ಉತ್ತಮವಾದ ಲೇಖನಗಳು!
ಗತ ಎಚ್ಚರ! ಪತ್ರಿಕೆಗಳಲ್ಲಿ ಬಂದಿರುವ ಈ ಕೆಳಗಿನ ಲೇಖನಗಳ ಶಿರೋನಾಮಗಳು ಓದಲಿಕ್ಕಾಗಿ ಉತ್ತಮವಾದ ಲೇಖನಗಳಾಗಿ ತೋರುತ್ತವೆ ಎಂಬುದನ್ನು ನೀವು ಒಪ್ಪಿಕೊಳ್ಳುವುದಿಲ್ಲವೋ?
“ನಿಮ್ಮ ಜ್ಞಾಪಕಶಕ್ತಿಯನ್ನು ಉತ್ತಮಗೊಳಿಸುವ ವಿಧ”
“ದೈನಂದಿನ ಜೀವಿತದಲ್ಲಿ ಸ್ತ್ರೀಯರನ್ನು ಗೌರವಿಸುವುದು”
“ನಕಾರಾತ್ಮಕ ಭಾವನೆಗಳು—ಅವುಗಳನ್ನು ಹೇಗೆ ಜಯಿಸುವುದು?”
“ನೀವು ಸಭಿಕರ ಮುಂದೆ ಮಾತಾಡಸಾಧ್ಯವಿದೆ!”
“ಯಾವ ಮನೋರಂಜನೆಯನ್ನು ನೀವು ಆಯ್ಕೆಮಾಡುವಿರಿ?”
ಇಸವಿ 1992ರ ಎಚ್ಚರ! ಪತ್ರಿಕೆಗಳಲ್ಲಿ, ಈ ಲೇಖನಗಳು ಮತ್ತು ಇನ್ನಿತರ ಅನೇಕ ಲೇಖನಗಳು ಬಂದಿದ್ದವು. ಈಗ ಅವುಗಳಿಂದ ಪ್ರಯೋಜನ ಪಡೆಯಲು ಸಾಧ್ಯವಿಲ್ಲದಷ್ಟರ ಮಟ್ಟಿಗೆ ಇವು ಹಳೆಯವುಗಳಾಗಿವೆಯೋ? ಖಂಡಿತವಾಗಿಯೂ ಇಲ್ಲ! ಈಗಲೂ ನೀವು 1992ನೆಯ ವರ್ಷದ ಎಚ್ಚರ! ಪತ್ರಿಕೆಯ ಬೌಂಡ್ ವಾಲ್ಯೂಮ್ ಅನ್ನು ಇಂಗ್ಲಿಷ್ ಭಾಷೆಯಲ್ಲಿ ಪಡೆದುಕೊಳ್ಳಸಾಧ್ಯವಿದೆ. ಎಚ್ಚರ! ಪತ್ರಿಕೆಯ ಬೌಂಡ್ ವಾಲ್ಯೂಮ್ ಅನ್ನು ಪಡೆದುಕೊಳ್ಳಲು ಇಷ್ಟಪಡುವ ಪ್ರಚಾರಕರು, ಸಭಾ ಸಾಹಿತ್ಯ ಸೇವಕನ ಮೂಲಕ ಈಗ ಅದಕ್ಕಾಗಿ ವಿನಂತಿಸಿಕೊಳ್ಳಬಹುದು.
ಈ ಬೌಂಡ್ ವಾಲ್ಯೂಮ್ ರಾಜ್ಯ ಸಭಾಗೃಹದ ಲೈಬ್ರರಿಯಲ್ಲಿ ಲಭ್ಯವಿದೆಯೋ ಎಂಬುದನ್ನು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲಾ ಮೇಲ್ವಿಚಾರಕನು ಪರೀಕ್ಷಿಸಿ, ಅದು ಇಲ್ಲದಿರುವಲ್ಲಿ ಅದಕ್ಕಾಗಿ ಆರ್ಡರ್ ಮಾಡತಕ್ಕದ್ದು.