ನಿಷೇಧದ ಕೆಳಗೆ ದೇವರು ನಮ್ಮನ್ನು ಪರಾಮರಿಸಿದನು—ಭಾಗ 1
ದಶಮಾನಗಳಿಂದ ಯೆಹೋವನ ಸಾಕ್ಷಿಗಳು ಎಲ್ಲಿ ಅವರ ಕ್ರೈಸ್ತ ಚಟುವಟಿಕೆಗಳು ನಿರ್ಬಂಧಿಸಲ್ಪಟ್ಟಿದೆಯೇ ಆ ದೇಶಗಳಲ್ಲಿರುವ ತಮ್ಮ ಸಹೋದರರ ಕುರಿತು ಯೋಚಿಸಿರುತ್ತಾರೆ. ಏನು ಸಂಭವಿಸಿತ್ತೋ ಅವುಗಳಲ್ಲಿ ಕೆಲವನ್ನು ಪ್ರಕಟಿಸುವ ಮೊದಲನೆಯ ಮೂರು ಲೇಖನಗಳನ್ನು ನಾವು ನೀಡಲು ಸಂತೋಷಿಸುತ್ತೇವೆ. ಇವು ಆವಾಗ ಪೂರ್ವ ಜರ್ಮನಿಯೆಂದು ಪ್ರಸಿದ್ಧವಾಗಿದ್ದ ದೇಶದ ನಂಬಿಗಸ್ತ ಕ್ರೈಸ್ತರ ವೈಯಕ್ತಿಕ ವೃತ್ತಾಂತಗಳು.
ನಾನು 1944 ರಲ್ಲಿ, ಯುದ್ಧ ಕೈದಿಯಾಗಿದ್ದು ಸ್ಕಾಟ್ಲೆಂಡ್ನ ಏಯರ್ ಸಮೀಪದ ಕಮ್ನಕ್ ಶಿಬಿರದಲ್ಲಿ ಆಸ್ಪತ್ರೆ ಪರಿಚಾರಕನಾಗಿ ಕೆಲಸಮಾಡುತ್ತಿದ್ದೆನು. ಶಿಬಿರದ ಹೊರಗೆ ಹೋಗಲು ನನಗೆ ಅನುಮತಿ ಇತ್ತು, ಆದರೂ ಸ್ಥಳೀಕ ಜನರೊಂದಿಗೆ ಜೊತೆಗೂಡುವಿಕೆಯು ನಿರ್ಬಂಧಿಸಲ್ಪಟ್ಟಿತ್ತು. ಒಂದು ಭಾನುವಾರ ನಾನು ತಿರುಗಾಟಕ್ಕೆ ಹೋದಾಗ, ಬೈಬಲ್ನಿಂದ ವಿಷಯಗಳನ್ನು ನನಗೆ ವಿವರಿಸಲು ಯಥಾರ್ಥ ಪ್ರಯತ್ನಮಾಡಿದ ಒಬ್ಬ ಮನುಷ್ಯನು ನನಗೆ ಭೇಟಿಯಾದನು. ಅನಂತರ ನಾವು ಆಗಿಂದಾಗ್ಯೆ ಒಟ್ಟುಗೂಡಿ ಅಡ್ಡಾಡುತ್ತಿದೆವ್ದು.
ಸಮಯಾನಂತರ ಅವನು ನನ್ನನ್ನು ಒಂದು ಮನೆಯಲ್ಲಿ ಕೂಟಕ್ಕೆ ಆಮಂತ್ರಿಸಿದನು. ಇದು ಅವನಿಗೆ ಅಪಾಯಕರವಾಗಿತ್ತು ಯಾಕೆಂದರೆ ನಾನು ಒಂದು ಶತ್ರು ರಾಷ್ಟ್ರದ ಸದಸ್ಯನಾಗಿದ್ದೆ. ಅವನೊಬ್ಬ ಯೆಹೋವನ ಸಾಕ್ಷಿಯೆಂದು ಆ ಸಮಯದಲ್ಲಿ ನನಗೆ ತಿಳಿದಿರಲಿಲ್ಲ—ಆ ಕೂಟವು ಅವರ ಚಿಕ್ಕ ಬೈಬಲಭ್ಯಾಸ ಗುಂಪುಗಳಲ್ಲಿ ಒಂದೆಂಬದು ಸ್ಫುಟ. ನಾನು ಹೆಚ್ಚೇನನ್ನೂ ಗ್ರಹಿಸಶಕ್ತನಾಗಿರದಿದ್ದರೂ, ಸಿಂಹ ಮತ್ತು ಕುರಿಮರಿಯೊಂದಿಗೆ ಒಂದು ಬಿಳೀ ಉದ್ದಂಗಿಯನ್ನು ಧರಿಸಿದ್ದ ಮಗುವಿನ ಚಿತ್ರವು ನನಗೆ ಸರಿಯಾಗಿ ನೆನಪಿದೆ. ಬೈಬಲಿನ ಯೆಶಾಯನ ಪುಸ್ತಕದಲ್ಲಿ ವರ್ಣಿಸಲಾದ ಹೊಸ ಲೋಕದ ಈ ಭಾವಚಿತ್ರವು ನನ್ನ ಮೇಲೆ ಆಳವಾದ ಪ್ರಭಾವ ಬೀರಿತು.
ದಶಂಬರ 1947 ರಲ್ಲಿ ಸೆರೆ ಶಿಬಿರದಿಂದ ನನಗೆ ಬಿಡುಗಡೆಯಾಯಿತು. ಸ್ವದೇಶವಾದ ಜರ್ಮನಿಗೆ ಹಿಂತಿರುಗಿದಾಗ, ಯುದ್ಧಕ್ಕೆ ಮುಂಚಿನಿಂದಲೂ ನನಗೆ ಪರಿಚಯವಿದ್ದ, ಮಾರ್ಗಿಟ್ ಎಂಬವಳನ್ನು ವಿವಾಹವಾದೆನು. ಪೋಲೆಂಡ್ ಮತ್ತು ಚೆಕಸ್ಲವೇಕಿಯದ ಮೇರೆಗಳಿಗೆ ಸಮೀಪದ ಟ್ಸಿಟಾವ್ನಲ್ಲಿ ನಾವು ನಮ್ಮ ಮನೆ ಮಾಡಿದೆವು. ಕೆಲವೇ ದಿನಗಳೊಳಗೆ ಯೆಹೋವನ ಸಾಕ್ಷಿಗಳಲ್ಲೊಬ್ಬನು ನಮ್ಮ ಬಾಗಲನ್ನು ತಟ್ಟಿದನು. “ಸ್ಕಾಟ್ಲೆಂಡ್ನಲ್ಲಿ ನಾನು ಭೇಟಿಯಾಗಿದ್ದ ಗುಂಪು ಇದೇ ಆಗಿದ್ದರೆ,” ನಾನು ನನ್ನ ಪತ್ನಿಗೆ ಹೇಳಿದ್ದು, “ನಾವದನ್ನು ಸೇರಲೇ ಬೇಕು.” ಅದೇ ವಾರದಲ್ಲಿ ನಾವು ಸಾಕ್ಷಿಗಳೊಂದಿಗೆ ನಮ್ಮ ಮೊದಲಿನ ಕೂಟವನ್ನು ಹಾಜರಾದೆವು.
ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುವ ಮತ್ತು ಸಾರುವ ಕಾರ್ಯದಲ್ಲಿ ಭಾಗವಹಿಸುವ ಅಗತ್ಯವನ್ನು ಬೈಬಲ್ನಿಂದ ನಾವು ಬೇಗನೇ ಕಲಿತುಕೊಂಡೆವು. ವಾಸ್ತವದಲ್ಲಿ ಸಾಕ್ಷಿಗಳು ಬೈಬಲ್ನಿಂದ ಏನು ಕಲಿಸಿದರೋ ಅದು ನಮ್ಮ ಜೀವಿತದಲ್ಲಿ ಅತಿ ಮಹತ್ವದ ವಿಷಯವಾಗಿ ಪರಿಣಮಿಸಿತು. ತಕ್ಕ ಸಮಯದಲ್ಲಿ ನಾನು ಒಂದು ಗುಂಪು ಬೈಬಲಭ್ಯಾಸ ನಡಿಸತೊಡಗಿದೆ. ಅನಂತರ, ಫೆಬ್ರವರಿ 1950 ರಲ್ಲಿ, ಇಬ್ಬರು ಕ್ರೈಸ್ತ ಸಂಚಾರ ಮೇಲ್ವಿಚಾರಕರು ಸೇವಕರು ಕೇಳಿದ್ದು: “ನೀನೆಂದಾದರೂ ದೀಕ್ಷಾಸ್ನಾನ ಪಡೆಯಲು ಬಯಸುವುದಿಲ್ಲವೋ?” ಅದೇ ಮಧ್ಯಾಹ್ನ, ಮಾರ್ಗಿಟ್ ಮತ್ತು ನಾನು ದೀಕ್ಷಾಸ್ನಾನದ ಮೂಲಕ ದೇವರಿಗೆ ನಮ್ಮ ಸಮರ್ಪಣೆಯನ್ನು ಸೂಚಿಸಿದೆವು.
ತೊಂದರೆಗಳ ಆರಂಭ
ಟ್ಸಿಟಾವ್ ಜರ್ಮನಿಯ ಸೋವಿಯೆಟ್ ವಲಯದಲ್ಲಿತ್ತು, ಮತ್ತು ಯೆಹೋವನ ಸಾಕ್ಷಿಗಳಿಗೆ ತೊಂದರೆ ಮಾಡುವ ಪ್ರಯತ್ನಗಳು 1949 ರಲ್ಲಿ ಆರಂಭಿಸಿದ್ದವು. ಬಹಳ ಕಷ್ಟದಿಂದ ಮಾತ್ರವೇ ಬಾಟ್ಸ್ನ್ನಲ್ಲಿ ಒಂದು ಚಿಕ್ಕ ಸಮ್ಮೇಳನಕ್ಕಾಗಿ ಸೌಕರ್ಯಗಳನ್ನು ಪಡೆಯಲಾಯಿತು. ಅನಂತರ ಬೇಸಗೆಯಲ್ಲಿ, ಬರ್ಲಿನ್ನಲ್ಲಿ ನಡೆಯಲಿದ್ದ ದೊಡ್ಡ ಜಿಲ್ಲಾ ಅಧಿವೇಶನಗಳಿಗಾಗಿ ವಿಶೇಷ ರೈಲುಗಾಡಿಗಳು ಫಕ್ಕನೆ ರದ್ದುಮಾಡಲ್ಪಟ್ಟವು. ಆದರೂ ಸಾವಿರಾರು ಮಂದಿ ಹಾಜರಾದರು.
ಸಭಾ ಕೂಟಗಳು ಸಹಾ ಭಂಗಗೊಳಿಸಲ್ಪಟ್ಟವು. ಗುಲ್ಲೆಬ್ಬಿಸುವವರು ಕೇವಲ ಅರಚಲು ಮತ್ತು ಸಿಳ್ಳುಹಾಕಲು ಹಾಜರಾಗುತ್ತಿದ್ದರು. ಒಂದು ಸಂದರ್ಭದಲ್ಲಿ ಒಬ್ಬ ಸಂಚಾರ ಮೇಲ್ವಿಚಾರಕರ ಭಾಷಣವನ್ನು ಬಹುಮಟ್ಟಿಗೆ ನಿಲ್ಲಿಸಲು ನಾವು ಬಲಾತ್ಕರಿಸಲ್ಪಟ್ಟೆವು. ವಾರ್ತಾಪತ್ರಿಕೆಗಳು ನಮ್ಮನ್ನು ವಿನಾಶದ ಗೋಳುಗರೆಯುವ ಪ್ರವಾದಿಗಳೆಂದು ಕರೆದರು. ಗುಡ್ಡದ ತುದಿಗಳಲ್ಲಿ ನಾವು ಒಟ್ಟುಸೇರಿರುವುದು ಮೋಡಗಳಿಂದ ಒಯ್ಯಲ್ಪಡುವುದಕ್ಕಾಗಿ ಎಂದೂ ವರ್ತಮಾನ ಲೇಖನಗಳು ವಾದಿಸಿದವು. ಸಾಕ್ಷಿಗಳು ತಮ್ಮೊಂದಿಗೆ ಅನೈತಿಕತೆ ನಡಿಸಲು ಪ್ರಯತ್ನಿಸಿದ್ದರೆಂದು ಹೇಳಿದ ಕೆಲವು ಹುಡುಗಿಯರನ್ನು ಸಹ ವಾರ್ತಾಪತ್ರಗಳು ಉಲ್ಲೇಕಿಸಿದವು. ‘ಯೆಹೋವನಿಗೆ ಸಮರ್ಪಣೆ ಮಾಡಿದವರಿಗೆ ನಿತ್ಯಜೀವ ದೊರಕುತ್ತದೆ’ ಎಂಬ ನಿರೂಪಣೆಯನ್ನು, ಸಾಕ್ಷಿಗಳೊಂದಿಗೆ ಸಂಭೋಗ ನಡಿಸಿದವರಿಗೆ ನಿತ್ಯಜೀವ ಸಿಗುತ್ತದೆ ಎಂದು ಹೇಳುವಂತೆ ವಕ್ರಗೊಳಿಸಲಾಗಿತ್ತು.
