ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/99 ಪು. 4
  • “ಚುಟುಕಾಗಿ ಹೇಳಿ!”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಚುಟುಕಾಗಿ ಹೇಳಿ!”
  • 1999 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ನಮ್ಮ ಜೀವರಕ್ಷಣೆಯ ಶುಶ್ರೂಷೆಯಲ್ಲಿ ಸಫಲರಾಗಿ ಭಾಗವಹಿಸುವುದು
    1993 ನಮ್ಮ ರಾಜ್ಯದ ಸೇವೆ
  • ದೇವರ ಕುಮಾರನಾದ ಯೇಸು ಕ್ರಿಸ್ತನ ಕುರಿತು ಇತರರು ಕಲಿಯುವಂತೆ ಸಹಾಯ ಮಾಡಿರಿ
    1993 ನಮ್ಮ ರಾಜ್ಯದ ಸೇವೆ
  • ಪತ್ರಿಕಾ ನಿರೂಪಣೆಯನ್ನು ತಯಾರಿಸುವುದು ಹೇಗೆ?
    2006 ನಮ್ಮ ರಾಜ್ಯದ ಸೇವೆ
  • ಸೇವೆಯಲ್ಲಿ ಸುವರ್ಣ ನಿಯಮವನ್ನು ಪಾಲಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
ಇನ್ನಷ್ಟು
1999 ನಮ್ಮ ರಾಜ್ಯದ ಸೇವೆ
km 7/99 ಪು. 4

“ಚುಟುಕಾಗಿ ಹೇಳಿ!”

1 ಜಾಗರೂಕತೆಯಿಂದ ತಯಾರಿಸಿದ ಪ್ರಸ್ತಾವನೆಯನ್ನು ನೀವು ನೀಡುತ್ತಿರುವಾಗ, ಮನೆಯವನು ಮಧ್ಯದಲ್ಲೇ, “ಈಗ ನಿಮಗೆ ಏನು ಬೇಕು? ಚುಟುಕಾಗಿ ಹೇಳಿ!” ಎಂದು ಹೇಳುತ್ತಾ ನಿಮ್ಮನ್ನು ಎಂದಾದರೂ ತಡೆದಿದ್ದಾನೋ? ಇಂತಹ ಅನುಭವದಿಂದ ನಾವೇನನ್ನು ಕಲಿತುಕೊಳ್ಳಸಾಧ್ಯವಿದೆ?

2 ಇಂದು ಅನೇಕರು ತಾಳ್ಮೆಯಿಲ್ಲದವರಾಗಿದ್ದಾರೆ. ನಾವು ಯಾರು, ಏಕೆ ಬಂದಿದ್ದೇವೆ ಎಂಬುದನ್ನು ತಿಳಿದುಕೊಳ್ಳಲು ಅವರು ಬಯಸುತ್ತಾರೆ. ಬೈಬಲನ್ನು ಚರ್ಚಿಸಲಿಕ್ಕಾಗಿ ನಾವು ಅವರನ್ನು ಭೇಟಿಮಾಡುತ್ತಿದ್ದೇವೆ ಎಂದು ಅವರಿಗೆ ತಿಳಿದುಬರುವಾಗ, ಅವರು ಸಂದೇಶವನ್ನು ಕೇಳಿಸಿಕೊಳ್ಳಲು ಹಿಂದೇಟುಹಾಕುತ್ತಾರೆ. ಅನೇಕ ಜನರಿಗೆ ಬೈಬಲನ್ನು ಓದುವುದು ಮತ್ತು ಆತ್ಮಿಕ ವಿಚಾರಗಳನ್ನು ಚರ್ಚಿಸುವುದು ಅವರ ಜೀವಿತಗಳಲ್ಲಿ ಅತಿ ಪ್ರಾಮುಖ್ಯವಾದ ವಿಷಯವಾಗಿರುವುದಿಲ್ಲ. ಅಂತಹ ಮನೆಯವರು ನಮ್ಮೊಂದಿಗೆ ಒಂದು ಬೈಬಲ್‌ ವಿಷಯವನ್ನು ಚರ್ಚಿಸಲಿಕ್ಕಾಗಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುವಂತೆ ನಾವು ಅವರಿಗೆ ಹೇಗೆ ಮನಗಾಣಿಸಬಹುದು?

