಾಡಿತು.—ಮಾರ್ಕ 12:30, 31.
17 ಒಬ್ಬ ವಿದೇಶಿಯು ತಮ್ಮ ಭಾಷೆಯಲ್ಲಿ ಸುವಾರ್ತೆಯಲ್ಲಿ ಪಾಲಿಗನಾಗುವುದನ್ನು ನೋಡುವಾಗ, ಜನರ ಮೇಲೆ ಸಕಾರಾತ್ಮಕ ಪ್ರಭಾವ ಬೀಳುವುದು ಗ್ರಹಿಸಸಾಧ್ಯವಿರುವ ವಿಷಯ. ಹಲವು ಬಾರಿ ಇದರಿಂದ ಅನಿರೀಕ್ಷಿತ ಆಶೀರ್ವಾದ ಬರುತ್ತದೆ. ಲಿಸಾತೊ ಎಂಬ ಆಫ್ರಿಕನ್ ದೇಶದಲ್ಲಿ ಒಬ್ಬ ಮಿಷನೆರಿ ಸಿಸುಟು ಭಾಷೆಯಲ್ಲಿ ಚಿತ್ರ ನೆಯ್ದ ಬಟ್ಟೆಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇನ್ನೊಬ್ಬ ಸ್ತ್ರೀಯೊಂದಿಗೆ ಮಾತಾಡುತ್ತಿದ್ದಳು. ಆಫ್ರಿಕದ ಇನ್ನೊಂದು ದೇಶದ ಸರಕಾರದ ಮಂತ್ರಿ ಆ ಅಂಗಡಿಯನ್ನು ಭೇಟಿಮಾಡುತ್ತಿದ್ದು, ಅವಳ ಮಾತಾಡುವುದನ್ನು ಕೇಳಿದನು. ಅವನು ಅವಳ ಬಳಿಗೆ ಬಂದು ಅವಳನ್ನು ಆದರದಿಂದ ಪ್ರಶಂಸಿಸಿದನು. ಆಗ ಅವಳು ಆ ಸರಕಾರೀ ಮಂತ್ರಿಗೆ ಅವನ ಸ್ವಂತ ಭಾಷೆಯಲ್ಲಿ ಮಾತಾಡತೊಡಗಿದಳು. “ನಿನಗೆ ಸಾಹ್ವೀಲಿ ಭಾಷೆ ಗೊತ್ತಿರುವುದರಿಂದ ನೀನು [ನನ್ನ ದೇಶಕ್ಕೆ] ಸಹ ಬಂದು ನಮ್ಮ ಜನರ ಮಧ್ಯೆ ಯಾಕೆ ಕೆಲಸ ಮಾಡುವುದಿಲ್ಲ?” ಎಂದು ಅವನು ಕೇಳಿದನು. ಆಗ ಮಿಷನೆರಿಯು ಸಮಯೋಚಿತ ನಯದಿಂದ, “ಅದು ಒಳ್ಳೆಯದೆ. ಆದರೆ ನಾನೊಬ್ಬ ಯೆಹೋವನ ಸಾಕ್ಷಿ, ಮತ್ತು ಈಗ ನಿಮ್ಮ ದೇಶದಲ್ಲಿ ನಮ್ಮ ಕೆಲಸಕ್ಕೆ ನಿಷೇಧವಿದೆ” ಎಂದಳು. “ನಿಮ್ಮ ಕೆಲಸವನ್ನು ಎಲ್ಲರೂ ವಿರೋಧಿಸುತ್ತಾರೆಂದು ದಯವಿಟ್ಟು ಎಣಿಸಬೇಡ. ನಮ್ಮಲ್ಲಿ ಅನೇಕರು ಯೆಹೋವನ ಸಾಕ್ಷಿಗಳಿಗೆ ಅನುಕೂಲ ಮನೋಭಾವದವರಾಗಿದ್ದೇವೆ. ಪ್ರಾಯಶಃ ಒಂದು ದಿನ, ನೀವು ನಿರ್ಬಂಧವಿಲ್ಲದೆ ನಮ್ಮ ಜನರ ಮಧ್ಯೆ ಕಲಿಸಶಕ್ತರಾಗುವಿರಿ,” ಎಂದು ಅವನು ಉತ್ತರಕೊಟ್ಟನು. ಸ್ವಲ್ಪ ಸಮಯಾನಂತರ, ಯೆಹೋವನ ಸಾಕ್ಷಿಗಳಿಗೆ ಅದೇ ದೇಶದಲ್ಲಿ ಆರಾಧನಾ ಸ್ವಾತಂತ್ರ್ಯ ದೊರಕಿದೆ ಎಂದು ತಿಳಿಯಲು ಆ ಮಿಷನೆರಿಯು ರೋಮಾಂಚಗೊಂಡಳು.