ತದನಂತರ ನಮ್ಮನ್ನು ಯುದ್ಧವ್ಯಾಪಾರಿಗಳೆಂದೂ ದೂರಲಾಗಿತ್ತು. ದೇವರ ಯುದ್ಧವಾದ ಹರ್ಮಗೆದೋನ್ದಿನ ಕುರಿತು ನಾವು ಏನು ಹೇಳಿದೆವೂ ಅದನ್ನು, ನಾವು ಶಸ್ತ್ರದೋಟವನ್ನು ಮತ್ತು ಯುದ್ಧವನ್ನು ಉತ್ತೇಜಿಸುತ್ತೇವೆಂದು ಅರ್ಥಮಾಡುವಂತೆ ತಪ್ಪಾಗಿ ಪ್ರತಿನಿಧಿಸಲಾಗಿತ್ತು. ಎಂಥ ಅಸಂಬದ್ಧತೆ! ಆದಾಗ್ಯೂ, ಆಗಸ್ಟ್ 1950 ಕ್ಕೆ ನಾನು ಪ್ರಿಂಟರ್ ಆಗಿ ಕೆಲಸ ಮಾಡುತ್ತಿದ್ದ ಸ್ಥಳೀಕ ವರ್ತಮಾನ ಪತ್ರಿಕೆಯಲ್ಲಿ ನೈಟ್ ಶಿಫ್ಟ್ಗೆ ಹೋದಾಗ, ಗೇಟಿನಲ್ಲೇ ನನ್ನನ್ನು ತಡೆಯಲಾಯಿತು. “ನಿನ್ನನ್ನು ಕೆಲಸದಿಂದ ತೆಗೆಯಲಾಗಿದೆ,” ಅಂದನು ಪೊಲೀಸನಿಂದ ಜತೆಗೂಡಿದ್ದ ಪಹರೆಯವನು. “ನೀವು ಯುದ್ಧಕ್ಕೆ ಒತ್ತಾಸೆ ಕೊಡುವವರು.”
ಮನೆಗೆ ಬಂದಾಗ ಮಾರ್ಗಿಟ್ಗೆ ಉಪಶಮನ. “ಇನ್ನು ಮೇಲೆ ರಾತ್ರಿ ತಡವಾಗಿ ಬರುವ ಕೆಲಸ ಇಲ್ಲ,” ಎಂದಳವಳು. ನಾವು ಚಿಂತೆ ಮಾಡಲಿಲ್ಲ. ಬೇಗನೇ ನನಗೆ ಇನ್ನೊಂದು ಕೆಲಸ ಸಿಕ್ಕಿತು. ದೇವರು ಒದಗಿಸುವಂತೆ ನಾವು ಭರವಸವಿಟ್ಟೆವು ಮತ್ತು ಆತನು ಒದಗಿಸಿದನು.
ನಮ್ಮ ಕಾರ್ಯವು ನಿಷೇಧಿಸಲ್ಪಟ್ಟಿತು
ಅಗಸ್ಟ್ 31, 1950 ರಲ್ಲಿ, ಜರ್ಮನ್ ಡೆಮಾಕ್ರ್ಯಾಟಿಕ್ ಗಣರಾಜ್ಯದಲ್ಲಿ ಯೆಹೋವನ ಸಾಕ್ಷಿಗಳ ಚಟುವಟಿಕೆಗಳು ನಿಷೇಧಿಸಲ್ಪಟ್ಟವು. ಬಹು ಸಂಖ್ಯಾತರನ್ನು ಕೈದು ಮಾಡಲಾಯಿತು. ಸಾಕ್ಷಿಗಳನ್ನು ವಿಚಾರಣೆಗೆ ಗುರಿಪಡಿಸಲಾಯಿತು, ಕೆಲವರಿಗೆ ಜೀವಾವಧಿಯ ಶಿಕ್ಷೆಯನ್ನು ವಿಧಿಸಿದರು. ನಾಝೀಗಳ ಕೆಳಗೆ ಕಷ್ಟಾನುಭವಿಸಿದ ಟ್ಸಿಟಾವ್ನ ಇಬ್ಬರು, ಕಮ್ಯೂನಿಸ್ಟರಿಂದ ಬಂಧನದಲ್ಲಿಡಲ್ಪಟ್ಟರು.
ನಮ್ಮ ಸಭೆಯ ಮೇಲ್ವಿಚಾರ ನೋಡುತ್ತಿದ್ದ ಒಬ್ಬನನ್ನು ಅವನ ಹೆಂಡತಿಯ ಸಂಗಡ ಕೈದು ಮಾಡಲಾಯಿತು. ಅವರನ್ನು ಕೈದು ಮಾಡಿದವರು, ಅವರ ಇಬ್ಬರು ಚಿಕ್ಕ ಮಕ್ಕಳನ್ನು ತಮ್ಮನ್ನು ತಾವೇ ನೋಡಿಕೊಳ್ಳುವಂತೆ ಒಂಟಿಗರಾಗಿ ಬಿಟ್ಟುಹೋದರು. ಅವರ ಅಜ್ಜ-ಅಜ್ಜಿ ಮಕ್ಕಳನ್ನು ಒಯ್ದರು, ಮತ್ತು ಇಂದು ಇಬ್ಬರು ಹುಡುಗಿಯರು ದೇವರ ರಾಜ್ಯವನ್ನು ಇತರರಿಗೆ ಹುರುಪಿನಿಂದ ತಿಳಿಸುತ್ತಿದ್ದಾರೆ.
ಪೂರ್ವ ಜರ್ಮನಿಯ ಸಭೆಗಳಿಂದ ಓಲೇಕಾರರು ಸ್ವತಂತ್ರ ಪಶ್ಚಿಮ ವಿಭಾಗದಲ್ಲಿ ಸುದ್ಧಿಗಳಿಸುವ ಜಾಗಗಳಿಂದ ಸಾಹಿತ್ಯವನ್ನು ಸಂಗ್ರಹಿಸಲು ಬರ್ಲಿನ್ನಿಂದ ಬಂದು ಹೋಗುತ್ತಿದ್ದರು. ಈ ಧೀರ ಓಲೇಕಾರರಲ್ಲಿ ಅನೇಕರು ಕೈದು ಮಾಡಲ್ಪಟ್ಟರು, ಕೋರ್ಟಿಗೆಳೆಯಲ್ಪಟ್ಟರು ಮತ್ತು ಸೆರೆಮನೆಯ ಶಿಕ್ಷೆಗಳನ್ನು ಪಡೆದರು.