3 ಕಾರ್ಯಸಾಧಕವಾದ ವಿಷಯ: ಮನೆಯವನಿಗೆ ಚಿಂತೆಗೀಡುಮಾಡುವಂತಹ ಸಮಸ್ಯೆಗಳಿಗೆ ಬೈಬಲು ಪ್ರಾಯೋಗಿಕ ಸಲಹೆಗಳನ್ನು ನೀಡುತ್ತದೆ ಎಂಬುದನ್ನು ತೋರಿಸುವುದು ಮತ್ತು ಅದನ್ನು ಸಾಧ್ಯವಿರುವಷ್ಟು ಕಡಿಮೆ ಮಾತುಗಳಲ್ಲಿ ಹೇಳಿಬಿಡುವುದು ಮುಖ್ಯ ವಿಷಯವಾಗಿರುತ್ತದೆ. ಅತ್ಯಂತ ಪರಿಣಾಮಕಾರಿಯಾದ ನಿರೂಪಣೆಗಳಲ್ಲಿ, ಮನೆಯವನು ಯೋಚಿಸುವಂತೆ ಮಾಡುವಂತಹ ನಿರ್ದಿಷ್ಟ ಪ್ರಶ್ನೆಯನ್ನು ಕೇಳಿ, ಅನಂತರ ಆ ಪ್ರಶ್ನೆಗೆ ಉತ್ತರವನ್ನು ಕೊಡುವ ಶಾಸ್ತ್ರವಚನವನ್ನು ಹೇಳುವುದು ಒಳಗೂಡಿರುತ್ತದೆ. ಈ ಮುಂದಿನ ಕೆಲವೊಂದು ಸಲಹೆಗಳನ್ನು ನೀವು ಪ್ರಯತ್ನಿಸುವುದರಲ್ಲಿ ಆನಂದಿಸಬಹುದು. ಅವು ಮನೆಯವನ ಆಸಕ್ತಿಯನ್ನು ಜಾಗೃತಗೊಳಿಸಲು ಮತ್ತು ಅದೇ ಸಮಯದಲ್ಲಿ “ಚುಟುಕಾಗಿ ಹೇಳಲು” ಸಹಾಯಮಾಡುವಂತೆ ರಚಿಸಲ್ಪಟ್ಟಿವೆ.

4 ತಮಗೆ ಆಸಕ್ತಿಯಿಲ್ಲವೆಂದು ಹೇಳುವ ಜನರಿರುವ ಟೆರಿಟೊರಿಯಲ್ಲಿ, ಅವರನ್ನು ವೈಯಕ್ತಿಕವಾಗಿ ಒಳಗೂಡಿಸುವ ಪ್ರಶ್ನೆಯನ್ನು ಕೇಳಿರಿ:

◼ “ನಾವು ಮುಂದಿನ ಸಹಸ್ರವರ್ಷವನ್ನು ಸಮೀಪಿಸುತ್ತಿರುವಂತೆ, ನಿಮಗೆ ನಿರೀಕ್ಷೆಗಳಿವೆಯೊ ಸಂದೇಹಗಳಿವೆಯೊ? [ಉತ್ತರಕ್ಕಾಗಿ ಅನುಮತಿಸಿರಿ.] ನಾವಿಂದು ಎದುರಿಸುವ ಕ್ಷೋಭೆಗೊಳಿಸುವ ಘಟನೆಗಳನ್ನು ಮತ್ತು ಅದರ ಫಲಿತಾಂಶವನ್ನು ಬೈಬಲು ಈ ಮುಂಚೆಯೇ ತಿಳಿಸಿತು.” 2 ತಿಮೊಥೆಯ 3:1, 2, 5 ಮತ್ತು ಜ್ಞಾನೋಕ್ತಿ 2:21, 22ನ್ನು ಓದಿರಿ.