ಹಕ್ಕುಗಳನ್ನು ವರ್ಜಿಸಲು ಇಷ್ಟಪಡುವುದು
18, 19. (ಎ) ಪೌಲನು ತನ್ನ ಧಣಿಯಾದ ಯೇಸು ಕ್ರಿಸ್ತನನ್ನು ಅನುಕರಿಸಲು ಯಾವ ಪ್ರಾಮುಖ್ಯ ವಿಧದಲ್ಲಿ ಪ್ರಯಾಸಪಟ್ಟನು? (ಬಿ) ನಾವು ಸುವಾರ್ತೆಯಲ್ಲಿ ಪಾಲಿಗರಾಗುವವರು ಮುಗ್ಗರಿಸಿ ಬೀಳಲು ಯಾವ ಕಾರಣವನ್ನೂ ಕೊಡುವುದನ್ನು ತಪ್ಪಿಸುವ ಪ್ರಾಮುಖ್ಯತೆಯನ್ನು ತೋರಿಸುವ ಒಂದು ಅನುಭವ (ಪ್ಯಾರಗ್ರಾಫ್ನಲ್ಲಿ ಇರುವುದಾಗಲಿ, ನಿಮ್ಮದೇ ಆಗಲಿ) ವನ್ನು ಹೇಳಿರಿ.
18 “ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ,” ಎಂದು ಅಪೊಸ್ತಲ ಪೌಲನು ಬರೆದಾಗ, ಅವನು ಆಗ ತಾನೇ ಇತರರನ್ನು ಮುಗ್ಗರಿಸುವುದನ್ನು ತಪ್ಪಿಸುವ ಆವಶ್ಯಕತೆಯ ಕುರಿತು ಮಾತಾಡುತ್ತಿದ್ದನು. ಅವನಂದದ್ದು: “ನೀವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ. ಯೆಹೂದ್ಯರಿಗಾಗಲಿ ಗ್ರೀಕರಿಗಾಗಲಿ ದೇವರ ಸಭೆಗಾಗಲಿ ವಿಘ್ನವಾಗಬೇಡಿರಿ. ನಾನಂತೂ ಸ್ವಪ್ರಯೇಜನಕ್ಕಾಗಿ ಚಿಂತಿಸದೆ ಮನುಷ್ಯರೆಲ್ಲರೂ ರಕ್ಷಣೆಹೊಂದಬೇಕೆಂದು ಅವರ ಪ್ರಯೋಜನಕ್ಕಾಗಿ ಚಿಂತಿಸಿ ಎಲ್ಲರನ್ನೂ ಎಲ್ಲಾ ವಿಷಯಗಳಲ್ಲಿ ಮೆಚ್ಚಿಸುವವನಾಗಿದ್ದೇನೆ.”—1 ಕೊರಿಂಥ 10:31-33; 11:1.