ಒಂದು ದಿನ ಬೆಳಿಗ್ಗೆ ಬೇಗ ಅಧಿಕಾರಿಗಳು ನಮ್ಮ ಮನೆಯ ಝಡತಿಗಾಗಿ ಬಂದರು. ಅವರ ಬರುವಿಕೆಯನ್ನು ನಾವು ನಿರೀಕ್ಷಿಸಿದೆವ್ದು, ಆದುದರಿಂದ ನಾನು ಇಡುತ್ತಿದ್ದ ಎಲ್ಲಾ ಸಭಾ ರೆಕಾರ್ಡುಗಳನ್ನು ನಮ್ಮ ಕಣಜದಲ್ಲಿ, ಕಣಜದ ಹುಳದ ಗೂಡಿನ ಸಮೀಪ ಇಟ್ಟಿದೆನ್ದು. ಆ ಕೀಟಗಳಿಂದ ನನಗೇನೂ ತೊಂದರೆ ಇರಲಿಲ್ಲ, ಆದರೆ ಆ ಪುರುಷರು ಕ್ಷೇತ್ರವನ್ನು ಹುಡುಕಾಡ ತೊಡಗಿದಾಗ ಭರ್ರನೇ ಆ ಕೀಟಗಳ ಸಮೂಹವೇ ಅವರನ್ನು ಆವರಿಸಿತು. ಆ ಪುರುಷರಿಗೆ ಸುರಕ್ಷಿತ ಸ್ಥಳಕ್ಕೆ ಓಡದ ಹೊರತು ಗತ್ಯಂತರವಿರಲಿಲ್ಲ!
1949 ರಲ್ಲಿ ನಡೆದ ಅಧಿವೇಶನಗಳ ಮೂಲಕ ನಿಷೇಧಕ್ಕಾಗಿ ಯೆಹೋವನು ನಮ್ಮನ್ನು ತಯಾರಿಸಿದ್ದನು. ವೈಯಕ್ತಿಕ ಅಭ್ಯಾಸ, ಕೂಟಗಳ ಹಾಜರಿ ಮತ್ತು ನಮ್ಮ ಸಾರುವ ಚಟುವಟಿಕೆ ಹಾಗೂ ಬೆಂಬಲ ಮತ್ತು ಉತ್ತೇಜನಕ್ಕಾಗಿ ಒಬ್ಬರ ಮೇಲೊಬ್ಬರು ಆತುಕೊಳ್ಳುವಂತೆ ಕಾರ್ಯಕ್ರಮವು ನಮ್ಮ ಹುರಿದುಂಬಿಸಿತ್ತು. ಇದು ನಿಜವಾಗಿ ನಮಗೆ ನಿಷ್ಠೆಯಲ್ಲಿ ಉಳಿಯಲು ಸಹಾಯ ಮಾಡಿತ್ತು. ಹೀಗೆ, ಜನರು ನಮ್ಮನ್ನು ಆಗಿಂದಾಗ್ಯೆ ಟೀಕಿಸಿದರೂ, ಶಪಿಸಿದರೂ ಅದು ನಮ್ಮ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತೆ ನಾವು ಬಿಡಲಿಲ್ಲ.
ನಿಷೇಧದ ಕೆಳಗೆ ಕೂಟಗಳನ್ನು ನಡಿಸುವುದು
ನಿಷೇಧದ ಪ್ರಕಟನೆಯನ್ನು ಹಿಂಬಾಲಿಸಿ, ನಮ್ಮ ಸಭಾ ಕೂಟಗಳನ್ನು ಮುಂದುವರಿಸುವುದು ಹೇಗೆಂದು ಚರ್ಚಿಸಲು ನಾನು ಇಬ್ಬರು ಜೊತೆ ಸಾಕ್ಷಿಗಳನ್ನು ಭೇಟಿಯಾದೆನು. ಹಾಜರಾಗುವುದು ಅಪಾಯಕರವಾಗಿತ್ತು ಯಾಕಂದರೆ ಹಾಜರಿರುವಾಗ ಕೈದುಮಾಡಲ್ಪಟ್ಟರೆ ಸೆರೆಮನೆ ಶಿಕ್ಷೆ ಖಂಡಿತ. ನಮ್ಮ ಕ್ಷೇತ್ರದ ಸಾಕ್ಷಿಗಳನ್ನು ನಾವು ಸಂದರ್ಶಿಸಿದೆವು. ಕೆಲವರು ಚಿಂತೆಗೆ ಒಳಗಾಗಿದ್ದರು, ಆದರೆ ಕೂಟಗಳಿಗೆ ಹಾಜರಾಗುವ ಅಗತ್ಯವನ್ನು ಪ್ರತಿಯೊಬ್ಬನು ಮನಗಂಡದ್ದು ಉತ್ತೇಜನಕವಾಗಿತ್ತು.
ಕಣಜವಿದ್ದ ಒಬ್ಬ ಆಸಕ್ತ ವ್ಯಕ್ತಿಯು ಅದನ್ನು ಒಂದು ಕೂಟದ ಸ್ಥಳವಾಗಿ ಉಪಯೋಗಿಸುವಂತೆ ನೀಡಿದನು. ಅದು ಎಲ್ಲರಿಗೆ ಕಾಣುವಂತೆ ಒಂದು ಹೊಲದಲ್ಲಿ ನೆಲೆಸಿದ್ದರೂ, ಅದರ ಹಿಂದಿನ ಬಾಗಲು ಪೊದೆಗಳಿಂದ ಮರೆಯಾಗಿದ್ದ ಒಂದು ಹಾದಿಗೆದುರಾಗಿ ತೆರೆದಿತ್ತು. ಹೀಗೆ ನಮ್ಮ ಹೋಗೋಣ ಬರೋಣಗಳು ಅವಲೋಕಿಸಲ್ಪಡಲಿಲ್ಲ. ಚಳಿಗಾಲವೆಲ್ಲಾ ಆ ಹಳೆಯ ಕಣಜವು ಮೊಂಬತ್ತಿಯ ಬೆಳಕಿನಲ್ಲಿ ನಡಿಸಲ್ಪಟ್ಟ ಮತ್ತು ಸುಮಾರು 20 ಜನರ ಹಾಜರಿಯಿದ್ದ ನಮ್ಮ ಕೂಟಗಳಿಗೆ ಸೌಕರ್ಯಗಳನ್ನು ಒದಗಿಸಿತು. ನಾವು ಪ್ರತಿ ವಾರ ನಮ್ಮ ಕಾವಲಿನಬುರುಜು ಪತ್ರಿಕೆಯ ಅಭ್ಯಾಸಕ್ಕಾಗಿ ಮತ್ತು ಸೇವಾ ಕೂಟಕ್ಕಾಗಿ ಕೂಡಿಬಂದೆವು. ಆತ್ಮಿಕವಾಗಿ ಸಕ್ರಿಯರಾಗಿ ಉಳಿಯುವುದನ್ನು ಒತ್ತಿಹೇಳುತ್ತಾ, ಕಾರ್ಯಕ್ರಮವು ನಮ್ಮ ಪರಿಸ್ಥಿತಿಗನುಸಾರ ಅಳವಡಿಸಲ್ಪಟ್ಟಿತ್ತು. ಬೇಗನೇ ಅದೇ ಆಸಕ್ತ ವ್ಯಕ್ತಿಯನ್ನು ಸತ್ಯದಲ್ಲಿ ನಮ್ಮ ಹೊಸ ಸಹೋದರನಾಗಿ ಸ್ವಾಗತಿಸಲು ನಾವು ಅತ್ಯಾನಂದ ಪಟ್ಟೆವು.