◼ “ಈ ದೇಶದಲ್ಲಿ ಆರೋಗ್ಯದ ಬಗ್ಗೆ ಬಹಳ ಚಿಂತೆಯಿದೆ. ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ದೇವರು ಶಾಶ್ವತವಾಗಿ ತೆಗೆದುಹಾಕುವನು ಎಂಬ ವಾಗ್ದಾನಗಳ ಬಗ್ಗೆ ನಿಮಗೆ ತಿಳಿದಿದೆಯೊ?” ಪ್ರಕಟನೆ 21:3, 4ನ್ನು ಓದಿರಿ.

◼ “ನಮ್ಮ ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬರೂ ಬೈಬಲ್‌ ತತ್ತ್ವಗಳನ್ನು ಅನುಸರಿಸುವಲ್ಲಿ ಅವರು ಯಾವ ರೀತಿಯಲ್ಲಿ ಪ್ರಯೋಜನವನ್ನು ಪಡೆದುಕೊಳ್ಳುವರು ಎಂದು ನೀವು ನೆನಸುತ್ತೀರಿ?” ಮತ್ತಾಯ 22:37-39ನ್ನು ಓದಿರಿ.

5 ರಾಜ್ಯದ ಸುವಾರ್ತೆಯನ್ನು ಸಾರುವುದು ನಮ್ಮ ನೇಮಕವಾಗಿರುವುದರಿಂದ, ರಾಜ್ಯವು ಏನನ್ನು ಪೂರೈಸುತ್ತದೆ ಎಂಬ ವಿಷಯಕ್ಕೆ ನಾವು ಸಾಧ್ಯವಾದಾಗಲೆಲ್ಲ ಗಮನವನ್ನು ಸೆಳೆಯಬೇಕು. ನೀವು ಹೀಗೆ ಹೇಳಸಾಧ್ಯವಿದೆ:

◼ “ಇಡೀ ಲೋಕಕ್ಕೆ ಒಂದೇ ಸರಕಾರವಿರುವುದು ಎಂಬುದನ್ನು ಲೋಕದ ಅತ್ಯಂತ ಹಳೇ ಪುಸ್ತಕವಾದ ಬೈಬಲು ಮುಂತಿಳಿಸಿದ ವಿಷಯವು ನಿಮಗೆ ತಿಳಿದಿತ್ತೊ?” ದಾನಿಯೇಲ 2:44ನ್ನು ಓದಿರಿ.

◼ “ಈ ಭೂಮಿಯನ್ನು ಯೇಸು ಕ್ರಿಸ್ತನು ಆಳುವುದಾದರೆ ಪರಿಸ್ಥಿತಿಗಳು ಹೇಗಿರಬಹುದು ಎಂದು ನೀವು ನೆನಸುತ್ತೀರಿ?” ಕೀರ್ತನೆ 72:7, 8ನ್ನು ಓದಿರಿ.

6 ಧಾರ್ಮಿಕ ಮನೋಭಾವದ ಜನರಿರುವ ಟೆರಿಟೊರಿಯಲ್ಲಿ, ಈ ನಿರೂಪಣೆಗಳಲ್ಲಿ ಒಂದನ್ನು ನೀವು ಪ್ರಯತ್ನಿಸಸಾಧ್ಯವಿದೆ:

◼ “ಲಿಂಗ, ಧರ್ಮ, ಅಥವಾ ಚರ್ಮದ ಬಣ್ಣದ ಕಾರಣದಿಂದ ಅನೇಕ ಜನರು ಭೇದಭಾವವನ್ನು ಅನುಭವಿಸುತ್ತಾರೆ. ಈ ರೀತಿಯ ಪೂರ್ವಾಗ್ರಹದ ಕುರಿತು ದೇವರಿಗೆ ಹೇಗನಿಸಬಹುದು ಎಂದು ನೀವು ನೆನಸುತ್ತೀರಿ?” ಅ. ಕೃತ್ಯಗಳು 10:34, 35ನ್ನು ಓದಿರಿ.