19 ತಾವು ಯಾರಿಗೆ ಸಾರುತ್ತೇವೊ ಅವರ ಪ್ರಯೋಜನಕ್ಕಾಗಿ ತ್ಯಾಗ ಮಾಡಲು ಬಯಸುವ ಪೌಲನಂಥ ಸೌವಾರ್ತಿಕರು ಆಶೀರ್ವಾದಗಳನ್ನು ಕೊಯ್ಯುತ್ತಾರೆ. ಉದಾಹರಣೆಗೆ, ಒಂದು ಆಫ್ರಿಕನ್ ದೇಶದಲ್ಲಿ ಒಬ್ಬ ಮಿಷನೆರಿ ದಂಪತಿಗಳು ತಮ್ಮ ವಿವಾಹದ ವಾರ್ಷಿಕೋತ್ಸವವನ್ನು ಆಚರಿಸುವಾಗ ಊಟಕ್ಕಾಗಿ ಸ್ಥಳೀಕ ಹೋಟೆಲಿಗೆ ಹೋದರು. ಮದ್ಯ ಪಾನೀಯಗಳ ಮಿತವಾದ ಉಪಯೋಗವನ್ನು ಬೈಬಲು ಖಂಡಿಸದ ಕಾರಣ, ಪ್ರಥಮವಾಗಿ, ಊಟದೊಂದಿಗೆ ದ್ರಾಕ್ಷಾಮದ್ಯವನ್ನು ಆರ್ಡರ್ ಮಾಡಲು ಅವರು ಉದ್ದೇಶಿಸಿದ್ದರು. (ಕೀರ್ತನೆ 104:15) ಆದರೆ ಸ್ಥಳೀಕ ಜನರನ್ನು ಅದು ನೋಯಿಸಬಹುದೆಂಬ ಕಾರಣ ಹಾಗೆ ಮಾಡದೆ ಇರಲು ನಿರ್ಧರಿಸಿದರು. ಗಂಡನು ನೆನಪಿಸಿಕೊಳ್ಳುವುದು: “ಸ್ವಲ್ಪ ಸಮಯಾನಂತರ, ನಾವು ಆ ಹೋಟೆಲಿನ ಅಡುಗೆಯವನಾಗಿದ್ದ ಒಬ್ಬ ಪುರುಷನನ್ನು ಭೇಟಿಯಾಗಿ, ಅವನೊಂದಿಗೆ ಒಂದು ಬೈಬಲ್ ಅಧ್ಯಯನವನ್ನು ಪ್ರಾರಂಭಿಸಿದೆವು. ಬಹಳ ಸಮಯದ ನಂತರ ಅವನು ನಮಗೆ ಹೇಳಿದ್ದು: ‘ನೀವು ಹೋಟೆಲಿಗೆ ಊಟಕ್ಕೆ ಬಂದದ್ದು ನೆನಪಿದೆಯೆ? ನಾವೆಲ್ಲ ಅಡುಗೆ ಮನೆಯ ಬಾಗಿಲ ಹಿಂದೆ ನಿಮ್ಮನ್ನು ನೋಡುತ್ತಿದ್ದೆವು. ನೋಡಿ, ಚರ್ಚ್ ಮಿಷನೆರಿಗಳು ಕುಡಿಯುವುದು ತಪ್ಪೆಂದು ನಮಗೆ ಹೇಳಿದರು. ಆದರೆ ಅವರು ಹೋಟೆಲಿಗೆ ಬರುವಾಗ ನಿರಾತಂಕವಾಗಿ ದ್ರಾಕ್ಷಾಮದ್ಯಕ್ಕೆ ಆರ್ಡರ್ ಮಾಡುತ್ತಾರೆ. ನೀವೂ ಹಾಗೆ ಮಾಡುವುದಾದರೆ, ನಮಗೆ ಸಾರಲು ಬರುವಾಗ ನಾವು ನಿಮಗೆ ಕಿವಿ ಕೊಡೆವು ಎಂದು ನಿರ್ಧರಿಸಿದೆವು.’” ಇಂದು, ಆ ಅಡುಗೆಯವನು ಮತ್ತು ಆ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದ ಇನ್ನು ಕೆಲವರು ಸ್ನಾತ ಸಾಕ್ಷಿಗಳು.
ಇನ್ನೂ ಧಾರಾಳ ಮಾಡಲಿಕ್ಕಿದೆ
20. ಹುರುಪಿನ ಸೌವಾರ್ತಿಕರಾಗಿ ತಾಳುವುದು ಏಕೆ ಮಹತ್ವದ್ದು, ಮತ್ತು ಯಾವ ಸಂತೋಷಕರ ಸುಯೋಗಗಳನ್ನು ಅನೇಕರು ಸ್ವಾಧೀನ ಮಾಡಿಕೊಳ್ಳುತ್ತಿದ್ದಾರೆ?