1950 ರ ವರ್ಷಗಳ ನಡುವಲ್ಲಿ ಕೋರ್ಟ್ ಶಿಕ್ಷೆಗಳು ಕಠಿಣವಲ್ಲದ್ದಾಗತೊಡಗಿದವು ಮತ್ತು ಕೆಲವು ಸಹೋದರರು ಸೆರೆಮನೆಯಿಂದ ಬಿಡಿಸಲ್ಪಟ್ಟರು. ಅನೇಕರು ಪಶ್ಚಿಮ ಜರ್ಮನಿಗೆ ಗಡೀಪಾರು ಮಾಡಲ್ಪಟ್ಟರು. ನನ್ನ ವಿಷಯದಲ್ಲಾದರೋ, ಪಶ್ಚಿಮ ಜರ್ಮನಿಯ ಒಬ್ಬ ಸಹೋದರನ ಸಂದರ್ಶನೆಯನ್ನು ಹಿಂಬಾಲಿಸಿ, ವಿಷಯಗಳು ಅನಿರೀಕ್ಷಿತವಾಗಿ ಬದಲಾದವು.
ನನ್ನ ಮೊದಲ ದೊಡ್ಡ ನೇಮಕ
ಆ ಸಹೋದರನ ಹೆಸರು ಹನ್ಸ್. ನಮ್ಮ ಸಂಭಾಷಣೆಯನ್ನು ಹಿಂಬಾಲಿಸಿ, ಬರ್ಲಿನ್ನ ಒಂದು ವಿಳಾಸಕ್ಕೆ ಹೋಗುವಂತೆ ನನಗೆ ಹೇಳಲಾಯಿತು. ಬಾಗಲ ಗಂಟೆಯಲ್ಲಿದ್ದ ಸಂಕೇತ ನಾಮವನ್ನು ಗುರುತಿಸಿದ ಮೇಲೆ ನನ್ನನ್ನು ಒಳಗೆ ಕರೆಯಲಾಯಿತು. ಇಬ್ಬರು ವ್ಯಕ್ತಿಗಳು ನನ್ನ ಬಳಿಗೆ ಬಂದು ನನ್ನೊಂದಿಗೆ ಒಂದು ಹಿತಕರವಾದ ಆದರೆ ಅತಿ ಸಾಮಾನ್ಯವಾದ ಚರ್ಚೆಯನ್ನು ನಡಿಸಿದರು. ಅನಂತರ ವಿಷಯವು ಅವರು ಏನನ್ನು ತಿಳಿಸಬಯಸಿದ್ದರೋ ಅದಕ್ಕೆ ಬಂತು: “ಒಂದು ವಿಶೇಷ ನೇಮಕವು ನಿನಗೆ ಕೊಡಲ್ಪಟ್ಟಲ್ಲಿ ನೀನದನ್ನು ಸ್ವೀಕರಿಸುವಿಯೋ?”
“ಖಂಡಿತವಾಗಿ ಸ್ವೀಕರಿಸುವೆ” ಎಂದುತ್ತರ ನನ್ನದು.
“ಒಳ್ಳೇದು,” ಎಂದರವರು, “ನಾವು ತಿಳಿಯಬಯಸಿದ್ದು ಅಷ್ಟೆ. ನಿನ್ನ ಮನೇ ಕಡೆಗಿನ ಪ್ರಯಾಣ ಸುಖಕರವಾಗಿರಲಿ.”
ಮೂರು ವಾರಗಳ ಅನಂತರ ನನ್ನನ್ನು ಬರ್ಲಿನ್ಗೆ ಹಿಂತಿರುಗುವಂತೆ ಹೇಳಲಾಯಿತು ಮತ್ತು ಪುನಃ ಅದೇ ಕೋಣೆಯಲ್ಲಿ ಬಂದಿಳಿದೆ. ಟ್ಸಿಟಾವ್ನ ಸುತ್ತಲಿನ ನಕ್ಷೆಯನ್ನು ನನಗೆ ಕೊಡುತ್ತಾ ಸಹೋದರರು ಸೀದಾ ವಿಷಯಕ್ಕೆ ಬಂದರು. “ಈ ಕ್ಷೇತ್ರದಲ್ಲಿ ಸಾಕ್ಷಿಗಳ ಸಂಪರ್ಕ ನಮಗಿಲ್ಲ. ನಮಗೋಸ್ಕರ ಸಂಪರ್ಕ ಪುನಃಸ್ಥಾಪಿಸಿ ಕೊಡುವಿಯೋ?”
“ನಿಶ್ಚಯವಾಗಿಯೂ ಕೊಡುವೆನು,” ಎಂದು ನನ್ನ ತಕ್ಷಣದ ಉತ್ತರ. ಆ ಕ್ಷೇತ್ರವು ಬಹು ದೊಡ್ಡದ್ದಾಗಿತ್ತು, 100 ಕಿಲೊಮೀಟರ್ಕ್ಕಿಂತಲೂ ಹೆಚ್ಚು ಉದ್ದ, ರೀಸದಿಂದ ಟ್ಸಿಟಾವ್ಗೆ, ಮತ್ತು 50 ಕಿಲೊಮೀಟರ್ ಅಗಲವಿತ್ತು. ಮತ್ತು ನನ್ನಲ್ಲಿದ್ದದ್ದು ಒಂದು ಸೈಕಲ್ ಮಾತ್ರ. ವ್ಯಕ್ತಿಪರ ಸಾಕ್ಷಿಗಳ ಸಂಪರ್ಕ ಸ್ಥಾಪಿಸಿದಾಗ, ಪ್ರತಿಯೊಬ್ಬನನ್ನು ಅವನ ಸ್ವಂತ ಸಭೆಯೊಳಗೆ ಸಂಯೋಜಿಸಲಾಯಿತು, ಇದು ಕ್ರಮವಾಗಿ ತನ್ನ ಪ್ರತಿನಿಧಿಯೊಬ್ಬನನ್ನು ಸಾಹಿತ್ಯ ಮತ್ತು ಸೂಚನೆಗಳನ್ನು ತರಲು ಬರ್ಲಿನಿಗೆ ಕಳುಹಿಸಿತು. ಯಾವುದೇ ಒಂದು ಸಭೆಯಲ್ಲಿ ಅಧಿಕಾರಿಗಳು ಹಿಂಸಿಸುತ್ತಿರುವಾಗ, ಈ ಕಾರ್ಯವಿಧಾನವು ಇತರ ಸಭೆಗಳನ್ನು ಅಪಾಯಕ್ಕೊಡುವುದರಿಂದ ತಡೆಯಿತು.
ಯೆಹೋವನಲ್ಲಿ ಭರವಸೆ
ಹಿಂಸೆಯ ನಡುವೆಯೂ, ಬೈಬಲ್ನ ಸೂಚನೆಗಳಿಗೆ ವಿಧೇಯತೆಯಲ್ಲಿ, ದೇವರ ರಾಜ್ಯದ ಕುರಿತಾದ ನಮ್ಮ ಸಂದೇಶದೊಂದಿಗೆ ಮನೆಯಿಂದ ಮನೆಗೆ ಹೋಗುವುದನ್ನು ನಾವೆಂದೂ ನಿಲ್ಲಿಸಿರಲಿಲ್ಲ. (ಮತ್ತಾಯ 24:14; 28:19, 20; ಅ.ಕೃತ್ಯಗಳು 20:20) ನಮಗೆ ಈ ಮೊದಲೇ ಪರಿಚಯವಿದ್ದ ವ್ಯಕ್ತಿಗಳಿಂದ ದೊರೆತ ಶಿಫಾರಸುಗಳ ಆಧಾರದಿಂದ ವಿಳಾಸಗಳನ್ನು ನಾವು ಸಂದರ್ಶಿಸಿದೆವು ಮತ್ತು ಕೆಲವು ಆಶ್ಚರ್ಯಕರ ಅನುಭವಗಳನ್ನು ಆನಂದಿಸಿದೆವು. ಕೆಳಗಿನ ಅನುಭವವು ತೋರಿಸುವಂತೆ, ಕೆಲವು ಸಾರಿ ನಮ್ಮ ತಪ್ಪುಗಳು ಸಹ ಆಶೀರ್ವಾದಗಳಾಗಿ ಪರಿಣಮಿಸಿದವು.
ನನ್ನ ಪತ್ನಿ ಮತ್ತು ನನಗೆ ಸಂದರ್ಶನೆ ಮಾಡಲು ಒಂದು ವಿಳಾಸ ಕೊಡಲ್ಪಟ್ಟಿತ್ತು, ಆದರೆ ನಾವು ತಪ್ಪಾದ ಮನೆಯನ್ನು ಸಂದರ್ಶಿಸಿದೆವು. ಮನೆ ಬಾಗಲು ತೆರೆದಾಗ, ಗೂಟ ಚೌಕಟ್ಟಿನಲ್ಲಿ ಪೊಲೀಸ್ ಸಮವಸ್ತ್ರವು ಕಂಡುಬಂತು. ಮಾರ್ಗಿಟ್ ನಿಸೇಜ್ತಗೊಂಡಳು; ನನ್ನ ಎದೆಗುಂಡಿಗೆ ಹಾರತೊಡಗಿತು. ಇದರಲ್ಲಿ ಸೆರೆಮನೆ ಶಿಕ್ಷೆ ಖಂಡಿತ. ಒಂದು ಚಿಕ್ಕ ಪ್ರಾರ್ಥನೆಗಾಗಿ ಮಾತ್ರ ಸಮಯ.
“ಯಾರು ನೀವು?” ಬಿಗಿದು ಕೇಳಿದ ಆ ಮನುಷ್ಯ. ನಾವು ಮೌನ.
“ನಿಮ್ಮನ್ನು ಎಲ್ಲೋ ನೋಡಿದಂತಿದೆ,” ಹೇಳಿದಳು ಮಾರ್ಗಿಟ್, “ಆದರೆ ಎಲ್ಲಿ ಎಂದು ನೆನಪಾಗುವುದಿಲ್ಲ. ಹೌದು, ನೀವೊಬ್ಬ ಪೊಲೀಸರು. ನೀವು ಡ್ಯೂಟಿಯಲ್ಲಿರುವಾಗ ನಾನು ನೋಡಿರಬೇಕು.”
ಇದು ಶಾಮಕ ಪರಿಣಾಮವನ್ನು ತಂದಿತು ಮತ್ತು ಅವನು ಸ್ನೇಹದ ದ್ವನಿಯಲ್ಲಿ ಕೇಳಿದನು. “ನೀವು ಯೆಹೋವನವರೋ?”
“ಹೌದು,” ಎಂದೆ ನಾನು, “ನಾವು ಅವರೇ, ಮತ್ತು ನಿಮ್ಮ ಮನೆಬಾಗಲನ್ನು ತಟ್ಟಲು ನಮಗೆ ಧೈರ್ಯಬೇಕೆಂದು ನೀವು ಒಪ್ಪಲೇಬೇಕು. ನಾವು ವೈಯಕ್ತಿಕವಾಗಿ ನಿಮ್ಮಲ್ಲಿ ಆಸಕ್ತರಿದ್ದೇವೆ.”
ಆತನು ನಮ್ಮನ್ನು ಮನೆಯೊಳಗೆ ಕರೆದನು. ನಾವವನನ್ನು ಹಲವಾರು ಬಾರಿ ಸಂದರ್ಶಿಸಿದೆವು ಮತ್ತು ಒಂದು ಬೈಬಲಭ್ಯಾಸ ಆರಂಭಿಸಿದೆವು. ಸಕಾಲದಲ್ಲಿ ಈ ಮನುಷ್ಯನು ನಮ್ಮ ಕ್ರೈಸ್ತ ಸಹೋದರನಾದನು. ಆ ಅನುಭವವು ಯೆಹೋವನಲ್ಲಿ ನಮ್ಮ ಭರವಸವನ್ನು ಅದೆಷ್ಟು ಬಲಪಡಿಸಿತು!
ಆಗಿಂದಾಗ್ಯೆ ಸಹೋದರಿಯರು ಓಲೇಕಾರರಾಗಿ ಕಾರ್ಯನಡಿಸಿದರು, ಇದು ಯೆಹೋವನಲ್ಲಿ ಅವರ ಪೂರ್ಣ ಭರವಸೆಯನ್ನು ಕೇಳಿಕೊಂಡಿತು. ಇಂಥ ಒಂದು ಪ್ರಸಂಗವು ಮಾರ್ಗಿಟ್ ಸಾಹಿತ್ಯ ತರುವುದಕ್ಕಾಗಿ ಒಮ್ಮೆ ಬರ್ಲಿನ್ಗೆ ಹೋದಾಗ ನಡೆಯಿತು. ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಅಲ್ಲಿತ್ತು. ಭಾರವಾದ, ತೀರಾ ತುಂಬಿಹೋಗಿದ್ದ ಸೂಟ್ಕೇಸನ್ನು ಬಟ್ಟೆಒಣಗಿಸುವ ಹಗ್ಗದಲ್ಲಿ ಕಟ್ಟಲಾಗಿತ್ತು. ಮಾರ್ಗಿಟ್ ರೈಲು ಹತ್ತುವ ತನಕ ಎಲ್ಲವೂ ಚೆನ್ನಾಗಿ ಸಾಗಿತ್ತು. ಅನಂತರ ಗಡಿನಾಡಿನ ಅಧಿಕಾರಿಯೊಬ್ಬನು ಬಂದನು.