◼ “ಯೇಸು ಕ್ರಿಸ್ತನು ತನ್ನ ದಿನದಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡಿದನು ಎಂಬುದು ನಿಮಗೆ ಗೊತ್ತಿದೆ. ಅವನು ಇನ್ನೊಂದು ಅದ್ಭುತವನ್ನು ಮಾಡುವಂತೆ ನೀವು ಕೇಳಸಾಧ್ಯವಿರುತ್ತಿದ್ದರೆ, ಯಾವ ಅದ್ಭುತವನ್ನು ಮಾಡುವಂತೆ ಕೇಳಿಕೊಳ್ಳುತ್ತಿದ್ದಿರಿ?” ಕೀರ್ತನೆ 72:12-14, 16ನ್ನು ಓದಿರಿ.

7 ಮನೆಯವನು ಬಾಗಿಲನ್ನು ತೆರೆಯಲು ಹಿಂದುಮುಂದೆ ನೋಡುವುದಾದರೆ, ಹೀಗೆ ಹೇಳುವ ಮೂಲಕ ನೀವು ಸಂಭಾಷಣೆಯನ್ನು ಪ್ರಾರಂಭಿಸಬಹುದು:

◼ “ಇಂದು ಹೆಚ್ಚಿನ ಜನರು ಸಮಸ್ಯೆಗಳನ್ನು ಕೇಳಿ ಕೇಳಿ ಬೇಸತ್ತುಹೋಗಿದ್ದಾರೆ. ಈಗ ಇವುಗಳ ಕುರಿತಾದ ಪರಿಹಾರಗಳನ್ನು ಕೇಳಿಸಿಕೊಳ್ಳಲು ಇಷ್ಟಪಡುತ್ತಾರೆ. ನೀವು ಸಹ ಸಮಸ್ಯೆಗಳ ಪರಿಹಾರಗಳೇನೆಂಬುದನ್ನು ಕೇಳಿಸಿಕೊಳ್ಳಲು ಇಷ್ಟಪಡುತ್ತೀರಿ ಎಂಬುದು ಖಂಡಿತ. ಆದರೆ, ನಮ್ಮ ಸಮಸ್ಯೆಗಳಿಗೆ ನಿಜ ಪರಿಹಾರಗಳನ್ನು ನಾವೆಲ್ಲಿ ಕಂಡುಕೊಳ್ಳಸಾಧ್ಯವಿದೆ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. 2 ತಿಮೊಥೆಯ 3:16, 17ನ್ನು ಓದಿರಿ.