20 ಈ ದುಷ್ಟ ವ್ಯವಸ್ಥೆಯ ಅಂತ್ಯ ವೇಗದಲ್ಲಿ ಸಮೀಪಿಸುವಾಗ, ಅನೇಕರು ಇನ್ನೂ ಸುವಾರ್ತೆ ಕೇಳಲು ಹಂಬಲಿಸುತ್ತಾರೆ. ಮತ್ತು ನಂಬಿಗಸ್ತ ಸೌವಾರ್ತಿಕನಾಗಿ ಪ್ರತಿಯೊಬ್ಬ ಕ್ರೈಸ್ತನು ತಾಳಿಕೊಳ್ಳುವುದು ಈಗ ಹಿಂದೆಂದಿಗಿಂತಲೂ ಹೆಚ್ಚು ಜರೂರಿಯದ್ದು. (ಮತ್ತಾಯ 24:13) ನೀವು ಫಿಲಿಪ್, ಪೌಲ, ಬಾರ್ನಬ, ಸೀಲ ಮತ್ತು ತಿಮೊಥೆಯನಂತೆ, ವಿಶೇಷಾರ್ಥದಲ್ಲಿ ಸೌವಾರ್ತಿಕರಾಗಿ ಈ ಕೆಲಸದಲ್ಲಿ ನಿಮ್ಮ ಪಾಲನ್ನು ವಿಸ್ತರಿಸಬಲ್ಲಿರೊ? ಅನೇಕರು ಪಯನೀಯರ್ ಪಂಕ್ತಿಗೆ ಸೇರಿ, ಹೆಚ್ಚು ಅಗತ್ಯವಿರುವ ಸ್ಥಳಗಳಲ್ಲಿ ಸೇವೆಮಾಡಲು ತಮ್ಮನ್ನು ದೊರಕಿಸಿಕೊಂಡು ಇದಕ್ಕೆ ಸದೃಶವಾದುದನ್ನು ಮಾಡುತ್ತಿದ್ದಾರೆ.
21. ಯೆಹೋವನ ಜನರಿಗೆ ಯಾವ ರೀತಿಯಲ್ಲಿ “ಕಾರ್ಯಕ್ಕೆ ಅನುಕೂಲವಾದ ಮಹಾಸಂದರ್ಭವು” ತೆರೆಯಲ್ಪಟ್ಟಿರುತ್ತದೆ?
21 ಇತ್ತೀಚೆಗೆ, ಸುವಾರ್ತಾ ಕೆಲಸಕ್ಕೆ ವಿಸ್ತಾರವಾದ ಬಯಲುಗಳು, ಈ ಮೊದಲು ಯೆಹೋವನ ಸಾಕ್ಷಿಗಳ ಕೆಲಸಕ್ಕೆ ನಿರ್ಬಂಧಗಳಿದ್ದ ಆಫ್ರಿಕ, ಏಸ್ಯ, ಮತ್ತು ಪೂರ್ವ ಯೂರೋಪಿನ ದೇಶಗಳಲ್ಲಿ ತೆರೆದಿವೆ. ಅಪೊಸ್ತಲ ಪೌಲನಿಗಿದ್ದಂತೆಯೆ, “ಕಾರ್ಯಕ್ಕೆ ಅನುಕೂಲವಾದ ಮಹಾ ಸಂದರ್ಭವು” ಯೆಹೋವನ ಜನರಿಗುಂಟು. (1 ಕೊರಿಂಥ 16:9) ಉದಾಹರಣೆಗೆ, ಆಫ್ರಿಕದ ಮೋಸಂಬೀಕ್ ದೇಶದಲ್ಲಿ ಇತ್ತೀಚೆಗೆ ಬಂದ ಮಿಷನೆರಿ ಸೌವಾರ್ತಿಕರಿಗೆ, ಬಯಸುವ ಜನರಿಗೆಲ್ಲ ಬೈಬಲ್ ಅಧ್ಯಯನ ಮಾಡಲು ಸಮಯವಿಲ್ಲ. ಆ ದೇಶದಲ್ಲಿ ಫೆಬ್ರುಅರಿ 11, 1991 ರಲ್ಲಿ ಯೆಹೋವನ ಸಾಕ್ಷಿಗಳ ಕೆಲಸವು ಶಾಸನಬದ್ಧವಾಯಿತೆಂದು ತಿಳಿಯಲು ನಾವೆಷ್ಟು ಆನಂದವುಳ್ಳವರು!