“ಇದು ಯಾರದ್ದು, ಮತ್ತು ಇದರಲೇನ್ಲಿದೆ?” ಅವನು ನಿರ್ಬಂಧಿಸಿದ, ಸೂಟ್ ಕೇಸ್ ಕಡೆ ಕೈತೋರಿಸುತ್ತಾ.
“ಅದು ನನ್ನ ಒಗೆಯುವ ವಸ್ತ್ರಗಳು” ಎಂದಳು ಮಾರ್ಗಿಟ್.
ಸಂದೇಹಪಟ್ಟ ಅವನು ಅದನ್ನು ತೆರೆಯುವಂತೆ ಅಪ್ಪಣೆ ಮಾಡಿದನು. ಮೆಲ್ಲನೆ ಮತ್ತು ಸಾವಕಾಶವಾಗಿ ಮಾರ್ಗಿಟ್ ಬ್ಯಾಗಿನ ಹಗ್ಗ ಬಿಚ್ಚಲಾರಂಬಿಸಿದಳು. ಗಡಿನಾಡಿನ ಅಧಿಕಾರಿಯ ಕೆಲಸವು, ನಿರ್ದಿಷ್ಟ ದೂರದ ರೈಲ್ ಪ್ರಯಾಣ ಮಾತ್ರ ಮಾಡುವುದನ್ನು ಮತ್ತು ಇಳಿದು ಇನ್ನೊಂದು ರೈಲು ಹಿಡಿದು ಹಿಂದೆ ಮರಳುವುದನ್ನು ಅವಶ್ಯಪಡಿಸಿತ್ತಾದರ್ದಿಂದ ಅವನ ತಾಳ್ಮೆಯು ತಪ್ಪತೊಡಗಿತು. ಕೊನೆಗೆ, ಮೂರು ಗಂಟುಗಳು ಇನ್ನೂ ಉಳಿದಿದ್ದಾಗ, ಅವನು ಬಿಟ್ಟುಕೊಟ್ಟನು. “ನಡೆ ಇಲ್ಲಿಂದ, ಮತ್ತು ನಿನ್ನೊಂದಿಗೆ ದೋಬಿಖಾನೆಯನ್ನೂ ಒಯ್ದು ಬಿಡು!” ಎಂದು ಚೀರಾಡಿದನು.
ಯೆಹೋವನ ವ್ಯಕ್ತಿಪರ ಪರಾಮರಿಕೆ
ಸಭಾ ವಿಷಯಗಳನ್ನು ಸಾಮಾನ್ಯವಾಗಿ ಕತ್ತಲೆಯ ಮರೆಯಲ್ಲಿ ನಿರ್ವಹಿಸುತ್ತಿದದ್ದರಿಂದ ಪ್ರತಿ ರಾತ್ರಿ ನನಗೆ ನಾಲ್ಕು ತಾಸಿಗಿಂತ ಹೆಚ್ಚು ನಿದ್ದೆ ಸಿಕ್ಕುವಂತಿರಲಿಲ್ಲ. ಅಂಥ ಚಟುವಟಿಕೆಯ ಒಂದು ರಾತ್ರಿಯ ನಂತರವೇ ಅಧಿಕಾರಿಗಳು ಒಂದು ಬೆಳಿಗ್ಗೆ ನಮ್ಮ ಬಾಗಲನ್ನು ಬಡೆದರು. ಅವರು ಝಡತಿ ಮಾಡಲು ಬಂದಿದ್ದರು. ಏನನ್ನಾದರೂ ಮರೆಮಾಡಲು ವೇಳೆ ಮೀರಿತ್ತು.
ಅಧಿಕಾರಿಗಳು ಇಡೀ ಬೆಳಿಗ್ಗೆ ಮನೆಯನ್ನು ಪೂರ್ಣವಾಗಿ ಹುಡುಕಿ ತೆಗೆದರು, ಏನಾದರೂ ಅಡಗಿಸಲ್ಪಟ್ಟಿದೆಯೋ ಎಂದು ನೋಡಲು ಬಚ್ಚಲು ಕೊಟ್ಟಿಗೆಯನ್ನೂ ಪರಿಶೋಧಿಸಿದರು. ಕೋಟಿನ ಗೂಟದಲ್ಲಿ ನೇತಾಡುತ್ತಿದ್ದ ನನ್ನ ಕೋಟನ್ನು ಪರೀಕ್ಷಿಸುವ ಕುರಿತು ಯಾರೂ ನೆನಸಲಿಲ್ಲ. ಅದರ ಅನೇಕ ಕಿಸೆಗಳಲ್ಲಿ ನಾನು ಅವಸರದಿಂದ ಕಾಗಪ್ದತ್ರಗಳನ್ನೆಲ್ಲಾ ತುಂಬಿಸಿಟ್ಟಿದ್ದೆನು. ಅದಿಕಾರಿಗಳು ಯಾವುದಕ್ಕಾಗಿ ಹುಡುಕುತ್ತಿದ್ದರೋ ಅವುಗಳಿಂದಲೇ ಅದು ಉಬ್ಬಿತ್ತು, ಆದರೆ ಅವರು ಬರಿಗೈಯಲ್ಲಿ ಹೊರಟುಹೋದರು.