8 ಇದನ್ನು ಏಕೆ ಪ್ರಯತ್ನಿಸಬಾರದು? ಮನೆಯವನ ಆಸಕ್ತಿಯನ್ನು ಜಾಗೃತಗೊಳಿಸಲು ಅನೇಕ ವೇಳೆ ಸರಳ ಮತ್ತು ಚುಟುಕಾದ ಪ್ರಶ್ನೆಯೊಂದೇ ಸಾಕು. ಇಬ್ಬರು ಸಹೋದರಿಯರು, ಯಾವಾಗಲೂ ವಿರೋಧಿಸುತ್ತಿದ್ದ ಸ್ತ್ರೀಯೊಬ್ಬಳ ಮನೆಗೆ ಹೋದರು. ಆ ಸಹೋದರಿಯರಲ್ಲಿ ಒಬ್ಬಳು, “ಕರ್ತನ ಪ್ರಾರ್ಥನೆಯಲ್ಲಿ ನೀವು ಯಾವುದಕ್ಕಾಗಿ ಪ್ರಾರ್ಥಿಸುತ್ತೀರೊ ಆ ರಾಜ್ಯವನ್ನು ನೀವು ಗುರುತಿಸಸಾಧ್ಯವೋ?” ಎಂಬ ಪ್ರಶ್ನೆಯನ್ನು ಕೇಳಿದ ನಂತರ ಆ ಸ್ತ್ರೀಯು ಅವರಿಬ್ಬರನ್ನು ಮನೆಯೊಳಗೆ ಬರುವಂತೆ ಆಹ್ವಾನಿಸಿದಳು. ಆ ಪ್ರಶ್ನೆಯಿಂದ ಸ್ತ್ರೀಯು ಕುತೂಹಲಗೊಂಡಿದ್ದಳು. ಮತ್ತು ಅವಳು ಬೈಬಲ್‌ ಅಭ್ಯಾಸವನ್ನು ಮಾಡಲು ಒಪ್ಪಿಕೊಂಡಳು. ಈಗ ಅವಳು ಯೆಹೋವನ ಸಮರ್ಪಿತ ಸೇವಕಿಯಾಗಿದ್ದಾಳೆ!

9 ಮನೆಯವನೊಟ್ಟಿಗೆ ಮಾತಾಡುತ್ತಿರುವಾಗ, ನಿಷ್ಕಪಟವಾದ ಅಭಿವ್ಯಕ್ತಿಗಳನ್ನು ಉಪಯೋಗಿಸಿರಿ. ಹೃದಯದಾಳದಿಂದ ಮಾತಾಡಿರಿ. ನಾವು ಅವರಲ್ಲಿ ನಿಜವಾಗಿಯೂ ಆಸಕ್ತರಾಗಿದ್ದೇವೆಂಬುದು ಜನರಿಗೆ ಮನವರಿಕೆಯಾದಾಗ ಅವರು ಒಳ್ಳೆಯ ಪ್ರತಿಕ್ರಿಯೆಯನ್ನು ತೋರಿಸುವ ಸಂಭವವು ಹೆಚ್ಚಾಗಿರುತ್ತದೆ.—ಅ.ಕೃ. 2:46, 47.

10 ಸುವಾರ್ತೆಯನ್ನು ಸಾರುವುದು ಇಂದು ನಿಜವಾಗಿಯೂ ಒಂದು ಸವಾಲಾಗಿದೆ. ಕೆಲವು ಮನೆಯವರು ಆಗಂತುಕರನ್ನು ಸಂದೇಹದಿಂದ ನೋಡುತ್ತಾರೆ. ಇತರರು ಅವಸರದ ಜೀವಿತಗಳನ್ನು ಜೀವಿಸುತ್ತಾರೆ ಮತ್ತು ಅವರಿಗೆ ಬಿಡುವೇ ಇರುವುದಿಲ್ಲ. ಆದರೂ, ಇನ್ನೂ ಅನೇಕ ಯೋಗ್ಯ ವ್ಯಕ್ತಿಗಳನ್ನು ನಾವು ಕಂಡುಕೊಳ್ಳುವೆವು ಎಂಬ ಖಾತ್ರಿ ನಮಗಿರಸಾಧ್ಯವಿದೆ. (ಮತ್ತಾ. 10:11) ನಮ್ಮ ಪ್ರಸ್ತಾವನೆಗಳನ್ನು ಸಂಕ್ಷಿಪ್ತವಾಗಿ ಮತ್ತು ‘ಚುಟುಕಾಗಿ ಹೇಳುವಲ್ಲಿ’ ಅವರನ್ನು ಹುಡುಕುವುದಕ್ಕೆ ನಾವು ಮಾಡುವ ಪ್ರಯತ್ನಗಳಿಗೆ ಯಶಸ್ಸು ಸಿಗುವುದು!

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