22. ನಮ್ಮ ಸ್ಥಳೀಕ ಟೆರಿಟೊರಿ ಚೆನ್ನಾಗಿ ಸೇವೆ ಮಾಡಲ್ಪಟ್ಟದ್ದಾಗಿರಲಿ, ಇಲ್ಲದಿರಲಿ, ನಾವೆಲ್ಲರೂ ಯಾವ ದೃಢನಿರ್ಧಾರ ಮಾಡತಕ್ಕದ್ದು?
22 ಯಾವಾಗಲೂ ಆರಾಧನಾ ಸ್ವಾತಂತ್ರ್ಯವಿದ್ದ ದೇಶಗಳಲ್ಲಿ ಸಹ ನಮ್ಮ ಸಹೋದರರು ಮುಂದುವರಿಯುತ್ತಿರುವ ಅಭಿವೃದ್ಧಿಗಳಲ್ಲಿ ಆನಂದಿಸುತ್ತಿದ್ದಾರೆ. ಹೌದು, ನಾವೆಲ್ಲಿಯೇ ಜೀವಿಸಲಿ, “ಕರ್ತನ ಕೆಲಸದಲ್ಲಿ ಮಾಡಲು ಬೇಕಾದಷ್ಟಿದೆ.” (1 ಕೊರಿಂಥ 15:58, NW) ವಿಷಯವು ಹೀಗಿರುವುದರಿಂದ, ‘ಸೌವಾರ್ತಿಕನ ಕೆಲಸವನ್ನು ಮಾಡಿ, ನಮ್ಮ ಶುಶ್ರೂಷೆಯನ್ನು ಪೂರ್ತಿಯಾಗಿ ನೆರವೇರಿಸುವಾಗ’ ಉಳಿದ ಸಮಯವನ್ನು ನಾವು ವಿವೇಕದಿಂದ ಉಪಯೋಗಿಸುತ್ತಾ ಮುಂದುವರಿಯೋಣ.—2 ತಿಮೊಥೆಯ 4:5; ಎಫೆಸ 5:15, 16.
ನೀವು ವಿವರಿಸಬಲ್ಲಿರೊ?
▫ ಸೌವಾರ್ತಿಕನೆಂದರೆ ಏನು?
▫ ಸುವಾರ್ತೆಯ ಒಳಹುರುಳು 1914 ರ ಅನಂತರ ಅಭಿವೃದ್ಧಿಗೊಂಡದ್ದು ಹೇಗೆ?
▫ ಸುವಾರ್ತಾ ಕೆಲಸವು 1919 ರಿಂದ ಹೇಗೆ ಪ್ರಗತಿಹೊಂದಿದೆ?
▫ ಸುವಾರ್ತೆ ಸಾರುವ ಕೆಲಸದ ಯಶಸ್ಸಿಗೆ ಯಾವ ಮುಖ್ಯ ಸಂಗತಿಗಳು ಸಹಾಯ ಮಾಡಿವೆ?
[ಪುಟ 19 ರಲ್ಲಿರುವ ಚೌಕ]
ವಿಸ್ತರಣೆ 1939 ರಿಂದ
ಗಿಲ್ಯಾದಿನಲ್ಲಿ ತರಬೇತು ಹೊಂದಿ ಕಳುಹಿಸಲ್ಪಟ್ಟ ಮಿಷನೆರಿಗಳ ಮೂರು ಭೂಖಂಡಗಳ ದೃಷ್ಟಾಂತಗಳನ್ನು ಪರಿಗಣಿಸಿರಿ. ಪಶ್ಚಿಮ ಆಫ್ರಿಕದಿಂದ ಕೇವಲ 636 ರಾಜ್ಯ ಘೋಷಕರು 1939 ರಲ್ಲಿ ವರದಿ ಮಾಡಿದರು. ಈ ಸಂಖ್ಯೆ, 1991 ರೊಳಗೆ, ಪಶ್ಚಿಮ ಆಫ್ರಿಕದ 12 ದೇಶಗಳಲ್ಲಿ 2,00,000 ಕ್ಕೂ ಮಿಕ್ಕಿ ಹೋಗಿತ್ತು. ದಕ್ಷಿಣ ಅಮೆರಿಕದ ದೇಶಗಳಲ್ಲಿ ಸಹ ಮಿಷನೆರಿಗಳು ಅಸಾಧಾರಣ ಅಭಿವೃದ್ಧಿಗೆ ಸಹಾಯ ಮಾಡಿದ್ದಾರೆ. ಇವುಗಳಲ್ಲಿ ಒಂದು ಬ್ರೆಸೀಲ್ ದೇಶ. ಇಲ್ಲಿ 1939 ರಲ್ಲಿ ಇದ್ದ 114 ರಾಜ್ಯ ಘೋಷಕರು ಏಪ್ರಿಲ್ 1992 ರಲ್ಲಿ 3,35,039 ಕ್ಕೆ ಏರಿದ್ದಾರೆ. ಏಸ್ಯದ ದೇಶಗಳಲ್ಲಿ ಮಿಷನೆರಿಗಳ ಆಗಮನವನ್ನು ಅನುಸರಿಸಿ ಇದೇ ರೀತಿಯ ಬೆಳವಣಿಗೆ ನಡೆದಿದೆ. ದ್ವಿತೀಯ ಲೋಕ ಯುದ್ಧ ಕಾಲದಲ್ಲಿ, ಜಪಾನಿನಲ್ಲಿದ್ದ ಚಿಕ್ಕ ಸಂಖ್ಯೆಯ ಯೆಹೋವನ ಸಾಕ್ಷಿಗಳು ಕಠಿಣವಾಗಿ ಹಿಂಸೆಗೊಳಗಾಗಿ, ಅವರ ಕೆಲಸ ನಿಲುಗಡೆಗೆ ಬಂದಿತು. ಆ ಬಳಿಕ, 1949 ರಲ್ಲಿ, ಕೆಲಸವನ್ನು ಪುನಃಸ್ಥಾಪಿಸಲಿಕ್ಕಾಗಿ 13 ಮಿಷನೆರಿಗಳು ಬಂದರು. ಆ ಸೇವಾ ವರ್ಷದಲ್ಲಿ ಇಡೀ ಜಪಾನಿನಲ್ಲಿ ಹತ್ತಕ್ಕೂ ಕಡಮೆ ದೇಶೀ ಪ್ರಚಾರಕರು ಕ್ಷೇತ್ರ ಸೇವೆಯ ವರದಿ ಮಾಡಿದರು. ಆದರೆ 1992 ರ ಏಪ್ರಿಲಿನಲ್ಲಿ ಪ್ರಚಾರಕರ ಒಟ್ಟು ಮೊತ್ತ 1,67,370 ಕ್ಕೆ ಏರಿತು.
[ಪುಟ 21 ರಲ್ಲಿರುವ ಚೌಕ]
ಕ್ರೈಸ್ತಪ್ರಪಂಚ ಮತ್ತು ಭಾಷಾ ಸಮಸ್ಯೆ
ಕ್ರೈಸ್ತಪ್ರಪಂಚದ ಕೆಲವು ಮಿಷನೆರಿಗಳು ಪರಭಾಷೆಯನ್ನು ಕಲಿಯಲು ಶ್ರದ್ಧಾಪೂರ್ವಕವಾದ ಪ್ರಯತ್ನವನ್ನು ಮಾಡಿದರೂ, ಅನೇಕರು ಸ್ಥಳೀಕರು ತಮ್ಮ ಯೂರೋಪಿಯನ್ ಭಾಷೆಯನ್ನಾಡಬೇಕೆಂದು ಬಯಸಿದರು. ಜೊಫ್ರಿ ಮೋರ್ಹಾಸ್ ದ ಮಿಷನೆರೀಸ್ ಎಂಬ ತನ್ನ ಪುಸ್ತಕದಲ್ಲಿ ವಿವರಿಸುವುದು:
“ಒಂದು ದೇಶ ಭಾಷೆಯ ಅರ್ಜನೆಯನ್ನು ಅದು ಶಾಸ್ತ್ರವನ್ನು ಭಾಷಾಂತರಿಸುವ ಮಾಧ್ಯಮಕ್ಕಿಂತ ಹೆಚ್ಚಲ್ಲ ಎಂಬ ವಿಧದಲ್ಲಿ ತೀರಾ ಅಡಿಗಡಿಗೆ ನೋಡಲಾಗುತ್ತಿದ್ದದ್ದೆ ಸಮಸ್ಯೆಯಾಗಿತ್ತು. ಮಿಷನೆರಿಯು ನಾಡಿಗನಿಗೆ ಅವನ ಸ್ವಂತ ಭಾಷೆಯಲ್ಲಿ, ಯಾವುದು ಮಾತ್ರ ಇಬ್ಬರು ಮಾನವರ ಮಧ್ಯೆ ಆಳವಾದ ತಿಳಿವಳಿಕೆಯನ್ನು ಉಂಟುಮಾಡಬಲ್ಲದೋ ಆ ವಾಗ್ಝರಿಯಿಂದ ಮಾತಾಡುವಂತೆ ವ್ಯಕ್ತಿಗಳಾಗಲಿ, ಅವುಗಳನ್ನು ಕೆಲಸಕ್ಕೆ ಹಿಡಿದಿರುವ ಸೊಸೈಟಿಗಳಾಗಲಿ ತುಲನಾತ್ಮಕವಾಗಿ ಅತಿ ಕಡಮೆ ಪ್ರಯತ್ನವನ್ನು ಮಾಡಿದವು. ಪ್ರತಿ ಮಿಷನೆರಿಯು ಸ್ಥಳೀಕ ಶಬ್ದಕೋಶದ ಕೆಲವು ಪದಗಳನ್ನು ಕಲಿಯುತ್ತಿದ್ದನು . . . ಇದಕ್ಕೆ ಹೊರತಾಗಿ, ಮಾತು ಸಂಪರ್ಕವು ಸಾಮಾನ್ಯವಾಗಿ ಪಿಡ್ಜಿನ್ ಇಂಗ್ಲಿಷ್ ಎಂದು ಕರೆಯಲ್ಪಡುವ ಭಾಷೆಯ ಗಾಬರಿಗೊಳಿಸುವ ಮತ್ತು ಅಸಂಗತ ಏರಿಳಿತಗಳಿಂದ, ಆಫ್ರಿಕದ ನಾಡಿಗನು ಇಂಗ್ಲಿಷ್ ಭೇಟಿಗಾರನ ಭಾಷೆಗೆ ಅಧೀನನಾಗಿರಬೇಕೆಂಬ ಧ್ವನಿತ ಭಾವನೆಯಿಂದ ಮಾಡಲ್ಪಡುತ್ತಿತ್ತು. ತೀರ ಕೆಟ್ಟದ್ದಾಗಿರುವಲ್ಲಿ, ಇದು ಕುಲ ಶ್ರೇಷ್ಠತೆಯ ಇನ್ನೊಂದು ಪ್ರದರ್ಶನವಾಗಿತ್ತು.”
ಲಂಡನಿನ ಸ್ಕೂಲ್ ಆಫ್ ಒರಿಯಂಟಲ್ ಆ್ಯಂಡ್ ಆಫ್ರಿಕನ್ ಸಡ್ಟೀಸ್, 1922 ರಲ್ಲಿ ಭಾಷಾ ಸಮಸ್ಯೆಯ ಒಂದು ವರದಿಯನ್ನು ಪ್ರಕಟಿಸಿತು. ಆ ವರದಿ ಹೇಳಿದ್ದು: “ನಮ್ಮ ಅಭಿಪ್ರಾಯವೇನಂದರೆ ದೇಶಭಾಷೆಗಳಲ್ಲಿ ಮಿಷನೆರಿಗಳು ಪಡೆದಿರುವ ಸಾಮರ್ಥ್ಯದ ಸರಾಸರಿ ಮಟ್ಟ . . . ವಿಷಾದಕರವಾಗಿ ಮತ್ತು ಅಪಾಯಕರವಾಗಿಯೂ ಕೀಳೆರ್ತದ್ದು.”
ವಾಚ್ಟವರ್ ಸೊಸೈಟಿಯ ಮಿಷನೆರಿಗಳು ಸ್ಥಳೀಕ ಭಾಷೆಯನ್ನು ಕಲಿಯುವುದು ಯಾವಾಗಲೂ ಅವಶ್ಯವೆಂದು ಎಣಿಸಿದ್ದಾರೆ. ಇದು ಮಿಷನೆರಿ ಕ್ಷೇತ್ರದಲ್ಲಿ ಅವರ ಯಶಸ್ಸನ್ನು ವಿವರಿಸಲು ಸಹಾಯಕವಾಗಿದೆ.