ಇನ್ನೊಂದು ಸಂದರ್ಭದಲ್ಲಿ, ಅಗಸ್ಟ್ 1961 ರಲ್ಲಿ, ನಾನು ಬರ್ಲಿನ್ನಲ್ಲಿದ್ದೆ. ಬರ್ಲಿನ್ ಗೋಡೆ ಕಟ್ಟಲ್ಪಡುವ ಮುಂಚೆ ಅದು ನನ್ನ ಕೊನೆಯ ಸಾಹಿತ್ಯ ಸಂಗ್ರಹದ ಮಾರ್ಗವಾಗಿ ಪರಿಣಮಿಸಿತು. ಟ್ಸಿಟಾವ್ಗೆ ಹಿಂತಿರುಗಲು ನಾನು ಸಿದ್ಧವಾದಾಗ ಬರ್ಲಿನ್ ರೈಲು ನಿಲ್ದಾಣವು ಜನರಿಂದ ಕಿಕ್ಕಿರಿದಿತ್ತು. ರೈಲು ಬಂತು ಮತ್ತು ಪ್ರತಿಯೊಬ್ಬರೂ ಪ್ಲ್ಯಾಟ್ಫಾರ್ಮ್ಗೆ ಧಾವಿಸಿ ಬಂದು ರೈಲನ್ನೇರತೊಡಗಿದರು. ಫಕ್ಕನೆ ನಾನು ನನ್ನನ್ನು ರೈಲಿನ ಒಂದು ಖಾಲಿ ಜಾಗದಲ್ಲಿ ಕಂಡುಕೊಂಡೆ. ನಾನು ರೈಲು ಹತ್ತಿದ ನಂತರ ಕೂಡಲೇ ಗಾರ್ಡ್ ಬಂದು ಹೊರಗಿನಿಂದ ಬೀಗ ಹಾಕಿದ. ನಾನು ಒಂದು ವಿಭಾಗದಲ್ಲಿ ಒಂಟಿಯಾಗಿ ನಿಂತಿದ್ದಾಗ ಇತರ ಪ್ರಯಾಣಿಕರಾದರೋ ರೈಲಿನ ಉಳಿದ ಭಾಗಗಳಿಗೆ ಗುಂಪಾಗಿ ನುಗ್ಗುತ್ತಿದ್ದರು.
ನಾವು ಟ್ಸಿಟಾವ್ಗೆ ಹೊರಟೆವು. ತುಸು ಸಮಯದ ತನಕ ನಾನು ಅಂಕಣದಲ್ಲಿ ಒಬ್ಬನೇ ಇದ್ದೆ. ಅನಂತರ ರೈಲು ನಿಂತಿತು ಮತ್ತು ನನ್ನ ವಿಭಾಗದ ಬಾಗಲುಗಳು ತೆರೆಯಲ್ಪಟ್ಟವು. ಅನೇಕ ಮಂದಿ ಸೋವಿಯೆಟ್ ಸೈನಿಕರು ಪ್ರವೇಶಿಸಿದರು. ಆಗ ಮಾತ್ರ ನನಗೆ ತಿಳಿಯಿತೇನಂದರೆ ಸೋವಿಯೆಟ್ ಮಿಲಿಟರಿಗಾಗಿ ಕಾದಿರಿಸಿದ್ದ ಒಂದು ಅಂಕಣದಲ್ಲಿ ನಾನು ಪ್ರಯಾಣಿಸುತ್ತಿದ್ದೆ ಎಂಬದಾಗಿ. ನೆಲ ಬಾಯಿತೆರೆದು ನನ್ನನ್ನು ನುಂಗಿಬಿಟ್ಟಿದ್ದರೆ ಒಳ್ಳೇದಿತ್ತು ಎಂದು ಇಷ್ಟಪಟ್ಟೆ. ಆದರೆ ಸೈನಿಕರು ಯಾವುದೇ ಅನುಚಿತವನ್ನು ಕಂಡಂತೆ ತೋರಲಿಲ್ಲ.
ನಾವು ಟ್ಸಿಟಾವ್ಗೆ ಪ್ರಯಾಣ ಮುಂದುವರಿಸಿದೆವು, ನಮ್ಮ ಅಂಕಣದ ಬಾಗಲು ಥಟ್ಟನೇ ತೆರೆಯಲ್ಪಟ್ಟಿತು ಮತ್ತು ಸೈನಿಕರು ಹೊರಗೆ ಹಾರಿದರು. ನಿಲ್ದಾಣದಲ್ಲಿದ್ದ ಎಲ್ಲಾ ಪ್ರಯಾಣಿಕರ ತಲಾಷು ಮಾಡಿದರು. ನಾನೊಬ್ಬನೇ ಯಾವ ತಡೆಯೂ ಇಲ್ಲದೆ ಹೋಗಶಕ್ತನಾದೆನು. ನಾನೊಬ್ಬ ದೊಡ್ಡ ಅಧಿಕಾರಿಯೆಂದು ನೆನಸಿ ಅನೇಕ ಸೈನಿಕರು ನನಗೆ ನಮಸ್ಕಾರವನ್ನೂ ಮಾಡಿದರು.
ಆ ಸಾಹಿತ್ಯ ನಮಗೆಷ್ಟು ಬೆಲೆಭರಿತವಾಗಿತ್ತೆಂದು ಅನಂತರ ಮಾತ್ರವೇ ನಾವು ಮನಗಂಡೆವು, ಯಾಕಂದರೆ ಬರ್ಲಿನ್ ಗೋಡೆಯ ಕಟ್ಟುವಿಕೆ ನಮ್ಮ ಸಂಗ್ರಹದ ಹಾದಿಗೆ ತಾತ್ಕಾಲಿಕ ತಡೆಗಟ್ಟನ್ನು ಹಾಕಿತ್ತು. ಆದರೂ ಆ ಸಾಹಿತ್ಯವು ಹಲವಾರು ತಿಂಗಳು ತನಕ ನಮ್ಮ ಅಗತ್ಯವನ್ನು ಪೂರೈಸಲು ಸಾಕಾಯಿತು. ಈ ನಡುವೆ ನಮ್ಮೊಂದಿಗೆ ಸಂಪರ್ಕ ನಡಿಸಲು ಏರ್ಪಾಡುಗಳನ್ನು ಮಾಡಸಾಧ್ಯವಿತ್ತು.
1961 ರಲ್ಲಿ ಬರ್ಲಿನ್ ಗೋಡೆಯ ಆಗಮನವು ಪೂರ್ವ ಜರ್ಮನಿಯಲ್ಲಿ ನಮಗೆ ಬದಲಾವಣೆಗಳನ್ನು ತಂದಿತು. ಆದರೆ ಯೆಹೋವನು ಎಂದಿನಂತೆಯೇ ಘಟನಾವಳಿಗೆ ಮುಂದಿರುತ್ತಿದ್ದನು. ಆತನು ನಿಷೇಧದ ಕೆಳಗೆ ನಮ್ಮನ್ನು ಪರಾಮರಿಸುತ್ತಾ ಬಂದನು.—ಹರ್ಮನ್ ಲಾಬ್ರಿಂದ ಹೇಳಲ್ಪಟ್ಟದ್ದು. (w92 4/15)
[Picture of Hermann and Margit Laube on page 26]
[ಪುಟ 27 ರಲ್ಲಿರುವ ಚಿತ್ರ]
ಬಾಟ್ಸೆನ್ನಲ್ಲಿ ನಾವು ಒಂದು ಚಿಕ್ಕ ಸಮ್ಮೇಳನವನ್ನು ಆನಂದಿಸಿದೆವು